ಬಾಲಿವುಡ್ ನಟಿ ರಾಖಿ ಸಾವಂತ್ ಪತಿಯ ಕುರಿತು ನಿತ್ಯ ಒಂದಲ್ಲ ಒಂದು ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಸದ್ಯದಲ್ಲೇ ರಂಜಾನ್ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಪತಿಯನ್ನು ರಿಲೀಸ್ ಮಾಡಿ ಎಂದು ಕಣ್ಣೀರಿಟ್ಟಿದ್ದಾರೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಮಾತನಾಡಿರುವ ನಟಿ ರಾಖಿ ಸಾವಂತ್, ತಾವು ಮುಸ್ಲಿಂ ಧರ್ಮಕ್ಕೆ ಮತಾಂತಗೊಂಡಿದ್ದರಿಂದ ಈ ಬಾರಿ ಉಮ್ರಾಗೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮುಸ್ಲಿಮರ ಪವಿತ್ರ ಸ್ಥಳವಾಗಿರುವ ಉಮ್ರಾನಲ್ಲಿ ಪತಿ ಆದಿಲ್ ಖಾನ್ ಗಾಗಿ ಪ್ರಾರ್ಥಿಸುವೆ ಎಂದಿದ್ದು, ರಂಜಾನ್ ಇರುವುದರಿಂದ ಪತಿಯನ್ನು ಕ್ಷಮಿಸಿರುವೆ. ಹಾಗಾಗಿ ಆತನನ್ನು ಬೇಗನೇ ಜೈಲಿನಿಂದ ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ರಾಖಿ ಸಾವಂತ್ ಮಾತಿಗೆ ಗೊಂದಲಕ್ಕೀಡಾಗಿದ್ದಾರೆ ಅಭಿಮಾನಿಗಳು. ಮೈಸೂರಿನ ಹುಡುಗ ಆದಿಲ್ ಖಾನ್ ನಿಂದ ರಾಖಿಗೆ ಮೋಸವಾಗಿದೆ ಎಂದು ಹೇಳುತ್ತಿದ್ದವರು, ಇದೀಗ ರಾಖಿ ಆಡಿದ ಮಾತಿನಿಂದಾಗಿ ತಲೆಚಚ್ಚಿಕೊಳ್ಳುತ್ತಿದ್ದಾರೆ. ಈವರೆಗೂ ಆದಿಲ್ ಗೆ ಶಿಕ್ಷೆಯಾಗಬೇಕು, ಅವನು ಜೈಲಿನಲ್ಲಿ ಇರಬೇಕು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಕ್ಯಾಮೆರಾ ಮುಂದೆ ಹೇಳುತ್ತಿದ್ದ ರಾಖಿ, ಈಗ ಉಲ್ಟಾ ಹೊಡೆದಿದ್ದಾರೆ. ಮಾಧ್ಯಮಗಳ…
Author: Prajatv Kannada
ಬೆಂಗಳೂರು: ಮಂಡ್ಯದ ಒಕ್ಕಲಿಗ ಕಲಿಗಳು ಎಂದು ಬಿಂಬಿಸಲಾಗುತ್ತಿರುವ `ಉರಿಗೌಡ, ನಂಜೇಗೌಡ’ ಹೆಸರಿನಲ್ಲಿ ಸಿನಿಮಾವೊಂದು ಮೂಡಿ ಬರುಲಿದ್ದು, ಮೇ 18ರಂದು ಚಿತ್ರೀಕರಣಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ವಿ.ಮುನಿರತ್ನ ಚಿತ್ರಕ್ಕೆ `ಉರಿಗೌಡ-ನಂಜೇಗೌಡ’ (1750-1799 ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸತ್ಯಕಥೆ) ಎಂಬ ಶೀರ್ಷಿಕೆಯನ್ನಿಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿತ್ರದ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ. `ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ಕುರುಕ್ಷೇತ್ರ ಸೇರಿದಂತೆ ಹಲವು ಭಾರೀ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಮುನಿರತ್ನ, ಈ ಬಾರಿ ವಿವಾದಿತ ವ್ಯಕ್ತಿಗಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಯಾವ ರೀತಿ ಈ ಚಿತ್ರ ಮೂಡಿಬರಲಿದೆ ಎಂಬುದು ಕುತೂಹಲ ಚಿತ್ರ ಆರಂಭಕ್ಕೂ ಮುನ್ನವೇ ಶುರುವಾಗಿದೆ.
