Author: Prajatv Kannada

ಪ್ರತಿ ನಿತ್ಯ ಹೊರಗಿನ ಆಹಾರಗಳನ್ನು ತಿನ್ನುತ್ತೇವೆ. ಕೆಲವೊಮ್ಮೆ ಬೇಜಾರಾದರೂ ಅದೇ ಅನಿವಾರ್ಯವಾಗಿರುತ್ತದೆ. ಹೀಗಾಗಿ ವಾರದಲ್ಲಿ ಒಂದು ಬಾರಿಯಾದರೂ ಮನೆಯಲ್ಲೇ ಹೆಲ್ದಿ ಸಲಾಡ್ ಮಾಡಿ ತಿನ್ನಿ. ಈ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಬೇಕಾಗುವ ಸಾಮಾಗ್ರಿಗಳು * ಮೊಳಕೆ ಹೆಸರುಕಾಳು- 1 ಸಣ್ಣ ಬಟ್ಟಲು * ಮೊಳಕೆ ಕಡ್ಲೆಕಾಳು- 1 ಸಣ್ಣ ಬಟ್ಟಲು * ದಾಳಿಂಬೆ- 1 ಸಣ್ಣ ಬಟ್ಟಲು * ಸ್ವೀಟ್ ಕಾರ್ನ್ * ಕ್ಯಾರೆಟ್ ತುರಿ- ಸ್ವಲ್ಪ * ಸೌತೆಕಾಯಿ- ಸಣ್ಣಗೆ ಹೆಚ್ಚಿದ್ದು * ಕ್ಯಾಪ್ಸಿಕಂ- ಸಣ್ಣಗೆ ಹೆಚ್ಚಿದ್ದು * ಎಲೆಕೋಸು- ಸಣ್ಣಗೆ ಹೆಚ್ಚಿದ್ದು * ಕೊತ್ತಂಬರಿ- ಸಣ್ಣಗೆ ಹೆಚ್ಚಿದ್ದು * ಕಾಯಿ ತುರಿ- ಸ್ವಲ್ಪ * ಪೆಪ್ಪರ್ ಪೌಡರ್- ಸ್ವಲ್ಪ * ಚಾಟ್ ಮಸಾಲ- ಸ್ವಲ್ಪ * ಉಪ್ಪು- ರುಚಿಗೆ ತಕ್ಕಷ್ಟು * ಖಾರದ ಪುಡಿ- ಸ್ವಲ್ಪ * ಜೀರಿಗೆ ಪುಡಿ- ಸ್ವಲ್ಪ * ಟೊಮೆಟೋ- 2 * ಈರುಳ್ಳಿ- 1 ಕಟ್ ಮಾಡಿದ್ದು ಮಾಡುವ ವಿಧಾನ * ಒಂದು ಮಿಕ್ಸಿಂಗ್ ಬೌಲ್…

