Author: Prajatv Kannada

ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮೈಸೂರಿಗೆ (Mysuru) ಆಗಮಿಸಿದ್ದಾರೆ. ಈ ವೇಳೆ ಕೃಷ್ಣರಾಜೇಂದ್ರ ಕ್ಷೇತ್ರದ ಟಿಕೆಟ್ ವಂಚಿತರಾಗಿರುವ ಎಸ್‌ಎ ರಾಮದಾಸ್ (SA Ramadas) ಅವರನ್ನು ಅಮಿತ್ ಶಾ ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ. ಅಮಿತ್ ಶಾ ಆಗಮಿಸುತ್ತಲೇ ಅವರ ಕಾಲಿಗೆ ನಮಸ್ಕರಿಸಿ ರಾಮದಾಸ್ ಸ್ವಾಗತಿಸಿದರು. ಈ ವೇಳೆ ಅಮಿತ್ ಶಾ ಅವರನ್ನು ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ. ಈ ಬಗ್ಗೆ ತಿಳಿಸಿರುವ ರಾಮದಾಸ್, ನಾನು ಆರೋಗ್ಯದ ಸಮಸ್ಯೆಯ ಹಿನ್ನೆಲೆ ಆಸ್ಪತ್ರೆಯಲ್ಲಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ನಾನು ಸ್ವಾಗತ ಕೋರುವುದು ನನ್ನ ಜವಾಬ್ದಾರಿ. ಏರ್‌ಪೋರ್ಟ್‌ನಲ್ಲಿ ಇಳಿದಾಗ ಅಮಿತ್ ಶಾ ಅವರು ಬಹಳ ಆತ್ಮೀಯವಾಗಿ ಅಪ್ಪುಗೆ ನೀಡಿ ಮಾತನಾಡಿಸಿದರು. ರಾಮದಾಸ್ ಜಿ ಬಹುತ್ ಅಚ್ಚಾ ನಿರ್ಲಿಯಾ ಅಂತಾ ತಬ್ಬಿ ನಗು ಸೂಸಿದರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಮದಾಸ್ ಸಂತಸ ವ್ಯಕ್ತಪಡಿಸಿದರು. ನಾನು ಯಾವತ್ತೂ ಭರವಸೆ ಬೇಕು ಎಂದು ಕೇಳಿದವನಲ್ಲ. ಇದು…

Read More

ಬೆಂಗಳೂರು: ಟಿಕೆಟ್‌ ಕೈತಪ್ಪಿದ್ದಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿ ನಾಮಪತ್ರ ಸಲ್ಲಿಸಿದ್ದ ಗಂಗಾಂಬಿಕೆ (Gangambike Mallikarjun) ಅವರ ಮನವೊಲಿಸುವಲ್ಲಿ ಕೊನೆಗೂ ಕಾಂಗ್ರೆಸ್‌ (Congress) ನಾಯಕರು ಯಶಸ್ವಿಯಾಗಿದ್ದಾರೆ. ಗಂಗಾಂಬಿಕೆ ಅವರು ನಾಮಪತ್ರ ವಾಪಸ್‌ ತೆಗೆದುಕೊಂಡಿದ್ದು, ಚಿಕ್ಕಪೇಟೆಯಿಂದ (Chikkapete) ಆರ್‌.ವಿ.ದೇವರಾಜ್‌ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವಂತಾಗಿದೆ. ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಪಕ್ಷ ಟಿಕೆಟ್‌ ನೀಡಲಿಲ್ಲ. ಬದಲಿಗೆ ಆರ್‌.ವಿ.ದೇವರಾಜ್‌ ಅವರಿಗೆ ಟಿಕೆಟ್‌ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಗಂಗಾಂಬಿಕೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಚಿಕ್ಕಪೇಟೆಯಲ್ಲಿ ಮತ ವಿಭಜನೆಯಾಗುವ ಭೀತಿ ಕೈ ನಾಯಕರಲ್ಲಿತ್ತು. ಹೀಗಾಗಿ ಗಂಗಾಂಬಿಕೆ ಮನವೊಲಿಸಲು ನಿರಂತರ ಪ್ರಯತ್ನ ಮಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಗಂಗಾಂಬಿಕೆ, ಪಕ್ಷದ ಸೂಚನೆಯಂತೆ ನಾಮಪತ್ರ ವಾಪಾಸ್ ಪಡೆಯುತ್ತೇನೆಂದು ಪ್ರಕಟಿಸಿದ್ದಾರೆ. ನಾನು ನಾಮಪತ್ರ ವಾಪಸ್‌ ಪಡೆಯುತ್ತೇನೆಂದು ತಿಳಿಸಿದ್ದಾರೆ. ನಮ್ಮ ಹೈಕಮಾಂಡ್‌ನ ಎಲ್ಲಾ ನಾಯಕರು ದೂರವಾಣಿ ಮೂಲಕ ಮಾತನಾಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷದಲ್ಲೇ ಇರಬೇಕು. ಹಾಗಾಗಿ…

