ಇಂದು ಬೆಳ್ಳಿ ತೆರೆಯಲ್ಲಿ ಕಮಾಲ್ ಮಾಡೋಕೆ ಕಬ್ಜ ಸಿನಿಮಾ ರೆಡಿಯಾಗಿದೆ. ಕನ್ನಡದ ಮತ್ತೊಂದು ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಆರ್.ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನ ಕಬ್ಜ ಇಂದು ಭರ್ಜರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಬ್ಜ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾವ ಐವತ್ತು ದೇಶಗಳಲ್ಲಿ ತೆರೆ ಕಾಣುತ್ತಿದೆ. ಶಿವರಾಜ್ ಕುಮಾರ್, ಸುದೀಪ್ ಮತ್ತು ಉಪೇಂದ್ರ ಇದೇ ಮೊದಲ ಬಾರಿಗೆ ಮೂವರು ಸ್ಟಾರ್ ನಟರು ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅದ್ಧೂರಿ ತಾರಾಗಣ, ಮೇಕಿಂಗ್, ಭಾರೀ ಬಜೆಟ್ ಮತ್ತು ಹೊಸ ಬಗೆಯ ಕಥೆಯು ಈ ಸಿನಿಮಾದಲ್ಲಿದೆ. ಈ ಎಲ್ಲ ಕಾರಣದಿಂದಾಗಿ ಕಬ್ಜ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗಾಗಲೇ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸಿದ್ದು, ಮೊದಲ ದಿನದ…
Author: Prajatv Kannada
ವಿಶ್ವಸಂಸ್ಥೆಯಲ್ಲಿ ಕನ್ನಡ ಕಹಳೆಯನ್ನ ಮೊಳಗಿಸಿರುವ ವಿಚಾರವಾಗಿ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕೆಲವು ದಿನಗಳಿಂದ ನಡೆಯುತ್ತಿದ್ದು, ಮಾನವ ಹಕ್ಕು ಸಂರಕ್ಷಣೆ ಷರತ್ತಿನ 28ನೇ ಸಭೆಯಲ್ಲಿ ಪರಿಸರ ಸಂರಕ್ಷಣೆ ವಿಷಯವಾಗಿ ರಿಷಬ್ ಕನ್ನಡದಲ್ಲಿಯೇ ಭಾಷಣ ಮಾಡಿದ್ದಾರೆ. ಈ ಕುರಿತ ಸಣ್ಣ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಕೆಲ ದಿನಗಳ ಹಿಂದೆ ರಿಷಬ್, ಸಿಎಂ ಬೊಮ್ಮಾಯಿ ಅವರನ್ನ ಭೇಟಿಯಾಗಿದ್ದರು. ಅನೇಕ ಕಾಡುಗಳಿಗೆ ಭೇಟಿ ನೀಡಿ, ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಈ ಎಲ್ಲಾ ಸಮಸ್ಯೆಗಳನ್ನ ಪರಿಹರಿಸುವುದಾಗಿ ಸಿಎಂ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಈ ಬಗ್ಗೆ ಮತ್ತೆ ವಿಶ್ವಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ರಿಷಬ್ ಮಾತನಾಡಿದ್ದಾರೆ. ವಿಶ್ವಸಂಸ್ಥೆಯ ವೇದಿಕೆಯಲ್ಲಿ ಕನ್ನಡ ದನಿ ಪಸರಿಸುವ ಕಾರ್ಯವನ್ನು ರಿಷಬ್ ಶೆಟ್ಟಿ ಮಾಡಿದರು. ಈ ಬಾರಿ ಸರಳ ಭಾರತೀಯ ಉಡುಗೆ ಬಿಳಿಯ ಬಣ್ಣದ ಖುರ್ತಾ ಧರಿಸಿ ಅದಕ್ಕೊಪ್ಪುವ ನೀಲಿ ಬಣ್ಣದ ವೇಸ್ ಕೋಟು ಧರಿಸಿದ್ದ ರಿಷಬ್ ಶೆಟ್ಟಿ,…
ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಈ ದಿನವನ್ನು ಅಭಿಮಾನಿಗಳು ರಾಜ್ಯಾದ್ಯಂತ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅಪ್ಪು ಪುಣ್ಯಭೂಮಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರ ತನಕ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ನಾನಾ ಕಡೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಬೆಳಗ್ಗೆ ಎಂಟು ಗಂಟೆಗೆ ಪೂಜೆ ಸಲ್ಲಿಸುವ ಮೂಲಕ ಅಪ್ಪು ಹುಟ್ಟು ಹಬ್ಬಕ್ಕೆ ಚಾಲನೆ ನೀಡಲಾಗುತ್ತಿದೆ. ಬೆಳಗ್ಗೆ 10 ಗಂಟೆಗೆ ಅನ್ನ ಸಂತರ್ಪಣೆ ಹಾಗೂ ಸಂಜೆ 6 ಗಂಟೆಗೆ ಅಪ್ಪು ಹಿಟ್ ಹಾಡುಗಳ ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ನಾನಾ ಕಡೆಗಳಲ್ಲಿ ಅಪ್ಪು ಪುತ್ಥಳಿ ಅನಾವರಣ, ಅನ್ನ ಸಂತರ್ಪಣೆ, ಅನಾಥಾಶ್ರಮದಲ್ಲಿ ಹುಟ್ಟು ಹಬ್ಬ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧಾರವಾಡದಲ್ಲಿ ಅಪ್ಪು ಹೆಸರಿನಲ್ಲೇ ಚಂದ್ರಶೇಖರ್ ಮಾಡಲಗೇರಿ ಮತ್ತು ತಂಡ ಚಿತ್ರೋತ್ಸವವನ್ನು ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ಅಪ್ಪು ಹೆಸರಿನಲ್ಲೇ ಈ ಚಿತ್ರೋತ್ಸವ…
ಬೆಂಗಳೂರು: ಸಿಲಿಂಡರ್ ಸ್ಫೋಟವಾಗಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದೆ. ಅನಿಲ ಸಂಸ್ಕರಣೆ ಹಾಗೂ ವಿತರಣೆ ಮಾಡುವ ಗೇಲ್ ಸಂಸ್ಥೆಯು ನೆಲದಡಿಯಲ್ಲಿ ಅಳವಡಿಸಿದ್ದ ಅಡುಗೆ ಅನಿಲ ಸಂಪರ್ಕಿಸುವ ಪೈಪ್ನಲ್ಲಿ ಸೋರಿಕೆಯಾಗಿದೆ. ಈ ಸಂಬಂಧ ಮನೆಯೊಂದರಲ್ಲಿದ್ದ ಎರಡು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಸ್ಫೋಟದ ರಭಸಕ್ಕೆ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಸಮೀಪದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟ ದುರಂತದ ಪರಿಣಾಮ ಮನೆಯಲ್ಲಿರುವ ಪಿಠೋಪಕರಣಗಳು ದ್ವಂಸಗೊಂಡಿವೆ. ಗಾಯಗೊಂಡವರ ಹೆಸರು ಲಭ್ಯವಾಗಿಲ್ಲ. ಮಾಹಿತಿ ಆಧರಿಸಿ ಎಚ್ಎಸ್ಆರ್ ಲೇಔಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಗೇಲ್ ಕಂಪನಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬೆಂಗಳೂರು: ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಕೆಪಿಟಿಸಿಎಲ್, ಎಸ್ಕಾಂ ನೌಕರರಿಗೆ ಶೇ.20, ವೇತನ ಹೆಚ್ಚಿಸಿ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಬೊಮ್ಮಾಯಿ ಅವರು ಇಂದೇ ವೇತನ ಪರಿಷ್ಕರಣೆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದಿದ್ದರು. ಇದೀಗ ಇಂಧನ ಇಲಾಖೆ ನೌಕರರ ವೇತನ ಹೆಚ್ಚಿಸಿ ಆದೇಶಿಸಿದೆ. ಏಪ್ರಿಲ್ 1, 2022ರಿಂದ ಜಾರಿಗೆ ಬರುವಂತೆ ಕವಿಪ್ರನಿನಿ ಮತ್ತು ಎಸ್ಕಾಂ ಸಿಬ್ಬಂದಿಯ ವೇತನ 20% ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕವಿಪ್ರನಿನಿ ಹಾಗೂ ಇತರ ಎಸ್ಕಾಂಗಳ ನೌಕರರ ವೇತನ ಪರಿಷ್ಕರಣೆಯ ಕುರಿತು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯನ್ನು ಸರ್ಕಾರದಲ್ಲಿ ಪರಿಶೀಲಿಸಿದ ನಂತರ, ಕವಿಪ್ರನಿನಿ ಹಾಗೂ ಎಸ್ಕಾಂಗಳಲ್ಲಿ ಈಗಿರುವ ಅಧಿಕಾರಿ/ನೌಕರರ ವೇತನದ ಮೇಲೆ ಏಪ್ರಿಲ್ 2022 ರಿಂದ ಜಾರಿಗೆ ಬರುವಂತೆ ಶೇ. 20ರಷ್ಟನ್ನು ಹೆಚ್ಚಿಸಿ ಪರಿಷ್ಕರಿಸಲು ಅನುಮೋದಿಸಲಾಗಿದೆ.
