Author: Prajatv Kannada

ಕಬ್ಜ ಬಾಕ್ಸಾಫೀಸ್ ಲೆಕ್ಕಚಾರಕ್ಕೆ ಆ ಮೇಲೆ ಬರೋಣ.. ಮೊದಲಿಗೆ ತೊಡೆ ತಟ್ಟಿ ಹೇಳಬೇಕಿರೋದು.. ಕಾಲರ್ ಮೇಲೆತ್ತಿ ಹೇಳಬೇಕಿರೋದು.. ಎದೆ ಉಬ್ಬಿಸಿ ಹೇಳಬೇಕಿರೋದು ಅಂದ್ರೆ ನಮ್ಮ ಕನ್ನಡ ಸಿನಿಮಾಗಳು ಪ್ರಪಂಚದ ಮೂಲೆ ಮೂಲೆಯನ್ನೂ ತಲುಪಿವೆ ಅನ್ನೋ ವಿಚಾರನ.. ಇದು ಆರ್.ಚಂದ್ರು ಕನಸು, ತಪಸ್ಸು.. ನಮ್ಮ ಕನ್ನಡ ಸಿನಿಮಾ ಯಾರಿಗೂ ಕಮ್ಮಿಯಿಲ್ಲ.. ನಮ್ಮ ಇಂಡಸ್ಟ್ರಿ ಚಿಕ್ಕದಲ್ಲ.. ನಮಗೆ ವಿಶ್ವದಾದ್ಯಂತ ಮಾರುಕಟ್ಟೆ ಇದೆ ಅಂತ ಶಥಪಥ ಹೆಜ್ಜೆ ಇಟ್ಟಿದ್ದು ನಿರ್ದೇಶಕ ಆರ್ ಚಂದ್ರು.. ಯೆಸ್ ಅತ್ತ ಜರ್ಮನ್‍ನ ಬರ್ಲಿನ್.. ಮಲೇಷಿಯಾ, ಇಂಡೋನೇಷಿಯಾ, ಯು.ಕೆ. ಯು.ಎಸ್, ಆಸ್ಟ್ರೇಲಿಯಾ, ಮಸ್ಕತ್ ಹೀಗೆ ಒಂದಾ ಎರಡಾ? ವಿಶ್ವದ ಮೂಲೆ ಮೂಲೆಯಲ್ಲೂ ಕನ್ನಡದ ಕಹಳೆ ಊದುತ್ತಿದ್ದಾರೆ.. ಲಾಭ-ನಷ್ಟ ಸೆಕೆಂಡರಿ, ನಮ್ಮ ಕನ್ನಡ ಜಗದ ಮೂಲೆ ಮೂಲೆ ತಲುಪಬೇಕು.. ಕನ್ನಡದ ಗತ್ತು ತಾಕತ್ತು ಎಂತದ್ದು ಎಂಬುದನ್ನ ವಿಶ್ವಕ್ಕೆ ತೋರಿಸಬೇಕು ಅನ್ನೋ ಮಹತ್ವಕಾಂಕ್ಷೆಯಲ್ಲಿ ಸಿನಿಮಾವನ್ನ ಆಯಾ ಭಾಗದ ಕನ್ನಡಿಗರಿಂದಲೇ ರಿಲೀಸ್ ಮಾಡಿಸಿದ್ದಾರೆ.. ಇಲ್ಲಿ ಪ್ರೊಫೆಷನಲ್ ಡಿಸ್ಟ್ರಿಬ್ಯೂಟರ್ ಅಂತ ಯಾರೂ ಇಲ್ಲ.. ಎಲ್ಲರೂ ನಮ್ಮ ಕನ್ನಡ…