Read More

ಬೆಂಗಳೂರು: ಚುನಾವಣಾ ಆಯೋಗವು 223 ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕಾರ ಮಾಡಬೇಕು ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje)ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಶೋಭಕ್ಕ ನಿಮ್ಮ ಪಕ್ಷದವರಂತೆ ನಾವು 40 ಪರ್ಸೆಂಟ್‌ ಕಮಿಷನ್‌ ಪಡೆದಿಲ್ಲ. ನಿಮ್ಮ ಕಮಿಷನ್‌ ಸರ್ಕಾರದ ಬಗ್ಗೆ ಬಸನಗೌಡ ಪಾಟೀಲ್‌ ಯತ್ನಾಳ್‌, ನೆಹರೂ ಓಲೇಕಾರ್‌, ಮಾಡಾಳ್‌ ವಿರೂಪಾಕ್ಷಪ್ಪ, ಎಚ್‌. ವಿಶ್ವನಾಥ್‌, ಗೂಳಿಹಟ್ಟಿ ಶೇಖರ್‌ ಅವರೇ ಸಾಕ್ಷಿ ನೀಡಿದ್ದಾರೆ’ ಎಂದರು. ನಾವು ಅರ್ಜಿ ಶುಲ್ಕ 5 ಸಾವಿರ ರು. ಹಾಗೂ ಪಕ್ಷದ ಕಟ್ಟಡಕ್ಕೆ ದೇಣಿಗೆಯಾಗಿ ಅಧಿಕೃತವಾಗಿ 2 ಲಕ್ಷ ರು. ಸಂಗ್ರಹಿಸಿದ್ದೇವೆ. ಮೊದಲು ನಿಮ್ಮ ಸರ್ಕಾರದಲ್ಲಿನ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದರು.

Read More

ಬೆಂಗಳೂರು: ರಾಜ್ಯದ ಎಲ್ಲ ಕಾಂಗ್ರೆಸಿಗರ ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದು ವಿರೋಧಪಕ್ಷದ ನಾಯಕ  ಬಿಕೆ ಹರಿಪ್ರಸಾದ್‌ (BK Hariprasad) ಆರೋಪ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ ಮಾಡಲು ಮುಖ್ಯಮಂತ್ರಿಗಳ ಕಚೇರಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಲಾಗಿತ್ತು ಎಂಬ ವಿಚಾರವಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಜಗದೀಶ್‌ ಶೆಟ್ಟರ್‌ ಮಾತ್ರವಲ್ಲ ನಮ್ಮೆಲ್ಲರ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು(Central and State Governments) ಚುನಾವಣೆ ಗೆಲ್ಲಲು ಎಲ್ಲಾ ಅಸಾಂವಿಧಾನಿಕ ಪ್ರಯತ್ನಗಳನ್ನೂ ಮಾಡುತ್ತಿವೆ. ಮುಖ್ಯಮಂತ್ರಿಗಳ ಕಚೇರಿ ಮಾತ್ರವಲ್ಲ ಎಲ್ಲಾ ಸಂಸ್ಥೆಗಳನ್ನೂ ದುರುಪಯೋಗ ಮಾಡಿಕೊಳ್ಳುತ್ತಿವೆ. ಐ.ಟಿ., ಇ.ಡಿ.ಯನ್ನೂ ಬಳಸಿಕೊಳ್ಳುತ್ತಿವೆ. ಇ.ಡಿ. ಒಂದು ರೀತಿ ಬಿಜೆಪಿಯ ಚುನಾವಣಾ ಘಟಕ ಎಂಬಂತಾಗಿದೆ.  ಒಟ್ಟಾರೆ ತಮ್ಮ ಭ್ರಷ್ಟಾಚಾರ ಮುಂದುವರೆಸಲು ಏನಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂಬ ಯತ್ನದಲ್ಲಿದ್ದಾರೆ. ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Read More

