Author: Prajatv Kannada

ಆರೋಗ್ಯ ಸಮಸ್ಯೆಯಿಂದಾಗಿ ಸಿನಿಮಾದ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದಿದ್ದ ನಟಿ ಸಮಂತಾ ಇದೀಗ ಮತ್ತೆ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಸಮಂತಾ ನಟನೆಯ `ಶಾಕುಂತಲಂ’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ಪ್ರಚಾರ ಕಾರ್ಯ ಆರಂಭಕ್ಕೂ ಮುನ್ನ ಸಮಂತಾ ಸ್ಯಾಮ್ ದೇವಿ ಸನ್ನಿಧಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಸಮಂತಾ ಮೈಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆದುಕೊಳ್ತಿದ್ದಾರೆ. ಅನಾರೋಗ್ಯದ ಸಮಸ್ಯೆ ಮತ್ತು ವೈಯಕ್ತಿಕ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸದಾ ಪೂಜೆ, ಧ್ಯಾನ, ದೇವರ ಸನ್ನಿಧಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ. `ಯಶೋದ’ ಚಿತ್ರದ ಸೂಪರ್ ಸಕ್ಸಸ್ ನಂತರ ನಟಿ ಸಮಂತಾ `ಶಾಕುಂತಲಂ’ ಚಿತ್ರದ ಮೂಲಕ ಬರುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 14ಕ್ಕೆ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಈ ಬೆನ್ನಲ್ಲೇ ಚಿತ್ರತಂಡದ ಜೊತೆ ಹೈದರಾಬಾದ್‌ನ ಪ್ರಸಿದ್ಧ ದೇವಸ್ಥಾನ ಪೆದ್ದಮ್ಮ ತಲ್ಲಿ ದೇವಿಗೆ ಸೀರೆ ಜೊತೆ ಗಾಜಿನ ಬಳೆಯನ್ನ ಅರ್ಪಣೆ ಮಾಡಿ ಆಶೀರ್ವಾದ ಪಡೆದಿದ್ದಾರೆ. ನಟಿ ಸಮಂತಾಗೆ ಸಹ ನಟ ದೇವ್…

Read More

ರಾಯಚೂರು : ಸುಮಾರು ತಿಂಗಳುಗಳಿಂದ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಮೊಸಳೆಯನ್ನು ಕಳೆದ ರಾತ್ರಿ ರೈತರು ಜಮೀನಿನಲ್ಲಿ ಸೆರೆಹಿಡಿದಿದ್ದಾರೆ. ರಾಯಚೂರಿನ ನೆಲಹಾಳ ಗ್ರಾಮದಲ್ಲಿನ ಕೆರೆಯಲ್ಲಿ ಸುಮಾರು ತಿಂಗಳುಗಳಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಮೊಸಳೆ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ಹಲೋ ಭಾರೀ ರೈತರ ಜಮೀನಿನಲ್ಲಿ ಓಡಾಡುತ್ತಿದ್ದ ದೊಡ್ಡ ಗಾತ್ರದ ಮೊಸಳೆಯನ್ನ ರೈತರು ಸೆರೆಹಿಡಿದಿದ್ದಾರೆ. ಕಳೆದ ರಾತ್ರಿ ಹೊಲಕ್ಕೆ ನೀರು ಕಟ್ಟಲು ಹೋದಂತಹ ಸಂದರ್ಭದಲ್ಲಿ ರೈತರ ಕಣ್ಣಿಗೆ ಮೊಸಳೆ ಬಿದ್ದಿದೆ. ತಕ್ಷಣ ಗ್ರಾಮದ ಹಲವು ಜನ ಸೇರಿಕೊಂಡು ಮೊಸಳೆಯನ್ನು ಹಿಡಿದಿದ್ದಾರೆ. ಮೊಸಳೆ ಸೆರೆಯಿಂದ ನಿಟ್ಟುಸಿರು ಬಿಟ್ಟಿರುವ ನೆಲಹಾಳ ಗ್ರಾಮಸ್ಥರು ಕೌತುಕದಿಂದ ಮೊಸಳೆಯನ್ನ ನೋಡಲು ದಂಡುಪ ತಂಡವಾಗಿ ಆಗಮಿಸುತ್ತಿದ್ದಾರೆ. ಮೊಸಳೆಯನ್ನ ಸೆರೆಹಿಡಿದು ಟ್ರ್ಯಾಕ್ಟರ್ ನಲ್ಲಿ ಹಾಕಲಾಗಿದ್ದು. ಮೊಸಳೆಯನ್ನ ಹಿಡಿದಿರುವ ವಿಚಾರವನ್ನು ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಒಪ್ಪಿಸಲು ಸಿದ್ಧತೆ ನಡೆಸಿದ್ದಾರೆ.

