ಬೆಂಗಳೂರು: ನಾಡಿನಾದ್ಯಂತ ಯುಗಾದಿ (Ugadi) ಸಂಭ್ರಮ ಮನೆ ಮಾಡಿದೆ. ಹೊಸವರ್ಷವನ್ನು ಬರಮಾಡಿಕೊಳ್ಳಲು ಕಾತುರದಲ್ಲಿದ್ದ ಸಿಟಿಜನ ಹೂವು (Flowers), ಹಣ್ಣು (Fruits) ಖರೀದಿಗೆ ಮುಗಿಬಿದ್ದಿದ್ದಾರೆ. ಹಬ್ಬದ ಜೋಶ್‍ನಲ್ಲಿ ಮಾರುಕಟ್ಟೆಗೆ ಹೋದ ಜನರಿಗೆ ಬೆಲೆ ಏರಿಕೆ ಶಾಕ್ ತಟ್ಟುತ್ತಿದೆ. ಯುಗಾದಿ ಹಬ್ಬದೊಂದಿಗೆ ಆರಂಭವಾಗುವ ಹೊಸವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಯುಗಾದಿ ಹಬ್ಬಕ್ಕೆ ಭರದ ಸಿದ್ಧತೆ ನಡೆಸಿದ್ದರು. ಹೊಸ ದಿರಿಸು ಖರೀದಿ ಜೊತೆಗೆ ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಇತ್ಯಾದಿಗಳ ಖರೀದಿಯು ನಗರದ ಮಾರುಕಟ್ಟೆಗಳಲ್ಲಿ ಅಬ್ಬರದಿಂದ ನಡೆದಿದೆ. ನಗರದ ಕೆ.ಆರ್. ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಗಾಂಧಿ ಬಜಾರ್, ಸೇರಿದಂತೆ ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಖರೀದಿ ಜೋರಾಗಿ ನಡೆದಿದೆ. ಹಬ್ಬದ ಜೋಶ್‍ನಲ್ಲಿದ್ದ ಜನಕ್ಕೆ ಬೆಲೆ ಏರಿಕೆಯ ಶಾಕ್ ತಟ್ಟಿದೆ. ಯುಗಾದಿ ಹಬ್ಬಕ್ಕೆ ಹೂವು, ಹಣ್ಣು, ಮಾವಿನಸೊಪ್ಪು, ಬೇವಿನಸೊಪ್ಪು ಬೇಕೇ ಬೇಕಾಗುತ್ತದೆ. ಹಾಗಾದರೆ ಯಾವುದೆಲ್ಲ ಎಷ್ಟು ದರ ಹೆಚ್ಚಾಗಿದೆ ಎನ್ನುವುದು ಈ ರೀತಿಯಿದೆ. ಬೇವಿನಸೊಪ್ಪು 1 ಕಟ್ಟಿಗೆ 20 ರೂ.ಯಿದ್ದು, ಮಾವಿನಸೊಪ್ಪು 1 ಕಟ್ಟಿಗೆ 30…
Author: Prajatv Kannada
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದಚ್ಯುತಗೊಳಿಸುವ ಸಾವಿರಾರು ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಡುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರಲ್ಲಿ ಇಬ್ಬರು ಪ್ರಿಟಿಂಗ್ ಪ್ರೆಸ್ ಅನ್ನು ಹೊಂದಿದ್ದು, ಘಟನೆಗೆ ಸಂಬಂಧಿಸಿ ದೆಹಲಿ ಪೊಲೀಸರು 44 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರು ದೆಹಲಿಯ ವಿವಿಧ ಸ್ಥಳಗಳಲ್ಲಿ ನಡೆಸಿದ ಬೃಹತ್ ಕಾರ್ಯಾಚರಣೆ ವೇಳೆ ಸುಮಾರು 2,000 