Author: Prajatv Kannada

ಕೆಲವರಿಗೆ ಊಟವಾದ ತಕ್ಷಣವೇ ಏನಾದರೂ ತಿನ್ನಬೇಕು ಎನ್ನುವಷ್ಟು ಹಸಿವಾಗುತ್ತಾ ಇರುತ್ತದೆ. ಅವರು ಮತ್ತೆ ಏನಾದರೂ ತಿನ್ನುವರು. ಇದರಿಂದಾಗಿ ದೇಹದ ತೂಕ ಅತಿಯಾಗಿ ಏರಿಕೆ ಆಗುವುದು ಮತ್ತು ಇನ್ನಿಲ್ಲದೆ ಸಮಸ್ಯೆಗಳು ಬರುವುದು. ಇದು ಕೂಡ ಮಧುಮೇಹದ ಲಕ್ಷಣವಾಗಿರಬಹುದು ಮತ್ತು ಈ ಪರಿಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ಫೇಜಿಯಾ ಎಂದು ಕರೆಯುವರು. ಹೈಪರ್ಫೇಜಿಯಾ ಎನ್ನುವುದು ತುಂಬಾ ಪ್ರಬಲ ಹಾಗೂ ನಿರಂತರ ಹಸಿವಾಗುವಂತಹ ಪ್ರಕ್ರಿಯೆಯಾಗಿದ್ದು, ಇದನ್ನು ಆಹಾರ ಸೇವನೆಯಿಂದ ತಣಿಸಲು ಸಾಧ್ಯವಾಗದು. ಮಧುಮೇಹದಿಂದ ಉಂಟಾಗುವಂತಹ ಹೈಪರ್ಫೇಜಿಯಾ ಇನ್ಸುಲಿನ್ ಉತ್ಪತ್ತಿ ಮತ್ತು ಕಾರ್ಯದ ಸಮಸ್ಯೆಯಿಂದಾಗಿ ಬರುವುದು. ಇದು ಟೈಪ್ 1 ಹಾಗೂ ಟೈಪ್2 ಮಧುಮೇಹದಿಂದ ಬರುವುದು. ಸಕ್ಕರೆಯುಕ್ತ ಮತ್ತು ಅಧಿಕ ಕಾರ್ಬೋಹೈಡ್ರೇಟ್ಸ್ ಇರುವ ಆಹಾರದ ಬಯಕೆ ಆಗುವುದು ಇದರಲ್ಲಿ ಸಾಮಾನ್ಯ. ಇದರಿಂದಾಗಿ ಅತಿಯಾಗಿ ತಿನ್ನುವ ಸಮಸ್ಯೆ ಕಾಡುತ್ತದೆ. ಹೈಪರ್ಗ್ಲೈಸೀಮಿಯಾ ಮತ್ತು ಹೈಪರ್ಫೇಜಿಯಾ ನಡುವೆ ನೇರ ಸಂಬಂಧವಿದೆ. ರಕ್ತದಲ್ಲಿನ ಗ್ಲುಕೋಸ್ ನ್ನು ಅಂಗಾಂಶಗಳಿಗೆ ಸಾಗಿಸಿ, ಶಕ್ತಿಯಾಗಿ ಪರಿವರ್ತಿಸುವಂತಹ ಕೆಲಸವನ್ನು ಹಾರ್ಮೋನ್ ಆಗಿರುವಂತಹ ಇನ್ಸುಲಿನ್ ಮಾಡುತ್ತದೆ. ಮಧುಮೇಹದಿಂದಾಗಿ ದೇಹವು ಇನ್ಸುಲಿನ್ ನ್ನು…

