ಡೊನಾಲ್ಡ್ ಟ್ರಂಪ್ ಅವರನ್ನು ಇತಿಹಾಸದಿಂದ ಪುಟವನ್ನು ಅಳಿಸಿ ಹಾಕಲು ಅಮೆರಿಕದ ಜನತೆ ಸಿದ್ಧರಾಗಿದ್ದಾರೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ಅಧ್ಯಕ್ಷೀಯ ಪ್ರಚಾರದ ತನ್ನ ಮೊದಲ ಪ್ರಮುಖ ದೂರದರ್ಶನ ಸಂದರ್ಶನದಲ್ಲಿ, ನವೆಂಬರ್ 5 ರ ಚುನಾವಣೆಯಲ್ಲಿ ಟ್ರಂಪ್ ಅವರನ್ನು ಎದುರಿಸಲಿರುವ ಕಮಲಾ ಅವರು , ಅಮೆರಿಕದ ಜನರು ಹೊಸ ದಾರಿಗೆ ಸಿದ್ಧರಾಗಿದ್ದಾರೆ ಎಂದು ಹೇಳಿದರು. ಟ್ರಂಪ್ ಅವರ ಹಿಂದಿನ ಆಡಳಿತದಿಂದ ರೋಸಿ ಹೋಗಿರುವ ಅಮೆರಿಕನ್ನರು ಅವರ ಆಡಳಿತದ ಪುಟವನ್ನು ತಿರುಗಿಸಲು ಸಿದ್ಧರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ನಮ್ಮ ಮಾಜಿ ಅಧ್ಯಕ್ಷರು ನಾವು ಅಮೆರಿಕನ್ನರ ಪಾತ್ರ ಮತ್ತು ಶಕ್ತಿಯನ್ನು ಕುಗ್ಗಿಸುವ ಮತ್ತು ನಮ ರಾಷ್ಟ್ರವನ್ನು ವಿಭಜಿಸುವ ಕಾರ್ಯಸೂಚಿಯನ್ನು ಮುಂದಿಟ್ಟಿದ್ದಾರೆ. ಜನರು ಪುಟವನ್ನು ತಿರುಗಿಸಲು ಸಿದ್ಧರಾಗಿದ್ದಾರೆ ಎಂದು ಅವರು ಎಕ್ಸ್ ಪೋಸ್ಟ್ ಮಾಡಿ ಸಂದರ್ಶನದ ತುಣಕನ್ನು ಹಂಚಿಕೊಂಡಿದ್ದಾರೆ. ಭಾರತೀಯ ಮತ್ತು ಆಫ್ರಿಕನ್ ಪರಂಪರೆಯನ್ನು ಹೊಂದಿರುವ ಹ್ಯಾರಿಸ್ ಅವರು ಸಂದರ್ಶನದಲ್ಲಿ ಟ್ರಂಪ್ ಅವರ ಗುರುತಿನ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿದರು. ತನ್ನ ಜನಾಂಗೀಯ…
Author: Prajatv Kannada
ಉಕ್ರೇನ್ ಗೆ ಬಹುನಿರೀಕ್ಷಿತ ವಿಮಾನಗಳನ್ನು ತಲುಪಿಸಿದ ಕೆಲವೇ ವಾರಗಳ ನಂತರ, ಯುಎಸ್‌ಎಯಲ್ಲಿ ನಿರ್ಮಿಸಲಾದ ಎಫ್ -16 ಯುದ್ಧ ವಿಮಾನ ಅಪಘಾತಗೊಂಡಿದೆ. ಪರಿಣಾಮ ಉಕ್ರೇನಿಯನ್ ಪೈಲಟ್ ಕ್ಯಾಪ್ಟನ್ ಒಲೆಕ್ಸಿ ಮೆಸ್ ಮೃತಪಟ್ಟಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ಅತಿದೊಡ್ಡ ವೈಮಾನಿಕ ದಾಳಿಯನ್ನು ಹಿಮ್ಮೆಟ್ಟಿಸುವಾಗ ಯುದ್ಧ ವಿಮಾನ ಪತನಗೊಂಡಿದೆ. ಪೈಲಟ್ ದೋಷದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ಉಕ್ರೇನಿಯನ್ ರಕ್ಷಣಾ ಪಡೆಗಳು ಹೇಳಿದ್ದಾರೆ. ಮೂನ್ ಫಿಶ್ ನ ಸಾವು ಉಕ್ರೇನ್ ಗೆ ದೊಡ್ಡ ನಷ್ಟವಾಗಿದೆ ಏಕೆಂದರೆ ನಂತರ ಹೊಸದಾಗಿ ಖರೀದಿಸಿದ ಎಫ್ -16 ಗಳನ್ನು ಹಾರಿಸಬೇಕಾದ ಕೆಲವೇ ಪೈಲಟ್ ಗಳಲ್ಲಿ ಇದು ಒಂದಾಗಿದೆ. ರಷ್ಯಾದ ದಾಳಿಯ ವಿರುದ್ಧ ಹೋರಾಡುತ್ತಿದ್ದಾಗ ಸಂಭವಿಸಿದ ಅಪಘಾತದ ನಂತರ ಪೈಲಟ್ ಅನ್ನು ಗುರುವಾರ ಸಮಾಧಿ ಮಾಡಲಾಯಿತು. ಪ್ರಸ್ತುತ, ಅಪಘಾತದ ಕಾರಣಗಳು ಇನ್ನೂ ತಿಳಿದಿಲ್ಲ ಮತ್ತು ಅದಕ್ಕಿಂತ ಹೆಚ್ಚಾಗಿ, ಅಪಘಾತದ ತನಿಖೆಯಲ್ಲಿ ಸಹಾಯ ಮಾಡಲು ತನಿಖಾಧಿಕಾರಿಗಳು ಶೀಘ್ರದಲ್ಲೇ ಅಂತರರಾಷ್ಟ್ರೀಯ ಸಹಾಯವನ್ನು ಕೋರಲಿದ್ದಾರೆ ಎಂದು ಹೇಳಲಾಗಿದೆ. ಉಕ್ರೇನ್ ಸೇನೆಯ ಜನರಲ್ ಸ್ಟಾಫ್ ಸಿಎನ್‌ಎನ್ಗೆ…
