Author: Prajatv Kannada

ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಬೇಸಿಗೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಭೋಜನಕ್ಕೆ ಆಯೋಜಿಸಲು ಯೋಜಿಸಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ. ಔಪಚಾರಿಕ ರಾಜ್ಯ ಭೇಟಿಯು ಅಮೆರಿಕ, ಭಾರತದ ಬಾಂಧವ್ಯವನ್ನು ಗಾಢವಾಗಿಸುವ ಸಂಕೇತವಾಗಿದೆ, ಏಕೆಂದರೆ ಚೀನಾದ ಬೆದರಿಕೆಯನ್ನು ಎದುರಿಸಲು ಆಡಳಿತವು ಮುಕ್ತ ಇಂಡೋ-ಪೆಸಿಫಿಕ್‌ಗಾಗಿ ನೀತಿಗಳು ಮತ್ತು ಉಪಕ್ರಮಗಳನ್ನು ಎದುರು ನೋಡುತ್ತಿದೆ. ಶ್ವೇತಭವನವು ಜೂನ್‌ನಲ್ಲಿ ರಾಜ್ಯ ಭೋಜನವನ್ನು ನಡೆಸುವ ಗುರಿಯನ್ನು ಹೊಂದಿದೆ ಆದರೆ ಸಮಯವು ಬದಲಾಗಬಹುದು ಎಂದು ಮೂಲಗಳು ಹೇಳಿವೆ. ಆದಾಗ್ಯೂ, ಈ ಬಗ್ಗೆ ಪ್ರತಿಕ್ರಿಯಿಸಲು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ನಿರಾಕರಿಸಿದ್ದಾರೆ. ಭಾರತ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ 20 ನಾಯಕರ ಗುಂಪಿನ ಶೃಂಗಸಭೆಯನ್ನು ಆಯೋಜಿಸುತ್ತಿದೆ, ಅಲ್ಲಿ ರಷ್ಯಾದ ಉಕ್ರೇನ್ ಆಕ್ರಮಣವು ಚರ್ಚೆಯ ಮುಖ್ಯ ವಿಷಯಗಳಲ್ಲಿ ಒಂದಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಟದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಬೈಡನ್ ಅವರು ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರೊಂದಿಗೆ ಕ್ವಾಡ್ ಶೃಂಗಸಭೆಗಾಗಿ ಮೇ ತಿಂಗಳಲ್ಲಿ ಮೋದಿಯವರನ್ನು ಆಸ್ಟ್ರೇಲಿಯಾದಲ್ಲಿ ಭೇಟಿ ಮಾಡುವ ನಿರೀಕ್ಷೆಯಿದೆ.

Read More

ಮಂಡ್ಯ: ಮಾಜಿ ಸಂಸದ ಜಿ.ಮಾದೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಇದೀಗ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ಒಂದು ವರ್ಷದ ಬಳಿಕ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಭಾನುವಾರ ಬೆಂಗಳೂರಿನಲ್ಲಿ ನೆಲೆಸಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮತದಾರರ ಸಭೆಗೆ ಬಿಜೆಪಿ ಪಕ್ಷದ ಸಚಿವರನ್ನು ಆಹ್ವಾನಿಸಿರುವುದು ಶಿವರಾಮೇಗೌಡರು ಕಮಲ ಹಿಡಿಯಲು ರೆಡಿಯಾಗಿರುವುದರ ಮುನ್ಸೂಚನೆ ಎಂಬಂತೆ ಕಂಡುಬರುತ್ತಿದೆ. ಪಕ್ಷೇತರರಾಗಿ ಒಮ್ಮೆ ವಿಧಾನಸಭೆಗೆ ಆಯ್ಕೆಯಾಗಿದ್ದನ್ನು  ಹೊರತುಪಡಿಸಿದರೆ ರಾಜಕೀಯ ಪಕ್ಷಗಳಿಂದ ವಿಧಾನಸಭೆಗೆ ಆಯ್ಕೆಯಾಗುವ ಅದೃಷ್ಟ ಇದುವರೆಗೂ ಶಿವರಾಮೇಗೌಡರಿಗೆ ಒಲಿದು ಬಂದಿಲ್ಲ. 2018ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಶಿವರಾಮೇಗೌಡರು ಜೆಡಿಎಸ್- ಕಾಂಗ್ರೆಸ್ ಮಿತ್ರ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದರೊಂದಿಗೆ ಆರು ತಿಂಗಳ ಸಂಸದ ಎನಿಸಿಕೊಂಡರು. ಪಕ್ಷಾಂತರ ಶಿವರಾಮೇಗೌಡರಿಗೆ ಹೊಸದೇನು ಅಲ್ಲ. 1996 ರಲ್ಲಿ ಜನತಾ ದಳದಲ್ಲಿದ್ದ ಎಲ್ಲಾ ಶಿವರಾಮೇಗೌಡರು 1999ರ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮತ್ತೆ 2009ರ ವೇಳೆಗೆ ಬಿಜೆಪಿ ಪಕ್ಷವನ್ನು ಸೇರಿದ ಶಿವರಾಮೇಗೌಡರು ಲೋಕಸಭಾ ಚುನಾವಣೆಗೆ…

Read More

ಬೆಂಗಳೂರು: ಬೆಂಗಳೂರಿನ ಆರ್​ಆರ್​ ನಗರದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ತನ್ನ ಹೆಂಡತಿ ತಲೆಯನ್ನು ಗೋಡೆಗೆ ಹೊಡೆದು ಕೊಲೆಗೆ ಯತ್ನಿಸಿ  ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ. ಸದ್ಯ ಗಂಡ-ಹೆಂಡತಿ ಇಬ್ಬರೂ ಆಸ್ಪತ್ರೆ ಸೇರಿದ್ದು ಪೋಷಕರ ಬಳಿ ಇರಲು ಮಗ ಭಯಪಡುವಂತಾಗಿದೆ. ಅಪ್ಪ-ಅಮ್ಮನ ಜಗಳ ನೋಡಿದ 12 ವರ್ಷದ ಮಗ ಮನೆಯಿಂದ ಓಡಿ ಹೋಗಿದ್ದಾನೆ. ತುಮಕೂರು ನಿವಾಸಿಯಾದ ಹರ್ಷ 10 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಹರ್ಷ ಹಾಗೂ ಸುಧಾರಾಣಿ ಇಬ್ಬರೂ ಸಾಫ್ಟ್‌ವೇರ್ ಇಂಜನಿಯರ್​ಗಳಾಗಿದ್ದು ದಂಪತಿಗೆ 12 ವರ್ಷದ ಮಗ ಇದ್ದಾನೆ. ಇಬ್ಬರಿಗೂ ಕೈ ತುಂಬ ಸಂಬಳವಿತ್ತು. ಸುಖ, ಸಂತೋಷದಲ್ಲೇ ಸಂಸಾರ ಸಾಗುತ್ತಿತ್ತು. ಆದ್ರೆ ಇತ್ತೀಚೆಗೆ ತುಮಕೂರಿನಲ್ಲಿ ಜಮೀನು ಮಾರಿದ್ದು, ಸಾಕಷ್ಟು ಹಣ ಬಂದಿತ್ತು. ಹಣ ಬಂದದ್ದೇ ಟೆಕ್ಕಿ ಹರ್ಷ ಸಂಪೂರ್ಣವಾಗಿ ಬದಲಾಗಿದ್ದ. ಇದ್ದಕ್ಕಿದ್ದಂತೆ ಕೋಟಿ ಕೋಟಿ ಹಣ ನೋಡಿದ ಹರ್ಷ ಲಕ್ಷ ಬರುತ್ತಿದ್ದ ಕೆಲಸ ಬಿಟ್ಟು ಮನೆಯಲ್ಲೇ ಸೆಟಲ್ ಆಗಿದ್ದ. ಕಳೆದ ಐದಾರು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುತ್ತಿದ್ದ. ಪ್ರತಿ ದಿನ ಕುಡಿದು…

