ಕಬ್ಜ ಬಾಕ್ಸಾಫೀಸ್ ಲೆಕ್ಕಚಾರಕ್ಕೆ ಆ ಮೇಲೆ ಬರೋಣ.. ಮೊದಲಿಗೆ ತೊಡೆ ತಟ್ಟಿ ಹೇಳಬೇಕಿರೋದು.. ಕಾಲರ್ ಮೇಲೆತ್ತಿ ಹೇಳಬೇಕಿರೋದು.. ಎದೆ ಉಬ್ಬಿಸಿ ಹೇಳಬೇಕಿರೋದು ಅಂದ್ರೆ ನಮ್ಮ ಕನ್ನಡ ಸಿನಿಮಾಗಳು ಪ್ರಪಂಚದ ಮೂಲೆ ಮೂಲೆಯನ್ನೂ ತಲುಪಿವೆ ಅನ್ನೋ ವಿಚಾರನ.. ಇದು ಆರ್.ಚಂದ್ರು ಕನಸು, ತಪಸ್ಸು.. ನಮ್ಮ ಕನ್ನಡ ಸಿನಿಮಾ ಯಾರಿಗೂ ಕಮ್ಮಿಯಿಲ್ಲ.. ನಮ್ಮ ಇಂಡಸ್ಟ್ರಿ ಚಿಕ್ಕದಲ್ಲ.. ನಮಗೆ ವಿಶ್ವದಾದ್ಯಂತ ಮಾರುಕಟ್ಟೆ ಇದೆ ಅಂತ ಶಥಪಥ ಹೆಜ್ಜೆ ಇಟ್ಟಿದ್ದು ನಿರ್ದೇಶಕ ಆರ್ ಚಂದ್ರು.. ಯೆಸ್ ಅತ್ತ ಜರ್ಮನ್‍ನ ಬರ್ಲಿನ್.. ಮಲೇಷಿಯಾ, ಇಂಡೋನೇಷಿಯಾ, ಯು.ಕೆ. ಯು.ಎಸ್, ಆಸ್ಟ್ರೇಲಿಯಾ, ಮಸ್ಕತ್ ಹೀಗೆ ಒಂದಾ ಎರಡಾ? ವಿಶ್ವದ ಮೂಲೆ ಮೂಲೆಯಲ್ಲೂ ಕನ್ನಡದ ಕಹಳೆ ಊದುತ್ತಿದ್ದಾರೆ.. ಲಾಭ-ನಷ್ಟ ಸೆಕೆಂಡರಿ, ನಮ್ಮ ಕನ್ನಡ ಜಗದ ಮೂಲೆ ಮೂಲೆ ತಲುಪಬೇಕು.. ಕನ್ನಡದ ಗತ್ತು ತಾಕತ್ತು ಎಂತದ್ದು ಎಂಬುದನ್ನ ವಿಶ್ವಕ್ಕೆ ತೋರಿಸಬೇಕು ಅನ್ನೋ ಮಹತ್ವಕಾಂಕ್ಷೆಯಲ್ಲಿ ಸಿನಿಮಾವನ್ನ ಆಯಾ ಭಾಗದ ಕನ್ನಡಿಗರಿಂದಲೇ ರಿಲೀಸ್ ಮಾಡಿಸಿದ್ದಾರೆ.. ಇಲ್ಲಿ ಪ್ರೊಫೆಷನಲ್ ಡಿಸ್ಟ್ರಿಬ್ಯೂಟರ್ ಅಂತ ಯಾರೂ ಇಲ್ಲ.. ಎಲ್ಲರೂ ನಮ್ಮ ಕನ್ನಡ…
Author: Prajatv Kannada
ಸಿನಿಮಾಗಳಿಂದ ದೂರವಿರುವ ಸ್ಯಾಂಡಲ್ವುಡ್ ನಟಿ ಡೈಸಿ ಬೋಪಣ್ಣ ಇದೀಗ ಸುಂದರವಾದ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. ಸದ್ಯ ಡೈಸಿ ಬೋಪಣ್ಣ ನಯಾ ಫೋಟೋ ಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಿನಿಮಾಗಳಿಂದ ದೂರವಿರುವ ಡೈಸಿ ಬೋಪಣ್ಣ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸುಂದರವಾದ ಲೈಟ್ ಪಿಂಕ್ ಕಲರ್ ರೋಸ್ಗಳನ್ನು ಹಿಡಿದು ಡೈಸಿ ಪೋಸ್ ಕೊಟ್ಟಿದ್ದಾರೆ. ನಟಿ ಕೂದಲನ್ನು ಫ್ರೀಯಾಗಿ ಬಿಟ್ಟು ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಬ್ಲ್ಯಾಕ್ ಕಲರ್ ಲೆದರ್ ಟೈಪ್ ಸ್ಕರ್ಟ್ ಧರಿಸಿದ್ದರು ಡೈಸಿ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಇವರು ಶೇರ್ ಮಾಡುತ್ತಲೇ ಇರುತ್ತಾರೆ. ಸದ್ಯ ನಟಿ ಇನ್ಸ್ಟಾಗ್ರಾಮ್ನಲ್ಲಿ 100 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದು ಇದುವರೆಗೂ 200ಕ್ಕೂ ಹೆಚ್ಚು ಪೋಸ್ಟ್ಗಳನ್ನು ಮಾಡಿದ್ದಾರೆ.
ವಿಶಾಖಪಟ್ಟಣಂ: ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಭಾರತ ತಂಡ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದೀಗ ಉಭಯ ತಂಡಗಳು ಭಾನುವಾರ ಇಲ್ಲಿನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಮೈದಾನದಲ್ಲಿ ನಡೆಯುವ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿವೆ. ಕೌಟುಂಬಿಕ ಕಾರಣಗಳಿಂದ ರೋಹಿತ್ ಶರ್ಮಾ ಅವರು ಮೊದಲನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುವ ಮೂಲಕ ಯಶಸ್ವಿಯಾಗಿದ್ದರು. ಇದೀಗ ಎರಡನೇ ಪಂದ್ಯಕ್ಕೆ ರೋಹಿತ್ ಶರ್ಮಾ ಮರಳುವ ಮೂಲಕ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಮಿಂಚಿನ ದಾಳಿ ಹಾಗೂ ಕೆ.ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅದ್ಭುತ ಬ್ಯಾಟಿಂಗ್ ಸಹಾಯದಿಂದ ಟೀಮ್ ಇಂಡಿಯಾ, ಆರಂಭಿಕ ಪಂದ್ಯದಲ್ಲಿ ಐದು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತ್ತು. ಶಮಿ ಹಾಗೂ ಸಿರಾಜ್ ತಲಾ ಮೂರು ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಆ ಮೂಲಕ ಆಸ್ಟ್ರೇಲಿಯಾ ತಂಡವನ್ನು 188ಕ್ಕೆ ಆಲ್‌ಔಟ್ ಮಾಡುವಲ್ಲಿ ಸಫಲರಾಗಿದ್ದರು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ…
ಮುಂಬೈ: ಆಲ್‌ರೌಂಡರ್ ಸೋಫಿ ಡಿವೈನ್ (Sophie Devine) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ (RCB) ತಂಡವು, ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಬಾರಿಸಿತ್ತು. 189 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದ ಆರ್‌ಸಿಬಿ ತಂಡ 15.3 ಓವರ್‌ಗಳಲ್ಲೇ 189 ರನ್ ಚಚ್ಚಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಆ ಮೂಲಕ ಸತತ ಎರಡನೇ ಗೆಲುವು ಪಡೆದುಕೊಂಡಿತು. ಜೊತೆಗೆ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೇರಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂದಾನ (Smriti Mandhana), ಸೋಫಿ ಡಿವೈನ್ ಜೋಡಿ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ಪತನಕ್ಕೆ ಈ ಜೋಡಿ 57 ಎಸೆತಗಳಲ್ಲಿ ಸ್ಫೋಟಕ 125 ರನ್ ಚಚ್ಚಿ…
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆದ್ದಿರುವ ಭಾರತ (India Vs Australia) ತಂಡಕ್ಕೆ ಇದೀಗ ಏಕದಿನ ಸರಣಿಯನ್ನೂ ಗೆಲ್ಲುವ ಅವಕಾಶ ಸಿಕ್ಕಿದೆ. ಉಭಯ ದೇಶಗಳ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿ ಶುಕ್ರವಾರ (ಮಾ.19) ಆರಂಭವಾಗಿದೆ. ಈಗಾಗಲೇ ಸರಣಿಯ ಮೊದಲ ಪಂದ್ಯ ಮುಂಬೈನಲ್ಲಿ ನಡೆದಿದ್ದು, ಭಾರತ ಐದು ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ (Team India) ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಏಕದಿನ ಪಂದ್ಯ ವಿಶಾಖಪಟ್ಟಣದಲ್ಲಿ (visakhapatnam) ನಡೆಯುತ್ತಿದ್ದು, ಈ ಪಂದ್ಯದಲ್ಲೂ ಟೀಂ ಇಂಡಿಯಾ ಗೆದ್ದರೆ, ಈ ಸರಣಿಯನ್ನೂ ಭಾರತ ತನ್ನ ಖಾತೆಗೆ ಹಾಕಿಕೊಳ್ಳಲಿದೆ. ಇತ್ತ ಮೊದಲ ಪಂದ್ಯ ಸೋತಿರುವ ಆಸ್ಟ್ರೇಲಿಯಾ, ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ಪ್ರಯತ್ನಿಸಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಅಮೋಘ ಆಟ ಪ್ರದರ್ಶಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಇಬ್ಬರೂ ತಲಾ 3 ವಿಕೆಟ್ ಪಡೆದರು. ಹೀಗಾಗಿ ಕಾಂಗರೂಗಳು ಕೇವಲ…
ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ಸ್ ಮಾರುಕಟ್ಟೆ ಯಲ್ಲಿ ಚಿನ್ನದ ಬೆಲೆ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ದರ ತಲುಪಿ (10 ಗ್ರಾಂ.ಗೆ ರೂ. 59,461), ದಿನದ ಅಂತ್ಯದಲ್ಲಿ 59,420 ರೂಪಾಯಿಗೆ ಸ್ಥಿರವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಬಂಗಾರದ ಧಾರಣೆ 60,000 ರೂ. ದಾಟುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಮತ್ತು ಚಿನ್ನದ ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಏಪ್ರಿಲ್ನ ಭವಿಷ್ಯದ ಮಾರುಕಟ್ಟೆ ಬೆಲೆಯು ಕಳೆದ ಗುರುವಾರದ ಮುಕ್ತಾಯದ ಬೆಲೆಗಿಂತಲೂ 1,414 ರೂಪಾಯಿ (ಶೇ. 2.44ರಷ್ಟು) ಹೆಚ್ಚಳಕ್ಕೆ ಸ್ಥಿರಗೊಂಡಿತು. ಏತನ್ಮಧ್ಯೆ, ಮೇ ತಿಂಗಳಿನ ಭವಿಷ್ಯದ ಬೆಳ್ಳಿ ದರವು ಶೇ. 3 ರಷ್ಟು ಏರಿಕೆಯಾಗಿ (ಪ್ರತಿ ಕೆಜಿಗೆ ರೂ 2,118) ರೂ 68,649 ಕ್ಕೆ ತಲುಪಿತು. ಅಮೆರಿಕ ಮತ್ತು ಯೂರೋಪ್ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ನಿವಾರಣೆಯಾಗದ ಹಿನ್ನೆಲೆಯಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಏರಿಕೆಯ ಪ್ರವೃತ್ತಿಗಳು ಹಾಗೆಯೇ ಮುಂದುವರಿಯುವ ಸಾಧ್ಯತೆ ಇರುವುದರಿಂದ ಭಾರತದ ಎಂಸಿಎಕ್ಸ್ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯು ಮುಂದಿನ ವಾರ 60,000 ರೂ.ಗಳನ್ನು ಮೀರಬಹುದಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.…