ಹುಬ್ಬಳ್ಳಿ: ನಗದಲ್ಲಿಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದರು. ಧಾರವಾಡ, ಗದಗ ಮತ್ತು ಹಾವೇರಿ-ಮೂರು ಜಿಲ್ಲೆಗಳಲ್ಲಿನ ಪಕ್ಷದ ಪದಾಧಿಕಾರಿ (office-bearers), ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿರುವ ಬಿಜೆಪಿ ಸದಸ್ಯರೊಂದಿಗೆ ಇಂದು ಸಭೆ ನಡೆಸಲಾಗುವುದು ಎಂದು ಜೋಶಿ ಹೇಳಿದರು. ಈ ಜಿಲ್ಲೆಗಳಲ್ಲಿ (ಮುಂಬೈ ಕರ್ನಾಟಕ ಪ್ರಾಂತ್ಯ) ಪಕ್ಷದ ಸ್ಟ್ರೈಕ್ ರೇಟ್ ಚೆನ್ನಾಗಿದೆ ಎಂದು ಅವರು ಕ್ರಿಕೆಟ್ ಭಾಷೆಯಲ್ಲಿ ಹೇಳಿದರು. ಸಿದ್ದರಾಮಯ್ಯSiddaramaiah) ಲಿಂಗಾಯತ ಸಮುದಾಯದ ಬಗ್ಗೆ ಮಾಡಿರುವ ಕಾಮೆಂಟ್ ಪ್ರಸ್ತಾಪಿಸಿ ಅವರು ಇವತ್ತು ಕೂಡ ಸಮುದಾಯದ ಕ್ಷಮೆ ಯಾಚಿಸಿಲ್ಲ, ಅವರು ಕ್ಷಮೆ ಕೇಳಲೇಬೇಕು ಅಂತ ಹೇಳಿದರು. ಇದೇ ತಿಂಗಳು 29 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಯ ಕುಡಚಿಯಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡಲಿದ್ದಾರೆ, ಅದೇ ಜಿಲ್ಲೆಯಲ್ಲಿ ಮತ್ತೊಂದು ಚುನಾವಣಾ ರ್ಯಾಲಿ ನಡೆಸುವಂತೆ ಪ್ರಧಾನಿಗೆ ಮನವಿ ಮಾಡಲಾಗುವುವದೆಂದು ಜೋಶಿ ಹೇಳಿದರು.

