ಆಮಿರ್ ಖಾನ್ ನಿರ್ಮಾಣದ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಈ ಚಿತ್ರ ಒಟಿಟಿಗೆ ಬಂದ ಬಳಿಕ ಜನರು ಮತ್ತಷ್ಟು ಮೆಚ್ಚಿಕೊಂಡಿದ್ದರು. ಈ ಸಿನಿಮಾ ‘ಆಸ್ಕರ್ 2025’ ರೇಸ್ನಲ್ಲಿ ಇದ್ದು ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಈಗ ಆಸ್ಕರ್ ರೇಸ್ನಲ್ಲಿ ಇರುವ ಕಾರಣಕ್ಕೆ ಸಿನಿಮಾದ ಟೈಟಲ್ ಬದಲಿಸಲು ಚಿತ್ರ ತಂಡ ಮುಂದಾಗಿದೆ. ಆಸ್ಕರ್ ಮಟ್ಟದಲ್ಲಿ ಸಿನಿಮಾ ಕ್ಯಾಂಪೇನ್ ಮಾಡಲು ಈ ಚಿತ್ರಕ್ಕೆ ‘ಲಾಸ್ಟ್ ಲೇಡಿಸ್’ ಎಂದು ಹೆಸರಿಡಲಾಗಿದೆ. ಆಮಿರ್ ಖಾನ್ ಅವರ ನಿರ್ಮಾಣ ಸಂಸ್ಥೆಯಿಂದ ಈ ಬಗ್ಗೆ ಘೋಷಣೆ ಆಗಿದೆ. ‘ಲಾಸ್ಟ್ ಲೇಡಿಸ್’ ಎಂದು ಟೈಟಲ್ ಬದಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ‘ಕಾಯುವಿಕೆ ಪೂರ್ಣಗೊಂಡಿದೆ. ಲಾಸ್ಟ್ ಲೇಡಿಸ್ ಚಿತ್ರದ ಅಧಿಕೃತ ಪೋಸ್ಟರ್. ಫೂಲ್ ಹಾಗೂ ಜಯಾಳ ಪ್ರಯಾಣದ ಬಗ್ಗೆ ಈ ಸಿನಿಮಾ ಹೇಳುತ್ತದೆ’ ಎಂದು ಆಮಿರ್ ಖಾನ್ ಪ್ರೊಡಕ್ಷನ್ಸ್ ಹೇಳಿಕೊಂಡಿದೆ. ನ್ಯೂಯಾರ್ಕ್ನಲ್ಲಿ ‘ಲಾಸ್ಟ್ ಲೇಡಿಸ್’ ಚಿತ್ರದ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು.…
Author: Prajatv Kannada
ರಾಮನಗರ: ಕನಕಪುರ ತಾಲ್ಲೂಕಿನ ಹೊರ ವರ್ತುಲ ರಸ್ತೆಯ ಕಲ್ಲಹಳ್ಳಿ ಗ್ರಾಮದಲ್ಲಿ ಆಟೋ ಮತ್ತು ಕಾರು ನಡುವೆ ಡಿಕ್ಕಿಯಾಗಿ ಓರ್ವ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿ, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಕಾರು ಮತ್ತು ಮೈಸೂರು ಮಾರ್ಗವಾಗಿ ಚಲಿಸುತ್ತಿದ್ದ ಆಟೋ ಮುಖಾಮುಖಿ ಡಿಕ್ಕಿಯಾಗಿದೆ. https://youtu.be/nmWCLy3aJZc?si=URTCtsfoms-3dDXs ಡಿಕ್ಕಿ ಹೊಡೆದ ರಭಸಕ್ಕೆ ಆಟೋದಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಇನ್ನೂ ಸಾವನ್ನಪ್ಪಿದ ಮೃತ ದೇಹವನ್ನು ಹಾರೋಹಳ್ಳಿಯ ದಯಾನಂದ ಸಾಗರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಗಾಯಾಳುಗಳನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕನಕಪುರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಧಾರವಾಡ: ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣದ 97 ಮಂದಿಗೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠವು ಜಾಮೀನು https://youtu.be/EAs-WpKcVsA?si=TZpd3eUq_3gNqMI6 ಮಂಜೂರು ಮಾಡಿದೆ. ಕೊಪ್ಪಳ ಜಿಲ್ಲಾ ನ್ಯಾಯಾಲಯವು 97 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಜೈಲು ಪಾಲಾಗಿದ್ದವರು ಹೈಕೋರ್ಟ್ ಮೊರೆ ಹೋಗಿದ್ದರುಈ ಕುರಿತು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠವು 98 ಅಪರಾಧಿಗಳ ಪೈಕಿ 97 ಜನರಿಗೆ ಜಾಮೀನು ಮುಂಜೂರು ಮಾಡಿ ಆದೇಶ ಹೊರಡಿಸಿದೆ. ಜಾಮೀನು ಅರ್ಜಿ ಹಾಕದ ಎ1 ಮಂಜುನಾಥ ಹೊರತು ಪಡಿಸಿ ಉಳಿದೆಲ್ಲರಿಗೂ ಜಾಮೀನು ಮುಂಜೂರು ಮಾಡಿದೆ
ಬೆಂಗಳೂರು: ಅಧಿವೇಶನದ ವೇಳೆಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 16 ತಿಂಗಳಾಗಿದ್ದು, 16 ಹಗರಣಗಳಲ್ಲಿ ಭಾಗಿಯಾಗಿದೆ. https://youtu.be/scdez5x1-fo?si=pcGmqyJrGblbtyVm ಇವೆಲ್ಲವುಗಳ ಬಗ್ಗೆ ಚರ್ಚಿಸಲು ಬಿಜೆಪಿ ನಿರ್ಧರಿಸಿದೆ. ಈ ಹಿಂದಿನ ಅಧಿವೇಶನದಲ್ಲಿ ಒಂದು ವಿಕೆಟ್ ಉರುಳಿತ್ತು. ಮುಂಬರುವ ಅಧಿವೇಶನದ ವೇಳೆಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ. ಜತೆಗೆ ಸಂಪುಟದ ಇನ್ನಿಬ್ಬರು ಸಚಿವರ ವಿಕೆಟ್‌ಗಳೂ ಉರುಳಲಿವೆ,” ಎಂದು ಭವಿಷ್ಯ ನುಡಿದರು. ದಿನೇ ದಿನೆ ರಾಜ್ಯ ಸರಕಾರದ ಒಂದೊಂದೇ ಹಗರಣಗಳು ಹೊರಗೆ ಬರುತ್ತಿವೆ. ಈ ಹಗರಣಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ದುರುದ್ದೇಶದಿಂದ ಹಿಂದಿನ ಸರಕಾರದ ಅವಧಿಯ ಅಭಿವೃದ್ಧಿ ಕಾರ್ಯ, ಯೋಜನೆಗಳ ತನಿಖೆ ನಡೆಸುವುದಾಗಿ ಸರಕಾರ ಹೇಳುತ್ತಿದೆ. ಈಗ ಕೋವಿಡ್ ಅವಧಿಯಲ್ಲಾದ ಅಕ್ರಮಗಳ ತನಿಖೆ ಮಾಡುವುದಾಗಿ ಹಾಗೂ ಕಲ್ಯಾಣ ಕರ್ನಾಟಕ ಯೋಜನೆ ತನಿಖೆ ನಡೆಸುವುದಾಗಿ ಸರಕಾರ ಹೇಳಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದ ಕಾಂಗ್ರೆಸ್…
ಬೆಂಗಳೂರು:- ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ಇ ಖಾತಾವು ಬೆಂಗಳೂರು ಒನ್ ಕೇಂದ್ರದಲ್ಲಿ ದೊರೆಯಲಿದೆ. ಬಿಬಿಎಂಪಿ ಕಚೇರಿಗಳಿಗೆ ಅಲೆದಾಡುವುದರ ಬದಲಿಗೆ ಸಮೀಪದ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ನಿಗದಿತ ಶುಲ್ಕ ನೀಡಿ ಇ ಖಾತಾ ಪಡೆಯಬಹುದು. https://youtu.be/-n4L8j0nUbU?si=7kavZu6L5dwNnsWv ಇ-ಖಾತಾ ಪಡೆಯಲು ಶುಲ್ಕ ಎಷ್ಟು? ಬೆಂಗಳೂರು ಒನ್ ಕೇಂದ್ರದಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕು. ಬಿಬಿಎಂಪಿಗೆ 125 ರೂ.(ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಮಾತ್ರ) ಪಾವತಿಸಬೇಕು. ಯಾವೆಲ್ಲ ದಾಖಲೆ ಪತ್ರಗಳು ಬೇಕು ಬೆಂಗಳೂರು ಒನ್‌ನಲ್ಲಿ ಇಖಾತೆ ಪಡೆಯಲು ದಾಖಲೆ ಪತ್ರಗಳನ್ನು ತೋರಿಸಿದರೆ ಸಾಕು, ಬೆಂಗಳೂರು ಒನ್ ಕೇಂದ್ರಗಳಲ್ಲಿ ಇಟ್ಟುಕೊಳ್ಳಲು ನೀಡಬಾರದು. ಕೆಳಗಿನ ದಾಖಲೆಗಳ ಪ್ರತಿಯೊಂದಿಗೆ ನೀವು ಬೆಂಗಳೂರು ಒನ್ ಕೇಂದ್ರವನ್ನು ಸಂಪರ್ಕಿಸಬೇಕು(ಅವುಗಳಲ್ಲಿ ಕೆಲವನ್ನು ತೋರಿಸಲು ಮತ್ತು ಸ್ಕ್ಯಾನ್ ಮಾಡಲು ಮಾತ್ರ ಅಲ್ಲಿ ಸಲ್ಲಿಸುವ/ನೀಡುವ ಅಗತ್ಯವಿಲ್ಲ) ಎಂದು ಬಿಬಿಎಂಪಿ ಮಾಹಿತಿ ನೀಡಿದೆ. (1) ನಿಮ್ಮ ಆಸ್ತಿ ತೆರಿಗೆ ರಶೀದಿ (2) ನಿಮ್ಮ ಮಾರಾಟ ಅಥವಾ ನೋಂದಾಯಿತ…
ಬೆಂಗಳೂರು: ಕರ್ನಾಟಕದ ಅಯ್ಯಪ್ಪಸ್ವಾಮಿ ಭಕ್ತರಿಗೆ KSRTC ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿಯಿಂದ ಶಬರಿಮಲೆಗೆ ವೋಲ್ವೋ ಬಸ್ ಸಂಚರಿಸಲಿದೆ. ಇದೇ ನವೆಂಬರ್ 29ರಿಂದ ಬೆಂಗಳೂರಿನಿಂದ ಶಬರಿಮಲೆಗೆ ಬಸ್ ಸಂಚಾರ ಪ್ರಾರಂಭವಾಗಲಿದೆ. https://youtu.be/-n4L8j0nUbU?si=HfnYC2qq9clw-XWM ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತಾದಿಗಳು ತೆರಳುವ ಸೀಸನ್,ಇದಾಗಿದ್ದರಿಂದ ಮಾಲಾಧಾರಿಗಳ ಪ್ರಯಾಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಸಂಚರಿಸಲಿದೆ. ಶಾಂತಿನಗರದಿಂದ ಶಬರಿಮಲೆ ನೀಲಕ್ಕಲ್‌ಗೆ 1,750 ರೂ. ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ ನಿಗದಿ ಮಾಡಿದೆ. ಶಾಂತಿನಗರದಿಂದ ನೀಲಕ್ಕಲ್ ಹಾಗೂ ನೀಲಕ್ಕಲ್‌ನಿಂದ ಶಾಂತಿನಗರಕ್ಕೆ ವೋಲ್ವೋ ಬಸ್ ಸಂಚಾರ ಮಾಡಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಬೆಂಗಳೂರು:-ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ ಆಗಲಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿಯಾಗಿ ಇಳಿದಿವೆ. ಇಂದು ಬುಧವಾರ ಚಿನ್ನದ ಬೆಲೆ 7,045 ರೂಗೆ ಕುಸಿದಿದೆ. ಅಪರಂಜಿ ಚಿನ್ನದ ಬೆಲೆ 7,685 ರೂಗೆ ಇಳಿದಿದೆ. ಕಳೆದ ಎರಡು ಮೂರು ದಿನದಲ್ಲಿ ಚಿನ್ನದ ಬೆಲೆ ಹೆಚ್ಚೂಕಡಿಮೆ 200 ರೂಗಿಂತಲೂ ಹೆಚ್ಚು ಕುಸಿತ ಕಂಡಿದೆ. ಬೆಳ್ಳಿ ಬೆಲೆಯೂ ಕೂಡ ಬೆಂಗಳೂರು ಮುಂತಾದೆಡೆ 91 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 70,450 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 76,850 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 70,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,100 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 13ಕ್ಕೆ) 22 ಕ್ಯಾರಟ್ನ…
ಕೆಲವರು ನಾಲ್ಕು ಜನರ ಮುಂದೆ, ಮಾತನಾಡಲು ಶರುಮಾಡಿದರೆ ಸಾಕು, ಅವರ ಬಾಯಿ ಯಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಅವರಿಗೆ ಇರಿಸು-ಮುರಿಸು ಆಗು ವುದರ ಜೊತೆಗೆ, ಅಲ್ಲಿ ನೆರೆದಿರುವ ಇತರರಿಗೂ ಕೂಡ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ಈ ಸಮಸ್ಯೆ ಇರುವವರು, ಸಾಮಾನ್ಯವಾಗಿ ಬಾಯಿತೆರೆದು ಮಾತನಾಡಲು ಸಹ ಅವರು ಹಿಂಜರಿಯುತ್ತಾರೆ. ಅಲ್ಲದೆ ಕೆಲವೊಮ್ಮೆ ಪಾಪ, ಇತರರ ಮುಂದೆ, ಮುಜುಗರಕ್ಕೊಳಗಾಗುವುದು ಬೇಡವೆಂದು, ಎಲ್ಲರಿಂದ ದೂರ ಇರಲು ಬಯಸುತ್ತಾರೆ. ಇದಕ್ಕೆ ಕಾರಣಗಳನ್ನು ನೋಡುವುದಾದರೆ, ಊಟದ ಬಳಿಕ ಸರಿಯಾಗಿ, ಬ್ರಷ್ ಮಾಡದೇ ಇರುವುದು, ಇಲ್ಲಾಂದರೆ ಇವರಲ್ಲಿ ಕಂಡು ಬರುವ ದಂತಕುಳಿ, ಒಸಡಿನ ಸಮಸ್ಯೆ, ಈರುಳ್ಳಿ-ಬೆಳ್ಳುಳ್ಳಿ ಸೇವನೆ, ಹೊಟ್ಟೆಯಿಂದ ಪದೇ ಪದೇ ಹುಳಿ ತೇಗು ಬರುವುದು, ಇತ್ಯಾದಿ ಸಮಸ್ಯೆಗಳು ಮೇಲ್ನೋಟಕ್ಕೆ ಕಂಡು ಬರುತ್ತದೆ. , ಹಾಗೂ ನಾಲ್ಕು ಜನರ ಮುಂದೆ, ಆಗುವ ಮುಜುಗರವನ್ನು ತಪ್ಪಿಸಲು ಯಾವ ತಂತ್ರಗಳನ್ನು ಅನುಸರಿಸಬೇಕು, ಎಂಬುನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ. ಬಾಯಿಯ ವಾಸನೆ ದೂರ ಮಾಡುವುದು ಹೇಗೆ?: ಸಿಟ್ರಿಕ್ ಆಮ್ಲ:…
ದಿನಾ ಮನೆಯನ್ನು ಗುಡಿಸಿ, ಒರೆಸಿ, ಸ್ವಚ್ಛವಾಗಿ ಇಟ್ಟುಕೊಂಡರೂ ಕೂಡ, ಜಿರಳೆ, ಸೊಳ್ಳೆ ಹಾಗೂ ಇರುವೆಗಳ ಕಾಟವನ್ನು ಮಾತ್ರ ತಡೆಯಲು ಸಾಧ್ಯವಿಲ್ಲ! ಇವು ಮೂವರೂ ಕೂಡ ಮನೆಗೆ ಕರೆಯದೇ ಬರುವ ಅತಿಥಿಗಳು! ಯಾವ ಸಮಯದಲ್ಲಿ ಹೇಗೆ ಮನೆಯೊಳಗೆ ಬಂದು ಬಿಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ! ಮನೆಯೊಳಗೆ ಬರದೇ ಇರುವ ಹಾಗೆ, ಸೊಳ್ಳೆ ಬತ್ತಿ ಹಚ್ಚಿದರೂ, ಲಕ್ಷ್ಮಣ ರೇಖೆ ಎಳೆದರೂ, ಅಥವಾ ಕೆಲವೊಂದು ರಾಸಾಯನಿಕ ಅಂಶ ಇರುವ ಸ್ಪ್ರೇ ಅನ್ನು ಮನೆಯ ಮೂಲೆ-ಮೂಲೆಗೆ ಹಾಕಿ ದರೂ ಕೂಡ, ಯಾವುದಾದರೂ ಒಂದು ಮೂಲೆಯಿಂದ, ಇವುಗಳು ಮನೆಯ ಒಳಗೆ ಎಂಟ್ರಿ ಕೊಡುತ್ತವೆ! ಅದರಲ್ಲೂ ಈ ಜಿರಳೆ ಹಾಗು ಇರುವೆಗಳ ಕಾಟ ಕೇಳುವುದೇ ಬೇಡ! ಮನೆಯ ಸದಸ್ಯರಂತೆ ಅತ್ತಿಂದಿತ್ತ ಓಡಾಡುತ್ತಲೇ ಇರುತ್ತವೆ! ಹಾಗಾದ್ರೆ ನಿಮ್ಮ ಮನೆಯಲ್ಲೂ ಇವುಗಳ ಕಾಟ ಜಾಸ್ತಿ ಆಗಿದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್, ನೀವೂ ಒಮ್ಮೆ ಟ್ರೈ ಮಾಡಿ ನೋಡಿ. ಸೀಮೆ ಎಣ್ಣೆಯನ್ನು ಬಳಕೆ ಮಾಡಿ ನಿಮ್ಮ ಅಡುಗೆಮನೆಯಲ್ಲಿ ಸಾಕಷ್ಟು ಜಿರಳೆಗಳಿದ್ದರೆ, ಸೀಮೆಎಣ್ಣೆಯನ್ನು…
ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಸಿಲುಕುತ್ತಲೆ ಇರುತ್ತಾರೆ. ಇದೀಗ ವರ್ಮಾ ಮತ್ತೊಂದು ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧ ದೂರು ದಾಖಲಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ. ವರ್ಮಾ ತಮ್ಮ ಫಿಲ್ಟರ್ ಇಲ್ಲದ ಮಾತು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ಜನಪ್ರಿಯ. ಇದೀಗ ಅದೇ ಕಾರಣಕ್ಕೆ ವರ್ಮಾ ಸಮಸ್ಯೆಗೆ ಸಿಲುಕಿದ್ದಾರೆ. ವರ್ಮಾ ಆಂಧ್ರ ಸಿಎಂ ವಿರುದ್ಧ ಮಾಡಿದ ಟ್ವೀಟ್ನಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ. ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಪಕ್ಷದ ಮುಖಂಡರೊಬ್ಬರು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಮ್ ಗೋಪಾಲ್ ವರ್ಮಾ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅವರ ಪುತ್ರ ಮತ್ತು ಸಚಿವ ನಾರಾ ಲೋಕೇಶ್ ಹಾಗೂ ಅವರ ಸೊಸೆಯ ವಿರುದ್ಧ ಮಾನಹಾನಿಕಾರಕ ಟ್ವೀಟ್ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಐಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ…