ಬೀದರ್ (ಏ.25): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾದ್ರಾಪೂರ, ಮೊಗ್ಗಿನತಾಂಡ, ಮದರಗಿ, ಗೋವಿಂದತಾಂಡ, ಗುಡಿತಾಂಡ, ಮುತ್ತಂಗಿ ಸೇರಿದಂತೆ ವಿವಿಧೆಡೆ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು ನಡೆಸಿದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತಯಾಚನೆ ಯಾತ್ರೆ (ಪ್ರಚಾರ ಕಾರ್ಯ) ಭರ್ಜರಿಯಾಗಿ ನಡೆದಿದ್ದು, ಕ್ಷೇತ್ರದ ಜನರು ಪಾಸಿಟಿವ್ ರಸ್ಪಾನ್ಸ್ ತೋರಿದ್ದಾರೆ. ಕ್ಷೇತ್ರದ ಭಾದ್ರಾಪೂರ, ಮೊಗ್ಗಿನತಾಂಡ, ಮದರಗಿ, ಗೋವಿಂದತಾಂಡ, ಗುಡಿತಾಂಡ, ಮುತ್ತಂಗಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸೋಮವಾರ ಸಂಜೆ ಭೇಟಿ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಗಳ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಗ್ರಾಮಸ್ಥರು ಬಾಜಾ ಭಜಂತ್ರಿಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಈ ವೇಳೆ ಗ್ರಾಮ ಸಂಚಾರ ನಡೆಸಿದ ಶಾಸಕರು, ಕೈಮುಗಿದು ಮತಯಾಚಿಸಿದರು. ಮತಯಾಚನೆಯ ನಡುವೆ ಅವರು, ವಿವಿಧ ಗ್ರಾಮಗಳ ದೇವಸ್ಥಾನ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.…
Author: Prajatv Kannada
ಕಲಘಟಗಿ ವಿಧಾನಸಭಾ ಚುನಾವಣೆ ಕಾವು ದಿನ ದಿನ ರಂಗ ಏರುತ್ತಿದ್ದು ಸಂತೋಷ ಲಾಡ ಪರ ಜೈಕಾರ ಕೂಗಿದ ಅಳ್ಳಾವರ ಕ್ಷೇತ್ರದ ಜನಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸಂತೋಷ ಲಾಡ ಸಚಿವರಾಗಿದ್ದಾಗ ತಮ್ಮ ಅವದಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದಾರೆ, ಹಾಗೂ ಕ್ಷೇತ್ರದ ಸುತ್ತಲಿರುವ ಗ್ರಾಮದ ಜನರು ಕಷ್ಟ ಅಂದರೆ ಸಾಕು ತಮ್ಮ ಸ್ವಂತ ಖರ್ಚಿನಲ್ಲಿ ಕೆಲ ಬಡ ವಿದ್ಯಾರ್ಥಿಗಳಿಗೆ ಸಹಾಯ ಧನ ಮಾಡಿದ್ದಾರೆ. ಹಾಗೇ ಕ್ಷೇತ್ರದಲ್ಲಿ ಹಲವು ಬಡವರ ಪರ ನಿಂತು ಅನ್ಯಾಯ ವಿರುದ್ಧವಾಗಿ ಹೊರಾಟ ಮಾಡಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಕ್ಷೇತ್ರದಲ್ಲಿ ಮಾಡಿದಾರೆ,ಅದಕ್ಕೆ ಈ ಬಾರಿ ಮತ್ತೊಮ್ಮೆ ಸಂತೋಷ ಲಾಡ್ ಗೆಲ್ಲಿಸುವುದೆ ನಮ್ಮ ಗುರಿ ಎಂದು ಶಪಥ ಮಾಡಿದ ಕಲಘಟಗಿ ಕ್ಷೇತ್ರದ ಜನ. ವರದಿ: ಮಾರುತಿ ಲಮಾಣಿ
ಸಿರವಾರ: ಬಿಸಿಲಿನ ಬೇಗೆ ತಾಳದೇ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯಾಹ್ನ ಸಿರವಾರ ತಾಲ್ಲೂಕಿನ ಮಾಚನೂರು ಗ್ರಾಮದಲ್ಲಿ ಜರುಗಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಮಾಚನೂರು ಗ್ರಾಮದ ಮೃತ ಬಾಲಕ ನವಾಜ್ (13) ಎಂದು ತಿಳಿದು ಬಂದಿದೆ. ಬೇಸಿಗೆಯಾಗಿದ್ದರಿಂದ ಮಾಡಗಿರಿ ರಸ್ತೆಯಲ್ಲಿರುವ ಹಳ್ಳಕ್ಕೆ ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಬಾಲಕನನ್ನು ನೀರಿನಿಂದ ತೆಗೆದು ಬದುಕಿಸುವ ಪ್ರಯತ್ನ ಸಾಕಷ್ಟು ಮಾಡಿದರಾದರೂ ಕೂಡ ಯಾವುದೇ ಪ್ರಯತ್ನ ಸಲ್ಲಿಸಲಿಲ್ಲ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಮರಾಜನಗರ : ನಾಮಪತ್ರ ವಾಪಸ್ಸು ಪಡೆಯುವಂತೆ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು (ಮಲ್ಲಿಕಾರ್ಜುನಸ್ವಾಮಿ)ಗೆ ಸಚಿವ ವಿ.ಸೋಮಣ್ಣ ಆಮಿಷವೊಡ್ಡಿರುವ ಆಡಿಯೋ ವೈರಲ್ ಆಗಿದೆ. ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಅವರ ಬೆಂಬಲಿಗರಾದ ನಟರಾಜು ಹಾಗೂ ಸುದೀಪ್ ಎಂಬುವರು ಆಲೂರು ಮಲ್ಲು ಅವರಿಗೆ ದೂರವಾಣಿ ಕರೆ ಮಾಡಿ ನಾಮಪತ್ರ ವಾಪಸ್ಸು ಪಡೆದುಕೊಳ್ಳಿ. ನಿಮಗೆ ೫೦ ಲಕ್ಷ ಹಾಗೂ ಸರ್ಕಾರ ಬಂದ ನಂತರ ಗೂಟದ ಕಾರು ಕೊಡಿಸುವುದಾಗಿಯೂ ಆಮಿಷವೊಡ್ಡಿದ್ದು ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ. ಆದರೆ, ಆಲೂರು ಮಲ್ಲು ಅವರು ನಾಮಪತ್ರ ವಾಪಸ್ಸು ಪಡೆಯಲು ಆಗಲ್ಲ. ಪಕ್ಷದಿಂದ ನಾಮಪತ್ರ ಸಲ್ಲಿಸಿರುವುದರಿಂದ ಸಮಸ್ಯೆಯಾಗುತ್ತದೆ. ಆದರೆ, ತಟಸ್ಥ ಆಗುತ್ತೇನೆ ಎಂದು ಹೇಳುತ್ತಾರೆ. ಈ ವೇಳೆ ಮಾತು ಮುಂದುವರಿಸುವ ನಟರಾಜು ಎಂಬುವರು ಚುನಾವಣೆ ಬಳಿಕ ಜೆಡಿಎಸ್ ಪಕ್ಷ ಇರಲ್ಲ ಎಂದು ಹೇಳುತ್ತಾರೆ. ಬಳಿಕ ಸುದೀಪ್ ಎಂಬುವರು ೫೦ ಕ್ಕೆ ಒಪ್ಪಿಕೊಂಡಿದೆ. ಒಪ್ಪಿಸಿಬಿಟ್ಟು ವಿಥ್ ಡ್ರಾ ಮಾಡ್ಬಿಡಿ ಅಂತ ಹೇಳುತ್ತಾರೆ. ಆದರೆ, ಆಲೂರು ಮಲ್ಲು ಅವರು ವಿಥ್ ಡ್ರಾ ಮಾಡಲು…
ತೇರದಾಳ (ಬಾಗಲಕೋಟೆ): “ಈಗ ಕರ್ನಾಟಕದಲ್ಲಿ ರದ್ದುಗೊಳಿಸಲಾಗಿರುವ ಮುಸ್ಲಿಮರ ಮೀಸಲಾತಿಯನ್ನು ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದರೆ ವಾಪಸ್ಸು ತರುವುದಾಗಿ ಹೇಳಿದೆ. ಆದರೆ, ಈಗ ಮುಸ್ಲಿಮರ ಮೀಸಲಾತಿ ರದ್ದತಿಯಿಂದ ಹೆಚ್ಚಾಗಿರುವ ಅನ್ಯ ಸಮುದಾಯಗಳ ಮೀಸಲಾತಿಯಲ್ಲಿ ಯಾವುದನ್ನು ಕಡಿಮೆ ಮಾಡಿ ನೀವು ಮುಸ್ಲಿಮರಿಗೆ ಪುನಃ ಮೀಸಲಾತಿ ನೀಡುತ್ತೀರಿ” ಎಂದು ಕೇಂದ್ರ ಸಚಿವ ಅಮಿತ್ ಶಾ ಅವರು, ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಬಾಗಲಕೋಟೆಯ ತೇರದಾಳದಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಈಗ ಬಿಜೆಪಿ ಸರ್ಕಾರ ರದ್ದುಗೊಳಿಸಿರುವ ಮುಸ್ಲಿಂ ಮೀಸಲಾತಿಯನ್ನು ಪುನಃ ಜಾರಿಗೆ ತರುವುದಾಗಿ ಹೇಳಿದ್ದನ್ನು ಉಲ್ಲೇಖಿಸಿದರು. “ಬಿಜೆಪಿಯು ಧರ್ಮಾಧಾರಿತ ಮೀಸಲಾತಿಯನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಹಾಗಾಗಿ, ಕರ್ನಾಟಕದಲ್ಲಿ ಹಿಂದಿನ ಯಾವ ಸರ್ಕಾರಗಳೂ ಮಾಡಿರದಂಥ ಧೈರ್ಯವನ್ನು ಬೊಮ್ಮಾಯಿ ಸರ್ಕಾರ ಮಾಡಿದ್ದು, ಮುುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಅದನ್ನು ಲಿಂಗಾಯತ, ಒಕ್ಕಲಿಗರಿಗೆ ಸಮಾನವಾಗಿ ಹಂಚಿದೆ. ಅಲ್ಲದೆ, ಒಳಮೀಸಲಾತಿಯಿಂದಾಗಿ, ಎಸ್ಸಿ, ಎಸ್ಟಿ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸಲಾಗಿದೆ’’…
ಹಾಸನ: ಜಿಲ್ಲೆಯ ಸಕಲೇಶಪುರದಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ (Amit Shah) ಅವರು ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿದ್ದರು. ಅಪಾರ ಜನಸ್ತೋಮ ನೋಡಿ ಸಂತೋಷಗೊಂಡ ಬಿಜೆಪಿ ಚಾಣಕ್ಯ, ಕಾರ್ಯಕರ್ತರ ಮೇಲೆ ಹೂಮಳೆಗರೆದರು. ತೆರೆದ ವಾಹನದಲ್ಲಿ ಕಾರ್ಯಕರ್ತರತ್ತ ಕೈಬೀಸುತ್ತಾ, ನಮಸ್ಕರಿಸುತ್ತಾ ಕಾರ್ಯಕರ್ತರ ಮೇಲೆ ಹೂ ಸುರಿಯುತ್ತಾ ಮುನ್ನಡೆದರು. ಇದೇ ವೇಳೆ ಮಾತನಾಡಿದ ಅಮಿತ್ ಶಾ, ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರೀತಮ್ ಗೌಡ ಅವರು ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಜೆಡಿಎಸ್ (JDS) ಪಕ್ಷಕ್ಕೆ ಮತ ನೀಡಿದರೆ ಅವರು ನಂತರ ಕಾಂಗ್ರೆಸ್ ಜೊತೆ ಸೇರುತ್ತಾರೆ. ಹೀಗಾಗಿ ಜೆಡಿಎಸ್ಗೆ ಮತ ಹಾಕಿದರೆ ಅದು ಕಾಂಗ್ರೆಸ್ಗೆ ಮತ ನೀಡಿದಂತೆ. ನೀವೆಲ್ಲರೂ ಬಿಜೆಪಿ (BJP) ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು
ಮಂಡ್ಯ: ಕರ್ನಾಟಕ ವಿಧಾನಸಭೆ ಚುನಾವಣೆಗೆ( Karnataka Assembly Elections 2023) ಅಭ್ಯರ್ಥಿಗಳ ನಾಮಪತ್ರ ಪ್ರಕ್ರಿಯೆಗಳು ಮುಗಿದಿದ್ದು, ಇದೀಗ ಕ್ಷೇತ್ರಗಳಲ್ಲಿ ರಾಜಕಾರಣ ರಂಗೇರಿದೆ. ನಾಯಕರ ಮತಶಿಕಾರಿ ಜೋರಾಗಿದೆ. ಹೂವಿನ ಮಳೆ ಸುರಿಸೋದೇನು.. ಪಟಾಕಿ ಹೊಡೆಯೋದೇನು.. ರಾಜಕೀಯ ನಾಯಕಂತೂ ನಾನಾ ಅಸ್ತ್ರಗಳ ಮೂಲಕ ಮತ ದಾಳ ಎಸೆಯುತ್ತಿದ್ದಾರೆ. ಇದರ ಮಧ್ಯೆ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ. ಹಾಗೇ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಯಾರು ಈ ಸಲ ಮುಖ್ಯಮಂತ್ರಿಯಾಗುತ್ತಾರೆ ಅಂತೆಲ್ಲ ಚರ್ಚೆಗಳು ಜೋರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಲ್ಗಳು ಸಹ ಹರಿದಾಡುತ್ತಿವೆ. ಇದರ ನಡುವೆ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಲ ಭೈರವನ ಪ್ರತಿ ರೂಪ ಶ್ವಾನ ಭವಿಷ್ಯ ನುಡಿದಿದೆ. ಫಿಫಾ ವಿಶ್ವಕಪ್ನಲ್ಲಿ ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಆಗಲಿದೆ ಎನ್ನುವ ಭವಿಷ್ಯಗಳನ್ನು ಆಕ್ಟೋಪಸ್ ಹಾಗೂ ಹಂದಿ ಭವಿಷ್ಯ ನುಡಿದಿದ್ದನ್ನು ನಾವು ಕೇಳಿದ್ದೇವೆ. ಅದಂತೆ ಕರ್ನಾಟಕದ ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಶ್ವಾನವೊಂದು ಭವಿಷ್ಯ ನುಡಿದಿದೆ. ಹೌದು….ಮಂಡ್ಯ ಜಿಲ್ಲೆ ಮಂಡ್ಯ ನಗರದ…
ರಾಯಚೂರು : ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ರಾಜ್ಯಾದ್ಯಂತ ಬಿಜೆಪಿ ಮಹಾಪ್ರಚಾರ ಅಭಿಯಾನ ಮಾಡಲಾಗುತ್ತಿದೆ ಎಂದು ರಾಯಚೂರಿನಲ್ಲಿ ಕೇಂದ್ರ ಕೇಂದ್ರ ಬುಡಕಟ್ಟು ಜನಾಂಗದ ಸಚಿವ ಅರ್ಜುನ್ ಮುಂಡಾ ಹೇಳಿದರು. ಬುಡಕಟ್ಟು ಜನಾಂಗದ ಮಹಿಳೆಯೊಬ್ಬರಿಗೆ ದೇಶದ ರಾಷ್ಟ್ರಪತಿ ಮಾಡಿದ್ದು ಮೋದಿ ಸರ್ಕಾರ, 25 ಕೋಟಿ ಜನರು ಮೋದಿ ಮನ್ ಕೀ ಬಾತ್ ಕೇಳಿಸಿಕೊಳ್ಳುತ್ತಿದ್ದಾರೆ. ದೇಶದ ಅಭಿವೃದ್ಧಿ ಬಗ್ಗೆ ಈಗ ಇಡೀ ವಿಶ್ವವೇ ಮಾತನಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳು ನಡೆದಿವೆ. ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಬೇಕಾದ ಸಹಕಾರ ನೀಡಿದೆ. ಬುಡಕಟ್ಟು ಜನಾಂಗಕ್ಕೆ ಸ್ವಯಂ ಉದ್ಯೋಗ ನೀಡುವುದು. ಎಲ್ಲರಿಗೂ ಮನೆ ಕೊಡಲು ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಮಾಡಲಾಗಿದೆ. ರಾಜ್ಯ ಸರ್ಕಾರವೂ ಪರಿಶಿಷ್ಟ ಪಂಗಡ- ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಹೆಚ್ಚಳ ಮಾಡಿದೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿದೆ ಎಂದು ಅರ್ಜುನ್ ಮುಂಡಾ ಹೇಳಿದರು.
ರಾಮನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪತ್ನಿ ಉಷಾ ಶಿವಕುಮಾರ್ (DK Shivakumar) ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರ ಅಪರೂಪ. ಶಿವಕುಮಾರ್ ಅವರೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಮಾತ್ರ ಅವರು ಮಾಧ್ಯಮದ ಕೆಮೆರಾಗಳಿಗೆ ಸಿಗುತ್ತಾರೆ. Video Player 00:00 00:07 ಅದರೆ, ಮಂಗಳವಾರ ಅವರು ಪತಿಯ ಪರವಾಗಿ ಕನಕಪುರದ (Kanakapura) ವಿವಿಧ ವಾರ್ಡ್ಗಳಲ್ಲಿ ಮನೆಮನೆ ತಿರುಗಿ ಮತಯಾಚನೆ ಮಾಡಿದರು. ಕನಕಪುರದ ಜನರೆಲ್ಲ ಅವರನ್ನು ಬಲ್ಲರು, ಹಾಗಾಗೇ ರಸ್ತೆ, ಬೀದಿಗಳಲ್ಲಿ ಮತ ಕೇಳುತ್ತಾ ಅಲೆಯುತ್ತಿರುವ ಉಷಾರನ್ನು ಕಂಡು ಅವರಿಗೆ ಆಶ್ಚರ್ಯವಾಗಿದೆ. ಹೋಟೆಲ್ ನಲ್ಲಿ ಕುಳಿತು ತಿಂಡಿ ತಿನ್ನುತ್ತಿರುವವರನ್ನು ಸಹ ಉಷಾ ಮಾತಾಡಿಸಿದ್ದಾರೆ.
ಮಂಡ್ಯ :- ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯಾವುದೇ ಕೋಮು ದಳ್ಳುರಿ ಸೃಷ್ಟಿಸುವಂತ ಹೇಳಿಕೆ ನೀಡಬೇಡಿ ಎಂದು ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ಹೇಳಿದರು. ಮದ್ದೂರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಭೈರವೈಕ್ಯ ಬಾಲ ಗಂಗಾಧರನಾಥ ಸ್ವಾಮಿಗಳ ಪುಣ್ಯ ನೆಲವಾಗಿದೆ ಅವರು ನಾಥ ಪರಂಪರೆಯ ಭದ್ರ ಬುನಾದಿ ಹಾಕಿರುವ ಜಿಲ್ಲೆಯಾಗಿದೆ. ಇಂತಹ ಸ್ಥಳದಲ್ಲಿ ಯೋಗಿ ಆದಿತ್ಯನಾಥ್ ಕೋಮುದ್ವೇಷ ಹುಟ್ಟು ಹಾಕುವ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದರು. ಯೋಗಿ ಆದಿತ್ಯನಾಥ್ ಅವರಿಗೆಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ನಮ್ಮ ಸ್ವಾಗತವಿದೆ. ಆದರೆ, ಕೋಮು ಗಲಭೆ ಸೃಷ್ಟಿಸುವ ಕಾರ್ಯಕ್ಕೆ ನಮ್ಮ ವಿರೋಧವಿದೆ ಎಂದು ಸತ್ಯಾನಂದ ಎಚ್ಚರಿಸಿದರು. ಜೆಡಿಎಸ್ ಅಭ್ಯರ್ಥಿ ಶಾಸಕ ಡಿ.ಸಿ.ತಮ್ಮಣ್ಣ ಕುತಂತ್ರ ರಾಜಕಾರಣವನ್ನು ಮಟ್ಟ ಹಾಕುವ ಉದ್ದೇಶದಿಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕೆ.ಎಂ.ಉದಯ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಹೋದರ ದಿ.ಎಸ್.ಎಂ.ಶಂಕರ್…