Read More

ವಾಷಿಂಗ್ಟನ್: ತನ್ನ ಪ್ರತಿಸ್ರ್ಪಧಿ ಅಕಾಡೆಮಿಗಳ ವಿರುದ್ಧ ಫುಟ್‍ಬಾಲ್ ಪಂದ್ಯಗಳನ್ನು ಆಡಿ ಪದಕ ಗೆದ್ದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಏರ್ ಫೋರ್ಸ್ ಅಕಾಡೆಮಿಗೆ ಕಮಾಂಡರ್-ಇನ್-ಚೀಫ್ ಟ್ರೋಫಿಯನ್ನು ನೀಡಿ ಗೌರವಿಸಿದ್ದಾರೆ. ಶ್ವೇತಭವನದ ಪೂರ್ವ ಕೊಠಡಿಯಲ್ಲಿ ನೆರೆದಿದ್ದ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಬಿಡೆನ್, ನಿಮ್ಮ ಕರ್ತವ್ಯ, ತಂಡದ ಹುರುಪು , ಸೇವೆ ಮತ್ತು ಶ್ರೇಷ್ಠತೆಯ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದು ಆಟಗಾರರನ್ನು ಹಾಡಿ ಹೊಗಳಿದ್ದಾರೆ. ಸೇನಾ ಅಕಾಡೆಮಿಗಳ ನಡುವಿನ ಸ್ಪರ್ಧೆಯು 1972 ರಲ್ಲಿ ಪ್ರಾರಂಭವಾಯಿತು. ಮೂರು ಬೆಳ್ಳಿಯ ಫುಟ್‍ಬಾಲ್ ಟ್ರೋಫಿ 170 ಪೌಂಡ್‍ಗಳಷ್ಟು ತೂಗುವಿದೆ ,ಇದು ಸೂಪರ್ ಬೌಲ್ ಟ್ರೋಫಿಗಿಂತ ದೊಡ್ಡದಾಗಿದೆ ಎಂದು ಬಿಡೆನ್ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ನವದೆಹಲಿ : ಸೇನೆ ಹಾಗೂ ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಿಂದ ಸುಡಾನ್ ನಲ್ಲಿ ಸಾಕಷ್ಟು ಮಂದಿ ಸಿಲುಕಿಕೊಂಡಿದ್ದಾರೆ. ಈಗಾಗಲೇ ಅಪರೇಷನ್ ಕಾವೇರಿ ಮೂಲಕ ಸಾಕಷ್ಟು ಮಂದಿಯನ್ನು ಕರ್ನಾಟಕಕ್ಕೆ ಕರೆತರಲಾಗಿದ್ದು ವಾಪಸ್ ಬಂದವರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಯುದ್ಧಪೀಡಿತ ಸುಡಾನ್​ನಿಂದ ರಕ್ಷಿಸಲ್ಪಟ್ಟು ಸೌದಿ ಅರೇಬಿಯಾದಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸುಖವಿಂದರ್ ಸಿಂಗ್ ಎಂಬುವರು ನಿಟ್ಟುಸಿರು ಬಿಟ್ಟು, ಸುಡಾನ್​ನಲ್ಲಿದ್ದಾಗ ನಾವು ಇನ್ನೇನು ಸತ್ತೇ ಹೋಗುತ್ತೇವೆ ಅನಿಸಿತ್ತು ಎಂದರು. ಸುಡಾನ್​ನಿಂದ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಕಾವೇರಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಥಮ ಹಂತದಲ್ಲಿ ರಕ್ಷಿಸಲ್ಪಟ್ಟ 360 ಭಾರತೀಯರ ಪೈಕಿ ಒಬ್ಬರಾಗಿದ್ದಾರೆ ಸುಖವಿಂದರ್ ಸಿಂಗ್. ಹರಿಯಾಣದ ಫರಿದಾಬಾದ್ ನಿವಾಸಿಯಾದ ಸುಖ್ವಿಂದರ್ ಅವರು ಸುಡಾನ್‌ನಲ್ಲಿನ ತಮ್ಮ ಅನುಭವವನ್ನು ನೆನಪಿಸಿಕೊಂಡು, ನಾನಿನ್ನೂ ಭೀತಿಯಲ್ಲಿಯೇ ಇದ್ದೇನೆ ಎಂದಿದ್ದಾರೆ. ನಾವು ಒಂದು ಪ್ರದೇಶದಲ್ಲಿ ಇದ್ದೆವು. ಅಲ್ಲಿ ಒಂದು ಕೋಣೆಗೆ ಸೀಮಿತವಾಗಿದ್ದೆವು. ನಾವು ಮರಣಶಯ್ಯೆಯಲ್ಲಿದ್ದೇವೆ ಎಂಬ ಪರಿಸ್ಥಿತಿ ಇತ್ತು ಎಂದರು. ಭಾರತವು ತನ್ನ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಹಿಂಸಾಚಾರ ಪೀಡಿತ…

Read More

ಲಂಡನ್ : ಅಕ್ಟೋಬರ್​ನಲ್ಲಿ ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿದೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ಮುನ್ಸೂಚನೆ ನೀಡಿದ್ದು ಇಮ್ರಾನ್ ಖಾನ್ ಮತ್ತೊಮ್ಮೆ ಪಾಕ್ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಮುನ್ಸೂಚನೆ ನೀಡಿದೆ. ಅಕ್ಟೋಬರ್​ ಮುಂಚೆ ದೇಶದಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆ ಕಡಿಮೆ ಇದ್ದು, ಪ್ರಸ್ತುತ ಆಡಳಿತದಲ್ಲಿರುವ ಮೈತ್ರಿಕೂಟ ಸರ್ಕಾರದ ವಿರುದ್ಧ ಜನತೆ ವ್ಯಾಪಕ ಅಸಮಾಧಾನ ಹೊಂದಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಮತ್ತು ಭದ್ರತೆ ದುರ್ಬಲವಾಗಿದೆ ಮತ್ತು ಆರ್ಥಿಕ ಬೆಳವಣಿಗೆಯು 2023 ರಲ್ಲಿ ವಾಸ್ತವಿಕವಾಗಿ ನಿಧಾನವಾಗಲಿದೆ ಎಂದು ಎಕನಾಮಿಸ್ಟ್ ಗ್ರೂಪ್ EIU ನ ವಿಶ್ಲೇಷಣಾ ವಿಭಾಗ ತಿಳಿಸಿದೆ. ಪಾಕಿಸ್ತಾನದಲ್ಲಿ 2023 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಅಲ್ಲಿ ಪ್ರಸ್ತುತ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಆಡಳಿತಾರೂಢ ಪಿಎಂಎಲ್ – ಎನ್ ಒಕ್ಕೂಟದ ಮೇಲೆ ಜನರಿಗೆ ವ್ಯಾಪಕ ಅಸಮಾಧಾನವಿರುವ ಕಾರಣದಿಂದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷ ಮತ್ತೆ ಗೆಲ್ಲಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನದಲ್ಲಿ…

Read More

ಕರಾಚಿ: ಪಾಕಿಸ್ತಾನದ​ ಮಾಜಿ ಪ್ರಧಾನಿ ಭುಟ್ಟೋ ಅವರ ಮೊಮ್ಮಗಳು ಮತ್ತು ಬೆನಜೀರ್ ಭುಟ್ಟೋ ಅವರ ಸೋದರ ಸೊಸೆ ಫಾತಿಮಾ ಭುಟ್ಟೊ ಕರಾಚಿಯಲ್ಲಿ ಸರಳವಾಗಿ ಹಸೆಮಣೆ ಏರಿದ್ದಾರೆ. ಫಾತಿಮಾ ಭುಟ್ಟೊ ಸಹೋದರ ಜುಲ್ಫಿಕರ್ ಅಲಿ ಭುಟ್ಟೊ ಟ್ವೀಟ್​ ಮಾಡುವ ಮೂಲಕ ಮದುವೆಯ ಮಾಹಿತಿ ಹಂಚಿಕೊಂಡಿದ್ದಾರೆ. ಜುಲ್ಫಿಕರ್ ಅಲಿ ಭುಟ್ಟೊ ಮಾಹಿತಿಯ ಪ್ರಕಾರ ಮುರ್ತಾಜಾ ಭುಟ್ಟೋ ಅವರ ಪುತ್ರಿ ಫಾತಿಮಾ ಭುಟ್ಟೋ ಅವರ ನಿಕ್ಕಾ ಸಮಾರಂಭವು ಕರಾಚಿಯ 70 ಕ್ಲಿಫ್ಟನ್‌ನಲ್ಲಿರುವ ಕುಟುಂಬದ ನಿವಾಸದಲ್ಲಿ ನಡೆಯಿತು. “ನಮ್ಮ ತಂದೆ, ಶಹೀದ್ ಮಿರ್ ಮುರ್ತಾಜಾ ಭುಟ್ಟೋ ಮತ್ತು ಭುಟ್ಟೋ ಕುಟುಂಬದ ಪರವಾಗಿ, ಕೆಲವು ಸಂತೋಷದ ಸುದ್ದಿಗಳನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನನ್ನ ಸಹೋದರಿ ಫಾತಿಮಾ ಮತ್ತು ಗ್ರಹಾಂ ನಿನ್ನೆ ನಮ್ಮ ಮನೆಯಲ್ಲಿ ನಡೆದ ನಿಕ್ಕಾ ಸಮಾರಂಭದಲ್ಲಿ ವಿವಾಹವಾದರು ಎಂದು ಜುಲ್ಫಿಕರ್ ಅಲಿ ಭುಟ್ಟೊ ಟ್ವೀಟ್ ಮೂಲಕ ತಿಳಿಸಿದ್ದಾರೆ. “ನಮ್ಮ ಅಜ್ಜನ ಲೈಬ್ರರಿಯಲ್ಲಿ ನಡೆದ ಸಮಾರಂಭದಲ್ಲಿ ಫಾತಿಮಾ ಅವರ ಪ್ರೀತಿಪಾತ್ರರು ಭಾಗವಹಿಸಿದ್ದರು. ಇದು ನನ್ನ ಪ್ರೀತಿಯ ಸಹೋದರಿಗೆ…

