Author: Prajatv Kannada

ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರ,ರಾಮಚಂದ್ರಪುರ ಮಾರ್ಕಟ್ ಸರ್ಕಲ್ ಬಳಿ ಮಾಜಿ ಮಹಾನಗರ ಪಾಲಿಕೆ ಚಕ್ರವರ್ತಿ ರವರ ಹುಟ್ಟುಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಾಟ್ ಬಾಕ್ಸ್ ಮತ್ತು   ಆಟೋ ಚಾಲಕರಿಗೆ ಸಮವಸ್ತ್ರ ವಿತರಣಾ ಸಮಾರಂಭ. ಶಾಸಕರಾದ ದಿನೇಶ್ ಗುಂಡೂರಾವ್ ರವರು, ಬೆಂಗಳೂರುನಗರ ಕೇಂದ್ರ ಜಿಲ್ಲಾ ಕಾಂಗ್ರೆಸ್ ಎಸ್.ಸಿ.ವಿಭಾಗದ ಅಧ್ಯಕ್ಷರಾದ ಎ.ಪಿ.ಎಸ್.ರಾಜ್ ಕಾರ್ತಿಕ್ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸರವಣ, ಮಾಜಿ ಪಾಲಿಕೆ ಸದಸ್ಯೆ ಕ್ಲೀನ್ ಎಲಿಜಬತ್ ರವರು ಫಲಾನುಭವಿಗಳಿಗೆ  ವಿತರಿಸಿದರು. ದಿನೇಶ್ ಗುಂಡೂರಾವ್ ರವರು ಮಾತನಾಡಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಧರ್ಮ ಮತ್ತು ವರ್ಗದ ಜನರು ವಾಸವಿದ್ದಾರೆ. ಕಾಂಗ್ರೆಸ್ ಪಕ್ಷ ಮೂರು ಯೋಜನೆಗಳನ್ನು ಜನರ ಪರ ಘೋಷಣೆ ಮಾಡಲಾಗಿದೆ. ಪೆಟ್ರೋಲ್, ಡೀಸಲ್, ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಜನರ ಜೀವನ ಸಾಗಿಸುವುದು ಕಷ್ಟವಾಗಿದೆ.ಜನರ ಜೀವನ ಸುಧಾರಣೆ, ಅವರ ಜೀವನ ನಿರ್ವಹಣೆಗಾಗಿ ಕಾಂಗ್ರೆಸ್ ಕಟಿಬದ್ದವಾಗಿ ದುಡಿಯುತ್ತಿದೆ. ಈ ನಿಟ್ಟಿನಲ್ಲಿ ಮನೆಯ ಯಾಜಮಾನಿಗೆ ಅಕೌಂಟ್ 2000ಖಾತೆಗೆ ಜಮಾ ಮತ್ತು 200ಯೂನಿಟ್ ವಿದ್ಯುತ್…