Read More

ನವದೆಹಲಿ: ಮನಿ ಲಾಂಡರಿಂಗ್ ಅಥವಾ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿಯೂ ಸಹ ಜಾಮೀನು ಒಂದು ನಿಯಮ ಮತ್ತು ಜೈಲು ಒಂದು ವಿನಾಯಿತಿ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಗಣಿಗಾರಿಕೆ ಸಂಬಂಧಿತ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸಹಾಯಕನಿಗೆ ಜಾಮೀನು ನೀಡುವ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿರುವ ಪ್ರಕರಣಗಳಲ್ಲಿಯೂ ಸಹ “ಜಾಮೀನು ಒಂದು ನಿಯಮವಾಗಿದೆ ಮತ್ತು ಜೈಲು ಒಂದು ಅಪವಾದವಾಗಿದೆ” ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠ ತಿಳಿಸಿದೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಒಳಗೊಂಡಿರುವ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ತೀರ್ಪನ್ನು ಆ.9ರಂದು ಉಲ್ಲೇಖಿಸಿದ ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ವ್ಯಕ್ತಿಯ ಸ್ವಾತಂತ್ರ‍್ಯ ಯಾವಾಗಲೂ ನಿಯಮವಾಗಿದೆ ಮತ್ತು ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದಿಂದ ಅದನ್ನು ಕಳೆದುಕೊಳ್ಳುವುದು ಅಪವಾದವಾಗಿದೆ. ಯಾವುದೇ ವ್ಯಕ್ತಿಯ ಸ್ವಾತಂತ್ರ‍್ಯವನ್ನು…

Read More

ನವದೆಹಲಿ: ನಟಿ-ರಾಜಕಾರಣಿ ಕಂಗನಾ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಅವರ ಹೇಳಿಕೆ ವಿರೋಧಿಸಲು ಮುಂದಾಗಿ ಪಂಜಾಬ್ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ವಿವಾದಕ್ಕೆ ಸಿಲುಕಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತ್ಯಾಚಾರ ಹೇಗೆ ನಡೆಯುತ್ತವೆ ಎಂದು ಕಂಗನಾರನ್ನು ಕೇಳಿ. ಆಕೆಗೆ ಅದರ ಅನುಭವವಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್, ರೈತರ ಚಳುವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರೈತ ಹೋರಾಟ ನಿಗ್ರಹಿಸುವ ಸಂಬಂಧ ಕಠಿಣ ನಿಲುವುಗಳನ್ನು ಕೈಗೊಂಡಿತು. ನಾಯಕರು ಬಲವಾಗಿರದಿದ್ದರೆ ಅಥವಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ದೇಶದಲ್ಲೂ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಕಂಗನಾ ಅವರಿಗೆ ಬಿಜೆಪಿ ಎಚ್ಚರಿಕೆ ನೀಡಿತ್ತು. ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿದ್ದ ಮಹಿಳೆ ಎಂದು ಕಂಗನಾ ಬಿಂಬಿಸಿದ್ದು ವಿವಾದವಾಗಿತ್ತು. ಅಷ್ಟೇ ಅಲ್ಲ, ಮಹಿಳೆಯರು ಕೇವಲ 100 ರೂ. ಕೂಲಿಗೆ…

Read More

ಸೂರ್ಯೋದಯ: 06:05, ಸೂರ್ಯಾಸ್ತ : 06:27 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಶ್ರಾವಣ ಪಕ್ಷ :ಶುಕ್ಲ ತಿಥಿ:ದ್ವಾದಶಿ ನಕ್ಷತ್ರ :ಪುನರ್ವಸು ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ಮ.3:24 ನಿಂದ ಸಂ.5:05 ತನಕ ಅಭಿಜಿತ್ ಮುಹುರ್ತ: ಬೆ.11:51 ನಿಂದ ಮ.12:41 ತನಕ ಮೇಷ ರಾಶಿ; ಅಧಿಕ ಹೈನು ಉತ್ಪಾದನೆಯಿಂದ ಧನ ಲಾಭ, ಮೀನು ಉದ್ಯಮದಾರರಿಗೆ ಖುಷಿ ಸಂದೇಶ,ಮಹಿಳಾ ಉದ್ಯೋಗಿಗಳಿಗೆ ಕೆಲಸದಲ್ಲಿ ಹೆಚ್ಚಿನ ಒತ್ತಡ ಹಾಗೂ ಮಾನಸಿಕ ಕಿರುಕುಳ ಸಂಭವ. ಶಿಕ್ಷಕರಉದ್ಯೋಗ ವಿಚಾರದಲ್ಲಿ ನಾನಾ ಕಿರಿಕಿರಿ ಏರ್ಪಡಬಹುದು. ವಿದೇಶದ ಉದ್ಯೋಗಿಗಳಿಗೆ ಯಾವುದೇ ಕಾರಣಕ್ಕೆ ಈ ಅವಧಿಯಲ್ಲಿ ಕೆಲಸ ಬದಲಿಸುವ ಆಲೋಚನೆ ಬೇಡ. ಹೊಸದಾಗಿ ಹೋಗುವ ವಿದೇಶ ಪ್ರಯಾಣಕ್ಕೆ ಅವಕಾಶ ಮೊದಲಾದ ಶುಭ ಫಲಗಳನ್ನು ಕಾಣಬಹುದು. ಅತ್ತೆ ಮತ್ತು ಸೊಸೆ ತಾಳ್ಮೆ- ಸಂಯಮ…

