ಕರ್ನಾಟಕ ವಿಧಾನಸಭಾ ಚುನಾವಣೆ ಎದುರಿಸಲು ಆಮ್ ಆದ್ಮಿ ಪಕ್ಷ ಹಲವು ತಿಂಗಳಿನಿಂದ ಸಿದ್ಧತೆ ನಡೆಸಿತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡುವುದಕ್ಕಾಗಿಯೇ ಹಲವು ರೀತಿಯಲ್ಲಿ ಕಸರತ್ತು ಕೂಡ ನಡೆಸಿಕೊಂಡು ಬರುತ್ತಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗಿಂತ ಮುಂದೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಇಬ್ಬರು ಸಿನಿಮಾ ರಂಗದವರು ಇದ್ದಾರೆ ಎನ್ನುವುದು ವಿಶೇಷವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಚುನಾವಣಾ ತಯಾರಿ ಆರಂಭಿಸಿದ್ದರು. ಕೆಲವರಿಗೆ ಆಗಲೇ ಟಿಕೆಟ್ ಕನ್ಫರ್ಮ್ ಕೂಡ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ 80 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ರಿಲೀಸ್ ಮಾಡಿದೆ. ಆಮ್ ಆದ್ಮಿ ಪಕ್ಷ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಏಳು ಜನ ರೈತ ಹೋರಾಟಗಾರರು. ಏಳು ಜನ ಮಹಿಳೆಯರು, 5 ಮಂದಿ ಸಮಾಜಸೇವಕರು, ಮೂರು ಜನ ಡಾಕ್ಟರೇಟ್, 15 ಜನ ಮಾಸ್ಟರ್ಸ್…
Author: Prajatv Kannada
ಕೋಮಲ್ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಈ ಬೆನ್ನಲ್ಲೇ ಈಗಾಗಲೇ ಎರಡು ಚಿತ್ರಗಳು ಮುಹೂರ್ತವಾಗಿ ಚಿತ್ರೀಕರಣ ಆರಂಭಿಸಿವೆ. ಸದ್ಯ ‘ಉಂಡೆನಾಮ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಖ್ಯಾತ ಸಂಭಾಷಣೆಗಾರ, ರಾಬರ್ಟ್ ಖ್ಯಾತಿಯ ರಾಜಶೇಖರ್ ಉಂಡೆನಾಮ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಪಕ್ಕಾ ಕಾಮಿಡಿ ಚಿತ್ರ ಇದಾಗಿದೆ. ಸಾಕಷ್ಟು ಸಮಯದ ಬಳಿಕ ಕೋಮಲ್ ನಗುವಿನ ಕಚುಗುಳಿ ಇಡುವುದಕ್ಕೆ ಉಂಡೆನಾಮ ಹಾಕ್ಕೊಂಡು ಬರ್ತಿದ್ದಾರೆ. ಚಿತ್ರದ ಶೀರ್ಷಿಕೆ ಯನ್ನು ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳು ಚಿತ್ರದ ಶೀರ್ಷಿಕೆ ಹೇಳುವುದರ ಮುಖಾಂತರ ವಿನೂತನವಾಗಿ ಅನಾವರಣ ಮಾಡಿದ್ದಾರೆ. ಸಿನಿಮಾದ ಟೈಟಲ್ ನಲ್ಲೇ ಹಾಸ್ಯ ಹೊಂದಿರುವ ಉಂಡೆನಾಮ ಸಿನಿಮಾ ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮುಖ್ಯ ಭೂಮಿಕೆಯಲ್ಲಿ ಕೋಮಲ್ ಜೊತೆಗೆ ಹರೀಶ್ ರಾಜ್ , ಧನ್ಯ ಬಾಲಕೃಷ್ಣ, ತಬಲಾನಾಣಿ, ಅಪೂರ್ವ, ವೈಷ್ಣವಿ, ತನಿಷ ಕುಪ್ಪಂಡ, ಬ್ಯಾಕ್ ಜನಾರ್ಧನ್ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಚಿತ್ರವು ಎನ್.ಕೆ. ಸ್ಟುಡಿಯೋಸ್ ನ ಅಡಿಯಲ್ಲಿ ಸಿ.ನಂದ ಕಿಶೋರ್…
