ಅಲಹಾಬಾದ್ : ಮಹಿಳಾ ಉದ್ಯೋಗಿಗಳಿಗೆ ಮಗುವಿನ ಜನನದ ನಂತರವೂ ಹೆರಿಗೆ ರಜೆ (Maternity leave) ಹಕ್ಕಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಾನೂನಿನ ಪ್ರಕಾರ, ಮಗುವಿನ ಜನನದ ನಂತರವೂ ಹೆರಿಗೆ ರಜೆ ಪಡೆಯುವ ಹಕ್ಕು ಮಹಿಳೆಗೆ ಇದೆ. ಮಾತೃತ್ವ ರಜೆ ಮತ್ತು ಮಕ್ಕಳ ಆರೈಕೆ ರಜೆ ಎರಡೂ ಬೇರೆ ಬೇರೆ ರಜೆಗಳು ಎಂದು ನ್ಯಾಯಾಲಯ ಹೇಳಿದೆ. ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳಬಹುದು. ಮಗು ಹುಟ್ಟಿದೆ. ಈ ನೆಲೆಯಲ್ಲಿ ಹೆರಿಗೆ ರಜೆ ನಿರಾಕರಣೆ ತಪ್ಪು ಎಂದು ಸ್ಪಷ್ಟಪಡಿಸಿದೆ. ಮಗುವಿನ ಜನನದ ನಂತರ ಹೆರಿಗೆ ರಜೆ ನೀಡಲು ನಿರಾಕರಿಸಿದ ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ಇಟಾ ಅವರ ಆದೇಶವನ್ನು ಕಾನೂನುಬಾಹಿರ ಎಂದು ಘೋಷಿಸಿದ ನ್ಯಾಯಾಲಯವು (Court) ಅದನ್ನು ರದ್ದುಗೊಳಿಸಿತು. ಅರ್ಜಿದಾರರಿಗೆ ಬಾಕಿ ವೇತನದೊಂದಿಗೆ ನಿಯಮಿತ ವೇತನವನ್ನು ನೀಡುವಂತೆ ಹೀರಾಪುರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಿತು. ಎರಡು ವಾರಗಳಲ್ಲಿ ಆದೇಶ ಹೊರಡಿಸುವಂತೆ ನ್ಯಾಯಾಲಯ ಬಿಎಸ್‌ಎಗೆ ಸೂಚಿಸಿದೆ. ಮಗುವಿನ ಜನನದ ನಂತರ ಹೆರಿಗೆ ರಜೆ ಲಭ್ಯವಿರುವುದಿಲ್ಲ, ಅರ್ಜಿದಾರರು ಮಕ್ಕಳ ಆರೈಕೆ…
Author: Prajatv Kannada
ಕೋಲ್ಕತ್ತಾ: ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯ (Narendra Modi) ಅತಿದೊಡ್ಡ ಟಿಆರ್‌ಪಿ ಎಂದುಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತಿಳಿಸಿದರು. ತೃಣಮೂಲ ಕಾಂಗ್ರೆಸ್‍ನ ಆಂತರಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದರು ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಪ್ರತಿಪಕ್ಷದ ಮುಖವಾಗಿದ್ದರೇ, ಯಾರೂ ಪ್ರಧಾನಿ ಮೋದಿಯನ್ನು ಟೀಕಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಬಿಜೆಪಿಯು (BJP) ರಾಹುಲ್ ಗಾಂಧಿ (Rahul Gandhi) ಅವರನ್ನು ನಾಯಕನಾಗಿ ಇರಿಸಿಕೊಳ್ಳಲು ಬಯಸುತ್ತದೆ ಎಂದು ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿಯ ವಿಷಯವನ್ನೇ ಮುಂದಿಟ್ಟುಕೊಂಡು ಬಿಜೆಪಿ ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡುತ್ತಿಲ್ಲ. ಸಂಸತ್ತಿನಲ್ಲಿ ಅದಾನಿ ಹಾಗೂ ಎಲ್‍ಐಸಿ ವಿಷಯದ ಬಗ್ಗೆ ಚರ್ಚೆ ನಡೆಯಬೇಕು, ಆದರೆ ಎಲ್‍ಐಸಿ ಹಾಗೂ ಅದಾನಿ ವಿಚಾರದ ಕುರಿತು ಚರ್ಚೆಗಳು ನಡೆಯುತ್ತಿಲ್ಲ. ಗ್ಯಾಸ್ ಬೆಲೆಯ ಬಗ್ಗೆಯೂ ಚರ್ಚೆಯಾಗುತ್ತಿಲ್ಲ, ಇದೆಲ್ಲದರ ನಡುವೆ ಏಕರೂಪ ನಾಗರಿಕ ಸಂಹಿತೆ ಪ್ರತಿಯನ್ನು ಜಾರಿಗೆ ತರಲಾಗಿದೆ. ನಾವು ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪುವುದಿಲ್ಲ, ಅದನ್ನು…
ನವದೆಹಲಿ: ಸದ್ದಿಲ್ಲದೆ ಮಹಾಮಾರಿ ಕೊರೋನಾ ಭಾರತದಲ್ಲಿ ತಲೆ ಎತ್ತುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 699 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,46,97,037ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,808ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,559ಕ್ಕೆ ತಲುಪಿದೆ. ಈ ನಡುವೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,41,59,617ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಒಂದೇ 97,866 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ 92,04,44,854 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ…
ಹುಬ್ಬಳ್ಳಿ: ಈದ್ಗಾ ಮೈದಾನಕ್ಕೆ (Idga Maidana) ರಾಣಿ ಚೆನ್ನಮ್ಮನವರ ಹೆಸರಿಡುವುದನ್ನು ಪ್ರಶ್ನಿಸಿ ಹಾಕಿದ್ದ ಪಿಐಎಲ್ ಅನ್ನು ಹೈಕೋರ್ಟ್ (High Court) ತಿರಸ್ಕೃತವಾಗಿದೆ. ವಾಣಿಜ್ಯನಗರಿ ಹುಬ್ಬಳ್ಳಿಯ (Hubballi) ಈದ್ಗಾ ಮೈದಾನಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಣಿ ಚೆನ್ನಮ್ಮ ಮೈದಾನ ಎಂಬ ಮರುನಾಮಕರಣಕ್ಕೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಉಡುಪಿ (Udupi) ನಿವಾಸಿ ಹುಸೇನ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಕುರಿತು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠವು ವಿಚಾರಣೆ ನಡೆಸಿತ್ತು. ಪಾಲಿಕೆ ಪರವಾಗಿ ವಾದ ಮಂಡಿಸಿದ ಎಸ್.ಎಸ್. ಮಹೇಂದ್ರ, ಮೈದಾನ ಪಾಲಿಕೆಯ ಆಸ್ತಿ. ಇದರ ಮೇಲೆ ಸಂಪೂರ್ಣ ಹಕ್ಕು ಪಾಲಿಕೆಗೆ ಇದೆ. ಆಕ್ಷೇಪಣೆ ಸ್ವೀಕರಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು, ಈದ್ಗಾ ಮೈದಾನಕ್ಕೆ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರನ್ನು ಇಡುವ ಬಗ್ಗೆ, ಇತ್ತೀಚೆಗೆ ನಡೆದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ…