Read More

ರಾಯಚೂರು : ಜಿಲ್ಲೆಯಲ್ಲಿ ನಡೆಯುತ್ತಿರುವ ಏಮ್ಸ್ ಹೋರಾಟದ ಸ್ಥಳಕ್ಕೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಭುಧೇಂದ್ರ ಶ್ರೀ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ರಾಯಚೂರು ನಗರದ ಮಹಾತ್ಮಗಾಂಧಿ ಪ್ರತಿಮೆ ಮುಂದೆ ನಡೆಯುತ್ತಿರುವ ಪ್ರತಿಭಟನಾ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶ್ರೀಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಏಮ್ಸ್ ಹೋರಾಟ ಕಳೆದ 308 ದಿನಗಳಿಂದ ನಡೆಯುತ್ತಿದೆ. ಏಮ್ಸ್ ಗಾಗಿ ಕೇಂದ್ರ ಸರ್ಕಾರಕ್ಕೂ, ಸಿಎಂ ಬೊಮ್ಮಾಯಿಯವರಿಗೂ ಏಮ್ಸ್ ರಾಯಚೂರಿಗೆ ನೀಡುವಂತೆ ತಿಳಿಸಿದ್ದೇವೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ವೇದಿಕೆ ಯಾವುದೇ ಪಕ್ಷದ ವೇದಿಕೆಯಲ್ಲ. ರಾಯಚೂರು ಜಿಲ್ಲೆ ಚಿನ್ನದ ನಾಡು,ಭತ್ತದ ಕಣಜ, ಎರಡು ನದಿಗಳ ಬೀಡಾಗಿದೆ. ಐಐಟಿ ಸಂಸ್ಥೆ ರಾಯಚೂರಿಗೆ ಬರಬೇಕಿತ್ತು ವಂಚನೆಯಾಗಿದೆ. ಹಸಿದವರಿಗೆ ಅನ್ನ ಕೊಟ್ರೆ ಅದು ಜೀರ್ಣವಾಗುತ್ತೆ, ಹಸಿದೇ ಇದ್ದವರಿಗೆ ಅನ್ನ ಕೊಟ್ರೆ ಅದು ಅಜೀರ್ಣವಾಗುತ್ತೆ, ಎನ್ನುವ ಮೂಲಕ‌ ಅಭಿವೃದ್ಧಿ ಹೊಂದಿರುವ ಧಾರವಾಡಕ್ಕೆ ಏಮ್ಸ್ ನೀಡಬಾರದೆಂದು ಪರೋಕ್ಷವಾಗಿ ಶ್ರೀಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿ ಹೇಳಿದರು. ನಮಗೆ ಏಮ್ಸ್ ಬೇಕೇ ವಿನ: ಏಮ್ಸ್…

Read More

ಬೆಂಗಳೂರು: ಮದುವೆಯಾಗಿ (Wedding) ಮೂರೇ ದಿನಕ್ಕೆ ಪತಿ ಪರಾರಿಯಾಗಿದ್ದು ಎಂದು ಆರೋಪಿಸಿ ಪತ್ನಿ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ (KR Puram Police Station) ದೂರು ನೀಡಿದ್ದಾರೆ. ಧರಣಿ ಹಾಗೂ ಸುರೇಶ್ ಇಬ್ಬರು ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು ಫೆ.15ರಂದು ಇಬ್ಬರು ಮದುವೆಯೂ ಆಗಿದ್ದರು. ಆದರೆ ಮದುವೆಯಾಗಿ ಮೂರೇ ದಿನಕ್ಕೆ ಪತಿ ಸುರೇಶ್ ಇದ್ದಕ್ಕಿದ್ದಂತೆ ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಧರಣಿ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಸುರೇಶ್‍ನನ್ನು ವಿಚಾರಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ, ನಾನು ಧರಣಿಯನ್ನು ಮದುವೆಯಾಗಿಲ್ಲ. ನಾವಿಬ್ಬರು ಸ್ನೇಹಿತರಾಗಿದ್ದೆವು. ಅದು ಶಾರ್ಟ್ ಮೂವಿಗಾಗಿ ತೆಗೆದ ಫೋಟೋ ಆಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾನೆ. ಅಷ್ಟೇ ಅಲ್ಲದೇ 2016ರಲ್ಲಿ ಧರಣಿಗೆ ಮೊದಲ ವಿವಾಹ ಆಗಿತ್ತು. ನಂತರ ಪತಿಯನ್ನು ಬಿಟ್ಟು ದೂರವಾಗಿದ್ದರು ಎಂದು ಆರೋಪಿಸಿದ್ದಾನೆ. ಸದ್ಯ ಈ ವಿಚಾರ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು…

Read More

ಸೂರ್ಯೋದಯ: 06.26 AM, ಸೂರ್ಯಾಸ್ತ : 06.30 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಫಾಲ್ಗುಣ ಮಾಸ, ಶಿಶಿರ ಋತು,ಕೃಷ್ಣ ಪಕ್ಷ, ಉತ್ತರಾಯಣ ತಿಥಿ: ಇವತ್ತು ದಶಮಿ 02:06 PM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ಆಷಾಢ 04:47 AM ತನಕ ನಂತರ ಉತ್ತರ ಆಷಾಢ ಯೋಗ: ಇವತ್ತು ವರಿಯಾನ್ 06:59 AM ತನಕ ನಂತರ ಪರಿಘ ಕರಣ: ಇವತ್ತು ವಣಿಜ 03:26 AM ತನಕ ನಂತರ ವಿಷ್ಟಿ 02:06 PM ತನಕ ನಂತರ ಬವ ರಾಹು ಕಾಲ: 10:30 ನಿಂದ 12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 12.18 AM to 01.48 AM , 08.54 PM 10.22 PM ಅಭಿಜಿತ್ ಮುಹುರ್ತ: ಮ.12:00 ನಿಂದ ಮ.12:48 ವರೆಗೂ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ…

Read More

ಮುಂಬೈ: ಸತತ ಸೋಲಿನಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಮೊದಲ ಗೆಲುವು ದಾಖಲಿಸಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ಯುಪಿ ವಾರಿಯರ್ಸ್ (UP Warriorz) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಗೆಲುವಿನ ನಗೆ ಬೀರಿದೆ. ಪಂದ್ಯದ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನ (Smriti Mandhana), ಕೊಹ್ಲಿ (Virat Kohli) ಅಣ್ಣನ ಸಲಹೆಗಳು ಗೆಲುವಿಗೆ ತುಂಬಾ ಸಹಾಯವಾಯಿತು. ಪಂದ್ಯ ಆರಂಭಕ್ಕೂ ಮುನ್ನ ನಮ್ಮ ತಂಡದೊಂದಿಗೆ ಮಾತನಾಡಿದ್ದರು. ತಮ್ಮ 15 ವರ್ಷದ ಅನುಭವ ಹಂಚಿಕೊಳ್ಳುತ್ತಾ ನಮ್ಮಲ್ಲಿ ಉತ್ಸಾಹ ತುಂಬಿದರು. ಇದರೊಂದಿಗೆ ಆರ್‌ಸಿಬಿ ತಂಡದ ಪ್ರತಿಯೊಬ್ಬರ ಆಲ್‌ರೌಂಡ್ ಪ್ರದರ್ಶನವೂ ಗೆಲುವಿಗೆ ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ. ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡ 19.3 ಓವರ್‌ಗಳಲ್ಲಿ 135 ರನ್‌ಗಳಿಗೆ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. 136 ರನ್‌ಗಳ…

Read More

ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು (Border Gavaskar Trophy) ಗೆದ್ದು ಬೀಗಿರುವ ಟೀಂ ಇಂಡಿಯಾ (Team India) ಇದೀಗ ಏಕದಿನ ಸರಣಿ ಮೇಲೆಯೂ ಕಣ್ಣಿಟ್ಟಿದೆ. ಈ 3 ಪಂದ್ಯಗಳ ಏಕದಿನ ಸರಣಿಯು ಮಾರ್ಚ್ 17 ರಿಂದ ಪ್ರಾರಂಭವಾಗುತ್ತಿದ್ದು, ಈ ಮೊದಲ ಪಂದ್ಯಕ್ಕಾಗಿ ಎರಡೂ ತಂಡಗಳು ಕಠಿಣ ತಯಾರಿ ನಡೆಸಿವೆ. ಆದರೆ ಈ ಪಂದ್ಯಕ್ಕೆ ವರುಣ ವಿಲನ್ ಆಗುವ ಎಲ್ಲ ಲಕ್ಷಣ ಎದುರಾಗಿದೆ. ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೊದಲ ಏಕದಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium in Mumbai) ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಪ್ರಮುಖ ಅಪ್‌ಡೇಟ್‌ ಹೊರಬಿದ್ದಿದ್ದು, ಮುಂಬೈನಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಈಗಾಗಲೇ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಕೆಲವೆಡೆ ತುಂತುರು ಮಳೆಯೂ ಸುರಿದಿದೆ. ಹೀಗಾಗಿ ಪಂದ್ಯದ ದಿನ ಮಳೆ ಬಂದರೆ ಉಭಯ ತಂಡಗಳಿಗೆ ಹಿನ್ನಡೆಯುಂಟಾಗಲಿದೆ. ಮಾರ್ಚ್ 17ರ ವರೆಗೆ ಮುಂಬೈನಲ್ಲಿ ಮೋಡ ಕವಿದ ವಾತಾವರಣವಿದ್ದು…

Read More

ಬೆಂಗಳೂರು: 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದ ಅಂತಿಮ ಸುತ್ತಿಗೆ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದಗುಡಿ’, ಮಂಸೋರೆ ನಿರ್ದೇಶನದ ‘19.20.21’, ಪೃಥ್ವಿ ನಿರ್ದೇಶನದ ‘ಹದಿನೇಳೆಂಟು’ ಸೇರಿದಂತೆ 14 ಸಿನಿಮಾಗಳು ಆಯ್ಕೆಯಾಗಿವೆ. ಚಲನಚಿತ್ರೋತ್ಸವದ ವೆಬ್‌ಸೈಟ್‌ನಲ್ಲಿ ಏಷಿಯನ್‌, ಭಾರತೀಯ ಹಾಗೂ ಕನ್ನಡ ಹೀಗೆ ಮೂರು ಸ್ಪರ್ಧಾ ವಿಭಾಗಗಳಲ್ಲಿ ಸ್ಪರ್ಧೆಗೆ ಆಯ್ಕೆಯಾದ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕನ್ನಡ ಸಿನಿಮಾಗಳ ಸ್ಪರ್ಧೆಗೆ 108ಕ್ಕೂ ಅಧಿಕ ಸಿನಿಮಾಗಳು ನೋಂದಣಿಯಾಗಿದ್ದವು. ಈ ಪೈಕಿ ಅಮೋಘವರ್ಷ ಜೆ.ಎಸ್‌. ನಿರ್ದೇಶನದ, ಪುನೀತ್ ರಾಜ್ ಕುಮಾರ್ ನಟನೆಯ ‘ಗಂಧದಗುಡಿ’, ಮಂಸೋರೆ ನಿರ್ದೇಶನದ ‘19.20.21’, ಜಡೇಶ ಕೆ.ಹಂಪಿ ನಿರ್ದೇಶನದ ‘ಗುರು ಶಿಷ್ಯರು’, ಬೂಸಾನ್‌ ಅಂತರರಾಷ್ಟ್ರೀಯ ಸಿನಿಮೋತ್ಸವ ಹಾಗೂ ಗೋವಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’, ವಿಶಾಲ್‌ ರಾಜ್‌ ನಿರ್ದೇಶನದ ‘ಕನಕ ಮಾರ್ಗ’, ಶಿವಧ್ವಜ್‌ ಶೆಟ್ಟಿ ನಿರ್ದೇಶನದ ತುಳು ಸಿನಿಮಾ ‘ಕೋರಮ್ಮ’, ರಘು ರಾಮಚರಣ್‌ ನಿರ್ದೇಶನದ ‘ಕುಬುಸ’, ಪ್ರದೀಪ್‌ ಕೆ.ಶಾಸ್ತ್ರಿ ಅವರ ‘ಮೇಡ್‌ ಇನ್‌ ಬೆಂಗಳೂರು’, ತ್ರಿಪಾಠಿ ಸುಂದರ್‌…

Read More

ಬೆಂಗಳೂರು: ಬೆಂಗಳೂರು ಕರಗದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಇದೀಗ ಶಾಸಕ ಎನ್ ಎ ಹ್ಯಾರಿಸ್  ಅವರು, ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕ್ಷಮೆಯಾಚಿಸಿದ್ದಾರೆ. ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಶಾಸಕ ಹ್ಯಾರಿಸ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬೆಂಗಳೂರು ಕರಗ ನಾಟಕ ಎಂದು ಹ್ಯಾರಿಸ್ ಹೇಳಿದ್ದರು. ಹ್ಯಾರಿಸ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನೇರವಾಗಿ ದೇಗುಲಕ್ಕೆ ಬಂದು ಕ್ಷಮೆಯಾಚಿಸಿದ್ದಾರೆ. ಈ ವೇಳೆ ಮಾತನಾಡಿದ ಹ್ಯಾರಿಸ್, ದೇವರ ಮೇಲೆ ನನಗೆ ಅಪಾರ ಭಕ್ತಿ ಗೌರವವಿದೆ. ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಾನು ಕ್ಷಮೆ ಕೋರಿದ್ದೇನೆ. ಪ್ರತಿವರ್ಷವೂ ಬೆಂಗಳೂರು ಕರಗ ಉತ್ಸವದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

Read More

ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಶಿಕ್ಷಣ ಇಲಾಖೆ ವತಿಯಿಂದ 5 ಮತ್ತು 8ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಮಾರ್ಚ್ 27 ರಿಂದ ಏ. 1 ರವರೆಗೆ ಪರೀಕ್ಷೆಗಳು ನಡೆಯಲಿವೆ. ಐದನೇ ತರಗತಿ ಮಕ್ಕಳಿಗೆ ಮಾರ್ಚ್ 27 ರಿಂದ 30 ರವರೆಗೆ, 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಚ್ 27 ರಿಂದ ಏಪ್ರಿಲ್ 1ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಆಯಾ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಪರಿಗಣಿಸಲಾಗಿದೆ. ಬೋರ್ಡ್ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಮೌಲ್ಯಾಂಕನದಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆಲ ತಿಂಗಳು ವಿಶೇಷ ತರಗತಿ ನಡೆಸಿ ಅವರ ಕಲಿಕಾ ಮಟ್ಟ ಸುಧಾರಿಸಿ ಮುಂದಿನ ತರಗತಿಗೆ ಪ್ರವೇಶ ಕಲ್ಪಿಸಲಾಗುವುದು. 5ನೇ ತರಗತಿ ಬೋರ್ಡ್ ಪರೀಕ್ಷೆ ವೇಳಾಪಟ್ಟಿ ಮಾರ್ಚ್ 27 ಪ್ರಥಮ ಭಾಷೆ ಮಾರ್ಚ್ 28 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಮಾರ್ಚ್ 29 ಪರಿಸರ ಅಧ್ಯಯನ ಮಾರ್ಚ್ 30 ಗಣಿತ 8ನೇ ತರಗತಿ ಬೋರ್ಡ್ ಪರೀಕ್ಷೆ ವೇಳಾಪಟ್ಟಿ ಮಾರ್ಚ್…

Read More