Read More

ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರರ ಹೋಲೈಕೆಗೆ ರಾಜಕೀಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಅದರ ಭಾಗವಾಗಿ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ,  ಕ್ಷೇತ್ರವೊಂದರ ಸ್ವತಂತ್ರ್ಯ ಅಭ್ಯರ್ಥಿಯ ಭಾವಚಿತ್ರ ಹೊಂದಿದ್ದ ದಿನಸಿ ವಸ್ತುಗಳ‌ ಬ್ಯಾಗ್​ಗಳನ್ನು  ವಶಕ್ಕೆ ಪಡೆದುಕೊಂಡಿದ್ದಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಭಾವಚಿತ್ರ ಮುದ್ರಿಸಿರುವ ದಿನಸಿ ಕಿಟ್ ಇದಾಗಿದೆ ಎಂದು ತಿಳಿದುಬಂದಿದೆ. ಯುಗಾದಿ ಹಬ್ಬದ ಪ್ರಯುಕ್ತ ಜನರಿಗೆ ನೀಡಲೆಂದು ಸಿದ್ಧಪಡಿಸಿದ್ದ ಕಿಟ್​ಗಳನ್ನು ಯಶವಂತಪುರದ ಆರ್​ ಎಂ ಸಿ ಯಾರ್ಡ್ ಮಾರ್ಕೆಟ್​ನ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಬಿಬಿಎಂಪಿಯ ಮಾರಪ್ಪನ ಪಾಳ್ಯ ವಾರ್ಡಿನ ಅಸಿಸ್ಟೆಂಟ್ ಇಂಜಿನಿಯರ್​​ಗೆ ಬಂದ ಮಾಹಿತಿಯ ಅನ್ವಯ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ವೇಳೆ ಸುಮಾರು 415 ಗೋದಿ ಹಿಟ್ಟಿನ ಚೀಲಗಳು, 1,350 ಮೈದಾ ಹಿಟ್ಟಿನ ಚೀಲಗಳು, 200 ಕಡಲೆ ಹಿಟ್ಟಿನ ಚೀಲ, 700 ರವೆ ಚೀಲ, 1,010 ಬಾಕ್ಸ್ ಬೆಲ್ಲ, 32 ಬಾಕ್ಸ್…

Read More

ಬೆಂಗಳೂರು:  ವಿವಿಧ ಬೇಡಿಕೆ ಈಡೇರಿಕೆಗಾಗಿ ಮತ್ತು ವೇತನ ಪರಿಷ್ಕರಣೆಗಾಗಿ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಾರ್ಚ್‌ 21ರಂದು ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು (KSRTC Bus Strike) ವಾಪಸ್‌ ಪಡೆದಿದೆ. ಈ ಬಗ್ಗೆ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ಮಾತನಾಡಿ ಸಾರಿಗೆ ನೌಕರರ (KSRTC Employees) ಹಲವು ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಮುಷ್ಕರ ಹಿಂಪಡೆಯಲು ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮತ್ತೊಂದು ಸುತ್ತಿನ ಚರ್ಚೆ ನಡೆಸುತ್ತೇವೆ. ಸಾರಿಗೆ ನೌಕರರಿಗೆ ಯುಗಾದಿ ಗಿಫ್ಟ್‌ ನೀಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು. ಸಾರಿಗೆ ನೌಕರರ ಬೇಡಿಕೆಗಳೇನು? ಮೂಲ ವೇತನಕ್ಕೆ ಬಿ.ಡಿ.ಎ ವಿಲೀನಗೊಳಿಸಿ, ಮೂಲ ವೇತಕ್ಕೆ ಶೇ. 25 ರಷ್ಟು ಹೆಚ್ಚಿಸಬೇಕು ವೇತನ ಹೆಚ್ಚಳವೂ ಪರಿಷ್ಕೃತ ಮೂಲ ವೇತನದ ಶೇ.3 ರಷ್ಟಿರಬೇಕು. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಮೇಲಿನಂತೆಯೇ ಸಿದ್ದಪಡಿಸಬೇಕು ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ನೀಡಬೇಕು. ಎಲ್ಲ…