ಬೆಂಗಳೂರು: ಕನ್ನಡ ಸಾಹಿತ್ಯ, ಉರ್ದು ಸಾಹಿತ್ಯ ಸೇರಿದಂತೆ ಭಾರತೀಯ ಭಾಷೆಗಳ ಸಾಹಿತ್ಯಗಳು ಹೆಚ್ಚು ಬೆಳಕು ಚೆಲ್ಲುವಂತಾಗಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಹಾಗೂ ಲೇಖಕರು ಆದ ಶ್ರೀ ಜಯರಾಮ್ ರಾಯಪುರ ರವರು ತಿಳಿಸಿದರು. ಬಾಜ್ಮ್ ಇ ಗಲಿಹ್, ನಯಾ ಅದಬ್ ಹಾಗೂ ಕರ್ನಾಟಕ ಉರ್ದು ಅಕಾಡೆಮಿಯ ಸಹಯೋಗದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುತ್ತಿರುವ ಭಾರತೀಯ ಸಂಪ್ರದಾಯ ಮತ್ತು ಸೂಫಿಸಂ ಜೀವನ ಮತ್ತು ಹಜರತ್ ಅಮೀರ್ ಖುಸ್ರೋ ಅವರ ಕೆಲಸಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ನಾಡಫ್ರಭು ಕೆಂಪೇಗೌಡರ ಜೀವನಾಧಾರಿತ “ಸಿರಿಗೆ ಸೆರೆ” ಕನ್ನಡ ಭಾಷೆಯಿಂದ ಉರ್ದು ಭಾಷೆಗೆ ಭಾಷಾಂತರಿಸಿರುವ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಅವರು ಮಾತನಾಡಿದರು. ಬೆಂಗಳೂರನ್ನು ಕಟ್ಟಿ ಆಳಿದ ಕೆಂಪೇಗೌಡರ ಆಡಳಿತದ ಕೊನೆ ಅವಧಿಯ ಘಟನೆಗಳನ್ನಾಧರಿಸಿದ ನಾಟಕ ಇದಾಗಿದ್ದು, ಸಿರಿಗೆ ಸೆರೆ ನಾಟಕ ಪುಸ್ತಕವನ್ನು ಕನ್ನಡದಲ್ಲಿ 2015ರಲ್ಲಿ ಅನಾವರಣಗೊಳಿಸಲಾಯಿತು. ಆ ಬಳಿಕ ಹಿಂದಿ ಭಾಷೆಯಲ್ಲಿ ಭಾಷಾಂತರ ಮಾಡಲಾಯಿತು. ಇದೀಗ ಉರ್ದು ಭಾಷೆಗೆ ಭಾಷಾಂತರಿಸಿ ಇಂದು ಲೋಕಾರ್ಪಣೆಗೊಳಿಸಲಾಗಿದೆ ಎಂದು…
ಕಾಲಿವುಡ್ (Kollywood) ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈಗ ಶೂಟಿಂಗ್ ಬ್ರೇಕ್ ಹಾಕಿ ಕ್ರಿಕೆಟ್ ವೀಕ್ಷಿಸಿದ್ದಾರೆ. ಭಾರತ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯವನ್ನ ವೀಕ್ಷಣೆ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯಾ -ಆಸ್ಟ್ರೇಲಿಯಾ ಮ್ಯಾಚ್ ವೀಕ್ಷಿಸಿದ್ದಾರೆ. ಈ ಮೂಲಕ ಇಂಡಿಯಾ ಟೀಂನ ತಲೈವಾ ಬೆಂಬಲಿಸಿದ್ದಾರೆ. ಪಂದ್ಯಕ್ಕೂ ಮುನ್ನ ಕೆಲ ಸಮಯಗಳ ಕಾಲ ಟೀಮ್ ಇಂಡಯಾದ ಆಟಗಾರರನ್ನ ತಲೈವಾ ಮಾತುಕಥೆ ನಡೆಸಿದ್ದಾರೆ. ರೋಹಿತ್ (Rohith) ಅನುಪಸ್ಥಿತಿಯಲ್ಲಿ ಈ ಪಂದ್ಯವನ್ನು ಹಾರ್ದಿಕ್ ಪಾಂಡ್ಯ (Hardik Pandya) ಮುನ್ನಡೆಸುತ್ತಿದ್ದಾರೆ. ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ ನಟ ರಜನಿಕಾಂತ್ `ಜೈಲರ್’ (Jailer Film) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ತಲೈವಾ ಜೊತೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್ ನೀಡಿದ್ದಾರೆ.