Read More

ನವದೆಹಲಿ: ಗರ್ಭದಲ್ಲಿರುವ ಮಗುವಿನ ದ್ರಾಕ್ಷಿ ಗಾತ್ರದ ಹೃದಯಕ್ಕೆ ದೆಹಲಿಯ (Delhi) ಏಮ್ಸ್ (AIIMS) ವೈದ್ಯರು (Doctors) ಕವಾಟ ಹಿಗ್ಗುವಿಕೆಯ ಶಸ್ತ್ರಚಿಕಿತ್ಸೆ (Heart surgery) ನೀಡಿ ಯಶಸ್ವಿಯಾಗಿದ್ದಾರೆ. ಮೂರು ಬಾರಿ ಗರ್ಭಪಾತವಾಗಿದ್ದ 28 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಗುವಿನ ಹೃದಯದಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ವೈದ್ಯರು ಚಿಕಿತ್ಸೆ ಮೂಲಕ ಮಗುವಿನ ಆರೋಗ್ಯ ಸುಧಾರಣೆ ಸಾಧ್ಯ ಎಂದು ತಿಳಿಸಿದ್ದಾರೆ. ನಂತರ ದಂಪತಿ ಚಿಕಿತ್ಸೆಗೆ ಒಪ್ಪಿದ್ದರು. ಶಸ್ತ್ರಚಿಕಿತ್ಸೆಯ ನಂತರ ತಾಯಿ ಹಾಗೂ ಗರ್ಭದಲ್ಲಿರುವ ಮಗು ಇಬ್ಬರೂ ಕ್ಷೇಮವಾಗಿದ್ದಾರೆ. ಇಬ್ಬರ ಆರೋಗ್ಯದ ಮೇಲೂ ವೈದ್ಯರ ತಂಡ ನಿಗವಹಿಸಿದೆ. ತಾಯಿಯ ಗರ್ಭದಲ್ಲಿರುವಾಗಲೇ (Womb) ಮಗುವಿನ ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚಬಹುದು. ಗರ್ಭಾವಸ್ಥೆಯಲ್ಲಿ ಕಾಯಿಲೆಯ ತೀವ್ರತೆ ಕಡಿಮೆ ಇರುವುದರಿಂದ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆರೋಗ್ಯವಂತ ಮಗು ಪಡೆಯಲು ಸಾಧ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಯನ್ನು ಅಲ್ಟ್ರಾ ಸೌಂಡ್ (Ultrasound) ಮೂಲಕವೇ ನಿರ್ವಹಿಸಬೇಕು. ನಿಗದಿತ ಸಮಯದಲ್ಲಿ ಜಾಗರೂಕತೆಯಿಂದ ಚಿಕಿತ್ಸೆ ಮಾಡಿ ಮುಗಿಸಬೇಕು. ಇಲ್ಲವಾದಲ್ಲಿ ಮಗುವಿನ ಜೀವಕ್ಕೆ ಅಪಾಯವಾಗುವ…

Read More

ಮುಂಬಯಿಯ ಲಾಲ್‌ಬಾಗ್ ಪ್ರದೇಶದಲ್ಲಿ 53 ವರ್ಷದ ಮಹಿಳೆಯ ಕೊಳೆತ ಶವ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಪತ್ತೆಯಾಗಿದೆ. ವೀಣಾ ಪ್ರಕಾಶ್ ಜೈನ್ ಎಂದು ಮೃತ ವ್ಯಕ್ತಿಯನ್ನು ಗುರುತಿಸಲಾಗಿದೆ. ತನ್ನ ಸಹೋದರಿ ಮಂಗಳವಾದರಿಂದ ಕಾಣೆಯಾಗಿದ್ದಾರೆ ಎಂದು ಆಕೆಯ ಸಹೋದರ ದೂರು ನೀಡಿದ್ದರು. ಆದರೆ ವೀಣಾ ಕಳೆದ ಎರಡು ತಿಂಗಳಿನಿಂದ ಮಿಸ್ಸಿಂಗ್ ಆಗಿದ್ದರು ಎಂದು ಆಕೆಯ ನೆರೆಹೊರೆಯ ಮಂದಿ ತಿಳಿಸಿದ್ದಾರೆ. ಕಾಲಾ ಚೌಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಲಾಲ್‌ಬಾಗ್ ಪ್ರದೇಶದ ಪೆರು ಕಾಂಪೌಂಡ್‌ನಲ್ಲಿ ಪ್ಲಾಸ್ಟಿಕ್ ಬ್ಯಾಗ್‌ವೊಂದರಲ್ಲಿ ಸುತ್ತಿಡಲಾಗಿದ್ದ ವೀಣಾರ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೂಡಲೇ ವೀಣಾರ 22 ವರ್ಷ ವಯಸ್ಸಿನ ಮಗಳನ್ನು ಬಂಧಿಸಿರುವ ಪೊಲೀಸರು ಆಕೆಯನ್ನು ಪ್ರಶ್ನಿಸಿದ್ದಾರೆ. ವೀಣಾಳ ಸಹೋದರ ಹಾಗೂ ಆತನ ಪುತ್ರನನ್ನು ಸಹ ವಶಕ್ಕೆ ಪಡೆದಿರುವ ಪೊಲೀಸರು ಅವರನ್ನೂ ಪ್ರಶ್ನಿಸಿದ್ದಾರೆ.ಮೃತರ ಕಾಲುಗಳನ್ನು ಕೊಚ್ಚಿಹಾಕಲಾಗಿದ್ದು, ಆಕೆಯ ಸಾವಿಗೆ ಕಾರಣವೇನೆಂದು ಇನ್ನಷ್ಟೇ ತಿಳಿಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Read More