Read More

ದಾವಣಗೆರೆ:- ಚನ್ನಗಿರಿ ತಾಲೂಕಿನ ಜೋಳದಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಜರುಗಿದೆ. 14 ಜನರನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಮತ್ತು 6 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಐವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ರಾತ್ರಿಯಿಂದಲೇ ಕೆಲವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಮೊದಲು ನಾಲ್ಕು ಜನರರಲ್ಲಿ ವಾಂತಿ-ಬೇಧಿ ಕಂಡಿತು. ಬಳಿಕ ಗ್ರಾಮದ 25 ಜನರು ವಾತಿ-ಭೇದಿ ಬಳಲಿದರು. ಜೋಳದಾಳ ಗ್ರಾಮಕ್ಕೆ ಚನ್ನಗಿರಿ ಇಒ ಬಿ.ಕೆ.ಉತ್ತಮ್, ಕುಡಿಯುವ ನೀರು ವಿಭಾಗದ ಎಇಇ ಲೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೋಳದಾಳ ಗ್ರಾಮದಲ್ಲಿ ವೈದ್ಯರ ತಂಡ ಠಿಕಾಣಿ ಹೂಡಿದೆ. ಕಾಯಿಸಿ ಆರಿಸಿದ ನೀರು ಕುಡಿಯುವಂತೆ ಗ್ರಾಮಸ್ಥರಿಗೆ ವೈದ್ಯರು ಸೂಚಿಸಿದ್ದಾರೆ.

Read More

‘ಕನ್ನಡತಿ’ ಧಾರಾವಾಹಿ ಮೂಲಕ ಜನರ ಮನಸ್ಸು ಗೆದ್ದಿದ್ದ ನಟಿ ರಂಜನಿ ರಾಘವನ್ ಇದೀಗ ತಮ್ಮ ರಿಯಲ್ ಲೈಫ್ ಸಂಗಾತಿಯನ್ನು ಪರಿಚಯಿಸಿದ್ದಾರೆ. ಇಷ್ಟುದಿನಗಳ ಕಾಲ ಪ್ರೀತಿ ಹಾಗೂ ಮದುವೆ ವಿಚಾರದಲ್ಲಿ ಮೌನವಾಗಿದ್ದ ನಟಿ ಇದೀಗ ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು “ಇವನೇ ನನ್ನ ಹುಡುಗ” ಎಂದು ಹೇಳಿ ಶಾಕ್ ನೀಡಿದ್ದಾರೆ. ರಂಜನಿ ರಾಘವನ್ ಅವರ ಹುಡುಗನ ಹೆಸರು ಸಾಗರ್ ಭಾರದ್ವಾಜ್. ಇವರು ಸೈಕ್ಲಿಸ್ಟ್, ಬೈಕರ್, ರನ್ನರ್ ಕೂಡ ಹೌದು. ಇಲ್ಲಿಯವರೆಗೆ ಅವರು 20000 ಕಿಮೀ ಸೈಕಲ್ ರೈಡ್ ಮಾಡಿದ್ದು, 2000 ಕಿಮೀ ರನ್ನಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ 100000ಕಿಮೀಗಳಿಗೂ ಜಾಸ್ತಿ ಬೈಕ್ ರೈಡ್ ಮಾಡಿದ್ದಾರೆ. ಇನ್ನು ಸಾಗರ್ ಭಾರದ್ವಾಜ್ ಅವರು ಎಲ್ಲಿಯವರು? ವೃತ್ತಿ ಏನು? ರಂಜನಿ ರಾಘವನ್ ಹಾಗೂ ಸಾಗರ್ ಭಾರದ್ವಾಜ್ ಅವರ ಪರಿಚಯ ಎಲ್ಲಿ ಆಯ್ತು? ಎಂಬ ಮಾಹಿತಿಯನ್ನು ರಂಜನಿ ಬಿಟ್ಟುಕೊಟ್ಟಿಲ್ಲ. ರಂಜನಿ ರಾಘವನ್ ಅವರು ಕೆಲ ಧಾರಾವಾಹಿಗಳಲ್ಲಿ ನಟಿಸುವಾಗ ಸಹನಟರ ಜೊತೆ ಲವ್‌ನಲ್ಲಿದ್ದಾರೆ ಎಂದು ಗಾಸಿಪ್ ಹರಡಿತ್ತು. ಇವೆಲ್ಲ…

Read More

ಗದಗ:- ಅಪರಿಚಿತ ವಾಹನ ಹರಿದು ಬೆಳ್ಳಂ ಬೆಳಿಗ್ಗೆ ಚಹಾ ಕುಡಿಯಲು ಹೋಗಿದ್ದ ವೃಧ್ಧ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಜರುಗಿದೆ. ನರೇಗಲ್ ಪಟ್ಟಣದ ನಿವಾಸಿ ಮಲ್ಲಯ್ಯ ಬಕ್ಕಯ್ಯನಮಠ (65) ಮೃತ ದುರ್ದೈವಿ. ಬೆಳಗಿನ ಜಾವ 5.30 ರ ಸುಮಾರಿಗೆ ಮನೆಯಿಂದ ಚಹಾ ಕುಡಿಯಲೆಂದು ಹೊರಗೆ ಹೋಗಿದ್ದಾಗ ಅಪರಿಚಿತ ವಾಹನ ವೇಗವಾಗಿ ಬಂದು ವೃಧ್ಧನ ಮೇಲೆ ಏಕಾಏಕಿ ಹರಿದಿದೆ. ಪರಿಣಾಮ ವೃಧ್ಧನ ದೇಹ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ನರೇಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ವಾಹನ ಪತ್ತೆಗೆ ಮುಂದಾಗಿದ್ದಾರೆ. ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಬೆಂಗಳೂರು:- ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ನೀಡಿರುವ ವಿಚಾರವಾಗಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ನೀಡಿರುವ ವಿಚಾರ ರಾಜ್ಯಪಾಲರ ಅಂಗಳದಿಂದ ಅದಕ್ಕೂ ಸೂಚನೆ ಬಂದರೆ ಮತ್ತೆ ಹೋರಾಟ ಮಾಡಲಾಗುವುದು. ಏನು ಮಾಡುವುದಕ್ಕೆ ಆಗುವುದಿಲ್ಲ.ಹೋರಾಟ ನಡೆಯುತ್ತದೆ. ಏನು ಬರುತ್ತದೆ, ಏನು ಕೊಟ್ಟಿದ್ದಾರೆ ನೋಡೋಣ. ಲೀಗಲ್ ಬ್ಯಾಟಲ್ ಅನಿವಾರ್ಯವಾದರೆ ಮಾಡಲೇಬೇಕಾಗುತ್ತದೆ ಎಂದು ತಿಳಿಸಿದ್ದಾರೆ ಹಿಂದಿನ ಇತಿಹಾಸವನ್ನು ನೋಡಬೇಕಾಗುತ್ತದೆ. ಹಿಂದಿನ ಸರ್ಕಾರಗಳು ಬೆಂಗಳೂರು ಸುತ್ತಮುತ್ತ ಅವರ ಸಂಸ್ಥೆಗಳಿಗೆ ಜಮೀನು ನೀಡಿದ್ದಾರೆ. ರಾಜ್ಯಾದ್ಯಂತ ಜಮೀನು ನೀಡಿದ್ದಾರೆ. ಚರ್ಚೆ ಆಗೋದಾದ್ರೆ, ತನಿಖೆ ಆಗೋದಾದ್ರೆ ಎಲ್ಲರದ್ದೂ ಆಗಲಿ. ಕೇವಲ ಖರ್ಗೆಯವರ ವಿಚಾರ ಮಾತ್ರ ಯಾಕೆ ಚರ್ಚೆ? ಎಲ್ಲರದೂ ಚರ್ಚೆ ಆಗಲಿ. ಕಳೆದ ಹತ್ತು ವರ್ಷಗಳಲ್ಲಿ ಯಾರ‍್ಯಾರಿಗೆ ಸಿಎ ಸೈಟುಗಳನ್ನು ಕೊಟ್ಟಿದ್ದಾರೆ? ಎಲ್ಲವೂ ಚರ್ಚೆಯಾಗಲಿ. ಒಬ್ಬರಿಗೆ ಮಾತ್ರ ಮಹತ್ವ ಕೊಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಿ ಜಮೀನನ್ನ ಸಾವಿರಾರು ಎಕರೆ ಕೊಟ್ಟಿದ್ದಾರೆ ಇತಿಹಾಸದಲ್ಲಿ. ಹಿಂದಿನದ್ದು ಬಿಟ್ಟು ಬಿಡುವುದು, ಈಗಿನದ್ದು ಮಾತ್ರ ಚರ್ಚೆ ಮಾಡುವುದು ಸರಿಯಾಗುವುದಿಲ್ಲ. ಚರ್ಚೆ ಆಗೋದಾದರೆ…

