ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಲ್ಲಿ ಟಿಕೆಟ್ ಗೊಂದಲ ತೀವ್ರಗೊಂಡಿದೆ. ರಾಜಾಜಿನಗರ ಕ್ಷೇತ್ರಕ್ಕೆ ಪುಟ್ಟಣ್ಣಗೆ ಟಿಕೆಟ್ ನೀಡದಂತೆ ಆಗ್ರಹಿಸಿ ಮೂಲ ಕಾಂಗ್ರೆಸ್ ಆಕಾಂಕ್ಷಿಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿವಾನಂದ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಮುಂದೆ ಜಮಾಯಿಸಿರುವ ರಾಜಾಜಿನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷೆಗಳು ವಲಸೆ ಬಂದವರಿಗೆ ಟಿಕೆಟ್ ನೀಡಬೇಡಿ ಎಂದು ಆಗ್ರಹಿಸಿದ್ದಾರೆ. ಬಿಜೆಪಿಯಲ್ಲಿದ್ದ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಅವರು ರಾಜಾಜಿನಗರ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪುಟ್ಟಣ್ಣ ಪಕ್ಷ ಸೇರ್ಪಡೆ ದಿನವೇ ರಾಜಾಜಿನಗರ ಕ್ಷೇತ್ರದ ಮೂಲ ಕಾಂಗ್ರೆಸ್ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಆಕಾಂಕ್ಷಿಗಳನ್ನು ಸಮಾಧಾನಪಡಿಸಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಯಾರಿಗೂ ಟಿಕೆಟ್ ಕೊಡುವ ಭರವಸೆಯನ್ನು ಕೊಟ್ಟಿಲ್ಲ. ಪುಟ್ಟಣ್ಣ ಅವರು ಯಾವುದೇ ಶರತ್ತು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದರು. ಈ ನಡುವೆ ದೆಹಲಿಯಲ್ಲಿ ನಡೆದ ಕೇಂದ್ರ…
Author: Prajatv Kannada
ಬೆಂಗಳೂರು: ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಎಲ್ಲಾ ಪಕ್ಷಗಳಲ್ಲಿಯೂ ಅಸಮಾಧಾನ, ಗೊಂದಲಗಳು ಮೂಡುತ್ತಿದೆ. ಈಗಾಗಲೇ ಮೂರು ಪಕ್ಷಗಳ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ.ಈ ನಡುವೆಯೇ ನಾಯಕರು ತಮ್ಮ ಪಕ್ಷವನ್ನು ತೊರೆದು ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತಿದ್ದಾರೆ.ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹೊಡಿಯಲು ಮೂರು ಪಕ್ಷಗಳು ನಾನಾ ಕಸರತ್ತು ನಡೆಸಿದ್ದಾರೆ. ಜೊತೆಗೆ ತಮ್ಮ ಕ್ಷೇತ್ರವನ್ನು ಭದ್ರತೆ ಮಾಡಿಕೊಳ್ಳುತ್ತಿದ್ದಾರೆ, ಇತ್ತ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಬೆಂಬಲಿಗರು ಒತ್ತಾಯಿಸಿದ್ದಾರೆ. ಬೆಂಗಳೂರಿನ ಸಿದ್ದರಾಮಯ್ಯ ನಿವಾಸದ ಬಳಿ ಬೆಂಬಲಿಗರು ಜಮಾಯಿಸಿದ್ದಾರೆ. ಸರ್ಕಾರಿ ನಿವಾಸದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹೊರಗೆ ಬಂದಿದ್ದಾರೆ. ಸಿದ್ದರಾಮಯ್ಯ ಹೊರಗೆ ಬರುತ್ತಿದ್ದಂತೆ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಕೋಲಾರ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧೆಗೆ ಬೆಂಬಲಿಗರು ಒತ್ತಾಯಿಸಿದ್ದಾರೆ.ಕೋಲಾರದಿಂದ ಸ್ಪರ್ಧಿಸದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ನಿವಾಸ ಬಳಿ ಬೆಂಬಲಿಗರ ಘೋಷಣೆ ಮಾಡಿದ್ದಾರೆ. ಶರ್ಟ್ ಬಿಚ್ಚಿ ಬಾರುಕೋಲಿನಿಂದ ಅಭಿಮಾನಿಗಳು ಹೊಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬೈಯಪ್ಪನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಧನುಷ್,ಸೂರ್ಯ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು, ನಗರದಲ್ಲಿ ದ್ವಿಚಕ್ರ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದರು. ಇನ್ನೂ ಕದ್ದ ಮಾಲುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಶೋಕಿ ಜೀವನ ಮಾಡುತ್ತಿದ್ದರು. ಈ ಸಂಬಂಧ ದೂರು ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಬಂಧಿತರಿಂದ 6 ಲಕ್ಷ ಬೆಲೆಬಾಳುವ 13 ಬೈಕುಗಳನ್ನು ಸೀಜ್ ಮಾಡಿದ್ದಾರೆ. ಇನ್ನೂ ಆರೋಪಿಗಳ ವಿರುದ್ಧ ಪೂರ್ವ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದ್ದು, ಪೊಲೀಸರಿಂದ ಹೆಚ್ಚಿನ ತನಿಖೆ ಮುಂದುವರಿದಿದೆ.
