ಹಾಸನ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಶಿವಲಿಂಗೇಗೌಡರಿಗೆ ನಿರಂತರ ಆಡಿಯೋ ಲೀಕ್ ತಲೆನೋವಾಗಿ ಮಾರ್ಪಟ್ಟಿದೆ. ಶಾಸಕರು ತಮ್ಮ ಆಪ್ತರ ಜೊತೆಗೆ ಮಾತನಾಡುತ್ತಿರುವ ಆಡಿಯೋ ಒಂದರ ಬೆನ್ನಲ್ಲೇ ಒಂದರಂತೆ ವೈರಲ್ ಆಗುತ್ತಿದೆ. ಕೇವಲ ಫೋನ್ ಸಂಭಾಷಣೆ ಮಾತ್ರವಲ್ಲ, ಆಪ್ತರ ಜೊತೆಗೆ ಸಭೆಗಳಲ್ಲೂ ಮಾತನಾಡಿರುವ ಆಡಿಯೋ ಬಹಿರಂಗಗೊಳ್ಳುತ್ತಿದ್ದು, ದಳ ತೊರೆಯುವ ಶಿವಲಿಂಗೇಗೌಡ ರೇವಣ್ಣ ಆಡಿಯೋ ವೈರಲ್ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಜೊತೆಗೆ ಹೇಳಿಕೊಂಡಿದ್ದಾರೆ ಎನ್ನಲಾಗಿರುವ ಶಿವಲಿಂಗೇಗೌಡರ ಫೋನ್ ಸಂಭಾಷಣೆ ವೈರಲ್ ಆಗಿದೆ. ರೇವಣ್ಣ ಹಾಗೂ ಶಿವಲಿಂಗೇಗೌಡ ಅವರು ಮಾತನಾಡಿರುವ ಫೋನ್ ಸಂಭಾಷಣೆಯನ್ನು ಯಾರು ಲೀಕ್ ಮಾಡಿದ್ದಾರೆ ಎಂಬುವುದು ಸ್ಪಷ್ಟಗೊಂಡಿಲ್ಲ. ಆದರೆ ಇದು ನಕಲಿ ಎಂದು ಶಿವಲಿಂಗೇಗೌಡರು ಹೇಳಿದರೂ, ರೇವಣ್ಣ ಅವರು ಈ ಸಂಭಾಷಣೆ ಸುಳ್ಳು ಎಂದಾದರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಹಾಗೂ ಸುಳ್ಳೆಂದು ಸಾಬೀತು ಮಾಡಲಿ ಎಂದು ರೇವಣ್ಣ ಸವಾಲು ಹಾಕಿದ್ದಾರೆ. ಶಿವಲಿಂಗೇಗೌಡರ ಆಡಿಯೋ ಹೀಗೆ ಲೀಕ್ ಆಗಿರುವುದು…
Author: Prajatv Kannada
ಹುಬ್ಬಳ್ಳಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು, ಚಾಲಾಕಿ ಕಳ್ಳ ಎಗರಿಸಿದ ಘಟನೆ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಬಳಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಿರಣ್ ಗಾಣಿಗೇರ್ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನ ಇದಾಗಿದ್ದು, ಹು-ಧಾ ಪಾಲಿಕೆ ಬಳಿ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲಾಗಿತ್ತು. Video Player 00:00 00:44 ಚಾಲಾಕಿ ಕಳ್ಳ ದ್ವಿಚಕ್ರ ವಾಹನ ತಗೆದುಕೊಂಡು ಸಿಟಿ ಕ್ಲಿನಿಕ್ ಬಳಿ ಬಂದಾಗ್ ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಇನ್ನು ಈ ಕುರಿತಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ನವರೆ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಎ ಶ್ರೀನಿವಾಸ್ ಹೇಳಿದ್ದಾರೆ. ಕೋಲಾರ ತಾಲೂಕಿನ ಕೋಡಿಕಣ್ಣೂರು