Author: Prajatv Kannada

ಬೆಂಗಳೂರು: ಕಳ್ಳತನಕ್ಕೆ (Theft) ಸಾಥ್ ನೀಡಿದ ಆರೋಪದಡಿ ಪೊಲೀಸ್ ಕಾನ್ಸ್ಟೇಬಲನ್ನು (Police Constable) ಅಮಾನತುಗೊಳಿಸಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ  ನಡೆದಿದೆ. ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ (Banashankari Police Station) ಯಲ್ಲಪ್ಪ ಎಂಬ ಕಾನ್ಸ್ಟೇಬಲ್ ಕಳ್ಳರ ಗ್ಯಾಂಗ್ ಜೊತೆ ಸೇರಿ ಕಳ್ಳತನಕ್ಕೆ ಸಾಥ್ ನೀಡಿದ್ದರು. ಕೆಲದಿನಗಳ ಹಿಂದೆ ಮನೆ ಕಳ್ಳತನ ಮಾಡಿದ ಪ್ರಕರಣವೊಂದರಲ್ಲಿ ಬನಶಂಕರಿ ಪೊಲೀಸರು ಕಳ್ಳರನ್ನು ಸೆರೆಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಳ್ಳತನದಲ್ಲಿ ಅದೇ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಯಲ್ಲಪ್ಪನವರ ಪಾತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳ್ಳತನ ಮಾಡುವುದು ಹೇಗೆ? ತಪ್ಪಿಸಿಕೊಳ್ಳುವುದು ಹೇಗೆ? ಎಲ್ಲಿ ಕಳ್ಳತನ ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಿದ್ದ ಯಲ್ಲಪ್ಪ, ಕಳ್ಳತನದ ಹಣದಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಈ ಆಧಾರದ ಮೇಲೆ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ಯಲ್ಲಪ್ಪನವರನ್ನು ವಿಚಾರಣೆ ನಡೆಸಿ ಅಮಾನತುಗೊಳಿಸುವಂತೆ (Suspend) ಆದೇಶ ನೀಡಿದ್ದಾರೆ.

Read More

ಬೆಂಗಳೂರು: 2032 ರ ವೇಳೆಗೆ ಸಾರ್ವಜನಿಕರಿಗೆ ಪ್ರತಿ 2 ಕಿ.ಮೀ ವ್ಯಾಪ್ತಿಯೊಳಗೆ ಮೆಟ್ರೊ ರೈಲು ಸೇವೆ ಲಭ್ಯವಾಗುವಂತೆ ಮಾಡಲು, ರಾಜ್ಯ ಸರಕಾರ ಹೊಸದಾಗಿ ನಾಲ್ಕು ಮಾರ್ಗಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ. ಮುಂದಿನ 10 ವರ್ಷದೊಳಗೆ ನಾಗರಿಕರಿಗೆ ಅವರ ಕೆಲಸದ ಸ್ಥಳ ಅಥವಾ ವಾಸಿಸುವ ಸ್ಥಳದಿಂದ ಒಂದೆರಡು ಕಿ.ಮೀ ಅಂತರದಲ್ಲಿ ಮೆಟ್ರೊ ರೈಲು ಸೇವೆ ಸಿಗುವಂತೆ ಮಾಡಲು, ನಾಲ್ಕು ಮೆಟ್ರೊ ಮಾರ್ಗಗಳನ್ನು ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಿದೆ. ರಾಜ್ಯ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಯೋಜನಾ ಇಲಾಖೆಯಿಂದ ರಚಿತವಾದ ಸಮಿತಿ, ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ ಹಾಗೂ ತಜ್ಞರ ಸಹಯೋಗದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಪ್ರಸ್ತಾಪಿತ 4 ಹೊಸ ಮೆಟ್ರೊ ಮಾರ್ಗಗಳು ಒಟ್ಟು 59 ಕಿ.ಮೀ ಉದ್ದವಿರಲಿವೆ. ಇದಕ್ಕೆ 27,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಬೆಂಗಳೂರು ಮೆಟ್ರೊ ರೈಲು ನಿಗಮವು 56 ಕಿ.ಮೀ ಮೆಟ್ರೊ ಜಾಲವನ್ನು ಹೊಂದಿದೆ. ವೈಟ್‌ಫೀಲ್ಡ್‌ ಮಾರ್ಗದ ಮೆಟ್ರೊವನ್ನು ಹೊಸಕೋಟೆ (6 ಕಿ.ಮೀ) ಮತ್ತು ಬನ್ನೇರುಘಟ್ಟದಿಂದ ಜಿಗಣಿ…

Read More

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bengaluru Mysuru Expressway) ಸಂಚಾರಕ್ಕೆ ಮುಕ್ತಗೊಂಡಿದ್ದು ಮಂಗಳವಾರದಿಂದ ಟೋಲ್ (Toll) ಸಂಗ್ರಹವೂ ಪ್ರಾರಂಭವಾಗಿದೆ. ಆದರೆ ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ ಕಂಡುಬಂದಿದೆ. ಇದರಿಂದ ವಾಹನ ಸವಾರರು ಬೆಳಗ್ಗೆಯಿಂದಲೇ ಪರದಾಡುವಂತಾಗಿದೆ. ಮಂಗಳವಾರ ಕಣಮಿಣಕಿ ಟೋಲ್‌ನಲ್ಲಿ ಆರಂಭದಲ್ಲೇ ತಾಂತ್ರಿಕ ದೋಷ ಕಂಡುಬಂದಿದೆ. ಫಾಸ್ಟ್ ಟ್ಯಾಗ್ (Fast Tag) ಅಳವಡಿಸಲಾಗಿದ್ದರೂ ಅವು ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಬೂತ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅತ್ತ ಫಾಸ್ಟ್ ಟ್ಯಾಗ್ ಇಲ್ಲದೇ ಹೋದ ವಾಹನ ಸವಾರರು ಅದರ ದುಪ್ಪಟ್ಟು ದರವನ್ನು ಕಟ್ಟಬೇಕಾಗುತ್ತದೆ. ಟೋಲ್ ಶುಲ್ಕ ಎಷ್ಟು? ಬೆಂಗಳೂರಿನಿಂದ ನಿಡಘಟ್ಟದವರೆಗೆ ಸುಮಾರು 56 ಕಿ.ಮೀ ರಸ್ತೆಗೆ ಟೋಲ್ ಸಂಗ್ರಹ ಆರಂಭವಾಗಿದೆ. ಕಾರು, ಜೀಪ್, ವ್ಯಾನ್‌ಗಳಿಗೆ ಏಕಮುಖ ಸಂಚಾರಕ್ಕೆ 135 ರೂ. ಯಾದರೆ, ದ್ವಿಮುಖ ಸಂಚಾರಕ್ಕೆ 205 ರೂ. ಯಾಗುತ್ತದೆ. ಸ್ಥಳೀಯ ವಾಹನಗಳಿಗೆ 70 ರೂ. ಹಾಗೂ ತಿಂಗಳ ಪಾಸ್ 4,525 ರೂ. ಇದೆ. ಲಘು ವಾಹನ,…

Read More

ಬೆಂಗಳೂರು: ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸುವ ಮೂಲಕ ಮಾನ್ಯ ವಸತಿ ಸಚಿವರು ಹಾಗೂ ಸ್ಥಳೀಯ ಶಾಕರರಾದ ಶ್ರೀ ವಿ.ಸೋಮಣ್ಣ ರವರು ಚಾಲನೆ ನೀಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯದ ಕಲ್ಯಾಣ ಇಲಾಖೆ ವತಿಯಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿ ತರಬೇತಿ ಪಡೆದ ಸುಮಾರು 433 ಅರ್ಹ ಪಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣೆ ಮಾಡಿದರು. ಪಾಲಿಕೆಯ ಪಶ್ಚಿಮ ವಲಯದ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಹೊಲಿಗೆ ತರಬೇತಿ ಕಾರ್ಯಕ್ರಮದಡಿ ಆಸಕ್ತ ಮಹಿಳೆಯರು ಉಚಿತವಾಗಿ ಹೊಲಿಗೆ ತರಬೇತಿಯನ್ನು ಪಡೆದುಕೊಂಡು ತನ್ಮೂಲಕ ಉಚಿತವಾಗಿ ನೀಡಲಾಗುವ ಹೊಲಿಗೆ ಯಂತ್ರದ ಸಹಾಯದಿಂದ ಸ್ವಯಂ ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವಂತೆ ಉತ್ತೇಜಿಸುವುದೇ ಈ ಕಾರ್ಯಕ್ರಮ ಉದ್ದೇಶವಾಗಿರುತ್ತದೆ ಎಂದು ವಸತಿ ಸಚಿವರಾದ ವಿ.ಸೋಮಣ್ಣ ತಿಳಿಸಿದರು. ಕಾರ್ಯಕ್ರಮದ ವೇಳೆ ವಿಶೇಷ ಆಯುಕ್ತರಾದ ಶ್ರೀ ರೆಡ್ಡಿ ಶಂಕರ ಬಾಬು, ವಲಯ ಜಂಟಿ ಆಯುಕ್ತರಾದ ಲೋಕನಾಥ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು…

Read More

ಬೆಂಗಳೂರು: 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆ (Public Exam) ರದ್ದುಗೊಳಿಸಿ ಈಗಾಗಲೇ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಶೇಷ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ. ಈಗಾಗಲೆ 13ನೇ ತಾರೀಖಿನಿಂದ 5 ಮತ್ತು 8 ನೇ ತರಗತಿಯ ಪರೀಕ್ಷೆ ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳ ಪೋಷಕರಿಗೆ ಶಾಲೆಗಳಿಂದ ಸುತ್ತೋಲೆ ಹೋಗಿದೆ. ಏಕ ಸದಸ್ಯ ಪೀಠದ ಆದೇಶ ಪಾಲಿಸಿದರೆ ಮಕ್ಕಳಲ್ಲಿ ಅಷ್ಟೊಂದು ಗೊಂದಲವಾಗುತ್ತಿರಲಿಲ್ಲ. ಯಾವಾಗ ಸರ್ಕಾರದ ಮೇಲ್ಮನವಿ ಹೋಯಿತೋ ಅಲ್ಲಿಂದ ಪರೀಕ್ಷೆ ಇದೆಯೋ ಇಲ್ಲವೋ ಎನ್ನುವ ಗೊಂದಲ ಉಂಟಾಗಿದೆ. ಈಗಾಗಲೇ ಸರ್ಕಾರ ಈ ಆದೇಶಕ್ಕೆ ತಡೆ ಕೊಡುವಂತೆ ವಿಶೇಷ ಪೀಠದಲ್ಲಿ ಮನವಿ ಸಲ್ಲಿಸಿದರೂ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ಕೊಟ್ಟಿಲ್ಲ. ಸರ್ಕಾರ ಹಠಮಾರಿ ಧೋರಣೆ ತಾಳಿ ಪರೀಕ್ಷೆ ನಡೆಸಿದ್ದೇ ಆದಲ್ಲಿ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಇದೀಗ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸದಿರುವ…

Read More

ವಾಷಿಂಗ್ಟನ್: ಸ್ಟಾರ್ಟ್ಅಪ್‌ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿದ್ದ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗಿರುವ ಬೆನ್ನಲ್ಲೇ ಅಮೆರಿಕದ ಅಧಿಕಾರಿಗಳು ಮತ್ತೊಂದು ಟೆಕ್ ಸ್ನೇಹಿ ಬ್ಯಾಂಕ್ ಅನ್ನು ಮುಚ್ಚಿರುವುದಾಗಿ ಘೋಷಿಸಿದ್ದಾರೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾದ ಬೆನ್ನಲ್ಲೇ ಇದೀಗ ಸಿಗ್ನೇಚರ್ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಬ್ಯಾಂಕ್ ಕ್ರಿಪ್ಟೋಕರೆನ್ಸಿಗಳ ಸ್ಟಾಕ್ ಅನ್ನು ಹೊಂದಿದ್ದು, ಇದೀಗ ಅಪಾಯದ ದೃಷ್ಟಿಯಿಂದ ಬ್ಯಾಂಕ್ ಅನ್ನು ಸ್ವಲ್ಪ ಸಮಯದವರೆಗೆ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಗ್ನೇಚರ್ ಬ್ಯಾಂಕ್ ನ್ಯೂಯಾರ್ಕ್ ನಲ್ಲಿರುವ ಪ್ರಾದೇಶಿಕ ಬ್ಯಾಂಕ್ ಆಗಿದ್ದು, ಕಳೆದ ವರ್ಷ ಕೊನೆಯಲ್ಲಿ ಈ ಬ್ಯಾಂಕ್ ಅನ್ನು ಫೆಡರಲ್ ಡೆಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ ತೆಗೆದುಕೊಂಡಿದೆ ಎಂದು ನ್ಯೂಯಾರ್ಕ್ ರಾಜ್ಯ ಹಣಕಾಸು ಸೇವೆಗಳ ಇಲಾಖೆ ತಿಳಿಸಿದೆ. ಸದ್ಯ ಸಿಗ್ನೇಚರ್ ಬ್ಯಾಂಕ್ ಹಾಗೂ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಯಾವುದೇ ನಷ್ಟದ ಹೊರೆಯನ್ನು ತೆರಿಗೆದಾರರು ಭರಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

Read More

ಲಂಡನ್: ಸ್ಟಾರ್ಟ್ ಅಪ್‌ಗಳಿಗೆ ಸಾಲ ನೀಡಲು ಹೆಸರು ವಾಸಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಮೆರಿಕದಲ್ಲಿ ದಿವಾಳಿಯಾಗಿರುವ ಬೆನ್ನಲ್ಲೇ ಸಿಲಿಕಾನ್ ವ್ಯಾಲಿ ಬ್ಯಾಂಕಿನ ಬ್ರಿಟನ್ ಘಟಕವನ್ನು ಹೆಚ್‌ಎಸ್‌ಬಿಸಿ ಕೇವಲ 1 ಪೌಂಡ್‌ಗೆ (99.86 ರೂಪಾಯಿ) ಖರೀದಿ ಮಾಡಿದೆ. ಮಾರ್ಚ್ 10ರ ಹೊತ್ತಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಯುಕೆ ಘಟಕವು ಸುಮಾರು 5.5 ಬಿಲಿಯನ್ ಪೌಂಡ್ ಸಾಲಗಳನ್ನು ಮತ್ತು ಸುಮಾರು 6.7 ಬಿಲಿಯನ್ ಪೌಂಡ್ ಠೇವಣಿ ಹೊಂದಿದೆ. ಜೊತೆಗೆ ಒಟ್ಟು 8.8 ಶತಕೋಟಿ ಪೌಂಡ್‌ಗಳಷ್ಟು ಬ್ಯಾಲೆನ್ಸ್ ಶೀಟ್ ಗಾತ್ರವನ್ನು ಹೊಂದಿದೆ. ಇದೀಗ ಹೂಡಿಕೆದಾರರಲ್ಲಿ ಮತ್ತಷ್ಟು ಉತ್ಸಾಹ ತುಂಬಲು ಹೆಚ್‌ಎಸ್‌ಬಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಬ್ಯಾಂಕ್‌ನ ಬ್ರಿಟನ್ ವ್ಯವಹಾರಕ್ಕೆ ಇದು ಅತ್ಯುತ್ತಮ ಕಾರ್ಯತಂತ್ರದ ಅರ್ಥ ನೀಡುವ ಜೊತೆಗೆ ವಾಣಿಜ್ಯ ಬ್ಯಾಂಕಿಂಗ್ ಅನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಜೀವ-ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಂತೆ ನವೀನ ಮತ್ತು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತನ್ನ…

Read More

ವಾಷಿಂಗ್ಟನ್: ಬಾಲಿವುಡ್‌ನ ಪಿಕೆ ಸಿನಿಮಾದಲ್ಲಿರುವಂತೆ ವ್ಯಕ್ತಿಯೋರ್ವ ತಾನು ಅನ್ಯಗ್ರಹದಿಂದ ಬಂದಿದ್ದೇನೆ ಎಂದು ಅಮೆರಿಕದ ಬೀದಿಯಲ್ಲಿ ಬೆತ್ತಲಾಗಿ ಓಡಾಡುತ್ತಿದ್ದು ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಫ್ಲೋರಿಡಾದ ಪಾಮ್ ಬೀಚ್‌ನಲ್ಲಿ 44 ವರ್ಷದ ವ್ಯಕ್ತಿಯೊಬ್ಬ ಬೆತ್ತಲಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದು, ಬಳಿಕ ಆತ ತಾನು ಬೇರೊಂದು ಗ್ರಹದಿಂದ ಬಂದಿದ್ದೇನೆ ಎಂದಿದ್ದಾನೆ. ಪೊಲೀಸರು ಬಂಧಿಸಿದಾಗ ಆತ ನಾನು ಬಟ್ಟೆಗಳನ್ನು ಎಲ್ಲಿ ಇಟ್ಟಿದ್ದೇನೋ ಗೊತ್ತಿಲ್ಲ ಎಂದಿದ್ದಾನೆ. ಆತ ತನ್ನ ಹೆಸರು ಅಥವಾ ಯಾವುದೇ ಗುರುತುಗಳನ್ನು ನೀಡಲು ನಿರಾಕರಿಸಿದ್ದಾನೆ. ಇದಾದ ಬಳಿಕ ಪೊಲೀಸರು ಆತನ ಬಗ್ಗೆ ಪತ್ತೆ ಹಚ್ಚಿ, ಹೆಸರನ್ನು ಜೇಸನ್ ಸ್ಮಿತ್ ಎಂದು ಗುರುತಿಸಿದ್ದಾರೆ. ವ್ಯಕ್ತಿ ನಾನು ಭೂಮಿಯವನೇ ಅಲ್ಲ, ಅನ್ಯಗ್ರಹದಿಂದ ಬಂದಿದ್ದೇನೆ. ಕೆಲ ದಿನಗಳಿಂದ ಪಾಮ್ ಬೀಚ್‌ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಇದೀಗ ಪೊಲೀಸರು ಅಸಭ್ಯವಾಗಿ ವರ್ತಿಸಿರುವುದಕ್ಕೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬ್ಯೂನಸ್ ಐರಿಸ್: ಇತ್ತೀಚೆಗೆ ಮಹಿಳೆಯರು ತನ್ನನ್ನು ತಾನೇ ಮದುವೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಅರ್ಜೇಂಟಿನಾದಲ್ಲಿ ಮಹಿಳೆಯೊಬ್ಬಳು ತನ್ನನ್ನೇ ತಾನು ಮದುವೆಯಾಗಿ ಮದುವೆಯಾದ 24 ಗಂಟೆಯೊಳಗೆ ವಿಚ್ಛೇದನ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಸೋಫಿ ಮೌರ್ (25) ತನ್ನನ್ನು ತಾನು ಮದುವೆಯಾದ ಮಹಿಳೆ. ಈಕೆ ಈ ಬಗ್ಗೆ ಟ್ವೀಟ್ ಮಾಡಿ, ವಧುವಿನ ಡ್ರೇಸ್‍ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಳು. ಇಂದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ. ನಾನು ಮದುವೆಯ ಉಡುಪನ್ನು ಖರೀದಿಸಿದೆ. ಅಷ್ಟೇ ಅಲ್ಲದೇ ನನ್ನನ್ನು ಮದುವೆಯಾಗಲು ಕೇಕ್ ಅನ್ನು ಖರೀದಿಸಿದ್ದೇನೆ ಎಂದು ಬರೆದುಕೊಂಡಿದ್ದಾಳೆ. ಈ ಟ್ವೀಟ್‍ಗೆ ಅನೇಕರು ಸಕಾರತ್ಮಕವಾಗಿ ಹಾಗೂ ನಕಾರಾತ್ಮಕವಾಗಿ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ ಚರ್ಚೆಯೂ ಆಗಿತ್ತು. ಆದರೆ ವಿಚಿತ್ರ ಎನ್ನುವಂತೆ ಮದುವೆ ಆದ ಕೇವಲ ಒಂದು ದಿನದ ನಂತರ ವಿಚ್ಛೇದನ ಪಡೆದುಕೊಳ್ಳುತ್ತಿದ್ದೇನೆ ಎಂದು ಪುನಃ ಟ್ವೀಟ್ ಮಾಡಿದ್ದಾಳೆ. ನಾನು ನನ್ನೊಂದಿಗೆ ಮದುವೆಯಾಗಿ ಒಂದು ದಿನವಾಗಿದೆ. ಈ ನಿರ್ಧಾರವನ್ನು ಮುದುವರಿಸಲು ಸಾಧ್ಯವಿಲ್ಲ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳಲು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾಳೆ.

Read More

ವಾಷಿಂಗ್ಟನ್: ಸ್ವೀಸ್ ಬ್ಯಾಂಕ್ ನಷ್ಟದ ಬೆನ್ನಲ್ಲೇ ಸ್ಟಾರ್ಟ್‌ಅಪ್‍ಗಳಿಗೆ ಸಾಲ ನೀಡಲು ಹೆಸರುವಾಸಿಯಾದ ಅಮೆರಿಕಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ವ್ಯವಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ. ಟೆಕ್ ಸ್ಪಾರ್ಟ್‌ ಅಪ್‍ಗಳಿಗೆ ಮೂಲ ಕಂಪನಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್‍ನ ಠೇವಣಿದಾರರು ಹಾಗೂ ಹೂಡಿಕೆದಾರರು ಬರೋಬ್ಬರಿ 282 ಲಕ್ಷ ಕೋಟಿ ರೂ. ಬೃಹತ್ ಮೊತ್ತದ ಹಣವನ್ನು ಹಿಂಪಡೆದ ಪರಿಣಾಮ ಬ್ಯಾಂಕ್‍ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿತ್ತು. ಈ ಕಾರಣದಿಂದಾಗಿ ಬ್ಯಾಂಕ್ ವ್ಯವಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ತಿಳಿಸಿದೆ. ಶುಕ್ರವಾರ ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ಅಧಿಕಾರಿಗಳು ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಇದು ಅತಿದೊಡ್ಡ ಬ್ಯಾಂಕಿಂಗ್‍ನ ವೈಫಲ್ಯವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಕಂಪನಿಗಳಿಗೆ ಹಾಗೂ ವೆಂಚರ್ ಕ್ಯಾಪಿಟಲಿಸ್ಟ್ ಹೊಂದಿರುವ ಕಂಪನಿಗಳಿಗೆ ಈ ಬ್ಯಾಂಕ್ ಬೆಂಬಲ ನೀಡುತ್ತ ಬಂದಿತ್ತು. ಅದಲ್ಲದೆ, ಪ್ರಸ್ತುತ ಉದ್ಯಮದ ಪ್ರತಿಷ್ಠಿತ ಬ್ರ್ಯಾಂಡ್ ಆಗಿರುವ ಕಂಪನಿಯನ್ನೂ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬೆಂಬಲಿಸಿತ್ತು. ಎಸ್‍ ವಿ ಬಿ ಮಾತೃ…

Read More