Read More

ಲಂಡನ್: ರಿಷಿ ಸುನಕ್ (Rishi Sunak) ಅವರನ್ನು ನನ್ನ ಮಗಳು ಇಂಗ್ಲೆಂಡ್‍ನ ಪ್ರಧಾನಿಯನ್ನಾಗಿ (Prime Minister) ಮಾಡಿದ್ದಾಳೆ ಎಂದು ಸುಧಾ ಮೂರ್ತಿ (Sudha Murty) ಹೇಳಿಕೊಂಡಿದ್ದಾರೆ. ಹೆಂಡತಿ ಗಂಡನನ್ನು ಹೇಗೆ ಬದಲಾಯಿಸುತ್ತಾಳೆ ನೋಡಿ, ನನ್ನ ಪತಿಯನ್ನು ನಾನು ಉದ್ಯಮಿಯನ್ನಾಗಿ ಮಾಡಿದ್ದೇನೆ. ನನ್ನ ಮಗಳು ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ ಎಂದು ಹೇಳಿರುವ ವೀಡಿಯೋ ಒಂದು ವೈರಲ್ ಆಗುತ್ತಿದೆ. ಮುಂದುವರೆದು ಮಾತನಾಡಿರುವ ಅವರು, ನಮ್ಮ ಮನೆಯಲ್ಲಿ ಯಾವ ಕಾರ್ಯ ನಡೆಯುವುದಾದರೂ ಗುರುವಾರ ನಡೆಯುತ್ತದೆ. ಇನ್ಫೋಸಿಸ್ (Infosys) ಆರಂಭ ಮಾಡಿದ್ದು ಅದೇ ವಾರ. ನನ್ನ ಮಗಳ ಮದುವೆಯಾದ ಮೇಲೆ ಸುನಕ್ ಯಾಕೆ ನಿಮ್ಮ ಮನೆಯಲ್ಲಿ ಎಲ್ಲಾ ಕಾರ್ಯಗಳು ಗುರುವಾರ ನಡೆಯುತ್ತವೆ ಎಂದು ಕೇಳಿದ್ದರು. ಈಗ ಸುನಕ್ ಗುರುವಾರ ಉಪವಾಸ ಆಚರಿಸುತ್ತಾರೆ. ಇದು ಹೆಂಡತಿಯ ಮಹಿಮೆ, ಆದರೆ ನನ್ನ ಪತಿಯಲ್ಲಿ ಇಂತಹ ಬದಲಾವಣೆ ತರಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ. 150 ವರ್ಷಗಳಿಂದ ಇಂಗ್ಲೆಂಡ್‍ನಲ್ಲಿರುವ (England) ಅಳಿಯನ ಕುಟುಂಬ ಈಗಲೂ ಭಾರತದ ಮೌಲ್ಯಗಳಿಗೆ…

Read More

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,171 ಹೊಸ ಕೋವಿಡ್ (COVID) ಪ್ರಕರಣಗಳು ಪತ್ತೆಯಾಗಿದ್ದು, 40 ಮಂದಿ ಸಾವನ್ನಪ್ಪಿ ದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,49,39,515ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ (COVID) ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,31,508ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 51,314ಕ್ಕೆ ತಲುಪಿದೆ. ಈ ನಡುವೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,43,56,693ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಒಂದೇ 1,94,134 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ  92,64,96,579 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ…