ಬೆಂಗಳೂರು: ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಆಗ್ರಹಿಸಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸಿದ್ದರಾಮಯ್ಯ ಮನೆಯ ಮುಂದೆ ಧರಣಿ ನಡೆಸುತ್ತಿದ್ದಾರೆ. ಶಿವಾನಂದ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯ ಮನೆಯ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿರುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದರು. ಆದರೆ ಹೈಕಮಾಂಡ್ ಸೂಚನೆಯಂತೆ ಅವರು ಕೋಲಾರದಿಂದ ಸ್ಪರ್ಧೆ ಮಾಡುವುದರಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಲಾರದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಮನೆಯ ಮುಂದೆ ಜಮಾಯಿಸಿ ಸ್ಪರ್ಧೆಗೆ ಬೇಡಿಕೆ ಇಡುತ್ತಿದ್ದಾರೆ. ಕೊಟ್ಟ ಮಾತು ತಪ್ಪಬೇಡಿ, ಕೋಲಾರದಿಂದಲೇ ಸ್ಪರ್ಧೆ ಮಾಡಿ, ರಕ್ತ ಕೊಟ್ಟೇವು ಸಿದ್ದರಾಮಯ್ಯ ಅವರನ್ನು ಬಿಡೆವು. ಕೋಲಾರ ನಮ್ಮೂರು ಸಿದ್ದರಾಮಯ್ಯ ನಮ್ಮವರು ಎಂಬಿತ್ಯಾದಿ ಬಿತ್ತಿ ಪತ್ರಗಳನ್ನು ಇಟ್ಟುಕೊಂಡು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಸಿದ್ದರಾಮಯ್ಯಮನವೊಲಿಕೆಗೆಪ್ರಯತ್ನ ಕೋಲಾರ ಸ್ಪರ್ಧೆ ಗೊಂದಲ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿಯವರೆಗೂ ಸಿದ್ದರಾಮಯ್ಯ ಮನವೊಲಿಸಲು ಹರಸಾಹಸವನ್ನು ಕೋಲಾರದ ಕಾಂಗ್ರೆಸ್ ನಾಯಕರು ನಡೆಸಿದ್ದಾರೆ.…
ಬೆಂಗಳೂರು: ಐಫೋನ್ (iPhone) ಅಂದರೇನೇ ಒಂಥರಾ ಬ್ರ‍್ಯಾಂಡ್. ಕೆಲವರು ಕಷ್ಟನೊ, ಸುಖನೊ ಹೇಗೋ ಒಂದು ಐಫೋನ್ ತೆಗೆದುಕೊಂಡಿರುತ್ತಾರೆ. ಆದರೆ ಈ ಐಫೋನ್‌ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಖತರ್ನಾಕ್ ಟೀಂ ಒಂದು ಅರೆಸ್ಟ್ (Arrest) ಆಗಿದೆ. ಬಂಧಿತ ಕಳ್ಳರಿಂದ (Thieves) ಬರೋಬ್ಬರಿ 40 ಐಪೋನ್ ಸೇರಿ ಒಟ್ಟು 110 ಪೋನ್‌ಗಳನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದಲ್ಲಿ ನಡೆಯುತ್ತಿದ್ದ ಮೊಬೈಲ್ ರಾಬರಿ ಗ್ಯಾಂಗ್‌ನಲ್ಲಿ ಇವರದ್ದೂ ಸಹ ಎತ್ತಿದ ಕೈ. ಡಿಸಿಪಿ ಶ್ರೀನಿವಾಸ್ ಗೌಡ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್, ಪಿಎಸ್‌ಐ ಪ್ರಕಾಶ್ ಹಾಗೂ ಕ್ರೈಂ ತಂಡದಿಂದ ಕಾರ್ಯಾಚರಣೆ ನಡೆಸಿ ಕಳ್ಳರಾದ ಮಹಮ್ಮದ್ ಸಕ್ಲೈನ್, ಸುಹೇಲ್, ಸಾಕೀಬ್‌ನನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಬೆಂಗಳೂರಿನ ಗೋರಿಪಾಳ್ಯ ನಿವಾಸಿಗಳಾಗದ್ದು, ಬರೋಬ್ಬರಿ 40 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸ್ಯಾನ್ ಫ್ರಾನ್ಸಿಸ್ಕೊ: ಸಿಖ್ ಮೂಲಭೂತವಾದಿ, ಧರ್ಮ ಪ್ರಚಾರಕ ಅಮೃತ್‌ಪಾಲ್ ಕಾಣೆಯಾದ ಬೆನ್ನಲ್ಲೇ ಪ್ರತ್ಯೇಕತಾವಾದಿಗಳ ಖಾಲಿಸ್ತಾನ ಪರ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಇದರ ಕಿಚ್ಚು ಹೊತ್ತಿದ್ದು, ಲಂಡನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಪ್ರತ್ಯೇಕತಾವಾದಿಗಳು ಖಾಲಿಸ್ತಾನದ ಪರ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಖಾಲಿಸ್ತಾನ ಪರ ಪ್ರತಿಭಟನೆ ಕೈಗೊಂಡಿದ್ದ ಪ್ರತ್ಯೇಕತಾವಾದಿಗಳು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಎದುರಿನ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದರು. ಈ ಘಟನೆಯನ್ನು ಖಂಡಿಸಿ ಸಿಖ್ ಸಮುದಾಯಕ್ಕೆ ಸೇರಿದ ಬ್ರಿಟನ್‌ನ ಚಾಣಕ್ಯಪುರಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಆಸ್ಟ್ರೇಲಿಯಾ, ಕೆನಡಾದಲ್ಲಿ ಕೂಡ ಇತ್ತೀಚೆಗೆ ಭಾರತ-ವಿರೋಧಿ ಪ್ರತಿಭಟನೆಗಳು ನಡೆದಿವೆ. ಭಾರತ ವಿದೇಶದಲ್ಲಿನ ಪ್ರತ್ಯೇಕತಾವಾದಿಗಳ ಈ ನಡೆಯನ್ನು ತೀವ್ರವಾಗಿ ಖಂಡಿಸಿದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿರುವ ಪ್ರತ್ಯೇಕತಾವಾದಿಗಳು ಖಾಲಿಸ್ತಾನ ಧ್ವಜ ಹಾರಿಸಿದ್ದಾರೆ. ಭಾರತ ಸೋಮವಾರ ನವದೆಹಲಿಯಲ್ಲಿನ ಅಮೆರಿಕದ ಹಿರಿಯ ರಾಜತಾಂತ್ರಿಕರ ಎದುರು ಪ್ರಬಲ ಪ್ರತಿಭಟನೆಯನ್ನು ನಡೆಸಿವೆ. ಇನ್ನೊಂದೆಡೆ ಅಮೆರಿಕ ಕೂಡ ಈ…
