ಬೆಂಗಳೂರು: ಮೀಸಲಾತಿ ವಿಚಾರವಾಗಿ ಕೇಂದ್ರ ಸಚಿವ ಅಮಿತ್ ಶಾ(amith sha) ಮಾತಾಡಿದ್ದಾರೆ. ಆದರೆ ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಯಾವ ರೀತಿ ಹೆಚ್ಚಳವಾಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿದ್ದಾರೆ. ಶೇಕಡಾ 2ರಷ್ಟು ಹೆಚ್ಚುವರಿ ಮೀಸಲಾತಿ ಕೊಡಿ ಎಂದು ಕೇಳಿರಲಿಲ್ಲ. ಮುಸ್ಲಿಂ ಸಮುದಾಯ ಮೀಸಲಾತಿ ಕಿತ್ತು ಲಿಂಗಾಯತ, ಒಕ್ಕಲಿಗರು ಮೀಸಲಾತಿ ಕೊಡಿ ಎಂದು ಕೇಳಿರಲಿಲ್ಲ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಸಮಾಧಾನ ಆಗದಂತೆ ಮಾಡಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಯೊಬ್ಬರೂ ಅಸಮಾಧಾನಗೊಂಡಿದ್ದಾರೆ ಎಂದರು. ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಇಲಾಖೆ ಆರಂಭಿಸುತ್ತೇವೆ. ಹೂಡಿಕೆಗೆ ಅವಕಾಶ ಮಾಡಿಕೊಡಲು ಅನುಕೂಲ ಮಾಡಿಕೊಡುತ್ತೇವೆ ಎಂದರು.
Author: Prajatv Kannada
ಬೆಂಗಳೂರು: 2023 ರ ಕರ್ನಾಟಕ ವಿಧಾನಸಭೆ ಚುನಾವಣಾ ಕಾವು ದಿನೇ ದಿನೇ ರಂಗೇರುತ್ತಿದೆ. ಇಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಜೆಡಿಎಸ್ ಅಭ್ಯರ್ಥಿಯಾದ ಇಮ್ರಾನ್ ಪಾಷಾ ಅವರ ಪರವಾಗಿ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಾದ ಜೆಪಿ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಚುನಾವಣೆಯ ಕುರಿತಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತಂದು ಕುಮಾರಣ್ಣನ ಸಿಎಂ ಮಾಡಬೇಕು. ಭ್ರಷ್ಟಾಚಾರದಲ್ಲಿ ಮುಳುಗಿರುವ ಈಗಿನ ಸರ್ಕಾರವನ್ನ ತೊಲಗಿಸಿ, ಈ ಬಾರಿ ಜೆಡಿಎಸ್ ಅಧಿಕಾರಕ್ಕೇ ತರಲೇಬೇಕು ಎಂದು ಹೇಳಿದರು.
ಇಂದು ಡಾ.ರಾಜ್ ಕುಮಾರ್ ಅವರ 94ನೇ ಜನ್ಮದಿನ. ಕೇವಲ ದೇಶಾದ್ಯಂತ ಮಾತ್ರವಲ್ಲ, ವಿದೇಶಗಳಲ್ಲೂ ಅಣ್ಣವ್ರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಜಪಾನ್ ನಲ್ಲಿ ಅಣ್ಣಾವ್ರ ಅಭಿಮಾನಿಗಳು ರಾಜ್ ಕುಮಾರ್ ಫೋಟೋ ಮುಂದೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ್ದಾರೆ. ನಾಡಿನಾದ್ಯಂತ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಡಾ.ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ನೆಚ್ಚಿನ ನಟನ ಹೆಸರಿನಲ್ಲಿ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಆಚರಿಸುತ್ತಿದ್ದಾರೆ. ನಿನ್ನೆಯಷ್ಟೇ ಅಣ್ಣಾವ್ರ ಮೊಮ್ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದ ಅಭಿಮಾನಿಗಳು ಇಂದು ಮೇರುನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಕೆಲ ಅಭಿಮಾನಿಗಳು ಇದ್ದೂರಿನಲ್ಲೇ ಹುಟ್ಟು ಹಬ್ಬ ಆಚರಿಸುತ್ತಿದ್ದರೆ, ಇನ್ನೂ ಹಲವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ಅಭಿಮಾನಿಗಳು ದಂಡು ಹರಿದು ಬಂದಿದೆ. ಸ್ಮಾರಕದ ಮುಂದೆಯೇ ಅನ್ನಸಂತರ್ಪಣೆ, ಕೇಕ್ ಕತ್ತರಿಸುವುದು ಹಾಗೂ ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ.