Read More

ಬೆಂಗಳೂರು: IPS ಅಧಿಕಾರಿ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪಿ ಶ್ರೀನಿವಾಸ್ ನನ್ನು ಬೆಂಗಳೂರಿನ ತಲಘಟ್ಟಪುರ ಪೊಲೀಸರು ಅರೆಸ್ಟ್ ಮಾಡಿದರು. ಇದೀಗ ನಕಲಿ ಐಪಿಎಸ್ ಅಧಿಕಾರಿಯ ಅಸಲಿ ಕಥೆ ವಿಚಾರಣೆಯಲ್ಲಿ ಬಟಾ ಬಯಲಾಗಿದೆ. ಆರೋಪಿ, ಆರ್.ಶ್ರೀನಿವಾಸ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಅರ್ಧಕ್ಕೆ ನಿಲ್ಲಿಸಿದ್ದ. ಐಷಾರಾಮಿ ಜೀವನಕ್ಕೆ ಇಳಿದು 2010ರಲ್ಲೇ 2 ಕಾರು ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಅಷ್ಟಲ್ಲದೇ ಬಿಸಿಎ ವ್ಯಾಸಂಗ ಮಾಡಿ ಖಾಸಗಿ ಶಾಲೆಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿದ್ದ. ಅದೇ ಶಾಲೆಯಲ್ಲಿ ಕೆಲಸ ಮಾಡ್ತಿದ್ದ ಯುವತಿಗೆ IPS ಅಧಿಕಾರಿ ಎಂದು ಹೇಳಿ ಪ್ರೀತಿಸಿ, ಮದುವೆ ಆಗುವುದಾಗಿ ಹೇಳಿ ಮೋಸ ಮಾಡಿದ್ದ. ಅಷ್ಟೇ ಅಲ್ಲದೇ IPS ಪಾತ್ರಗಳನ್ನ ಅನುಕರಿಸಿ ಪೊಲೀಸ್ ಸಮವಸ್ತ್ರ ಧರಿಸಿ ವಂಚನೆಗೆ ಇಳಿದಿದ್ದ. IPS ಅಧಿಕಾರಿ ಎಂದು ನಕಲಿ ಐಡಿ ಕಾರ್ಡ್ ಸೃಷ್ಟಿಸಿಕೊಂಡಿದ್ದ. ತನ್ನ ಕಾರಿನ ಮೇಲೆ ಪೊಲೀಸ್ ವಾಹನದಲ್ಲಿ ಬಳಸುವ ಟಾಪ್ಲೈಟ್ ಅಳವಡಿಸಿಕೊಂಡಿದ್ದ. ಹಾಗೂ ಡಮ್ಮಿ ಪಿಸ್ತೂಲ್, ವಾಕಿಟಾಕಿಯನ್ನ ಇಟ್ಟುಕೊಂಡು ದೂರುದಾರರನ್ನ ನಂಬಿಸಿದ್ದ. ಕೇಸ್ ಡಿಲ್ನಲ್ಲಿ…

Read More

ಬೆಂಗಳೂರು: ಬೆಂಗಳೂರಿನ ಹೆಚ್ ಬಿಆರ್ ಲೇಔಟ್ ನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮತ್ತು ಮಗು ಸಾವನ್ನಪ್ಪಿರುವ ಪ್ರಕರಣದಿಂದ ಎಚ್ಚೆತ್ತಿರುವ ಬಿಂಆರ್ಸಿಎಲ್ ಮುಂಬರುವ ಮೂರು ನಮ್ಮ ಮೆಟ್ರೋ ಮಾರ್ಗಗಳ ನಿರ್ಮಾಣದ ಸುರಕ್ಷತೆಗಾಗಿ ಐಐಎಸ್​​​​ಸಿ ತಂಡದ ನಿಯೋಜಿಸಲಾಗಿದೆ. ಮುಂಬರುವ ಮೂರು ಮಾರ್ಗಗಳ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ನಮ್ಮ ಮೆಟ್ರೋ ಸಂಸ್ಥೆ ಭಾರತೀಯ ವಿಜ್ಞಾನ ಸಂಸ್ಥೆಯ ತಂಡವೊಂದನ್ನು ನಿಯೋಜನೆ ಮಾಡಿದೆ. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜೆ.ಎಂ.ಚಂದ್ರ ಕಿಶನ್, ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಸಹ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ರಾವ್ ಹಾಗೂ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದಲ್ಲಿ ಈ ಹಿಂದೆ ಕೆಲಸ ಮಾಡಿದ ರಮೇಶ್ ಬಾಬು ನಾರಾಯಣಪ್ಪ ಪರಿಶೀಲನೆ ನಡೆಸಲಿದ್ದಾರೆ. ಕಳೆದ ಬುಧವಾರದಿಂದಲೇ ಕೆಲಸ ಆರಂಭಿಸಿರುವ ತಂಡ 75 ದಿನಗಳಲ್ಲಿ ವರದಿ ನೀಡುವ ಸಾಧ್ಯತೆಯಿದೆಸಾಧ್ಯತೆಯಿದೆ