ಗ್ರಾಮದಲ್ಲಿ ಕ್ರಿಕೆಟ್ ಕಪ್ ಟೂರ್ನಿಮೆಂಟ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. Video Player 00:00 01:28 ಸಿದ್ದರಾಮಯ್ಯ ಅವರು ನಿಲ್ಲುವುದಿಲ್ಲ ಅಂತ ಎಲ್ಲೂ ಸಹ ಹೇಳಿಲ್ಲ ಅವರೆ ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅವರ ಪರವಾಗಿ ಕಾಯ ವಾಚ ಮನಸ್ಸಿನಿಂದ ಅವರನ್ನು ಗೆಲ್ಲಿಸುತ್ತೇವೆ.ಜಿಲ್ಲೆಯಲ್ಲಿ ಯಾವ ಘಟಬಂದನ್ ಇಲ್ಲ ಗುಂಪುಗಾರಿಕೆಯಿಲ್ಲ ನಾವೆಲ್ಲರು ಒಂದೇ ಕಾಂಗ್ರೆಸ್ ಪಕ್ಷದವರು. ಒಂದು ವೇಳೆ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡದೆ ಇದ್ದರೆ ನನಗೆ ಒಂದು ಅವಕಾಶ ಕೊಡಬೇಕು ಅಂತ ಕಾಂಗ್ರೆಸ್ ಹೈಕಮಾಂಡಗೆ ಕೇಳಿದ್ದೇನೆ ಅದನ್ನು ಹೈಕಮಾಂಡ್ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಇದೀಗ ಬ್ರೇಕ್ ಬಿದ್ದಿದೆ. ನಿರ್ಮಲಾನಂದ ಸ್ವಾಮಿಗಳ ಭೇಟಿ ಬಳಿಕ ಇದ್ದಕ್ಕಿದ್ದಂತೆ ಮುನಿರತ್ನ ಯೂಟರ್ನ್ ಹೊಡೆದಿದ್ದಾರೆ. ಉರಿಗೌಡ ನಂಜೇಗೌಡ ಚಿತ್ರದ ಚಿತ್ರೀಕರಣ ನಿರ್ಮಾಣ ಮಾಡುತ್ತೇನೆ ಎಂದಿದ್ದ ಮುನಿರತ್ನ ಇದೀಗ ಸಿನಿಮಾ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಉರಿಗೌಡ-ನಂಜೇಗೌಡ ವಿವಾದಿತ ಸಿನಿಮಾ ಗೊಂದಲಗಳಿಗೆ ಕೊನೆಗೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ತೆರೆ ಎಳೆದಿದ್ದಾರೆ. ಉರಿಗೌಡ-ನಂಜೇಗೌಡ ವರನ್ನು ಆಧರಿಸಿದ ಸಿನಿಮಾ ಮಾಡಲು ನಿರ್ಮಾಪಕ, ಹಾಲಿ ಸಚಿವ ಮುನಿರತ್ನ ಫಿಲ್ಮ್ ಚೇಂಬರ್ನಲ್ಲಿ ಟೈಟಲ್ ರಿಜಿಸ್ಟರ್ಗೆ ಅರ್ಜಿ ಹಾಕಿದ್ದರು. ಅಲ್ಲದೇ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಟ್ವೀಟ್ ಮಾಡಿದ್ದ ಮುನಿರತ್ನ ಮೇ 18 ರಂದು ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತ ಮಾಡಲಾಗುವುದು ಎಂದು ಪೋಸ್ಟ್ ಮಾಡಿದ್ದರು. ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಿತ್ರಕಥೆ…