ಬೆಂಗಳೂರು: ಇಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 975 ಕೋಟಿ ರೂಪಾಯಿಯನ್ನು ರಾಜ್ಯದ 48,75,000 ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಅವರು, 2022-23ನೇ ಸಾಲಿನ 2 ನೇ ಕಂತಿನ ಆರ್ಥಿಕ ನೆರವಾದ ₹975 ಕೋಟಿಯನ್ನು ರಾಜ್ಯದ 48,75,000 ರೈತರ ಖಾತೆಗಳಿಗೆ ನೇರವಾಗಿ ಜಮಾವಣೆ ಆಗಲು ಇಂದು ಚಾಲನೆ ನೀಡಲಿದ್ದೇನೆ ಎಂದರು. ಪಿಎಂ ಕಿಸಾನ್–ಕರ್ನಾಟಕ ವಿಭಾಗದಿಂದ ಈ ನಿಧಿ ಜಮಾ ಆಗುತ್ತಿದೆ. ಭಾರತದಲ್ಲಿರುವ ಭೂಹಿಡುವಳಿ ಹೊಂದಿರುವ ರೈತರಿಗೆ ಆದಾಯ ಬೆಂಬಲ ಒದಗಿಸುವ ಯೋಜನೆ ಇದಾಗಿದೆ. ಕೇಂದ್ರದಿಂದ ₹6000 ಹಾಗೂ ರಾಜ್ಯದಿಂದ ₹4000 ಸೇರಿ ಒಟ್ಟು ₹10000 ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ರಾಜ್ಯ ಸರ್ಕಾರದಿಂದ ಯೋಜನೆ ಅಡಿಯಲ್ಲಿ 2019 ರಿಂದ ಈವರೆಗೆ 50.3 ಲಕ್ಷ ಫಲಾನುಭವಿಗಳಿಗೆ ₹4,821 ಕೋಟಿ ಆರ್ಥಿಕ ಸಹಾಯಧನ ನೀಡಲಾಗಿದೆ
ಇನ್ನೇನೂ ಕೆಲವೇ ದಿನಗಳಲ್ಲಿ ಕನ್ನಡ ಖ್ಯಾತ ರಿಯಾಲಿಟಿ ಶ ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ ಪ್ರಾರಂಭವಾಗುತ್ತಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳು ಕಾರ್ಯಕ್ರಮ ನೋಡೋಕೆ ಕಾದು ಕೂತಿದ್ದಾರೆ. ಈ ಮಧ್ಯೆ ನಿರೂಪಕ ರಮೇಶ್ ಅರವಿಂದ್ ಹಾಗೂ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಅವರು ಪತ್ರಿಕಾಗೋಷ್ಠಿಯಲ್ಲಿ ರಿಯಾಲಿಟಿ ಶೋ ಕುರಿತು ಮಾಹಿತಿ ನೀಡಿದ್ದಾರೆ. ಕಾಂತಾರ ಸಿನಿಮಾದ ಮೂಲಕ ದೇಶ, ವಿದೇಶದಲ್ಲಿ ಸದ್ದು ಮಾಡಿದ್ದ ರಿಷಬ್ ಶೆಟ್ಟಿ ವೀಕೆಂಡ್ ವಿತ್ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದೀಗ ಸುಳ್ಳಾಗಿದ್ದು ಮೊದಲ ಎಪಿಸೋಡ್ಗೆ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಇಂದಿನಿಂದ ರಮ್ಯಾ ಜೊತೆಗಿನ ಎಪಿಸೋಡ್ನ ಚಿತ್ರೀಕರಣ ಪ್ರಾರಂಭವಾಗಲಿದೆ. ಎರಡನೇ ಎಪಿಸೋಡ್ ನಲ್ಲಿ ಡ್ಯಾನ್ಸ್ ಲಿಜೆಂಡ್ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ ಎಂದು ಮಾಹಿತಿಯನ್ನು ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. ವೀಕೆಂಡ್ ವಿತ್ ರಮೇಶ್ 5ನೇ ಸೀಸನ್ ನಲ್ಲಿ ಈ…
