Author: Prajatv Kannada

ಹೊಳೆನರಸೀಪುರ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯ್ರರ್ಥಿ ವಿಚಾರವಾಗಿ ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕಡೆಗೆ ಬೊಟ್ಟು ಮಾಡಿರುವ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅವರ ಮೂಲಕವೇ ಅಭ್ಯರ್ಥಿ ಹೆಸರು ಘೋಷಣೆ ಮಾಡಿಸುತ್ತೇವೆ ಎಂದಿದ್ದಾರೆ. ಜೊತೆಗೆ ಹಾಸನ ಸ್ಪರ್ಧೆ ವಿಚಾರವಾಗಿ ಹಿರಿಯ ಮುಖಂಡ ಕೆ.ಎಂ.ರಾಜೇಗೌಡ ಅವರ ಜೊತೆ ನಾನೂ ಮಾತನಾಡಿದ್ದು, ಅವರ ಹೆಸರೇ ಫೈನಲ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ದೇವರಮುದ್ದನಹಳ್ಳಿಯಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಪ್ರಶ್ನೆ ಬಂದಾಗ, ಪ್ರವಾಸದ ವೇಳೆ ನನ್ನದೇ ಆದ ರೀತಿಯಲ್ಲಿ ಮಾಹಿತಿ ಸಂಗ್ರಹ ಮಾಡಿದ್ದೇನೆ. ಈ ವಿಷಯ ದೇವೇಗೌಡರ ಮುಂದೆಯೂ ಚರ್ಚೆ ಆಗಿದೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ಅವರ ಮೂಲಕವೇ ಅಭ್ಯರ್ಥಿ ಹೆಸರು ಘೋಷಣೆ ಮಾಡಿಸುವೆ ಎಂದರು. ಹಾಸನದಲ್ಲಿರುವುದುದೇವೇಗೌಡರಬಣ ಹಾಸನ ಜೆಡಿಎಸ್‌ನಲ್ಲಿ ಯಾವ ಬಣವೂ ಇಲ್ಲ, ಅಲ್ಲಿರುವುದು ದೇವೇಗೌಡರ ಬಣ. ದೇವೇಗೌಡರ ಬಣ ಒಟ್ಟಾಗಿ ಕೆಲಸ ಮಾಡುತ್ತೆ. ಈ ಸಂಬಂಧ ಸೂಚನೆ ನೀಡಿದ್ದೇನೆ. ಯಾವ ಬಣ ಆಗಲು…

Read More

ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಇರುವ ಕೋಡಿಯಲ್ಲಿ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದವು. ಹಾವುಗಳ ನಡುವಿನ ಪ್ರೇಮ, ಸರಸ ಸಲ್ಲಾಪ ಜನರನ್ನು ನಿಬ್ಬೆರಗಾಗಿಸಿದೆ. ಹಾವುಗಳ ನಡುವೆ ಪ್ರೇಮ, ಅದರಲ್ಲೂ ಸರಸ ಸಲ್ಲಾಪ ಇರುವುದು ತೀರಾ ವಿರಳ. ಅಂಥದ್ದೊಂದು ಸಂದರ್ಭ ಬಂದರೆ ಗಂಡು ಹಾವುಗಳು ಘನಘೋರ ಹೋರಾಟವನ್ನೇ ಮಾಡುತ್ತವೆ. ಕೊನೆಗೆ ಹೋರಾಟದಲ್ಲಿ ಗೆಲ್ಲುವ ಹಾವು ಮಾತ್ರ ಹೆಣ್ಣು ಹಾವಿನೊಡನೆ ಸಲ್ಲಾಪದಲ್ಲಿ ತೊಡಗುತ್ತದೆ. ಎರಡು ಹಾವುಗಳ ಸರಸ ಕಂಡು ಜನ ಇದು ಕಲಿಗಾಲ ಎಂದು ಹುಬ್ಬೇರಿಸಿದ್ದಾರೆ. ಹಾವುಗಳ ಮಿಲನ ಮಹೋತ್ಸವ ನೋಡಿದರೆ ಹಾವಿನ ಶಾಪ ತಟ್ಟುತ್ತದೆ ಎಂಬ ಮೂಢನಂಬಿಕೆ ಗ್ರಾಮೀಣ ಜನರಲ್ಲಿದೆ. ಆದರೆ ಯುವ ಉತ್ಸಾಹಿಗಳು ಆ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿದು ಸಂಭ್ರಮಿಸಿದ್ದಾರೆ. ಕೆಲವರು ಇದು ಶುಭ ಎಂದರೆ ಮತ್ತೆ ಕೆಲವರು ಏನು ಕೇಡು ಕಾದಿದೆಯೋ ಎಂದು ಉದ್ಗಾರ ತೆಗೆದಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನ ಹೈಕೋರ್ಟ್ ಪೀಠವು ತನ್ನ ತೀರ್ಪಿನಲ್ಲಿ, ಪತಿಯಿಂದ ದೂರವಾದ ಪತ್ನಿ ಪ್ರತ್ಯೇಕವಾಗಿ ನೆಲೆಸಲು 5 ಸಾವಿರ ರೂ ಹೆಚ್ಚುವರಿ ಪರಿಹಾರ ನೀಡಲು ಸೂಚನೆ ನೀಡಿದೆ.ಪತಿ ಹಾಗೂ ಆತನ ಎರಡನೇ ಪತ್ನಿಯ ಕುಟುಂಬದ ಇತರ ಸದಸ್ಯರು ವಾಸಿಸುತ್ತಿರುವ ಮನೆಯಲ್ಲಿಯೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವಂತೆ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮೊದಲನೇ ಪತ್ನಿ ಬೆಂಗಳೂರಿನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಷಾನಂದ ಅವರಿದ್ದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಆದೇಶವನ್ನು ತಿದ್ದುಪಡಿ ಮಾಡಿ ಮೊದಲ ಪತ್ನಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲು ಮಾಸಿಕ 5 ಸಾವಿರ ರೂ. ಪಾವತಿ ಮಾಡುವಂತೆ ಸೂಚಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯದಂತೆ ಶೈಲಜಾ ಅವರು ಎರಡನೇ ಪತ್ನಿ ಮತ್ತವರ ಕುಟುಂಬ ಸದಸ್ಯರೊಂದಿಗೆ ಒಂದೇ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡುವುದು ಪ್ರಯೋಗಿಕವಾಗಿ ಕಾರ್ಯಸಾಧುವಿಲ್ಲ. ಇದರಿಂದ ಕುಟುಂಬದ ಇತರ ಸದಸ್ಯರ ಜೊತೆಗೆ ಅಸಮಾಧಾನ ಏರ್ಪಟ್ಟು, ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಆಕೆ…

Read More

ಬೆಂಗಳೂರು: ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಭೆ ನಡೆಸಿದರು. ರೈತರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು, ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆಯೇ ಪ್ರಧಾನವಾಗಿ ಚರ್ಚೆಗೆ ಬಂತು, ಬಹುಪಾಲು ಬೆಳೆ ನಷ್ಟಕ್ಕೆ ವಿದ್ಯುತ್ ಕೈಕೊಡುವುದೇ ಕಾರಣ ಎಂದು ರೈತರ ನಿಯೋಗದ ಪ್ರತಿನಿಧಿಗಳು ಅವಲತ್ತುಕೊಂಡರು, ನಿರಂತರ ವಿದ್ಯುತ್ ಪೂರೈಕೆಯಾದರೆ ಮಾತ್ರ ಬೆಳೆ ಕೈಗೆ ಸಿಗಲಿದೆ ಇಲ್ಲದಿದ್ದರೆ ನಷ್ಟಕ್ಕೊಳಗಾಗಬೇಕಾಗಲಿದೆ, ಇನ್ನು ಬೇಸಿಗೆ ಬೇರೆ ಬಂತು ವಿದ್ಯುತ್ ಕೊರತೆಯೂ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರ ಅಹವಾಲು ಆಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿದ್ಯುತ್‌ ಕೊರತೆ ಉಂಟಾದಲ್ಲಿ ಹೊರ ರಾಜ್ಯಗಳಿಂದ ಪೂರೈಕೆ ಮಾಡುವ ಕುರಿತು ಸಹ ಚಿಂತನೆ ಮಾಡಲಾಗುತ್ತದೆ. ಅಲ್ಲದೇ ರೈತರ ಪಂಪ್‌ ಸೆಟ್​ಗಳಿಗೆ ನಿರಂತರ ಏಳು ತಾಸು 3 ಫೇಸ್‌ ವಿದ್ಯುತ್‌ ಪೂರೈಸುವ ಕುರಿತು ಅಧಿಕಾರಿಗಳಿಗೆ ಇಂದು ಸೂಚನೆ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