777 ಚಾರ್ಲಿ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ನಟನೆಯ ಮುಂದಿನ ಸಿನಿಮಾ ಯಾವುದು ಎಂದು ಕಾಯ್ತಿರೋ ಅಭಿಮಾನಿಗಳಿಗೆ ಶೆಟ್ರು ಗುಡ್ ನ್ಯೂಸ್ ನೀಡಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ʻಸಪ್ತಸಾಗರದಾಚೆ ಎಲ್ಲೋʼ ಚಿತ್ರದ ಶೂಟಿಂಗ್ ಮುಗಿಸಿರುವು ರಕ್ಷಿತ್ ಶೆಟ್ಟಿ ಸಿನಿಮಾವನ್ನು ತೆರೆಗೆ ತರಲು ಮುಂದಾಗಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಇದೀಗ `ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ರಕ್ಷಿತ್‌ಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಆಚಾರ್ ನಟಿಸಿದ್ದಾರೆ. ಬರೋಬ್ಬರಿ 137 ದಿನಗಳ ಕಾಲ ಸಿನಿಮಾ ಚಿತ್ರೀಕರಣ ಮಾಡಿರುವ ಚಿತ್ರತಂಡ ಇದೀಗ ಕಡಲ ತಡಿಯಲ್ಲಿ ಪೂಜೆ ಸಲ್ಲಿಸಿ ಕುಂಬಳ ಕಾಯಿ ಒಡೆದಿದೆ. ಈ ವಿಚಾರವನ್ನು ನಟ ರಕ್ಷಿತ್ ಶೆಟ್ಟಿ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಪ್ರೊಡಕ್ಷನ್ ವರ್ಕ್ ಶುರು ಮಾಡಿದ್ದಾರೆ. `ಕವಲು ದಾರಿ’ ಸಿನಿಮಾದ ನಂತರ ನಿರ್ದೇಶಕ ಹೇಮಂತ್ `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ…
ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹಾಗೆಯೆ ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಅರ್ಥ “ಯುಗ+ಆದಿ” – ಹೊಸ ಯುಗದ ಆರಂಭ. ಇಂದಿನ ಸಂಚಿಕೆಯಲ್ಲಿ ಯುಗಾದಿ ಹಬ್ಬದ ವಿಶೇಷ , ಯುಗಾದಿಯಲ್ಲಿ ಯಾಕೆ ಎಳ್ಳೂ-ಬೆಲ್ಲವನ್ನೆ ತಿಂತಾರೆ , ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು. ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ…
ಗುಲಾಬಿಯು ತುಂಬಾ ಸುಂದರವಾದ ಹೂ, ಪ್ರೀತಿ, ಸ್ನೇಹ ವ್ಯಕ್ತಪಡಿಸಲು ಗುಲಾಬಿ ಹೂ ಬಳಕೆ ಮಾಡುವರು. ಗುಲಾಬಿ ಹೂ ಹೂದೋಟದಲ್ಲಿ ಇದ್ದರೆ ಆಗ ನಾನಾ ಅದು ಹೂದೋಟದ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡುವುದು. ಸೌಂದರ್ಯಕ್ಕಾಗಿ ಗುಲಾಬಿಯನ್ನು ಮುಡಿಗೆ ಇಟ್ಟುಕೊಳ್ಳುವ ಜನರು ಇದನ್ನು ಹಲವಾರು ರೀತಿಯ ಸೌಂದರ್ಯವರ್ಧಕವಾಗಿಯೂ ಬಳಕೆ ಮಾಡಿಕೊಂಡು ಬಂದಿರುವರು. ಗುಲಾಬಿ ಎಸಲುಗಳನ್ನು ಬಳಸಿಕೊಂಡು ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಮುಖ್ಯವಾಗಿ ಇದು ಲೈಂಗಿಕ ಜೀವನ ಸುಧಾರಿಸುವುದು, ಒತ್ತಡ ತಗ್ಗಿಸುವುದು ಮತ್ತು ತೂಕ ಇಳಿಸಲು ಕೂಡ ಸಹಕಾರಿ ಆಗಿದೆ. ಗುಲಾಬಿ ಎಸಲುಗಳಿಂದ ಯಾವೆಲ್ಲಾ ಆರೋಗ್ಯ ಲಾಭಗಳು ಸಿಗುವುದು ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ತೂಕ ಇಳಿಸಲು ಸಹಕಾರಿ ಗುಲಾಬಿಯು ಚಯಾಪಚಯ ವೃದ್ಧಿಸುವುದು ಹಾಗೂ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಇದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗಿರುವುದು. ಗುಲಾಬಿ ಎಸಲುಗಳನ್ನು ತಿಂದರೆ ಅದರಿಂದ ಹೊಟ್ಟೆಯು ತುಂಬಿದಂತೆ ಆಗುವುದು ಮತ್ತು ನೈಸರ್ಗಿಕವಾಗಿ ತೂಕ ಇಳಿಸಲು ಇದು ಸಹಕಾರಿ.…
ನವದೆಹಲಿ: ಇತ್ತೀಚೆಗಷ್ಟೇ ಬ್ರಿಟನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಚೀನಾದ ಕುರಿತು ಮಾಡಿದ ಟೀಕೆಗಳಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕ ಭಾರತದ ಬಗ್ಗೆ ತಿರಸ್ಕಾರ ಮಾತನಾಡುತ್ತಿದ್ದು, ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಕಂಡು ಬೇಸರವಾಗಿದೆ ಎಂದಿದ್ದಾರೆ. ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಎಸ್ ಜೈಶಂಕರ್, ‘ಯಾರೋ ಚೀನಾದ ಮೇಲೆ ಜೊಲ್ಲು ಸುರಿಸುವುದನ್ನು ಭಾರತದ ಪ್ರಜೆಯಾಗಿ ನೋಡುವುದು ಕಷ್ಟವಾಗುತ್ತಿದೆ. ಪಾಂಡಾವೊಂದು ಚೀನಾದ ಗಿಡುಗವಾಗಲು ಪ್ರಯತ್ನಿಸಿದರೆ ಅದು ಹಾರುವುದಿಲ್ಲ ಎಂದು ಹೇಳಿದರು. ಅಮೆರಿಕ ಮೂಲದ ಲೇಖಕ ಮೈಕೆಲ್ ಪಿಲ್ಸ್‌ಬರಿ ಹೇಳಿಕೆಗಳನ್ನು ಉಲ್ಲೇಖಿಸಿದ ಸಚಿವರು, “ಪಾಂಡಾ ಹಗ್ಗರ್‌ಗಳು ಚೀನಾ ಗಿಡುಗಗಳಾಗಿರಲು ಪ್ರಯತ್ನಿಸಿದಾಗ ಅದು ಹಾರುವುದಿಲ್ಲ. ರಾಹುಲ್ ಗಾಂಧಿ ಅವರು ಬ್ರಿಟನ್ ನಲ್ಲಿದ್ದಾಗ ಹೇಳಿದ ಕೆಲವನ್ನು ನಾನು ಕೂಡ ಇತರರಂತೆ ನೋಡಿದ್ದೇನೆ. ನಿಸ್ಸಂಶಯವಾಗಿ, ಅದರಲ್ಲಿ ಬಹಳಷ್ಟು ರಾಜಕೀಯವಾಗಿದೆ. ಯಾರಾದರೂ ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಮತ್ತು ಭಾರತದ ಬಗ್ಗೆ ತಿರಸ್ಕಾರ ಮಾಡುವುದನ್ನು ನಾನು ನೋಡಿದಾಗ…