ಬೆಂಗಳೂರು: ಶಾಲಾ ಮಕ್ಕಳು ಕಟ್ಟಿದ ಪರೀಕ್ಷೆ ಶುಲ್ಕವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದು ಬಡ ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ ಹಣವೂ ಬಿಡ್ತಿಲ್ವಾ ಈ ಗ್ಯಾರೆಂಟಿ ಸರ್ಕಾರ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕೃಪಾ ಸಂಘಟನ https://youtu.be/x_F177zC6R4?si=Z_PHdH5N7j8ZFUYc ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಹಣ ಸರ್ಕಾರವೇ ಬಳಕೆ ಮಾಡಿಕೊಳ್ಳುತ್ತಿದ್ದು ಶುಲ್ಕ ರೂಪದಲ್ಲಿ ಸಂಗ್ರಹಿಸಲಾದ ಹಣ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. 2021 22ನೇ ಸಾಲಿನಲ್ಲಿ ಪ್ರತಿಭಾ ಶೋಧ ಪರೀಕ್ಷೆ ನಿಗದಿ ಮಾಡಿದ್ದ ಶಿಕ್ಷಣ ಇಲಾಖೆ ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಒಟ್ಟು ರೂ 2,66,72,717 ಗಳನ್ನ ಹಣ ಸಂಗ್ರಹ ಮಾಡಿದ್ದ ಇಲಾಖೆ ಆದ್ರೆ ಪರೀಕ್ಷೆ ರದ್ದಾಗಿ ಕಳೆದ ಮೂರು ವರ್ಷ ಕಳೆದರೂ ಪರೀಕ್ಷೆಯೂ ಇಲ್ಲ ಇತ್ತ ಮಕ್ಕಳು ಕಟ್ಟಿದ ಪರೀಕ್ಷಾ ಶುಲ್ಕವೂ ವಾಪಸ್ ಇಲ್ಲಅಧಿಕಾರಿಗಳನ್ನ ಕೇಳಿದ್ರೆ ಪರೀಕ್ಷೆ ರದ್ದಾಗಿದೆ ಆದ್ರೆ ಹಣ ವಾಪಸ್ ಕೊಡೋಕೆ ಸಾಧ್ಯವಿಲ್ಲ ಅಂತಿದ್ದಾರೆಮಕ್ಕಳು ಕಟ್ಟಿದ ಪರೀಕ್ಷಾ ಶುಲ್ಕವನ್ನ ಸರ್ಕಾರಕ್ಕೆ…
ಕರ್ನಾಟಕ ಅತಿ ಎತ್ತರವಾದ ಬೆಟ್ಟ ಯಾವುದು.Prajaaquiz | Prajaatv kannada ಮಧುಗಿರಿ ಬೆಟ್ಟ ನಂದಿ ಬೆಟ್ಟ ಮುಳ್ಳಯ್ಯನಗಿರಿ ಸ್ಕಂಧಗಿರಿ
ಗದಗ ಜಿಲ್ಲೆ ತೋಟಗಂಟಿ ಗ್ರಾಮದಲ್ಲಿ ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆಯಾಗಿರುವ ವಿಚಿತ್ರ ಘಟನೆ ಜರುಗಿದೆ. ಈ ಮಹಿಳೆ ಮೂರು ದಿನ ಬಾವಿಯಲ್ಲಿದ್ದು, ಬದುಕಿದ್ದೇ ಪವಾಡ ಎನ್ನಲಾಗಿದೆ. ಕಾಣೆಯಾಗಿದ್ದ ವಿವಾಹಿತ ಮಹಿಳೆ ಅದೇ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದ್ದು, ಘಟನೆ ಬಳಿಕ ಅಲ್ಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹೊಲವೊಂದರಲ್ಲಿನ ನೀರಿಲ್ಲದ ಹಳೇ ಬಾವಿಯಲ್ಲಿ ಮೂರು ದಿನಗಳ ನಂತರ ಮಹಿಳೆ ಪತ್ತೆಯಾಗಿದ್ದಾಳೆ. ಸದ್ಯ ಮಹಿಳೆಯು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೂ ಮಹಿಳೆಯನ್ನು ಬಾವಿಗೆ ಬಿಸಾಡಿದ್ದು ಮತ್ತೋರ್ವ ಅಪರಿಚಿತ ಮಹಿಳೆ ಎನ್ನಲಾಗಿದೆ. ಅಲ್ಲದೇ ಆ ಅಪರಿಚಿತೆ ಮಹಿಳೆ ಯಾರು ಅನ್ನೋದೆ ಭಯಾನಕವಾಗಿದೆ. ಆರು ತಿಂಗಳ ಹಿಂದಷ್ಟೇ ಈ ಮಹಿಳೆ ಮದುವೆಯಾಗಿದ್ದರು. ಆಗಸ್ಟ್ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಲು. ಅಲ್ಲಿಗೆ ಬಂದ ಸೀರೆಯುಟ್ಟುಕೊಂಡ ಅಪರಿಚಿತ ಮಹಿಳೆಯು, ಕುತ್ತಿಗೆ ಭಾಗಕ್ಕೆ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ದಾಳೆ. ಕೈ ಬಳೆ, ಕಾಲುಂಗರ ನೀಡುವಂತೆ ಅಪರಿಚಿತ ಮಹಿಳೆ ಒತ್ತಾಯ ಮಾಡಿದ್ದಾಳೆ. ಕಣ್ಣು ಕಾಣದಂತೆ…
ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪಟ್ಟಣದ ಆರಕ್ಷಕ ಠಾಣೆಯ ಆವರಣದಲ್ಲಿ ಸಾರ್ವಜನಿಕರಿಗೆ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಜಮಖಂಡಿ ಆರಕ್ಷಕ ಠಾಣೆಯ dysp ಶಾಂತವೀರ ಬಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಹಬ್ಬವನ್ನು ಎಲ್ಲೆಡೆ ಆಚರಿಸುತ್ತಿದ್ದಾರೆ. ಆಚರಿಸುವಾಗ ಸರ್ಕಾರದ ಕಾನೂನಿನ ಅಡಿಯಲ್ಲಿ ಬರುವ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕು. ಅಸಭ್ಯವಾಗಿ ವರ್ತಿಸಿದವರನ್ನು ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿದವರನ್ನು ನಿರ್ದಾಕ್ಷಣವಾಗಿ ಅವರ ವಿರುದ್ಧ ಕ್ರಮ ಜರಗಿಸಲಾಗುವುದು. ದಯಮಾಡಿ ಆಚರಿಸುವಂತಹ ಹಬ್ಬವನ್ನು ಶಾಂತಿಯುತವಾಗಿ.. ಅರ್ಥಗರ್ಭಿತವಾಗಿ ಆಚರಿಸಲು ಮನವಿ ಮಾಡಿದರು. ಇತ್ತೀಚಿನ ದಿನಮಾನಗಳಲ್ಲಿ ವಾಯು ಮಾಲಿನ್ಯ ಮತ್ತು ಪರಿಸರ ಹಾಳಾಗಿ ಹೋಗುವುದನ್ನು ನಾವು ಕಂಡಿದ್ದೇವೆ ಹಾಗಾಗಿ ಎಲ್ಲರೂ ಪರಿಸರ ಸ್ನೇಹಿ ಗಣಪತಿಯನ್ನು ಕೂಡಿಸಿ. ನಮ್ಮ ಭಾರತ ದೇಶದ ಪರಂಪರೆಯ ಸಂಸ್ಕೃತಿಕ ಕಲೆ ಸಾಹಿತ್ಯ ಜಾನಪದಗಳಿಂದ ಕೂಡಿಕೊಂಡಿದೆ. ಸ್ಥಳೀಯ ಮಟ್ಟದ ಕಲಾತಂಡಗಳಿಂದ ವಾದ್ಯ ಮೇಳದೊಂದಿಗೆ ಗಣಪತಿಯನ್ನು ಕೂಡಿಸಿ. ವಿಪರೀತ ಡಿಜೆ…