ಹುಬ್ಬಳ್ಳಿ (Hubballi):ರಾಹುಲ್ ಗಾಂಧಿ (Rahul Gandhi) ಅವರು ರಾಜ್ಯಕ್ಕೆ ಭೇಟಿ ನೀಡಿರುವುದರಿಂದ ಯಾವುದೇ ಪರಿಣಾಮ ಬೀರಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ಮಾಡಿದ್ದು, ಯಾವುದೇ ಪರಿಣಾಮ ಉಂಟಾಗಿಲ್ಲ. ನಿನ್ನೆಯ ಅವರ ಬೋಗಸ್ ಘೋಷಣೆಗಳಿಂದ ಯಾವುದೇ ಪರಿಣಾಮವಾಗುವುದಿಲ್ಲ. ಅವರು ಕಳೆದ ಬಾರಿ ಬಂದದ್ದಕ್ಕೂ ಈ ಬಾರಿ ಬಂದಿರುವುದಕ್ಕೂ ಬಹಳ ವ್ಯತ್ಯಾಸವಿದೆ. ಲಂಡನ್ ವಿಶ್ವವಿದ್ಯಾಲಯದಲ್ಲಿ ಅವರು ಮಾತನಾಡಿರುವುದು ದೇಶ ವಿರೋಧಿಯಾಗಿದೆ. ಇಡೀ ದೇಶ್ಯದಲ್ಲಿ ಹಾಗೂ ರಾಜ್ಯದಲ್ಲಿ ಈ ಬಗ್ಗೆ ಖಂಡನೆಯಾಗಿದೆ. ಅವರ ಮಾತಿಗೆ ಯಾವುದೇ ಬೆಲೆಯನ್ನು ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು. ಮಾರ್ಚ್ 25 ರಂದು ರಾಜ್ಯಕ್ಕೆ ಪ್ರಧಾನಿಗಳ ಭೇಟಿ ಮಾರ್ಚ್ 25 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಮಾರ್ಚ್ 24 ಮತ್ತು 26 ರಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.…
ಹುಬ್ಬಳ್ಳಿ: ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ನಿಂದ ಬಂದಿದ್ದರು, ಮರಳಿ ಅಲ್ಲಿಗೇ ಹೋಗ್ತಿದಾರೆ. ಇದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯ ತಮ್ಮ ನಿವಾಸದ ಮುಂದೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಗುರುಮಠಕಲ್ ಕ್ಷೇತ್ರದಲ್ಲಿ ಈಗಾಗಲೇ ನಮ್ಮ ಪಕ್ಷದ ಸಂಘಟನೆ ಚೆನ್ನಾಗಿದೆ. ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಮಾರ್ಚ್ 24 ಕ್ಕೆ ರಾಜ್ಯಕ್ಕೆ ಅಮಿತ್ ಶಾ ಬರುತ್ತಾರೆ. ಮಾರ್ಚ್ 25 ಕ್ಕೆ ಪ್ರಧಾನಿ ಮೋದಿ ಬರುತ್ತಾರೆ. ಮಾರ್ಚ್ 26 ಕ್ಕೆ ಮತ್ತೇ ಅಮಿತ್ ಶಾ ಪ್ರವಾಸ ಮಾಡುತ್ತಾರೆ ಎಂದರು. ರಾಹುಲ್ ಗಾಂಧಿ ರಾಜ್ಯ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಹುಲ್ ಕಳೆದ ಬಾರಿ ಬಂದದ್ದಕ್ಕೂ ಈ ಬಾರಿ ಬಂದದ್ದಕ್ಕೂ ಬಹಳ ವ್ಯತ್ಯಾಸವಿದೆ. ಈ ಬಾರಿ ಅವರು ಬ್ರಿಟನ್ ವಿವಿ ಯಲ್ಲಿ ಮಾತನಾಡಿದರು. ದೇಶ, ಪ್ರಜಾಪ್ರಭುತ್ವ ವಿರೋಧಿ ಮಾತುಗಳನ್ನಾಡಿದ್ದಾರೆ. ದೇಶವ್ಯಾಪ್ತಿ ಇದರ ಬಗ್ಗೆ ಖಂಡನೆಯಾಗಿದೆ. ರಾಹುಲ್ ಗಾಂಧಿ ಮಾತಿಗೆ ಕರ್ನಾಟಕದ ಜನ ಯಾವುದೇ ಬೆಲೆ ಕೊಡಲ್ಲ. ಸಿದ್ಧರಾಮಯ್ಯ ಬೋಗಸ್…