ಬೆಂಗಳೂರು: ಬಿಎಸ್ವೈ ನಮ್ಮ ಪ್ರಶ್ನಾತೀತ ನಾಯಕ, ಗೊಂದಲ ಪರಿಹಾರವಾಗಿದೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಗೋವಿಂದ ರಾಜನಗರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಏನೇನ್ ಆಗಬೇಕೋ ಅದೆಲ್ಲವೂ ಆಗಿದೆ. ಚುನಾವಣೆ ಇರುವ ಕಾರಣ ಗೊಂದಲ ನಿವಾರಣೆ ಮಾಡಿದ್ದಾರೆ, ಎಲ್ಲವೂ ಸುಖಾಂತ್ಯವಾಗಿದೆ. ವಿಜಯೇಂದ್ರ ಮಾತನಾಡಿರೋದಕ್ಕೂ ನನಗೆ ಸಂಬಂಧ ಇಲ್ಲದೆ ಇರೋದು, ಯಡಿಯೂರಪ್ಪ ಈ ರಾಜ್ಯದ ನಾಯಕರು ಗಣ್ಯರ ಸಾಲಿನಲ್ಲಿ ಅವರು ಕೂಡ ಒಬ್ಬರು, ನಾನು ಕೂಡ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ನಾನು ಯಡಿಯೂರಪ್ಪ ಜೊತೆ ಕಳೆದ ಸಮಯ ಕಡಿಮೆ, ಸ್ವಲ್ಪ ದಿನ ಅವರ ಗರಡಿಯಲ್ಲಿ ಇದ್ದೆ. ಆದರೆ, ನಾನು ಜೆ ಹೆಚ್ ಪಟೇಲ್, ಹೆಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಪಳಗಿದವನು ಎಂದು ತಮ್ಮದೇ ಆದ ರಾಜಕೀಯ ಅನುಭವ ಇದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು.ನಾನು ಏನು ಮಾಡಬೇಕೋ ಅದರ ಕಡೆ ಅಷ್ಟೇ ಗಮನ ಕೊಟ್ಟಿದ್ದೇನೆ. ವಿಜಯೇಂದ್ರ ಕೂಡ ಏನು ಮಾಡಬೇಕೋ ಅದರ ಕಡೆ ಗಮನ ಕೊಡಲಿ. ನಾನು ಅವರಿಗೆ…
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸಂಚಾರ ನಿಯಮ ಉಲ್ಲಂಘನೆಯ ಮೇಲಿನ ಶೇ.50 ರಿಯಾಯಿತಿಯ ಲಾಭವನ್ನು ಪಡೆದುಕೊಂಡಿದೆ. ಶೇ. 50ರ ರಿಯಾಯಿತಿ ಸೌಲಭ್ಯದಡಿಯಲ್ಲಿ ಬಿಎಂಟಿಸಿ ನಿಗಮವು ಲಕ್ಷಾಂತರ ರೂಪಾಯಿ ದಂಡ ಕಟ್ಟಲು ಸಿದ್ಧತೆ ಮಾಡಿಕೊಂಡಿದೆ. ಸಂಚಾರ ನಿಯಮ ಉಲ್ಲಂಘನೆಯ ನಿಮಯದ ಮೇಲೆ ಅರ್ಧದಷ್ಟು ಕೊಡುಗೆ ಘೋಷಿಸಿದ ಬಳಿಕ ವಾಹನ ಸವಾರರು ಮುಗಿಬಿದ್ದು, ಸರತಿ ಸಾಲಲ್ಲಿ ನಿಂತು ದಂಡ ಕಟ್ಟಿದ್ದು ಗೊತ್ತೇ ಇದೆ. ಅದೇ ರೀತಿ ಸರ್ಕಾರಿ ವ್ಯಾಪ್ತಿಯ ಬಿಎಂಟಿಸಿ ಸಹ ಒಟ್ಟು 33,00,000 ಲಕ್ಷ ರೂಪಾಯಿ ದಂಡ ಪಾವತಿಸಲಿದೆ. ನಿತ್ಯ ನಗರದ ತುಂಬೆಲ್ಲ ಓಡಾಡುವ, ಸಾರಿಗೆ ಸೇವೆ ನೀಡುವ ಈ ಬಿಎಂಟಿಸಿ ಬಸ್ಗಳ ವಿರುದ್ಧ ಸಿಗ್ನಲ್ ಜಂಪ್, ನಿಷೇಧಿತ ಸ್ಥಳದಲ್ಲಿ ನಿಲುಗಡೆ ಸೇರಿದಂತೆ ಒಟ್ಟು 12,000 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಸಂಚಾರ ಪೊಲೀಸ್ ಇಲಾಖೆ ಚಲನ್ ಹೊರಡಿಸಿದೆ. ಇಷ್ಟು ಪ್ರಮಾಣದ ಪ್ರಕರಣಗಳಿಂದ ಬಿಎಂಟಿಸಿಗೆ ಒಟ್ಟು 66ಲಕ್ಷ ರೂಪಾಯಿ ದಂಡ ಬಿದ್ದಿದೆ. ಆದರೆ ಸದ್ಯ ಎರಡನೇ ಬಾರಿಗೆ ಸರ್ಕಾರ ಶೇ. 50ರ ರಿಯಾಯಿತಿ…
ಬೆಂಗಳೂರು: ಪಕ್ಷಾಂತರ ಮಾಡುವವರು ಚುನಾವಣೆಗೆ ನಿಲ್ಲಬಾರದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷಾಂತರ ಅನ್ನುವುದು ಪವಿತ್ರ ಕಾರ್ಯ ಆಗಿದೆ. ಹೋದ ಚುನಾವಣೆಯಲ್ಲಿ ಆದ ಪಕ್ಷಾಂತರ ತದನಂತರ ಆದ ಪಕ್ಷಾಂತರ, ಚುನಾವಣಾ ಬಂದ ಮೇಲೆ ಪಕ್ಷಾಂತರ ಕ್ಕೆ ಎಲ್ಲರೂ ಬಾಗಿಲು ತೆಗಿದಿದ್ದಾರೆ. ಪಕ್ಷಾಂತರವನ್ನು ನಾವು ಬೆಂಬಲಿಸಿದರೆ ಪ್ರಜಾಪ್ರಭುತ್ವ ಕೆಟ್ಟು ಹೋಗುತ್ತೆ. ಈ ಬಿಜೆಪಿ ಸರ್ಕಾರ ಬಂದಿದ್ದು ಪಕ್ಷಾಂತರದಿಂದಲೇ. ಈಗಾ ಮತ್ತೆ ಪಕ್ಷಂತಾರಕ್ಕೆ ಗರಿಗೆದರಿತ್ತಾಯಿದಾರೆ. ಎಲ್ಲಾ ಪಕ್ಷದವರು ಯಾರ ಬೇಕಾದ್ರು ಬರಬಹುದು ಎಂದು ಹೇಳುತ್ತಿದ್ದಾರೆ. ಹೀಗಾಗಿಯೇ ಪಕ್ಷಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಿ ತರಲೆಬೇಕು. ಪಕ್ಷಾಂತರ ಮಾಡುವವರು ಚುನಾವಣಾಗೆ ನಿಲ್ಲಬಾರದು ಎಂದು ಹೇಳಿದರು. ಇನ್ನೂ ಯಡಿಯೂರಪ್ಪ ಅವರನ್ನ ಮುಲೆ ಗುಂಪು ಮಾಡಬೇಕು ಎಂದು ಬಿಜೆಪಿ ಹೈಕಮಾಂಡ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಇಲ್ಲ ಅಂದ್ರೆ ಚುನಾವಣೆ ಆಗೋದಿಲ್ಲ ಅನ್ನುವ ಹಾಗೆ ಇತ್ತು. ಆದರೆ ಇವತ್ತು ಬಿಜೆಪಿಯಲ್ಲಿ ಜೆಪಿ ನಡ್ಡಾ,ಅಮಿತ್ ಶಾ ,ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆ…