Read More

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆ ಕಾವು ಏರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭಗಳೂ ಒಂದರ ಮೇಲೊಂದಾಗಿ ಬರುತ್ತಿವೆ. ಇತ್ತೀಚೆಗೆ, ಯಾದಗಿರಿ, ಶಿವಮೊಗ್ಗ, ಮೈಸೂರಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಮಾ. 25ರಂದು ದಾವಣಗೆರೆಗೆ ಭೇಟಿ ನೀಡಲಿದ್ದಾರೆ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿಯು ಆರಂಭಿಸಿರುವ ‘ವಿಜಯ ಸಂಕಲ್ಪ’ ಯಾತ್ರೆಯ ಸಮಾರೋಪ ಮಾರ್ಚ್ 25 ರಂದು ದಾವಣಗೆರೆಯಲ್ಲಿ ನಡೆಯಲಿದ್ದು, ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಕುರಿತಾಗಿ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎನ್ ರವಿ ಕುಮಾರ್ ಮಾಹಿತಿ ನೀಡಿದರು. ಮಾರ್ಚ್ 24ರಂದು ದಾವಣಗೆರೆ ಸುತ್ತಮುತ್ತಲಿನ ನಾಲ್ಕು ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ. 25ರಂದು ನಮ್ಮ ಪ್ರಧಾನಿ ಮೋದಿ ಅವರು ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ವಿಜಯಸಂಕಲ್ಪ ಯಾತ್ರೆ ಆರಂಭವಾಗಿ 15 ದಿನ ಕಳೆದಿದೆ. ನಾಲ್ಕು ಯಾತ್ರೆ ಯಾವುದೇ ತೊಂದರೆಯಾಗದೆ ಯಶಸ್ವಿಯಾಗಿ ನಡೆಯುತ್ತಿದೆ. 4 ಯಾತ್ರೆಗಳು 151 ವಿಧಾನಸಭಾ ಕ್ಷೇತ್ರ…

Read More

ಬೆಂಗಳೂರು: ಮಾ.25 ರಂದು ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ನಡೆಯಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ವಿಜಯಸಂಕಲ್ಪ ಯಾತ್ರೆ ಆರಂಭವಾಗಿ 15 ದಿನ ಕಳೆದಿದೆ. ನಾಲ್ಕು ತಂಡಗಳಲ್ಲಿ ನಡೆಯುತ್ತಿರುವ ಯಾತ್ರೆಗಳು ಯಾವುದೇ ತೊಂದರೆಯಾಗದೆ ಯಶಸ್ವಿಯಾಗಿ ನಡೆಯುತ್ತಿದೆ. 4 ಯಾತ್ರೆಗಳು 151 ವಿಧಾನಸಭಾ ಕ್ಷೇತ್ರ ತಲುಪಿದೆ. 60 ಲಕ್ಷ ಜನ ಕಾರ್ಯಕರ್ತರು ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ರಥಯಾತ್ರೆಯಲ್ಲಿ ನಮ್ಮೆಲ್ಲಾ ಶಾಸಕರು, ಸಂಸದರು ಭಾಗಿಯಾಗಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರು, ರಥದ ಉಸ್ತುವಾರಿಗಳು ಸೇರಿ 45 ಜನ ಭಾಗಿಯಾಗಿದ್ದಾರೆ. 110 ರೋಡ್ ಶೋ, 41 ಬಹಿರಂಗ ಸಭೆ ಮಾಡಲಾಗಿದೆ. ವಿಜಯಸಂಕಲ್ಪ ಯಶಸ್ವಿ ಯಾತ್ರೆಗೆ ಕಾರಣರಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ರಥಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಕೋಲಾರ, ಶಿಡ್ಲಘಟ್ಟ, ಗೌರಿಬಿದನೂರು ಕಡೆ 10-15 ಸಾವಿರ ಜನ ಭಾಗಿಯಾಗಿದ್ದಾರೆ. ಬಸವಕಲ್ಯಾಣ…