ಮಹಿಳೆಯರು ತಮ್ಮ ಹಳ್ಳಿಗಳಲ್ಲಿ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದು ಈ ಲಖ್‌ಪತಿ ದೀದಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಹಿಳೆಯರು ಸ್ವಾವಲಂಭಿಯಾಗಿ ಬದುಕಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಮಹಿಳೆಯರಿಗೆ ಸಾಕಷ್ಟು ನೆರವು ನೀಡುತ್ತಿದೆ. ಅಂತೆಯೇ ಕೇಂದ್ರ ಸರ್ಕಾರವು ಮಹಿಳೆಯರಿಗೆ ಲಕ್ ಪತಿ ದೀದಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ರೆ 5 ಲಕ್ಷ ರೂಪಾಯಿಗಳವರೆಗೆ ಸಾಲ ನೀಡುತ್ತಿದೆ. ಇದು ಬಡ್ಡಿ ರಹಿತವಾಗಿದ್ದು ಯಾವುದೇ ಬಡ್ಡಿ ನೀಡುವ ಅವಶ್ಯಕತೆ ಇರುವುದಿಲ್ಲ.. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿ ಅವರನ್ನು ಮುಂದೆ ತರುವುದು ಲಕ್ ಪತಿ ದೀದಿ ಯೋಜನೆಯ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ, ದೇಶಾದ್ಯಂತ ಹಳ್ಳಿಗಳಲ್ಲಿ 3 ಕೋಟಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ. ಇದಲ್ಲದೆ, ಈ ಯೋಜನೆಯಡಿ (ಲಖ್ಪತಿ ದೀದಿ ಯೋಜನೆ) ಮಹಿಳೆಯರು ಯಾವುದೇ ಬಡ್ಡಿಯಿಲ್ಲದೆ 1 ಲಕ್ಷದಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯುತ್ತಾರೆ. ಇದರೊಂದಿಗೆ, ಸರ್ಕಾರವು ಅವರಿಗೆ ಉತ್ತಮ ಮಾರುಕಟ್ಟೆ…
ಬೆಂಗಳೂರು:- ನಗರದ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ಇಂದು ತುರ್ತು ದುರಸ್ತಿ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. https://youtu.be/3pl4Bj6dpzk?si=cSYEGLBZjInFi4aQ HSR ಲೇಔಟ್ ಮತ್ತು ಕೋರಮಂಗಲ ವಿಭಾಗದ ಬೆಳ್ಳಂದೂರು, ರಾಝ್, ದೇವರಬೀಸನಹಳ್ಳಿ, ಕರಿಯಮ್ಮನಪಾಳ್ಯ, ಅಕ್ಮೆ ಪ್ರಾಜೆಕ್ಟ್ಸ್, ಅನುಪಮಾ, ಟೋಟಲ್ ಮಾಲ್, ಶೋಭಾ ಐರಿಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೋರಮಂಗಲದ ಗುಂಜೂರು ಪಾಳ್ಯದಲ್ಲಿ ಮಾತ್ರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಉಳಿದಂತೆ ಬೆಸ್ಕಾಂ ವ್ಯಪ್ತಿಯ ರಾಮನಗರ, ದಾವಣಗೆರೆ ಜಿಲ್ಲೆಯ ಕೆಲವು ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಪ್ರಸ್ತುತ ಜಗದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಡಿಮ್ಯಾಂಡ್ ಕೂಡ ಜಾಸ್ತಿಯಾಗಿದೆ. ಡಿಮ್ಯಾಂಡ್ ಹೆಚ್ಚಾದಂತೆ ಬೆಲೆಯಲ್ಲೂ ಏರಿಕೆ ಕಾಣುತ್ತಿದೆ. ಅಂದಹಾಗೆಯೇ ಇಂದು ಬೆಂಗಳೂರಿನಲ್ಲಿ ಚಿನ್ನದ ಮಾರುಕಟ್ಟೆ ಹೇಗಿದೆ? ಬೆಲೆ ಎಷ್ಟಿದೆ? ಇಂದು ಖರೀದಿಸಲು ಸೂಕ್ತವೇ ಎಂದು ನೋಡೋಣ. https://youtu.be/-fplnB-7UMs?si=5O85_KMjQl8bckFN 22 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು? ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 6714 ಇದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 67,140 ಇದೆ. 24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು? ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 7,324 ಆಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 73,240 ಇದೆ. ಚಿನ್ನ ಅಥವಾ ಬೆಳ್ಳಿ ಖರೀದಿಸಲು ಸರಿಯಾದ ಸಮಯ, ಶುಭ ದಿನ ನೋಡುತ್ತಾರೆ. ಆದರೆ ಪ್ರಸ್ತುತ ಇವೆರಡಕ್ಕೂ ವಿಶೇಷ ಬೇಡಿಕೆ ಇದೆ. ಹಬ್ಬದ ದಿನಗಳಲ್ಲಿ ಇವೆರಡ ಬೆಲೆ ಜಾಸ್ತಿಯೇ ಇರುತ್ತದೆ. ಆದರೆ ಬೇಡಿಕೆ…
ಮೂಲಂಗಿ ನೋಡಿದರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಮೂಲಂಗಿ ವಾಸನೇ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಮೂಲಂಗಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ನಾರಿನಂಶ ಮತ್ತು ವಿಟಮಿನ್ ಅಧಿಕವಿದ್ದು, ಮಲಬದ್ಧತೆ ಮತ್ತು ಮಲವ್ಯಾಧಿಯಂತಹ ಕಾಯಿಲೆಗಳನ್ನು ಗುಣಪಡಿಸಲು ಮೂಲಂಗಿ ಸಹಕಾರಿಯಾಗಿದೆ. ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಮೂಲಂಗಿ ಸೊಪ್ಪಿನ ರಸವನ್ನು ಸೇವಿಸಿದರೆ ಮೂತ್ರ ಕಟ್ಟಿಕೊಳ್ಳುವ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ. ಹಸಿ ಮೂಲಂಗಿ ಹಾಕಿ ಸಲಾಡ್ ಮಾಡಿ ತಿಂದರೆ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುವುದು. ಮೂಲಂಗಿ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕಂಡುಬರುತ್ತದೆ. ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸಿದರೆ ಜೀರ್ಣಕ್ರಿಯೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ತೂಕ ಇಳಿಸಿಕೊಳ್ಳಲು ಬಯಸಿದರೆ, ಮೂಲಂಗಿ ಎಲೆ ಎಲ್ಲರಿಗೂ ಉತ್ತಮ ಆಯ್ಕೆಯಾಗಿದೆ. ಹೌದು, ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸುವ ಮೂಲಕ ನೀವು…