ಬೀದರ್ (ಮಾ.20): ಅಕಾಲಿಕ ಮಳೆಯಿಂದಾಗಿ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳನ್ನು ಕಳೆದುಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮುಖ್ಯಮಂತ್ರಿಗಳು ಕೂಡಲೇ ಕೃಷಿ ಬೆಳೆಗಳಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಹಾಗೂ ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ 50 ಸಾವಿರ ರೂ. ತಾತ್ಕಾಲಿಕ ಪರಿಹಾರ ಒದಗಿಸಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊನ್ನಡ್ಡಿ ಗ್ರಾಮದ ರೈತರ ಜಮೀನುಗಳಿಗೆ ಭಾನುವಾರ ಭೇಟಿ ನೀಡಿ, ಅಕಾಲಿಕ ಮಳೆಯಿಂದಾಗಿ ಹಾನಿಯಾದ ಉಳ್ಳಾಗಡ್ಡಿ, ಮಾವು, ಟೊಮ್ಯಾಟೊ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎನ್.ಡಿ.ಆರ್.ಎಫ್ ಅದು ಇದು ಅಂತ ಕಾಯದೆ ಕೂಡಲೇ ತಾತ್ಕಾಲಿಕ ಪರಿಹಾರ ನೀಡಬೇಕು. ಸಮೀಕ್ಷೆಯ ವರದಿಯ ನಂತರ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದರು. ಅಕಾಲಿಕ ಮಳೆ ಮತ್ತು ಆಣೆಕಲ್ಲುಗಳಿಂದ ಬೀದರ್ ಜಿಲ್ಲೆ ಮತ್ತು…
ಬೆಳಗಾವಿ: ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ್ರೆ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ (Employment) ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭರವಸೆ ನೀಡಿದರು. ಬೆಳಗಾವಿಯಲ್ಲಿ (Belagavi) ನಡೆದ `ಯುವಕ್ರಾಂತಿ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ನೀಡಲಿದೆ. ಜೊತೆಗೆ ಖಾಲಿಯಿರುವ 2.5 ಲಕ್ಷ ಉದ್ಯೋಗವನ್ನು ರಾಜ್ಯದ ಯುವಜನರಿಗೆ ಸಿಗುವಂತೆ ಮಾಡಲಿದೆ ಎಂದು ಘೋಷಣೆ ಮಾಡಿದರು. ಮುಂದುವರಿದು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ. ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. Video Player 00:00 00:27 ಕೆಲ ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಸಲಾಯಿತು. ಅದಕ್ಕೆ…
ಚಿಕ್ಕಬಳ್ಳಾಪುರ: ನನಗೆ ಉರಿಗೌಡ, ನಂಜೇಗೌಡ ಗೊತ್ತಿಲ್ಲ. ನಮಗೆ ಮಾಜಿ ಪ್ರಧಾನಿ ದೇವೇಗೌಡರು (HD Devegowda) ಮಾತ್ರ ಗೊತ್ತು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ (Sudhakar) ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸದಲ್ಲಿ ಉರಿಗೌಡ-ನಂಜೇಗೌಡರ (Urigowda Nanjegowda) ಬಗ್ಗೆ ನಾನು ಓದಿಲ್ಲ. ನನಗೆ ಗೊತ್ತಿರುವವರ ಬಗ್ಗೆ ಕೇಳಿದ್ರೆ ಹೇಳುತ್ತೇನೆ, ಗೊತ್ತಿಲ್ಲದವರ ಬಗ್ಗೆ ಯಾವುದನ್ನು ಹೇಳಲಾಗುವುದಿಲ್ಲ. ಇದನ್ನು ದೊಡ್ಡ ವಿಷಯ ಮಾಡುವುದು ಬೇಡ. ಚರಿತ್ರೆಯಲ್ಲಿ ದೇಶ ಸೇವೆ ಮಾಡಿದವರಿಗೆ ಮಾನ್ಯತೆ ಕೊಡೋಣ, ಗೌರವ ಸೂಚಿಸೋಣ. ಗೊತ್ತಿಲ್ಲದವರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು. ಬಿಜೆಪಿಯವರು (BJP) ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುತ್ತಿದ್ದಾರೆ ಎಂಬ ಹೆಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ ಕುಮಾರಸ್ವಾಮಿಯವರು ಜಾತಿ ರಾಜಕಾರಣ ಮಾಡಲ್ವಾ? ಅವರ ಜಾತಿ ಬಗ್ಗೆ ಹೇಳಿಕೊಳ್ಳುವುದಿಲ್ವಾ? ರಾಜಕಾರಣದಲ್ಲಿ ಮಾಡೋದೆ ಜಾತಿ ರಾಜಕಾರಣ, ನಾವ್ ಹೇಳೊದೊಂದು ಮಾಡೊದೊಂದು. ಜಾತಿ ರಾಜಕಾರಣ ಮಾಡಲ್ಲ ಅಂತ, ಎದೆ ಮುಟ್ಟಿಕೊಂಡು ಯಾರಾದರೂ ಹೇಳಲಿ? ಸತ್ಯ ಮಾತಾಡಬೇಕು ಎಂದು ಹೆಚ್‍ಡಿಕೆ (HD Kumaraswamy) ವಿರುದ್ಧ…
ಕೋಲಾರ: ಚುನಾವಣಾ ಸಂದರ್ಭದಲ್ಲಿ ಉರಿಗೌಡ ನಂಜೇಗೌಡ ವಿಚಾರದಲ್ಲಿ ರಾಜಕೀಯ ಮಾಡುವಂತದ್ದು ಯಾರಿಗು ಶೋಭೆ ತರುವಂತದ್ದಲ್ಲ ಎಂದು ಜೆಡಿಎಸ್ ರಾಜ್ಯಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಕೋಲಾರ ಜಿಲ್ಲೆಯ ಬಂಗರಾಪೇಟೆ ತಾಲೂಕಿನಲ್ಲಿ ಜೆಡಿಎಸ್ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು. ಯಾರೊ ಯಾರೊ ಹೆಸರುಗಳನ್ನು ತಂದು ಚುನಾವಣಾ ಸಂದರ್ಭದಲ್ಲಿ ಜನರಿಗೆ ದಿಕ್ಕು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಇದು ಸರಿಯಲ್ಲ. Video Player 00:00 02:38 ಕರ್ನಾಟಕ ರಾಜ್ಯದಲ್ಲಿ ಎಲ್ಲ ರೀತಿಯಾದ ಸಮುದಾಯಗಳು ಇವೆ ಇವರ ಉದ್ದೇಶಗಳು ಒಕ್ಕಲಿಗರ ಮತಗಳನ್ನು ಬೇರ್ಪಡಿಸುತ್ತವೆ ಎಂಬ ಭಾವನೆಯಿಂದ ಎಲ್ಲಾ ವಿಚಾರಗಳನ್ನು ಬಿಜೆಪಿ ಯವರು ಪ್ರಸ್ತಾಪ ಮಾಡುತ್ತಿದ್ದಾರೆ ಇದು ಬಹಳ ದಿನ ಉಳಿಯುವುದಿಲ್ಲ ಇದೆಲ್ಲವೂ ತಾತ್ಕಾಲಿಕವಷ್ಟೆ ನಾಲ್ಕು ವರ್ಷಗಳಲ್ಲಿ ಏನು ಬಿಜೆಪಿ ಸರ್ಕಾರ ಆಡಳಿತವನ್ನು ನಡೆಸಿ ಯೋಜನೆಗಳನ್ನು ಕೊಟ್ಟಿದ್ದೆ.ಜನರ ಕಷ್ಟದ ಬಗ್ಗೆ ಚರ್ಚೆ ಮಾಡಲಿ ಅದು ಬಿಟ್ಟು ಉರೀಗೌಡ ನಂಜೇಗೌಡರ ಬಗ್ಗೆ ಚರ್ಚೆ ಮಾಡಿದರೆ ಯಾರ ಹೊಟ್ಟನು ತುಂಬುವುದಿಲ್ಲ ಎಂದು ತಿಳಿಸಿದರು. ಸಿದ್ದರಾಮಣ್ಣ ಈ ರಾಜ್ಯದ ಹಿರಿಯ ನಾಯಕರು…