ಮೋದಿ ವಿರೋಧಿ ಪೋಸ್ಟರ್‌ಗಳನ್ನು ಪತ್ತೆಯಾಗಿದ್ದು, ಇದರಲ್ಲಿ ಹೆಚ್ಚಿನ ಪೋಸ್ಟರ್‌ಗಳಲ್ಲಿ ಮೋದಿ ಹಠಾವೋ, ದೇಶ್ ಬಚಾವೋ ಎಂಬ ಘೋಷಣೆಗಳನ್ನು ಹೊಂದಿದ್ದವು. ಜೊತೆಗೆ 2,000ಕ್ಕೂ ಅಧಿಕ ಪೋಸ್ಟರ್‌ಗಳನ್ನು ಆಮ್ ಆದ್ಮಿ ಪಕ್ಷದ ಕಚೇರಿಗೆ ತಲುಪಿಸಲಾಗುತ್ತಿತ್ತು. ಐಪಿ ಎಸ್ಟೇಟ್ ಪ್ರದೇಶದಲ್ಲಿ ವ್ಯಾನ್ ಅನ್ನು ಅಡ್ಡಗಟ್ಟಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೋಸ್ಟರ್‌ಗಳು ಇರುವುದು ಕಂಡುಬಂದಿದ್ದು, ಈ ಬಗ್ಗೆ ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಪೋಸ್ಟರ್‌ಗಳನ್ನು ಆಪ್ ಕೇಂದ್ರ ಕಚೇರಿಗೆ ತಲುಪಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾನೆ. ಘಟನೆಗೆ ಸಂಬಂಧಿಸಿ ದೆಹಲಿ ಪೊಲೀಸರು ಪೋಸ್ಟರ್‌ಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ (Bengaluru Karaga Mahotsav) ಕ್ಕೆ ದಿನಾಂಕ ನಿಗದಿಯಾಗಿದೆ. 2023ರ ಕರಗ ಉತ್ಸವ 11 ದಿನಗಳ ಕಾಲ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ಧತೆ ನಡೆದಿದ್ದು, ಬಿಬಿಎಂಪಿ (BBMP) ಕೂಡ ಅನುದಾನ ಬಿಡುಗಡೆ ಒಪ್ಪಿದೆ. ಇದೇ ತಿಂಗಳ 29 ರಿಂದ ಕರಗ ಆರಂಭ ಆಗಲಿದ್ದು, 11 ದಿನಗಳ ಕಾಲ ಕರಗೋತ್ಸವ ನಡೆಯಲಿದೆ. ಐತಿಹಾಸಿಕ ಬೆಂಗಳೂರು ಕರಗಕ್ಕೆ ಭರಾಟೆ ಸಿದ್ಧತೆ ನಡೆದಿದೆ. ಬೆಂಗಳೂರು ಕರಗ ಮಹೋತ್ಸವಕ್ಕೆ ರಾಜ್ಯ, ದೇಶ, ವಿದೇಶಗಳಿಂದ ಜನ ಆಗಮಿಸಿ ಕರಗೋತ್ಸೋವಕ್ಕೆ ಸಾಕ್ಷಿಯಾಗಲಿದ್ದಾರೆ. 11 ದಿನಗಳ ಕಾಲ ಕರಗ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಮಾರ್ಚ್ 29 ರಥೋತ್ಸವ ದ್ವಜಾರೋಹಣ, ಮಾ. 30-ಏ.2ರವರೆಗೆ ವಿಶೇಷ ಪೂಜೆ;ಮಹಾಮಂಗಳಾರತಿ, ಏಪ್ರಿಲ್ 03 – ಆರತಿ ಕಾರ್ಯಕ್ರಮ, ಏಪ್ರಿಲ್ 04 – ಹಸಿ ಕರಗ, ಏಪ್ರಿಲ್ 05 – ಹೊಂಗಲು ಸೇವೆ ಹಾಗೂ ಏಪ್ರಿಲ್ 06 – ಕರಗ ಶಕ್ತ್ಯೋತ್ಸವ ನಡೆಯಲಿದೆ. ಮಸ್ತಾನ್ ದರ್ಗಾಕ್ಕೆ ಕರಗ ಸಾಗಬಾರದು…
ಬೆಂಗಳೂರು: ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಮಂತ್ , ದೀಪಕ್ , ರಾಜು, ಪ್ರಕಾಶ್ ಹಾಗೂ ರಿತಿಕ್ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ನಗರದ ಬಿಟಿಎಂ ಲೇಔಟ್ನ 2ನೇ ಹಂತದಲ್ಲಿ ಘಟನೆ ಜರುಗಿದ್ದು, ಈ ವೇಳೆ ವಿವಿಧ ಕಂಪನಿಗಳಿಗೆ ಸೇರಿದ 750ಕ್ಕೂ ಹೆಚ್ಚು ಸಿಲಿಂಡರ್ಗಳನ್ನ ವಶಕ್ಕೆ ಪಡೆದಿದ್ದಾರೆ. ಯಾವುದೇ ಲೈಸೆನ್ಸ್ ಇಲ್ಲದೆ ಅನಧಿಕೃತವಾಗಿ ಖಾಲಿ ನಿವೇಶನದಲ್ಲಿ ಶೆಡ್ ಹಾಕಿಕೊಂಡು, ಕಳ್ಳತನ ಮಾಡಿಕೊಂಡು ತಂದ ಸಿಲಿಂಡರ್ಗಳಿಗೆ ಜ್ಯೋತಿ, ಗೋ ಗ್ಯಾಸ್ ಏಜೆನ್ಸಿಗಳು ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು 750ಕ್ಕೂ ಅಧಿಕ ಸಿಲಿಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಸ್ವಾಮ್ಯದ ವಿವಿಧ ಕಂಪನಿಯ 75 ಸಿಲಿಂಡರ್, ಗೋಗ್ಯಾಸ್, ಜ್ಯೋತಿ ಸೇರಿದಂತೆ ಇತರೆ ಕಂಪನಿಯ 694 ಸಿಲಿಂಡರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಾರ್ಯಾಚರಣೆ…
ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ಇನ್ಸ್ಪೆಕ್ಟರ್ ರಾಜಣ್ಣ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಮಹಿಳೆಗೆ ಅಸಭ್ಯವಾಗಿ ಮೆಸೇಜ್ ಕಳಿಸಿದ ಆರೋಪಡಿ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆಯನ್ನ ಪಡೆದು ಆಕೆಗೆ ಅಸಭ್ಯವಾಗಿ ಚಾಟ್ ಮಾಡುತ್ತಿದ್ದು, ಜೊತೆಗೆ ಮಹಿಳೆಯನ್ನು ಠಾಣೆಗೆ ಕರೆಸಿಕೊಂಡು ರೂಂ ಗೆ ಬರಲು ಹೇಳಿದ್ದಾನಂತೆ. ಈ ಬಗ್ಗೆ ಸಾಕ್ಷಿ ಸಮೇತ ಡಿಸಿಪಿ ಲಕ್ಷ್ಮೀ ಪ್ರಸಾದ್ಗೆ ಮಹಿಳೆ ದೂರು ನೀಡಿದ್ದಾಳೆ. ಇದನ್ನೂ ಓದಿ: ದೂರು ಕೊಡಲು ಬಂದ ಯುವತಿಯನ್ನೆ ಮಂಚಕ್ಕೆ ಕರೆದ್ರಾ ಪೊಲೀಸ್ ಅಧಿಕಾರಿ. ? ಮಹಿಳೆ ದೂರಿನ ಮೇರೆಗೆ ಪ್ರಾಥಮಿಕ ತನಿಖೆಗೆ ಡಿಸಿಪಿ ಆದೇಶಿಸಿದ್ದರು. ಬಳಿಕ ಠಾಣೆಯ ಸಿಸಿಟಿವಿ ಪಡೆದು ತನಿಖೆ ನಡೆಸಿದ ಯಲಹಂಕ ಎಸಿಪಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ರಾಜಣ್ಣನನ್ನ ಸಸ್ಪೆಂಡ್ ಮಾಡಲಾಗಿದೆ.