ಚಿಕ್ಕೋಡಿ: ಮಹೇಶ್ ಕುಮಠಳ್ಳಿ (Mahesh Kumathalli) ಅವರಿಗೆ ಟಿಕೆಟ್ ಸಿಗದೆ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ತಿಳಿಸಿದರು. ಅಥಣಿ ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲಕ್ಷ್ಮಣ ಸವದಿ (Laxman Savadi) ಬುದ್ಧಿವಂತ ರಾಜಕಾರಣಿ, ಅವರು ಹಿಂಗ್ಯಾಕೆ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಅವರಿಗೆ ಕನಿಷ್ಠ ಜ್ಞಾನ ಇರಬೇಕು. ಎಂಎಲ್‌ಸಿ ಆಗಿದ್ದರೂ, ವರಿಷ್ಠರ ಹತ್ತಿರ ಟಿಕೆಟ್ ಕೇಳುತ್ತೇನೆ ಎಂದು ಹೇಳಿಕೆ ನೀಡಿರುವುದು ನನಗೆ ಅಚ್ಚರಿಯಾಗಿದೆ. ಮಹೇಶ್ ಕುಮಠಳ್ಳಿ ತ್ಯಾಗದಿಂದ ಈ ಸರ್ಕಾರ ರಚನೆಯಾಗಿದೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಥಣಿ (Athani) ಮುಂದಿನ ಬಿಜೆಪಿ (BJP) ಅಭ್ಯರ್ಥಿ ಮಹೇಶ್ ಕುಮಠಳ್ಳಿ. ಒಂದು ವೇಳೆ ಮಹೇಶ್ ಕುಮಠಳ್ಳಿಗೆ ಟಿಕೆಟ್ ಕೊಡದಿದ್ದರೆ, ನಾನು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಡಿಕೆಶಿಯಿಂದ ಡಿಜಿಪಿ ಮೇಲೆ ವಿನಾ ಕಾರಣ ಆಪಾದನೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಮೇಲೆ ವಿನಾ ಕಾರಣ ಆಪಾದನೆ ಮಾಡಿ, ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ಪ್ರಯತ್ನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಡಿದ್ದಾರೆ. ತಮ್ಮ ಸ್ವಾರ್ಥ ರಾಜಕಾರಣ ಸಾಧಿಸಲು ಸರಕಾರದ ಅಧಿಕಾರಿಗಳನ್ನು ಗುರಿ ಮಾಡುವುದು ಸರಿಯಲ್ಲ.ಅಧಿಕಾರಕ್ಕೆ ಬರುವ ಯಾವುದೇ ಖಚಿತತೆ ಇರದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. ಪ್ರಧಾನ ನರೇಂದ್ರ ಮೋದಿ ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಸಂದರ್ಭದಲ್ಲಿ ಅಲ್ಲಿನ ಜನತೆ ನೀಡಿದ ಅಭೂತಪೂರ್ವ ಸ್ವಾಗತ, ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.ಈ ಕಾರಣದಿಂದಲೇ ಹತಾಶರದ ಡಿ.ಕೆ.ಶಿವಕುಮಾರ್ ಅವರು, ಟಿಪ್ಪು ಸುಲ್ತಾನ್ ಸಾವಿಗೆ ಕಾರಣರಾದ ಎನ್ನಲಾದ ಉರಿಗೌಡ ಹಾಗೂ ನಂಜೇಗೌಡ ಅವರನ್ನು ಬೆಂಬಲಿಸಿ ಹಾಕಿದ ಫ್ಲೆಕ್ಸ್ ಅನ್ನು ಉಲ್ಲೇಖಿಸಿ ಡಿಜಿಪಿ ಪ್ರವೀಣ್ ಸೂದ್ ಅವರನ್ನು, ನಿಂದಿಸಿರುವುದು, ಖಂಡನೀಯ ಎಂದು…
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ ಆದ್ದರಿಂದ ಬೆಂಗಳೂರು ಖಾಕಿ ಅಲರ್ಟ್ ಆಗಿದ್ದಾರೆ. ಚುನಾವಣೆ ಟೈಮ್ ಯಲ್ಲಿ ಭರದ ಸಿದ್ಧತೆ ನಡೆಸಲಾಗಿದೆ. ಶಾಂತಿ ಕದಡುವ, ಅಕ್ರಮ ಕೆಲಸಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಸಭೆ ನಡೆಸಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಡಬೇಕು, ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕೆಂದು ಪೊಲೀಸ್ ಅಧಿಕಾರಿ ಸೂಚನೆ ನೀಡಿದ್ದಾರೆ. ಎಲೆಕ್ಷನ್ ಸಮಯದಲ್ಲಿ ಹೆಚ್ಚು ರೌಡಿಗಳ ಮೇಲೆ ನಿಗಾ ವಹಿಸಬೇಕು. ಅರೆಸ್ಟ್ ಆಗದೇ ಇದ್ದವರು, ವಾರಂಟ್ ಇದ್ದವರು ಚುನಾವಣೆ ಸಮಯದಲ್ಲಿ ಬರುವ ಸಾಧ್ಯತೆ ಇರತ್ತೆ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಅನುಕೂಲ ಆಗುವ ರೀತಿ ಕೆಲಸ ಮಾಡಬಾರದು. ಕಾನೂನು ಅಡಿಯಲ್ಲಿ ಕೆಲಸ ಮಾಡಬೇಕು. ಜೊತೆಗೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಮುಂದಿನ ದಿನದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಬೇಕು. ಚುನಾವಣಾ ಆಯೋಗದ ಕಡೆಯಿಂದ ಫ್ಲೈಯಿಂಗ್ ಸ್ವಾಡ್ ಬರತ್ತೆ. ಅಧಿಕಾರಿಗಳು ಮುಕ್ತ ಕೆಲಸ ಮಾಡಲು ಸಹಕಾರ…
ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಡೆಪ್ಯುಟಿ ಸಿಟಿಐ ಅನ್ನು ದಂಡು ರೈಲ್ವೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಂತೋಷ್ ಕುಮಾರ್ ಬಂಧಿತ ರೈಲ್ವೆ ಡೆಪ್ಯೂಟಿ ಸಿಟಿಐ ಎಂದು ಗುರುತಿಸಲಾಗಿದೆ. ಬಂಧಿತ ಸಂತೋಷ್ ಕುಮಾರ್, ಟಿಕೆಟ್ ಚೆಕಿಂಗ್ ವೇಳೆ ಹಲವು ಪ್ರಯಾಣಿಕರಿಗೆ ಕಿರುಕುಳ ಕೊಟ್ಟಿದ್ದರು. ಈ ಕುರಿತು ಹಲವರು ಟ್ವಿಟರ್ ನಲ್ಲಿ ಪ್ರಯಾಣಿಕರು ದೂರು ನೀಡಿದ್ದರು. ಅಲ್ಲದೇ ಕಳೆದ 14 ರಂದು ಉತ್ತರ ಭಾರತ ಮೂಲದ ಮಹಿಳೆಯೊಂದಿಗೆ ಅಧಿಕಾರಿ ಕಿರಿಕ್ ಮಾಡಿದ್ದಾನೆ. ಕುಡಿದು ಮಹಿಳೆಯೊಂದಿಗೆ ಆರೋಪಿ ಕಿರಿಕ್ ಮಾಡಿದ್ದಾನೆ. ಈ ಕುರಿತು ದಂಡು ರೈಲ್ವೆ ಪೊಲೀಸರಿಗೆ ಪಿಯಾಲಿ ಬರ್ಮನ್ ಎಂಬ ಮಹಿಳೆ ದೂರು ನೀಡಿದ್ದು, ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಸಂತೋಷ್ ಕುಮಾರ್ ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.