ಮಂಡ್ಯ :- ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ಚಾರ್ಜಿಂಗ್ ಹಾಕಿದ್ದ ವೇಳೆ ಸ್ಪೋಟಗೊಂಡು ಒರ್ವ ಬಾಲಕ, ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಈ ಗ್ರಾಮದ ಮುತ್ತುರಾಜ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳಾದ ಟಿವಿ, ಫ್ರಿಡ್ಜ್ ಹಾಗೂ ದವಸ ಧಾನ್ಯ ಸೇರಿದಂತೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಮುತ್ತುರಾಜ್ ಮದ್ದೂರಿನ ಪ್ರವಾಸಿ ಮಂದಿರದ ಬಳಿ ಇರುವ E -ROUTE ಕಂಪನಿಯಲ್ಲಿಎಲೆಕ್ಟ್ರಿಕಲ್ ಬೈಕ್ ಅನ್ನು 7 ತಿಂಗಳ ಹಿಂದೆ ಖರೀದಿ ಮಾಡಿದ್ದರು.ಎಂದಿನಂತೆ ತಮ್ಮ ಮನೆಯ ಒಳಗೆ ನಿಲ್ಲಿಸಿದ್ದ ಬೈಕ್ ಗೆ ಚಾರ್ಜಿಂಗ್ ಹಾಕಿದ್ದಾರೆ. ಕೆಲ ಹೊತ್ತಿನಲ್ಲೇ ಬೈಕ್ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ. ಇದರಿಂದ ಮನೆತುಂಬಾ ಬೆಂಕಿ ಜ್ವಾಲೆ ಕಾಣಿಸಿಕೊಂಡು ಇಡೀ ಮನೆಗೆ ವ್ಯಾಪಿಸಿದೆ. ಬೆಂಕಿ ವ್ಯಾಪಿಸಿದ ಪರಿಣಾಮ ಟಿವಿ, ಫ್ರಿಡ್ಜ್, ಡೈನಿಂಗ್ ಟೇಬಲ್, ಎರಡು ಮೊಬೈಲ್ ಎಲೆಕ್ಟ್ರಾನಿಕ್ ವೈರ್ ಗಳು ಹಾಗೂ…
Author: Prajatv Kannada
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಡ್ಯ ಹೆಲಿಪ್ಯಾಡ್‍ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಗಾರ್ಲೆಂಡ್ ಮಾಡಿ ಸ್ವಾಗತಕೋರಿದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ಫೈಟರ್ ರವಿ (Fighter Ravi) ಸಹ ಮೋದಿ ಅವರಿಗೆ ಸ್ವಾಗತಕೋರಿದ್ದಾರೆ. ಕಾಂಗ್ರೆಸ್ ಫೈಟರ್ ರವಿ ವಿಚಾರ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಇದೀಗ ಕಾಂಗ್ರೆಸ್ (Congress) ಮುಗಿಬಿದ್ದಿದೆ. ಮೋದಿ ಅವರು ಮಂಡ್ಯಗೆ ಬಂದಾಗ ಫೈಟರ್ ರವಿ ಸ್ವಾಗತ ಮಾಡುವ ಫೋಟೋ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿದೆ. ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವಿಲ್ಲ. ಫೈಟರ್ ರವಿ ಎಂಬ ರೌಡಿಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.