ಬೆಂಗಳೂರು: ಕೇಂದ್ರ ಸಚಿವೆ ಶಶಿಕಲಾ ಜೊಲ್ಲೆ ಅವರ ಬೆಂಗಳೂರಿನ ಮನೆಯ ಮುಂದೆಯೇ ಕೊಲೆಯ ಯತ್ನ ನಡೆದಿದ್ದು ಸಿಲಿಕಾನ್ ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ. ಕಿಡಿಗೇಡಿಗಳು ತಮ್ಮ ಸ್ನೇಹಿನ ಮೇಲೆಯೇ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ. ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾರೆ. ಸದ್ಯ ಗಾಯಾಳು ರೌಡಿಶೀಟರ್ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಂದು ಮುಂಜಾನೆ 5.30 ರಿಂದ 6 ಗಂಟೆಯ ನಡುವೆ ಈ ಘಟನೆ ನಡೆದಿದೆ. ಹೈಗ್ರೌಂಡ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಗಗನ್ ಶರ್ಮಾ ಎಂಬಾತನ ಮೇಲೆ ಸುನೀಲ್ ಕುಮಾರ್, ಅರುಣ್, ಕೃಷ್ಣ ಕೃತ್ಯ ಎಸಗಿ ವಿಕೃತಿ ಮೆರೆದಿದ್ದಾರೆ. ರೌಡಿಶೀಟರ್ ಗಗನ್ ಮತ್ತು ಉಳಿದ ಆರೋಪಿಗಳೆಲ್ಲರೂ ಸ್ನೇಹಿತರು. ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನೀಲ್ ಕುಮಾರ್ ಹಾಗೂ ಗಗನ್ ನಡುವೆ ಆಸ್ತಿ ವಿಚಾರಕ್ಕಾಗಿ ಮನಸ್ತಾಪವಾಗಿತ್ತು. ಹೀಗಾಗಿ ಸುನೀತ್ ಮಾತನಾಡಬೇಕು ಎಂದು ಮಾರ್ಚ್ 20 ರಂದು ರಾತ್ರಿ 10 ಗಂಟೆಗೆ ಗಗನ್ಗೆ ಕಾಲ್ ಮಾಡಿ ಫ್ರೇಜರ್ ಟೌನ್ಗೆ ಕರೆಸಿಕೊಂಡಿದ್ದ. ಬಳಿಕ ಅಲ್ಲಿಂದ…
ಬೆಂಗಳೂರು: ಬೆಂಗಳೂರು ಮಹಾನಗರವನ್ನು ಬಿಜೆಪಿ ಸರ್ಕಾರ ಕೊಳ್ಳೆ ಹೊಡೆಯುವ ಎಟಿಎಂ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹೆಬ್ಬಾಳ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ, “ಸರ್ಕಾರ ಕಸ ವಿಲೇವಾರಿಯಲ್ಲಿ ಅಕ್ರಮ, ರಸ್ತೆ ಗುಂಡಿ ಮುಚ್ಚುವುದರಲ್ಲಿ ಅಕ್ರಮ ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಅಕ್ರಮ ಎಸಗುತ್ತಿದೆ. ಯೋಜನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದೆ” ಎಂದು ದೂರಿದರು. ಬೆಂಗಳೂರು ನಗರ ನೋಡಿದರೆ ಈಗ ಎರಡು ರಾಷ್ಟ್ರೀಯ ಪಕ್ಷಗಳಿಗೆ ದುಡ್ಡು ಮಾಡುವ ಎಟಿಎಂ ಆಗಿದೆ. ಇವರಿಗೆಲ್ಲ ಇಲ್ಲಿ ಒಳ್ಳೆಯ ಆದಾಯ ಬರ್ತಿದೆ. ಜನರನ್ನು ಲೂಟಿ ಮಾಡುತ್ತಿದ್ದಾರೆ. ವಿಧಾನಸೌಧ ಇವರ ಕೈಯಲ್ಲಿ ಇದೆ. ಬಿಬಿಎಂಪಿ ಕೂಡ ಇವರ ಕೈಯಲ್ಲೇ ಇದೆ. ಹೀಗಾಗಿ ಲೂಟಿ ಮಾಡಲು ಪೊಗದಸ್ತಾದ ಎಟಿಎಂ ಇವರಿಗೆ ಸಿಕ್ಕಿದೆ. ಪಂಚರತ್ನ ಯಾತ್ರೆ ಮಾಡುತ್ತಾ ಹೆಬ್ಬಾಳ ಕ್ಷೇತ್ರದಲ್ಲಿ ನೋಡಿಕೊಂಡು ಬಂದೆ. ರಸ್ತೆಯಲ್ಲೇ ರಾಶಿ ರಾಶಿ ಕಸ ಬಿದ್ದಿದೆ. ಬಿಬಿಎಂಪಿ ಏನು ಮಾಡುತ್ತಿದೆ ಎನ್ನುವುದು ಇದರಿಂದ ಅರ್ಥವಾಗುತ್ತದೆ” ಎಂದು ಕಿಡಿಕಾರಿದರು.
ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಮೇಲೆ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವುದರ ವಿರುದ್ಧ ಪ್ರಬಲ ಪ್ರತಿಭಟನೆಯನ್ನು ಮಾಡಿರುವ ಭಾರತೀಯ ವಲಸಿಗರು ಈ ಬಗ್ಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಭಾರತೀಯ ಧ್ವಜವನ್ನು ಅಗೌರವಿಸಿದ ಖಲಿಸ್ತಾನ ಬೆಂಬಲಿಗರ ವಿರುದ್ಧ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಬ್ರಿಟಿಷ್ ಸರ್ಕಾರ ಮತ್ತು ಲಂಡನ್ ಮೇಯರ್ ಸಾದಿಕ್ ಖಾನ್ ಅವರಲ್ಲಿ ಭಾರತೀಯ ವಲಸಿಗರು ಒತ್ತಾಯಿಸಿದ್ದಾರೆ.ಖಲಿಸ್ತಾನಿ ಪರ ಚಟುವಟಿಕೆ ವಿರುದ್ಧ ಬ್ರಿಟನ್‌ನಲ್ಲಿರುವ ಎನ್‌ಆರ್‌ಐಗಳಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗುತ್ತಿರುವುದನ್ನು ವಿರೋಧಿಸಿ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾರತೀಯ ಧ್ವಜಗಳನ್ನು ಬೀಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಹೇಳಿಕೆಗಳನ್ನು ಬಿಡುಗಡೆ ಮಾಡುವ ಬದಲು ಸರ್ಕಾರ ಮತ್ತು ಮೇಯರ್ ಕ್ರಮವನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ. ಮತ್ತೊಬ್ಬ ಪ್ರತಿಭಟನಾಕಾರರು ‘ಅವಮಾನಕರ’ ಕೃತ್ಯದ ಬಗ್ಗೆ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು ಧ್ವಜ ಕೆಳಗಿಳಿಸಿದರ ವಿರುದ್ಧ ಸಮುದಾಯವು ಒಗ್ಗಟ್ಟಿನಿಂದ ನಿಂತಿದೆ ಎಂದಿದ್ದಾರೆ.