ನವದೆಹಲಿ: ದೇಶದಲ್ಲಿ ಇತ್ತೀಚಿಗೆ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೆ, ಹೊಸ ರೂಪಾಂತರ XBB 1.16 ನ 76 ಮಾದರಿಗಳು ಪತ್ತೆಯಾಗಿವೆ. ಕರ್ನಾಟಕದಾದ್ಯಂತ 30, ಮಹಾರಾಷ್ಟ್ರ 29, ಪುದುಚೇರಿ 7, ದೆಹಲಿ 5, ತೆಲಂಗಾಣ 2 ಗುಜರಾತ್, ಹಿಮಾಚಾಲ ಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಒಂದೊಂದು ಮಾದರಿಗಳು ಕಂಡುಬಂದಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ INSACOG ಡೇಟಾ ಹೇಳಿದೆ. ಜನವರಿಯಲ್ಲಿ ಮೊದಲ ಬಾರಿಗೆ ಎರಡು ಮಾದರಿಗಳ ಪರೀಕ್ಷೆ ನಡೆಸಿದಾಗ XBB 1.16 ರೂಪಾಂತರ ದೃಢಪಟ್ಟಿತ್ತು. ಫೆಬ್ರವರಿಯಲ್ಲಿ ಒಟ್ಟು 59 ಮಾದರಿಗಳು ಪತ್ತೆಯಾದರೆ, ಮಾರ್ಚ್ ನಲ್ಲಿ ಇಲ್ಲಿಯವರೆಗೂ ಇದೀಗ 15 ಮಾದರಿಗಳು ಪತ್ತೆಯಾಗಿವೆ ಎಂದು INSACOG ಹೇಳಿದೆ. ಈ ರೂಪಾಂತರದ ಕಾರಣದಿಂದ ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚಿವೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. H3N2 ಕಾರಣ ಇನ್ಫ್ಲುಯೆನ್ಸ ಪ್ರಕರಣಗಳು ಹೆಚ್ಚಾದರೆ, XBB 1.16 ರೂಪಾಂತರದ ಪ್ರಭಾವದಿಂದ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ನೇತೃತ್ವ ವಹಿಸಿದ್ದ ಮಾಜಿ ಎಐಐಎಂಎಸ್ ನಿರ್ದೇಶಕ ಡಾ…
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರ ಸ್ಪರ್ಧೆಯಿಂದ ಬಹುತೇಕ ಹಿಂದೆ ಸರಿದಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಕುರಿತಾಗಿ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ದೆಹಲಿಯಿಂದ ವಾಪಸ್ ಆದ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆಗೆ ಮಾತುಕತೆ ನಡೆಸಿದರು. ಸದ್ಯ ಅಧಿಕೃತವಾಗಿ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡದೆ ಇದ್ದರೂ, ವರುಣವನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಬೆಂಗಳೂರಿಗೆ ಹತ್ತಿರವಾಗಿರುವ ಕ್ಷೇತ್ರದ ಹುಡುಕಾಟದಲ್ಲಿದ್ದರು. ಆರಂಭದಲ್ಲಿ ಅವರು ವರುಣಾದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂಬ ಮಾತಿತ್ತು. ಆದರೆ, ದಿಢೀರಾಗಿ ಕೋಲಾರದ ಕಡೆ ಮುಖ ಮಾಡಿದರು. ಕೋಲಾರದಲ್ಲಿ ತಾನು ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರೂ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದರು. ಈ ನಡುವೆ ಕೋಲಾರದಲ್ಲಿ ನಿರಂತರ ಪ್ರವಾಸವನ್ನೂ ಕೈಗೊಂಡಿದ್ದರು. ಸ್ಥಳೀಯ ನಾಯಕರ ಮುನಿಸನ್ನು ಸರಿಪಡಿಸುವ ನಿಟ್ಟಿನಲ್ಲೂ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಮುಂದಾದ ಬೆನ್ನಲ್ಲೇ ಸ್ಥಳೀಯ ನಾಯಕರ ಭಿನ್ನಾಭಿಪ್ರಾಯ ಬಹಿರಂಗಗೊಂಡಿತ್ತು. ಮಾಜಿ ಸಂಸದ…