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೂ ಇನ್ನೂ ಮುಂದೆ ಬಿಎಂಟಿಸಿ ಬಸ್​​ಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಿವೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಸಚಿವ ಡಾ. ಕೆ ಸುಧಾಕರ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವ ಜಿಲ್ಲೆಯ ಜನತೆಯ ಬಹುನಿರೀಕ್ಷಿತ ಬೇಡಿಕೆಯಂತೆ ಬಿಎಂಟಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಇನ್ನು ಮುಂದೆ ಬಿಎಂಟಿಸಿ ಬಸ್ಸುಗಳು ನಮ್ಮ ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿವೆ” ಎಂದು ಹೇಳಿದ್ದಾರೆ. ರೈತರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ದಿನನಿತ್ಯ ಬೆಂಗಳೂರಿಗೆ ಓಡಾಡುವ ಚಿಕ್ಕಬಳ್ಳಾಪುರದ ಎಲ್ಲ ನಾಗರಿಕರಿಗೂ ಇದರಿಂದ ಅನುಕೂಲವಾಗಲಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಆರ್ಥಿಕ ಪ್ರಗತಿಗೂ ವೇಗ ದೊರೆಯಲಿದೆ” ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರದ ಜನತೆಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳು. ಈ ಬೇಡಿಕೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಬಿಎಂಟಿಸಿ ಉಪಾಧ್ಯಕ್ಷರಾದ ನವೀನ್ ಕಿರಣ್ ಅವರಿಗೆ ಅಭಿನಂದನೆಗಳು” ಎಂದು ಧನ್ಯವಾದ ತಿಳಿಸಿದ್ದಾರೆ.

Read More

ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಶಿಕ್ಷಣ ಇಲಾಖೆ ವತಿಯಿಂದ 5 ಮತ್ತು 8ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಮಾರ್ಚ್ 27 ರಿಂದ ಏ. 1 ರವರೆಗೆ ಪರೀಕ್ಷೆಗಳು ನಡೆಯಲಿವೆ. ಐದನೇ ತರಗತಿ ಮಕ್ಕಳಿಗೆ ಮಾರ್ಚ್ 27 ರಿಂದ 30 ರವರೆಗೆ, 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಚ್ 27 ರಿಂದ ಏಪ್ರಿಲ್ 1ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಆಯಾ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಪರಿಗಣಿಸಲಾಗಿದೆ. ಬೋರ್ಡ್ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಮೌಲ್ಯಾಂಕನದಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆಲ ತಿಂಗಳು ವಿಶೇಷ ತರಗತಿ ನಡೆಸಿ ಅವರ ಕಲಿಕಾ ಮಟ್ಟ ಸುಧಾರಿಸಿ ಮುಂದಿನ ತರಗತಿಗೆ ಪ್ರವೇಶ ಕಲ್ಪಿಸಲಾಗುವುದು. 5ನೇತರಗತಿಬೋರ್ಡ್ಪರೀಕ್ಷೆವೇಳಾಪಟ್ಟಿ ಮಾರ್ಚ್ 27 ಪ್ರಥಮ ಭಾಷೆ ಮಾರ್ಚ್ 28 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಮಾರ್ಚ್ 29 ಪರಿಸರ ಅಧ್ಯಯನ ಮಾರ್ಚ್ 30 ಗಣಿತ 8ನೇತರಗತಿಬೋರ್ಡ್ಪರೀಕ್ಷೆವೇಳಾಪಟ್ಟಿ ಮಾರ್ಚ್…