SHARE ಕೌಶಂಬಿ: ಕುಟುಂಬದಲ್ಲಿ ಸಂಭವಿಸುವ ಒಂದು ಸಾವು ಎಂತಹ ಧೈರ್ಯಶಾಲಿಗಳನ್ನೂ ಕಂಗೆಡಿಸುತ್ತದೆ. ಕೈಕಾಲುಗಳು ಅಲುಗಾಡದಷ್ಟು ಅಧೀರರನ್ನಾಗಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಆದರೂ ಕೆಲವೊಮ್ಮೆ ನಮ್ಮ ದುಃಖವನ್ನು ನಿಯಂತ್ರಿಸಿಕೊಂಡು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಆಂಬುಲೆನ್ಸ್ ಸಿಗದೆ, ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮೃತದೇಹವನ್ನು ಬೈಕ್‌ನಲ್ಲಿ ಇರಿಸಿಕೊಂಡು ಹೋದ ಮನಕಲಕುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ಸೋದರಿಯ ಶವವನ್ನು ಆಕೆಯ ಅಣ್ಣ, ಬೈಕ್‌ನಲ್ಲಿ ಇರಿಸಿಕೊಂಡು ತೆರಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಖ್ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಭರ್ವಾರಿ ಪಾಲಿಕೆಯ ಅಂಬೇಡ್ಕರ್ ನಗರದಲ್ಲಿ ಈ ಘಟನೆ ವರದಿಯಾಗಿದೆ. ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಚಿಂತೆಗೊಳಗಾಗಿದ್ದ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಲ್ಲಿ ಏಕಾಂಗಿಯಾಗಿ ಇದ್ದ ಸಮಯದಲ್ಲಿ ಆಕೆ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆಗಳು ಮುಗಿದ ಬಳಿಕ ಬಾಲಕಿ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ತುಂಬಾ ಆತಂಕಕ್ಕೆ ಒಳಗಾದವಳಂತೆ…
ಚಿಕ್ಕೋಡಿ: ಪೊಲೀಸರಿಗೆ ಮಾಹಿತಿ ನೀಡಿದರೆ ನಿಮ್ಮ ಮನೆ ಸರ್ವನಾಶವಾಗುತ್ತದೆ ಎಂದು ವಿಚಿತ್ರವಾದ ಡೆತ್ ನೋಟ್ (Death Note) ಬರೆದು ಯುವಕನೋಬ್ಬ (Young Man) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಗಾವಿ (Belegavi) ಜಿಲ್ಲೆಯ ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ನಡೆದಿದೆ. ಆಕಾಶ್ ಮಹಾದೇವ ಮಿರ್ಜಿ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ನನ್ನ ಸಾವಿಗೆ ನಾನೇ ಕಾರಣ. ನಮ್ಮ ಮನೆಯವರು ಕಾರಣರಲ್ಲ. ಯಾವ ಹುಡುಗಿಗಾಗಿಯೂ ನಾನು ಆತ್ಮಹತ್ಯೆ ಮಾಡಿಕೊಂಡಿಲ್ಲ. ಯಾರಾದರೂ ಪೊಲೀಸ್ ಸ್ಟೇಷನ್‌ಗೆ ಹೋದರೆ ನಿಮ್ಮ ಮನೆ ಸರ್ವನಾಶವಾಗುತ್ತದೆ ಎಂದು ಡೆತ್ ನೋಟ್ ಬರೆದು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಆಕಾಶ್ ಅಥಣಿಯ ಎಸ್‌ಎಸ್‌ಎಂಸಿ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ. ತಾವಂಶಿ ಗ್ರಾಮದ ಅನಂತಪೂರ ರಸ್ತೆ ಪರಮಾನಂದ ತೋಟದ ಬಳಿ ನೇಣಿಗೆ ಶರಣಾಗಿದ್ದಾನೆ. ಆದರೆ ವಿಚಿತ್ರವಾಗಿ ಡೆತ್ ನೋಟ್ ಬರೆದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ನಡುವಿನ ವಾಕ್ ಸಮರ ಮಿತಿ ಮೀರುತ್ತಿದ್ದು ಈ ನಡುವೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಪರಿಷತ್ ಶಾಸಕರಾದ ಟಿ.