ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, (DK Shivakumar)ಟೆಂಪಲ್ ರನ್ ಆರಂಭಿಸಿದ್ದಾರೆ. ಸಾಲು ಸಾಲು ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನಿನ್ನೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದ್ದ ಡಿ.ಕೆ. ಶಿವಕುಮಾರ್ ಹಾಗೂ ಕುಟುಂಬ ಇಂದು ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ತೆರಳಿದ್ದು, ಚಂಡಿಕಾಯಾಗ ನೆರವೇರಿಸಿದ್ದಾರೆ. 15ಕ್ಕೂ ಹೆಚ್ಚು ಪುರೋಹಿತರ ನೇತೃತ್ವದಲ್ಲಿ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಡಿ.ಕೆ. ಶಿವಕುಮಾರ್ ದಂಪತಿ ಚಂಡಿಕಾಯಾಗ ಮಾಡಿದ್ದಾರೆ. ಉಡುಪಿ ಜ್ಯೋತಿಷಿ ಸಿ.ಎಸ್. ದ್ವಾರಕಾನಾಥ್ ಸಲಹೆಯಂತೆ ಡಿ.ಕೆ. ಶಿವಕುಮಾರ್ ನಿನ್ನೆ ಸಂಜೆ ಚಂಡಿಕಾಯಾಗದ ಸಂಕಲ್ಪ ಮಾಡಿದ್ದರು. ಇಂದು ಚಂಡಿಕಾಯಾಗ ನೆರವೇರಿಸಿದ್ದು, ಶತ್ರು ನಾಶ, ಅಧಿಕಾರ, ಇಷ್ಟಾರ್ಥ ಸಿದ್ಧಿಗಾಗಿ ಈ ಯಾಗ ನಡೆಸಲಾಗುತ್ತದೆ.
Author: Prajatv Kannada
ಮೈಸೂರು: ವರುಣಾ ವಿಧಾನಸಭಾ ಚುನಾವಣಾ(Assembly Election 2023) ಅಖಾಡ ರಂಗೇರಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಸಚಿವ ವಿ.ಸೋಮಣ್ಣ(V. Somanna )ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಸಚಿವ ವಿ.ಸೋಮಣ್ಣ ಪ್ರಚಾರಕ್ಕೆಂದು ವರುಣಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಂತೆ ಸಿದ್ದರಾಮಯ್ಯ ಬೆಂಬಲಿಗರು, ಅಭಿಮಾನಿಗಳು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ವರುಣಾ ತಾಲೂಕಿನಲ್ಲಿ ವಿ. ಸೋಮಣ್ಣ ಆಗಮಿಸುತ್ತಿದ್ದಂತೆ ಸೋಮಣ್ಣ ಕಾರನ್ನು ಅಡ್ಡಗಟ್ಟಿ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಪರ ಜಯ ಘೋಷಗಳನ್ನು ಕೂಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಬೆಂಬಲಿಗರ ವರ್ತನೆಗೆ ಸಚಿವ ವಿ. ಸೋಮಣ್ಣ ಕೆಲ ಕಾಲ ಕಂಗಾಲಾಗಿದ್ದಾರೆ. ಕಾರಿಗೆ ಮುತ್ತಿಗೆ ಹಾಕಿ ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಆಗಮಿಸಿ, ಜನರನ್ನು ಚದುರಿಸಿದ್ದಾರೆ.
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವ ಭವನದ ಬಳಿ ಕಾಂಗ್ರೆಸ್ ನಾಯಕ (Rahul Gandhi)ರಾಹುಲ್ ಗಾಂಧಿಯವರ ಹೆಲಿಕಾಪ್ಟರ್ ಪರಿಶೀಲನೆ ಮಾಡಲಾಗಿದೆ. ಹುಬ್ಬಳ್ಳಿಯಿಂದ(Rahul Gandhi) ರಾಹುಲ್ ಗಾಂಧಿ ಹೆಲಿಕಾಪ್ಟರ್ ನಲ್ಲಿ ಕೂಡಲಸಂಗಮಕ್ಕೆ ಬಂದ ವೇಳೆ ಪರಿಶೀಲನೆ ನಡೆಸಲಾಗಿದೆ. ಬಸವ ಜಯಂತಿ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಕೂಡಲ ಸಂಗಮಕ್ಕೆ ಭೇಟಿ ನೀಡಿದ್ದಾರೆ. ಕೂಡಲಸಂಗಮದ ಬಸವಭವನದ ಬಳಿ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ತಪಾಸಣೆ ನಡೆಸಲಾಗಿದೆ.(Election Officers)ಚುನಾವಣಾಧಿಕಾರಿಗಳು ತಪಾಸಣೆ ಮಾಡಿ ಫೋಟೋ, ವಿಡಿಯೋ ಮಾಡಿಕೊಂಡಿದ್ದಾರೆ.
ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆ (Shashikala Jolle)ನಿಪ್ಪಾಣಿ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ೨ ಸಾವಿರ ಕೋಟಿಗೂ ಅಧಿಕ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು, ನಮ್ಮ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿಯನ್ನು ಹೊಂದಿದ್ದೇನೆ ಎಂದು ಸಚಿವೆ ಹಾಗೂ ನಿಪ್ಪಾಣಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಶಶಿಕಲಾ ಜೊಲ್ಲೆ ಹೇಳಿದರು. ಇಂದು ಕ್ಷೇತ್ರದ ಅಪ್ಪಾಚಿವಾಡಿ, ಮತ್ತಿವಾಡೆ, ಸುಳಗಾಂವ, ಹದನಾಳ ಗ್ರಾಮಕ್ಕೆ ತೆರಳಿ ಬೂತ್ ಅಧ್ಯಕ್ಷರು, ಪೇಜ ಪ್ರಮುಖರು, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿ ಮಾತನಾಡಿದರು. ನಿಪ್ಪಾಣಿ ಮತಕ್ಷೇತ್ರದಲ್ಲಿ ೨ ಸಾವಿರ ಕೋಟಿಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರಸ್ತೆ, ನೀರು, ಚರಂಡಿ, ನೂರಕ್ಕು ಅಧಿಕ ಅಂಗನವಾಡಿ, ರೈತರಿಗೆ ಗಂಗಾ ಕಲ್ಯಾಣ ಯೋಜನೆ ಮೂಲಕ ಕೃಷಿಗೆ ನೀರಾವರಿ ಸೌಲಭ್ಯ, ಗ್ರಾಮೀಣ ಜನರ ಸಭೆ ಸಮಾರಂಭಗಳಿಗೆ ಸಮುದಾಯ ಭವನಗಳ ನಿರ್ಮಾಣ ಮಾಡಲಾಗಿದೆ. ನಿಪ್ಪಾಣಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಹಂಬಲವಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bangalore)ಕಳ್ಳತನ ಮಾಡಿ ತಪ್ಪಸಿಕೊಳ್ಳಲು ಇದೀಗ (Robbary)ಪುಂಡರ ನೂತನ ಪ್ಲ್ಯಾನ್ ಮಾಡಿದ್ದಾರೆ. ನಗರದಲ್ಲಿ ಚೈನ್ ಸ್ನ್ಯಾಚ್, ರಾಬರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳರು, ಇದೀಗ ಹೊಸ ಪ್ಲ್ಯಾನ್ ಮಾಡಿದ್ದಾರೆ. ಕಳ್ಳತನ ಮಾಡಿ ಹೋಗುವಾಗ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗುವ ಸಾಧ್ಯತೆ ಇರುತ್ತೆ. ಇದರಿಂದ ಕಳ್ಳರು ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರೆ. ಹೀಗಾಗಿ ಇದನ್ನು ತಪ್ಪಿಸಲು ಕಳ್ಳರು, ಹೊಸ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಕಳ್ಳತನ ಮಾಡುವ ವಾಹನಗಳ ನಂಬರ್ ಪ್ಲೇಟ್ ಗಳಿಗೆ ಎಲೆಗಳನ್ನು ಮುಚ್ಚುವ ಮೂಲಕ,, ನಂಬರ್ ಕಾಣಿಸದ ಹಾಗೆ ಪ್ಲ್ಯಾನ್ ಮಾಡುತ್ತಿದ್ದಾರೆ. ಮೊದಲು ನಂಬರ್ ಪ್ಲೇಟ್ ಗೆ ಎಲೆ ಮುಚ್ಚಿ, ನಂತರ ಕಳ್ಳತನಕ್ಕೆ ಹೋಗುತ್ತಿದ್ದಾರೆ. ನಗರದ ಹೆಚ್ ಆರ್ ಬಿ ಆರ್ ಲೇಔಟ್, ಕೆ.ಜಿ ಹಳ್ಳಿ ಭಾಗದಲ್ಲಿ ಕಿರಾತಕರು, ಈ ಪ್ಲ್ಯಾನ್ ಮಾಡಿದ್ದಾರೆ. ಸದ್ಯ ಇಂತಹ ಕಿರಾತಕರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ
ಬೆಂಗಳೂರು: ಇಬ್ಬರು IPS ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ (State government) ಆದೇಶ ಹೊರಡಿಸಿದೆ. 2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಲ್ಲೇ ರಾಜ್ಯ ಸರ್ಕಾರ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬೆಂಗಳೂರಿನಲ್ಲಿ ಆದೇಶ ಹೊರಡಿಸಿದೆ. ಬೆಂಗಳೂರಿನ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಹಾಗೂ ದಾವಣಗೆರೆ ಎಸ್.ಪಿ. ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ವೈಟ್ ಫೀಲ್ಡ್ ವಿಭಾಗಕ್ಕೆ ಧರ್ಮೇಂದ್ರ ಕುಮಾರ್ ಮೀನಾ ನೂತನ ಡಿಸಿಪಿಯಾಗಿ ನೇಮಕಗೊಂಡಿದ್ದಾರೆ. ದಾವಣಗೆರೆ ಎಸ್ ಪಿಯಾಗಿ ಅರುಣ್ ಕೆ ನೇಮಕಗೊಂಡಿದ್ದಾರೆ. 2023 ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಲ್ಯ ಬಾಕಿ ಇದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ಸರ್ಕಾರದಿಂದ ಅಧಿಕಾರಿಗಳ ವರ್ಗಾವಣೆ ಕಾರ್ಯ ನಡೆಯುತ್ತಿದೆ.
ಬೆಂಗಳೂರು: ಲಿಂಗಾಯತ ಸಮಾಜದ ಆತ್ಮವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತುಳಿದಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (Bommai)ಅವರು ಆರೋಪಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಆರ್ ಟಿ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಲಿಂಗಾಯತ ಸಿಎಂಗಳು ಭ್ರಷ್ಟರು ಎಂದ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ. ಮಾಜಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಅವರೊಬ್ಬರು ಹಿರಿಯ ನಾಯಕರು. ಲಿಂಗಾಯತ ಸಮುದಾಯವನ್ನೇ ಭ್ರಷ್ಟ ಅನ್ನೋದು ತಪ್ಪು. ಸಿದ್ದರಾಮಯ್ಯ ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿದ್ದರಾಮಯ್ಯ ಇಡೀ ಲಿಂಗಾಯತ ಸಮಾಜದ ಆತ್ಮವನ್ನು ಕುಲುಕಿದ್ದಾರೆ ಎಂದು ಹೇಳುವ ಮೂಲಕ ಸಿದ್ದು ವಿರುದ್ಧ ಸಿಎಂ ಗರಂ ಆಗಿದ್ದಾರೆ
ಬೆಂಗಳೂರು: ಸೀರೆಗಾಗಿ ಇಬ್ಬರು ಮಹಿಳೆಯರ ನಡುವೆ ಜಗಳ(Fight) ನಡೆದಿರುವ ಘಟನೆ ರಾಜಧಾನಿ (Bangalore) ಬೆಂಗಳೂರಿನಲ್ಲಿ ನಡೆದಿದೆ. ನಗರದ ಮಲ್ಲೇಶ್ವರಂ ನ 8ನೇ ಕ್ರಾಸ್‌ನಲ್ಲಿ ಘಟನೆ ನಡೆದಿದ್ದು, ಕೆ.ಎಸ್.ಐ.ಸಿ ಹಾಕಿದ್ದ ಸೀರೆಗಳ ಡಿಸ್ಕೌಂಟ್ ಸೇಲ್ ನಲ್ಲಿ ಗಲಾಟೆ ನಡೆದಿದೆ. ಸೀರೆಗಾಗಿ ಇಬ್ಬರು ಮಹಿಳೆಯರ (Womens)ನಡುವೆ ಫೈಟ್ ನಡೆದಿದ್ದು, ಪರಸ್ಪರ ಜಡೆ ಹಿಡಿದುಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು,ಮಹಿಳೆಯರನ್ನು ಜಗಳ ಮಾಡದಂತೆ ಬುದ್ದಿ ಹೇಳಿ ಕಳಿಸಿದ್ದಾರೆ. ಮಲ್ಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಲಾಟೆ ಸಂಬಂಧ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಮಹಿಳೆಯರ ಗಲಾಟೆಯ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. SHARE.Facebook
ಮೈಸೂರು: ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವರುಣಾದಲ್ಲಿ (Varuna) ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಈಗಾಗ್ಲೆ ಲಿಂಗಾಯತ ಚೀಫ್ ಮಿನಿಸ್ಟರ್ ಇದ್ದಾರಲ್ಲಾ ಅವ್ರೇ, ಭ್ರಷ್ಟಾಚಾರ ಮಾಡಿ ರಾಜ್ಯ ಹಾಳು ಮಾಡಿರೋದು ಎಂದು ಹೇಳಿಕೆ ನೀಡಿದ್ದರು. ತಾವು ಮಾತನಾಡಿದ್ದಂತಹ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತೆ ಎಂಬುದನ್ನು ಅರಿತ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಲಿಂಗಾಯತರೆಲ್ಲ (Lingayat Community) ಭ್ರಷ್ಟರೆಂದು ನಾನು ಹೇಳಿದ್ದೇನೆಂದು ತೋರಿಸಲು ಮಾಡುತ್ತಿರುವ ಪ್ರಯತ್ನ ರಾಜಕೀಯ ದುರುದ್ದೇಶದಿಂದ ಕೂಡಿದ್ದು. ಆ ರೀತಿ ನಾನು ಹೇಳಿಯೇ ಇಲ್ಲ ಎಂದಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ನಾನು ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಸೀಮಿತವಾಗಿ ಭ್ರಷ್ಟ ಎಂದು ಹೇಳಿದ್ದೆ, ಲಿಂಗಾಯತರು ಭ್ರಷ್ಟರು ಎಂದು ಎಲ್ಲಿಯೂ ಹೇಳಿಲ್ಲ. ಇದನ್ನು ವರದಿ ಮಾಡಿರುವುದು ಸರಿಯಾಗಿಲ್ಲ ಅಂತ ಹೇಳಿದ್ದಾರೆ. ಲಿಂಗಾಯತರಲ್ಲಿ ಬಹಳಷ್ಟು ಮಂದಿ ಮುಖ್ಯಮಂತ್ರಿಗಳು ಅತ್ಯಂತ ಪ್ರಾಮಾಣಿಕರಿದ್ದರು. ವೀರೇಂದ್ರ ಪಾಟೀಲರು, ನಿಜಲಿಂಗಪ್ಪನವರು,…
ಶಿವಮೊಗ್ಗ: ಸಿದ್ದರಾಮಯ್ಯ (siddaramaiah), ಡಿಕೆಶಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ (BJP) ನಾಯಕರು ಯಾರು ಜಾತಿ ರಾಜಕಾರಣ ಮಾಡಲ್ಲ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಬಗ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಲಿಂಗಾಯತ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಮಾಡಿದ ದ್ರೋಹ ಯಾರು ಮಾಡಿಲ್ಲ. ಲಿಂಗಾಯತರಿಗೆ ಮಾಡಿದ ದ್ರೋಹದಿಂದಾಗಿ ಅವರ ಸರ್ಕಾರ ಕಳೆದುಕೊಂಡರು. ಸಿದ್ದರಾಮಯ್ಯ ಅವರು ಮಾಡಿದ ತಪ್ಪನ್ನು ವರುಣದಲ್ಲಿ ಈ ಬಾರಿ ಅನುಭವಿಸುತ್ತಾರೆ. ರಾಜ್ಯದ ಜನ ಜಾತಿ ರಾಜಕಾರಣಕ್ಕೆ ಬೆಂಬಲಿಸಲ್ಲ. ರಾಷ್ಟ್ರೀಯ ವಿಚಾರಕ್ಕೆ ಬೆಂಬಲ ಕೊಡ್ತಾರೆ. ಕಾಂಗ್ರೆಸ್‍ನವರ (Congress) ಪಾಪ ತುಂಬಿದೆ. ಈ ಬಾರಿ ಸಿದ್ದರಾಮಯ್ಯ, ಡಿಕೆಶಿ ಇಬ್ಬರು ಸೋಲುತ್ತಾರೆ ಎಂದು ಹೇಳಿದರು. ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಮಾತನಾಡಬಹುದು. ದುರಂಹಕಾರದಿಂದಾಗಿ ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತರು. ಅದೇಗೋ ಬಾದಾಮಿಯಲ್ಲಿ ನಿಂತು ಗೆದ್ದರು. ಈ ಬಾರಿ ಒಂದೇ ಕಡೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ವರುಣ ಜನ…