ನವದೆಹಲಿ: ದೇಶದಲ್ಲಿ H3N2 ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಅನೇಕರಿಗೆ ಉಸಿರಾಟದ ತೊಂದರೆಗೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ಈ ಸೋಂಕಿನ ಪಸರುವಿಕೆ ಇನ್ನಷ್ಟು ಜೋರಾಗಿದೆ. ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಪುದುಚೆರಿಯಲ್ಲಿ ಮಾರ್ಚ್ 16ರಿಂದ ಮಾರ್ಚ್ 26ರವರೆಗೂ ಹತ್ತು ದಿನಗಳ ಮಟ್ಟಿಗೆ 1ನೇ ತರಗತಿಯಿಂದ 8ನೇ ತರಗತಿವರೆಗೂ ರಜೆ ಘೊಷಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಅನುಸಾರ ಭಾರತದಲ್ಲಿ ಜನವರಿ 2ರಿಂದ ಮಾರ್ಚ್ 5ರವರೆಗೆ H3N2ನ 451 ಪ್ರಕರಣಗಳು ದಾಖಲಾಗಿದೆ. ಗುಜರಾತ್‌ನಲ್ಲಿ ಸೋಮವಾರ H3N2 ವೈರಸ್‌ನ ಮೊದಲ ಸಾವು ವರದಿಯಾಗಿದೆ. ಕರ್ನಾಟಕದಲ್ಲಿ ಹಾಸನ ಜಿಲ್ಲೆಯಲ್ಲಿ 82 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಇದೇ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶಾದ್ಯಂತ 7 ಮಂದಿ ಈ ವೈರಸ್‌ಗೆ ಬಲಿಯಾಗಿದ್ದಾರೆ. H3N2ನ ರೋಗಲಕ್ಷಣಗಳು ದೇಹದ ವಿವಿಧ ಭಾಗಗಳಲ್ಲಿ ನೋವು, ಜ್ವರ, ಚಳಿ, ಸುಸ್ತು, ಡಯಾರಿಯಾ, ವಾಂತಿ, ಕೆಮ್ಮು, ಗಂಟಲು ಕೆರೆತ, ಮೂಗು ಸುರಿತ ಹಾಗೂ ತಲೆನೋವು. ಈ ಸೋಂಕು ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದ, ಸೀನಿದ,…

Read More

ನವದೆಹಲಿ: ದೇಶದಾದ್ಯಂತ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 700ಕ್ಕೂ ಅಧಿಕ ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 4,623ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಕಳೆದ ವರ್ಷ ನವೆಂಬರ್ 12ರಂದು 734 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಮುಂಜಾನೆ 8 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಇಂದು 754 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಒಬ್ಬರು ಸಾವಿಗೀಡಾಗಿರುವುದು ಸೇರಿದಂತೆ ಈವರೆಗೆ ಒಟ್ಟು 5,30,790 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಈಮೂಲಕ ಈವರೆಗೆ 4,46,92,710 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ 0.01ರಷ್ಟು ಸಕ್ರಿಯ ಪ್ರಕರಣಗಳಿದ್ದು, ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ 98.80ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ದೇಶದಾದ್ಯಂತ ಈವರೆಗೆ 4,41,57,297 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೈನಂದಿನ ಮರಣ ಪ್ರಮಾಣ ಶೇ 1.19ರಷ್ಟಿದೆ. ಸಚಿವಾಲಯದ ವೆಬ್‌ಸೈಟಿನಲ್ಲಿರುವ ಮಾಹಿತಿ ಪ್ರಕಾರ,…

Read More

ಹಾಸನ: ಜೆಡಿಎಸ್‌ನಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರ ಭಾರೀ ಸುದ್ದಿ ಮಾಡುತ್ತಿದೆ. ಒಂದು ಕಡೆ ಎಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದರೆ, ಇನ್ನೊಂದು ಕಡೆ ಮಾಜಿ ಶಾಸಕ ಪ್ರಕಾಶ್‌ ಅವರ ಪುತ್ರ ಸ್ವರೂಪ್‌ ಪ್ರಕಾಶ್‌ ಕೂಡ ಟಿಕೆಟ್‌ ಬೇಕು ಎಂದು ಕುಳಿತಿದ್ದಾರೆ. ಇವರಿಬ್ಬರ ಜಗಳವನ್ನು ಬಗೆಹರಿಸಲು ಮಾಜಿ ಪ್ರಧಾನಿ ದೇವೇಗೌಡರು ಮಾಸ್ಟರ್‌ ಪ್ಲಾನ್‌ ರೆಡಿ ಮಾಡಿದ್ದು, ಇಬ್ಬರಿಗೂ ಟಿಕೆಟ್‌ ನೀಡದೇ ಹೊಸಬರನ್ನು ಹಾಸನದಿಂದ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆ ಇದೆ. ಹಾಸನ ಟಿಕೆಟ್ ವಿಚಾರದಲ್ಲಿ ಜೆಡಿಎಸ್ ಹೊಸ ಸೂತ್ರ ಅನುಸರಿಸಲು ಮುಂದಾಗಿದ್ದು, ಇಬ್ಬರ ಜಗಳ ಮೂರನೇಯವರಿಗೆ ಲಾಭ ಆಗುವ ಸಾಧ್ಯತೆ ಇದೆ. ಭವಾನಿ ರೇವಣ್ಣಗೆ ಟಿಕೆಟ್‌ ನೀಡಿದರೆ ಸ್ವರೂಪ್‌ ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ಸ್ವರೂಪ್‌ಗೆ ಟಿಕೆಟ್‌ ನೀಡಿದರೆ ಭವಾನಿ ರೇವಣ್ಣ ಅವರು ಅಸಮಾಧಾನಗೊಳ್ಳಲಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇಬ್ಬರಿಗೂ ಟಿಕೆಟ್ ನೀಡದೇ ಬೇರೆಯವರಿಗೆ ಟಿಕೆಟ್‌ ನೀಡಲು ಚಿಂತನೆ…

