Author: Prajatv Kannada

ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ  ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಾಟಕೀಯ ಬೆಳವಣಿಗೆಯಾಗುವಲ್ಲಿ ಕಾರಣವಾಯಿತು. ಇತ್ತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಈ ಬಾರಿ ವಿಧಾನಸಭೆ ಚುನಾವಣೆಗೆ ಮತ್ತೇ ಹಾಲಿ ಶಾಸಕ ಸಿದ್ದು ಸವದಿಗೆ ಟಿಕೆಟ್ ನೀಡುವ ಮೂಲಕ ಗೆಲುವು ನಿಶ್ಚಿತವೆಂದು ಸುದ್ದಿಗೋಷ್ಠಿ ಮಾಡುತ್ತಿದ್ದಂತೆ ಮತ್ತೊಂದೆಡೆ ಬನಹಟ್ಟಿಯಲ್ಲಿ ಬೈಕ್ ರ‍್ಯಾಲಿ ನಡೆಯುವ ಸಂದರ್ಭ ಮೆರವಣಿಗೆಯು ಬಸ್ ನಿಲ್ದಾಣ ಬಳಿ ಬರುತ್ತಿದ್ದಂತೆ ಸ್ಥಳೀಯರಿಗೆ, ನೇಕಾರರಿಗೆ ಟಿಕೆಟ್ ನೀಡಬೇಕೆದು ಭಿತ್ತಿಪತ್ರಹಿಡಿದು ಮೆರವಣಿಗೆ ಮುಂದೆ ಪ್ರತಿಭಟನೆ ಪ್ರದರ್ಶನ ನಡೆಯಿತು. ನೂರಾರು ಕಾರ್ಯಕರ್ತರು ಜಮಾಯಿಸಿ ಫಲಕ ಪ್ರದರ್ಶನ ಮಾಡುವದರೊಂದಿಗೆ ಈ ಭಾರಿ ತೇರದಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸ್ಥಳೀಯರಲ್ಲಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರಾಜಶೇಖರ ಅಂಬಲಿ, ಡಾ. ಪಂಡಿತ ಪಟ್ಟಣ, ರಾಮಣ್ಣ ಹುಲಕುಂದ, ಬಸವರಾಜ ತೆಗ್ಗಿ, ಸೋಮು ಗೊಂಬಿ, ಪ್ರವೀಣ ಕೋಲಾರ, ರಮೇಶ ಮಂಡಿ, ಕುಮಾರ ಕದಂ, ಅಕ್ಷಯ ಹಟ್ಟಿ ಸೇರಿದಂತೆ ಅನೇಕರಿದ್ದರು. ಯೂಟರ್ನ್ ಹೊಡೆದ ಬಿಎಸ್‌ವೈ ರಾಜ್ಯದಲ್ಲಿ ಹಾಲಿ ಶಾಸಕರಲ್ಲಿ 4-5 ಜನರಲ್ಲಿ ಬದಲಾವಣೆ ಮಾಡಲಾಗುವದೆಂದು…

