ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಮೀಸಲಾತಿ ನೀಡಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ ಎಂದು ಜೆಡಿಎಸ್ ಆಕ್ರೋಶ ಹೊರ ಹಾಕಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಉತ್ತರದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ವಂಚನೆ ನಮ್ಮ ಮೂಗಿನ ಕೆಳಕ್ಕೆ ನಡೆಯುತ್ತಿದೆ. ಉತ್ತರದವರ ಮುಂದೆ ಬೇಡಲು ನಾವೇನು ಅವರ ಗುಲಾಮರೆ? ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ ಹೊರತು ಭಿಕ್ಷೆಯಲ್ಲ’ ಎಂದು ಎಚ್ಚರಿಕೆ ನೀಡಿದೆ. ಡಬಲ್ ಎಂಜಿನ್ ಸರಕಾರ ಬಂದರೆ ರಾಜ್ಯಕ್ಕೆ ಲಾಭವಾಗಲಿದೆ ಎಂದು ಬಿಜೆಪಿ ಮುಖಂಡರು ಬೊಬ್ಬೆ ಹಾಕುತ್ತಿದ್ದರು. ಆದರೆ, ಈಗ ನಮ್ಮ ಮಕ್ಕಳಿಗೆ ಮೋಸವಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೆ, ಈ ಅನ್ಯಾಯವನ್ನು ಮೋದಿ ಅವರ ಗಮನಕ್ಕೆ ತನ್ನಿ. ನಡುಬಗ್ಗಿಸಿ ಇನ್ನೆಷ್ಟು ದಿನ ನಿಲ್ಲುವಿರಿ? ಅಧಿಕಾರದ ಕೊನೆಯಲ್ಲಾದರೂ ಸ್ವಾಭಿಮಾನಿಯಾಗಿ ಧ್ವನಿ ಎತ್ತಿ’ ಎಂದು ಜೆಡಿಎಸ್ ಲೇವಡಿ ಮಾಡಿದೆ.
Author: Prajatv Kannada
ಬೆಂಗಳೂರು: ಬೆಂಗಳೂರಿನ ಹೆಚ್ ಬಿಆರ್ ಲೇಔಟ್ ನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ಸಂಭವಿಸಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ. ಗೋವಿಂದಪುರ ಠಾಣೆ ಪೊಲೀಸರು ತನಿಖೆ ಪೂರ್ಣಗೊಳಿಸಿ ಚಾರ್ಜ್ಶೀಟ್ ಸಿದ್ಧಪಡಿಸಿದ್ದು, ಪೊಲೀಸರು ಕೆಲವೇ ದಿನಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ. ಗೋವಿಂದಪುರ ಪೊಲೀಸರು FIRನಲ್ಲಿರುವ ಎಲ್ಲಾ 9 ಮಂದಿ ವಿರುದ್ಧ ಚಾರ್ಜ್ಶೀಟ್ ಸಿದ್ಧಪಡಿಸಿದ್ದಾರೆ. ಐಐಟಿ ಸಲ್ಲಿಕೆ ಮಾಡಿದ ಎರಡು ವರದಿಗಳು, ಎಫ್‌ಎಸ್‌ಎಲ್ ರಿಪೋರ್ಟ್, ತಜ್ಞರ ವರದಿ ಆಧಾರದ ಮೇಲೆ ಚಾರ್ಜ್ಶೀಟ್ ತಯಾರಿಸಲಾಗಿದೆ. ಸೈಟ್ ಇಂಜಿನಿಯರ್, ಮೆಟ್ರೋ ಅಧಿಕಾರಿಗಳು, ಗುತ್ತಿಗೆದಾರರು, ಸೈಟ್ನಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ ಎಲ್ಲರ ವಿಚಾರಣೆ ನಡೆಸಿ ಗೋವಿಂದಪುರ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ. ತಜ್ಞರ ವರದಿಗಳ ಅಭಿಪ್ರಾಯ ಪರಿಶೀಲನೆ, ಹಾಗೂ ತಾಂತ್ರಿಕವಾಗಿ ತನಿಖೆ ನಡೆಸಿ ಲೋಪಕ್ಕೆ ಕಾರಣ ಏನು? ಯಾರ ವೈಫಲ್ಯ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಎಲ್ಲಾ ಅಂಶಗಳನ್ನ ತನಿಖಾ ತಂಡ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿದೆ
ಬೆಂಗಳೂರು: ಹಾಲಿನ ಉತ್ಪಾದನೆ ಕಡಿಮೆಯಾಗಿರುವುದಕ್ಕೆ ಭ್ರಷ್ಟ ಬಿಜೆಪಿ ಪಕ್ಷವೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಶಿವಾನಂದ ವೃತ್ತದ ಬಳಿ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ‘ರಾಜ್ಯದ ಪ್ರಮುಖ ದಿನ ಪತ್ರಿಕೆಗಳು ಇಂದು ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತಂತೆ ಅತ್ಯಂತ ಆತಂಕಕಾರಿಯಾದ ವರದಿಗಳನ್ನು ಪ್ರಕಟಿಸಿವೆ. ಈ ಮಾರ್ಚ್‍ನಲ್ಲಿ ಪ್ರತಿ ದಿನ 99 ಲಕ್ಷ ಲೀಟರುಗಳಷ್ಟು ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರುಗಳಷ್ಟು ಹಾಲನ್ನು ಮಾತ್ರ ಕೆಎಂಎಫ್ ಸಂಗ್ರಹಿಸುತ್ತಿದೆ. ಇದೂ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರಸ್ತುತ ಪ್ರತಿ ದಿನ ಸುಮಾರು 28 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ರಾಜ್ಯದ ಪಶುಪಾಲಕರಿಗೆ ಪ್ರತಿ ದಿನ ಸುಮಾರು 11 ಕೋಟಿ ರೂಪಾಯಿಗಳಷ್ಟು ಹಣ ಕೈತಪ್ಪಿ ಹೋಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸಂಸಾರಗಳನ್ನು ನಡೆಸಲು ಹೈನುಗಾರಿಕೆ ಒಂದು ಪ್ರಮುಖ ಸಾಧನವಾಗಿತ್ತು. ಇದಕ್ಕೆ ಯಾರು ಹೊಣೆ?’ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು: ಪ್ರಸ್ ಕ್ಲಬ್ ಸಭಾಂಗಣದಲ್ಲಿ ಮಾಜಿ ಶಾಸಕ ಎನ್ ಸೂರ್ಯನಾರಾಯಣ ರೆಡ್ಡಿ, ಎನ್. ಭರತ್ ರೆಡ್ಡಿ, ಎನ್ ಶರತ್ ರೆಡ್ಡಿ ಮತ್ತು ಅವರ ಕುಟುಂಬದವರು ಎನ್ ಪೂರ್ಣಿಮಾ, ಅರುಣಾ ರೆಡ್ಡಿ, ಸಿ ಸುನೀಲ್ ಕುಮಾರ್, ಎನ್ ಕವಿತಾ ಮತ್ತು ಎನ್. ಶಾರದಾ ಅವರ ಕುಟುಂಬದವರು ಫೋರ್ಜರಿ, ಮೋಸ ಮಾಡಿದ್ದು ಈ ಕುರಿತು ವಕೀಲರಾದ ಆರ್. ಪಾಂಡು, ಟಿ ಹನುಮರೆಡ್ಡಿ ಮತ್ತು ನೀರಜ್ ರಾಜೀವ್ ಶಿವಮ್ ಅವರು ಪತ್ರಿಕಾಗೋಷ್ಠಿ ನಡೆಸಿ, ದಾಖಲೆ ಬಿಡುಗಡೆಗೊಳಿಸಿದರು ಎನ್.ಅರುಣಾರೆಡ್ಡಿರವರು ಮಾತನಾಡಿ ನಾನು ಬಳ್ಳಾರಿ ನಿವಾಸಿಗಳಾಗಿದ್ದು ನನ್ನ ತಂದೆಯವರು, ಶ್ರೀ ರಾಘವೇಂದ್ರ ಎಂಟರ್ ಪ್ರೈಸಸ್ ರಾಜಕಾರಣಿ ಮಾಜಿ ಶಾಸಕರಾದ ಸೂರ್ಯನಾರಾಯಣರೆಡ್ಡಿರವರ ಜೊತೆಯಲ್ಲಿ ಪಾಲುದಾರರಾಗಿ ಸಂಸ್ಥೆ ನಡೆಸುತ್ತಿ ದ್ದರು. ನಮ್ಮ ತಂದೆಯವರು ಅಕಾಲಿಕವಾಗಿ ಮರಣ ಹೊಂದಿದರು ಮತ್ತು ಪಾಲುದಾರರಾಗಿದ್ದ ನಮ್ಮ ತಂದೆಯರವರು ಎಷ್ಟು ಹಣ ಹೊದಿಕೆ ಮತ್ತು ಜಮೀನು ಹೊಂದಿದ್ದರು ಎಂದು ನಮಗೆ ತಿಳಿದಿರಲ್ಲಿಲ. ಅದರೆ ಅದಾಯ ತೆರಿಗೆ ಇಲಾಖೆ ವತಿಯಿಂದ ನಮ್ಮ ಆಸ್ತಿ ವಿವರದ ಬಗ್ಗೆ ತಿಳಿಯುತ್ತದೆ.ನಮ್ಮ ತಂದೆಯವರಿಗೆ ಸೇರಿದ್ದ…