Read More

ಹುಬ್ಬಳ್ಳಿ: ಗಡಿ ವಿಚಾರದಲ್ಲಿ ಸರ್ಕಾರ ಸತ್ತು ಹೋಗಿದೆಯಾ? ನಮ್ಮ ರಾಜ್ಯದಲ್ಲಿರೋ ಹಳ್ಳಿಗಳಿಗೆ ಬಂದು ಹೆಲ್ತ್ ಸ್ಕೀಂ ಮಾಡ್ತಾರೆ ಅಂದರೆ ಏನರ್ಥ. ಇದು ನಮ್ಮ ಸಾರ್ವಭೌಮತೆಗೆ ಸವಾಲು. ನಮ್ಮನ್ನು ಪದೇ ಪದೇ ಕೆಣಕಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶರಾಜ್ಯದ ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಒಂದಿಂಚೂ ನೆಲವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು. ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. 1966ರಲ್ಲಿ ವರದಿ ಸಲ್ಲಿಕೆಯಾಗಿದೆ. ಅಂದಿನಿಂದ ನಾವೂ ಒಪ್ಪಿಕೊಂಡಿದ್ದೇವೆ. ಅದ್ರೆ ಅವರು ತಕರಾರು ಮಾಡುತ್ತಲೆ ಇದಾರೆ. ಮಹಾಜನ್ ಮಹಾರಾಷ್ಟ್ರದವರೇ ಆಗಿದ್ದಾರೆ ಎಂದರು. ಈಗ 865 ಹಳ್ಳಿಗಳನ್ನು ಮಹಾರಾಷ್ಟ್ರ ಕ್ಕೆ ಸೇರಿಸಬೇಕೆನ್ನುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು‌ ಸುಮ್ಮನಿವೆ. ಸರ್ಕಾರಗಳು ಸತ್ತು ಹೋಗಿವೆಯಾ? ನಮ್ಮ ರಾಜ್ಯದಲ್ಲಿರೋ ಹಳ್ಳಿಗಳಿಗೆ ಬಂದು ಹೆಲ್ತ್ ಸ್ಕೀಂ ಮಾಡ್ತಾರೆ ಅಂದರೆ ಏನರ್ಥ. ಇದು ನಮ್ಮ ಸಾರ್ವಭೌಮತೆಗೆ ಸವಾಲು. ರಾಜ್ಯದ ಒಂದಿಂಚೂ ನೆಲವನ್ನು ಯಾವುದೇ ಕಾರಣಕ್ಕೂ…

Read More

ಬೆಂಗಳೂರು/ ಹುಬ್ಬಳ್ಳಿ : ದೇವರಗುಡ್ಡ ಮತ್ತು ಹಾವೇರಿ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಹಾವೇರಿ ನಿಲ್ದಾಣದಲ್ಲಿನ (ಅಂತಿಮ ಹಂತ) ಇಂಟರ್‌ಲಾಕ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಹಲವು ರೈಲುಗಳ ಸೇವೆಯು ರದ್ದಾಗಿದೆ. ಇನ್ನು ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಹಿನ್ನೆಲೆ ನೈರುತ್ಯ ರೈಲ್ವೆ ಇಲಾಖೆಯು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, ಅಗತ್ಯ ಬಲಾವಣೆಗಳನ್ನು ಮಾಡಿಕೊಂಡು ಸಂಚಾರಕ್ಕೆ ಸೂಚನೆ ನೀಡಿದೆ. ಯಾವ ರೈಲುಗಳು ರದ್ದಾಗಿವೆ. ಯಾವ ರೈಲು ಮಾರ್ಗ ಬದಲಾವಣೆಯಾಗಿದೆ. ಎಂಬ ಮಾಹಿತಿ ಈ ಕೆಳಗಿನಂತಿದೆ. ಯಾವ ಯಾವ ರೈಲುಗಳು ರದ್ದು? ರೈಲು ಸಂಖ್ಯೆ 17347/48 ಎಸ್.ಎಸ್.ಎಸ್ ಹುಬ್ಬಳ್ಳಿ – ಚಿತ್ರದುರ್ಗ- ಎಸ್.ಎಸ್.ಎಸ್ ಹುಬ್ಬಳ್ಳಿ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಚ್ 15 ರಿಂದ 20 ವರೆಗೆ ರದ್ದಾಗಿದೆ.. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಮಾರ್ಚ್ 17 ರಿಂದ 19ರ ವರೆಗೆ ರದ್ದಾಗಿದೆ.. ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ನಡುವೆ ಸಂಚರಿಸುವ…

Read More

ಕೋಲಾರ: ದೇಶ ಮತ್ತು ರಾಜ್ಯದ ಜನರ ಬದುಕನ್ನು ಹಸನಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳಡಿ ಲಕ್ಷಾಂತರ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಯೋಜನೆಗಳ ಸೌಲಭ್ಯಗಳು ಹಲವರ ಬದುಕನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತೋಟಗಾರಿಕ ಸಚಿವರಾದ ಮುನಿರತ್ನ ಅವರು ತಿಳಿಸಿದರು. ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಛೇರಿಯ ಸಮೀಪದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ್ರು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದ ಎಲ್ಲಾ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿರುವುದನ್ನು ಖಾತ್ರಿ ಪಡಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದೆ. ಸರ್ಕಾರದ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಫಲಾನುಭವಿಗಳೊಡನೆ ಸಮಾಲೋಚಿಸಿ ಜನ ಹಿತ ಚಿಂತನೆಗಳ ಜಾರಿಗೆ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕು ಎಂಬ ಆಶಯವನ್ನು ಹೊತ್ತುಕೊಂಡು ನಿಮ್ಮ ಮುಂದೆ ಬಂದಿದ್ದೇವೆ. ಇದು ನಮ್ಮ ಸಾಧನೆಯ ಪ್ರದರ್ಶನವಲ್ಲ ಬದಲಿಗೆ ನಾಡಿನ ಜನತೆಗೆ ನಮ್ಮ ನಿಜವಾದ ಕಳಕಳಿಯಿಂದ ರೂಪಿತವಾದ ಯೋಜನೆಗಳು ಜನರನ್ನು…

Read More

ಮಂಡ್ಯ: ಜೆಡಿಎಸ್‌ನಿಂದ (JDS) ಬಿಜೆಪಿಗೆ ಬಂದು ಗೆಲುವು ಪಡೆದು ಸಚಿವರಾಗಿರುವ ನಾರಾಯಣಗೌಡ (Narayana Gowda) ಮತ್ತೆ ಪಕ್ಷಾಂತರ ಮಾಡುತ್ತಾರೆ ಎಂದು ಅವರ ಆಪ್ತ ಮೂಲಗಳು ಖಚಿತವಾಗಿ ಹೇಳುತ್ತಿವೆ. ಮಾರ್ಚ್ 16ರಂದು ಕೆಆರ್‌ಪೇಟೆಯಲ್ಲಿ (K.R.Pet) ಜರುಗುವ ನಾರಾಯಣಗೌಡರ ಕನಸಿನ ಎರಡು ಸರ್ಕಾರಿ ಕಾರ್ಯಕ್ರಮವನ್ನು ಮುಗಿಸಿ ಕೈ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್‌ನಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಜೆಡಿಎಸ್‌ನಿಂದ ಬಿಜೆಪಿ (BJP) ಪಕ್ಷಾಂತರ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಕೆಡಿವಿದ ಶಾಸಕರ ಪೈಕಿ ಮಂಡ್ಯ (Mandya) ಜಿಲ್ಲೆಯ ಕೆಆರ್‌ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಸಹ ಒಬ್ಬರು. ಜೆಡಿಎಸ್‌ನಿಂದ ಬಿಜೆಪಿಗೆ ಹೋದ ಕಾರಣ ನಾರಾಯಣಗೌಡರ ಶಾಸಕ ಸ್ಥಾನ ಅನರ್ಹಗೊಂಡಿತು. ಬಳಿಕ ಕೆಆರ್‌ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡ ಗೆಲುವು ಪಡೆಯುವ ಮೂಲಕ ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿಯ ಗೆಲುವಿಗೆ ಪಾತ್ರರಾದರು. ಬಳಿಕ ನಾರಾಯಣಗೌಡರಿಗೆ ಬಿಜೆಪಿ ಎರಡು ಖಾತೆಯನ್ನು ನೀಡುವ ಮೂಲಕ ಸಚಿವರನ್ನಾಗಿ ಮಾಡಿತು. ಇದೀಗ ನಾರಾಯಣಗೌಡರಿಗೆ ಪಕ್ಷದಲ್ಲಿ ಏನಾಯಿತು ಏನೋ ಗೊತ್ತಿಲ್ಲ.…

Read More