ಹಾವೇರಿ: ಕಾಂಗ್ರೆಸ್ ಗೆದ್ದರೆ ರಾಜ್ಯ ಮಾತ್ರವಲ್ಲ ದೇಶವೂ ಸೋತಂತೆ. ನಾವು ಬಿಜೆಪಿಯವರು ಗೆದ್ದರೆ ಭಾರತ ಮಾತಾ ಕೀ ಜೈ ಎನ್ನುತ್ತೇವೆ. ಮಾತ್ರವಲ್ಲದೇ, ಕಾಂಗ್ರೆಸ್ ಗೆದ್ದರೆ ಕುಕ್ಕರ್‌ನಲ್ಲಿ ಬಾಂಬ್ ಇಡುವವರು ಎದ್ದು ಕುಳಿತುಕೊಳ್ಳುತ್ತಾರೆ ಎಚ್ಚರಿಕೆ ಇರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಹಾವೇರಿಯಲ್ಲಿ ಶನಿವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ, ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಮಗೆ ಬೇಕಾಗಿರುವುದು ದೇಶ ನಾಯಕ ನರೇಂದ್ರ ಮೋದಿ, ರೈತ ನಾಯಕ ಯಡಿಯೂರಪ್ಪ, ಕಾಮನ್‌ಮ್ಯಾನ್ ಬಸವರಾಜ ಬೊಮ್ಮಾಯಿ. ಕಾಂಗ್ರೆಸ್ ಗೆದ್ದರೆ ರಾಜ್ಯ ಮಾತ್ರವಲ್ಲ, ದೇಶವು ಸೋತಂತೆ. ನಾವು ಗೆದ್ದರೆ ಭಾರತ ಮಾತಾ ಕೀ ಜೈ ಎನ್ನುತ್ತೇವೆ. ಕಾಂಗ್ರೆಸ್ ಗೆದ್ದರೆ ಕುಕ್ಕರ್‌ನಲ್ಲಿ ಬಾಂಬ್ ಇಡುವವರು ಎದ್ದು ಕುಳಿತುಕೊಳ್ಳುತ್ತಾರೆ. ಹೀಗಾಗಿ ನಮಗೆ ಕಾಂಗ್ರೆಸ್ ಬೇಡ. ಹೀಗಾಗಿ ಕಮಲ ಅರಳಿಸುವ ಸಂಕಲ್ಪ ಮಾಡಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತಂದು ವೇಗವಾಗಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ…
ಅಮೆರಿಕಾ ವಿರುದ್ಧ ಹೋರಾಡಲು ಸುಮಾರು 800,000 ನಾಗರಿಕರು ರಾಷ್ಟ್ರದ ಮಿಲಿಟರಿಗೆ ಸೇರಲು ಸ್ವಯಂಪ್ರೇರಿತರಾಗಿದ್ದಾರೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ. ಸುಮಾರು 800,000 ವಿದ್ಯಾರ್ಥಿಗಳು ಮತ್ತು ಕಾರ್ಮಿಕರು US ಅನ್ನು ಎದುರಿಸಲು ಮಿಲಿಟರಿಗೆ ಸೇರಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಉತ್ತರ ಕೊರಿಯಾದ ರಾಜ್ಯ ಪತ್ರಿಕೆ ರೋಡಾಂಗ್ ಸಿನ್ಮುನ್ ಪತ್ರಿಕೆ ವರದಿ ಮಾಡಿದೆ. ಯುಎಸ್-ದಕ್ಷಿಣ ಕೊರಿಯಾ ಮಿಲಿಟರಿ ಡ್ರಿಲ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತರ ಕೊರಿಯಾ ತನ್ನ ಹ್ವಾಸಾಂಗ್ -17 ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿದ ನಂತರ ಈ ವರದಿ ಬಂದಿದ್ದು, ಇದು ಯುಎಸ್ ಮತ್ತು ದಕ್ಷಿಣ ಕೊರಿಯಾದ ಅವರ ಪ್ರಚೋದನಕಾರಿ ಮತ್ತು ಆಕ್ರಮಣಕಾರಿ ದೊಡ್ಡ ಪ್ರಮಾಣದ ಯುದ್ಧದ ಅಭ್ಯಾಸಗಳಿಗೆ ಬಲವಾದ ಎಚ್ಚರಿಕೆ ಎಂದು ಕಿಮ್ ಹೇಳಿದ್ದಾರೆ.