ಅಹಮದಾಬಾದ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ICC World Test Championship) ಭಾರತ (India) ಪಾಲ್ಗೊಳ್ಳುತ್ತಾ ಇಲ್ಲವೋ ಎನ್ನುವುದು ಈಗ ಶ್ರೀಲಂಕಾ, ನ್ಯೂಜಿಲೆಂಡ್ (Sri Lanka New Zealand) ನಡುವೆ ನಡೆಯುತ್ತಿರುವ ಪಂದ್ಯದ ಫಲಿತಾಂಶದ ಮೇಲೆ ನಿರ್ಧಾರವಾಗುವ ಸಾಧ್ಯತೆಯಿದೆ. ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾದ (Australia) ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಗಳಿಸಿದ್ದರೆ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಈ ಪಂದ್ಯ ಡ್ರಾ ಆಗುವ ಸಾಧ್ಯತೆಯೇ ಹೆಚ್ಚಿರುವ ಕಾರಣ ಭಾರತದ ಭವಿಷ್ಯ ಈಗ ನ್ಯೂಜಿಲೆಂಡ್ ಕೈಯಲ್ಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳನ್ನು ಜಯಿಸಿದರೆ ಶ್ರೀಲಂಕಾ ಫೈನಲ್ ಪ್ರವೇಶಿಸಲಿದೆ. ಒಂದು ಪಂದ್ಯ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಭಾರತ ಫೈನಲ್ ಪ್ರವೇಶಿಸಲಿದೆ. ಪ್ರಸ್ತುತ 68.52 ಪಿಸಿಟಿ (Percentage Of Points Earned) ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ 60.29 ಪಿಸಿಟಿ ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ 53.33 ಪಿಸಿಟಿ ಹೊಂದಿದ್ದು ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ…
ಮುಂಬೈ: ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಜವಾಬ್ದಾರಿ ಅರ್ಧಶತಕ ಹಾಗೂ ನಾಟ್ ಸ್ಕಿವರ್ ಬ್ರಂಟ್, ಯಸ್ತಿಕಾ ಭಾಟಿಯ ಸಾಂಘಿಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಯುಪಿ ವಾರಿಯರ್ಸ್ (UP Warriorz) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸಿಕ್ಸರ್ ಬೌಂಡರಿಗಳ ಆಟದಲ್ಲಿ ಬರೋಬ್ಬರಿ 45 ಬೌಂಡರಿ, 5 ಸಿಕ್ಸರ್‌ಗಳು ದಾಖಲಾದವು. ಮುಂಬೈ ಇಂಡಿಯನ್ಸ್ ಪರ 25 ಬೌಂಡರಿ, 3 ಸಿಕ್ಸರ್ ಸಿಡಿದರೆ, ವಾರಿಯರ್ಸ್ ಪರ 20 ಬೌಂಡರಿ 2 ಸಿಕ್ಸರ್‌ಗಳಷ್ಟೇ ದಾಖಲಾದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿರ್ಸ್ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. 160 ಗುರಿ ಬೆನ್ನತ್ತಿದ್ದ ಹರ್ಮನ್‌ಪ್ರೀತ್‌ಕೌರ್ ಪಡೆ 17.3 ಓವರ್‌ಗಳಲ್ಲೇ 2 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಚೇಸಿಂಗ್ ಆರಂಭಿಸಿದ ಮುಂಬೈ ತಂಡ…
