ಕೆ.ಆರ್.ಪುರ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ,ಕ್ರೀಡಾಸ್ಪೂರ್ತಿಯೊಂದಿಗೆ ಆಟವಾಡುವಂತೆ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಹೇಳಿದರು. ಕ್ಷೇತ್ರದ ಬಸವನಪುರ ಜೆ.ಪಿ.ಬಾಯ್ಸ್ ವತಿಯಿಂದ ಪ್ರಥಮ ವರ್ಷದ ಬೈರತಿ ಬಸವರಾಜ್ ಕಬ್ಬಡ್ಡಿ ಕಪ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಸಹಜವಾಗಿ ಯುವಕರಲ್ಲಿ ಕ್ರೀಡಾಸಕ್ತಿ ಇರಬೇಕು, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮಾನಸಿಕ ಆರೋಗ್ಯವನ್ನು ಪಡೆಯಬಹುದಾಗಿದೆ. ದೈಹಿಕವಾಗಿ ಆರೋಗ್ಯ ಸ್ಥಿತಿಯಲ್ಲಿದ್ದಾಗ ಮಾತ್ರ ಯಾವುದೇ ಕೆಲಸವನ್ನು ಉತ್ಸಾಹದಿಂದ ಮಾಡಬಹುದು ಎಂದು ಹೇಳಿದರು. ಕ್ರೀಡೆಯಲ್ಲಿ ಜಾತಿ ಧರ್ಮ ವರ್ಗ ಎನ್ನುವುದು ಇರುವುದಿಲ್ಲ,ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸ್ನೇಹ ಸಂಬಂಧ ಹೆಚ್ಚಾಗುತ್ತದೆ, ಸ್ಪರ್ಧೆಯಲ್ಲಿ ಗೆದ್ದವರಿಗೆ ಯುವಕರಿಗೆ ಬಹುಮಾನ ಹಾಗೂ ಸೋತ ತಂಡಗಳಿಗೆ ಅನುಭವ ದೊರೆಯಲಿದೆ. ಸೋಲು ಗೆಲುವಿನ ಮೆಟ್ಟಿಲಾಗಿದ್ದು,ಸೋಲಿಗೆ ಅಂಜದೆ ಕ್ರೀಡಾ ಸ್ಪೂರ್ತಿ ಮೆರೆಯುವಂತೆ ಸಲಹೆ ನೀಡಿದರು. ಈಗ ವಾರ್ಡ್ ಮಟ್ಟದಲ್ಲಿ ನಡೆಯುತ್ತಿದ್ದು ಮುಂದಿನ ಬಾರಿಗೆ ಕೆ.ಆರ್ ಪುರ ಕ್ಷೇತ್ರದ ರಾಜ್ಯಾದ್ಯಂತ ಮಟ್ಟದಲ್ಲಿ ಕಬ್ಬಡಿ ಕ್ರೀಡೆಯನ್ನಾ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್, ಮುಖಂಡರಾದ ದುಶ್ಯಂತ್…
Author: Prajatv Kannada
ಬೆಂಗಳೂರು, ಮಾರ್ಚ್ 19: ತಿಗಳ ಸಮಾಜವನ್ನು ಮೇಲೆತ್ತಬೇಕೆಂದೇ ನಿಗಮ ಸ್ಥಾಪನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ತಿಗಳ ಸಮುದಾಯ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ ಹಿನ್ನೆಲೆಯಲ್ಲಿ ಇಂದು ತುಮಕೂರಿನ ಜ್ಞಾನಂದಾಪುರಿ ಮಹಾಸ್ವಾಮಿ ನೇತೃತ್ವದಲ್ಲಿ ತಿಗಳ ಸಮುದಾಯದವರು ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ತಿಗಳ ಸಮಾಜದ ಬಾಂಧವರು ತಮ್ಮ ವೃತ್ತಿಯನ್ನು ಸಮರ್ಥವಾಗಿ ಮಾಡಿದ್ದಾರೆ. ಯುವ ಜನಾಂಗಕ್ಕೆ ವಿದ್ಯೆ ಕೊಟ್ಟು ಮುಂದೆ ಬರಬೇಕೆಂದು ಎಂದು ಇಡೀ ಜೀವನವನ್ನೇ ಸವೆಸಿದ್ದಾರೆ. ತಿಗಳ ಸಮಾಜ ಶ್ರಮಿಕ ಸಮಾಜ ವಾಗಿದ್ದು, ಮಾಡಿಯೂ ಮಾಡಿದ್ದೇವೆ ಎಂದು ಹೇಳಿಕೊಳ್ಳದ ಸಮಾಜ. ಸಂಭಾವಿತ ಸಜ್ಜನ ಸಮಾಜ ಇದು. ಈ ಸಮಾಜವನ್ನು ಗುರುತಿಸಬೇಕೆಂದು ಮನದಾಳದ ಇಚ್ಛೆ ಇತ್ತು. ಇದಕ್ಕೆ ನೆ.ಲ.ನರೇಂದ್ರ ಬಾಬು ಅವರು ಬಹಳಷ್ಟು ಪುಷ್ಟಿ, ಶಕ್ತಿಯನ್ನು ನೀಡಿದ್ದಾರೆ. ಹಾಗಾಗಿ ನಿಗಮ ಸ್ಥಾಪನೆ ಮಾಡಲಾಯಿತು. ಇದಕ್ಕಾಗಿ ಆಯವ್ಯಯದಲ್ಲಿ ವಿಶೇಷವಾದ ಅನುದಾನವನ್ನು ಮೀಸಲಿಡಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಎಂಬ ಮಂತ್ರದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸದ್ಬಳಕೆಯಾಗಬೇಕು ಈ ಅವಕಾಶವನ್ನು ಸದುಪಯೋಗ…