Read More

ಭಾರತದ ಮೊದಲ ಮಲ್ಟಿಡಿಸಿಪ್ಲಿನರಿ ಹೈಬ್ರಿಡ್ ಸಿಮ್ಯುಲೇಶನ್ ಈವೆಂಟ್, HPSN 2023 ವೈದೇಹಿ ಅಡ್ವಾನ್ಸ್ಡ್‌ನಲ್ಲಿ ಆಯೋಜಿಸಲಾಗಿದೆ. ಸಿಮ್ಯುಲೇಶನ್ ಅಕಾಡೆಮಿ (VASA) ಬೆಂಗಳೂರು ಮೂರು ದಿನಗಳ ಕಾಲ ಹ್ಯೂಮನ್ ಪೇಷಂಟ್ ಸಿಮ್ಯುಲೇಶನ್ ನಡೆಯಲಿದೆ. ಈ ಕಾರ್ಯಗಾರದಲ್ಲಿ ದೇಶ ವಿದೇಶಗಳ ನುರಿತ ತಜ್ಞರು ಭಾಗವಹಿಸುದ್ದಾರೆ.ಈ ಕಾರ್ಯಗಾರದಲ್ಲಿ ಆಸಕ್ತಿ ಹೊಂದಿರುವ ದೇಶ ವಿದೇಶಗಳಿಂದ ವೃತ್ತಿಪರ ವೈದ್ಯರು ಪಾಲ್ಗೊಂಡರು. ಹ್ಯೂಮನ್ ಪೇಷಂಟ್ ಸಿಮ್ಯುಲೇಶನ್ ನೆಟ್‌ವರ್ಕ್ಸ್ (HPSN) ಇಂಡಿಯಾ 2023, ವೈದೇಹಿ ಅಡ್ವಾನ್ಸ್‌ಡ್ ಸಿಮ್ಯುಲೇಶನ್ ಅಕಾಡೆಮಿ (VASA) ಬೆಂಗಳೂರು ಮತ್ತು CAE ಹೆಲ್ತ್‌ಕೇರ್, USA ಯಿಂದ ಮೊದಲ ಜಂಟಿ ಪೂರ್ವ ಸಮ್ಮೇಳನಾತ್ಮಕ ಕಾರ್ಯಾಗಾರವನ್ನು ಆಯೋಜಿಸಿದೆ. ವೈದೇಹಿ ಅಡ್ವಾನ್ಸ್ಡ್ ಸಿಮ್ಯುಲೇಶನ್ ಅಕಾಡೆಮಿ (VASA) ಬೆಂಗಳೂರಿನಲ್ಲಿ ವೈದ್ಯಕೀಯ ವೃತ್ತಿಪರರಿಗಾಗಿ ಆರು ವಿಶಿಷ್ಟ ಕಾರ್ಯಾಗಾರ ಮತ್ತು ಸಭೆಯನ್ನು ನಡೆಸಲಾಯಿತು. ಪೂರ್ವ ಸಮ್ಮೇಳನದ ವೈದ್ಯಕೀಯ ಕಾರ್ಯಾಗಾರವು ಅಲ್ಟ್ರಾಸೌಂಡ್, ಪ್ರಸೂತಿ ಮತ್ತು ನವಜಾತ ಶಿಶುಗಳ ಜೌಮಿ- ಒಂದು ಅಂತರ್ಗತವಾದ ಅನುಕರಿಸಿದ ಕ್ಲಿನಿಕಲ್ ಅನುಭವ, ಕಡಿಮೆ ಹರಿವಿನ ಅರಿವಳಿಕೆ ಮತ್ತು ಹಿಮೋಡೈನಾಮಿಕ್ ಸ್ಥಿರತೆಯ ಮೇಲೆ ಸುಧಾರಿತ ಅರಿವಳಿಕೆ ಕಾರ್ಯಾಗಾರ,…