Read More

ಬೀದರ್ (ಏ.24): ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಕಾರ್ಯಕರ್ತರೇ ನಮ್ಮ ಶಕ್ತಿ, ಅವರಿಂದಲೇ ನಮ್ಮ ಪಕ್ಷ ಗಟ್ಟಿಯಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಣದೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಕ್ಷೇತ್ರದ ಆಣದೂರು, ಆಣದೂರುವಾಡಿ, ಸಿಖೇನಪೂರ ಸೇರಿದಂತೆ ವಿವಿಧ ಗ್ರಾಮಗಳ ವಿವಿಧ ಪಕ್ಷಗಳ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಸ್ವಾಭಿಮಾನಿಗಳಾಗಿದ್ದಾರೆ. ಅವರೇ ನಮ್ಮ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದಾರೆ. ಅವರಿಂದಲೇ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿ ಏನು ಇಲ್ಲ, ಈಗ ಅಧಿಕಾರದಲ್ಲಿರುವುದು ಉದ್ರಿ ಸರ್ಕಾರ. ಕಾಂಗ್ರೆಸ್ ನವ್ರು ತಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದ ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟಿಲ್ಲ. ಅಧಿಕಾರದಲ್ಲಿ ಇಲ್ಲದ ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಕೊಡ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದಮೇಲೆ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೇ ನಾವು…

Read More

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು (ಏ.24) ಮತ್ತು ನಾಳೆ (ಏ.25) ರಾಜ್ಯ ಪ್ರವಾಸದಲ್ಲಿದ್ದಾರೆ. ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಮಿತ್ ಶಾ ಅವರಿಗೆ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಾಯಕ ರಾಮದಾಸ್​ ಸಾಥ್​ ನೀಡಿದರು.

Read More

ಬೆಂಗಳೂರು: ಕರ್ನಾಟಕ 2023 ರ ವಿಧಾನಸಭಾ ಚುನಾವಣೆಗೆ(Karnataka Assembly Election) ಕೆಲವೇ ದಿನಗಳು ಬಾಕಿ ಇದ್ದು, ರಾಜಧಾನಿ ಬೆಂಗಳೂರಿನಲ್ಲಿ ರೌಡಿಶೀಟರ್ ಗಳ  (Rowdysheeters in Bangalore)ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗಾಗಲೇ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಗರದ ಅನೇಕ ರೌಡಿಶೀಟರ್​ಗಳನ್ನ ಗಡಿಪಾರು ಮಾಡಲಾಗಿದೆ. ಇದೀಗ ಬೆಂಗಳೂರು ಪೂರ್ವ ವಿಭಾಗ ಪೊಲೀಸರಿಂದ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ಸ್ ಮನೆಗಳ ಮೇಲೆ ದಾಳಿ (Police Raid)ಮಾಡಲಾಗಿದ್ದು, ರೌಡಿಶೀಟರ್​​​​​ ಆಸಿಫ್​​ ಮನೆಯಲ್ಲಿ 105 KG ಗಾಂಜಾ, ಮಾರಕಾಸ್ತ್ರವನ್ನ ವಶಕ್ಕೆ ಪಡೆಯಲಾಗಿದೆ. ಜೊಲ್ಲು ಇಮ್ರಾನ್​​, ಅನಿಸ್​, ಅಬ್ಬಾಸ್​​, ಸಾಧಿಕ್​​​, ಶಾಕಿರ್​​​​, ಇರ್ಫಾನ್​, ಯೂಸೂಫ್​​ ಸೇರಿ 100 ರೌಡಿಶೀಟರ್​​ಗಳ​​ ಮನೆಗಳ ಮೇಲೆ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮನೆಗಳಲ್ಲಿದ್ದ ಡ್ರಗ್ಸ್​​, ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More

ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಪುಷ್ಪ 2 ಚಿತ್ರದ ಟ್ರೆಂಡಿಂಗ್ ಪೋಸ್ಟರ್‌ಗೆ ತಮ್ಮ ಮುಖವನ್ನು ಮಾರ್ಫ್ ಮಾಡಿದ್ದಾರೆ. ಕ್ರಿಕೆಟ್ ಜೊತೆಗೆ ಡೇವಿಡ್ ವಾರ್ನರ್ ದಕ್ಷಿಣ ಭಾರತದ ಚಲನಚಿತ್ರಗಳ ಮೇಲಿನ ಒಲವಿಗಾಗಿ ಜನಪ್ರಿಯರಾಗಿದ್ದಾರೆ. ಪುಷ್ಪ 2 ಪೋಸ್ಟರ್ ನಂತೆ ಸಂಪೂರ್ಣವಾಗಿ ರೂಪಾಂತರಗೊಂಡ ತಮ್ಮ ನೋಟವನ್ನು ವಾರ್ನರ್ ಇನ್ ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ. ವಾರ್ನರ್ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಧರಿಸಿದ್ದ ಅದೇ ಆಭರಣಗಳು ಮತ್ತು ಸೀರೆಯೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ವಾರ್ನರ್ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಲವಾರು ಅಭಿಮಾನಿಗಳು ವಾರ್ನರ್ ನೋಟಕ್ಕೆ ಫಿದಾ ಆಗಿದ್ದು ‘ಸರ್ ಮೊದಲು ನೀವು ಹೈದರಾಬಾದ್‌ಗೆ ಬಂದು ಪುಷ್ಪಾ ಚಿತ್ರದಲ್ಲಿ ನಟಿಸಿ’ ಎಂದು ಹೇಳಿದ್ದಾರೆ. ಏಪ್ರಿಲ್ 7 ರಂದು ಅಲ್ಲು ಅರ್ಜುನ್ ವಿಭಿನ್ನವಾಗಿ ಕಾಣಿಸಿಕೊಂಡಿರುವ ಫಸ್ಟ್ ಲುಕ್ ಬಿಡುಗಡೆಯಾಯಿತು.

Read More

ಬೆಂಗಳೂರು: ಕ್ಷೇತ್ರದ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಸಚಿವ ಕೆ ಗೋಪಾಲಯ್ಯ(Minister K Gopaliah) ಹೇಳಿದ್ದಾರೆ. ಮಹಾಲಕ್ಷ್ಮಿ ಲೇಔಟ್(Mahalakshmi Layout) ವಿಧಾನಸಭಾ ಕ್ಷೇತ್ರದ, ಮಾರಪ್ಪನಪಾಳ್ಯದ ಅಶೋಕ್ ಪುರಂನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ನಡೆಸಿ. ಅವರು ಮಾತನಾಡಿ, ಕ್ಷೇತ್ರದಲ್ಲಿನ ಮಳೆ ಬಂದಂತಹ ಸಂದರ್ಭದಲ್ಲಿ ನೂರಾರು ಮನೆಗಳಿಗೆ ನೀರು ಸೇರುತ್ತಿತ್ತು. ಅವುಗಳಿಗೆ ಸೂಕ್ತ ಕ್ರಮವನ್ನು ವಹಿಸಿ ಸರಿಪಡಿಸಲಾಗಿದೆ. ದೇವಸ್ಥಾನಗಳ ಹಿಂಭಾಗ ಒಳಚರಂಡಿ ಮಾಡಿರುವುದರಿಂದ ಯಾವುದೇ ಮನೆಗೆ ನೀರು ಹೋಗದ ರೀತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಮೂರು ಬಾರಿ ಶಾಸಕರಾಗಲು ಅವಕಾಶವನ್ನು ಮಾಡಿಕೊಟ್ಟ ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಅಶೋಕ್ ಪುರಂ ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನ ಕಲ್ಯಾಣ ಮಂಟಪ ನಿರ್ಮಾಣ, ನಮ್ಮ ಕ್ಲಿನಿಕ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಕೂಲಿ ಮಾಡಿ ಬದುಕುತ್ತಿರುವ ಬಡ ಕುಟುಂಬದವರಿಗೆ ಸೌಕರ್ಯವನ್ನು ಮಾಡಿದ್ದೇವೆ ಎಂದರು. ಕುಡಿಯುವ ನೀರಿನ ಘಟಕವನ್ನು ಅತಿ ಶೀಘ್ರದಲ್ಲೇ ಮಾಡಿಕೊಡುತ್ತೇನೆ. ಚುನಾವಣೆ ಮುಗಿದ ನಂತರ ಈ ಭಾಗಕ್ಕೆ ನೀರು ಕೊಡುವಂತಹ ಕೆಲಸವನ್ನು ಮಾಡುತ್ತೇನೆ…

Read More