ಬೈಕ್ ಗೆ KSRTC ಬಸ್ ಗುದ್ದಿದ ಪರಿಣಾಮ, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ನಡೆದಿದೆ. ಬಸ್ ಚಾಲಕ ಟೋಲ್ ಕಟ್ಟುವುದನ್ನು ತಪ್ಪಿಸಲು ಹೋಗಿ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಮೈಸೂರು ರಸ್ತೆಯ ಕಣ್ಮಿಣಿಕೆ ಬಳಿ ಇದ್ದ ಟೋಲ್ ಬಳಿ ಈ ಅವಘಡ ಸಂಭವಿಸಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಹೊರಟಿತ್ತು. ಕಣ್ಮಿಣಿಕೆ ಬಳಿ ಬೈಕ್ ಸವಾರರು ಬರುತ್ತಿದ್ದರು. ಆದರೆ, ಬಸ್ ಚಾಲಕ ಟೋಲ್ ಕಟ್ಟಬೇಕಾಗುತ್ತದೆ ಎಂಬ ಕಾರಣಕ್ಕೆ ಪುನಃ ರಿಟರ್ನ್ ತೆಗೆದುಕೊಂಡು ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ಸಂಚರಿಸಿದ್ದೇ ಈ ಅವಘಡಕ್ಕೆ ಕಾರಣವಾಗಿದೆ. ಬಸ್ ಏಕಮುಖ ಮಾರ್ಗದಲ್ಲಿ ವಾಪಸ್ ಬರುತ್ತಿರುವುದು ಸವಾರರ ಗಮನಕ್ಕೆ ಬಂದಿಲ್ಲ. ಹೀಗಾಗಿ ಬೈಕ್‌ಗೆ ಬಸ್ ಗುದ್ದಿದೆ. ಇದರಿಂದ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತನ ಹಾಗೂ ಗಾಯಗೊಂಡವನ ವಿವರ ಇನ್ನೂ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು…
ಬೆಂಗಳೂರು: ಬೆಂಗಳೂರಿನಲ್ಲಿ ರ್ಯಾಪಿಡೋ ಬೈಕ್ ನಿಷೇಧಿಸುವಂತೆ ಒತ್ತಾಯಿಸಿ ಆಟೋ ಚಾಲಕರು ಕೊಟ್ಟಿರುವ ಮುಷ್ಕರಕ್ಕೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಾಥ್ ಕೊಟ್ಟಿದ್ದಾರೆ. ರಾಜಧಾನಿಯಲ್ಲಿ ವಿದಾನಸಭಾ ಚುನಾವಣೆಯ ತಯಾರಿ ಗರಿಗೆದರಿದ್ದು, ಮತದಾರರನ್ನ ಸೆಳೆಯಲು ಇನ್ನಿಲ್ಲದ ಕಸರತ್ತನ್ನು ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಅದರ ಭಾಗವಾಗಿ ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ದಿನೇಶ್ ಗುಂಡುರಾವ್ ಆಕ್ಟೀವ್ ಆಗಿದ್ದು, ಆಟೋ ಚಾಲಕರ ಮುಷ್ಕರಕ್ಕೆ ಸಾಥ್ ಕೊಟ್ಟಿದ್ದಾರೆ. ಆಟೋ ಚಾಲಕರಿಗೆ ಯೂನಿಫಾರಂ ನೀಡುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬಳಿಕ ಮಾತನಾಡಿದರು. ರ್ಯಾಪಿಡೋ ಬೈಕ್ ಟ್ಯಾಕ್ಸಿ ಗಳಿಂದ ಆಟೋ ಚಾಲಕರ ಜೀವನ ಹಾಳಾಗುತ್ತಿದೆ. ಆಟೋ ಚಾಲಕರ ಜೀವನ ನಿತ್ಯವೂ ನರಕ ಆಗುತ್ತಿದೆ. ರ್ಯಾಪಿಡೋ ಬೈಕ್ ಗಳಿಂದ ಆಟೋ ಚಾಲಕರ ಜೀವನ ಕಸಿದಿದೆ. ಹೀಗಾಗಿ ರ್ಯಾಪಿಡೋ ಬೈಕ್ ಗಳನ್ನ ನಗರದಲ್ಲಿ ಬ್ಯಾನ್ ಮಾಡಬೇಕು. ಬ್ಯಾನ್ ಆಗಲಿಲ್ಲ ಅಂದ್ರೆ ಕಾಂಗ್ರೆಸ್ ಪಕ್ಷದಿಂದ ಹೋರಾಟ ಖಚಿತ ಎಂದು ಶ್ರೀರಾಮಪುರದಲ್ಲಿ ಕಾಂಗ್ರೆಸ್ ಮುಖಂಡ ಸತ್ಯ ಆಯೋಜನೆ…
ಬೆಂಗಳೂರು. ಮಾ. 18. ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಸದಾನಂದಗೌಡ ಅವರು ತಮ್ಮ 70 ನೇ ವರ್ಷದ ಹುಟ್ಟು ಹಬ್ಬ ಆಚರಣೆಯ ಸಂದರ್ಭದಲ್ಲಿ, ಅಬಕಾರಿ ಸಚಿವರಾದ ಕೆ.ಗೋಪಾಲಯ್ಯನವರು ಶುಭಾಶಯ ಕೋರಿದರು.ಇದೇ ವೇಳೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ 20 ಮಂದಿ ಆದಿಜಾಂಬವ ಫಲಾನುಭವಿಗಳಿಗೆ ಎಲೆಕ್ಟ್ರಿಕಲ್ ಬೈಕ್ ಹಾಗೂ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಎಸ್ ಟಿ ಸೋಮಶೇಖರ್, ಡಾ. ಸಿ.ಎನ್.ಅಶ್ವಥ್ ನಾರಾಯಣ್, ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಉಪಮೇಯರ್ ಎಸ್ ಹರೀಶ್, ಬಿಜೆಪಿ ಉತ್ತರ ಘಟಕದ ಅಧ್ಯಕ್ಷ ನಾರಾಯಣಗೌಡ, ಅವಿನ್ ಆರಾಧ್ಯ, ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಒಂದೇ ಒಂದು ಕ್ಷೇತ್ರ ಇಲ್ಲದಂತಾಗಿದೆ ಎಂದು ಆಡಳಿತ ಪಕ್ಷ ಬಿಜೆಪಿ ವ್ಯಂಗ್ಯವಾಡಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದ ಜನ ಇವರನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ತಿರಸ್ಕರಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಇವರು ಎಲ್ಲಿ ನಿಂತರೂ ಸೋಲುವುದು ಖಚಿತ! ಎಂದು ಬಿಜೆಪಿ ಟಾಂಗ್ ನೀಡಿದೆ. ಇನ್ನೂ ಕೋಲಾರದಿಂದ ಸ್ಪರ್ಧೆಗೆ ಮುಂದಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋಲಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದರು. ಅಲ್ಲದೇ ವರುಣಾದಿಂದ ಸ್ಪರ್ಧೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಕ್ಷೇತ್ರ ಗೊಂದಲದಲ್ಲಿದ್ದು, ಆಡಳಿತ ಪಕ್ಷ ಬಿಜೆಪಿ ಟೀಕೆಗೆ ಕಾರಣವಾಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ರ್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸುವಂತೆ ನಗರದ 21 ಆಟೋ ಚಾಲಕರ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿವೆ. ಈ ಹಿನ್ನಲೆ ನಾಳೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿಯವರೆಗೆ ಆಟೋ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ, ರಾಜ್ಯ ಸರ್ಕಾರಕ್ಕೆ 3 ದಿನಗಳ ಗಡುವು ನೀಡಿದ್ದರು. ಇಂದಿಗೆ ಸಾರಥಿಗಳು ನೀಡಿದ್ದ ಗಡುವ ಮುಗಿದಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11ಗಂಟೆಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರು ಪ್ಲಾನ್ ಮಾಡಲಾಗಿದೆ. ಮೂರು ದಿನಗಳ ಕಾಲ ಆಟೋ ಚಾಲಕರು ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಸರ್ಕಾರ ಮಾತ್ರ ಈ ಕುರಿತು ಮಾತಾಡಿಲ್ಲ. ಈ ಕಾರಣ ಬೆಂಗಳೂರಿನ 21ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದೆ. ಒಟ್ಟೂ 2 ಲಕ್ಷದ 10 ಸಾವಿರ…
ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಇದ್ದ ಶೇ. 50 ರಷ್ಟು ರಿಯಾಯಿತಿ ಅವಕಾಶ ನಿನ್ನೆ ಮುಕ್ತಾಯಗೊಂಡಿದೆ. ಇದೇ ತಿಂಗಳ ಮಾರ್ಚ್ 4ರಿಂದ 18ರವರೆಗಿನ ಅವಧಿಯಲ್ಲಿ ₹ 4.25 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹ 12.31 ಕೋಟಿ ದಂಡ ಸಂಗ್ರಹವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವನೆ ಒಪ್ಪಿದ್ದ ರಾಜ್ಯ ಸರ್ಕಾರ, ಮೊದಲ ಸುತ್ತಿನಲ್ಲಿ ಫೆ. 3ರಿಂದ 11ರವರೆಗೆ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ, ಎರಡನೇ ಸುತ್ತಿನಲ್ಲಿ ರಿಯಾಯಿತಿ ವಿಸ್ತರಿಸಲಾಗಿತ್ತು. ನಗರದ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್- ಬೆಂಗಳೂರು ಒನ್ ಕೇಂದ್ರಗಳಲ್ಲಿ ಜನರು ದಂಡ ಪಾವತಿಸಿದ್ದಾರೆ. ಪೇಟಿಎಂ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಂಡ ಕಟ್ಟಿದ್ದಾರೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ ವಾರ್ಡ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಬಹು ಉಪಯೋಗಿ ಕಟ್ಟಡ, ಶ್ರೀ ಮುತ್ತು ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಹಾಗೂ ಮಾರಿಯಮ್ಮ ದೇವಸ್ಥಾನ ನವೀಕರಣ ಹಾಗೂ ಹೆಬ್ಬಾಗಿಲು ಉದ್ಘಾಟನೆ ಕಾರ್ಯಕ್ರಮ. ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಮಂಡಲ ಬಿಜೆಪಿ ಅಧ್ಯಕ್ಷರಾದ ರಾಘವೇಂದ್ರರಾವ್, ಪತ್ರಕರ್ತರಾದ ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು, ಶ್ರೀಮತಿ ಶಕೀಲ ಮುನಿರಾಜುರವರು, ಉಪಮಹಾಪೌರರಾದ ರಂಗಣ್ಣರವರು, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ಕುಮಾರ್, ಅಂತರಾಷ್ಟ್ರಿಯ ಬಾಡಿ ಬಿಲ್ಡರ್ ಪಾನಿಪುರಿ ಕಿಟ್ಟಿರವರು ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪಾ ಬೆಳಗಿಸಿ ಉದ್ಘಾಟನೆ ನೇರವೆರಿಸಿದರು. ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ದಯಾನಂದನಗರ ವಾರ್ಡ್ ಆರ್ಥಿಕವಾಗಿ ಹಿಂದುಳಿದ ಮತ್ತು ಕೂಲಿಕಾರ್ಮಿಕರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ ಇಲ್ಲಿನ ನಿವಾಸಿಗಳಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ ನೀಡುವ ದಿನವಾಗಿದೆ .ಸಂವಿಧಾನ ಶಿಲ್ಪಿ ಭಾರತರತ್ನ…
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರೇತರ ಸದಸ್ಯರಾಗಿ ಶಕುಂತಲಾ ದುಂಡಿಗೌಡರ ಅವರು ನೇಮಕವಾಗಿದ್ದಾರೆ. ಶಕುಂತಲಾ ದುಂಡಿಗೌಡರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರ ಶಿಗ್ಗಾವಿ ಮೂಲದವರಾಗಿದ್ದಾರೆ. ಲೋಕಸೇವಾ ಆಯೋಗಕ್ಕೆ ಶಕುಂತಲಾ ಅವರ ನೇಮಕ ಶಿಗ್ಗಾವಿ ಕ್ಷೇತ್ರದ ಜನಕ್ಕೆ ಖುಷಿ ತಂದಿದ್ದು, ಈ ಕಾರಣಕ್ಕಾಗಿ ಶಿಗ್ಗಾವಿ ಕ್ಷೇತ್ರದ ಸಾರ್ವಜನಿಕರು ಬೆಂಗಳೂರಿನ ರೇಸ್ ಕೋರ್ಸ್ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಿಗ್ಗಾವಿ ಮತ ಕ್ಷೇತ್ರದ ಸ್ಥಳೀಯ ಮುಖಂಡರು ಹಾಗೂ ಸ್ವಾಮೀಜಿಗಳು ಹಾಜರಿದ್ದರು.