ಅಹಮದಾಬಾದ್: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಶತಕದ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 88 ರನ್‌ಗಳ ಮುನ್ನಡೆ ಸಾಧಿಸಿದೆ. ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 4ನೇ ದಿನದಾಟದ ಅಂತ್ಯಕ್ಕೆ 178.5 ಓವರ್‌ಗಳಲ್ಲಿ 571 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 6 ಓವರ್‌ಗಳಲ್ಲಿ ಕೇವಲ 3 ರನ್ ಗಳಿಸಿ 88 ರನ್‌ಗಳ ಹಿನ್ನಡೆಯಲ್ಲಿದೆ. ಆರಂಭಿಕರಾದ ಟ್ರಾವಿಸ್ ಹೆಡ್ (Travis Head) 18 ಎಸೆತಗಳಲ್ಲಿ 3 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಮ್ಯಾಥಿವ್ ಕುನ್ಹೆಮನ್ ಯಾವುದೇ ರನ್‌ಗಳಿಸದೇ ವಿಕೆಟ್ ಉಳಿಸಿಕೊಂಡಿದ್ದು, ಸೋಮವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಶತಕದ ಬರ ನೀಗಿಸಿಕೊಂಡ ಕೊಹ್ಲಿ: 4ನೇ ದಿನ ಆಸ್ಟ್ರೇಲಿಯಾ ವಿರುದ್ಧ ತಾಳ್ಮೆಯ ಆಟವಾಡಿದ ಕೊಹ್ಲಿ 1,205 ದಿನಗಳ ಬಳಿಕ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ತಮ್ಮ ವೃತ್ತಿಜೀವನದ 75ನೇ ಶತಕ ಪೂರ್ಣಗೊಳಿಸಿದರು.…
ಅಹಮದಾಬಾದ್: ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಸರಣಿಯ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಶತಕ ಸಿಡಿಸುವ ಮೂಲಕ ಬಹುದಿನಗಳ ಶತಕದ ಬರ ನೀಗಿಸಿಕೊಂಡಿದ್ದಾರೆ. 2019ರಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಬರೋಬ್ಬರಿ 1,205 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 28ನೇ ಶತಕ ಸಿಡಿಸಿದ್ದು, 75 ಶತಕಗಳನ್ನ ಪೂರೈಸಿದ್ದಾರೆ. ಬಾರ್ಡರ್ ಗಾವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್‌ನ 4ನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ 241 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಶತಕ ಸಿಡಿಸಿದ್ದಾರೆ. ಇದು ಕೊಹ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 28ನೇ ಶತಕ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ 75ನೇ ಶತಕವಾಗಿದೆ. ಜೊತೆಗೆ ಇದು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಸಿಡಿಸಿದ 16ನೇ ಶತಕವಾಗಿದೆ. ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ 20 ಶತಕಗಳನ್ನು ಸಿಡಿಸಿದ್ದರು. ಸಚಿನ್ ತೆಂಡೂಲ್ಕರ್ 566 ಇನ್ನಿಂಗ್ಸ್‌ಗಳಲ್ಲಿ 75 ಶತಕಗಳನ್ನ ಸಿಡಿಸಿದ್ದರು.…
