ಬೆಂಗಳೂರು: ಕಳ್ಳತನಕ್ಕೆ ಸಹಾಯ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಯಲ್ಲಪ್ಪ ಎಂಬಾತನನ್ನು ಸಸ್ಪೆಂಡ್ ಮಾಡಲಾಗಿದೆ. ಯಲ್ಲಪ್ಪ ಬನಶಂಕರಿ ಠಾಣೆಯ ಕ್ರೈಂ ವಿಭಾಗದ ಕಾನ್ಸ್ಟೇಬಲ್ ಆಗಿದ್ದನು. ಬನಶಂಕರಿ ಠಾಣೆಯ ಪೊಲೀಸರು ಕಳ್ಳತನದ ಗ್ಯಾಂಗ್ ಒಂದನ್ನ ಬಂಧನ ಮಾಡಿದ್ದರು. ಆ ಆರೋಪಿಗಳ ವಿಚಾರಣೆ ವೇಳೆ ಕಳ್ಳರು ಕಳ್ಳತನದಲ್ಲಿ ಯಲ್ಲಪನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಯಲಪ್ಪನ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಯಲ್ಲಪ್ಪನನ್ನು ಅಮಾನತು ಮಾಡಿ ತನಿಖೆಗೆ ಅದೇಶ ಹೊರಡಿಸಲಾಗಿದೆ.
Author: Prajatv Kannada
ಬೆಂಗಳೂರು: ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬೆಂಗಳೂರಿನ ಹೈಕೋರ್ಟ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 57 ಸಿವಿಲ್ ನ್ಯಾಯಾಧೀಶ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಕಲು ಏಪ್ರಿಲ್ 10, 2023 ಕೊನೆಯ ದಿನಾಂಕವಾಗಿದೆ. ಆಸಕ್ತರು ತಡಮಾಡದೇ ಈ ಕೂಡಲೇ ಅರ್ಜಿ ಹಾಕಬಹುದು. ಕರ್ನಾಟಕ ಹೈ ಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 10, 2023ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು ಎಂದು ತಿಳಿಸಿದೆ.
ಬೆಂಗಳೂರು: ಚುನಾವಣಾ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಯ ನಾಯಕರ ನಡುವಿನ ಮುಸುಕಿನ ಗುದ್ದಾಟ ತೀವ್ರಗೊಂಡಿದೆ. ಸಚಿವ ವಿ. ಸೋಮಣ್ಣ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ತಿಕ್ಕಾಟ ಒಂದು ಕಡೆಯಾದರೆ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಡುವಿನ ಫೈಟ್ ಕೂಡಾ ಬಹಿರಂಗವಾಗಿಯೇ ನಡೆಯುತ್ತಿದೆ. ಇದರ ಜೊತೆಗೆ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಡುವಿನ ಮುಸುಕಿನ ಗುದ್ದಾಟವೂ ಬಿಜೆಪಿ ಹೈಕಮಾಂಡ್ ತಲೆನೋವಿಗೆ ಕಾರಣವಾಗಿದೆ. ವಿ. ಸೋಮಣ್ಣ v/s ವಿಜಯೇಂದ್ರ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದ ಸಚಿವ ವಿ. ಸೋಮಣ್ಣ ದಿಢೀರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಅವರು ವಿಜಯೇಂದ್ರ ವಿರುದ್ದ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ನಡುವೆ ಸೋಮಣ್ಣ ಅವರು ಡಿ.ಕೆ.ಶಿವಕುಮಾರ್ ಜೊತೆಗೆ ಇದ್ದ ಫೋಟೋ ಕೂಡಾ ವೈರಲ್ ಆಗಿತ್ತು. ಈ ಬೆನ್ನಲ್ಲೇ ಹೈಕಮಾಂಡ್ ಸೋಮಣ್ಣ ಅವರನ್ನು ದೆಹಲಿಗೆ…
ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ (Muniratna)ಅವರ ವಿರುದ್ಧ ಸರಣೀಯ ಟ್ವೀಟ್ ಮಾಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy). ಉರಿಗೌಡ (Urigowda)-ನಂಜೇಗೌಡ (Nanjegowda) ಕುರಿತಾದ ಸಿನಿಮಾ ಮಾಡಲು ಮುನಿರತ್ನ ತಯಾರಾಗಿದ್ದರು. ತಮ್ಮದೇ ಬ್ಯಾನರ್ ನಲ್ಲಿ ‘ಉರಿಗೌಡ-ನಂಜೇಗೌಡ’ ಟೈಟಲ್ ಗಾಗಿ ಅರ್ಜಿಯನ್ನೂ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಲ್ಲಿಸಿದ್ದರು. ವಾಣಿಜ್ಯ ಮಂಡಳಿಗೆ ಸಲ್ಲಿಸಿದ ಅರ್ಜಿಯೊಂದಿಗೆ ಕುಮಾರಸ್ವಾಮಿ ಸರಣೀಯ ಟ್ವೀಟ್ ಮಾಡಿದ್ದಾರೆ. ಕಲ್ಪಿತಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ, ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೇಬೇಕೆಂಬ ಹಿಡೆನ್ ಅಜೆಂಡ್ ಬಿಜೆಪಿಗೆ ಇರುವುದಂತೂ ಸತ್ಯ ಎಂದು ಟ್ವಿಟ್ ಮಾಡಿದ್ದಾರೆ ಕುಮಾರಸ್ವಾಮಿ. ಮುನಿರತ್ನ ವಿರುದ್ಧವೂ ಟ್ವಿಟ್ ಮಾಡಿರುವ ಅವರು, ‘ಸಚಿವರು ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಶ್ರೀ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ ಮೂಲಕ ಉರಿಗೌಡ-ನಂಜೇಗೌಡ’ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ…
ಬೆಂಗಳೂರು: ತಮ್ಮ ವಾಹನಗಳ ಮೇಲಿರುವ ಟ್ರಾಫಿಕ್ ಫೈನ್ ಕಟ್ಟಲು ಶೇ. 50% ರಷ್ಟು ರಿಯಾಯಿತಿ ಘೋಷಿಸಿರುವ ಹಿನ್ನೆಲೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ 13 ದಿನಗಳಲ್ಲಿ 3.22 ಲಕ್ಷ ಪ್ರಕರಣಗಳಿಂದ 9.30 ಕೋಟಿ ರೂ. ದಂಡ ಸಂಗ್ರಹವಾಗಿದೆ. ಅದಾಗ್ಯೂ ರಿಯಾಯಿತಿ ದರದಲ್ಲಿ ದಂಡ ಕಟ್ಟುವವರಿಗೆ ಇನ್ನೆರಡೇ ದಿನ ಉಳಿದುಕೊಂಡಿದೆ. ಫೆ.11ರ ಒಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡವನ್ನು ಶೇ.50 ಪಾವತಿಸಿ ಪ್ರಕರಣಗಳನ್ನು ಮಾ.18ರೊಳಗೆ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಂಚಾರ ನಿರ್ವಹಣಾ ಕೇಂದ್ರ ಪೇಟಿಎಂ ಆಯಪ್, ಕೆಎಸ್‌ಪಿ ಆಯಪ್, ಕರ್ನಾಟಕ ಒನ್, ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ದಂಡ ಪಾವತಿಸಲು ಅವಕಾಶ ನೀಡಲಾಗಿದೆ. ಬಾಕಿ ದಂಡ ಪಾವತಿಗೆ ರಿಯಾಯಿತಿ ಸೌಲಭ್ಯ 2 ದಿನ ಮಾತ್ರ ಇರಲಿದೆ. ಕಳೆದ ಬಾರಿ ನಗರ ವ್ಯಾಪ್ತಿಯಲ್ಲಿ ಜನರು ಸ್ವಯಂಪ್ರೇರಿತರಾಗಿ 9 ದಿನಗಳಲ್ಲಿ 43.35 ಲಕ್ಷ ಪ್ರಕರಣಗಳಿಂದ 152.87 ಕೋಟಿ ರೂ. ದಂಡ ಪಾವತಿಸಿದ್ದರು.
ರಾಮನಗರ: ಬೆಂಗಳೂರು-ಮೈಸೂರು (Bengaluru- Mysuru ExpressWay) ದಶಪಥ ಹೆದ್ದಾರಿಯಲ್ಲಿ ಮತ್ತೆ ಮಳೆ ಅವಾಂತರ ಸೃಷ್ಠಿಯಾಗಿದ್ದು ಹೆದ್ದಾರಿ ಜಲಾವೃತವಾಗಿದೆ. ರಾಮನಗರ ಸಮೀಪದ ಸಂಘಬಸವನ ದೊಡ್ಡಿ ಗ್ರಾಮದ ಸಮೀಪ ಹೆದ್ದಾರಿಯಲ್ಲಿ ಮಳೆ (Rain) ನೀರು ನಿಂತಿದ್ದು ವಾಹನಸವಾರರು ಪರದಾಟ ನಡೆಸಿದ್ದಾರೆ. ಕೆಲ ವಾಹನಗಳು ಕೆಟ್ಟು ನಿಂತಿದ್ದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ದುಬಾರಿ ಟೋಲ್ ವಸೂಲಿ ಮಾಡುವ ಹೆದ್ದಾರಿ ಪ್ರಾಧಿಕಾರ ಸರಿಯಾಗಿ ಮಳೆ ನೀರು ಆಚೆ ಹೋಗುವ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆನೀರು ಸರಾಗವಾಗಿ ಹರಿದುಹೋಗದೆ ಅವಾಂತರ ಸೃಷ್ಟಿಯಾಗಿದ್ದು, ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮಳೆ ನೀರಿಗೆ ಕೆಟ್ಟುನಿಂತ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂ, ಕಾರಿನಲ್ಲಿದ್ದವರು ಅನಾಹುತದಿಂದ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದ್ರೂ ಅಧಿಕಾರಿಗಳು ನೆರವಿಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕಿಡಿಕಾರಿದ್ದಾರೆ.
ವಾಷಿಂಗ್ಟನ್: ಕೆಲ ಸೋಷಿಯಲ್ ಮೀಡಿಯಾ ಖಾತೆಯಿಂದ ಕಳೆದ ಎರಡು ವರ್ಷಗಳ ಕಾಲ ಬ್ಯಾನ್ ಆಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳಲ್ಲಿ ಖಾತೆಗಳಿಗೆ ಮರಳಿದ್ದಾರೆ. 2021ರ ಜನವರಿ 6ರಂದು ಟ್ರಂಪ್ ಬೆಂಬಲಿಗರು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದರು. ಈ ಹಿಂಸಾಚಾರಕ್ಕೆ ಟ್ರಂಪ್ ಪ್ರಚೋದನೆ ನೀಡುವಂತಹ ಪೋಸ್ಟ್‌ಗಳನ್ನು ಹಾಕಿದ್ದಕ್ಕೆ ಅವರ ಯೂಟ್ಯೂಬ್ ಹಾಗೂ ಫೇಸ್‌ಬುಕ್ ಖಾತೆಗಳನ್ನು ಬ್ಯಾನ್ ಮಾಡಲಾಗಿತ್ತು. ಇದೀಗ 2 ವರ್ಷಗಳ ಬಳಿಕ ಅವರ ಖಾತೆಗಳನ್ನು ಮತ್ತೆ ಸ್ಥಾಪಿಸಲಾಗಿದೆ. ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗೆ ಮರಳುತ್ತಲೇ ಟ್ರಂಪ್ ಪೋಸ್ಟ್‌ಗಳನ್ನು ಹಾಕಿದ್ದಾರೆ. ಶುಕ್ರವಾರ ಟ್ರಂಪ್ ಪೋಸ್ಟ್ ಒಂದನ್ನು ಹಾಕಿ, ‘ಐ ಆಮ್ ಬ್ಯಾಕ್’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇಲ್ಲಿವರೆಗೆ ನಿಮ್ಮನ್ನು ಕಾಯಿಸಿರುವುದಕ್ಕೆ ಕ್ಷಮಿಸಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಯೂಟ್ಯೂಬ್ ಶುಕ್ರವಾರ ಟ್ರಂಪ್ ಅವರ ಚಾನಲ್ ಅನ್ನು ಮರಳಿಸಿದ್ದು, ಮೆಟಾ ಪ್ಲಾಟ್‌ಫಾರ್ಮ್ ಈ ವರ್ಷದ ಆರಂಭದಲ್ಲಿ ಅವರ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಮರಳಿಸಿವೆ. ಟ್ವಿಟ್ಟರ್ ಅನ್ನು ಖರೀದಿಸಿದ ಎಲೋನ್…
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಲಾಹೋರ್ ಹೈಕೋರ್ಟ್ 9 ಪ್ರಕರಣಗಳಲ್ಲಿ ರಕ್ಷಣಾ ಜಾಮೀನು ನೀಡಿದೆ. ಇದೇ ವೇಳೆ ಬಂಧನ ವಾರಂಟ್ನ್ನು ಹೈಕೋರ್ಟ್ ರದ್ದು ಮಾಡಿದ್ದು, ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ಹಾಜರಾದ ನಂತರ 8 ಭಯೋತ್ಪಾದನಾ ಪ್ರಕರಣ ಮತ್ತು ಒಂದು ಸಿವಿಲ್ ಪ್ರಕರಣದಲ್ಲಿ ರಕ್ಷಣಾ ಜಾಮೀನು ನೀಡಲಾಗಿದೆ.