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕೆ ದುಡಿಯಲು ಸದಾ ಸಿದ್ಧನಾಗಿದ್ದೇನೆ. ಕುಡಿಯುವ ನೀರು ಸೇರಿದಂತೆ ಯಾವುದೇ ಕುಂದು ಕೊರತೆಗಳಿದ್ದಲಿ ನೇರವಾಗಿ ನನ್ನನ್ನು ಭೇಟಿ ಮಾಡಿ ಅಹವಾಲು ನೀಡಬಹುದು ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು.ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ 75ನೇ ಶಂಕರಮಠ ವಾರ್ಡಿನ ಸನ್ಮಾತ್ಮ ದೇವಸ್ಥಾನದ ಮುಂಭಾಗದಲ್ಲಿ ಬೋರ್ ವೆಲ್ ಕೊರೆಯುವ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂಬರುವ ಬೇಸಿಗೆಯಲ್ಲಿ ಕ್ಷೇತ್ರದಲ್ಲಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಇಂದು ಬೋರ್ ವೆಲ್ ಕೊರೆಯುವ ಯಂತ್ರಕ್ಕೆ ಚಾಲನೆ ನೀಡಿದ್ದೇನೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಉತ್ತರ ಘಟಕದ ಉಪಾಧ್ಯಕ್ಷ ಜಯರಾಮ್, ಅವೀನ್ ಆರಾಧ್ಯ, ಸುಬ್ಬಣ್ಣ ಸೇರಿದಂತೆ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವ ಬಿಜೆಪಿ ಪಕ್ಷದವರು ಜನರನ್ನು ಸೆಳೆಯಲು ಹಾಗೂ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆ ಕಾಣಲೆಂದು ಮಹಿಳೆಯರಿಗೆ ಒಂದೇ ತರಹದ ಸೀರೆ ಹಂಚಿ ಎಲ್ಲರೂ ಸೀರೆ ಉಟ್ಟುಕೊಂಡು ಬರಬೇಕು ಎಂದು ಆಯಾ ವಾರ್ಡಿನಲ್ಲಿ 35ಸೀರೆ ಹಂಚಿದ್ದಾರೆ ಎಂದು ಮಹಿಳೆಯರಿಂದ ಮಾತು ಕೇಳಿ ಬಂತು. ಅಲ್ಲದೇ ಮೆರವಣಿಗೆ ನಡೆಯುವ ವೇಳೆ ಪುರುಷರಿಗೆ ಪೇಟ ಹಂಚುತ್ತಿರುವದು ಕಂಡು ಬಂದಿದ್ದು ಸಾಮಾನ್ಯವಾಗಿತ್ತು.ಸಂಕಲ್ಪ ಯಾತ್ರೆ ಪಕ್ಕದಲ್ಲೇ ವಾಹನ ತೆಗೆದುಕೊಂಡು ಬಂದು ಸೇರಿರುವ ಜನರಿಗೆ ಪೇಟ ನೀಡುತ್ತಾ ಹೋಗುತ್ತಿರುವರು, ಜನರು ಯಾತ್ರೆಯನ್ನು ಬಿಟ್ಟು ಪೇಟಕ್ಕಾಗಿ ಮುಗಿಬಿದ್ದನ್ನು ಕಾಣಬಹುದು. ಜನರನ್ನು ಸೆಳೆಯಲು ಸೀರೆ ಮತ್ತು ಪೇಟ ಹಂಚಿದ ಬಿಜೆಪಿ Video Player 00:00 01:32 ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವ ಬಿಜೆಪಿ ಪಕ್ಷದವರು ಜನರನ್ನು ಸೆಳೆಯಲು ಹಾಗೂ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆ ಕಾಣಲೆಂದು ಮಹಿಳೆಯರಿಗೆ ಒಂದೇ ತರಹದ ಸೀರೆ ಹಂಚಿ ಎಲ್ಲರೂ ಸೀರೆ ಉಟ್ಟುಕೊಂಡು ಬರಬೇಕು ಎಂದು ಆಯಾ ವಾರ್ಡಿನಲ್ಲಿ 35ಸೀರೆ…