ಬೀದರ್ (ಮಾ.13): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಣದೂರ, ಖಾಜಾನಗರ, ಚೌಕಿ ತಾಂಡಾ ಗ್ರಾಮಗಳ ನೂರಾರು ಜನ ಯುವಕರು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಭಾನುವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ವಿವಿಧ ಗ್ರಾಮಗಳ ಯುವಕರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಆಣದೂರಿನ ನವನಾಥ ಶಿಂಧೆ, ರಾಕೇಶ್ ಬೋಸ್ಲೆ, ಅಂಕುಶ ಅಣದೂರೆ, ಪವಿತ್ರಕುಮಾರ್, ಶಿವಕುಮಾರ್, ಮುಕೇಶ್ ಬೋಸ್ಲೆ, ಪಂಡಿತ್ ಬೊಲಾ, ರಜನಿಕಾಂತ್ ಕಾಂಬ್ಳೆ, ರಾಕೇಶ ರೇಕೆ, ಸಂದೀಪ್ ಆಣದೂರೆ, ಪಿಲ್ಲಿ ಆಣದೂರೆ, ವಾಜೀತ್, ಚೌಕಿ ತಾಂಡಾದ ಸಂಜುಕುಮಾರ್, ಶ್ಯಾಮ್, ಅರವಿಂದ್, ಬಲಭೀಮ್, ಚಂದ್ರಶೇಖರ್, ಅನಿಲ್, ಜಗದೀಶ್, ಖಾಜಾನಗರದ ಮೌಜ್, ಮೀರಾಜ್…
ಬೆಂಗಳೂರು: ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ (Mysuru Bengaluru Expressway) ಯಾರಿಗೆ ಉಪಯೋಗ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದರು. ಭಾನುವಾರ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಮಂಡ್ಯದಲ್ಲಿ (Mandya) ಲೋಕಾರ್ಪಣೆಗೊಳಿಸಿದರು. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ ವಾಗ್ದಾಳಿ ನಡೆಸಿದರು. ಟ್ವೀಟ್‍ನಲ್ಲಿ ಏನಿದೆ?: ಇದು ಅತ್ಯಂತ ಮುಖ್ಯ ವಿಷಯ. ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿ? ಎನ್ನುವುದು ನನ್ನ ಪ್ರಶ್ನೆ. ರಾಮನಗರ (Ramanagara), ಮಂಡ್ಯ ಜಿಲ್ಲೆಗಳ ಜನರಿಗೆ, ಅದರಲ್ಲೂ ಬೆಂಗಳೂರು-ಮೈಸೂರು ನಡುವೆ ಆ ಹೆದ್ದಾರಿ ಉದ್ದಕ್ಕೂ ಜೀವಿಸುತ್ತಿರುವ ಜನರಿಗೆ ಇದರಿಂದ ನಯಾಪೈಸೆ ಉಪಯೋಗ ಇದೆಯಾ? ಇಲ್ಲ. ಸ್ಥಳೀಯರಿಗೆ ದಶಪಥದಿಂದ ಉಪಯೋಗ ಇದೆಯಾ ಎಂದು ಇನ್ನೂ ಒಳಹೊಕ್ಕು ಲೆಕ್ಕ ಹಾಕಿದರೆ, ಉತ್ತರ ದೊಡ್ಡ ಸೊನ್ನೆ. ಕೇವಲ ಬೆಂಗಳೂರಿನಿಂದ ಮೈಸೂರಿಗೆ ಶರವೇಗದಲ್ಲಿ ನೇರವಾಗಿ ಸಂಚರಿಸುವವರಿಗೆ ಮಾತ್ರ ಲಾಭ. ಹಾಗಾದರೆ, ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣದವರಿಗೆ ಉಪಯೋಗ ಇದೆಯಾ?…
