ಬೆಂಗಳೂರು- ಜೈಲಲ್ಲಿ ದರ್ಶನ್ ಗೆ ರಾಜಾಥಿತ್ಯ ನೀಡಲಾಗ್ತಿದೆ ಅಂದ ಸದ್ಯ ದರ್ಶನ್ ಅ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. https://youtu.be/vI9DnrRwJzg?si=gxr7NDAYH4fISX50 ಪರಪ್ಪನ ಅಗ್ರಹಾರದಲ್ಲಿ ದರ್ಶನ್, ವಿಲ್ಸನ್ ಗಾರ್ಡನ್ ನಾಗಹಾಗೂ ಕುಳ್ಳ ಸೀನ ಪೋಟೋ ವೈರಲ್ ಆಗ್ತಿದ್ದಂತೆ ಹಳೆ ಪೋಟೋಗಳು ವೈರಲ್ ಆಗ್ತಿವೆ. ಮೊನ್ನೆ ಕುಳ್ಳ ಸೀನ ಬರ್ತಡೇ ಫೋಟೋ ವೈರಲ್ ಆಗಿದ್ದು,ಅವು ಏಳು ವರ್ಷಗಳ ಹಿಂದಿನ ಫೋಟೋಗಳಾಗಿದ್ದವು. ಸದ್ಯ ಅದೇ ಸಾಲಿಗೆ ಮತ್ತೊಂದೊಷ್ಟು ಪೋಟೋ ಸೇರ್ಪಡೆಯಾಗಿವೆ. ಸದ್ಯ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದು ಕೊರೋನ ಕಾಲದ ಒಂದೆರಡು ಜೈಲಿನ ಫೋಟೋಗಳು ಈಗ ಹೊರ ಬಂದಿವೆ. ಬಳ್ಳಾರಿ ಜೈಲಲ್ಲಿ ರೌಡಿಗಳು ಮೊಬೈಲ್ ಯೂಸ್ ಮಾಡ್ತಾರೆ. ಅಡಿಗೆಗೆ ಚಿಕನ್ ಮಟನ್ ರೆಡಿ ಮಾಡಿಕೊಳ್ಳೋ ಫೋಟೋ ವೈರಲ್ ಆಗಿದೆ. ಇನ್ನೂ ಈ ಫೋಟೋಗಳು ಮೂರ್ನಾಲ್ಕು ವರ್ಷದ ಹಳೆ ಪೋಟೋಗಳು ಎಂದು ಹೇಳಲಾಗ್ತಿದೆ. ಫೋಟೋದಲ್ಲಿರೋ ವ್ಯಕ್ತಿಗಳು ಬೇಲ್ ಪಡೆದು ಹೊರ ಹೋಗಿ ವರುಷಗಳೆ ಕಳೆದಿವೆ ಎನ್ನಲಾಗ್ತಿದೆ.
Author: Prajatv Kannada
ಬೆಂಗಳೂರು :- ಸಿಲಿಕಾನ್ ಸಿಟಿ ಬೆಂಗಳೂರಿನ ಪಿಜಿಗಳಿಗೆ ಪಾಲಿಕೆ ಬಿಗ್ ಶಾಕ್ ನೀಡಿದೆ. ಸೆಪ್ಟೆಂಬರ್ 15ರೊಳಗೆ ಗೈಡ್ ಲೈನ್ ಅಳವಡಿಸದಿದ್ರೆ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ. ಇತ್ತೀಚೆಗಷ್ಟೆ ಪಿಜಿಗಳಿಗೆ ಪಾಲಿಕೆ ಗೈಡ್ ಲೈನ್ ಬಿಡುಗಡೆ ಮಾಡಿತ್ತು. ಗೈಡ್ ಲೈನ್ಸ್ ಅಳವಡಿಕೆಗೆ ಸೆಪ್ಟೆಂಬರ್ 15ರ ಗಡುವು ನೀಡಲಾಗಿತ್ತು. ಗಡುವು ಮೀರಿದ್ರೆ ಅನಧಿಕೃತ ಅಂತಾ ಪರಿಗಣಿಸಿ ಲೈಸೆನ್ಸ್ ರದ್ದು ಮಾಡಲಾಗಿದೆ. ಅನಧಿಕೃತ ಪಿಜಿಗಳ ಮಾಹಿತಿಯನ್ನೂ ಪಾಲಿಕೆ ಕಲೆಹಾಕ್ತಿದ್ದು, ಪಾಲಿಕೆಯಲ್ಲಿ ಈವರೆಗೆ 2 ಸಾವಿರ ಪಿಜಿಗಳಿಗೆ ಮಾತ್ರ ಲೈಸೆನ್ಸ್ ವಿತರಣೆ ಮಾಡಲಾಗಿದೆ. ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳ ಕಾರ್ಯಾಚರಣೆ ಮಾಡಲಾಗಿದ್ದು, ಅನಧಿಕೃತ ಪಿಜಿಗಳಿಗೆ ಬಿಸಿಮುಟ್ಟಿಸೋದಕ್ಕೂ ಪಾಲಿಕೆ ಪ್ಲಾನ್ ಮಾಡಿಕೊಂಡಿದೆ. ಸೆಪ್ಟೆಂಬರ್ 15ರೊಳಗೆ ಲೈಸೆನ್ಸ್ ಪಡೆಯಲು ತಾಕೀತು ಮಾಡಲಾಗಿದೆ. ಇಲ್ಲಾ ಅಂದ್ರೆ ಪಿಜಿಗಳನ್ನ ಬಂದ್ ಮಾಡುವ ಎಚ್ಚರಿಕೆಯನ್ನು ಬಿಬಿಎಂಪಿ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ರಿಂದ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು- ಜೈಲಲ್ಲಿ ದರ್ಶನ್ ಗೆ ರಾಜಾಥಿತ್ಯ ನೀಡಲಾಗ್ತಿದೆ ಅಂದ ಸದ್ಯ ದರ್ಶನ್ ಅ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್, ವಿಲ್ಸನ್ ಗಾರ್ಡನ್ ನಾಗಹಾಗೂ ಕುಳ್ಳ ಸೀನ ಪೋಟೋ ವೈರಲ್ ಆಗ್ತಿದ್ದಂತೆ ಹಳೆ ಪೋಟೋಗಳು ವೈರಲ್ ಆಗ್ತಿವೆ. ಮೊನ್ನೆ ಕುಳ್ಳ ಸೀನ ಬರ್ತಡೇ ಫೋಟೋ ವೈರಲ್ ಆಗಿದ್ದು,ಅವು ಏಳು ವರ್ಷಗಳ ಹಿಂದಿನ ಫೋಟೋಗಳಾಗಿದ್ದವು. ಸದ್ಯ ಅದೇ ಸಾಲಿಗೆ ಮತ್ತೊಂದೊಷ್ಟು ಪೋಟೋ ಸೇರ್ಪಡೆಯಾಗಿವೆ. ಸದ್ಯ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದು ಕೊರೋನ ಕಾಲದ ಒಂದೆರಡು ಜೈಲಿನ ಫೋಟೋಗಳು ಈಗ ಹೊರ ಬಂದಿವೆ. ಬಳ್ಳಾರಿ ಜೈಲಲ್ಲಿ ರೌಡಿಗಳು ಮೊಬೈಲ್ ಯೂಸ್ ಮಾಡ್ತಾರೆ. ಅಡಿಗೆಗೆ ಚಿಕನ್ ಮಟನ್ ರೆಡಿ ಮಾಡಿಕೊಳ್ಳೋ ಫೋಟೋ ವೈರಲ್ ಆಗಿದೆ. ಇನ್ನೂ ಈ ಫೋಟೋಗಳು ಮೂರ್ನಾಲ್ಕು ವರ್ಷದ ಹಳೆ ಪೋಟೋಗಳು ಎಂದು ಹೇಳಲಾಗ್ತಿದೆ. ಫೋಟೋದಲ್ಲಿರೋ ವ್ಯಕ್ತಿಗಳು ಬೇಲ್ ಪಡೆದು ಹೊರ ಹೋಗಿ ವರುಷಗಳೆ ಕಳೆದಿವೆ ಎನ್ನಲಾಗ್ತಿದೆ.
ಬೆಂಗಳೂರು: ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರ ನಿಲ್ದಾಣದವರೆಗೆ ಇಂದು, ಸೆಪ್ಟೆಂಬರ್ 6 ಮತ್ತು 11 ರಂದು ಪೂರ್ಣ ದಿನ ಮೆಟ್ರೋ (Metro) ಸೇವೆ ಸ್ಥಗಿತಗೋಂಡಿರುತ್ತದೆ. ವಿಸ್ತರಿಸಿದ ಮಾರ್ಗದಲ್ಲಿ ಮೆಟ್ರೋ ಸಿಗ್ನಲಿಂಗ್ ಪರೀಕ್ಷೆ ಹಿನ್ನೆಲೆ ಇಡೀ ದಿನ ಸಿಗ್ನಲಿಂಗ್ ಟೆಸ್ಟಿಂಗ್ ನಡೆಯಲಿದೆ. https://youtu.be/R5Y7yMyiq5E?si=LH8mALrdNnnrvj7V ಆಗಸ್ಟ್ ಮಾತ್ರವಲ್ಲದೆ, ಸೆಪ್ಟೆಂಬರ್‌ನ 6 ಮತ್ತು 11 ರಂದು ಪೂರ್ಣ ದಿನ ಸೇವೆ ಸ್ಥಗಿತವಾಗಲಿದೆ. ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಈ ವ್ಯತ್ಯಯ ಇರಲಿದೆ. ಆಗಸ್ಟ್ 24ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00ಕ್ಕೆ ಕೊನೆಗೊಳ್ಳಲಿದೆ. ಆಗಸ್ಟ್ 25ರಂದು ಬೆಳಿಗ್ಗೆ 5.00 ಕ್ಕೆ ಬದಲಾಗಿ 07.00ಕ್ಕೆ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ. ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ ಆಗಸ್ಟ್ 24 ಕೊನೆಯ ರೈಲು ಸೇವೆ ರಾತ್ರಿ 11.12 ಕ್ಕೆ ಹೊರಡಲಿದೆ. ಆಗಸ್ಟ್ 25 ರಂದು ಮೊದಲ ರೈಲು ಸೇವೆ ಬೆಳಿಗ್ಗೆ 5 ಕ್ಕೆ ಬದಲಾಗಿ 6 ಕ್ಕೆ ಪ್ರಾರಂಭವಾಗಲಿದೆ. ನೇರಳ…
ಬಹುನಿರೀಕ್ಷಿತ ‘ದಿ ಡೈರಿ ಆಫ್ ಪಶ್ಚಿಮ ಬಂಗಾಳ’ ಸಿನಿಮಾದ ಬಿಡುಗಡೆಗೆ ತಡೆ ನೀಡಲು ಕೊಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ಚಿತ್ರದ ಬಿಡುಗಡೆಗೆ ಇದ್ದ ಅಡ್ಡಿ ಆತಂಕ ನಿವಾರಣೆಯಾದಂತಾಗಿದೆ. ಸನೋಜ್ ಮಿಶ್ರಾ ನಿರ್ದೇಶನದ ದಿ ಡೈರಿ ಆಫ್ ಪಶ್ಚಿಮ ಬಂಗಾಳ ಸಿನಿಮಾ 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸುತ್ತಲಿನ ಘಟನೆಗಳನ್ನು ಆಧರಿಸಿದೆ. ಚಿತ್ರ ಇಂದು ಅದ್ದೂರಿಯಾಗಿ ತೆಗೆಗೆ ಬಂದಿದೆ. ಈ ಚಿತ್ರದ ಬಿಡುಗಡೆಯಿಂದ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬರಬಹುದು ಎಂದು ಆರೋಪಿಸಿ, ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿ ರಾಜೀವ್ ಕುಮಾರ್ ಝಾ ಎಂಬುವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠದ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ನಡೆದ ವಿಚಾರಣೆಯ ಸಮಯದಲ್ಲಿ, ನ್ಯಾಯಪೀಠವು ಅರ್ಜಿದಾರರನ್ನು ನೀವು ಚಲನಚಿತ್ರವನ್ನು ನೋಡಿದ್ದೀರಾ ಎಂದು ಪ್ರಶ್ನಿಸಿತ್ತು. ಅರ್ಜಿದಾರರು ನೋಡಿಲ್ಲವೆಂದು ಉತ್ತರಿಸಿದಾಗ, ಕೇವಲ ಊಹೆಗಳ ಆಧಾರದ ಮೇಲೆ ಯಾವುದೇ ಚಲನಚಿತ್ರದ ಬಿಡುಗಡೆಯನ್ನು…
ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತಮ್ಮ 48ನೇ ವರ್ಷದ ಹುಟ್ಟುಹಬ್ಬವನ್ನು ಚೆನ್ನೈನ ಕಿಲ್ಪಾಕ್ ವೃದ್ಧಾಶ್ರಮದಲ್ಲಿ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ಹುಟ್ಟುಹಬ್ಬದಂದು ಈವೃದ್ಧಾಶ್ರಮಕ್ಕೆ ಭೇಟಿ ನೀಡುವ ನಟ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಈ ವೇಳೆ ಮಾತನಾಡಿದ ವಿಶಾಲ್. ನಾನು ಯಾವಾಗಲೂ ಇಲ್ಲಿಗೆ ಭೇಟಿ ನೀಡುವ ಮೂಲಕ ನನ್ನ ಹುಟ್ಟುಹಬ್ಬ ಆಚರಣೆ ಪ್ರಾರಂಭಿಸುತ್ತೇನೆ. ಅವರನ್ನು ಭೇಟಿಯಾಗುವುದು ನನ್ನ ದೊಡ್ಡ ಸೌಭಾಗ್ಯ. ಅವರ ಆಶೀರ್ವಾದವೇ ದೊಡ್ಡ ಭಾಗ್ಯ. ನಾನು ಊಟ ಬಡಿಸಲಿಲ್ಲ. ಅದಾಗ್ಯೂ ಅವರು ನನ್ನನ್ನು ಸ್ವಾಗತಿಸಿದರು, ಆತ್ಮೀಯವಾಗಿ ಮಾತನಾಡಿಸಿದರೆಂದು ತಿಳಿಸಿದರು. ತಮಿಳುನಾಡಿನಲ್ಲಿ ನಟಿಯರಿಗೆ ಸುರಕ್ಷಿತ ವಾತಾವರಣವಿದೆ. ನಟಿಯರಿಗೆ ವೈಯಕ್ತಿಕ ಅಂಗರಕ್ಷಕರಿರುತ್ತಾರೆ. ಆದ್ರೆ ಶೇ.20ರಷ್ಟು ಜನರಿಗೆ ಮಾತ್ರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಇನ್ನು, ಕೆಲವರು ಅವಕಾಶಗಳಿಂದ ವಂಚಿತರಾಗಿ ನಿರಾಶರಾಗಿದ್ದಾರೆ. ಸಿನಿಮಾ ಪ್ರವೇಶಿಸುವಾಗ, ನಾವು ಯಾವ ಸಂಸ್ಥೆಗೆ ಹೋಗುತ್ತಿದ್ದೇವೆ? ಅವು ಅಧಿಕೃತವೇ? ಅವರು ನಿಜವಾಗಿಯೂ ಸಿನಿಮಾ ಮಾಡುತ್ತಿದ್ದಾರೆಯೇ? ಎಂಬುದರ ಬಗ್ಗೆ ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು ಎಂದರು. ಯಾರಾದರೂ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರೆ, ಯುವತಿ ಧೈರ್ಯದಿಂದ…
ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರ ಜೈಲಿಗೆ ಹೋಗುವ ವೇಳೆ ದರ್ಶನ್ ಧರಿಸಿದ್ದ ಕನ್ನಡಕ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅಲ್ಲದೆ ಈ ಬಗ್ಗೆ ಜೈಲು ಸಿಬ್ಬಂದಿ ವಿರುದ್ಧ ಕ್ರಮಕ್ಕೂ ಪತ್ರ ಬರೆಯಲಾಗಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಳ್ಳಾರಿ ಎಸ್ ಪಿ ಶೋಭಾ ರಾಣಿ ದರ್ಶನ್ ಧರಿಸಿದ್ದು ಪವರ್ ಗ್ಲಾಸ್ ಅದಕ್ಕೆ ಜೈಲಿನಲ್ಲಿ ಅವಕಾಶ ಇದೆ ಎಂದಿದ್ದಾರೆ. ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಎಸ್ಪಿ ಶೋಭಾ ರಾಣಿ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರೂಟಿನ್ನಂತೆ ಇಂದು ಕೂಡ ಜೈಲಿಗೆ ಭೇಟಿ ನೀಡಿದ್ದೇನೆ. ಕಾರಾಗೃಹದ ಅಧೀಕ್ಷಕರ ಕೊಠಡಿಗೆ ತೆರಳಿ ಮಾತನಾಡಿದ್ದೇನೆ. ದರ್ಶನ್ ಅವರನ್ನು ಭೇಟಿಯಾಗಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದರು. ಇನ್ನು, ದರ್ಶನ್ ಕುರಿತ ವದಂತಿಗಳ ಬಗ್ಗೆ ಉತ್ತರಿಸಿ, ದರ್ಶನ್ ಅವರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ಕುರಿತ ವದಂತಿಗಳು ಸುಳ್ಳು. ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ದರ್ಶನ್ ಅವರ ಕೈಗೆ ಬೇಡಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಎಸ್ಪಿ,…
ಮಲಯಾಳಂ ಸಿನಿಮಾ ರಂಗದಲ್ಲಿ ಹೇಮಾ ಸಮಿತಿ ವರದಿ ಬಂದ ಬಳಿಕ ಒಂದೊಂದೇ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿದೆ. ಇದೀಗ ಆಂಧ್ರಪ್ರದೇಶದ ರಾಜಕಾರಣಿಯೊಬ್ಬರ ಮೇಲೆ ಮುಂಬೈ ನಟಿಯೊಬ್ಬರು ಮಾಡಿರುವ ಲೈಂಗಿಕ ಹಾಗೂ ಮಾನಸಿಕ ಹಿಂಸೆಯ ಆರೋಪ ರಾಜಕೀಯ ಹಾಗೂ ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿದೆ. ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಆಡಳಿತವಿದ್ದ ವೈಸಿಪಿ ಪಕ್ಷದ ಪ್ರಮುಖ ಮುಖಂಡನೊಬ್ಬ ಮುಂಬೈ ಮೂಲದ ನಟಿ, ಮಾಡೆಲ್ ಜೊತೆಗೆ ವೈದ್ಯೆ ಸಹ ಆಗಿರುವ ಒಬ್ಬ ಯುವತಿಗೆ ಕೊಡಬಾರದ ಹಿಂಸೆ ಕೊಟ್ಟು, ಆಕೆಯನ್ನು, ಆಕೆಯ ಕುಟುಂಬವನ್ನು ಅಪಹರಿಸಿ ಚಿತ್ರಹಿಂಸೆ ಮಾಡಿರುವ ವಿಷಯ ಇದೀಗ ಬಹಿರಂಗವಾಗಿದೆ. ಈ ಅಮಾನುಷ ಘಟನೆಯಲ್ಲಿ ಕೆಲ ಐಪಿಎಸ್ ಅಧಿಕಾರಿಗಳು ಸಹ ಭಾಗಿಯಾಗಿರುವುದು ಕೂಡ ಬೆಳಕಿಗೆ ಬಂದಿದೆ. ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುಕ್ಕಲ ವಿದ್ಯಾ ಸಾಗರ್ ಎಂಬ ವೈಸಿಪಿ ಮುಖಂಡ ಗುಜರಾತ್ ಮೂಲದ ಕಾದಂಬರಿ ಜೇಟ್ವಾನಿ ಹಾಗೂ ಅವರ ಕುಟುಂಬವನ್ನು ಅಪಹರಿಸಿ ಕೂಡಿಹಾಕಿ…
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿ 3 ತಿಂಗಳಾಗಿದೆ. ಇದುವರೆಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಪವರ್ ಬಳಸಿ ಬೇಕಾದನ್ನು ತರಿಸಿಕೊಳ್ಳುತ್ತಿದ್ದ ದರ್ಶನ್ ಗೆ ಬಳ್ಳಾರಿ ಜೈಲು ನುಂಗಲಾರದ ತುತ್ತಾಗಿದೆ. ಹೊಸ ಜೈಲಿಗೆ ಅಡ್ಜಸ್ಟ್ ಆಗಲು ಸಾಧ್ಯವಾಗದೆ ರಾತ್ರಿ ಇಲ್ಲ ನಿದ್ದೆ ಬಿಟ್ಟು ಒದ್ದಾಡಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿತ್ತು. ಹೀಗಾಗಿ, ದರ್ಶನ್ ಅರಾಮಾಗಿದ್ದರು. ಆದರೆ, ಬಳ್ಳಾರಿ ಜೈಲಿನಲ್ಲಿ ವಿಶೇಷ ಆತಿಥ್ಯಕ್ಕೆ ಬ್ರೇಕ್ ಹಾಕಲಾಗಿದೆ. ಇದು ದರ್ಶನ್ಗೆ ನುಂಗಲಾರದ ತುತ್ತಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ನಂತರ ಬಂಧನಕ್ಕೆ ಒಳಗಾಗಿ ಹಾಯಾಗಿದ್ದ ಅವರು ಈಗ ನಿಜವಾದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಕುಟುಂಬದವರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದ್ದು ಉಳಿದವರ ಭೇಟಿಯನ್ನು ನಿಷೇಧಿಸಲಾಗಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಮೊದಲ ದಿನ ಕಳೆದಿದ್ದಾರೆ. ರಾತ್ರಿ 1 ಗಂಟೆವರೆಗೆ ನಿದ್ದೆ ಮಾಡದೆ ಒದ್ದಾಡಿದ್ದಾರೆ.…
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿಯಾಗಿ ಡಾ.ಕೆ.ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗೆಲುವು ಸಾಧಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಪ್ರದೀಪ್ ಈಶ್ವರ್ ಯಾವ ಸ್ಟಾರ್ ನಟರಿಗೂ ಕಮ್ಮಿ ಇಲ್ಲದಂತೆ ಡೈಲಾಗ್ ಹೇಳಿ ಫೇಮಸ್ ಆಗಿದ್ದರು. ಇದೀಗ ಇವರಿಗೆ ಟಾಲಿವುಡ್‌ನಲ್ಲಿ ಭಾರೀ ಬೇಡಿಕೆ ಬಂದಿದೆ. ಹೌದು…ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಲು ಪ್ರದೀಪ್ ಈಶ್ವರ್ಗೆ ಆಫರ್ ಬಂದಿದೆ. ಟಾಲಿವುಡ್ ಚಿತ್ರರಂಗದ ದಿಗ್ಗಜ ಮೆಗಾಸ್ಟಾರ್ ಚಿರಂಜೀವಿಯವರು ಸಾಮಾಜಿಕ ಕ್ರಾಂತಿಯ ಚಲನಚಿತ್ರವೊಂದರಲ್ಲಿ ನಟಿಸಲು ರೆಡಿಯಾಗುತ್ತಿದ್ದಾರೆ. ಇದರಿಂದ ಚಿರಂಜೀವಿ ಜೊತೆ ಬಣ್ಣ ಹಚ್ಚಿ ನಟಿಸಲು ಶಾಸಕ ಪ್ರದೀಪ್‌ಈಶ್ವರ್‌ಗೆ ಕರೆ ಬಂದಿದೆಯಂತೆ. ಸ್ವತಃ ಮೆಗಸ್ಟಾರ್ ಚಿರಂಜೀವಿಯವರ ಚಲನಚಿತ್ರವನ್ನು ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕರೊಬ್ಬರು ಶಾಸಕ ಪ್ರದೀಪ್‌ಈಶ್ವರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆಂದು ಸ್ವತಃ ಪ್ರದೀಪ್‌ಈಶ್ವರ್ ಹೇಳಿಕೊಂಡಿದ್ದಾರೆ. ಕರ್ನಾಟಕದಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಂದಿನ ಪ್ರಭಾವಿ ಮಂತ್ರಿ, ಭಾವಿ ಮುಖ್ಯಮಂತ್ರಿಯೆಂದೇ ಬಿಂಬಿತಗೊಂಡಿದ್ದ ಡಾ|| ಕೆ.ಸುಧಾಕರ್‌ರವರನ್ನು ಸೋಲಿಸಿ, ಪ್ರದೀಪ್‌ಈಶ್ವರ್ ಜಯಭೇರಿ ಭಾರಿಸಿದ್ದರು.…