Read More

ಬೆಂಗಳೂರು:- ವಾರೆಂಟ್ ಜಾರಿಯಾದ್ರೂ ಕೋರ್ಟ್ ಗೆ ಹಾಜರಾಗದ ಹಿನ್ನೆಲೆ ವಕೀಲ ಕೆ.ಎನ್. ಜಗದೀಶ್ ಕುಮಾರ್ ರನ್ನು ಅರೆಸ್ಟ್ ಮಾಡಲಾಗಿದೆ. ಕೊಡಿಗೇಹಳ್ಳಿ ಪೊಲೀಸರಿಂದ ಗೋವಾದಲ್ಲಿ ಜಗದೀಶ್ ಬಂಧಿಸಲಾಗಿದೆ. ಗೋವಾದಲ್ಲಿ ಬಂಧಿಸಿ ಬೆಂಗಳೂರಿಗೆ ಪೊಲೀಸರು ಕರೆತಂದಿದ್ದಾರೆ. 2022 ರಲ್ಲಿ ಇವರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಇದೀಗ ಪೊಲೀಸರು ವಕೀಲ ಜಗದೀಶ್ ಕುಮಾರ್ ನನ್ನು ಅರೆಸ್ಟ್ ಮಾಡಿದ್ದಾರೆ.

Read More

ಬೆಂಗಳೂರು:- ಕರ್ನಾಟಕದಲ್ಲಿ ಎಚ್‌1ಎನ್‌1 ಸೋಂಕು 7 ಪಟ್ಟು ಹೆಚ್ಚಾಗಿದ್ಗು, ಬೆಂಗಳೂರಿನಲ್ಲಿ ಹೆಚ್ಚು ಸೋಂಕು ಪತ್ತೆಯಾಗಿದೆ. ಈ ವರ್ಷ ಜುಲೈ 31 ರವರೆಗೆ ರಾಜ್ಯಾದ್ಯಂತ 855 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಜುಲೈ ವೇಳೆಗೆ ರಾಜ್ಯಾದ್ಯಂತ 118 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಎಚ್‌1ಎನ್‌1 ಸೋಂಕಿನಿಂದಾಗಿ ಮೈಸೂರಿನಲ್ಲಿ 15 ವರ್ಷದ ಹುಡುಗ ಮತ್ತು ದೊಡ್ಡಬಳ್ಳಾಪುರದಲ್ಲಿ 48 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ವೈರಸ್‌ ಪರೀಕ್ಷೆ ಮಾಡಿಸಿ ಪಾಟಿಸಿವ್ ಬಂದ ಮೂವರು ಇತರೆ ರೋಗಗಳು ಮತ್ತು ವಯಸ್ಸಿನ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯು ಎಚ್1ಎನ್1 ಬಗ್ಗೆ ಸಕ್ರಿಯ ಕಣ್ಗಾವಲು ಇಟ್ಟಿಲ್ಲ. ಆದಾಗ್ಯೂ ಹೆಚ್ಚಿನ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಮತ್ತು ಹೆಚ್ಚಿದ ಟೆಸ್ಟಿಂಗ್ ಪ್ರಕರಣಗಳ ಟ್ರ್ಯಾಕಿಂಗ್ ಮತ್ತು ನಿಯಂತ್ರಣಕ್ಕೆ ಸಹಾಯ ಮಾಡಿದೆ ಎಂದು ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂನ ಯೋಜನಾ ನಿರ್ದೇಶಕ ಡಾ.ಅನ್ಸಾರ್ ಅಹಮದ್ ತಿಳಿಸಿದ್ದಾರೆ. ನಾವು ಪ್ರಕರಣಗಳ ಬಗ್ಗೆ…

Read More