ಬೆಳಗಾವಿ: ನಮ್ಮ ಕೆಲವು ಮಂತ್ರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೆದರಿಸುತ್ತಿದ್ದಾನೆ. ನೀನು ಬರ್ತೀಯೋ ಅಥವಾ ಸಿಡಿ (CD) ಬಿಡುಗಡೆ ಮಾಡಲೋ ಎಂದು ಹೆದರಿಸುತ್ತಿದ್ದಾನೆ. ಇಂದು ನಮ್ಮ ಪಕ್ಷಕ್ಕೆ ಬಾಂಬೆಯಿಂದ ಬಂದವರಿಗೆ ಸಿಡಿ ಬಿಡುತ್ತೇನೆ ನೋಡು ಬಾ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಗಂಭೀರ ಆರೋಪ ಮಾಡಿದ್ದಾರೆ. ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಮಹಾನಾಯಕ ಸಿಡಿ ಇಟ್ಟುಕೊಂಡು ಕುಳಿತಿದ್ದಾನೆ. ಅದು ನಿಜ ಆಗಿದ್ದರೆ ಆಗಲೇ ಬಿಡುಗಡೆ ಮಾಡಬೇಕಿತ್ತು. ಈಗ ಎಲೆಕ್ಷನ್ ಸಂದರ್ಭದಲ್ಲಿ ಏಕೆ? ಲಿಂಗಾಯತ, ಮುಸ್ಲಿಂ, ಎಸ್‌ಸಿ ಸಮುದಾಯದವರನ್ನು ಎತ್ತಿಕಟ್ಟಲು ಕುತಂತ್ರ ಮಾಡುತ್ತಿದ್ದಾನೆ. ಡಿಕೆಶಿ ಉದ್ದೇಶ ಅದೇ, ಅವನಿಗೆ ಬೇರೆ ದಾರಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸರಳತೆ ಮೆರೆದ ಪ್ರಧಾನಿ ಮೋದಿ- RSS ಮುಖಂಡರ ಕಾಲಿಗೆ ನಮಸ್ಕರಿಸಿದ ನಮೋ ನನ್ನ ಮಗ ಅಮರನಾಥ ಬಳಿ ಅವನು ಸ್ಪಷ್ಟವಾಗಿ…
ಬೆಂಗಳೂರು: ಬೊಮ್ಮಾಯಿ ಸರ್ಕಾರವು ಭ್ರಷ್ಟಾಸುರ ಸರ್ಕಾರ ಎಂದು ರಂದೀಪ್ ಸಿಂಗ್ ಸುರ್ಜೇವಾಲಾ ಟೀಕೆ ಮಾಡಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇದನ್ನು ಬೊಮ್ಮಾಯಿ ಸರ್ಕಾರ ಎನ್ನುವುದಕ್ಕಿಂತ ಭ್ರಷ್ಟಾಸುರ ಸರ್ಕಾರ ಎನ್ನಬೇಕು. ಬೊಮ್ಮಾಯಿ ಸರ್ಕಾರ ಅಪರಾಧಿಗಳ ಜೊತೆಗೆ ಶಾಮೀಲಾಗಿದೆ. ಬಿಜೆಪಿ ಶಾಸಕನ ಮನೆಯಲ್ಲಿ ಸಿಕ್ಕ 8 ಕೋಟಿ ಹಣ ಮೇಲೆ ಹೋಗುತ್ತಿತ್ತು. ಹೀಗಾಗಿ ಶಾಸಕರನ್ನು ಅರೆಸ್ಟ್ ಮಾಡಲಿಲ್ಲ ಎಂದು ದೂರಿದರು. ಬಿಜೆಪಿಯವರು 40% ಸರ್ಕಾರ ಎಂಬ ಆರೋಪಕ್ಕೆ ಸಾಕ್ಷಿ ತಗೊಂಡು ಬನ್ನಿ ಅಂತ ಹೇಳುತ್ತಿದ್ದರು. ಈಗ 8 ಕೋಟಿ ಸಿಕ್ಕು ನಾಲ್ಕು ದಿನ ಕಳೆಸಿದೆ. ಆದರೂ ವಿರೂಪಾಕ್ಷಪ್ಪ ಅವರನ್ನು ಬಂಧಿಸಿಲ್ಲ. ವಿರೂಪಾಕ್ಷಪ್ಪ ಅವರನ್ನು ಯಾವಾಗ ಬಂಧಿಸುತ್ತಿರಿ ಎಂದು ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದರು. ಜನರಿಗೆ ನಾವು ಹಲವು ಭರವಸೆಗಳನ್ನು ನೀಡಿದ್ದೇವೆ. ಇಂದು ಆ ಭರವಸೆಗಳಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದೇವೆ. ಜಾತಿ, ಧರ್ಮದ ಬಂಧನ, ಬೇಧ ಭಾವ ಇಲ್ಲದೇ ಮಹಿಳಾ ಯಜಮಾನಿಗೆ 2000 ರೂಪಾಯಿ ಸಹಾಯ ಧನ, 200 ಯುನಿಟ್ ವಿದ್ಯುತ್ ಫ್ರೀ,…
ಬೆಂಗಳೂರು: ಸಂಜೆಯ ಹೊತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮ ಮಾಡುವವರು ಧ್ವನಿವರ್ಧಕ ಬಳಕೆ ನಿಯಂತ್ರಿಸಿ, ಮಕ್ಕಳು ಪರೀಕ್ಷೆಗೆ ಸಿದ್ದತೆ ನಡೆಸಲು ಸಹಕರಿಸಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದು ರಾಜ್ಯದ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ. ಇದೀಗ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಸಿಬಿಎಸ್‌ಇ ಪದ್ಧತಿಯ ತರಗತಿಗಳ ಪರೀಕ್ಷೆಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗುತ್ತದೆ. ಎಲ್ಲಾ ಮಕ್ಕಳು ಅವರವರದೇ ಆದ ಆತಂಕದಿಂದ ಇರುತ್ತಾರೆ. ಪರೀಕ್ಷೆಗಳಿಗೆ ಸಂಬಂಧಿಸಿದ ಸಿದ್ಧತೆಯನ್ನು ಬಹಳ ಗಂಭೀರವಾಗಿ ಮಾಡಿಕೊಳ್ಳುತ್ತಿರುತ್ತಾರೆ. ಅವರ ಕನಸುಗಳನ್ನು ನನಸು ಮಾಡಲು ಏನೆಲ್ಲಾ ಪ್ರಯತ್ನಗಳು ಬೇಕೋ ಅದನ್ನು ಮಾಡುತ್ತಾರೆ. ಹೀಗಿರುವಾಗ ನಮ್ಮೆಲ್ಲರ ಸಹಾನುಭೂತಿ, ಸಹಕಾರ ಈ ನಮ್ಮ ಮಕ್ಕಳ ಕಡೆಗೂ ಇರಬೇಕು. ಸಂಜೆಯ ಹೊತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮ ಮಾಡುವವರು, ಧಾರ್ಮಿಕ ಕಾರ್ಯಕ್ರಮ ನಡೆಸುವವರು, ರಾಜಕೀಯ ಕಾರ್ಯಕ್ರಮ ಯೋಜಿಸುವವರು, ಆರ್ಕೆಸ್ಟ್ರಾ ಮುಂತಾದ ಮನರಂಜನಾ ಕಾರ್ಯಕ್ರಮ ಮಾಡುವವರು, ಈ ಸಮಯದಲ್ಲಿ ಮಕ್ಕಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ಸು ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗೋದು ಶತಸಿದ್ದ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸು ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗೋದು ಶತಸಿದ್ದ. 15 ದಿನಗಳ ಕಾಲ 4 ಯಾತ್ರೆಗಳನ್ನು ನಾವು ಮಾಡುತ್ತಿದ್ದೇವೆ ನಮ್ಮೆಲ್ಲ ಮುಖಂಡರುಗಳು ಜೊತೆಗಿದ್ದೇವೆ. ಕಾಂಗ್ರೆಸ್ ಅವರು ಕೇಳ್ತಿದ್ರು ನಿಮ್ಮಲ್ಲಿ ಯಾರು ಮುಖಂಡರು ಇದ್ದಾರೆ ಅಂತ ,!? ನಮ್ಮಲ್ಲಿ ನಾಲ್ಕು ಮುಖಂಡರುಗಳಿದ್ದಾರೆ ಆದರೆ ಕಾಂಗ್ರೆಸ್ ನವರಿಗೆ ಎರಡು ಟೀಮ್ನೋರ್ಗು ಜನ ಇಲ್ಲ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒದ್ದಾಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಮುಂದೇನು ಬರುತ್ತೆ ಕಾಂಗ್ರೆಸು ಮತ್ತು ಜೆಡಿಎಸ್ ಅಧಿಕಾರಕ್ಕೆ ಕೊಟ್ಟರೆ 14 ತಿಂಗಳಲ್ಲಿ ಚಟ್ಟ ಕಟ್ಟಿಕೊಂಡು ವಾಪಸ್ ಹೋದರು.. ಚಟ್ಟ ಕಟ್ಟುವುದು ಕೂಡ ಜನ ಇರ್ಲಿಲ್ಲ.. ನಮ್ಮ ಮುನಿರತ್ನ ಗ್ಯಾಂಗ್ ಪೂರ್ತಿ ಬಂದ್ಬುಟ್ರು ಸರ್ಕಾರ ಮಾಡೋದಿಕ್ಕೆ ಯೋಗ್ಯತೆ ಇಲ್ಲ.. ಕೊಟ್ಟಂತ ಕುದುರೆಯನ್ನು ಏರಲಿಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಸರಿ ಆ ಪ್ರಯತ್ನವೇ ಇಲ್ಲ…