ಸೂರ್ಯೋದಯ: 06.24 AM, ಸೂರ್ಯಾಸ್ತ : 06.30 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಫಾಲ್ಗುಣ ಮಾಸ, ಶಿಶಿರ ಋತು,ಕೃಷ್ಣ ಪಕ್ಷ, ಉತ್ತರಾಯಣ ತಿಥಿ: ಇವತ್ತು ತ್ರಯೋದಶಿ 04:55 AM ತನಕ ನಂತರ ಚತುರ್ದಶಿ ನಕ್ಷತ್ರ: ಇವತ್ತು ಶತಭಿಷ 07:39 PM ತನಕ ನಂತರ ಪೂರ್ವಾ ಭಾದ್ರ ಯೋಗ: ಇವತ್ತು ಸಾಧ್ಯ 04:21 PM ತನಕ ನಂತರ ಶುಭ ಕರಣ: ಇವತ್ತು ವಣಿಜ 04:55 AM ತನಕ ನಂತರ ವಿಷ್ಟಿ 03:20 PM ತನಕ ನಂತರ ಶಕುನಿ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ: 01:30 ನಿಂದ 03:00 ವರೆಗೂ ಅಮೃತಕಾಲ: 01.11 PM to 02.37 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:59 ನಿಂದ ಮ.12:47 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ,…
ಮಂಡ್ಯ :- ಮದ್ದೂರು ಕ್ಷೇತ್ರದ ಜನರಿಗೆ ನಾನು ಕೇವಲ ಭರವಸೆಗಳನ್ನೆ ನೀಡದೇ ಯೋಜನೆಗಳನ್ನು ಅನುಷ್ಟಾನಕ್ಕೂ ತಂದಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು. ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿಯ ಹೆಮ್ಮನಹಳ್ಳಿ, ಕದಲೂರು ಹಾಗೂ ಮಲ್ಲನಕುಪ್ಪೆ ಗ್ರಾಮಗಳಲ್ಲಿ ಅಂದಾಜು 1.50 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಕಳೆದ 10 ವರ್ಷಗಳಿಂದ ಕ್ಷೇತ್ರದ ಪ್ರತಿಯೊಂದು ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದೇನೆ. ಜನರು ನನ್ನ ಬಳಿ ಬಂದು ಇಂತಹ ಕೆಲಸವಾಗಬೇಕು ಎಂದು ಅರ್ಜಿ ಸಲ್ಲಿಸುವ ಮೊದಲೇ ಆ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದೇನೆ ಎಂದರು. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು ಯಾಮಾರಿಸಲು ನನಗೆ ಬರುವುದಿಲ್ಲ. ಮದ್ದೂರು ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಆಯ್ಕೆಯಾಗಿದ್ದ ಯಾವ ಶಾಸಕರು ಮಾಡದ ಅಭಿವೃದ್ಧಿ ಕೆಲಸಗಳನ್ನು ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ತೃಪ್ತಿ ನನಗಾಗಿದೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚರತ್ನ ಯೋಜನೆಗಳನ್ನು ನಾನು ಈಗಾಗಲೇ ಹೋಬಳಿಗಳ…
ಕೋಲಾರ: ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂದು ನನಗೆ ಮೊದಲೇ ಗೊತ್ತಿತ್ತು ಎಂದು ಮಾಜಿ ಶಾಸಕ ಆರ್ ವರ್ತೂರು ಪ್ರಕಾಶ್ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾತನಾಡಿದ ಅವರು ಬಹಳ ದಿನಗಳ ನಂತರ ಸರ್ವೆ ವರದಿ ಪೋಲಿಸ್ ವರದಿಗಳ ಪರಿಶೀಲಿಸಿ ಕೋಲಾರ ಕ್ಷೇತ್ರ ಪೂರಕವಾಗಿಲ್ಲ ಗೆಲ್ಲಕ್ಕೆ ಆಗುವುದಿಲ್ಲ ಎಂದು ಹೇಳಿ ತೀರ್ಮಾನವನ್ನು ಹೈಕಮಾಂಡ್ ಗೆ ಬಿಟ್ಟಿದ್ದಾರೆ. ಸಿದ್ದು ವಿಚಾರದಲ್ಲಿ ಸಿದ್ದರಾಮಯ್ಯನೆ ಹೈಕಮಾಂಡ್ ಕಾಂಗ್ರೆಸ್ ಅಲ್ಲ ಅವರು ಎಲ್ಲಿ ಸ್ಪರ್ಧೆ ಮಾಡು ಬೇಕು ಅಂತ ಅವರಿಗೆ ಗೊತ್ತಿದೆ ಅಂತಹ ಶಕ್ತಿ ಸಿದ್ದರಾಮಯ್ಯರಿಗೆ ಇದೆ. ಹಾಗಾಗಿ ಕೋಲಾರದಲ್ಲಿ ಗೆಲ್ಲುವುದು ಕಷ್ಟ ಅಂತ ತಿಳಿದು ಬೇರೆ ಕಡೆ ಸ್ಪರ್ಧೆ ಮಾಡುತ್ತಾರೆ ಸಿದ್ದರಾಮಯ್ಯ ಬಂದರೆ ಅಹಿಂದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುತ್ತದೆ ಎಂದು ತಿಳಿದು ಕೊಂಡು ಘಟಬಂಧನ ನಾಯಕರು ಅವರನ್ನ ಕರೆದುಕೊಂಡು ಬಂದಿದ್ದರು ಘಟಬಂದನ್ ಪ್ಲಾನ್ ಎಲ್ಲವು ಪ್ಲಾಪ್ ಆಗಿ ಹೋಗಿದೆ. Video Player 00:00 01:02 ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ದೊಡ್ಡವರು ಅಂತವರೆ ನನ್ನ ವಿರುದ್ದ…
ಕೊಪ್ಪಳ: ಅನಾರೋಗ್ಯಕ್ಕೆ ಒಳಗಾಗಿದ್ದ ತಂದೆ, ತಾಯಿಯನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳನ್ನು ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ (Janardhana Reddy) ದತ್ತು ಪಡೆದುಕೊಂಡರು. ಕೊಪ್ಪಳದ (Koppala) ಗಂಗಾವತಿ ನಗರದ ವಿರುಪಾಪುರ ತಾಂಡದ ನಿವಾಸಿಯಾಗಿರುವ ಈ ಇಬ್ಬರು ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಸೋದರ ಮಾವನ ಮನೆಯಲ್ಲಿ ವಾಸವಿದ್ದರು. ಸೋದರ ಮಾವನಿಗೂ ಕಷ್ಟ ಇರುವುದರಿಂದ ಜನಾರ್ದನ ರೆಡ್ಡಿಯವರು ಜ್ಯೋತಿ ಸ್ವರೂಪ್, ವೇಣು ಎನ್ನುವ ಇಬ್ಬರು ಮಕ್ಕಳನ್ನು ದತ್ತು ಪಡೆಕೊಂಡಿದ್ದಾರೆ. ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ನನ್ನ ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಕೆಆರ್‌ಪಿಪಿ ಪಕ್ಷದ ವತಿಯಿಂದ ಈಗಾಗಲೇ 12 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಮಾರ್ಚ್ 30ರ ಒಳಗೆ 30 ಕ್ಕೂ ಅಧಿಕ ಅಭ್ಯರ್ಥಿಗಳನ್ನು ಘೋಷಣೆ ಮಾಡುವೆ. ಬಿಜೆಪಿ ಪಕ್ಷದ ನಾಯಕರು ಗಂಗಾವತಿಗೆ ಸಾಲು ಸಾಲಾಗಿ ಆಗಮಿಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಯಾರು ಸಹ ಗಂಗಾವತಿಗೆ ಬಂದಿರಲಿಲ್ಲ. ನನ್ನಿಂದ ಅವರು ಗಂಗಾವತಿಗೆ ಬರುತ್ತಿರುವುದು ಖುಷಿಯಾಗುತ್ತಿದೆ ಕಾಲೆಳೆದ ಪಕ್ಷದ ವಿಚಾರವಾಗಿ ಯಾರ ಬಗ್ಗೆ ಕೂಡ ನಾನು…