ಎ.ಶರವಣ ಅವರು ಬೆಂಗಳೂರಿನ ಜೆಪಿ ಭವನದಲ್ಲಿ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ವಿರುದ್ಧಸುದ್ದಿಗೋಷ್ಠಿ ನಡೆಸಿ, ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ್ ಅವರು ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಗೌರವ ತೋರಿಸುವಂತೆ ಮಾತನಾಡಿದ್ದನ್ನು ನಾನು ಖಂಡಿಸುತ್ತೇನೆ. ಹೀಗೆ ನಮ್ಮ ಪಕ್ಷದ ನಾಯಕರಿಗೆ ಬಾಯಿಗೆ ಬಂದ ಹಾಗೆ ಮಾತನಾಡಬಾರದು, ಅತ್ಯಂತ ವಿಕೃತ ಹಾಗೂ ನೀಚ ಮನಸ್ಸುಳ್ಳವರು ಮಾತ್ರ ಹೀಗೆ ಮಾತನಾಡುವುದು ಅದೇ ರೀತಿ ನಮ್ಮ ಪಕ್ಷದ ಹಿರಿಯರನ್ನು ನಿಂದಿಸುತ್ತಿದ್ದಾರೆ ಎಂದು ಶಿವನಗೌಡ ನಾಯಕ್ ವಿರುದ್ಧ ಕಿಡಿ ಕಾರಿದರು. ಆದರೆ ಜೆಡಿಎಸ್ ಪಕ್ಷ ತನ್ನ ಕಾರ್ಯ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಎತ್ತರಕ್ಕೆ…
ನವದೆಹಲಿ: 200 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ವಂಚಕ ಸುಕೇಶ್ ಚಂದ್ರಶೇಖರ್ ಅವರ ನ್ಯಾಯಾಂಗ ಬಂಧನವನ್ನು ಮಾರ್ಚ್ 31 ರವರೆಗೆ ವಿಸ್ತರಿಸಿದೆ. ಇಂದು ಮುಂಜಾನೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಸ್ಟಡಿಯನ್ನು ವಿಸ್ತರಿಸಲಾಗಿದೆ. ಈಮಧ್ಯೆ, ನ್ಯಾಯಾಧೀಶರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಕೇಶ್ ಚಂದ್ರಶೇಖರ್ ಅವರು ಪ್ರಕರಣವನ್ನು ಬೇರೆ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಮನವಿ ಮಾಡಿದರು. ಆದರೆ, ನ್ಯಾಯಾಲಯವು ಅವರ ಮನವಿಯನ್ನು ಆಲಿಸಲು ನಿರಾಕರಿಸಿತು ಮತ್ತು ಅರ್ಜಿಯ ಸಲ್ಲಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ‘ಆರೋಪಿಗೆ ನ್ಯಾಯಮೂರ್ತಿಗಳ ಬಗ್ಗೆ ಪ್ರತಿಕ್ರಿಯಿಸುವ ಹಕ್ಕು ಇಲ್ಲ’ ಎಂದು ನ್ಯಾಯಾಲಯ ವಾದಿಸಿದೆ. ಇದಕ್ಕೂ ಮೊದಲು ಫೆಬ್ರುವರಿ 24 ರಂದು, ದೆಹಲಿ ನ್ಯಾಯಾಲಯವು ಸುಕೇಶ್ ಚಂದ್ರಶೇಖರ್‌ರನ್ನು ಮೂರು ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿತ್ತು. ಇತ್ತೀಚೆಗೆ ಮತ್ತೊಂದು ಸುಲಿಗೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿ ಜಪ್ನಾ…