Read More

ನವದೆಹಲಿ: ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆ ಕುರಿತಂತೆ ಕೇಂದ್ರ ಸರ್ಕಾರದೊಂದಿಗಿನ ಗೊಂದಲದ ಕುರಿತು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ಕಾನೂನು ಸಚಿವರೊಂದಿಗಿನ ಸಮಸ್ಯೆಗಳಲ್ಲಿ ಭಾಗಿಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯನ್ನು  ಸಮರ್ಥಿಸಿಕೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ‘ಪ್ರತಿಯೊಂದು ವ್ಯವಸ್ಥೆಯೂ ಪರಿಪೂರ್ಣವಾಗಿಲ್ಲ, ಆದರೆ ಇದು ಲಭ್ಯವಿರುವ ಅತ್ಯುತ್ತಮ ವ್ಯವಸ್ಥೆಯಾಗಿದೆ ಎಂದು ಹೇಳಿದ್ದಾರೆ. ಖಾಸಗಿ ಮಾಧ್ಯಮದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ, ‘ನ್ಯಾಯಾಂಗವನ್ನು ಸ್ವತಂತ್ರವಾಗಿಡಲು, ಹೊರಗಿನ ಪ್ರಭಾವಗಳಿಂದ ಅದನ್ನು ರಕ್ಷಿಸಬೇಕು. ಎಲ್ಲ ವ್ಯವಸ್ಥೆಯು ಪರಿಪೂರ್ಣವಾಗಿಲ್ಲ ಆದರೆ ಇದು ನಾವು ಅಭಿವೃದ್ಧಿಪಡಿಸಿದ ಅತ್ಯುತ್ತಮ ವ್ಯವಸ್ಥೆಯಾಗಿದೆ. ಆದರೆ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸುವುದು ಮುಖ್ಯ ಮೌಲ್ಯವಾಗಿದೆ. ನ್ಯಾಯಾಂಗವು ಹೊರಗಿನ ಪ್ರಭಾವಗಳಿಂದ ನಾವು ನ್ಯಾಯಾಂಗವನ್ನು ಪ್ರತ್ಯೇಕವಾಗಿ ಇರಿಸಬೇಕು. ಸ್ವತಂತ್ರವಾಗಿ ಇಡಬೇಕು ಎಂದು ಹೇಳಿದರು.ಇದೇ ವೇಳೆ ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಅನುಮೋದಿಸದಿರಲು ಸರ್ಕಾರದ ಕಾರಣಗಳನ್ನು ಕಾನೂನು ಸಚಿವ ಕಿರಣ್…

Read More

ನವದೆಹಲಿ: ದೇಶದಾದ್ಯಂತ ಕೆಲ ದಿನಗಳಿಂದ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 526 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಈವರೆಗೆ 5,30,802 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ 5,915 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಶೇ.98.80ರಷ್ಟು ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,41,58,703 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.ನಿನ್ನೆ 07,160 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 220,65,04,798 ಡೋಸ್ ಲಸಿಕೆ ಹಾಕಲಾಗಿದೆ. 24 ಗಂಟೆಯಲ್ಲಿ 88,511 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.

Read More

ಮಡಿಕೇರಿ: ಖಿನ್ನತೆಯಿಂದ (Mental Depression) ಬಳಲುತ್ತಿದ್ದ 7ನೇ ತರಗತಿಯ ವಿದ್ಯಾರ್ಥಿನಿ ತಮ್ಮ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವರಹಳ್ಳಿ ಗ್ರಾಮದ ಜಿತೇಂದ್ರ-ಅಕ್ಷತಾ ದಂಪತಿಯ ಪುತ್ರಿ ವೈಷ್ಣವಿ (13) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಸೋಮವಾರಪೇಟೆಯ ಖಾಸಗಿ ಶಾಲೆಯಲ್ಲಿ (Private School) 7ನೇ ತರಗತಿ ಓದುತ್ತಿದ್ದ ವೈಷ್ಣವಿ ಕಳೆದ ಒಂದು ವಾರದಿಂದಲೂ ಖಿನ್ನತೆಯಿಂದ ಬಳಲುತ್ತಿದ್ದಳು. ಭಾನುವಾರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ (Shanivarasanthe Police Station) ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.

Read More

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರೇತರ ಸದಸ್ಯರಾಗಿ‌  ಶಕುಂತಲಾ ದುಂಡಿಗೌಡರ ಅವರು ನೇಮಕವಾಗಿದ್ದಾರೆ. ಶಕುಂತಲಾ ದುಂಡಿಗೌಡರ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತವರು ಕ್ಷೇತ್ರ ಶಿಗ್ಗಾವಿ ಮೂಲದವರಾಗಿದ್ದಾರೆ. ಲೋಕಸೇವಾ ಆಯೋಗಕ್ಕೆ ಶಕುಂತಲಾ ಅವರ ನೇಮಕ  ಶಿಗ್ಗಾವಿ ಕ್ಷೇತ್ರದ ಜನಕ್ಕೆ ಖುಷಿ ತಂದಿದ್ದು, ಈ ಕಾರಣಕ್ಕಾಗಿ ಶಿಗ್ಗಾವಿ ಕ್ಷೇತ್ರದ ಸಾರ್ವಜನಿಕರು ಬೆಂಗಳೂರಿನ  ರೇಸ್ ಕೋರ್ಸ್ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು  ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಿಗ್ಗಾವಿ ಮತ ಕ್ಷೇತ್ರದ ಸ್ಥಳೀಯ ಮುಖಂಡರು ಹಾಗೂ ಸ್ವಾಮೀಜಿಗಳು ಹಾಜರಿದ್ದರು.