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರತಿ ಭಾರಿಯೂ ಒಂದಲ್ಲ ಒಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೆ ಹೊಸ ಅವತಾರದಲ್ಲಿ ಅಭಿಮಾನಿಗಳ ಕಣ್ಣಿಗೆ ದರ್ಶನ ಕೊಟ್ಟಿದ್ದಾರೆ. ಸೌತ್ ಮತ್ತು ಬಾಲಿವುಡ್ ನಟಿಯಾಗಿರುವ ರಶ್ಮಿಕಾ, ಖಾಸಗಿ ಇವೆಂಟ್‌ನಲ್ಲಿವೊಂದರಲ್ಲಿ ರ್ಯಾಂಪ್ ಮಾಕ್ ಮಾಡಿದ್ದು, ಸದ್ಯ ನಟಿಯ ಹೊಸ ಲುಕ್ ನೆಟ್ಟಿಗರ ಗಮನ ಸೆಳೆದಿದೆ. ಬಾಲಿವುಡ್ ಗೆ ಎಂಟ್ರಿಕೊಟ್ಟ ಬಳಿಕ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ಮುಂಬೈನಲ್ಲಿ ನಡೆದ ಫ್ಯಾಷನ್ ವಿಕ್ ಇವೆಂಟ್‌ವೊಂದರಲ್ಲಿ ರಶ್ಮಿಕಾ ರ್ಯಾಂಪ್ ವಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕಪ್ಪು ಬಣ್ಣ ಮಾಡ್ರನ್ ಸೀರೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದು ಸದ್ಯ ರಶ್ಮಿಕಾ ಹೊಸ ಫೋಟೋಸ್ ಇಂಟರ್‌ನೆಟ್‌ನಲ್ಲಿ ಸದ್ದು ಮಾಡ್ತಿದೆ. ರ್ಯಾಂಪ್ ವಾಕ್ ನಲ್ಲಿ ರಶ್ಮಿಕಾ ಮಾತ್ರವಲ್ಲದೇ ಅಥಿಯಾ ಶೆಟ್ಟಿ, ತಾಪ್ಸಿ ಪನ್ನು, ಮಲೈಕಾ ಅರೋರಾ, ಪರಿಣಿತಿ ಚೋಪ್ರಾ ಸೇರಿದಂತೆ ಹಲವರು ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.
95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದಾರೆ. ಚಿತ್ರತಂಡಕ್ಕೆ ಅಭಿನಂದನೆಗಳು. ವಿಶ್ವ ವೇದಿಕೆಯಲ್ಲಿ ತೆಲುಗು ಚಿತ್ರರಂಗದ ಕೀರ್ತಿ ಬೆಳಗಲಿದೆ ಎಂದರು. RRR ನ ಚಿತ್ರವು ವಿಶ್ವದಲ್ಲಿ ಪ್ರಾಬಲ್ಯ ಸಾಧಿಸಿದೆ. ಇದು ವಿಶ್ವದಲ್ಲಿ ತೆಲುಗು ಚಿತ್ರರಂಗದ ಮಟ್ಟವನ್ನು ಸಾಬೀತುಪಡಿಸಿದೆ. ಆಸ್ಕರ್ ಸಮಾರಂಭದಲ್ಲಿ ನಟು ನಾಟು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತು ಮತ್ತು ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಕೊಂಡಿತು. ಈ ಸಂದರ್ಭದಲ್ಲಿ ಚಿರು ಚಿತ್ರತಂಡವನ್ನು ಅಭಿನಂದಿಸಿದ್ದಾರೆ. “ಭಾರತವನ್ನು ಯಾವಾಗಲೂ ಕನಸು ಎಂದು ಭಾವಿಸಲಾಗಿತ್ತು. ಆದರೆ ಒಬ್ಬ ವ್ಯಕ್ತಿಯ ದೂರದೃಷ್ಟಿ, ಧೈರ್ಯ ಮತ್ತು ಪರಿಶ್ರಮದಿಂದ ಅದು ನನಸಾಯಿತು. ಈಗ ಕೋಟ್ಯಂತರ ಭಾರತೀಯರ ಹೃದಯಗಳು ಹೆಮ್ಮೆಯಿಂದ ಉಬ್ಬುತ್ತವೆ. ಆರ್‌ಆರ್‌ಆರ್ ತಂಡದ ಎಲ್ಲರಿಗೂ ನಮನಗಳು” ಎಂದು ಚಿರು ಟ್ವೀಟ್ ಮಾಡಿದ್ದಾರೆ.