ನವದೆಹಲಿ: ಕೋಲಾರ (Kolar) ದಿಂದಲೇ ಈ ಬಾರಿ ಸ್ಪರ್ಧೆ ಮಾಡುವುದಾಗಿ ಬಹಿರಂಗ ಘೋಷಣೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಯೂಟರ್ನ್ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಕೋಲಾರದ ಬದಲು ವರುಣಾದಲ್ಲಿ ಕಣಕ್ಕಿಳಿಯಲು ಚಿಂತಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಹುಲ್ ಗಾಂಧಿ (Rahul Gandhi) ಸಲಹೆ ಬಳಿಕ ತಮ್ಮ ನಿರ್ಧಾರ ಬದಲಿಸಿರುವ ಸಿದ್ದರಾಮಯ್ಯ ವರುಣಾ (Varuna Constituency) ಕಡೆಗೆ ಮುಖ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಶುಕ್ರವಾರ ನಡೆದ ಸಿಇಸಿ ಸಭೆಯಲ್ಲಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆಯಾಗಿದೆ. ಈ ವೇಳೆ ಕೋಲಾರ ಬಿಟ್ಟು ವರುಣಾದಲ್ಲಿ ಸ್ಪರ್ಧೆ ಮಾಡಲು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ. ಕಾರಣವೇನು..?: ಕೋಲಾರದಲ್ಲಿ ನಡೆಸಿದ ಸರ್ವೆ ವರದಿಗಳು ನಿಮಗೆ ಪೂರಕವಾಗಿಲ್ಲ. ಸುಲಭವಾಗಿ ಗೆಲುವು ದಕ್ಕುವಂತದಲ್ಲ, ಕಠಿಣ ಶ್ರಮದ ಅಗತ್ಯವಿದೆ. ಕಾಂಗ್ರೆಸ್ ನಾಯಕರ ಒಳ ಜಗಳ ನಿಮ್ಮಗೆ ಸಮಸ್ಯೆಯಾಗಬಹುದು. ಬಿಜೆಪಿ ಜೆಡಿಎಸ್ ನಿಮ್ಮನ್ನು ಕಟ್ಟಿ ಹಾಕಲು ಪ್ರಯತ್ನ ಮಾಡಬಹುದು. ನೀವೂ ಬೇರೆ ಕ್ಷೇತ್ರಗಳಲ್ಲೂ ಪ್ರವಾಸ…
ಬೆಂಗಳೂರು: ಪ್ರತಿ ಸಲ ರಾಜ್ಯಕ್ಕೆ ಬರುವಾಗ ಸುಳ್ಳಿನ ಮೂಟೆಯನ್ನೇ ಪ್ರಧಾನಿ ಮೋದಿ ಹೊತ್ತು ತರುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಮೋದಿಯವರೇ, ನಿಮಗೆ ಚುನಾವಣಾ ಸಮಯದಲ್ಲಿ ಮಾತ್ರ ಕರ್ನಾಟಕ ನೆನಪಾಗುವುದ್ಯಾಕೆ? ಬರ ಬಂದಾಗ,ಪ್ರವಾಹ ಬಂದಾಗ ನಿಮಗೆ ಕರ್ನಾಟಕ ನೆನಪಾಗುವುದಿಲ್ಲ. ಆದರೆ ಚುನಾವಣಾ ಸಮಯದಲ್ಲಿ ನೀವು ಕರೆಯದೇ ಬರುವ ಅತಿಥಿ. ನೀವು ಈಗ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಪದೇ ಪದೇ ಬರುತ್ತೀರಿ?” ಎಂದು ಕಿಡಿಕಾರಿದ್ದಾರೆ. ಮೋದಿಯವರೇ, ಚುನಾವಣಾ ಸಮಯದಲ್ಲಿ ಕರ್ನಾಟಕಕ್ಕೆ ಬರಲು ನಿಮಗೆ ನೂರು ನೆಪಗಳು ಸಿಗುತ್ತವೆ. ಆದರೆ ರಾಜ್ಯ ಸಂಕಷ್ಟದಲ್ಲಿರುವಾಗ ನೀವು ಇದ್ದಕ್ಕಿದ್ದಂತೆ ಎಸ್ಕೇಪ್ ಆರ್ಟಿಸ್ಟ್ ಆಗಿಬಿಡ್ತೀರಾ. ಲಾಭ ಇಲ್ಲದೆ ನೀವು ಕರ್ನಾಟಕದತ್ತ ತಲೆ ಹಾಕಿ ಕೂಡ ಮಲಗುವುದಿಲ್ಲ. ನೀವೊಂದು ರೀತಿ ‘ಶಾಲೆಗೆ ಚಕ್ಕರ್, ಊಟಕ್ಕೆ ಹಾಜರ್’ ಎಂಬ ಗಿರಾಕಿಯಂತಲ್ಲವೆ.?” ಎಂದು ವ್ಯಂಗ್ಯವಾಡಿದ್ದಾರೆ. ಮೋದಿಯವರೇ, ನೀವು ಪ್ರತಿ ಸಲ ಸುಳ್ಳಿನ ಮೂಟೆಯನ್ನೇ ಹೊತ್ತು ತರುತ್ತೀರಿ.ಯಥಾಪ್ರಕಾರ ಆ ಸುಳ್ಳಿನ ಕ್ಯಾಸೆಟ್…