ಕಿರುತೆರೆ ಹಾಗೂ ಸಿನಿಮಾ ರಂಗದ ನಟ ಸಂಪತ್ ಜಯರಾಮ್ ಏ.22ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಪತ್ ಸಾವಿನ ಬೆನ್ನಲ್ಲೇ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಇದೀಗ ಸಂಪತ್ ಜಯರಾಮ್ ಸಾವಿಗೆ ಅಸಲಿ ಕಾರಣವೇನು ಎಂಬುದನ್ನ ‘ಅಗ್ನಿಸಾಕ್ಷಿ’ ಖ್ಯಾತಿಯ ನಟ ರಾಜೇಶ್ ಧ್ರುವ ತಿಳಿಸಿದ್ದಾರೆ. ಜೊತೆಗೆ ಆಪ್ತ ಸ್ನೇಹಿತನ ಬಗ್ಗೆ ಕೆಟ್ಟ ಗಾಸಿಪ್‌ಗಳನ್ನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಸಂಪತ್ ಜಯರಾಮ್ ಕಿರುತೆರೆಯ ಖ್ಯಾತ ಧಾರವಾಹಿ ಅಗ್ನಿಸಾಕ್ಷಿಯಲ್ಲಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಅಣ್ಣನ ಪಾತ್ರದಲ್ಲಿ ಮಿಂಚಿದ್ದರು. ನಟ ರಾಜೇಶ್ ಧ್ರುವ ಜೊತೆ ‘ಶ್ರೀ ಬಾಲಾಜಿ ಸ್ಟುಡಿಯೋ’ ಸೇರಿದಂತೆ ಕೆಲ ಸಿನಿಮಾ ಹಾಗೂ ಸೀರಿಯಲ್ ಗಳಲ್ಲೂ ನಟಿಸಿದ್ದರು. ಸಂಪತ್ ಸಾವಿನ ಬೆನ್ನಲ್ಲೇ ಸಾಕಷ್ಟು ಅಂತೆ ಕಂತೆ ಗಾಸಿಪ್‌ಗಳು ಶುರುವಾದವು. ಸಂಪತ್ ಸಾವಿನ ನೆಗೆಟಿವ್ ಸುದ್ದಿಗಳಿಗೆ ರಾಜೇಶ್ ಧ್ರುವ ಬ್ರೇಕ್ ಹಾಕಿದ್ದಾರೆ. ನಿನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ನನಗೆ ಕರೆ ಬರುತ್ತೆ ನಾನು ಕೂಡ ನಿದ್ರೆಯಲ್ಲಿದ್ದೆ. ಫೋನ್ ಸೈಲೆಂಟ್‌ನಲ್ಲಿ ಇರಲಿಲ್ಲ ರಿಂಗ್ ಆಗಿದಕ್ಕೆ…
ತೆಲುಗು ಸಿನಿಮಾ ರಂಗದಲ್ಲಿ ಫ್ಯಾನ್ ವಾರ್ ಕಾಮನ್ ಆಗಿ ಬಿಟ್ಟಿದೆ. ಇತರ ಅಭಿಮಾನಿಗಳ ನಟರು ಮತ್ತೊಬ್ಬ ಅಭಿಮಾನಿಗಳ ನಟರನ್ನು ಬೆದರಿಸುವುದು, ಹಲ್ಲೆ ಮಾಡುವುದು ಕಾಮನ್ ಅನ್ನೋ ಹಾಗಾಗಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಪವನ್ ಕಲ್ಯಾಣ್ ಅಭಿಮಾನಿಗಳು ನಟ ಪ್ರಭಾಸ್ ಅಭಿಮಾನಿಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಪ್ರಭಾಸ್ ಅಭಿಮಾನಿಯನ್ನು ಹೊಡೆದು ಕೊಂದಿರುವ ಘಟನೆ ಆಂಧ್ರದ ಅತ್ತಿಲಿ ಎಂಬಲ್ಲಿ ಬೆಳಕಿಗೆ ಬಂದಿದೆ. ಕಿಶೋರ್ ಹೆಸರಿನ ಪವನ್ ಕಲ್ಯಾಣ್ ಅಭಿಮಾನಿ ಹರಿಕುಮಾರ್ ಎನ್ನುವ ಪ್ರಭಾಸ್ ಅಭಿಮಾನಿಯನ್ನು ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಇಬ್ಬರೂ ಮನೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರ ವಿಡಿಯೋವನ್ನು ಕಿಶೋರ್ ವಾಟ್ಸಾಪ್ ಸ್ಟೇಟಸ್ ಗೆ ಹಾಕಿದ್ದ. ಇದರಿಂದ ಕುಪಿತಗೊಂಡ ಹರಿಕುಮಾರ್, ಆ ಸ್ಟೇಟಸ್ ತೆಗೆದು ಪ್ರಭಾಸ್ ವಿಡಿಯೋ ಹಾಕುವಂತೆ ಹೇಳಿದ್ದಾನೆ. ತನ್ನ ಮಾತು ಕೇಳದೇ ಇರುವ ಕಾರಣದಿಂದಾಗಿ ರಾಡ್ ನಿಂದ ಹೊಡೆದು…
ಬೆಂಗಳೂರು: ಓಲಾ, ಊಬರ್ ಆಯ್ತು ಇದೀಗ ಬೆಂಗಳೂರಿನಲ್ಲಿ ಇಂದಿನಿಂದ ಮತ್ತೊಂದು ಟ್ಯಾಕ್ಸಿ ಸರ್ವೀಸ್ ರೋಡಿಗೆ ಬಂದಿದೆ. ಹೌದು ಆಟೊ ರಿಕ್ಷಾದಂತೆ ಪ್ರಯಾಣಿಕ ಸೇವೆ ಒದಗಿಸಲು ನಾಲ್ಕು ಚಕ್ರದ ‘ಕ್ಯೂಟ್ ಕ್ವಾಡ್ರಿ ಸೈಕಲ್’ ವಾಹನಗಳು ನಗರದಲ್ಲಿ ಇಂದಿನಿಂದ ಅಧಿಕೃತವಾಗಿ ರಸ್ತೆಗೆ ಇಳಿದಿವೆ. ಈ ವಾಹನಗಳಿಗೆ ಸಾರಿಗೆ ಇಲಾಖೆ ಪ್ರತ್ಯೇಕ ದರ ನಿಗದಿ ಮಾಡಿದೆ. ನಾಲ್ಕು ಚಕ್ರದ ವಾಹನಗಳು ಮೀಟರ್ ಆಳವಡಿಕೆಯೊಂದಿಗೆ ರೋಡಿಗೆ ಇಳಿದಿದ್ದು, ಬಜಾಜ್ ಕಂಪನಿ ಮುಖ್ಯಸ್ಥರು ವಾಹನಗಳಿಗೆ ಇಂದು ಚಾಲನೆ ನೀಡಿದ್ದಾರೆ. ಇದರೊಂದಿಗೆ ನಗರದ ಜನತೆ ಆಟೊ ಮಾದರಿಯಲ್ಲಿರುವ ಈ ವಾಹನದಲ್ಲಿ ಕುಳಿತು ಪ್ರಯಾಣಿಸಬಹುದಾಗಿದೆ. ಈ ವಾಹನಗಳ ಕಾರ್ಯಾಚರಣೆಗೆ ತಿಂಗಳ ಹಿಂದೆಯೇ ಸಾರಿಗೆ ಇಲಾಖೆ ಅನುಮತಿ ನೀಡಿ ದರ ನಿಗದಿಪಡಿಸಿತ್ತು, 4 ಕಿ.ಮೀ ವರೆಗೆ 60 ರೂ. ಕನಿಷ್ಠ ದರವಿರಲಿದೆ. ನಂತರ ಪ್ರತಿ ಕಿಲೋ ಮೀಟರ್‌ಗೆ 16 ರೂ. ಇರಲಿದೆ ಎಂದು ಸಾರಿಗೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ಕಾರು ಮಾದರಿಯ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್ ವಾಹನವು 2019 ರಲ್ಲಿಯೇ…
ಟಾಲಿವುಡ್ ಬ್ಯೂಟಿ ನಟಿ ಸಮಂತಾ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅನಾರೋಗ್ಯದ ನಡುವೆಯೂ ಸಮಂತಾ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು ಇದೀಗ ಬಾಲಿವುಡ್ ಗೂ ಎಂಟ್ರಿಕೊಟ್ಟಿದ್ದಾರೆ. ಈ ಮಧ್ಯೆ ಸಮಂತಾ ಆರೋಗ್ಯದ ಮತ್ತೆ ನಾಲಿಗೆ ಹರಿಬಿಟ್ಟ ನಿರ್ಮಾಪಕನಿಗೆ ನಟಿ ಖಡಕ್ ತಿರುಗೇಟು ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಸಮಂತಾ ಕುರಿತು ನಿರ್ಮಾಪಕ ಚಿಟ್ಟಿಬಾಬು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಸಮಂತಾ ಮುಖ ಕಿತ್ತು ಹೋಗಿದೆ. ಆಕೆಗೆ ವಯಸ್ಸಾಗಿದ್ದು ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಸಮಂತಾಗೆ ಇದೀಗ ನಾಯಕಿಯಾಗಿ ನಟಿಸಲು ಆಫರ್ ಬರುತ್ತಿಲ್ಲ. ಅದಕ್ಕೆ ಅವರು ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಟಾಪ್ ಹೀರೋಯಿನ್ ಪಟ್ಟದಿಂದ ಸಮಂತಾ ಕೆಳಗೆ ಬಿದ್ದು ಬಹಳ ಸಮಯವಾಗಿದೆ. ಅದಕ್ಕೆ ‘ಪುಷ್ಪ’ ಸಿನಿಮಾದಲ್ಲಿ ಊ ಅಂಟಾವ ಹಾಡಿನಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡಲು, ಚಿತ್ರರಂಗದಲ್ಲಿ ನಿಲ್ಲಲು ಹೀಗೆ ಮಾಡ್ತಿದ್ದಾಳೆ ಎಂದಿದ್ದಾರೆ ಚಿಟ್ಟಿಬಾಬು. ಆಕೆಯ ವೃತ್ತಿ ಬದುಕು ಮುಗಿದಿದೆ. ಒಂದು ಸಮಯದಲ್ಲಿ ಒಳ್ಳೆಯ ಸ್ಟಾರ್…