Read More

ನವದೆಹಲಿ: ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ಧರಣಿ ನಡೆಸುತ್ತಿದ್ದ ಮಹಿಳಾ ಕುಸ್ತಿಪಟುಗಳನ್ನು ಶನಿವಾರ ಮುಂಜಾನೆ ಭೇಟಿಯಾಗಿದ್ದು, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ದೌರ್ಜನ್ಯ (Sexual Harassment) ಆರೋಪದ ಮೇಲೆ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ (Sakshi Malik), ವಿನೇಶ್ ಫೋಗಟ್ (Vinesh Phogat) ಅವರನ್ನು ಪ್ರಿಯಾಂಕಾ ಭೇಟಿಯಾಗಿದ್ದಾರೆ. ಬ್ರಿಜ್‍ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಭಾರತದ ಮಾಜಿ ಕ್ರಿಕೆಟ್ ತಾರೆ ಕಪಿಲ್ ದೇವ್ ಸಹ ಬೆಂಬಲ ಘೋಷಿಸಿದ್ದರು.

Read More

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ(Uddhav Thackeray) ಅವರು 11 ತಿಂಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಗುಂಪು ನಡೆಸಿದ ಬೆನ್ನಿಗೆ ಚೂರಿ ಹಾಕುವ ಕೃತ್ಯಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಶಿವಸೇನಾದ ‘ಭಾರತೀಯ ಕಾಮ್ಗಾರ್ ಸೇನಾ’ದ 55ನೇ ಸಂಸ್ಥಾಪನಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಠಾಕ್ರೆ, ‘ಪ್ರತಿಯೊಬ್ಬರಿಗೂ ಅವರವರ ದಿನಗಳಿವೆ ಆದರೆ ನಮ್ಮ ಒಳ್ಳೆಯ ದಿನಗಳು ಇನ್ನೂ ಬಂದಿಲ್ಲ’ ಎಂದು ಹೇಳಿದರು. ‘ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ನಾನು ಖಂಡಿತವಾಗಿಯೂ ಅವರಿಗೆ ಅದನ್ನು ಹಿಂತಿರುಗಿಸುತ್ತೇನೆ. ನಾವು ಅವರಿಗೆ ನೀಡುವ ‘ಪ್ರಸಾದ’ವನ್ನು ಅವರು ತಮ್ಮ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಾರೆ’ ಎಂದು ಹೇಳಿದರು. ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂವೇದನೆಯನ್ನೇ ಹೊಂದಿಲ್ಲ. ಅವರು ಕೇವಲ ಕೈಗಾರಿಕೋದ್ಯಮಿಗಳ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಮತ್ತು ಕಾರ್ಮಿಕರು ಅಥವಾ ರೈತರ ಬಗ್ಗೆ ಅವರಿಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು. ಮೆಗಾ…

Read More

ನವದೆಹಲಿ: ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ಧರಣಿ ನಡೆಸುತ್ತಿದ್ದ ಮಹಿಳಾ ಕುಸ್ತಿಪಟುಗಳನ್ನು ಶನಿವಾರ ಮುಂಜಾನೆ ಭೇಟಿಯಾಗಿದ್ದು, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್‍ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ದೌರ್ಜನ್ಯ (Sexual Harassment) ಆರೋಪದ ಮೇಲೆ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ (Sakshi Malik), ವಿನೇಶ್ ಫೋಗಟ್ (Vinesh Phogat) ಅವರನ್ನು ಪ್ರಿಯಾಂಕಾ ಭೇಟಿಯಾಗಿದ್ದಾರೆ. ಬ್ರಿಜ್‍ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಭಾರತದ ಮಾಜಿ ಕ್ರಿಕೆಟ್ ತಾರೆ ಕಪಿಲ್ ದೇವ್ ಸಹ ಬೆಂಬಲ ಘೋಷಿಸಿದ್ದರು.

Read More