Read More

ಬೆಂಗಳೂರು: ವಾಹನಕ್ಕೆ ವಿಮೆ ಇಲ್ಲದಿದ್ದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಜವಬ್ದಾರಿ ಮಾಲೀಕರದ್ದಾಗಿದೆ ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಅಲ್ಲದೆ, ಕೋರ್ಟ್ ರಸ್ತೆ ಅಪಘಾತ ನಡೆದ ಮುನ್ನವೇ ವಿಮೆ ನವೀಕರಣವಾಗಿದ್ದರೂ, ಘಟನೆ ನಡೆದ ಮರು ದಿನದಿಂದ ಅನ್ವಯವಾಗುವಂತಿದ್ದಲ್ಲಿ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ರಸ್ತೆ ಅಪಘಾತ ಪ್ರಕರಣದಲ್ಲಿ ವಾಹನದ ಮಾಲೀಕರು ಪರಿಹಾರ ನೀಡಬೇಕೆಂದು ವಿಚಾರಣಾ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ‘ಈ ಪ್ರಕರಣದಲ್ಲಿ ಘಟನೆ ನಡೆದ ಸಮಯಕ್ಕಿಂತ 5 ತಾಸು ಮುನ್ನವೇ ವಾಹನದ ವಿಮೆ ನವೀಕರಣ ಮಾಡಿಸಿದ್ದರೂ, ಘಟನೆ ನಡೆದ ಮರುದಿನದಿಂದ ಅನ್ವಯವಾಗಲಿದೆ. ಹಾಗಾಗಿ ಘಟನೆಯಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಲಾಗುವುದಿಲ್ಲ’ ಎಂದು ಕೋರ್ಟ್‌ ಆದೇಶಿಸಿದೆ.

Read More

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಮತ್ತು ವೇತನ ಪರಿಷ್ಕರಣೆಗಾಗಿ, ರಾಜ್ಯರಸ್ತೆಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಾರ್ಚ್‌ 21ರಂದು ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು ( KSRTC Bus Strike ) ವಾಪಸ್‌ ಪಡೆದಿದೆ. ಈ ಬಗ್ಗೆ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ಮಾತನಾಡಿ ಸಾರಿಗೆ ನೌಕರರ (KSRTC Employees) ಹಲವು ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಮುಷ್ಕರ ಹಿಂಪಡೆಯಲು ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮತ್ತೊಂದು ಸುತ್ತಿನ ಚರ್ಚೆ ನಡೆಸುತ್ತೇವೆ. ಸಾರಿಗೆ ನೌಕರರಿಗೆ ಯುಗಾದಿ ಗಿಫ್ಟ್‌ ನೀಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು. ಸಾರಿಗೆನೌಕರರಬೇಡಿಕೆಗಳೇನು? ಮೂಲ ವೇತನಕ್ಕೆ ಬಿ.ಡಿ.ಎ ವಿಲೀನಗೊಳಿಸಿ, ಮೂಲ ವೇತಕ್ಕೆ ಶೇ. 25 ರಷ್ಟು ಹೆಚ್ಚಿಸಬೇಕು ವೇತನ ಹೆಚ್ಚಳವೂ ಪರಿಷ್ಕೃತ ಮೂಲ ವೇತನದ ಶೇ.3 ರಷ್ಟಿರಬೇಕು. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಮೇಲಿನಂತೆಯೇ ಸಿದ್ದಪಡಿಸಬೇಕು ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ನೀಡಬೇಕು. ಎಲ್ಲ ನೌಕರರಿಗೂ…

Read More