ಕೊಯಮತ್ತೂರು: ತುರ್ತು ಪರಿಸ್ಥಿತಿಯನ್ನು ವಿರೋಧಿಸಬೇಡಿ ಎಂದು ಇಂದಿರಾ ಗಾಂಧಿ ಅವರು ಡಿಎಂಕೆಗೆ ಸೂಚಿಸಿದ್ದರು. ಆದರೆ ಅಂದಿನ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ ಅವರು ಪ್ರಜಾಪ್ರಭುತ್ವ ಉಳಿಸುವುದಕ್ಕಾಗಿ ಅದನ್ನು ವಿರೋಧಿಸಿ ತಮ್ಮ ಸರ್ಕಾರ ಕಳೆದುಕೊಂಡರು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಹೇಳಿದ್ದಾರೆ. ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಬಾರದು ಎಂದಿದ್ದ ಇಂದಿರಾ ಗಾಂಧಿ, ತಮ್ಮ ಮನವಿಗೆ ಕಿವಿಗೊಡದಿದ್ದರೆ ಡಿಎಂಕೆ ಸರ್ಕಾರ ವಜಾಗೊಳಿಸುವುದಾಗಿ ಕರುಣಾನಿಧಿ ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ಸ್ಟಾಲಿನ್ ಹೇಳಿದ್ದಾರೆ “ಇಂದಿರಾ ಗಾಂಧಿ ಅವರು ಬಿಕ್ಕಟ್ಟಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು” ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು. ಅದರ ನಂತರ ಹಲವಾರು ವ್ಯಕ್ತಿಗಳನ್ನು ಬಂಧಿಸಲಾಯಿತು. “ನಾವು ಆಗ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿದ್ದೆವು. ಆ ಸಮಯದಲ್ಲಿ, ಕರುಣಾನಿಧಿ ಅವರಿಗೆ ದೆಹಲಿಯಿಂದ ಒಂದು ಸಂದೇಶ ಬಂದಿತ್ತು. ಮೇಡಂ ಇಂದಿರಾ ಗಾಂಧಿ ಅವರು ನಿಯೋಜಿಸಿದ ಸಂದೇಶವಾಹಕರು, ನೀವು ತುರ್ತು ಪರಿಸ್ಥಿತಿಯನ್ನು ವಿರೋಧಿಸಬಾರದು ಮತ್ತು ವಿರೋಧಿಸಿದರೆ ಡಿಎಂಕೆ ಸರ್ಕಾರ…
Author: Prajatv Kannada
ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ಮಾ. 16ರಂದು KPTCL ನೌಕರರ ಸಂಘದಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಒಕ್ಕೂಟ ಬೆಸ್ಕಾಂ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಧರಣಿ ನಡೆಸಲು ನಿರ್ಧಾರ ಮಾಡಿದೆ. ಕೆಲಸಕ್ಕೆ ಸಂಪೂರ್ಣವಾಗಿ ಗೈರು ಹಾಜರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. KPTCL ನೌಕರರ ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡಬಾರದೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಈಗಾಗಲೇ ನಾವು ಮುಷ್ಕರ ಮಾಡುವುದಾಗಿ ಇಲಾಖೆಗೆ ಮಾಹಿತಿ ಕೊಟ್ಟಿದ್ದರು ನಮಗೆ ಸ್ಪಂದನೆ ಸಿಕ್ಕಿಲ್ಲ. ಆದರಿಂದ ನಾವು ಅನಿವಾರ್ಯವಾಗಿ ಮುಷ್ಕರ ಮಾಡುತ್ತಿದ್ದೇವೆ. ನಮಗೆ ಪ್ರತಿ 5 ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಆಗಬೇಕಿತ್ತು, ಆದರೆ ಅದು ಆಗಿಲ್ಲ. ಸರ್ಕಾರಿ ನೌಕರರಿಗೆ ಮಧ್ಯಂತರ ಶೇಕಡಾ 17ರಷ್ಟು ವೇತನ ಪರಿಷ್ಕರಣೆ ಮಾಡಿದ್ದಾರೆ, ನಮಗೆ ಆಗಿಲ್ಲ. ನೌಕರರ ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡದಿರಲು ನಿರ್ಧಾರ ಮಾಡಿದ್ದೇವೆ. KPTCL ಹಾಗೂ ಎಸ್ಕಾಂಗಳ ನೌಕರರು/ಅಧಿಕಾರಿಗಳು ನ್ಯಾಯಯುತ ಬೇಡಿಕೆ ವೇತನ ಪರಿಷ್ಕರಣೆ ಆಗಲೇಬೇಕು. 01-04-2022 ರಿಂದ ಪೂರ್ವನ್ವಯ ಆಗುವಂತೆ ವೇತನ ಪರಿಷ್ಕರಣೆ…
ಯಾದಗಿರಿ: ಪೊಲೀಸರ ಮೇಲೆ ಪಿಸ್ತೂಲ್ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಡಕಾಯಿತಿ (Robbery) ಗ್ಯಾಂಗ್ ಲೀಡರ್ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ. ಆರೋಪಿ ಮಹಮ್ಮದ್ ರಫಿಯನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ ಆತ ಪಿಸ್ತೂಲ್ ಹಾಗೂ ಚಾಕುವಿನಿಂದ ಹೆದರಿಸಿದ್ದಾನೆ. ಈ ವೇಳೆ ಸಿಪಿಐ ಸುನೀಲ್ ವಿ.ಮೂಲಿಮನಿ, ಪಿಸಿ ಅಬ್ದುಲ್ ಭಾಷ ಹಾಗೂ ಹರಿನಾಥರೆಡ್ಡಿಯವರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಆರೋಪಿ ಮೂವರ ಮೇಲೂ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಸಿಪಿಐ ಸುನೀಲ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಫೆ. 24ರಂದು ಯಾದಗಿರಿ ನಗರದಲ್ಲಿ ಉದ್ಯಮಿ ದೀಪಕ್ ನಂದಕಿಶೋರ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಎಂಟರಿಂದ ಹತ್ತು ಜನರ ತಂಡದಲ್ಲಿ ನಾಲ್ಕು ಜನ ದೀಪಕ್ ನಂದಕಿಶೋರ್ ಮನೆಯೊಳಗೆ ನುಗ್ಗಿ ಪಿಸ್ತೂಲ್ ತೋರಿಸಿ ಚಿನ್ನ, ಬೆಳ್ಳಿ, ಮೊಬೈಲ್ ಹಾಗೂ ಹಣವನ್ನು ದೋಚಿದ್ದರು. ದೀಪಕ್ ಕುಟುಂಬಸ್ಥರು ವಿರೋಧಿಸಿದಾಗ ಕಾರದಪುಡಿ ಎರಚಿ ವಿಕೃತಿ ಮರೆದಿದ್ದರು. ಈ ವೇಳೆ ದೀಪಕ್ ಸಹೋದರ…
ಹಾಸನ: ಪ್ರಧಾನಿ ನರೇಂದ್ರ ಮೋದಿಯವರಿಗೆ ಜೆಡಿಎಸ್ ಬಗ್ಗೆ ಮಾತನಾಡಲು ಸಬ್ಜೆಕ್ಟ್ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮೋದಿ ಜೆಡಿಎಸ್ (JDS) ಬಗ್ಗೆ ಮಾತನಾಡದಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಯಾವುದೇ ರೀತಿಯಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಚರ್ಚೆ ಮಾಡಲಿಕ್ಕೆ ಅವರತ್ರ ಸರಕು ಇಲ್ಲದೆ ಇರುವುದರಿಂದ ಜೆಡಿಎಸ್ ಬಗ್ಗೆ ಮಾತನಾಡಲು ಆಗಲ್ಲ. ದೇವೇಗೌಡರು ಪ್ರಧಾನಮಂತ್ರಿ ಆದಾಗ, ನಾನು ಮುಖ್ಯಮಂತ್ರಿ ಆದಾಗ ಇರಬಹುದು ಯಾವುದೇ ರೀತಿಯ ಈಗಿನ ಸರ್ಕಾರಗಳ ನಡವಳಿಕೆ ಏನಿದೆ. ಆ ರೀತಿ ಯಾವುದೇ ಭ್ರಷ್ಟಾಚಾರಕ್ಕೆ, ಕಾನೂನುಬಾಹಿರ ಚಟುವಟಿಕೆಗೆ ನಾವು ಪ್ರೋತ್ಸಾಹ ಕೊಡದೆ ಇರುವುದರಿಂದ ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡಲು ಎರಡು ರಾಷ್ಟ್ರೀಯ ಪಕ್ಷಗಳಿಗೆ ಸರಕಿಲ್ಲ ಎಂದು ವಾಗ್ದಾಳಿ ನಡೆಸಿದರು. ಜೆಡಿಎಸ್ ಪಕ್ಷದ ಬಗ್ಗೆ ಏನು ಮಾತಾಡ್ತಾರೆ, ಮಾತನಾಡಲು ಸಬ್ಜೆಕ್ಟ್ ಏನಿದೆ..?. ನಾನು ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ಮಂಡ್ಯಗೆ ಹಲವಾರು ಯೋಜನೆ ಕೊಟ್ಟೆ. ಇದೇ…
ಬೆಂಗಳೂರು: ಕಾಂಗ್ರೆಸ್ ಪಕ್ಷ ಹಿನಾಯ ಪರಿಸ್ಥಿತಿಯಲ್ಲಿದ್ದು, ಬಿಜೆಪಿ ಸಚಿವರಿಗೆ ಸಿ.ಡಿ. ತೋರಿಸಿ ಪಕ್ಷಕ್ಕೆ ಕರೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಸದಾಶಿವನಗರ ನಿವಾಸದ ಬಳಿ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಆಂತರಿಕವಾಗಿ ಏನೇನಾಗುತ್ತಿದೆಯೋ ಅದನ್ನು ಮೊದಲು ನೋಡಿಕೊಳ್ಳಲಿ. ನಿಮ್ಹಾನ್ಸ್ ಸೇರಬೇಕಾದ ಗಿರಾಕಿಗಳು ಹೇಳಿದ್ದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸುವುದು ಉತ್ತಮ’ ಎಂದು ತಿರುಗೇಟು ನೀಡಿದರು. ಡಿ.ಕೆ. ಶಿವಕುಮಾರ್ ಅವರ ಕೈಗೆ ರಾಜ್ಯ ಸಿಕ್ಕರೆ ಡಿ.ಕೆ. ಶಿವಕುಮಾರ್ ಟೋಲ್ ಎಂಬ ಮತ್ತೊಂದು ಟೋಲ್ ಹಾಕುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಅವರ ಆರೋಪದ ಬಗ್ಗೆ ಪ್ರಶ್ನಿಸಿದಾಗ, ‘ಟೋಲ್ ವಿಚಾರವಾಗಿ ಮಾತನಾಡುವುದೇ ಆದರೆ, ಸದ್ಯಕ್ಕೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ವಿಚಾರವಾಗಿ ಮಾತನಾಡೋಣ. ಮಿಕ್ಕ ವಿಚಾರವನ್ನು ನಂತರ ಮಾತನಾಡೋಣ’ ಎಂದರು. ಧೃವನಾರಾಯಣ ಅವರ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಡ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಧೃವನಾರಾಯಣ ಅವರ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಇನ್ನು ಪಕ್ಷದ…
ಬೆಂಗಳೂರು: ಬೆಂಗಳೂರಿನ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ಇಂದು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಭವ್ಯ ನರಸಿಂಹಮೂರ್ತಿ, ಮನೋಹರ್, ರಘುವೀರ್ ಗೌಡ, ಪುಟ್ಟರಾಜ್ ಅವರು ಟಿಕೆಟ್ ಗಾಗಿ ಲಾಬಿ ನಡೆಸಿದರು. ಹೊರಗಿನವರಿಗೆ ಟಿಕೆಟ್ ನೀಡಬೇಡಿ, ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಿ. ಬಿಜೆಪಿ ಇಂದ ವಲಸೆ ಬಂದ ಪುಟ್ಟಣ್ಣ ಗೆ ಮಣೆ ಹಾಕಬೇಡಿ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗಳು ಮನವಿ ಮಾಡಿದ್ದಾರೆ.
ಸದ್ಯ ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಡೇಟಿಂಗ್ ವಿಚಾರ ಸಖತ್ ಸದ್ದು ಮಾಡುತ್ತಿದೆ. ಇಬ್ಬರ ಡೇಟಿಂಗ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಈ ವಿಚಾರಕ್ಕೆ ಇದೀಗ ನಟಿ ತಮನ್ನಾ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಸದ್ಯ ಸಿನಿಮಾಗಿಂತ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗಿನ ಲವ್ವಿ- ಡವ್ವಿ ವಿಷ್ಯವಾಗಿಯೇ ಸಖತ್ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಲಿಪ್ ಲಾಕ್ ವೀಡಿಯೋ ವೈರಲ್ ಆದ ಮೇಲೆ ಇದೀಗ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ವದಂತಿಯನ್ನು ತಮನ್ನಾ ತಳ್ಳಿ ಹಾಕಿದ್ದಾರೆ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದಾರೆ. ತಮನ್ನಾ ಮತ್ತು ವಿಜಯ್ ವರ್ಮಾ ʻಲಸ್ಟ್ ಸ್ಟೋರಿ -2′ ಸಿನಿಮಾ ಸೆಟ್‌ನಲ್ಲಿ ಮೊದಲು…
ಬಳ್ಳಾರಿ: 2008ರ ಚುನಾವಣೆ ಸಂದರ್ಭದಲ್ಲಿ ಖುದ್ದು ಜನಾರ್ದನ ರೆಡ್ಡಿಯವರೇ ನನಗೆ ಬಿಜೆಪಿಯಿಂದ ಟಿಕೆಟ್ ಕೊಡದಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕಿ ತಡೆದಿದ್ದರು ಎಂದು ಮಾಜಿ ಶಾಸಕ ಅನಿಲ್ ಲಾಡ್ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರ ಚುನಾವಣೆ ಸಂದರ್ಭದಲ್ಲಿ ನಾನು ಅದೊಂದು ದಿನ ಗುಲಬರ್ಗಾದ ಖಾನಾಪುರದಲ್ಲಿ ಬಿಜೆಪಿ ಪರವಾಗಿ ಪ್ರಚಾರದಲ್ಲಿ ತೊಡಗಿದ್ದೆ. ಆ ಸಂದರ್ಭದಲ್ಲಿ ನನಗೆ ಕರೆ ಮಾಡಿದ್ದ ಯಡಿಯೂರಪ್ಪ, ಸಂತೋಷ್ ಅವರೇ ನಿಮಗೆ ಟಿಕೆಟ್ ಕೊಡಲು ಆಗುವುದಿಲ್ಲ. ನಿಮಗೆ ಟಿಕೆಟ್ ನೀಡದಂತೆ ಜನಾರ್ದನ ರೆಡ್ಡಿಯವರು ಒತ್ತಡ ಹಾಕಿದ್ದಾರೆ. ಹಾಗಾಗಿ, ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರೆಂದು ಅವರು ತಿಳಿಸಿದರು. ಕುಮಾರಸ್ವಾಮಿಯವರ ವಿರುದ್ಧ ಲಂಚದ ಆರೋಪ ಮಾಡಲು ಜನಾರ್ದನ ರೆಡ್ಡಿಯವರು ನನ್ನನ್ನು ಕರೆದಿದ್ದರು. ಆದರೆ, ನಾನು ಅದಕ್ಕೆ ಹೋಗಲಿಲ್ಲ. ನಾನು ಆಗ, ಗಣಿಗಾರಿಕೆ ಮಾಲೀಕರ ಸಂಘದ ಉಪಾಧ್ಯಕ್ಷನಾಗಿದ್ದೆ. ಹಾಗಾಗಿ, ನಾನು ಹೋಗಲಿಲ್ಲ. ಆ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯವರು ನನಗೆ ಸಿಗಬೇಕಿದ್ದ ಟಿಕೆಟ್ ತಪ್ಪಿಸಿದರು ಎಂದು ಅವರು ಹೇಳಿದರು. ತಮ್ಮ ಮಾತು ಮುಂದುವರಿಸಿದ…
ಕಲಬುರಗಿ: ಈ ಹಿಂದೆ ಕೌಟುಂಬಿಕ ವಿಚಾರವಾಗಿ ಸುದ್ದಿಯಾಗಿದ್ದ IPS ಅಧಿಕಾರಿ ಅರುಣ್ ರಂಗರಾಜನ್ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ, ಮಹಿಳಾ ASI ಜೊತೆ ರಂಗರಾಜನ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ, ಸಂತ್ರಸ್ಥ ASI ಪತಿ IPS ಅಧಿಕಾರಿ ಮತ್ತು ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ ಮಹಿಳಾ ಎಎಸ್ ಐ ಪತಿ ಹೆಡ್ ಕಾನ್ಸಟೇಬಲ್ ಕಂಟೆಪ್ಪನ ಕೈಯಲ್ಲಿ ಅರುಣ್ ರಂಗರಾಜನ್ ಮತ್ತು ಆಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.ಕಲಬುರ್ಗಿ ನಗರದ ಐವಾನ್ ಶಾಹೀ ಬಡವಾಣೆಯ ಪಿಡಬ್ಲುಡಿ ಕ್ವಾಟರ್ಸ್ ನಲ್ಲಿ ಅನೈತೀಕ ಸಂಬಂಧದಲ್ಲಿ ತೋಡಗಿದ್ದ ಇಬ್ಬರು ಸಿಕ್ಕಿಕೊಂಡಿದ್ದಾರೆ. ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಗೆ ನೀಡಿದ್ದ ಪಿಡಬ್ಲುಡಿ ಕ್ವಾಟರ್ಸ್ ನಲ್ಲೆ ಇಬ್ಬರು ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಅರೆ ಬೆತ್ತಲೆಯಾಗಿ ಮಲಗಿದ್ದ ಇಬ್ಬರನ್ನು ಕಂಡು ಎಎಸ್ ಐ ಪತಿ ಕಂಟೆಪ್ಪ ಶಾಕ್ ಆಗಿದ್ದಾನೆ. ಈ ವೇಳೆ ಹೆಂಡತಿ ಮತ್ತು ಐಪಿಎಸ್ ಅಧಿಕಾರಿ ಅರೆ ಬೆತ್ತಲೆಯಾಗಿ ಮಲಗಿರುವ ವಿಡಿಯೋ ಮಾಡಿದ್ದನು. ವಿಡಿಯೋ ಮಾಡಿದ ಹಿನ್ನಲೆ…
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ N.R.ರಮೇಶ್ ಅವರು, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮವಾಗಿ ಮತದಾರರ ಸೇರ್ಪಡೆ ಮಾಡಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಗುರಪ್ಪನಪಾಳ್ಯ ವಾರ್ಡ್, ಜಯನಗರ ಪೂರ್ವ ಮತ್ತು ಭೈರಸಂದ್ರ ವಾರ್ಡ್ಗಳ ವ್ಯಾಪ್ತಿಯಲ್ಲಿ 9 ತಿಂಗಳ ಅವಧಿಯಲ್ಲಿ ಸುಮಾರು 9,153ಕ್ಕೂ, ಹೆಚ್ಚು ಜನರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಈ ಪೈಕಿ ಶೇ. 50% ಕ್ಕೂ ಹೆಚ್ಚು ಮಂದಿ ತಮಿಳುನಾಡಿನ ಹೊಸೂರು, ಧರ್ಮಪುರಿ ಮತ್ತು ಕೃಷ್ಣಗಿರಿ ಭಾಗದವರಾಗಿದ್ದಾರೆ. ನಕಲಿ ಮತದಾರರ ಸೇರ್ಪಡೆಗೆ ಅಧಿಕಾರಿಗಳು ಹಣ ಪಡೆದಿದ್ದಾರೆ ಎಂದು ಆರೋಪಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ N.R.ರಮೇಶ್ ದೂರು ಸಲ್ಲಿಸಿದ್ದಾರೆ.