Author: Prajatv Kannada

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, (Bangalore)ಬೆಂಗಳೂರಿನಲ್ಲಿ ಪೊಲೀಸರು(Police) ಹದ್ದಿನ ಕಣ್ಣಿಟ್ಟಿದ್ದಾರೆ. ಅಕ್ರಮವಾಗಿ ಸಾಗಿಸಲಾಗುತ್ತಿರುವ, ನಗದು, ಮದ್ಯ, ಮಾದಕ ದ್ರವ್ಯಗಳು, ಆಭರಣ, ಉಡುಗೊರೆ ಸಾಮಗ್ರಿಗಳು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. (Bangalore)ಬೆಂಗಳೂರಿನಲ್ಲಿ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ಏಪ್ರಿಲ್ 20ರ ವರೆಗೆ 2894 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. 76,30,86,056 ಪ್ರಮಾಣ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇದುವರೆಗೆ ನಗರದಲ್ಲಿ ಚುನಾವಣೆಯ ಸಲುವಾಗಿ ಒಟ್ಟು 2894 ಎಫ್‌ಆರ್ ದಾಖಲಾಗಿದ್ದು 76,30,86,056 ಪ್ರಮಾಣದ ವಸ್ತುಗ ಳನ್ನು ಜಪ್ತಿ ಮಾಡಲಾಗಿದೆ. ಈ ವರೆಗೂ ಒಟ್ಟು ಬೆಂಗಳೂರು ನಗರದಲ್ಲಿ 743 ದೂರುಗಳು ಚುನಾವಣೆಯ ಸಂಬಂಧ ದಾಖಲಾಗಿದೆ. ಅದರಲ್ಲಿ 119 ಸುಳ್ಳು ದೂರುಗಳು, 622 ಪ್ರಕರಣದಲ್ಲಿ ಕ್ರಮಕೈಗೊಳ್ಳಲಾಗಿದೆ. ಉಳಿದ 2 ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.

Read More

ಬೆಂಗಳೂರು: ಕಳೆದ ಒಂಭತ್ತು ತಿಂಗಳಿನಿಂದ IT , ED ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು(kgfbabu) ಕೆಜಿಎಫ್ ಬಾಬು ಹೇಳಿದ್ದಾರೆ. ವಸಂತ ನಗರದ ರುಕ್ಸಾನ ಪ್ಯಾಲೇಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ, ಮೊದಲಿಗೆ ಬಸವ ಜಯಂತಿ ಶುಭಾಶಯಗಳನ್ನು ತಿಳಿಸಿ ಮಾತು ಮುಂದುವರಿಸಿದರು.  ED, IT ಮೂಲಕ ಕಳೆದ  9 ತಿಂಗಳಿಂದ ನನಗೆ ತೊಂದರೆ ಕಿರುಕುಳ ನೀಡಲಾಗುತ್ತಿದೆ. ನನ್ನ 26 ಬ್ಯಾಂಕ್ ಅಕೌಂಟ್ ಸೀಜ್ ಮಾಡಿದ್ದು, ಚುನಾವಣೆ ಇರುವ ಹಿನ್ನೆಲೆ ಕಿರುಕುಳ ಕೊಡುತ್ತಿದ್ದಾರೆ. ಇದರಿಂದ ಯಾರಿಗೆ ಲಾಭ ಆಗುತ್ತೆ ಗೊತ್ತಿದೆ. ಇಂಥ ಲುಚ್ಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನೂ ಬಡ ಮಕಾನ್‌ನಲ್ಲಿ ಆರ್ ವಿ ದೇವರಾಜ ಬಂದು ರಂಜನ್ ಶುಭಾಶಯ ಕೋರಿದರು. ಆಮೇಲೆ ಒಂದಾಗಿದ್ದೇವೆ ಎಂದು ಸುಳ್ಳು, ಅಪಪ್ರಚಾರ ಮಾಡಿದ್ದಾರೆ. ಆ ರೀತಿ ಏನು ಆಗಿಲ್ಲ. ಗಂಗಾಬಿಕೆ, ನಂಗೆ ಟಿಕೆಟ್ ತಪ್ಪಿಸಲು ‘ಅವರೇ’ ಕಾರಣ. ಆದರೆ ಅವರ ಹೆಸರು ಹೇಳುವುದಕ್ಕೆ ಆಗಲ್ಲ  ಎಂದರು. ಇನ್ನೂ IT ರೇಡ್ ನಲ್ಲಿ ಏನು ಸಿಗದಿದ್ರು ಸೀಜ್ ಮಾಡಿದ್ದಾರೆ. ಚಿಕ್ಕಪೇಟೆ…

Read More

ಬೆಂಗಳೂರು: ಈ ಬಾರಿ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಸಾಧನೆ ಕಡಿಮೆ ಎಂದು (AAP)ಎಎಪಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ(Brijesh Kalappa) ಹೇಳಿದ್ದಾರೆ.  ಈ ಸಂಬಂಧ ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಳಪೆ ಶಿಕ್ಷಣ ವ್ಯವಸ್ಥೆಯಿಂದಾಗಿ ಬಿಜೆಪಿ ಸರ್ಕಾರ ಪಿಯು ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಿದೆ ಎಂದು ದೂರಿದ್ದಾರೆ. ಕರ್ನಾಟಕದ ಪಿಯುಸಿ ಫಲಿತಾಂಶ ಬಂದಿದ್ದು, ಖಾಸಗಿ ಶಾಲೆಗಳಲ್ಲಿ ಶೇ. 76.67 ರಷ್ಟು ಫಲಿತಾಂಶ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶೇ. 63.63 ರಷ್ಟು ಫಲಿತಾಂಶ ಬಂದಿದೆ. ಆದರೆ ದೆಹಲಿಯ ಸರ್ಕಾರಿ ಕಾಲೇಜುಗಳಲ್ಲಿ ನೂರಕ್ಕೆ ನೂರಷ್ಟು ಫಲಿತಾಂಶ ಬರುತ್ತಿದೆ ಎಂದು ಹೇಳಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಫಲಿತಾಂಶವನ್ನು ಹೋಲಿಕೆ ಮಾಡುವುದು ತುಂಬಾ ಅವಶ್ಯಕ ಇದೆ. ಯಾಕಂದ್ರೆ ಇಂದು ನಮ್ಮ ಆಮ್ ಆದ್ಮಿ ಪಕ್ಷದ ನಿಂತಿರುವುದೇ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ವಿಚಾರದಲ್ಲಿ  ಹಾಗಾಗಿ ಹೋಲಿಕೆಯನ್ನ ಮಾಡಲಾಗಿದೆ ಎಂದು ಬ್ರಿಜೇಶ್‌ ಕಾಳಪ್ಪ  ಹೇಳಿದ್ದಾರೆ.

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ(bangalore) ನಿನ್ನೆ ಒಂದೇ ದಿನ 210 ಮಂದಿಗೆ ಕೊರೋನಾ(corona) ಸೋಂಕು ಧೃಡಪಟ್ಟಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ನಿನ್ನೆ (bagalkote)ಬಾಗಲಕೋಟೆ 9, ಬಳ್ಳಾರಿ 10, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 31, ಬೆಂಗಳೂರು ನಗರ 210 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ತಲಾ ಒಬ್ಬರಿಗೆ, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾವೇರಿ, ಕೋಲಾರ ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ ಇಬ್ಬರಿಗೆ, ದಾವಣಗೆರೆ 6, ಧಾರವಾಡ(darawada) ಮತ್ತು ಕೊಪ್ಪಳದಲ್ಲಿ ತಲಾ ಮೂವರಿಗೆ, ಹಾಸನ 11, ಕಲಬುರ್ಗಿ 5, ಮೈಸೂರು 15, ರಾಯಚೂರು 5, ಶಿವಮೊಗ್ಗ 26, ಉತ್ತರಕನ್ನಡ 14 ಹಾಗೂ ವಿಜಯನಗರದಲ್ಲಿ 9 ಮಂದಿ ಸೇರಿದಂತೆ 374 ಜನರಿಗೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. ನಿನ್ನೆ 374 ಸೇರಿದಂತೆ ಈವರೆಗೆ 40,84,462 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇವರಲ್ಲಿ ನಿನ್ನೆ 272 ಸೇರಿದಂತೆ ಈವರೆಗೆ 40,41,949 ಮಂದಿ…

Read More

ಶಿವಮೊಗ್ಗ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿಚಾರಣಾಧೀನ ಕೈದಿ (Prisoner) ಸಾವನ್ನಪ್ಪಿದ ಘಟನೆ ಶಿವಮೊಗ್ಗದ (Shivamogga) ಕೇಂದ್ರ ಕಾರಾಗೃಹದಲ್ಲಿ (Central Jail) ನಡೆದಿದೆ. ಆರೋಪಿ ಕಲೀಂ (37) ಮೃತಪಟ್ಟ ಕೈದಿ. ಈತನನ್ನು ಕಳೆದ ಒಂದು ತಿಂಗಳ ಹಿಂದೆ ಪೋಕ್ಸೋ (POCSO) ಕಾಯ್ದೆಯಡಿ ಬಂಧಿಸಲಾಗಿತ್ತು. ಕಲೀಂ ಕಿಡ್ನಿ ಸಮಸ್ಯೆ, ಲೋ ಬಿಪಿ, ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದ. ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಈತನನ್ನು ನಗರದ ಮೆಗ್ಗಾನ್ (Meggan) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಕಲೀಂ ಸಾವಿನ ಬಗ್ಗೆ ಆತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಜೈಲಿನಲ್ಲಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Read More

ಬೆಳಗಾವಿ:- ಬಂದ್ರ ಮಾಮಾನ ಬುಲೆಟ್ ಗಾಡಿ ಹಾಡಿನ ಗಾಯಕನ ಮೇಲೆ ನಾ ಡ್ರೈವರ್ ನನ್ನ ಲವರ್ ಎಂಬ ಹಾಡಿನ ಗಾಯಕನಿಂದ ಮಾರಣಾಂತಿಕ ಹಲ್ಲೆ! ನಿಪ್ಪಾಣಿ ಮುದೋಳ ರಾಜ್ಯ ಹೆದ್ದಾರಿ ಮೇಲೆ ತಡರಾತ್ರಿ ಖ್ಯಾತ ಜಾನಪದ ಗಾಯಕ ಪರಸು ಕೂಲೂರ ಹತ್ಯೆಗೆ ಸಿನಿಮಿಯ ರೀತಿಯಲ್ಲಿ ಹಾಕಿದ್ರಾ ಸ್ಕೆಚ್.? ಹೌದು ರಾಯಬಾಗ ತಾಲೂಕಿನ ಮಂಟೂರ ಗ್ರಾಮದಲ್ಲಿ ಬೀರೇಶ್ವರ ಜಾತ್ರಾ ನಿಮಿತ್ಯ ಜಾನಪದ,ಚಿತ್ರ ರಸಮಂಜರಿ(ಆರ್ಕೆಸ್ಟ್ರಾ) ಕಾರ್ಯಕ್ರಮ ಒಂದನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಖ್ಯಾತ ಜಾನಪದ ಗಾಯಕ ಪರಶು ಕೊಲುರ ಹಾಗೂ ತಂಡ ಆಗಮಿಸಿತ್ತು. ಪರಶು ಕೋಲೂರ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದನ್ನು ಮೊದಲೇ ತಿಳಿದ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕಾರ್ಯಕ್ರಮ ಮುಗಿಸಿ ಊರಿಗೆ ಹೊರಡುವ ಸಮಯದಲ್ಲಿ ಮಹಾಲಿಂಗಪುರ ಚಿಕ್ಕೋಡಿಯ ಮುಖ್ಯರಸ್ತೆಯಲ್ಲಿ ಬರುವ ರೇಷ್ಮೆ ಫಾರ್ಮ್ ಹತ್ತಿರ ಪರಸು ಕೊಲೂರ ಕಾರನ್ನ ಬುಲೆರೋ ಕಾರೊಂದು ಹಿಂಬಾಲಿಸಿ ಬಂದು ಪರಸು ಕೊಲುರ ಕಾರನ್ನು ತೆಗ್ಗಿಗೆ ತಳ್ಳಿ ಕಾರಿನಲ್ಲಿದ್ದ ಓರ್ವ ಗಾಯಕಿ ಹೆಣ್ಣುಮಗಳನ್ನು ಸೇರಿ ಒಟ್ಟು ನಾಲ್ಕು ಜನರನ್ನು ದುಷ್ಕರ್ಮಿಗಳು ಮನಬಂದಂತೆ ತಳಿಸಿ ಪರಾರಿಯಾಗಿರುತ್ತಾರೆ.…

Read More

ದೊಡ್ಡಬಳ್ಳಾಪುರ: ನಗರದ 6 ನೇ ವಾರ್ಡ್ ನ ನಗರಸಭೆ ಸದಸ್ಯ ಮುನಿರಾಜ್ ಚಿಕ್ಕಪ್ಪಿ ಅವರ ಗಡಿಪಾರು ವಿರೋಧಿಸಿ ವಾರ್ಡ್ ನ ಜನತೆ ಪ್ರತಿಭಟನೆ ನಡೆಸಿದರು. ಕಳೆದು ತಿಂಗಳಿನಿಂದ ವಾರ್ಡ್ ನ ಸದಸ್ಯರು ಮುತ್ತೂರು ಗ್ರಾಮದತ್ತ ಸುಳಿದಿಲ್ಲ, ಗಡಿಪಾರಿನ ವಿಚಾರ ಪತ್ರಿಕೆಗಳಲ್ಲಿ ಬಂದ ಮೇಲೆ ತಿಳಿದಿದ್ದೂ ಜೂಜಾಡುವುದು ಗಡಿಪಾರು ಮಾಡುವಷ್ಟು ದೊಡ್ಡ ಅಪರಾಧವೇ? ನ್ಯಾಯಾಲಯವೇ ಜೂಜನ್ನು ಮನರಂಜನೆಯ ಆಟವೆಂದು ಹೇಳಿರುವಾಗ ಪೊಲೀಸರು ಏಕಾಏಕಿ ಚಿಕ್ಕಪ್ಪಿಯನ್ನು ಗಡಿಪಾರು ಮಾಡಿರುವುದು ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಸದಸ್ಯರಾದ ಮೇಲೆ ಕಳೆದ ಎರಡು ವರ್ಷಗಳಿಂದ ವಾರ್ಡ್ ನ ಅಭಿವೃದ್ದಿಗೆ ಶ್ರಮಿಸಿದ್ದಾರೆ, ಅಸಹಾಯಕರಿಗೆ ನೆರವಾಗಿದ್ದಾರೆ, ಕ್ರೀಡಾಕೂಟ ಗಳನ್ನು ಆಯೋಜಿಸಿ ಯುವಕರಿಗೆ ಉತ್ತೇಜನ ನೀಡಿದ್ದಾರೆ ಇಂಥವರನ್ನು ಕ್ಷುಲ್ಲಕ ಕಾರಣಕ್ಕೆ ಖಂಡನೀಯ, ಚುನಾವಣೆ ಮುಗಿಯುವುದರ ಒಳಗೆ ಅವರನ್ನು ವಾಪಾಸ್ ಕರೆಸಬೇಕು ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದರು. ಗುರುವಾರ ಸುರಿದ ಬಾರಿ ಮಳೆಗೆ ಬೀದಿ ದೀಪಗಳು ಕೆಟ್ಟಿವೆ, ಒಳಚರಂಡಿಗಳು ಉಕ್ಕಿ ಹರಿದಿದೆ, ಸಮಸ್ಯೆಕುರಿತು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೇ ನಿಮ್ಮ ವಾರ್ಡ್ ನ…

Read More

ಬಾಗಲಕೋಟೆ : ‘ಸಮಾಜದಲ್ಲಿನ ಜಾತಿ ತಾರತಮ್ಯ, ಶೋಷಣೆ, ದಬ್ಬಾಳಿಕೆ, ಕಂದಾಚಾರಗಳನ್ನು ಕಂಡ ಬಸವಣ್ಣನವರು ಇದರ ಬಗ್ಗೆ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡು, ಯಾರಿಗೂ ಹೆದರದೇ ತಮ್ಮ ಮನಸ್ಸಿನಲ್ಲಿ ಬಂದ ಸತ್ಯವನ್ನು ಸಮಾಜಕ್ಕೆ ತಿಳಿಸಿದರು. ಅದೇ ಸತ್ಯದ ಮಾರ್ಗದಲ್ಲಿ ನಡೆಯುವ ಮೂಲಕ ಬಸವಣ್ಣನವರು ಇಡೀ ದೇಶ ಹಾಗೂ ಸಮಾಜಕ್ಕೆ ಬೆಳಕಾಗಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Congress Leader Rahul Gandhi ) ಅವರು ಬಸವಣ್ಣನ ಗುಣಗಾನ ಮಾಡಿದರು. ಬಸವ ಜಯಂತಿ ( Basavara Jayanthi ) ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಭಾಗವಹಿಸಿ ಬಸವಣ್ಣನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ವಿವಿಧ ಸ್ವಾಮೀಜಿಗಳು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು. ಬಸವಣ್ಣನವರ ಜಯಂತಿ ದಿನ ನಾನು ಇಲ್ಲಿಗೆ ಬಂದಿರುವುದು ನನಗೆ ಬಹಳ…

Read More

ರಾಮನಗರ: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಆರ್​.ಅಶೋಕ್ (Ashok) ಅವರು ಪ್ರಚಾರ ಆರಂಭಿಸಿದ್ದಾರೆ. ಕನಕಪುರ(kanakapura) ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕನಕಪುರದಲ್ಲಿ ಸ್ಪರ್ಧೆ ಮಾಡು ಎಂದು ಮೋದಿ ಕಳುಹಿಸಿದ್ದಾರೆ. ಇಡೀ ಕನಕಪುರ ಕ್ಷೇತ್ರದ ಜನರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅಶೋಕ್​ ನಮ್ಮವನು ಎಂದು ಕ್ಷೇತ್ರದ ಜನ ಮಾತನಾಡುತ್ತಿದ್ದಾರೆ. ‘ಕೈ’ ನಾಯಕ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆಯಾಗಿದೆ. ರಾಹುಲ್ ಗಾಂಧಿ ಬೀದಿಗೆ ಬಂದಿದ್ದಾರೆ, ಮನೆ ಖಾಲಿ ಮಾಡಿಸಿದ್ದಾರೆ. ರಾಹುಲ್ ಗಾಂಧಿಗೆ ಆದ ಸ್ಥಿತಿ ರಾಜ್ಯದಲ್ಲಿ ಕಾಂಗ್ರೆಸ್​​ಗೆ ಬರಲಿದೆ. ಕೇಂದ್ರ ಕೊಟ್ಟ ಅನುದಾನದಲ್ಲಿ ಕನಕಪುರ ಕ್ಷೇತ್ರ ಅಭಿವೃದ್ಧಿ ಆಗಿದೆ ಎಂದು ಆರ್​.ಅಶೋಕ್ ಪ್ರಚಾರ ಮಾಡಿದರು.

Read More

ಬೆಂಗಳೂರು: ಒಸಿಐ ಮಾನ್ಯತೆ ರದ್ದು ಹಿನ್ನೆಲೆಯಲ್ಲಿ ಗಡೀಪಾರು ಭೀತಿಯಲ್ಲಿದ್ದ ನಟ ಚೇತನ್‍ಗೆ (Chetan) ಹೈಕೋರ್ಟ್‍ನಿಂದ (High Court) ಷರತ್ತುಬದ್ಧ ರಿಲೀಫ್ ದೊರೆತಿದೆ. ನ್ಯಾ. ಎಂ ನಾಗಪ್ರಸನ್ನರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ನಟ ಚೇತನ್‍ಗೆ 2018ರಲ್ಲಿ ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ನೀಡಲಾಗಿತ್ತು. ಆದರೆ ಚೇತನ್ ಮೇಲೆ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಹಾಗೂ ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central Government) ನೋಟಿಸ್ ನೀಡಿ ಉತ್ತರ ಪಡೆದಿತ್ತು. ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಸಿಐ ಕಾರ್ಡ್ ರದ್ದುಪಡಿಸಿತ್ತು. ಆದರೆ ಚೇತನ್ ಪರ ವಕೀಲರು, ಚೇತನ್ ವಾದ ಆಲಿಸದೇ ಕ್ರಮ ಕೈಗೊಂಡಿರುವುದು ಸರಿಯಲ್ಲವೆಂದು ವಾದಿಸಿದ್ದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಚೇತನ್ ನ್ಯಾಯಾಂಗದ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ತಡೆ ನೀಡದಂತೆ ಕೇಂದ್ರ, ರಾಜ್ಯ ಸರ್ಕಾರದ ವಕೀಲರಾದ…

Read More