Read More

ಮಲಾವಿ: ಆಗ್ನೇಯ ಆಫ್ರಿಕಾದ ಮಲಾವಿಗೆಅಪ್ಪಳಿಸಿರುವ ಫ್ರೆಡ್ಡಿ ಚಂಡಮಾರುತದ ಅಬ್ಬರದಿಂದ ಭಾರೀ ಮಳೆ ಜೊತೆಗೆ ಹಲವೆಡೆ ಭೂಕುಸಿತ ಸಂಭವಿಸಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 326ಕ್ಕೆ ಏರಿಕೆಯಾಗಿದೆ. ನಿನ್ನೆಯ ಹೊತ್ತಿಗೆ ಸಾವಿನ ಸಂಖ್ಯೆ 225 ರಿಂದ 326 ಕ್ಕೆ ಏರಿಕೆಯಾಗಿದ್ದು, 183,159 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಮಲಾವಿಯದ ಅಧ್ಯಕ್ಷ ಲಾಝರಸ್​ ಚಕ್ವೇರ ತಿಳಿಸಿದ್ದಾರೆ. ಮಳೆಯಿಂದ ಉಂಟಾದ ಪ್ರವಾಹ ಮತ್ತು ಮಣ್ಣಿನ ಕುಸಿತದಲ್ಲಿ ಸಿಲುಕೊಂಡಿರುವವರ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಸೇನೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾರ್ಯಚರಣೆ ಮುಂದುವರೆದಿದೆ. 300 ಕ್ಕೂ ಹೆಚ್ಚು ತುರ್ತು ಶೆಲ್ಟರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿರುವ ಚಕ್ವೆರಾ, ಜಾಗತಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಕಳೆದ ಮೂರು ವಾರಗಳಲ್ಲಿ ಎರಡನೇ ಬಾರಿಗೆ ಆಫ್ರಿಕಾದ ಕರಾವಳಿಗೆ ಫ್ರೆಡ್ಡಿ ಚಂಡಮಾರುತ ಅಪ್ಪಳಿಸಿದ್ದು, ನೆರೆ ಪ್ರದೇಶ ಮೊಝಾಂಬಿಕ್​ನಲ್ಲೂ ಸಹ ಸಾಕಷ್ಟು ಅನಾಹುತ ಸೃಷ್ಟಿಸಿದ್ದು, ಜನ ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ವಾರ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ನಮ್ಮಲ್ಲಿರುವ ಸಂಪನ್ಮೂಲಗಳ ಮಟ್ಟಕ್ಕಿಂತ ಹಲವು ಪಟ್ಟು ಅಧಿಕ…

Read More

ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಹಾಗೂ ಬಾಲಿವುಡ್ ನಟಿ ಜಾಕ್ವೆಲಿನ್ ಕಳೆದ ಕೆಲ ತಿಂಗಳಿನಿಂದ ಸಖತ್ ಸುದ್ದಿಯಲ್ಲಿದ್ದಾರೆ.  ಸುಕೇಶ್ ಜೈಲಿನಲ್ಲಿದ್ದರು ಆಗಾಗ ಪತ್ರದ ಮೂಲಕ ತಮ್ಮ ಪ್ರೇಮ ನಿವೇದನೆಯನ್ನು ನಟಿಗೆ ತಿಳಿಸುತ್ತಿದ್ದಾರೆ. ಇದೀಗ ಇವರಿಬ್ಬರ ಪ್ರೀತಿ ತೆರೆ ಮೇಲೆ ಬರಲು ಸಜ್ಜಾಗಿದೆ, ಖತರ್ನಾಕ್ ಕಿಲಾಡಿ ಸುಕೇಶ್ ಹಾಗೂ ಜಾಕ್ವೆಲಿನ್ ಪ್ರೇಮದ ಕಥೆಯನ್ನೇ ಸಿನಿಮಾ ಮಾಡಲು ಬಿಟೌನ್ ನಿರ್ದೇಶಕರೊಬ್ಬರು ಮುಂದಾಗಿದ್ದಾರೆ. ಕೋಟಿ ಕೋಟಿ ಲೂಟಿ ಮಾಡಿದ್ದ ಸುಕೇಶ್, ಬಾಲಿವುಡ್ ನಟಿಮಣಿಯರನ್ನ ಬುಟ್ಟಿಗೆ ಹಾಕಿಕೊಂಡ ಕಥೆಯನ್ನ ಈಗ ಸಿನಿಮಾ ಮಾಡ್ತಿದ್ದಾರೆ. ಸುಕೇಶ್‌ನ ವಂಚನೆ ಪ್ರಕರಣಗಳ ಜೊತೆಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಲವ್ ಸ್ಟೋರಿಯನ್ನ ಮುಖ್ಯವಾಗಿರಿಸಿಕೊಂಡು ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕ ಆನಂದ್ ಕುಮಾರ್ ರೆಡಿಯಾಗಿದ್ದಾರೆ. ತಿಹಾರ್ ಜೈಲಿನ ಜೈಲರ್ ದೀಪಕ್ ಶರ್ಮಾ ಅವರನ್ನ ಇತ್ತೀಚಿಗೆ ನಿರ್ದೇಶಕ ಆನಂದ್ ಕುಮಾರ್ ಭೇಟಿಯಾಗಿದ್ದಾರೆ. ಸುಕೇಶ್‌ನ ಕಥೆಯನ್ನು ಸಿನಿಮಾ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ದೀಪಕ್ ಶರ್ಮಾ ಅವರು ನಿರ್ದೇಶಕ ಆನಂದ್ ಜೊತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು,…

Read More