ಬೆಂಗಳೂರು: ರಾಜಧಾನಿ ಬೆಂಗಳೂರಿನ(Bangalore) ಬೊಮ್ಮನಹಳ್ಳಿ ಕಾಲ್ ಸೆಂಟರ್(Bommanahalli Call Centre) ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಇದೀಗ ಬೊಮ್ಮನಹಳ್ಳಿ ಪೊಲೀಸರ(Bommanahalli Police) ಮೇಲೂ ತನಿಖೆ ನಡೆಯೋ ಸಾಧ್ಯತೆ ಇದೆ. ಬೊಮ್ಮನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಪ್ರಶಾಂತ್(Inspector Prashant) ಹಾಗೂ ಸಿಬ್ಬಂದಿಗಳ ಮೇಲೆ ಇಲಾಖಾ ತನಿಖೆ ನಡೆಯುವ ಸಾಧ್ಯತೆ ಇದ್ದು, ಅದಕ್ಕೆ ಕಾರಣ ಆರೋಪಿಗಳಿಂದ ಬೊಮ್ಮನಹಳ್ಳಿ ಪೊಲೀಸರು ಈ ಹಿಂದೆಯೇ ಬೆನಿಫಿಟ್ಸ್ ಪಡೆದಿದ್ದರಾ ಎಂಬ ಅನುಮಾನವೇ ಕಾರಣವಾಗಿದೆ. ಅಕ್ಯುಮೆಟ್ರಿಕ್ ಕಂಪೆನಿಯ(Accumetric Company) ಮೇಲೆ ಸಿಸಿಬಿ ದಾಳಿಯಿಂದ ಹಿಂದಿನ ಡೀಲ್ ಪ್ರಕರಣ ಬೆಳಕಿಗೆ ಬರುತ್ತಾ ಎನ್ನುವ ಅನುಮಾನ ಇದೀಗ ಎದ್ದಿದೆ. ಏನಿದು ಪ್ರಕರಣ? ಚಿತ್ತೂರಿನ ಅಜಯ್, ಎನ್.ವಿ ಅಕ್ಯುಮೆಟ್ರಿಕ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್(Managing Director) ಆಗಿದ್ದ. ಬಡಮಕ್ಕಳಿಗೆ ಸಹಾಯ ಮಾಡ್ತೀವಿ ಎಂದು ಈತ ಕಾಲ್ ಸೆಂಟರ್ ತೆಗೆದಿದ್ದ. ಕಾಲ್ ಸೆಂಟರ್ನ ಪ್ರತಿ ಸಿಬ್ಬಂದಿಯೂ ದಿನವೊಂದಕ್ಕೆ 200 ಕಾಲ್ ಮಾಡಲೇ ಬೇಕಿತ್ತು ಎಂದು ಹೇಳಲಾ ಗುತ್ತಿದೆ. ಹೀಗೆ ಕರೆ ಸ್ವೀಕರಿಸಿ ದಾನ ಮಾಡುತ್ತೇವೆ ಎಂದು ಹಣವನ್ನು ಟ್ರಾನ್ಫರ್ ಮಾಡಿದರೆ ಆರೋಪಿ…
Author: Prajatv Kannada
ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ (Doctor Negligence) ಮೂರು ವರ್ಷದ ಮಗು ಸಾವನ್ನಪ್ಪಿರುವ ಆರೋಪ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ (Baptist hospital, Hebbal) ವಿರುದ್ಧ ಕೇಳಿ ಬಂದಿದೆ. ಬುಧವಾರ ಮಧ್ಯಾಹ್ನ ಜ್ವರವಿದ್ದ ಕಾರಣ ಮಗುವನ್ನು ಪೋಷಕರು ಮೊದಲಿಗೆ ಯಲಹಂಕದ (Yelhanka) ಶುಶ್ರೂಷಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ಶುಶ್ರೂಷಾ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಬೇರೆ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ವೈದ್ಯರ ಸೂಚನೆ ಮೇರೆಗೆ ಪೋಷಕರು (Parents) ಮಗುವನ್ನು ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ 9 ಗಂಟೆ ವೇಳೆಗೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.ಜ್ವರ ಎಂದು ಕರೆದುಕೊಂಡ ಬಂದು ಮಗು ಹೇಗೆ ಸಾವನ್ನಪ್ಪಿತು ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು: ಸಾಮಾನ್ಯವಾಗಿ ಇತ್ತೀಚೆಗೆ ಬಹುತೇಕ ಕಟ್ಟಡಗಳಲ್ಲಿ ಲಿಫ್ಟ್(Lift) ಅಳವಡಿಸಲಾಗಿರುತ್ತೆ. ಬಹುತೇಕರು ಮೆಟ್ಟಿಲುಗಳಿದ್ದರೂ ಲಿಫ್ಟನ್ನೇ ಬಳಸುತ್ತಾರೆ. ಆದ್ರೆ ಅದೇ ಲಿಫ್ಟ್ ಯುವಕನನ್ನು ಬಲಿ ಪಡೆದಿದೆ. (Bengaluru) ಬೆಂಗಳೂರಿನ ಜೆ.ಸಿ.