ಲಂಡನ್: ಇಂಗ್ಲಿಷ್ ಪರೀಕ್ಷಾ ಹಗರಣದ ನಂತರ ತಮ್ಮ ವೀಸಾಗಳನ್ನು ಅನ್ಯಾಯವಾಗಿ ಹಿಂತೆಗೆದುಕೊಂಡಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭಾರತದ ಅನೇಕರನ್ನು ಒಳಗೊಂಡಂತೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಗುಂಪು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರಿಗೆ ಮನವಿ ಸಲ್ಲಿಸಿದೆ. ಈ ಸಂಗತಿ 2014 ರ ಹಿಂದಿನದ್ದಾಗಿದ್ದು, ಬಿಬಿಸಿಯ ‘ಪನೋರಮಾ’ ತನಿಖೆಯು ವೀಸಾಗಳಿಗೆ ಅಗತ್ಯವಿರುವ ಕಡ್ಡಾಯ ಭಾಷಾ ಪರೀಕ್ಷೆ ಹೊತ್ತಲ್ಲಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದೆ. ಬ್ರಿಟನ್ ಸರ್ಕಾರವು ಅಂತಹ ಕೇಂದ್ರಗಳ ಮೇಲೆ ವ್ಯಾಪಕವಾದ ಶಿಸ್ತುಕ್ರಮ ಕೈಗೊಂಡಿದ್ದು ಆ ಕೇಂದ್ರಗಳೊಂದಿಗೆ ಸಂಬಂಧ ಹೊಂದಿದ್ದ ಹತ್ತಾರು ವಿದ್ಯಾರ್ಥಿಗಳ ವೀಸಾಗಳನ್ನು ಹಿಂತೆಗೆದುಕೊಂಡಿತ್ತು. ಸೋಮವಾರದಂದು 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಸಲ್ಲಿಸಲಾದ ಇತ್ತೀಚಿನ ಮನವಿಯನ್ನು ಪ್ರಭಾವಿತ ವಿದ್ಯಾರ್ಥಿಗಳಿಗೆ ಮತ್ತು ಸಂಘಟಿಸಲು ಮೈಗ್ರೆಂಟ್ ವಾಯ್ಸ್ ಸ್ವಯಂಸೇವಕ ಗುಂಪು ಬೆಂಬಲಿಸುತ್ತಿದೆ. ಇದು ಸಮಕಾಲೀನ ಬ್ರಿಟಿಷ್ ಇತಿಹಾಸದಲ್ಲಿ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ. ಆರಂಭಿಕ ಸರ್ಕಾರದ ಪ್ರತಿಕ್ರಿಯೆಯು ಅನ್ಯಾಯವಾಗಿದೆ ಮತ್ತು ವರ್ಷಗಳವರೆಗೆ ಎಳೆಯಲು ಅನುಮತಿಸಲಾಗಿದೆ ಎಂದು ಮೈಗ್ರೆಂಟ್ ವಾಯ್ಸ್ ನಿರ್ದೇಶಕ ನಾಝೆಕ್ ರಮದಾನ್…
ಖ್ಯಾತ ನಟಿ ಮೀನಾ ಕುರಿತಾದ ಸುದ್ದಿಯೊಂದು ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪತಿಯ ಸಾವಿನ ನೋವಿನಿಂದ ಚೇತರಿಸಿಕೊಂಡಿರುವ ನಟಿ ಮೀನಾ ಇದೀಗ 2ನೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಕಾಲಿವುಡ್ ನಟ, ರಜನಿಕಾಂತ್ ಮಾಜಿ ಅಳಿಯ ಧನುಷ್ ಜೊತೆ ಮೀನಾ ಮದುವೆ ಆಗುತ್ತಿದ್ದಾರೆ ಎನ್ನಲಾಗುತ್ತಿದೆ. ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಧನುಷ್ ಡಿವೋರ್ಸ್ ನೀಡಿದ್ದು ಇದೀಗ ಇಬ್ಬರೂ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಧನುಷ್ ಮತ್ತು ಮೀನಾ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ನಟ ಬೈಲಾನ್ ರಂಗನಾಥನ್ ಮಾಹಿತಿ ಹಂಚಿಕೊಂಡಿದ್ದಾರೆ. ಧನುಷ್- ಮೀನಾ ಇಬ್ಬರು ಒಂಟಿ ಜೀವನ ನಡೆಸುತ್ತಿದ್ದಾರೆ. ಮುಂಬರುವ ಜುಲೈನಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂದು ಬೈಲಾನ್ ರಂಗನಾಥನ್ ಹೇಳಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.