ಚಿತ್ರದುರ್ಗ: 2023ರ ಕರ್ನಾಟಕ ವಿಧಾನಸಭೆ ಚುನಾವಣಾ ಕಾವು ದಿನೇ ದಿನೇ ರಂಗೇರುತ್ತಿದೆ.ಅದರಂತೆ ಕೋಟೆನಾಡು ಚಿತ್ರದುರ್ಗದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಇಂದು ಸಾಮೂಹಿಕವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ, ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆಂದು ಭೇಟಿ ನೀಡಿದ ಸಂದರ್ಭದಲ್ಲಿ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷರಾದ ಶ್ರೀ. ಎಂ. ಜಯಣ್ಣ ಹಾಗು ಇತರ ಕಾರ್ಯಕರ್ತರು ಸ್ವಾಗತ ಕೋರಿದರು. ಚಿತ್ರದುರ್ಗದ ಜೆಡಿಎಸ್ ಅಭ್ಯರ್ಥಿ ಜಿ. ರಘು ಆಚಾರ್ ಬೆಂಬಲಿಸಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಸೈಯದ್ ವಲಿಯುಲ್ಲಾ ಶಾಖಾದ್ರಿ ಡಿ.ಎಸ್(ನೇತಾ), ಮಹಮದ್ ಖಲೀಲುಲ್ಲಾ, ಕಾರ್ಯದರ್ಶಿ ಮಹಮದ್ ಮೋಸಿನ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಭಾಷಾ(ಆರ್.ಕೆ ರಿಯಾಜ್) ಹಾಗು ವಸೀಂ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು. ಚಿತ್ರದುರ್ಗದ ಜೆಡಿಎಸ್ ಅಭ್ಯರ್ಥಿ ಜಿ. ರಘು ಆಚಾರ್ ಬೆಂಬಲಿಸಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಸೈಯದ್ ವಲಿಯುಲ್ಲಾ ಶಾಖಾದ್ರಿ ಡಿ.ಎಸ್(ನೇತಾ), ಮಹಮದ್ ಖಲೀಲುಲ್ಲಾ, ಕಾರ್ಯದರ್ಶಿ ಮಹಮದ್ ಮೋಸಿನ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಭಾಷಾ(ಆರ್.ಕೆ ರಿಯಾಜ್) ಹಾಗು ವಸೀಂ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು. ಸಭೆಯಲ್ಲಿ ಮಾತನಾಡಿದ …
Author: Prajatv Kannada
ಬೆಂಗಳೂರು: ಕುಮಾರಸ್ವಾಮಿ ಅವರನ್ನ ಈ ಬಾರಿ ಜನ ಬೆಂಬಲಿಸುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು (HD Devegowda) ಹೇಳಿದ್ದಾರೆ. ಈ ಸಂಬಂಧ ಪದ್ಮನಾಭ ನಗರದ (Padmanabha Nagar) ನಿವಾಸದ ಬಳಿ ಮಾತನಾಡಿದ ಅವರು, ಪಂಚರತ್ನ ಕಾರ್ಯಕ್ರಮ ಅತ್ಯುತ್ತಮ ಅಂಶವನ್ನು ಜನರ ಮುಂದಿಟ್ಟಿದೆ. ಇದರೊಂದಿಗೆ ಗ್ರಾಮ ವಾಸ್ತವ್ಯ, ಸುವರ್ಣ ಗ್ರಾಮ ಯೋಜನೆಗಳೆಲ್ಲವು ಇದೆ ಎಂದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎರಡು ಬಾರಿಯೂ ಮಾತು ಉಳಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅವರನ್ನ ಈ ಬಾರಿ ಜನ ಬೆಂಬಲಿಸುತ್ತಾರೆ. ಯಾರೇ ಏನೇ ಮಾತಾಡಿದ್ರೂ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದರು. ಜೆಡಿಎಸ್, ಕಾಂಗ್ರೆಸ್ ಬಿ ಟೀಮ್ ಎಂಬ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೌಡರು, ಹೇಳಿಕೊಳ್ಳುವ ಅಧಿಕಾರ ಇದೆ, ನಾನು ಅದನ್ನು ಹೇಗೆ ಖಂಡಿಸಲಿ. ಎಲ್ಲದಕ್ಕೂ ಮಾತನಾಡುವುದಕ್ಕೆ ಹೋಗಲ್ಲ. ಚುನಾವಣೆ ವೇಳೆ ಫಲಿತಾಂಶ ಕೊಡೋರು ರಾಜ್ಯದ ಜನ ಎಂದರು. ಮೇ 8 ರವರೆಗೆ ಒಂದು ದಿನಕ್ಕೆ ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲು ತೀರ್ಮಾನ ಮಾಡಿದ್ದೇನೆ. ಕುಮಾರಸ್ವಾಮಿ ನಿನ್ನೆ ಡಿಶ್ಚಾರ್ಜ್…