Read More

ದೊಡ್ಡಬಳ್ಳಾಪುರ: ವೃದ್ದೆಯ ಬಾಯಿಗೆ ಬಟ್ಟೆ ತುರುಕಿ  ಮಾಂಗಲ್ಯ ಸರ ಸೇರಿದಂತೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ನಾರಯಣಮ್ಮ( 72) ಚಿನ್ನ ಕಳೆದುಕೊಂಡಿರುವ ವೃದ್ದೆ.. ತಾಲೂಕಿನ ಕರೇನಹಳ್ಳಿ ಗ್ರಾಮದ ಹೊರವಲಯದ ಮಾ.9 ರಂದು ಜಮೀನಿನಲ್ಲಿ ವೃದ್ಧೆಯೊಬ್ಬರು ಹೊಂಗೆಕಾಯಿ ಅಯುತ್ತಿದ್ದರು, ಇದೇ ಸಮಯದಲ್ಲಿ ಹೊಂಗೆಕಾಯಿ ಉದುರಿಸುವ ನೆಪದಲ್ಲಿ ವೃದ್ಧೆಯ ಸಹಾಯಕ್ಕೆ ಬಂದ ದುಶ್ಕರ್ಮಿಗಳು ವೃದ್ದೆಯನ್ನು ಪರಿಚಯ ಮಾಡಿಕೊಂಡು ಬಾಯಿಗೆ ಬಟ್ಟೆ ತುರುಕಿ ಮಾಂಗಲ್ಯಸರ, ತಾಳಿ, 2 ಲಕ್ಷ್ಮಿ ಕಾಸು, ಕರಿಮಣಿ, ಚಿನ್ನದ ಗುಂಡುಗಳನ್ನು ಕದ್ದು ಪರಾರಿಯಾಗಿದ್ದಾರೆ. ವೃದ್ದೆ ನಾರಾಯಣಮ್ಮ ಪ್ರತಿದಿನ ತನ್ನ ಬಳಿ ಇದ್ದ ಮೇಕೆಗಳನ್ನು ಮೇಯಿಸಲು ಅದೇ ಜಾಗಕ್ಕೆ ಬರುತ್ತಿದ್ದರು. ಇದೇ ವೇಳೆ ಹೊಂಗೆ ಮರದಡಿ ಬೀಳುವ ಕಾಯಿಗಳನ್ನು ಆಯ್ದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ್ದ ಖತರ್ನಾಕ್ ಕಳ್ಳರು  ಅಜ್ಜಿಯನ್ನು ಮಾತಿನ ಬಲೆಗೆ ಬೀಳಿಸಿ ಒಳ್ಳೆಯ ಹುಡುಗರಂತೆ ನಟಿಸಿ ಅಜ್ಜಿಯ ಮನ ಗೆದ್ದಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಖದೀಮರು ಕೃತ್ಯವನ್ನು ಎಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ…

Read More

ಬಾಗಲಕೋಟೆ: ರಾಜ್ಯದುದ್ದಕ್ಕೂ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಸಾರ್ವಜನಿಕ ಸಭೆಯಲ್ಲಿ ಜನಾಶೀರ್ವಾದ ದುಪ್ಪಟ್ಟಾಗಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 140 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯಲ್ಲಿ ಮಾತನಾಡಿದ ಅವರು ಮೋದಿ ಹಾಗು ಅಮಿತ್ ಶಾರವರ ಮಾರ್ಗದರ್ಶನದಿಂದ ಗುರಿ ಮುಟ್ಟುವಲ್ಲಿ ಕಾರಣವಾಗಲಿದೆ. ಈಗಾಗಲೇ 50 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮುಗಿಸಿದ್ದು, ಈ ಭಾರಿ ಜನ ಬೆಂಬಲ ಸಾಕಷ್ಟು ದೊರೆತಿದೆ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ನಾಯಕತ್ವವಿಲ್ಲ ರಾಹುಲ್ ಗಾಂಧಿಯವರನ್ನು ನಾನೂ ಟೀಕೆ ಮಾಡಲ್ಲ ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಶಾರಿ ಅವರಿಗೆ ಸರಿಸಮಾನರಲ್ಲವೆಂದು ಹೇಳುತ್ತೇನೆ. ಈಗಾಗಲೇ ಡಿ.ಕೆ. ಶಿವಕುಮಾರ್ ಹಾಗು ಸಿದ್ದರಾಮಯ್ಯನವರು ಸಿಎಂ ಗಾದೆಯ ಹುಮ್ಮಸ್ಸಿನಲ್ಲಿದ್ದಾರೆ. ಅದು ಸ್ವಾಭಾವಿಕ ಆದರೆ ಇವರಿಬ್ಬರ ಕನಸು ನನಸಾಗುವುದಿಲ್ಲವೆಂದು ಹೇಳಿದರು. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನಪರ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ, ಪಂಗಡ ಹಾಗು ಹಿಂದುಳಿದ ವರ್ಗಗಳ ಸಮುದಾಯಕ್ಕೆ ನೀಡಿದ ಸೌಲಭ್ಯಗಳು…

Read More

ಬಾಗಲಕೋಟೆ : ವಿ. ಸೋಮಣ್ಣ ಸೇರಿದಂತೆ ಯಾವುದೇ ಮುಖಂಡರು ಬಿಜೆಪಿ ಬಿಟ್ಟು ಹೋಗುವದಿಲ್ಲವೆಂಬ ವಿಶ್ವಾಸವಿದೆ. ಇಂತಹ ಯಾವುದೇ ತರಹ ಸುದ್ದಿಗೆ ಮಹತ್ವವಿಲ್ಲವೆಂದ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ, ಎಲ್ಲರೂ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ನಮ್ಮ ಆತ್ಮೀಯ ಸ್ನೇಹಿತರು. ಯಾವುದೋ ಒಂದೆರಡು ಸಂರ್ಭಗಳಲ್ಲಿ ಅವರು ಹೇಳಿಕೆ ಕೊಟ್ಟಿದ್ದು ಅಪರಾಧವೆಂದು ನಾನು ಪರಿಗಣಿಸಲ್ಲ. ನಮ್ಮಲ್ಲಿ ಎಲ್ಲವೂ ಸರಿಯಿದೆ. ಯಾವುದೇ ಗೊಂದಲವಿಲ್ಲ. ಯತ್ನಾಳ್ ಅವರೂ ಕೂಡ ಸುಧಾರಿಸಿಕೊಂಡಿದ್ದಾರೆ ಎಂದು ಯತ್ನಾಳ್ ಪರ ಸಾಫ್ಟ್ ಆದ ಬಿ.ಎಸ್.ಯಡಿಯೂರಪ್ಪ. ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ರಾಜ್ಯಕ್ಕೆ ನರೇಂದ್ರ ಮೋದಿಯವರನ್ನ ಉದ್ಘಾಟನೆಗೆ ಕರೆ ತರುತ್ತಾರೆಂಬ ವಿಚಾರ ಶುದ್ಧ ಸುಳ್ಳು. ಎರಡು ಸೇತುವೆಗಳು ಸೇರಿ ಸಣ್ಣ ಪುಟ್ಟ ಕೆಲಸ ನಡೆಯುತ್ತಿದೆ. ಅದನ್ನು ಬಿಟ್ಟರೆ ಯಾವುದೇ ಸಮಸ್ಯೆಯಿಲ್ಲ. ಈಗಾಗಲೇ ವಾಹನಗಳ ಓಡಾಟ ಶುರುವಾಗಿವೆ ಸಿದ್ದರಾಮಯ್ಯನವರ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

Read More

ಮೈಸೂರು: ಕಳೆದ 7 ದಶಕಗಳ ಕಾಲ ಸಿನಿ ಪ್ರಿಯರನ್ನು ರಂಜಿಸಿದ್ದ ಲಕ್ಷ್ಮೀ ಚಿತ್ರ ಮಂದಿರ ಇನ್ನು ಮುಂದೆ ಇತಿಹಾಸ ಸೇರಲಿದೆ. ಮೈಸೂರಿನ ಲಕ್ಷ್ಮೀ ಥಿಯೇಟರ್ ಇತಿಹಾಸ ಪುಟ ಸೇರಿದ್ದು, ಮಂಗಳವಾರದಿಂದ ಚಿತ್ರಮಂದಿರ ಕಟ್ಟಡ ನೆಲಸಮ ಮಾಡುವ ಕಾರ್ಯ ಆರಂಭವಾಗಿದೆ. ಕೊರೊನಾದಿಂದ ಕಂಗೆಟ್ಟ ಚಿತ್ರಮಂದಿರದ ಮಾಲೀಕರು ಮುಚ್ಚಲು ನಿರ್ಧರಿಸಿದ್ದಾರೆ. ಉದ್ಯಮ ನಷ್ಟದಿಂದ ಲಕ್ಷ್ಮೀ ಚಿತ್ರಮಂದಿರ ಮುಚ್ವುವ ನಿರ್ಧಾರ ಕೈಗೊಳ್ಳಲಾಗಿತ್ತು. 1949 ರಿಂದ ಇಲ್ಲಿಯವರಿಗೆ ಸಿನಿ ಪ್ರಿಯರ ರಂಜಿಸುತ್ತಿದ್ದ ಚಿತ್ರಮಂದಿರ. ಇನ್ನು ಮುಂದೆ ನೆನಪಿನಲ್ಲಿ ಮಾತ್ರ ಉಳಿಯಲಿದೆ. ಕೊರೊನಾ ಎಫೆಕ್ಟ್.. ಥಿಯೇಟರ್ ಲಾಸ್..! ಕೊರೋನಾ ಲಾಕ್‌ಡೌನ್‌ನಿಂದ ಮನೋರಂಜನೆ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಸಿನಿಮಾ ನಿರ್ದೇಶಕರಿಗೆ, ನಿರ್ಮಾಪಕರಿಗೆ ಹಾಗೂ ಚಿತ್ರಮಂದಿರ ಮಾಲೀಕರಿಗೆ ಕೋಟಿ ಕೋಟಿ ನಷ್ಟವಾಗುತ್ತಿದೆ. ಮೂರ್ನಾಲ್ಕು ವರ್ಷದಿಂದ ನಿರಂತರ ನಷ್ಟದಿಂದಲೇ ಚಿತ್ರ ಮಂದಿರ ನಡೆಯುತ್ತಿತ್ತು. ಲಕ್ಷ್ಮೀ ಚಿತ್ರಮಂದಿರಕ್ಕೆ ಸುಬ್ರಮಣ್ಯಂ ಎಂಬುವವರು ಮಾಲೀಕರು. ಡಾ.ರಾಜ್‌ ಕುಮಾರ್‌, ವಿಷ್ಣುವರ್ಧನ್, ಅಂಬರೀಷ್‌, ರವಿಚಂದ್ರನ್‌ ರಂತಹ ನಟರ ಹಿಟ್ ಚಿತ್ರಗಳ ಪ್ರದರ್ಶನ ಥಿಯೇಟರ್‌ನಲ್ಲಿ ನಡೆದಿದೆ. ಅಲ್ಲದೇ 50ಕ್ಕೂ ಹೆಚ್ಚು ಚಿತ್ರಗಳು ಶತದಿನೋತ್ಸವ ಆಚರಣೆ ಮಾಡಿದೆ. ಮತ್ತೊಂದು…

Read More

ಮಣಿಪಾಲ: ಕೃಷ್ಣನ ಶಾಪದಿಂದಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಅವರಿಗೆ ಒಳ್ಳೆದಾಗಲಿ ಅನ್ನೋ ಉದ್ದೇಶದಿಂದ ಹೇಳುತ್ತಿದ್ದೇನೆ. ಕೃಷ್ಣಮಠಕ್ಕೆ ಬಂದು ಅವರ ಪಾಪ ಕಳೆದುಕೊಳ್ಳಲಿ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದರು ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಬಹಳ ಸಲ ಉಡುಪಿಗೆ ಬಂದರಿದ್ದರು. ಆದರೆ ಒಮ್ಮೆಯೂ ಕೃಷ್ಣಮಠಕ್ಕೆ ಅವರು ಭೇಟಿ ಕೊಟ್ಟಿಲ್ಲ. ಭಕ್ತ ಕನಕದಾಸರ ಪುತ್ಥಳಿ ಕೃಷ್ಣ ಮಠದಲ್ಲಿದೆ. ಕನಕನಿಗೂ ಕೃಷ್ಣನಿಗೆ ವಿಶೇಷವಾದ ಸಂಬಂಧ ಇದೆ.ಕೃಷ್ಣನ ಸ್ಪೂರ್ತಿ ಕನಕನಿಗೆ ಸಿಕ್ಕಿತು.ಇಂತಹ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಭೇಟಿ ಕೊಟ್ಟಿಲ್ಲ? ಕೃಷ್ಣನ ಶಾಪದಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರಿ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಕಿಡಿಕಾರಿದರು. ಕೃಷ್ಣಮಠಕ್ಕೆ ಬಂದು ನಿಮ್ಮ ಪಾಪ ಕಳೆದುಕೊಳ್ಳಿ ಈಗಲಾದರೂ ಕೃಷ್ಣ ಮಠಕ್ಕೆ ಬನ್ನಿ, ನಿಮಗೆ ಒಳ್ಳೆಯದಾಗುತ್ತೆ. ನಿಮಗೆ ಒಳ್ಳೆದಾಗಲಿ ಅನ್ನೋ ಉದ್ದೇಶದಿಂದ ಹೇಳುತ್ತಿದ್ದೇನೆ. ಕೃಷ್ಣಮಠಕ್ಕೆ ಬಂದು ನಿಮ್ಮ ಪಾಪ ಕಳೆದುಕೊಳ್ಳಿ ಎಂದು ಸಿದ್ದರಾಮಯ್ಯ ಅವರ ಕಾಲೆಳೆದರು. ಸಿದ್ದರಾಮಯ್ಯ ಮೇಲೆ ಪ್ರೀತಿಯಿಂದಲೇ ಈ ಮಾತು…

Read More

ಹಾಸನ: ಗುಬ್ಬಿ ಶ್ರೀನಿವಾಸ್ ಅವರನ್ನು ಮತ್ತೆ ಜೆಡಿಎಸ್‌ಗೆ (JDS) ಆಹ್ವಾನ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C.M.Ibrahim) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ಗರಂ ಆಗಿದ್ದಾರೆ. ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ವಡ್ಡರಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಗುಬ್ಬಿ (Gubbi) ಕ್ಷೇತ್ರದಲ್ಲಿ ಕುಮಾರಸ್ವಾಮಿನೇ ಅಲ್ಟಿಮೇಟ್ ಎಂದು ಯಾರಾದರೂ ಹೇಳಿದ್ದರೆ ಬಾಯಿತಪ್ಪಿ ಹೇಳಿರಬೇಕು. ನನ್ನ ಅರಿವಿಲ್ಲದೆ ಯಾರಿಗೂ ನಾನು ಪವರ್ ಕೊಡಲಿಲ್ಲ. ಈಗಾಗಲೇ ನಮ್ಮ ಅಭ್ಯರ್ಥಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ನಾಗರಾಜ್ ಅಭ್ಯರ್ಥಿ ಎಂದು ಘೋಷಣೆ ಆಗಿದೆ. ಇಲ್ಲಿ ಯಾರೂ ಇಂತಹ ಹೇಳಿಕೆಗಳನ್ನು ಕೊಟ್ಟು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬಾರದು. ಈ ತರಹದ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು. ಈ ರೀತಿಯ ಹುಡುಗಾಟದ ಹೇಳಿಕೆ ಕೊಡುವುದಲ್ಲ ಎಂದು ವಾರ್ನಿಂಗ್ ಮಾಡಿದರು. ಆ ವ್ಯಕ್ತಿ ಪಕ್ಷದಿಂದ ದೂರ ಹೋಗಿ 2 ವರ್ಷಗಳಾಗಿವೆ. ಆ ವ್ಯಕ್ತಿಯನ್ನು ಬಾರಪ್ಪ ಎಂದು ಕರೆಯಲು ನಾವೇನು ಇಲ್ಲಿ ಅರ್ಜಿ ಹಾಕಿದ್ದೇವಾ? ಇಲ್ಲಿ ಯಾವುದೇ ಗೊಂದಲವಿಲ್ಲ.…

Read More

ರಾಮನಗರ: ಮಂಡ್ಯದಲ್ಲಿ (Mandya) ಬಿಜೆಪಿ (BJP), ಕಾಂಗ್ರೆಸ್ (Congress), ರೈತಸಂಘ ಸೇರಿ ನನಗೆ ಚಕ್ರವ್ಯೂಹ ರಚಿಸಿ ಸೋಲಿಸಿದ್ರು. ಈಗ ರಾಮನಗರದಲ್ಲೂ (Ramanagara) ಆ ಸಂಚು ನಡೆಯುತ್ತಿದೆ ಎಂದು ರಾಮನಗರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯೂ ಆಗಿರುವ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ. ರಾಮನಗರ ಕ್ಷೇತ್ರದಿಂದ ಸಂಸದ ಡಿ.ಕೆ ಸುರೇಶ್ (DK Suresh) ಸ್ಪರ್ಧೆ ಮಾಡುವ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಅವರ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ. ಸಿ.ಎಂ ಇಬ್ರಾಹಿಂ (CM Ibrahim) ಹಾಗೂ ಹೆಚ್.ಡಿ ದೇವೇಗೌಡರು (HD Devegowda) ರಾಮನಗರದಲ್ಲಿ ಸ್ಪರ್ಧಿಸಲು ನನಗೆ ಅವಕಾಶ ಕೊಟ್ಟಿದ್ದಾರೆ. ನನ್ನ ಪಕ್ಷದ ಬಗ್ಗೆ ನಾನು ಮಾತನಾಡಬಹುದು. ಆದರೆ ಬೇರೆ ಪಕ್ಷದ ಬಗ್ಗೆ ಮಾತನಾಡುವ ಸೂಕ್ತ ವ್ಯಕ್ತಿ ನಾನಲ್ಲ. ಸೋಲಿಸೋದು, ಟಾರ್ಗೆಟ್ ಮಾಡೋದು ನಮ್ಮ ಕೈಯಲ್ಲಿಲ್ಲ. ಎಲ್ಲವನ್ನೂ ಜನ…

Read More

ಸೂರ್ಯೋದಯ: 06.27 AM, ಸೂರ್ಯಾಸ್ತ : 06.30 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಫಾಲ್ಗುಣ ಮಾಸ, ಶಿಶಿರ ಋತು,ಕೃಷ್ಣ ಪಕ್ಷ, ಉತ್ತರಾಯಣ ತಿಥಿ: ಇವತ್ತು ಅಷ್ಟಮಿ 06:45 PM ತನಕ ನಂತರ ನವಮಿ ನಕ್ಷತ್ರ: ಇವತ್ತು ಜೇಷ್ಠ 07:34 AM ತನಕ ನಂತರ ಮೂಲ ಯೋಗ: ಇವತ್ತು ಸಿದ್ಧಿ 12:53 PM ತನಕ ನಂತರ ವ್ಯತೀಪಾತ ಕರಣ: ಇವತ್ತು ಬಾಲವ 07:37 AM ತನಕ ನಂತರ ಕೌಲವ 06:45 PM ತನಕ ನಂತರ ತೈತಲೆ ರಾಹು ಕಾಲ:  12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: – ಇಲ್ಲ ಅಭಿಜಿತ್ ಮುಹುರ್ತ: ಇಲ್ಲ ಮೇಷ ರಾಶಿ: ವಿವಾಹ ಕಾರ್ಯ ನಿರೀಕ್ಷೆಯಲ್ಲಿರುವವರಿಗೆ ಶುಭ, ಪ್ರೇಮಿಗಳ ಬಾಂಧವ್ಯ ವೃದ್ಧಿ, ಕುಟುಂಬದಲ್ಲಿ ಜಗಳ ಸಂಭವ, ವ್ಯಾಪಾರದ ಆರ್ಥಿಕ ಮುಗ್ಗಟ್ಟು, ಮಕ್ಕಳಿಂದ ಮನಸ್ತಾಪ, ರಾಜಕೀಯ ರಂಗದ…

Read More

ರಾಯಚೂರು: ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‍ (Congress) ಗೆ ಬಹುಮತ ಬಂದು ಸಿದ್ದರಾಮಯ್ಯ (Siddaramaiah) ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಅಂತ ರಾಯಚೂರು ಜಿಲ್ಲೆಯ ಸಿದ್ದರಾಮಯ್ಯ ಅಭಿಮಾನಿಯೊಬ್ಬ ಶ್ರೀಶೈಲ ಪಾದಯಾತ್ರೆ ಹೊರಟಿದ್ದಾರೆ. ದೇವದುರ್ಗ ತಾಲೂಕಿನ ಮಲ್ಲಿಗೆದೊಡ್ಡಿ ಗ್ರಾಮದ ಸಿದ್ದೇಶ್ ಸಿದ್ದರಾಮಯ್ಯ ಸಿಎಂ ಆಗಲಿ ಅಂತ ಹರಕೆ ಹೊತ್ತು ಗ್ರಾಮದಿಂದ ಶ್ರೀಶೈಲ ವರೆಗೆ ಪಾದಯಾತ್ರೆ ನಡೆಸಿದ್ದಾರೆ. ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಸುಮಾರು 350 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಯುಗಾದಿ ದಿನ ಶ್ರೀಶೈಲ ತಲುಪಲಿದ್ದು ಮಲ್ಲಿಕಾರ್ಜುನನಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಯುಗಾದಿ (Ugadi 2023) ಹಿನ್ನೆಲೆ ಎಲ್ಲೆಡೆಯಿಂದಲೂ ಭಕ್ತರು ಶ್ರೀಶೈಲ ಪಾದಯಾತ್ರೆ ಹೊರಟಿದ್ದಾರೆ. ಪಾದಯಾತ್ರೆ ತೆರಳುವವರಿಗೆ ಅಲ್ಲಲ್ಲಿ ಜನ ದಾನಿಗಳು ಊಟ, ನೀರು, ತಿಂಡಿ, ಅಗತ್ಯ ಔಷಧಿ ವ್ಯವಸ್ಥೆ ಮಾಡಿದ್ದಾರೆ. ಪಾದಯಾತ್ರಿಗಳಿಗೆ ಅನುಕೂಲವಾಗಲಿ ಅಂತ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸಿದ್ದಾರೆ.

Read More