ಬೆಂಗಳೂರು: ಮೈಸೂರು-ಕುಶಾಲನಗರ (Mysuru-Kushalanagara Four Lane Highway) ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಬೆಂಗಳೂರು-ಮಂಗಳೂರು (Bengaluru-Mangaluru) ರಸ್ತೆ ಸಂಚಾರಕ್ಕೆ ವೇಗ ಕಲ್ಪಿಸುವ ಕಾಲ ಸನ್ನಿಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಇದರಿಂದ ಹಲವು ವರ್ಷಗಳ ಬೇಡಿಕೆಯಾಗಿದ್ದ ಕುಶಾಲನಗರದಿಂದ ಮಾಣಿವರೆಗಿನ ರಸ್ತೆ ಚತುಷ್ಪಥವಾಗುವ ಕನಸು ನನಸಾಗುತ್ತಿದೆ. ಇದರಿಂದಾಗಿ ಬೆಂಗಳೂರು-ಮಂಗಳೂರು ಪ್ರಯಾಣದ ಸಮಯ ಇಳಿಕೆಯಾಗಲಿದೆ. ಮೊದಲ ಹಂತವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಇಂದು ಲೋಕಾರ್ಪಣೆಗೊಂಡಿತು. ಈ ಯೋಜನೆಯಿಂದ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಕ್ಕಂತಾಗಿದೆ. ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಸಮಯ 3 ಗಂಟೆಗಳಿಂದ 75 ನಿಮಿಷಗಳಿಗೆ ಇಳಿಕೆಯಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆ ಹಾಗೂ ಕೃಷಿ ಚಟುವಟಿಕೆ ಅಭಿವೃದ್ಧಿಗೂ ಪ್ರೋತ್ಸಾಹ ದಕ್ಕಿದಂತಾಗಿದೆ. ಇದರ ಮುಂದುವರಿದ ಭಾಗವಾಗಿ 92.33 ಕಿ.ಮೀ ಉದ್ದದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. 4,128.92 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ…
ಬೆಂಗಳೂರು: ಪೊಲೀಸರೆಂದು ಹೇಳಿ ಖದೀಮರು, 1 ಕೋಟಿ 12 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಆನಂದ್ ರಾವ್ ಸರ್ಕಲ್ ಬಳಿ ನಡೆದಿದ್ದು, 2 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಕಳ್ಳತನವಾಗಿದೆ. ಅಬ್ದುಲ್ ರಜಾಕ್, ಮಲ್ಲಯ್ಯ ಹಾಗೂ ಸುನೀಲ್ ಎಂಬುವರು ರಾಯಚೂರಿನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಲೀಕರ ಸೂಚನೆಯಂತೆ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಬಂದಿದ್ದರು. ಅದರಂತೆ ಚಿನ್ನದ ಖರೀದಿಗೆ ಬಂದು ಬೆಂಗಳೂರಿನಲ್ಲಿ ಚಿನ್ನ ಖರೀದಿ ಮಾಡಿದ್ದರು. ಮಾರ್ಚ್ 11 ರ ರಾತ್ರಿ ವಾಪಸ್ಸು ರಾಯಚೂರಿಗೆ ಹೋಗಲೆಂದು ಬಸ್ನಲ್ಲಿ ಕುಳಿತಿದ್ದರು. ಆಗ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಶೌಚಾಲಯಕ್ಕೆಂದು ಸುನೀಲ್ ಒಬ್ಬನನ್ನೇ ಬಸ್ನಲ್ಲಿ ಬಿಟ್ಟು, ಚಿನ್ನದ ಗಟ್ಟಿ ಇದ್ದ ಬ್ಯಾಗ್ ಸಮೇತ ಶೌಚಾಲಯದತ್ತ ತೆರಳುತ್ತಿದ್ದರು. ಈ ವೇಳೆ ಆಗಮಿಸಿದ ಇಬ್ಬರು ತಾವು ಪೊಲೀಸರೆಂದು ಇಬ್ಬರನ್ನು ಎಲ್ಲಿಗೊ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇಬ್ಬರ ಬಳಿಯಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು…