ರಾಯಚೂರು: ಅಬಕಾರಿ ಅಧಿಕಾರಿಗಳು (Excise Department) ಹಾಗೂ ಚುನಾವಣಾ ಎಫ್‍ಎಸ್‍ಟಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 70 ಲಕ್ಷ ರೂ. ಮೌಲ್ಯದ 850 ಕೆ.ಜಿ ಕಲಬೆರಿಕೆ ಸೇಂದಿ ತಯಾರಿಕೆಗೆ ಬಳಸುವ ಸಿಹೆಚ್ ಪೌಡರ್ (CH Powder) ಜಪ್ತಿ ಮಾಡಿದ ಘಟನೆ ರಾಯಚೂರಿನ (Raichur) ಕಡಗಂದೊಡ್ಡಿ ಗ್ರಾಮದಲ್ಲಿ ನಡೆದಿದೆ. ಓರ್ವ ಆರೋಪಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ತಾಯನಗೌಡ ಹಾಗೂ ನರಸರಾಜು ಎಂಬುವವರ ಜಮೀನಿನಲ್ಲಿ ಸಿಹೆಚ್ ಪೌಡರ್ ಜಪ್ತಿಯಾಗಿದೆ. ಆರೋಪಿ ನರಸರಾಜುನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಮೀನಿನಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ನೀರಿನ ಸಂಪ್ ರೀತಿ ನಿರ್ಮಿಸಿದ್ದ ಜಾಗದಲ್ಲಿ 32 ಚೀಲಗಳಲ್ಲಿ ತುಂಬಿಟ್ಟಿದ್ದ ಸಿಹೆಚ್ ಪೌಡರ್‍ನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಈಗಾಗಲೇ ಕಲಬೆರಿಕೆ ಸೇಂದಿ ತಯಾರಿಕೆ ಹಾಗೂ ಮಾರಾಟ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಚುನಾವಣೆ (Election) ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಿಗೆ ಸೇಂದಿ ಸರಬರಾಜು ಮಾಡಲು ಅಕ್ರಮವಾಗಿ ಸಿಹೆಚ್ ಪೌಡರ್ ಸಂಗ್ರಹಿಸಿರುವ ಅನುಮಾನವಿದೆ. ಆರೋಪಿಗಳ ಗಡಿಪಾರಿಗೆ ಶಿಫಾರಸು ಮಾಡಲಾಗುವುದು ಎಂದು ಅಬಕಾರಿ…
Author: Prajatv Kannada
ಬೀದರ್ (ಏ.22): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಾವಗಿ ಗ್ರಾಮದ ವಿವಿಧ ಪಕ್ಷಗಳ ನೂರಾರು ಜನ ಯುವಕರು, ಮಹಿಳೆಯರು, ಮುಖಂಡರು, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೀದರ್ ನಗರದ ಒಲ್ಡ್ ಸಿಟಿ (ಹಳೆ ಸರ್ಕಾರಿ ಆಸ್ಪತ್ರೆ ಹತ್ತಿರ) ಯ ತಮ್ಮ ನಿವಾಸದ ಆವರಣದಲ್ಲಿ ಬಾವಗಿ ಗ್ರಾಮದ ವಿವಿಧ ಪಕ್ಷಗಳ ಪ್ರಮುಖರು, ನೂರಾರು ಜನ ಯುವಕರು, ಮಹಿಳೆಯರು, ಮುಖಂಡರಿಗೆ ಶನಿವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಜೆಡಿಎಸ್ ಪಕ್ಷದ ಜನಪರ ಕೆಲಸಗಳನ್ನು ಮೆಚ್ಚಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ನಮ್ಮ ಪಕ್ಷ ಬಡವರ, ರೈತರ, ಶ್ರಮಿಕರ ಪರವಾಗಿ ಕೆಲಸ ಮಾಡುವ ಪಕ್ಷವಾಗಿದೆ. ನಾವು ಅಧಿಕಾರದಲ್ಲಿ ಇದ್ದಾಗಲೆಲ್ಲಾ…
ಬೆಂಗಳೂರು: ಸಚಿವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತಾ ಸಿಂಗ್(Samyukta Singh) ಬಿಜೆಪಿಗೆ (bjp)ರಾಜೀನಾಮೆ ನೀಡಿ, (Congress ) ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ವಿಧಾನಸಭಾ ಚುನಾವಣಾ ಅಖಾಡ ಕ್ಷಣ ಕ್ಷಣಕ್ಕೂ ಕದನ ಕೌತುಕಕ್ಕೆ ಸಾಕ್ಷಿಯಾಗುತ್ತಿದೆ. ಇನ್ನೂ ರಾಣಿ ಸಂಯುಕ್ತಾ ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಕೂಡ ಆಗಿದ್ದರು. ಹೊಸಕೋಟೆ(Hosakote) ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಟಿಕೆಟ್ ವಂಚನೆಯಾಗಿದ್ದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಅಸಮಾಧನಗೊಂಡು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಕಾಂಗ್ರೆಸ್ ಸೇರ್ಪಡೆ ನಿಟ್ಟಿನಲ್ಲಿ ನಿನ್ನೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ರಾಣಿ ಸಂಯುಕ್ತಾ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಡ್ಡಾಯ (Voting) ಮತದಾನ ಮಾಡಲು ಮತದಾರರಿಗೆ ಜಾಗೃತಿ ಮೂಡಿಸಲು ಬಿಬಿಎಂಪಿ (BBMP)ವತಿಯಿಂದ ಸತ್ವಾ ಅಪಾರ್ಟ್ ಮೆಂಟ್ ಮತ್ತು ರಹೇಜ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆಯಲ್ಲಿ ಮತದಾನ ಜಾಗೃತಿ ಸಭೆ ಮತ್ತು ಪಟ್ಟೇಗಾರಪಾಳ್ಯದಲ್ಲಿ ಸೆಂಟ್ ಪಾಲ್ಸ್ ಬಿಎಡ್ ಕಾಲೇಜು ವಿದ್ಯಾರ್ಥಿಗಳ ಜೊತೆಯಲ್ಲಿ ಜಾಥ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ವಲಯ ಆಯುಕ್ತರಾದ ಡಾ. ಆರ್.