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ನಟನೆಯ , ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಸದ್ಯ ದೋಹದ ಕತಾರ್ ನಲ್ಲಿ ಕರ್ನಾಟಕ ಸಂಘ ಕತಾರ್ ಹಾಗೂ ಕೋರ್ಸಿಸ್ ಕನ್ನಡ ಮೂವೀಸ್ ಸಂಯೋಗದೊಂದಿಗೆ ಸ್ಪೆಷಲ್ ಶೋ ಆಯೋಜಿಸಿದ್ದು, ಚಿತ್ರವು ಕತಾರ್ ನಲ್ಲಿ ಮೊಟ್ಟಮೊದಲ ಬಾರಿಗೆ 11 ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಪೂರ್ಣವಾಗಿ ಸ್ಕ್ರಿಪ್ಟ್, ಸ್ಕ್ರೀನ್ ಪ್ಲೇ, ಚಿತ್ರಕಥೆ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಕೇಕ್ ಕತ್ತರಿಸಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ವಿಶೇಷ ಪ್ರದರ್ಶನಕ್ಕೆ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಶ್ರೀ ಪ್ರಭುರಾಜ್ ಅವರು ಏರ್ಪಡಿಸಿದ್ದರು. ಇದೇ ವೇಳೆ ಮಾತನಾಡದ ಮಹೇಶ್ ಗೌಡ, ಕಬ್ಜ ಚಿತ್ರವು 100ದಿನಗಳು ಸಸಿಯಾಗಿ ಸಾಗಲಿ ಎಂದು ಹಾರೈಸಿದರು, ಶ್ರೀಯುತ ಸುಬ್ರಮಣ್ಯ ಹೆಬ್ಬಾಗಿಲು ಅವರು…
ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್ ಸುದ್ದಿ ಕೇಳಿ ಬರುತ್ತಿದೆ. ಚಿರಂಜೀವಿ ಸಹೋದರ ನಟ ನಾಗಬಾಬು ಪುತ್ರಿ ನಿಹಾರಿಕಾ ಬದುಕಿನಲ್ಲಿ ಬಿರುಕು ಉಂಟಾಗಿದೆ ಎಂಬ ಸುದ್ದಿ ಟಾಲಿವುಡ್ ನೆಲದಲ್ಲಿ ಸದ್ದು ಮಾಡುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಎರಡನೇ ಮದುವೆಯಲ್ಲಿ ಬಿರುಕು ಉಂಟಾಗಿ ತವರಿಗೆ ಬಂದಿದ್ದಾರೆ. ಈ ಬೆನ್ನಲ್ಲೇ ಮೆಗಾ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ. 2020ರಲ್ಲಿ ನಾಗಬಾಬು ಪುತ್ರಿ ನಿಹಾರಿಕಾ ಮತ್ತು ಚೈತನ್ಯ ಗುರುಹಿರಿಯರ ಸಮ್ಮುಖದಲ್ಲಿ ಪ್ರೇಮ ವಿವಾಹವಾಗಿದ್ದರು. ಮೆಗಾಸ್ಟಾರ್ ಫ್ಯಾಮಿಲಿ ಅದ್ದೂರಿಯಾಗಿ ಮಗಳ ಮದುವೆಯನ್ನು ರಾಜಸ್ಥಾನದಲ್ಲಿ ಮಾಡಿದ್ದರು. ಎರಡು ವರ್ಷಗಳಿಂದ ಖುಷಿಯಿಂದ ಜೀವನ ಸಾಗಿಸುತ್ತಿದ್ದ ಜೋಡಿಯ ನಡುವೆ ಬಿರುಕು ಉಂಟಾಗಿದೆ ಎನ್ನಲಾಗುತ್ತಿದೆ. ಡಿವೋರ್ಸ್ ಸುದ್ದಿಗೆ ಪೂರಕವೆಂಬಂತೆ, ಇಬ್ಬರು ಇನ್ಸ್ಟಾಗ್ರಾಂ ಖಾತೆಯಲ್ಲಿ ಒಬ್ಬರನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವರ್ಷದಿಂದ ಆಕ್ಟೀವ್ ಇಲ್ಲದೇ ಇರೋದು ಅನುಮಾನ ಮೂಡಿಸಿದೆ. ಕಳೆದ 3-4 ತಿಂಗಳಿಂದ ಇಬ್ಬರು ಒಟ್ಟಿಗೆ ಇಲ್ಲ ಎಂದು ಹೇಳಲಾಗುತ್ತಿದೆ,