Read More

ಶಿವಮೊಗ್ಗ: ಶಿವಮೊಗ್ಗ (Shivamogga) ಜಿಲ್ಲಾಧಿಕಾರಿ ಕಚೇರಿ (DC Office) ಮೇಲೆ ಆಜಾನ್ (Azan) ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನನ್ನು ಜಯನಗರ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರು ಎಚ್ಚರಿಕೆ ನೀಡಿ ಠಾಣಾ ಜಾಮೀನಿನ ಮೇಲೆ ವಾಪಸ್ ಕಳುಹಿಸಿದ್ದಾರೆ. ಆಜಾನ್ ಕೂಗಿದ್ದ ಯುವಕನನ್ನು ರಾಗಿಗುಡ್ಡದ ನಿವಾಸಿ ಮೌಸಿನ್ (27) ಎಂದು ಗುರುತಿಸಲಾಗಿದೆ. ಈತ ನಿಷೇಧಿತ ಪಿಎಫ್‍ಐ ಸದಸ್ಯನಾಗಿದ್ದು, ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಘಟನೆಯೇನು? : ಆಜಾನ್ ಹಾಗೂ ಅಲ್ಲಾಹು ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಅವಹೇಳನ ಆರೋಪ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರು ಶಿವಮೊಗ್ಗದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮೌಸಿನ್ ಶಿವಮೊಗ್ಗದ ಜಿಲ್ಲಾಧಿಕಾರಿಯ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ್ದ. ಈ ವೇಳೆ ಆಜಾನ್ ಕೂಗಿ ಉದ್ಧಟತನ ತೋರಿದ ಯುವಕನಿಗೆ ಮುಸ್ಲಿಂ ಮುಖಂಡರು ಯುವಕನಿಗೆ ಬೈದು ಬುದ್ಧಿ ಹೇಳಿದ್ದರು. ಘಟನೆಗೆ ಸಂಬಂಧಿಸಿದಂತೆ ಆಜಾನ್ ಕೂಗುವುದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೌಸಿನ್‍ನನ್ನು ಜಯನಗರ ಠಾಣೆಗೆ ಕರೆತಂದು ಪೊಲೀಸರು ಎಚ್ಚರಿಕೆ ನೀಡಿ…

Read More

ಕೋಲಾರ : ಈ ರಾಜ್ಯದ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕೋಲಾರ ವಿಧಾನ ಸಭಾ ಕ್ಷೇತ್ರದ ಸ್ಪರ್ಧೆ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ  ಕ್ಷೇತ್ರದ ಆಯ್ಕೆ ವಿಚಾರದಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರವು ಸಹ ಒಂದು ಹಾಗಿತ್ತು ಎಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು ಹೇಳಿದರು. ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸುದ್ದಿಗಾರೊಂದಿಗೆ ಮಾತಾ‌ನಾಡಿದ ಅವರು ಕ್ಷೇತ್ರದ ಆಯ್ಕೆಯಲ್ಲಿ ಬಾದಾಮಿ ವರುಣಾ ಕೋಲಾರ ಕ್ಷೇತ್ರವು ಒಂದಾಗಿತ್ತು ಕೋಲಾರ‌ ಕ್ಷೇತ್ರಕ್ಕರ ಸತತವಾಗಿ ಮೂರು ಬಾರಿ ಬಂದಿದ್ದರು ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕು ಇನ್ನು ತೀರ್ಮಾನ ಮಾಡಿಲ್ಲ ಅದು ಹೈಕಮಾಂಡ್ ತೀರ್ಮಾನ ಅಂತ ಹೇಳಿದ್ದಾರೆ. Video Player 00:00 01:28 ಈ ರಾಜ್ಯದ ಪರಮೋಚ್ಚ ನಾಯಕ ಸಿದ್ದರಾಮಯ್ಯ ನನಗೆ ಕೋಲಾರದಲ್ಲಿ ಸ್ಪರ್ಧೆ ಮಾಡುವುದಕ್ಕೆ ಆಸೆ ಇದೆ ಆದರೆ ಹೈಕಮಾಂಡ್ ಎಲ್ಲಿ ಸೂಚಿಸುತ್ತದೆ ಅಲ್ಲಿ ಸರ್ಧೆ ಮಾಡುತ್ತೆನೆ ಅಂತ  ಈಗಾಗಲೆ ಹೇಳಿದ್ದಾರೆ ಅದು ಹೈಕಮಾಂಡ್ ಹಂತದಲ್ಲಿ ಚರ್ಚೆ ನಡೆಯುತ್ತಿದೆ…

Read More

ಕಲಬುರಗಿ: ವಿದ್ಯುತ್ ಶಾಕ್ (Current Shock) ಹೊಡೆದ ಪರಿಣಾಮ ತಾಯಿ ಸೇರಿದಂತೆ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಕಲಬುರಗಿಯ ಚಿಂಚೋಳಿ (Chincholi) ಪಟ್ಟಣದ ಧನಗರಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ನಿವಾಸಿಗಳಾದ ತಾಯಿ ಝರಣಮ್ಮ (45), ಮಕ್ಕಳಾದ ಸುರೇಶ್ (22) ಹಾಗೂ ಮಹೇಶ್ (20) ಮೃತ ದುರ್ದೈವಿಗಳು. ಸರ್ವಿಸ್ ವೈರ್ (Service Wire) ಕಡಿದು ನೆಲಕ್ಕೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದ್ದು, ತಾಯಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಶಿಡ್ಲಘಟ್ಟ:  ಪ್ರಜಾಪ್ರಭುತ್ವಕ್ಕೆ ಚುನಾವಣೆ ಮತ್ತು ಮತದಾನವೇ ಹಬ್ಬವಾಗಿದ್ದು, ಚುನಾವಣೆಯನ್ನು ಸ್ವಾಗತಿಸಿ ನಮ್ಮ ಮನೆ ಮತ್ತು ಗ್ರಾಮಗಳಲ್ಲಿ ಮತದಾನದ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ತಿಳಿಸಿದರು. ತಾಲೂಕಿನ ಚಾಗೆ ಗ್ರಾಮದ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿದ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ “ಮತದಾನಕ್ಕಿಂತ ಮತ್ತೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುತ್ತೇನೆ” ಎಂಬ ತಾಲೂಕು ಸ್ವೀಪ್ ಸಮಿತಿಯ ಘೋಷ ವಾಕ್ಯವನ್ನು ಉಚ್ಚರಿಸುವ ಮೂಲಕ ನೆರೆದಿದ್ದ ಸಾರ್ವಜನಿಕರಿಗೆ ಮತದಾನ ದ ಪ್ರತಿಜ್ಞೆಯನ್ನು ಬೋಧಿಸಿದರು. ನಂತರ ಮಾತನಾಡಿದ ಅವರು ಆಡಳಿತವನ್ನು ಗ್ರಾಮಗಳ ಮನೆ ಬಾಗಿಲಿಗೆ ತರುವ ಉದ್ದೇಶದಿಂದ ಕಾರ್ಯಕ್ರಮ ನಡೆಸುತ್ತಿದ್ದು, ಸಾರ್ವಜನಿಕರು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು. ಕಂದಾಯ ಇಲಾಖೆ ಗ್ರೇಡ್ 2  ತಹಶಿಲ್ದಾರ್ ಶ್ರೀನಿವಾಸಲು ನಾಯ್ಡು ಅಬ್ಲೂಡು ಪಶುವೈದ್ಯಕೀಯ ಇಲಾಖೆ ಕಟ್ಟಡಕ್ಕೆ ಮೂರು ಕುಂಟೆ ಹಾಗು ವಿವಿಧೋದ್ದೇಶಗಳಿಗೆ ಒಟ್ಟು 30 ಕುಂಟೆ…

Read More

ಧಾರವಾಡ: ಹಲವು ಬೇಡಿಕೆಗಳಿಗೆ ಆಗ್ರಹಿಸಿ ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಮಾರ್ಕೋಪೊಲೊ‌ ಕಾರ್ಮಿಕರ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ೮ ದಿನಗಳಿಂದ ಸತತವಾಗಿ ಈ‌ ಕಾರ್ಮಿಕರು ಧರಣಿ ನಡೆಸಿದರೂ ಯಾರೂ ಕೂಡಾ ಇವರ ಮನವಿ ಆಲಿಸಿಲ್ಲ, ವೇತನ ಪರಿಷ್ಕರಣೆ ಮಾಡಬೇಕು, ಬೇರೆ ರಾಜ್ಯಕ್ಕೆ ಕಾರ್ಮಿಕರ ವರ್ಗಾವಣೆ ಮಾಡಬಾರದು ಹಾಗೂ ಹಿಂದೆ ಪ್ರತಿಭಟನೆ ಮಾಡಿದ‌ ಕಾರ್ಮಿಕರಿಗೆ ಕೆಲಸದಿಂದ ತೆಗೆದು ಹಾಕಲಾಯಿದ್ದು, ಅವರನ್ನ ಮತ್ತೆ ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಧರಣಿ ನಿರತ ಕಾರ್ಮಿಕರು ಆಗ್ರಹಿಸಿದ್ದಾರೆ. ಈಗಾಗಲೇ ಹಲವು ಕಾರ್ಮಿಕ ಸಂಘಟನೆ ಈ ಧರಣಿಗೆ ಬೆಂಬಲ‌ ಸೂಚಿಸಿದ್ದಾರೆ‌. ತಮ್ಮ ಕೆಲಸಕ್ಕೆ ಹಾಜರಾಗುತ್ತಲೇ ಈ ಕಾರ್ಮಿಕರು ಧರಣಿಗೆ ಕೂಡ ಬಂದು ಸೇರುತಿದ್ದಾರೆ.

Read More