ಬೆಂಗಳೂರು: ಜಸ್ಟ್ ಗುರಾಯಿಸಿದಕ್ಕೆ ಎಲೆಕ್ಟ್ರಿಕ್ ಶಾಪ್ ಗೆ ಭೂಪನೋರ್ವ ಬೆಂಕಿ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಾಕ್ ಸ್ಟಾವ್ ನಲ್ಲಿ ಘಟನೆ ನಡೆದಿದ್ದು, ರೇಣುಕಾ ಫುಡ್ಸ್ ಮಾಲೀಕನಿಂದ ಬೆಂಕಿ ಹಚ್ಚಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಶುಕ್ರವಾರ ರೇಣುಕಾ ಫುಡ್ಸ್ ಮಾಲೀಕ ಕಿರಣ್ ಕುಮಾರ್, ಹಾಗೂ ಎಲೆಕ್ಟ್ರಿಕ್ ಶಾಪ್ ಓನರ್ ಬಾಬು ಮಗ ಪಾಜಿಲ್ ಗೆ ಕಿರಿಕ್ ಆಗಿತ್ತು. ಪಾಜಿಲ್ ಜಸ್ಟ್ ನೋಡಿದಕ್ಕೆ ದೈಹಿಕವಾಗಿ ಕೃತ್ಯ ಹೆಸಗಲು ಕಿರಣ್ ಕುಮಾರ್ ಬಂದಿದ್ದ. ಈ ವೇಳೆ ಕಿರಣ್ ಕುಮಾರ್ ಎಲೆಕ್ಟ್ರಿಕಲ್ ಶಾಪ್ ಗೆ ಬೆಂಕಿ ಹತ್ತಿಸಿರುವುದಾಗಿ ಪಾಜಿಲ್ ಆರೋಪಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
Author: Prajatv Kannada
ಬೆಂಗಳೂರು: ಬೆಂಗಳೂರಿನ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ‘ನಮ್ಮ ಬೆಂಗಳೂರು ಹಬ್ಬ’ ಲಾಂಛನವನ್ನು ಕಂದಾಯ ಸಚಿವ ಆರ್ ಅಶೋಕ್ ಅವರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಸಚಿವರು, ಕಬ್ಬನ್ ಪಾರ್ಕ್ ಬೆಳಗ್ಗೆಯಿಂದ ಚಿತ್ರಸಂತೆಯೊಂದಿಗೆ ಶುರುವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಬ್ಬವನ್ನು ಸಂಜೆ ಉದ್ಘಾಟಿಸಲಿದ್ದಾರೆ. 26ರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಗಿಯಾಗಲಿದ್ದಾರೆ. ಈ ಬಾರಿ ಕಬ್ಬನ್ ಪಾರ್ಕ್, ಬಾಲ ಭವನ ಹಾಗೂ ವಿಧಾನಸೌಧದಲ್ಲಿ ನಡೆಯಲಿದೆ. ಮುಂದಿನ ವರ್ಷದಿಂದ ಜನವರಿಯಲ್ಲಿ ಆಯೋಜಿಸಲಿದ್ದು, ಬೆಂಗಳೂರಿನ ಹಲವು ವಾರ್ಡ್ ಗಳನ್ನು ಒಳಗೊಳ್ಳಲಿದೆ ಎಂದರು. ಇನ್ನೂ ಬೆಂಗಳೂರಿನ ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಜಗತ್ರಿಗೆ ಪರಿಚಯಿಸುವುದು ಹಬ್ಬದ ಮುಖ್ಯ ಉದ್ದೇಶವಾಗಿದೆ. ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ವಿವಿಧ ರಾಜ್ಯಗಳ ಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿರಲಿವೆ ಎಂದು ಹೇಳಿದ್ದಾರೆ.
ಬೆಂಗಳೂರು: ಕೊಟ್ಟ ಸಾಲ ವಾಪಸ್ ಕೇಳಿ ಪ್ರಿಯತಮೆಗೆ ಟಾರ್ಚರ್ ಕೊಡುತ್ತಿದ್ದ ಆಕೆಯ ಸ್ನೇಹಿತೆಗೆ ಚಾಕುವಿನಿಂದ ಇರಿದು ಪಾಗಲ್ ಪ್ರೇಮಿ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾಗಡಿ ರಸ್ತೆಯ ತಾವರೆಕೆರೆ ಠಾಣಾ ವ್ಯಾಪ್ತಿಯ ಚನ್ನೇನಹಳ್ಳಿಯಲ್ಲಿ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ರಕ್ಷಿತಾ, ಕಾರ್ತಿಕ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರಿಗೆ ಜಗಳವಾಗಿತ್ತು. ಇದೇ ವೇಳೆ ರಕ್ಷಿತಾಗೆ ಚನ್ನೇನಹಳ್ಳಿಯ ಮಂಜುಳಾ ಹಣ ಸಹಾಯ ಮಾಡಿದ್ದರು. ಆದರೆ ಕೊಟ್ಟ ಸಾಲ ವಾಪಸ್ ಕೊಡದ ಹಿನ್ನೆಲೆ, ಸಾಲದ ಹಣ ತೀರಿಸೋವರೆಗೂ ಟೈಲರಿಂಗ್ ಕೆಲಸ ಮಾಡಿ ಸಾಲ ತೀರಿಸುವಂತೆ ಮಂಜುಳಾ ರಕ್ಷಿತಾಗೆ ಹಿಂಸೆ ಕೊಟ್ಟಿದ್ದಾರೆ. ಈ ವಿಚಾರವನ್ನ ಫೋನ್ ಮಾಡಿ ಲವರ್ ಬಾಯ್ ಕಾರ್ತಿಕನಿಗೆ ರಕ್ಷಿತಾ ತಿಳಿಸಿದ್ದಾಳೆ. ಕೋಪಗೊಂಡ ಕಾರ್ತಿಕ್, ಸೀದಾ ಚನ್ನೇನಹಳ್ಳಿಯ ಮಂಜುಳಾ ಮನೆಗೆ ಬಂದಿದ್ದಾನೆ. ಈ ವೇಳೆ ಮಂಜುಳ ಡೋರ್ ಓಪನ್ ಮಾಡ್ತಿದ್ದಂತೆ ಚಾಕುವಿನಿಂದ ಕುತ್ತಿಗೆಗೆ ಇರಿದು ರಕ್ಷಿತಾ ಜೊತೆ ಕಾರ್ತಿಕ್ ಎಸ್ಕೇಪ್ ಆಗಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಮಂಜುಳಾ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಆರೋಪಿ…
ಒಟ್ಟಾವ: ವಿದೇಶಗಳಲ್ಲಿ ಜನಾಂಗೀಯ ದ್ವೇಷ ಮತ್ತೆ ಮರುಕಳಿಸಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಭಾರತದ ಸಿಖ್ ವಿದ್ಯಾರ್ಥಿಯ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪು ಶುಕ್ರವಾರ ಹಲ್ಲೆ ನಡೆಸಿದೆ. ಗಗನ್‍ದೀಪ್ ಸಿಂಗ್ (21) ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ಅಂಗಡಿಯೊಂದಕ್ಕೆ ತೆರಳಿದ್ದ ಗಗನ್‍ದೀಪ್ ಸಿಂಗ್ ರಾತ್ರಿ 10.30ರ ವೇಳೆಗೆ ಬಸ್‍ನಲ್ಲಿ ಬರುತ್ತಿದ್ದ. ಈ ಸಂದರ್ಭದಲ್ಲಿ 10 ರಿಂದ 15 ಜನರ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ ಎಂದು ಕೌನ್ಸಿಲರ್ ಮೋಹಿನಿ ಸಿಂಗ್ ತಿಳಿಸಿದ್ದಾರೆ. ಆತನನ್ನು ಹಿಂಬಾಲಿಸಿ ಧರಿಸದ್ದ ಪೇಟವನ್ನು ಕಿತ್ತೆಸೆದಿದ್ದಾರೆ. ಆತನ ಕಾಲು, ಕೈ ಹಾಗೂ ಪಕ್ಕೆಲುಬುಗಳಿಗೆ ಒದ್ದು, ತಲೆಕೂದಲನ್ನು ಹಿಡಿದೆಳೆದು ರಸ್ತೆ ಬದಿಗೆ ತಳ್ಳಿದ್ದಾರೆ ಎಂದು ಕೌನ್ಸಿಲರ್ ತಿಳಿಸಿದ್ದಾರೆ. ನಂತರ ಆತನ ಸ್ನೇಹಿತರು ಸ್ಥಳಕ್ಕೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಭಾರತೀಯರು ಎಂಬ ಒಂದೇ ಕಾರಣದಿಂದ ಹಲ್ಲೆ ನಡೆದಿದೆ ಎಂದು ಕೌನ್ಸಿಲರ್ ದೂರುದ್ದಾರೆ.
ಹುಬ್ಬಳ್ಳಿ; ಧಾರವಾಡ ಮಹಾತ್ಮಾ ಬಸವೇಶ್ವರ ನಗರದಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ರವರ ಅಭಿಮಾನಿ ಬಳಗದ ವತಿಯಿಂದ ಉಚಿತ ಹೊಮಿಯೋಪತಿ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಹಿರಿಯ ನ್ಯಾಯವಾದಿ ಶೇಖರ ಕವಳಿ ಹಾಗೂ ಶ್ರೀಕಾಂತ ಕ್ಯಾತಪ್ಪನವರ ವೈದ್ಯರಾದ ಶ್ರೀಕಾಂತ ಮಿರಜಕರ, ಡಾ.ಸುಕೃತ ಶೆಟ್ಟರ ಹಾಗೂ ಡಾ. ಬಸವರಾಜ ಅಂಗಡಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಶೇಕರ ಕವಳಿ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ರೀತಿಯ ಚಿಕಿತ್ಸಾ ಪದ್ಧತಿಗಳಿವೆ. ಅವುಗಳಲ್ಲಿ ಹೊಮಿಯೋಪತಿ ಚಿಕಿತ್ಸೆಯೂ ಸಹ ಪ್ರಸಿದ್ಧ ಪದ್ಧತಿಯಾಗಿದೆ. ಇತಿಹಾಸ ಕಾಲದಿಂದಲೂ ಅನುಸರಿಕೊಂಡು ಬಂದ ಈ ಚಿಕಿತ್ಸಾ ಪದ್ಧತಿಯನ್ನು ಮುಖಂಡ ಶ್ರೀಕಾಂತ ಕ್ಯಾತಪ್ಪನವರ ರವರು ಉಚಿತವಾಗಿ ನಾಗರಿಕರಿಗೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತಿರುವ ಸಲುವಾಗಿ ಅವರನ್ನು ಅಭಿನಂದಿಸಿದರು. ಡಾ. ಸುಕೃತ ಶೆಟ್ಟರ, ಡಾ. ಶ್ರೀ ವಿದ್ಯಾ, ಡಾ. ವಿಷ್ಣುವರ್ಧನ್, ಸಿ.ಎಸ್. ಪಾಟೀಲ, ಶೇಖರ, ಅಶೋಕ ಶೆಟ್ಟರ ರವರು, ಶಂಕರ…
ಯಾದಗಿರಿ: ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಅಕ್ರಮವಾಗಿ ಸೀರೆ, ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಆರೋಪ ಮೇಲೆ ಯಾದಗಿರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಎಸ್.ಬಿ.ಕಾಮರೆಡ್ಡಿ ಪತ್ನಿ ಪ್ರತಿಮಾ ಕಾಮರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ಯಾದಗಿರಿ ಪೊಲೀಸರು ದಾಳಿ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 48 ಸಾವಿರ ರೂ. ಮೌಲ್ಯದ 48 ಸೀರೆ ಹಾಗೂ 3 ಸಾವಿರ ಮೌಲ್ಯದ 5 ನಾನ್ ಸ್ಟಿಕ್ ತವಾಗಳನ್ನು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಟಿಕೆಟ್ ಆಕಾಂಕ್ಷಿ ಸೇರಿದಂತೆ ಮೂವರ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು ಡಾ.ಎಸ್.ಬಿ ಕಾಮರೆಡ್ಡಿ, ಡಾ.ಪ್ರತಿಮಾ ಕಾಮರೆಡ್ಡಿ ಹಾಗೂ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಗೂಳಿ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮಹಿಳಾ ದಿನಾಚರಣೆ ನೆಪದಲ್ಲಿ ಪ್ರತಿಮಾ ಕಾಮರೆಡ್ಡಿ ಹಾಗೂ ಮಂಜೂಳಾ ಗೂಳಿ ನೇತೃತ್ವದಲ್ಲಿ ಹಂಚಿಕೆ ಮಾಡಲಾಗಿತ್ತು.ಯಾದಗಿರಿ ನಗರದ ಚಂದ್ರಬಾಗಾ ಕಲ್ಯಾಣ ಮಂಟಪದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ನೂರಾರು…