ಬೆಂಗಳೂರು: ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರಬಾರದಿತ್ತು ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ. ಗಾಂಧಿ ನಗರದ ಒಕಳಿಪುರಂನಲ್ಲಿ ನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜಕೀಯ ಇಚ್ಛಾಶಕ್ತಿ ಇರುವ ಪಕ್ಷವಾಗಿದ್ದು, ಕಾಂಗ್ರೆಸ್ ಗ್ಯಾರಂಟಿ ಕೊಡುವ ಬೋರ್ಡ್ ಹಾಕಿ ಮತ ಕೇಳುತ್ತಿದ್ದಾರೆ. ಅವರು ಇನ್ನೊಂದು ಬೋರ್ಡ್ ಹಾಕಲು ಮರೆತಿದ್ದಾರೆ. ನಾವು ಸೋಲುವುದೂ ಗ್ಯಾರಂಟಿ, ಹಾಗಾಗಿ ನಾವು ಭರವಸೆ ಈಡೇರಿಸುವುದೂ ಗ್ಯಾರಂಟಿ ಇಲ್ಲ ಎಂದು ಅವರು ಬೋರ್ಡ್ ಹಾಕಬೇಕಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದವರು ಇನ್ನೂ ಕ್ಷೇತ್ರ ಹುಡುಕಾಟ ಮಾಡುತ್ತಿದ್ದಾರೆ. ಈಗ ಕೋಲಾರದಿಂದಲೂ ಅವರನ್ನು ಎತ್ತಂಗಡಿ ಮಾಡಿಸುವ ಕೆಲಸ ಆಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ರಿಕ್ಷಾ ಚಾಲಕರ ಪ್ರತಿಭಟನೆ ಹಿನ್ನೆಲೆ ಬಿಎಂಟಿಸಿ ಅಲರ್ಟ್ ಆಗಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚಿನ ಬಸ್ ಕಾರ್ಯಚರಣೆಗೆ ಬಿಎಂಟಿಸಿ ಮುಂದಾಗಿದೆ. ಈಗಾಗಲೇ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ನೀಡಲು ತಯಾರಿ ನಡೆಸಲಾಗಿದ್ದು ಅಗತ್ಯ ಭಾಗಗಳಿಗೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್, ಮಾರುಕಟ್ಟೆ, ಶಾಂತಿನಗರ, ಶಿವಾಜಿನಗರ, ಯಶವಂತಪುರ, ಸೇರಿ ಪ್ರಮುಖ ನಿಲ್ದಾಣಗಳಿಂದ ಹೆಚ್ಚಿನ ಕಾರ್ಯಚರಣೆಗೆ ಬಿಎಂಟಿಸಿ ಮುಂದಾಗಿದೆ. ಮೀಟರ್ ಮೇಲೆ ಒಂದಿಷ್ಟು ಹಣ ಕೊಡಿ ಅಂತ ಕೇಳ್ತಿದ್ದ ಆಟೋ ಚಾಲಕರು ಇದೀಗ ಆಟೋ ಬಂದ್ಅನ್ನೇ ಬಂಡವಾಳ ಮಾಡಿಕೊಂಡು ಮನಸೋ ಇಚ್ಛೆ ಕೆಲ ಆಟೋ ಚಾಲಕರು ಹಣ ಕೇಳುತ್ತಿದ್ದಾರೆ. ಆಟೋ ಮುಷ್ಕರ ಹಿನ್ನೆಲೆ ಪ್ರಯಾಣಿಕರು ಮೆಟ್ರೋ, ಬಿಎಂಟಿಸಿ ಕಡೆಗೆ ಕಡೆ ಮುಖ ಮಾಡಿದ್ದಾರೆ. ನಮ್ಮ ಮೆಟ್ರೋ ಮುಖಾಂತರ ನಗರದ ಬೇರೆ ಬೇರೆ ಭಾಗಗಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇನ್ನೂ ಪ್ರತಿದಿನಕ್ಕೆ ಹೋಲಿಕೆ ಮಾಡಿದ್ರೆ ಮೆಟ್ರೋ ಪ್ರಯಾಣವನ್ನೇ ಸಾರ್ವಜನಿಕರು ಆಯ್ಕೆ ಮಾಡಿಕೊಂಡಿದ್ದಾರೆ.