ರಸ್ತೆ ಭರತ್ ಸರ್ಕಲ್ ಬಳಿಯ ಕಮರ್ಷಿಯಲ್ ಬಿಲ್ಡಿಂಗ್ನ ಲಿಫ್ಟ್ನಲ್ಲಿ ಸಿಲುಕಿ ಉತ್ತರಪ್ರದೇಶ (UP) ಮೂಲದ ವಿಕಾಸ್(26) ಎಂಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಸಂಜಯ್ (Automobile) ಆಟೋಮೊಬೈಲ್ ಶಾಪ್ನಲ್ಲಿ ಕೆಲಸ ಮಾಡ್ತಿದ್ದ ವಿಕಾಸ್, ಆರು ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದ. ಸಂಜೆ ಏಳು ಗಂಟೆ ಸುಮಾರಿಗೆ ಕಮರ್ಷಿಯಲ್ ಬಿಲ್ಡಿಂಗ್ನ ಲಿಫ್ಟ್ನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಮಗನ ಸಾವಿನ ವಿಚಾರ ಪೋಷಕರಿಗೆ ತಿಳಿಸಿದ್ದಾರೆ. ವಿಕಾಸ್ ಪೋಷಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಪೋಷಕರಿಗೆ ಹಸ್ತಾಂತರಿಸಲಾಗುತ್ತೆ.
ರಾಜ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರ್ತಿದೆ, ಈಗಾಗ್ಲೆ ಕೇಂದ್ರ ನಾಯಕರು ಕರುನಾಡ ಅಖಾಡದಲ್ಲಿ ಅಬ್ಬರಿಸ್ತಿದ್ದಾರೆ. ಬಿಜೆಪಿಯಲ್ಲಿ ಅಮಿತ್ ಶಾ, ಯೋಗಿ ನಂತ್ರ ಪ್ರಧಾನಿ ಮೋದಿ ರಾಜ್ಯ ದಂಡಯಾತ್ರೆಗೆ ಬರ್ತಿದ್ದಾರೆ, 6 ದಿನಗಳ ಕಾಲ ಮೋದಿ ಮೇನಿಯ ನಡೆಯಲಿದ್ದು ಚುನಾವಣಾ ಲೆಕ್ಕಾಚಾರ ಬದಲಿಸುವ ಮೆಗಾ ರೋಡ್ ಶೋ ಗೆ ಕೇಸರಿ ಪಡೆ ಪ್ಲಾನ್ ಮಾಡ್ತಿದೆ. ಹಳೇ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿರುವ ಹೈಕಮಾಂಡ್ ಇಬ್ಬರು ಮಾಜಿ ಸಿಎಂ ಗಳಿಗೆ ಠಕ್ಕರ್ ಕೊಡಲು ಅಖಾಡ ಸಿದ್ದಪಡಿಸ್ತಿದೆ.. ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ರಂಗೇರ್ತಿದೆ, ಕಾಂಗ್ರೆಸ್- ಬಿಜೆಪಿಯಲ್ಲಿ ರಾಷ್ಟ್ರೀಯ ನಾಯಕರು ಅಬ್ಬರದ ಪ್ರಚಾರ ಮಾಡ್ತಿದೆ. ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯದ ಜನರ ಮನಗೆಲ್ಲಲು ಅಬ್ಬರಿಸ್ತಿದ್ದಾರೆ. ಇತ್ತ ಬಿಜೆಪಿಯವರು ನಾವೇನು ಕಮ್ಮಜ ಇಲ್ಲ ಅನ್ನೋತರ ಚುನಾವಣಾ ಚಾಣಕ್ಯ ಅಮಿತ್ ಶಾ, ಹಿಂದೂ ಫೈಯರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಸೇರಿದಂತೆ ಕೇಂದ್ರ ಸಚಿವರು ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಈ ನಡುವೆ…
ಬೆಂಗಳೂರು: ಬೆಂಗಳೂರಿನಲ್ಲಿ ಮೊಬೈಲ್ ಸುಲಿಗೆ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಮಲ್ಲೇಶ್ವರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮುರುಗನ್, ಯಾಸ್ಮಿನ್, ಮುರಳಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು, ಸರಗಳ್ಳತನ, ಮೊಬೈಲ್ ಕಳ್ಳತನ ಹಾಗೂ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು. ಈ ಸಂಬಂಧ ಚಿನ್ನದ ಸರ ಕಳೆದುಕೊಂಡ ಸಂತ್ರಸ್ತರೊಬ್ಬರು ಸ್ಥಳೀಯ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಬಂಧಿತರಿಂದ 1 ಲಕ್ಷ ರೂ ಮೌಲ್ಯದ ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನೂ ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಸಿದ್ಧತೆಗಳು ಗರಿಗೆದರಿವೆ. ಮೂರು ಪಕ್ಷಗಳ ಬಿಗ್ ಫೈಟ್ ಗೆ ಅಖಾಡವಾಗಿರೋ ಕರುನಾಡಿನಲ್ಲಿ ಚುನಾವಣಾಧಿಕಾರಿಗಳು ಚುನಾವಣೆ ಎದುರಿಸೋಕೆ ಅಂತ ಇನ್ನಿಲ್ಲದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ..ಯಾವ ರೀತಿ ಸಿದ್ದತೆ ನಡೆಸಿದೆ ಅನ್ನೋ ಫುಲ್ ಡಿಟೇಲ್ಸ್ ಇಲ್ಲಿದೆ. ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರಿದೆ.ಚುನಾವಣೆಗೆ ಇನ್ನೂ ಕೇವಲ 15 ದಿನ ಬಾಕಿ.ಹೀಗಾಗಿ ಪಾರದರ್ಶಕ ಚುನಾವಣೆ ನಡೆಸಲು ಚುನಾವಣೆ ಆಯೋಗ ಮುಂದಾಗಿದೆ. ಮೇ 10 ರಂದು ನಡೆಯುವ ಚುನಾವಣೆಗೆ ಸಿದ್ದತೆ ನಡೆಸಿರುವ ಆಯೋಗ,ರಾಜ್ಯದಲ್ಲಿನ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.ಇವತ್ತು ಸುದ್ದಿಗೋಷ್ಟಿ ನಡೆಸಿದ ಚುನಾವಣಾ ಆಯೋಗ,ಈ ಬಾರಿ ಎಷ್ಟು ಮಂದಿ ಹೊಸ ಮತದಾರರಿದ್ದಾರೆ..ಮನೆಯಿಂದಲೇ ಮತದಾನ ಮಾಡುವವರು ಎಷ್ಟು ಮಂದಿ,ಎಷ್ಟು ನಗದು, ಉಡುಗೊರೆ ವಸ್ತುಗಳ ಜಪ್ತಿ ಮಾಡಲಾಗಿದೆ ಇತ್ಯಾದಿ ವಿವರಗಳನ್ನು ಬಹಿರಂಗಪಡಿಸಿದರು. -ರಾಜ್ಯದಲ್ಲಿ ಒಟ್ಟು ಮತದಾರರು- 5,30,85,566 -ಪುರುಷ ಮತದಾರರ ಸಂಖ್ಯೆ 2,66,82,156 – ಮಹಿಳಾ ಮತದಾರರ ಸಂಖ್ಯೆ 2,63,98,483 -16,04,285 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ- -ಹೊಸದಾಗಿ ಸೇರ್ಪಡೆಯಾದವರಲ್ಲಿ 11,71,558 ಯುವ ಮತದಾರರಾಗಿದ್ದು,…
ಗಂಗಾ ಸಪ್ತಮಿ ಸೂರ್ಯೋದಯ: 06.01 AM, ಸೂರ್ಯಾಸ್ತ : 06.34 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ವೈಶಾಖ ಮಾಸ, ಶುಕ್ಲ ಪಕ್ಷ, ವಸಂತ ಋತು, ಉತ್ತರಾಯಣ ತಿಥಿ: ಇವತ್ತು ಸಪ್ತಮಿ 01:38 PM ತನಕ ನಂತರ ಅಷ್ಟಮಿ ನಕ್ಷತ್ರ: ಇವತ್ತು ಪುನರ್ವಸು 07:00 AM ತನಕ ನಂತರ ಪುಷ್ಯ ಯೋಗ: ಇವತ್ತು ಧೃತಿ08:48 AM ತನಕ ನಂತರ ಶೂಲ ಕರಣ: ಇವತ್ತು ಗರಜ 12:30 AM ತನಕ ನಂತರ ವಣಿಜ 01:38 PM ತನಕ ನಂತರ ವಿಷ್ಟಿ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ:06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 02.43 AM to 04.30 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:48 ನಿಂದ ಮ.12:39 ವರೆಗೂ ಮೇಷ ರಾಶಿ: ಕೃಷಿ ಭೂಮಿ ಚಟುವಟಿಕೆಗಳು ಅಳವಡಿಸಿಕೊಳ್ಳಿ ನಿಮ್ಮದು ಬಂಗಾರದ ಜೀವನ ಆಗಲಿದೆ,ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಉದ್ಯಮದಾರರ ಮನಸ್ಸಿನಲ್ಲಿ ಒಂದು ಕೆಲಸ…
ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ಕಪ್ತಾನ ರೋಹಿತ್ ಶರ್ಮಾ ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದ ವಿರಾಮ ತೆಗೆದುಕೊಳ್ಳಬೇಕು. ಆ ಮೂಲಕ 2023ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಫ್ರೆಷ್ ಆಗಿ ಆಗಮಿಸಬೇಕೆಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ಮಂಗಳವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 208 ರನ್ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ತಂಡ 152 ರನ್ಗಳಿಗೆ ಸೀಮಿತವಾಗಿತ್ತು. ಆ ಮೂಲಕ 56 ರನ್ಗಳಿಂದ ಸೋಲು ಅನುಭವಿಸಿತು. ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾ 8 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ಸುನೀಲ್ ಗವಾಸ್ಕರ್, ರೋಹಿತ್ ಶರ್ಮಾ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ವಿರಾಮ ಪಡೆಯಬೇಕು ಹಾಗೂ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಫ್ರೆಶ್ ಮೈಂಡ್ನಲ್ಲಿ ಆಗಮಿಸಬೇಕು ಎಂದು ಸಲಹೆ ನೀಡಿದ್ದಾರೆ. “ರೋಹಿತ್ ಶರ್ಮಾ ಬ್ರೇಕ್ ಪಡೆದುಕೊಂಡು…
ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shahrukh Khan) ನಟನೆಯ ‘ಜವಾನ’ (Jawan) ಸಿನಿಮಾ ಜೂನ್ ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಈ ಚಿತ್ರದ ಮಹತ್ವದ ದೃಶ್ಯಗಳು ಮತ್ತು ಫೋಟೋಗಳು ಲೀಕ್ (Leake) ಆಗಿವೆ. ಈ ಕುರಿತು ಸ್ವತಃ ಶಾರುಖ್ ಖಾನ್ ಗರಂ ಆಗಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳಬೇಕಾದ ದೃಶ್ಯ ಮತ್ತು ಫೋಟೋಗಳು ಲೀಕ್ ಆಗುತ್ತಿರುವುದಕ್ಕೆ ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಈ ಸಿನಿಮಾವನ್ನು ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಶಾರುಖ್ ಖಾನ್, ದೃಶ್ಯಗಳು ಸೋರಿಕೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಲಿದೆ. ಹೀಗಾಗಿ ಲೀಕ್ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಶಾರುಖ್ ಖಾನ್ ಮನವಿಯನ್ನು ಪುರಸ್ಕರಿಸಿರುವ ದೆಹಲಿ ಹೈಕೋರ್ಟ್ (High Court) , ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವ ದೃಶ್ಯಗಳನ್ನು ಕೂಡಲೇ ಡಿಲಿಟ್ ಮಾಡಬೇಕು ಎಂದು ಆದೇಶ…
ನವದೆಹಲಿ: ‘ಮನ್ ಕಿ ಬಾತ್’ ಒಂದು ಮಾಸಿಕ ಕಾರ್ಯಕ್ರಮ. ವರ್ಷದ ಪ್ರತೀ ತಿಂಗಳ ಕೊನೆ ಭಾನುವಾರದಂದು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುತ್ತದೆ. ಈ ‘ಮನ್ ಕಿ ಬಾತ್’ ಮೂಲಕ ದೇಶದ ಪ್ರಧಾನಿ ನರೇದ್ರ ಮೋದಿ ಅವರು ಪ್ರಜೆಗಳೊಂದಿಗೆ ಮಾತುಕತೆ ನಡೆಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳ ಕೊನೇ ಭಾನುವಾರ ನಡೆಸಿಕೊಡುವ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ ಶತಕ ಪೂರೈಸಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಏಪ್ರಿಲ್ 30ರಂದು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ನ 100ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಇದೀಗ ಮನ್ ಕೀ ಬಾತ್ ಶತಕದ ಆವೃತ್ತಿ ತಲುಪುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಸಂಭ್ರಮಿಸುವ ಸಲುವಾಗಿ ಬಿಜೆಪಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದೆ. ಈ ಕಾರ್ಯಕ್ರಮ ದೊಡ್ಡ ಸಂಖ್ಯೆಯ ಕೇಳುಗರನ್ನು ಹೊಂದಿದ್ದು, ಇದೀಗ ಬಾಲಿವುಡ್ ಹಿರಿಯ, ಬಹುಬೇಡಿಕೆ ನಟ ಅಮೀರ್ ಖಾನ್ ಮಾತನಾಡಿದ್ದಾರೆ. ಮನ್ ಕೀ ಬಾತ್ ಸಮಾವೇಶಕ್ಕೆ ಬಂದ ನಟ ಆಮೀರ್ ಖಾನ್ ಮಾಧ್ಯಮದೊಂದಿಗೆ…