ರಾಜಮೌಳಿ ನಿರ್ದೇಶನದ ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜಾ ನಟನೆಯ ತೆಲುಗಿನ ಆರ್ ಆರ್ ಆರ್ ಸಿನಿಮಾದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ಚಿತ್ರತಂಡ ಖುಷಿಯ ಅಲೆಯಲ್ಲಿ ತೇಲಾಡುತ್ತಿದೆ. ಆದರೆ ‘ಆರ್ಆರ್ಆರ್’ ಚಿತ್ರ ತಂಡದಲ್ಲಿ ಏನೋ ಬಿರುಕು ಇದೆ ಎಂಬ ಅನುಮಾನ ಮೂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಘಟನೆಗಳು ನಡೆಯುತ್ತಿದೆ. ‘ನಾಟು ನಾಟು..’ ಗಾಯಕರಲ್ಲಿ ಒಬ್ಬರಾದ ಕಾಲ ಭೈರವ ಇದೀಗ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ‘ಆಸ್ಕರ್’ ಪ್ರಶಸ್ತಿ ಸಮಾರಂಭದಲ್ಲಿ ಭಾಗಿ ಆಗಲು ‘ಆರ್ಆರ್ಆರ್’ ತಂಡದ ಸದಸ್ಯರು ಅಮೆರಿಕಕ್ಕೆ ತೆರಳಿದ್ದರು. ಈಗ ವಾಪಸ್ ಬಂದಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕಾಲ ಭೈರವ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದು, ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಆ ಟ್ವೀಟ್ನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಹೆಸರನ್ನು ಕಾಲ ಭೈರವ ಪ್ರಸ್ತಾಪಿಸಿಲ್ಲ. ಇದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ‘ನಾಟು ನಾಟು..’…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದರ ಮೇಲೊಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನಿಡುತ್ತಿರುವ ಶಿವಣ್ಣ ಇದೀಗ `ಭೈರತಿ ರಣಗಲ್’ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದರು. ಈ ಬೆನ್ನಲ್ಲೇ `ಭೈರತಿ ರಣಗಲ್’ ಸಿನಿಮಾ ಕುರಿತು ಮತ್ತೊಂದು ಸುದ್ದಿ ಹರಿದಾಡುತ್ತಿದೆ. 2017ರಲ್ಲಿ ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣನ ನಿರ್ವಹಿಸಿದ್ದ `ಭೈರತಿ ರಣಗಲ್’ ಪಾತ್ರ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾಕ್ಕೆ ಗೆಲ್ಲುವ ಶಕ್ತಿ ತಂದುಕೊಟ್ಟಿದ್ದೇ ಶಿವಣ್ಣನ ಪಾತ್ರ. ಈಗ ಅದೇ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ತೆರೆಗೆ ಬರುತ್ತಿದ್ದು, ಚಿತ್ರಕ್ಕೆ `ಭೈರತಿ ರಣಗಲ್’ ಎನ್ನುವ ಟೈಟಲ್ ನೇ ಇಡಲಾಗಿದೆ. `ಮಫ್ತಿ’ ಪ್ರೀಕ್ವೆಲ್ ಭೈರತಿ ರಣಗಲ್‌ಗೆ ನರ್ತನ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ `ಕೆಜಿಎಫ್ 2′ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಚಿತ್ರತಂಡ ಘೋಷಿಸಿದೆ. ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ರವಿ ಬಸ್ರೂರು ಅವರನ್ನು ತಂಡಕ್ಕೆ ಸ್ವಾಗತಿಸಿದೆ. ಈ ಹಿಂದೆ ಇದೇ ತಂಡದ ಜೊತೆ ಕೈ ಜೋಡಿಸಿ…