ಹಣ ಪಾವತಿ ಮಾಡಿದವರಿಗೆ ಮಾತ್ರವೇ ಟ್ವಿಟರ್ ನಲ್ಲಿ ಬ್ಲೂಟಿಕ್ ಎಂದು ಹೇಳುವ ಮೂಲಕ ಟ್ವಿಟರ್ ಲೋಕದಲ್ಲಿ ಎಲೋನ್ ಮಸ್ಕ್ ಸಂಚಲನ ಸೃಷ್ಟಿಸಿದ್ದರು. ತಾವು ಹೇಳಿದಂತೆ ಉಚಿತವಾಗಿ ಬ್ಲೂಟಿಕ್ ಪಡೆದವರ ಖಾತೆಯಿಂದ ಅದನ್ನು ತೆಗೆದುಹಾಕಿದ್ದು, ಮಸ್ಕ್ ನಡೆಗೆ ಸಾಕಷ್ಟು ಸಿಲೆಬ್ರಿಟಿಗಳು ಆಕ್ರೋಶ ವ್ಯಕ್ತ ಪಡಿಸಿದ್ದರು. ಹಲವರಂತೂ ತಾವು ಹಣ ಪಡೆದು ಬ್ಲೂ ಟಿಕ್ ಪಡೆದುಕೊಳ್ಳುವುದಿಲ್ಲ ಎಂದು ನೇರವಾಗಿಯೇ ತಿರುಗೇಟು ನೀಡಿದ್ದರು. ಟ್ವಿಟರ್ ಖಾತೆಯಲ್ಲಿ ಸಾಕಷ್ಟು ಸಕ್ರಿಯವಾಗಿರುವ ಬಿಗ್ ಬಿ ಇತ್ತೀಚೆಗೆ ಹಣ ನೀಡಿ ಬ್ಲೂಟಿಕ್ ಮರಳಿ ಪಡೆದಿದ್ದರು. ಟ್ವಿಟರ್ ಸಂಸ್ಥೆ ತಿಳಿಸಿದಂತೆ ತಿಂಗಳಿಗೆ 900 ರೂಪಾಯಿ ಪಾವತಿಸಿ ಅಮಿತಾಭ್ ಚಂದಾದಾರರಾಗಿದ್ದರು. ಹಣ ನೀಡಿದ್ದರಿಂದ ಅಮಿತಾಭ್ ಅವರ ಟ್ವಿಟರ್ ಖಾತೆಗೆ ಬ್ಲೂಟಿಕ್ ಸಿಕ್ಕಿತ್ತು. ಇದೀಗ ಎಲೋನ್ ಮಸ್ಕ್ ಮತ್ತೊಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ನಿರ್ಧಾರಕ್ಕೆ ಅಮಿತಾಭ್ ಗರಂ ಆಗಿದ್ದಾರೆ. ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎನ್ನುವ ಎಲೋನ್ ನಿರ್ಧಾರವನ್ನು ಸ್ವಾಗತಿಸದೇ ತಮಗೆ ಬ್ಲೂಟಿಕ್ ಬೇಡ ಎಂದು ಸಾಕಷ್ಟು ಸಿಲೆಬ್ರಿಟಿಗಳು ಸುಮ್ಮನಿದ್ದರು. ಬಹುತೇಕರು ಚಂದಾದಾರರಾಗದೇ ಹಾಗೆಯೇ…
ಖಾರ್ಟೂಮ್: ಸೇನೆ ಹಾಗೂ ಅರೆಸೇನಾಪಡೆಗಳ ಸಂಘರ್ಷಕ್ಕೆ ಗುರಿಯಾಗಿರುವ ಸುಡಾನ್‌ನಲ್ಲಿ ಸಿಲುಕಿಕೊಂಡಿರುವ ವಿದೇಶಿಗರ ರಕ್ಷಣೆ ಪ್ರಾರಂಭಿಸಲಾಗಿದೆ. ಭಾರತ ಸೇರಿದಂತೆ ಇತರ ದೇಶಗಳ ಸುಮಾರು 150ಕ್ಕೂ ಹೆಚ್ಚು ಜನರನ್ನು ಸುಡಾನ್‌ನಿಂದ ಕರೆತರಲಾಗಿದೆ ಎಂದು ಸೌದಿ ಅರೇಬಿಯಾ ಸರ್ಕಾರ ತಿಳಿಸಿದೆ. ಸೇನೆ ಹಾಗೂ ಅರೆಸೇನೆ ಸಂಘರ್ಷದಲ್ಲಿ ಸುಡಾನ್‌ನಲ್ಲಿರುವ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಜನರು ತಮ್ಮ ದೇಶಗಳಿಗೆ ಹಿಂತಿರುಗಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಸಂಘರ್ಷ ಪೀಡಿತ ಸುಡಾನ್‌ನಿಂದ ವಿದೇಶಿ ರಾಜತಾಂತ್ರಿಕರು, ಅಧಿಕಾರಿಗಳು ಸೇರಿದಂತೆ 150ಕ್ಕೂ ಅಧಿಕ ಜನರನ್ನು ಸುಡಾನ್‌ನಿಂದ ರಕ್ಷಿಸಲಾಗಿದೆ ಹಾಗೂ ಎಲ್ಲರನ್ನೂ ಜೆಡ್ಡಾಗೆ ಕರೆತರಲಾಗಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ. ಸೈನ್ಯದ ಇತರ ಶಾಖೆಗಳ ಬೆಂಬಲದೊಂದಿಗೆ ಸೌದಿ ಅರೇಬಿಯಾದ ನೌಕಾಪಡೆಗಳು ನಾಗರಿಕರನ್ನು ಸ್ಥಳಾಂತರಗೊಳಿಸುವ ಕಾರ್ಯವನ್ನು ಮಾಡಿದೆ. ಅದರಲ್ಲಿ 91 ಸೌದಿಯ ನಾಗರಿಕರು ಆಗಮಿಸಿದ್ದು, ಭಾರತ ಸೇರಿದಂತೆ 12 ದೇಶಗಳ ಸುಮಾರು 66 ಪ್ರಜೆಗಳನ್ನೂ ಸುರಕ್ಷಿತವಾಗಿ ಕರೆತರಲಾಗಿದೆ. ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಟುನೀಶಿಯಾ, ಪಾಕಿಸ್ತಾನ, ಬಲ್ಗೇರಿಯಾ, ಬಾಂಗ್ಲಾದೇಶ, ಫಿಲಿಪೈನ್, ಕೆನಡಾ ಹಾಗೂ ಬುರ್ಕಿನಾ…
ವಾಷಿಂಗ್ಟನ್: ವಿಮಾನ ಹಾರಾಟದ ವೇಳೆ ವಿಮಾನದ ಎಂಜಿನ್ ಗೆ ಪಕ್ಷಿ ತಾಗಿದ ಪರಿಣಾಮ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಮೆರಿಕನ್ ಏರ್‌ಲೈನ್ಸ್‌ನ ವಿಮಾನವೊಂದು ಟೇಕ್‌ಆಫ್ ಆದ ಕೆಲವೇ ಹೊತ್ತಿನಲ್ಲಿ ಅದರ ಎಂಜಿನ್‌ನಲ್ಲಿ ಬೆಂಕಿ ಗೋಚರಿಸಿಕೊಂಡಿದೆ. ಈ ಹಿನ್ನೆಲೆ ವಿಮಾನವನ್ನು ತಕ್ಷಣವೇ ಕೊಲಂಬಸ್‌ನ ಜಾನ್ ಗ್ಲೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ವರದಿಗಳ ಪ್ರಕಾರ ಬೋಯಿಂಗ್ 737 ಫ್ಲೈಟ್ 1958 ಕೊಲಂಬಸ್‌ನಿಂದ ಫೀನಿಕ್ಸ್‌ಗೆ ಹೊರಟಿತ್ತು. ವಿಮಾನ ಟೇಕ್‌ಆಫ್ ಆಗುತ್ತಿದ್ದಂತೆ ಹಕ್ಕಿ ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಹೊಗೆ ಆವರಿಸುತ್ತಿದ್ದಂತೆಯೇ ಎಚ್ಚೆತ್ತ ಪೈಲಟ್‌ಗಳು ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.