ಚಿಕ್ಕಮಗಳೂರು: ಮುಂದಿನ ಸಿಎಂ ಸಿ.ಟಿ.ರವಿ (CT Ravi) ಆಗಲೆಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಘೋಷಣೆ ಮಾಡಿದರು. ಕಡೂರು ತಾಲೂಕಿನ ನಿಡಘಟ್ಟದಲ್ಲಿ ನಡೆಯುತ್ತಿದ್ದ ಬಿಜೆಪಿ (BJP) ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಪಡೆದಿರುವುದು ನಮ್ಮ ಪುಣ್ಯ. ತನ್ನ ಕ್ಷೇತ್ರ ಬಿಟ್ಟು ಪೂರ್ಣ ಬಹುಮತದ ಸರ್ಕಾರಕ್ಕೆ ಓಡಾಡುತ್ತಿದ್ದಾರೆ. ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರೋದು ನಮ್ಮ ಹೆಮ್ಮೆ. ಸಿ.ಟಿ.ರವಿ, ಹಿಂದೂ ಹುಲಿ ಎಂದೇ ಖ್ಯಾತಿಯಾಗಿದ್ದಾರೆ. ಚಿಕ್ಕಮಗಳೂರಿನಿಂದ (Chikkamagaluru) ಸಿ.ಟಿ ರವಿ ಅವರನ್ನು ಗೆಲ್ಲಿಸಿ, ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಇಂಗಿತ ವ್ಯಕ್ತಪಡಿಸಿದರು. ರಾಷ್ಟ್ರದ್ರೋಹಿ ಮುಸ್ಲಿಮರು ಮತ ಬೇಡ ಎಂದು ನಿನ್ನೆ, ಇಂದು, ನಾಳೆಯೂ ಹೇಳುತ್ತೇನೆ. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿ ಜೊತೆಯೇ ಇದ್ದಾರೆ. ಸಿದ್ದು-ಡಿಕೆಶಿ ಬಿಜೆಪಿಯನ್ನ ಜಾತಿವಾದಿ ಅಂತಾರೆ. ಒಕ್ಕಲಿಗರು ನನ್ನ ಹಿಂದೆ ಬನ್ನಿ ನಾನು ಸಿಎಂ ಆಗುತ್ತೇನೆ ಅಂತಾರೆ ಡಿಕೆಶಿ, ಸಿದ್ದರಾಮಯ್ಯನವರೂ ಅದೇ ರೀತಿ ಮಾತನಾಡುತ್ತಾರೆ. ಸಿದ್ದು-ಡಿಕೆಶಿ ನೇರವಾಗಿ ಜಾತಿ ರಾಜಕಾರಣ ಮಾಡ್ತಿದ್ದಾರೆ. ಬಿಜೆಪಿಗೆ ಕೋಮುವಾದಿ ರಾಜಕಾರಣ…
ಮೈಸೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ(Priyanka Gandhi Vadra ) ಅವರು ಮೈಸೂರಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಉತ್ತರ ಭಾರತದ ಹೆಚ್ಚಿನ ನಾಯಕರು ಕರ್ನಾಟಕಕ್ಕೆ ಬಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡುವಾಗ ಕನ್ನಡದಲ್ಲಿ (Kannada) ನಮಸ್ಕರಿಸುವ (salutation) ಹಾಗೆ ಪ್ರಿಯಾಂಕಾ ಸಹ ವೇದಿಕೆ ಮೇಲಿದ್ದ ಎಲ್ಲ ನಾಯಕರ ಹೆಸರುಗಳನ್ನು ಹೇಳಿ ನೆರೆದಿದ್ದ ಜನರಿಗೆ ಎಲ್ಲರಿಗೂ ನಮಸ್ಕಾರ ಎಂದು ಹೇಳುತ್ತಾರೆ. ಮುಂದುವರಿದು ಮತಾಡುವ ಅವರು ಮೈಸೂರು ನಗರದ ಸೌಂದರ್ಯವನ್ನು ವರ್ಣಿಸುತ್ತಾರೆ. ಜಿಲ್ಲೆಯಲ್ಲಿ ಕಾವೇರಿ ಮತ್ತು ಕಬಿನಿ ನದಿಗಳ ಸಂಗಮ ಸಂಭವಿಸುವುದರಿಂದ ಇದು ಪವಿತ್ರ ನಾಡು ಕೂಡ ಹೌದು ಎನ್ನುತ್ತಾರೆ.
ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆ(Karnataka Election)ಗೆ ಕೆಲವೇ ದಿನಗಳು ಬಾಕಿ ಇದ್ದು, ಮತದಾರರನ್ನು ತಮ್ಮತ್ತ ಸೆಳೆಯಲು ರಾಜಕೀಯ ನಾಯಕರು ಇನ್ನಿಲ್ಲದ ತಯಾರಿ ನಡೆಸಿದ್ದಾರೆ. ಅಲ್ಲದೇ ಸಿನಿಮಾ ನಟರ ಮೂಲಕ ತಮ್ಮ ಪ್ರಚಾರ ನಡೆಸುತ್ತಿದ್ದು, ಅದರ ಭಾಗವಾಗಿ ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೆಗೌಡರ ಪರ ಸ್ಯಾಂಡಲ್‌ವುಡ್ (Lovely Star Prem)ನಟ ಲವ್ಲಿ ಸ್ಟಾರ್ ಪ್ರೇಮ್ ಅವರು, ಪ್ರಚಾರ ಕೈಗೊಂಡಿದ್ದಾರೆ. ಇಂದು ದಾಸನಪುರ ಹೋಬಳಿಯ ಹಲವೆಡೆ ಪ್ರಚಾರ ಕಾರ್ಯ ನಡೆದಿದೆ. ಇದೇ ವೇಳೆ ಮಾತನಾಡಿದ ನಟ ಪ್ರೇಮ್, ನಾನು ವ್ಯಕ್ತಿ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಇದು ಪಕ್ಷದ ಪರ ಪ್ರಚಾರವಲ್ಲ. ಮುನೆಗೌಡರು ಚಿತ್ರರಂಗದ ಕುಟುಂಬ. ಆಗಾಗಿ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ ಎಂದು ನಟ ಪ್ರೇಮ್ ಈ ವೇಳೆ ತಮ್ಮ ಹೇಳಿಕೆಯನ್ನು ಹೇಳಿದ್ದಾರೆ.
ರಾಮನಗರ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಮಕ್ಕಳಂತೆ ಹಠ ಮಾಡ್ತಾರೆ, ಸರಿಯಾಗಿ ಊಟಾನೆ ಮಾಡಲ್ಲ ಎಂದು ಪತ್ನಿ ಅನಿತಾ ಕುಮಾರಸ್ವಾಮಿ (Anita Kumaraswamy) ಹೇಳಿದ್ದಾರೆ. ಹೆಚ್‌ಡಿಕೆ ಅವರ ಆರೋಗ್ಯ (Health) ವಿಚಾರ ಕುರಿತು ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡುತ್ತಾರೆ. ಬರೀ ಮೊಸರನ್ನ ತಿನ್ನುತ್ತಾರೆ. ಹೆಚ್ಚು ನೀರು ಕುಡಿಯಲ್ಲ, ಸರಿಯಾಗಿ ಊಟ ಮಾಡಲ್ಲ. ಹೀಗಾಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ ಚನ್ನಪಟ್ಟಣದಲ್ಲಿ (Channapatna Constituency) ಹೆಚ್‌ಡಿಕೆ ಪರ ಪ್ರಚಾರ ಮಾಡಿದ ಅನಿತಾ ಕುಮಾರಸ್ವಾಮಿ, ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡುತ್ತಾ, ನಾನು ಚನ್ನಪಟ್ಟಣದಾದ್ಯಂತ ಪ್ರಚಾರ ಮಾಡುತ್ತಿದ್ದು, ಕ್ಷೇತ್ರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇಲ್ಲಿನ ಜನ ಬುದ್ಧಿವಂತರಾಗಿದ್ದು, ಕುಮಾರಸ್ವಾಮಿ ಅವರನ್ನ ಅರ್ಥ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಸಿಎಂ ಕ್ಯಾಂಡಿಡೇಟ್, ಅವರನ್ನ ಗೆಲ್ಲಿಸಿದ್ರೆ ಕ್ಷೇತ್ರಕ್ಕೆ…
ಇಸ್ಲಾಮಾಬಾದ್: ದ್ವಿಪಕ್ಷೀಯ ರಕ್ಷಣಾ ಬಾಂಧವ್ಯ ವೃದ್ಧಿಸುವ ಉದ್ದೇಶದಿಂದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಚೀನಾಕ್ಕೆ ತೆರಳಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಪಾಕಿಸ್ತಾನ ಸೇನೆಯ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ನಾಲ್ಕನೇ ವಿದೇಶಿ ಭೇಟಿಯಾಗಿದೆ. ಜನವರಿಯಲ್ಲಿ ಮುನೀರ್ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮೊದಲ ಅಧಿಕೃತ ಭೇಟಿ ನೀಡಿದರು. ಒಂದು ತಿಂಗಳ ನಂತರ ಬ್ರಿಟನ್ನ ರಕ್ಷಣಾ ಸಚಿವಾಲಯದ ಆಹ್ವಾನದ ಮೇರೆಗೆ ಭದ್ರತೆಗೆ ಸಂಬಂಧಿಸಿದ ಕಾರ್ಯತಂತ್ರದ ಸಮಸ್ಯೆಗಳನ್ನು ಚರ್ಚಿಸಲು ಇಂಗ್ಲೆಂಡ್ ಗೆ ಭೇಟಿ ನೀಡಿದರು. ನಂತರ ಮತ್ತೆ ಯುಎಇಗೆ ಭೇಟಿ ನೀಡಿದರು. ಇದೀಗ ನಾಲ್ಕನೇ ಭಾರಿ ಚೀನಾಗೆ ಭೇಟಿ ನೀಡುತ್ತಿದ್ದಾರೆ. ದ್ವಿಪಕ್ಷೀಯ ಮಿಲಿಟರಿ ಸಂಬಂಧಗಳನ್ನು ಹೆಚ್ಚಿಸಲು ಚೀನಾಕ್ಕೆ ನಾಲ್ಕು ದಿನಗಳ ಅಧಿಕೃತ ಭೇಟಿ ನೀಡಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ಹೆಚ್ಚಿನ ವಿವರಗಳನ್ನು ನೀಡದೆ ಹೇಳಿಕೆ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಹೊಸ ಸೇನಾ ಮುಖ್ಯಸ್ಥರು ನೇಮಕಗೊಂಡ ವಾರದಲ್ಲೇ…
ಸುಡಾನ್ ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾಕಷ್ಟು ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರನ್ನು ಕರೆತರಲು ಭಾರತ ಸರ್ಕಾರ ಅಪರೇಷನ್ ಕಾವೇರಿ ಆರಂಭಿಸಿದ್ದು ಇದರ ಅಡಿಯಲ್ಲಿ ಸುಡಾನ್ ನಿಂದ ಭಾರತೀಯರ ಮೊದಲ ಬ್ಯಾಚ್ ಹೊರಟಿದೆ. ಅಪರೇಷನ್ ಕಾವೇರಿ ಮೊದಲ ಬ್ಯಾಚ್ ನಲ್ಲಿ 278 ಪ್ರಯಾಣಿಕರನ್ನ ಹೊತ್ತ ಐಎನ್‌ಎಸ್ ಸುಮೇಧಾ ಹಡಗು ಸುಡಾನ್ನಿಂದ ಜೆಡ್ಡಾಗೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಐಎನ್‌ಎಸ್ ಸುಮೇಧಾದಲ್ಲಿದ್ದ ಭಾರತೀಯರ ಫೋಟೋಗಳನ್ನ ಟ್ವೀಟ್ ಮಾಡಿದ್ದು, ತಮ್ಮ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳಲು ಕೆಲವರು ರಾಷ್ಟ್ರಧ್ವಜವನ್ನ ಹಿಡಿದಿದ್ದರು ಎಂದರು. ಅದ್ರಂತೆ ಬಾಗ್ಚಿ, ‘ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್’ನಿಂದ ಮೊದಲ ಬ್ಯಾಚ್ ಭಾರತೀಯರು ಹೊರಟಿದ್ದಾರೆ. ಐಎನ್‌ಎಸ್ ಸುಮೇಧಾ 278 ಜನರೊಂದಿಗೆ ಸುಡಾನ್ ಏರ್ ಫೋರ್ಟ್ ನಿಂದ ಜೆಡ್ಡಾಗೆ ಹೊರಟಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಮೂಲದ ಕೆನಡಾದ ಖ್ಯಾತ ಅಂಕಣಕಾರ ಮತ್ತು ಪ್ರಸಿದ್ಧ ಟಿವಿ ನಿರೂಪಕ ತಾರೆಕ್ ಫತಾಹ್ ಇಂದು ನಿಧನರಾಗಿದ್ದಾರೆ. ಫತಾಹ್ ದೀರ್ಘಕಾಲದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದು ಅವರಿಗೆ 73 ವರ್ಷ ವಯಸ್ಸಾಗಿತ್ತು. ಫತಾಹ್ ಸಾವಿನ ಸುದ್ದಿಯನ್ನು ಪುತ್ರಿ ನತಾಶಾ ಫತಾಹ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ. ಪಂಜಾಬ್‌ನ ಸಿಂಹ, ಹಿಂದುಸ್ತಾನದ ಮಗ, ಕೆನಡಾದ ಪ್ರೇಮಿ, ಸತ್ಯದ ಮಾತುಗಾರ, ನ್ಯಾಯಕ್ಕಾಗಿ ಹೋರಾಟಗಾರ, ದೀನದಲಿತರು, ಹಿಂದುಳಿದವರು ಮತ್ತು ತುಳಿತಕ್ಕೊಳಗಾದವರ ದನಿ ತಾರೆಕ್ ಫತಾಹ್ ನಿಧನರಾಗಿದ್ದಾರೆ. ಅವರ ಕ್ರಾಂತಿಯು ಅವನನ್ನು ತಿಳಿದಿರುವ ಮತ್ತು ಪ್ರೀತಿಸುವ ಎಲ್ಲರೊಂದಿಗೆ ಮುಂದುವರಿಯುತ್ತದೆ. ನೀವು ನಮ್ಮೊಂದಿಗೆ ಸೇರುತ್ತೀರಾ?’ ಎಂದು ನತಾಶಾ ಟ್ವೀಟ್ ಮಾಡಿದ್ದಾರೆ. 1949 ನವೆಂಬರ್ 20ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ತಾರೆಕ್ ಫತಾಹ್ 1980ರ ಆರಂಭದಲ್ಲಿ ದಶಕದಲ್ಲಿ ಕೆನಡಾಗೆ ವಲಸೆ ಹೋಗಿದ್ದರು. ಅಲ್ಲಿ ಅವರು ರಾಜಕೀಯ ಕಾರ್ಯಕರ್ತ, ಪತ್ರಕರ್ತ, ಟಿವಿ ನಿರೂಪಕರಾಗಿ ಕೆಲಸ ಮಾಡಿದ್ದರು. ಅವರು ‘ಚೇಸಿಂಗ್ ಎ ಮಿರಾಜ್: ದಿ ಟ್ರಾಜಿಕ್ ಇಲ್ಯೂಷನ್ ಆಫ್ ಆನ್ ಇಸ್ಲಾಮಿಕ್ ಸ್ಟೇಟ್’ ಮತ್ತು ‘The…
ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾತ್‌ನ ಭಯೋತ್ಪಾದನಾ ನಿಗ್ರಹ ಕಚೇರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಕನಿಷ್ಠ 12 ಮಂದಿ ಪೊಲೀಸರು ಮೃತಪಟ್ಟಿದ್ದು. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಖೈಬರ್ ಪುಂಖ್ಯಾ ಪ್ರಾಂತ್ಯದ ಪೊಲೀಸ್ ಮಹಾನಿರೀಕ್ಷಕ ಅಖ್ತರ್ ಹಯಾತ್ ಖಾನ್ ತಿಳಿಸಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಭಯೋತ್ಪಾದನಾ ನಿಗ್ರಹ ಇಲಾಖೆ ಡಿಐಜಿ ಖಾಲಿದ್ ಸೊಹೈಲ್, ಪೊಲೀಸ್ ಠಾಣೆಯ ಮೇಲೆ ಯಾವುದೇ ಬಾಂಬ್ ದಾಳಿ ಅಥವಾ ಗುಂಡಿನ ದಾಳಿ ನಡೆದಿಲ್ಲ. ಇದು ಆತ್ಮಹತ್ಯಾ ದಾಳಿಯೂ ಅಲ್ಲ. ಮದ್ದುಗುಂಡುಗಳು ಮತ್ತು ಶೆಲ್‌ಗಳನ್ನು ಸಂಗ್ರಹಿಸಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆಯೇ ಹೊರತಾಗಿ ಪೊಲೀಸ್ ಠಾಣೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದೆ. ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸುತ್ತಿವೆ. ಕುಸಿದ ಕಟ್ಟಡ ಅತ್ಯಂತ ಹಳೆಯದಾಗಿತ್ತು. ಹಾಗಾಗಿ ಸಿಬ್ಬಂದಿಯನ್ನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಟಿಡಿ ಡಿಐಜಿ ತಿಳಿಸಿದ್ದಾರೆ.