ಎಲ್.ದೀಪಕ್( Deepak) ರವರು ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಮತ ಚಾಲಾಯಿಸಲು ಅವಕಾಶ ನೀಡಿದ್ದು, ಮತದಾನ ಮಾಡುವುದು ಅತ್ಯಮೂಲ್ಯವಾದುದ್ದಾಗಿದೆ. ಆದ್ದರಿಂದ ಎಲ್ಲಾ, ಮತದಾರರು ತಪ್ಪದೇ ಮತದಾನ ಮಾಡಿ ಎಂದು ಕೋರಿದರು. ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು. ಆದ್ದರಿಂದ ಎಲ್ಲಾ ಯುವ ಮತದಾರರು ಮತದಾನದ ಪ್ರಾಮುಖ್ಯತೆಯನ್ನು ಅರಿತು ಮತದಾನ ಮಾಡಲು ಕೋಡಿದರು. ಜಂಟಿ ಆಯುಕ್ತರಾದ ಲೋಕನಾಥ್( Loknath)ರವರು ಮಾತನಾಡಿ, ಭಾರತ ದೇಶದ ಪ್ರಜೆಗಳಾದ ತಮಗೆ ಚುನಾವಣೆ ಆಯೋಗ ತಾವುಗಳು ಮತದಾನ ಮಾಡಲು ಬೇಕಾದ ಮತದಾರ ಪಟ್ಟಿ, ಮತದಾನ ಮಾಡಲು…
ಕೆ.ಆರ್.ಪುರ: ಕೆ.ಆರ್.ಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ.ಮೋಹನ್ ನೇತೃತ್ವದಲ್ಲಿ ಮಾಜಿ ನಗರಸಭಾ ಸದಸ್ಯ ಸ್ವತಂತ್ರ ನಗರದ ಬಾಲಕೃಷ್ಣ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಸಮ್ಮುಖದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಅವರ ಜೊತೆಗೆ ಗ್ರಾಮದ 200 ಕ್ಕೂ ಹೆಚ್ಚು ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಬಿಜೆಪಿ ಶಾಕ್ ನೀಡಿದ್ದಾರೆ. ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ರಾಜ್ಯದಲ್ಲಿನ 40% ಸರ್ಕಾರವನ್ನು ಕಿತ್ತೆಸೆದು,ಜನಪರ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರವಂತೆ ತಿಳಿಸಿದರು. ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಹೆಸರು ಮಾಡಿದೆ,ಇಂತಹ ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡುವಂತೆ ಮನವಿ ಮಾಡಿದರು. ನಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಮೋಹನ್ ಬಾಬು ಮಾತನಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತವರಣವಿದೆ ಈ ಬಾರಿ ಕಾಂಗ್ರೆಸ್ ಕ್ಷೇತ್ರದಲ್ಲಿ ಜಯಭೇರಿ ಭಾರಿಸಲಿದೆ ಎಂದು ತಿಳಿಸಿದರು. ಸಿದ್ದರಾಮಯ್ಯದ ನೇತೃತ್ವದ ಸರ್ಕಾರ ಮಾಡಿರುವ ಜನಪರ ಕಾರ್ಯಗಳು ನಮಗೆ ಶ್ರೀರಕ್ಷೆಯಾಗಲಿದೆ. ಕಳೆದ…
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 12,193 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.ದೇಶದಲ್ಲಿ ಒಂದೇ ದಿನದಲ್ಲಿ 42 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಈವರೆಗೆ 5,31,300 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ 67,556 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 4,42,83,021 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ನಿನ್ನೆ 05,602 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 220,66,37,581 ಡೋಸ್ ಲಸಿಕೆ ಹಾಕಲಾಗಿದೆ. 24 ಗಂಟೆಯಲ್ಲಿ 01,97,477 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.
ನವದೆಹಲಿ: 2002ರ ಗೋಧ್ರಾ (Godhra) ರೈಲು ಬೋಗಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣದ ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಜಾಮೀನು (Bail) ಮಂಜೂರು ಮಾಡಿದೆ. ಪ್ರಕರಣದ ಇತರ ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (Chief Justice of DY Chandrachud) ನೇತೃತ್ವದ ಪೀಠವು 17 ವರ್ಷಗಳಿಂದ ಜೈಲುವಾಸ ಅನುಭವಿಸಿದ ಎಂಟು ಅಪರಾಧಿಗಳಿಗೆ ಜಾಮೀನು ನೀಡಿದೆ. ವಿಚಾರಣಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ಅವರ ಜಾಮೀನು ಅರ್ಜಿಯನ್ನು ಈಗ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪ್ರಕರಣದಲ್ಲಿ 11 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದರೆ, ಇತರೆ 20 ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ದೋಷಿಗಳು ರೈಲಿನ ಬೋಗಿಗಳ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿದ ಪ್ರಕರಣ ಗಂಭೀರ ಅಪರಾಧವಾಗಿದೆ ಎಂದು ಗುಜರಾತ್ ಸರ್ಕಾರ ಕೋರ್ಟ್ ಗಮನಕ್ಕೆ ತಂದಿತ್ತು. ಏನಿದು ಪ್ರಕರಣ? ಫೆಬ್ರವರಿ…
ತಮಿಳಿನ ಖ್ಯಾತ ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಇತ್ತೀಚೆಗೆ ದೂರವಾಗಿದ್ದಾರೆ. ಇಬ್ಬರ ನಡುವಿನ ಮನಸ್ತಾಪದಿಂದ ಡಿವೋರ್ಸ್ ಪಡೆದುಕೊಂಡಿದ್ದು ಈ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿತ್ತು. ಧನುಷ್ ಹಾಗೂ ಐಶ್ವರ್ಯ ದೂರವಾಗಲು ನಟಿ ಶೃತಿ ಹಾಸನ್ ಕಾರಣ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಶ್ರುತಿ ಹಾಸನ್ ಧನುಷ್ ಡಿವೋರ್ಸ್ ಗೆ ಕಾರಣ ತಾನಲ್ಲ ಎಂದಿದ್ದಾರೆ. ಧನುಷ್ ಮತ್ತು ಐಶ್ವರ್ಯ ಡಿವೋರ್ಸ್ ಕುರಿತು ಪ್ರತಿಕ್ರಿಯಿಸಿರುವ ಶ್ರುತಿ ಹಾಸನ್, ‘ಅವರ ಬದುಕಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ಕಾರಣದಿಂದಾಗಿ ದೂರವಾಗಿಲ್ಲ. ನಾನು ಮತ್ತು ಧನುಷ್ ಒಳ್ಳೆಯ ಸ್ನೇಹಿತರು ನಿಜ. ಅದು ಕೇವಲ ವೃತ್ತಿ ಸ್ನೇಹವಾಗಿತ್ತು. ನನ್ನ ಕಷ್ಟದ ದಿನಗಳಲ್ಲಿ ಅವರು ಸಹಾಯ ಮಾಡಿದ್ದಾರೆ. ಅದರಾಚೆ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಧನುಷ್ ಹಾಗೂ ಶ್ರುತಿ ಹಾಸನ್ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಲ್ಲದೆ ಈ ಜೋಡಿ ಹಿಟ್ ಪೇರ್ ಎನಿಸಿಕೊಂಡಿತ್ತು.…
ಖ್ಯಾತ ಬಹುಭಾಷ ನಟಿ ಜ್ಯೂಲಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್ ಸದ್ಯ ಕಷ್ಟದ ದಿನಗಳನ್ನು ನಡೆಸುತ್ತಿದ್ದಾರೆ. ಆದರೂ ಯಾರ ಬಳಿಯೂ ಸಹಾಯ ಕೇಳದೆ ಸೋಪು ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಐಶ್ವರ್ಯ ಭಾಸ್ಕರನ್ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿ ಇದೀಗ ತಾವು ಎದುರಿಸಿದ ಕಷ್ಟವನ್ನು ನೆನೆದು ಐಶ್ವರ್ಯ ಭಾಸ್ಕರನ್ ಕಣ್ಣೀರಿಟ್ಟಿದ್ದಾರೆ. 1989ನೇ ಇಸವತಿಯಲ್ಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಐಶ್ವರ್ಯ ಭಾಸ್ಕರನ್ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದರು ಕಷ್ಟದಲ್ಲೇ ಜೀವನ ದೂಡುತ್ತಿದ್ದಾರೆ. ಸಿನಿಮಾದ ಜೊತೆಗೆ ಸೀರಿಯಲ್ ನಲ್ಲಿ ನಟಿಸಿದ್ದರು ಇತ್ತೀಚಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿಲ್ಲವಂತೆ. ಹಾಗಾಗಿ ತಮ್ಮದೇ ಯುಟ್ಯೂಬ್ ಕೂಡ ಮಾಡಿಕೊಂಡಿದ್ದು, ಅಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಹೊಸ ಅಡುಗೆಗಳ ವಿಡಿಯೋ ಕೂಡ ಹಾಕಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ನಟಿ ಗರಂ ಆಗಿದ್ದಾರೆ. ತಾವು ಸಿಂಗಲ್ ಇರುವ ಕಾರಣದಿಂದಾಗಿಯೇ ಕೆಲವರು ಕೆಟ್ಟ ಕೆಟ್ಟ ಮೆಸೇಜ್ ಗಳನ್ನು ಕಳುಹಿಸುತ್ತಾರೆ.…
ಚೆನ್ನೈ: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಇತ್ತೀಚೆಗಷ್ಟೇ ತಮ್ಮ ನಾಯಕತ್ವದಲ್ಲಿ 200ನೇ ಪಂದ್ಯ ಪೂರೈಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್ ಧೋನಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸ್ಟಂಪ್ಸ್ ಹಿಂದೆ 200 ವಿಕೆಟ್‌ಗಳನ್ನು ಪೂರೈಸಿದ್ದಾರೆ. 41ರ ಪ್ರಾಯದ ಎಂಎಸ್ ಧೋನಿ ಈಗಲೂ ಯುವ ಆಟಗಾರರನ್ನು ನಾಚಿಸುವಂತಹ ಫಿಟ್‌ನೆಸ್ ಹಾಗೂ ಮೈದಾನದಲ್ಲಿ ಲವಲವಿಕೆಯಿಂದ ಕೂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಒಂದು ಕ್ಯಾಚ್, ಒಂದು ಸ್ಟಂಪ್ ಹಾಗೂ ಒಂದು ರನ್ ಔಟ್ ಮಾಡುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ವಿಕೆಟ್ ಕೀಪರ್ ಆಗಿ 200 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದ ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಸ್ಟಾರ್ ಬ್ಯಾಟಿಂಗ್ ವಿಭಾಗವಿದ್ದರೂ ಸಿಎಸ್‌ಕೆ ಬೌಲರ್‌ಗಳ ಎದುರು ಹಿನ್ನಡೆ ಅನುಭವಿಸಿದರು. ನಾಯಕ ಏಡೆನ್ ಮಾರ್ಕ್ರಮ್ ಅವರನ್ನು ಮಹೇಶ್ ತೀಕ್ಷಣ ಅವರ ಬೌಲಿಂಗ್‌ನಲ್ಲಿ ಅದ್ಭುತ ಕ್ಯಾಚ್ ಪಡೆದು ಗಮನ ಸೆಳೆದ…