ಕೋಲಾರ: ಮನೆ ಮನೆಗೆ ಕುಮಾರಣ್ಣ ಪಂಚರತ್ನ ಯೋಜನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ಕೋಲಾರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರು ಹೇಳಿದರು. ನಗರದ ಗಾಂಧಿನಗರದಲ್ಲಿ ಜೆಡಿಎಸ್ ಪಕ್ಷದಿಂದ ಮನೆ ಮನೆ ಪ್ರಚಾರದ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದರು. ಯಾವುದೇ ಪಕ್ಷವಾಗಲಿ ಸ್ಥಳೀಯರಿಗೆ ಟಿಕೇಟ್ ನ್ನು ನೀಡಬೇಕು ಸ್ಥಳೀಯರಿಗೆ ಸ್ಥಳೀಯರ ಸಮಸ್ಯೆಗಳು ತಿಳಿದಿರುತ್ತದೆ ಸ್ಥಳೀಯರು ಅಭ್ಯರ್ಥಿಯಾದರೆ ಕ್ಷೇತ್ರದ ಅಭಿವೃದ್ದಿ ಮುಖ್ಯ ಎಲ್ಲಾ ಜಾತಿ ವರ್ಗದ ಜನರು ಜೆಡಿಎಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತಿದ್ದಾರೆ. Video Player 00:00 02:22 ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೆನೆ 15 ವರ್ಷಗಳಿಂದ ವಲಸೆ ಬಂದು ಇಲ್ಲಿ ಆಡಳಿತವನ್ನು ನಡೆಸುತ್ತಿದ್ದಾರೆ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ನಾನು ಶಾಸಕನಾದ ಮೇಲೆ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಓದಗಿಸುತ್ತೆನೆ ಸ್ಥಳೀಯರ ಸಮಸ್ಯೆಗಳು ನಮಗೆ ಬಹಳ ಮುಖ್ಯ ಎಂದು ಹೇಳಿದರು.
ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಈ ನಡುವೆ ಚುನಾವಣೆಯಲ್ಲಿ ರೈತರ ಪ್ರಣಾಳಿಕೆಯನ್ನು ಬಹಿರಂಗವಾಗಿ ಒಪ್ಪುವ ಪಕ್ಷಗಳಿಗೆ ರೈತರ ಬೆಂಬಲ ನೀಡಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಕುರಿತು ನಗರದಲ್ಲಿ ಸೋಮವಾರ ಪ್ರಸಕ್ತ ವಿಧಾನಸಭಾ ಚುನಾವಣೆಗೆ ರೈತರ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರೈತರ ಮಕ್ಕಳ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸ ನೀಡಬೇಕು ಎನ್ನುವ ಬೇಡಿಕೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಸರ್ಕಾರಿ ನೌಕರರಿಗೆ, ಎಂಎಲ್ಎಗಳು ಮಂತ್ರಿಗಳಿಗೆ ಎಲ್ಲ ವರ್ಗದವರಿಗೂ ಪ್ರತಿ ತಿಂಗಳು ಸಂಬಳ ರೂಪದಲ್ಲಿ ಕನಿಷ್ಠ ಆದಾಯ ಬರುತ್ತದೆ, ಅದೇ ರೀತಿ ದಿನದಲ್ಲಿ ಕನಿಷ್ಠ 12 ಗಂಟೆ ದುಡಿಯುವ ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಯೋಜನೆ ಜಾರಿಗೆ ಬರಬೇಕು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು. ಪ್ರಾಣಿಗಳ ಹಾವಳಿ, ಹಾಗೂ ದಾಳಿಯಿಂದ ರೈತನ ಬದುಕು ಹಾಳಾಗುತ್ತಿದೆ ಆದಕಾರಣ ಹಗಲು ವೇಳೆಯಲ್ಲಿ ಕೃಷಿ ಪಂಪಸೆಟ್ ಗಳಿಗೆ 12…
ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಗರದ ಸಿಪಿಎಡ್ ಮೈದಾನದಲ್ಲಿ ಮಾ.20 ರಂದು ಯುವಕ್ರಾಂತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮೂರು ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್, ರಾಹುಲ್ ಗಾಂಧಿಯವರ ಮೂಲಕ ನಾಲ್ಕನೇ ಗ್ಯಾರಂಟಿ ಘೋಷಿಸುವ ಸಾಧ್ಯತೆ ಇದ್ದು ಸಮಾವೇಶ ಮಹತ್ವ ಪಡೆದಿದೆ. ಪ್ರಸಕ್ತ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸಭೆ ನಡೆದ ಇಲ್ಲಿನ ಐತಿಹಾಸಿಕ ವೀರ ಸೌಧ (ಕಾಂಗ್ರೆಸ್ ಬಾವಿ)ದಿಂದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಆರಂಭಿಸುವ ಮೂಲಕ ಈಗಾಗಲೇ ಚುನಾವಣಾ ರಣಕಹಳೆ ಊದಿದೆ. ಅಲ್ಲದೇ ವಿವಿಧೆಡೆ ಮಹಿಳಾ ಸಮಾವೇಶ ಮತ್ತು ರೈತ ಸಮಾವೇಶಗಳನ್ನು ನಡೆಸಿ ಆಯಾ ವರ್ಗದ ಮತದಾರರಿಗೆ ಗ್ಯಾರಂಟಿ ಘೋಷಣೆ ಸಹ ಮಾಡಲಾಗಿದೆ. 200 ಯುನಿಟ್‌ವರೆಗೆ ಉಚಿತ ವಿದ್ಯುತ್, ಮನೆಯ ಯಜಮಾನತಿಗೆ ತಿಂಗಳಿಗೆ 2 ಸಾವಿರ ರೂ. ಹಾಗೂ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯ ಗ್ಯಾರಂಟಿಯನ್ನು ಕಾಂಗ್ರೆಸ್ ನೀಡಿದೆ. ಪ್ರಸ್ತುತ…
ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರ ಚೆನ್ನೈನ ತೇನಂಪೇಟೆನಲ್ಲಿರುವ ಮನೆಯಲ್ಲಿದ್ದ ಚಿನ್ನಾಭರಣಗಳು ವಜ್ರ ಮತ್ತು ನವರತ್ನದ ಆಭರಣಗಳು ದರೋಡೆಯಾಗಿದ್ದು, ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರು ಕಳ್ಳತನ ಮಾಡಿರಬಹುದು ಎಂದು ಐಶ್ವರ್ಯಾ ರಜನಿಕಾಂತ್ ನೀಡಿರುವ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ದೂರಿನ ಮೇರೆಗೆ ತೇನಂಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಫ್‌ಐಆರ್‌ನಲ್ಲಿ ನಮೂದಿಸಿರುವ ಕದ್ದ ಚಿನ್ನಾಭರಣಗಳ ಅಂದಾಜು ಮೌಲ್ಯ 3.6 ಲಕ್ಷ ರೂ.ಗಳಾಗಿದೆ. 2019 ರಲ್ಲಿ ತನ್ನ ತಂಗಿ ಸೌಂದರ್ಯಾಳ ಮದುವೆಗೆ ಬಳಸಿದ ನಂತರ ಆಭರಣಗಳನ್ನು ತನ್ನ ಲಾಕರ್‌ನಲ್ಲಿ ಇರಿಸಿದ್ದೇನೆ ಎಂದು ಐಶ್ವರ್ಯಾ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಲಾಕರ್ ಐಶ್ವರ್ಯಾ ಅವರ ಬಳಿ ಇದ್ದರೂ ಅದನ್ನು ಹಲವು ಬಾರಿ ಸ್ಥಳಾಂತರಿಸಲಾಗಿದೆ. ಆಗಸ್ಟ್ 2021 ರವರೆಗೆ ಅದು ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿತ್ತು, ನಂತರ ಅದನ್ನು ಅವರು ನಟ ಧನುಷ್ ಅವರೊಂದಿಗೆ CIT ಕಾಲೋನಿಯಲ್ಲಿ ಹಂಚಿಕೊಂಡ ನಿವಾಸಕ್ಕೆ ಕೊಂಡೊಯ್ದರು. ಬಳಿಕ ಸೆಪ್ಟೆಂಬರ್ 2021 ರಲ್ಲಿ ಸೇಂಟ್ ಮೇರಿಸ್ ರಸ್ತೆಯ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸಲಾಯಿತು. ಏಪ್ರಿಲ್ 9,…