Author: Prajatv Kannada

ಬೆಂಗಳೂರು: ಫಾಕ್ಸ್‌ಕಾನ್ ಕಂಪನಿ ಜೊತೆ ಹೂಡಿಕೆ ಒಪ್ಪಂದ ಆಗದೇ ಇದ್ದರೂ ಆಪಲ್ ಐಪೋನ್ ಕಂಪನಿ ತಯಾರಿಕಾ ಘಟಕ ಸ್ಥಾಪನೆ ಬಗ್ಗೆ ಮುಖ್ಯಮಂತ್ರಿಗಳು ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಐಫೋನ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಫಾಕ್ಸ್‌ಕಾನ್ ಸಂಸ್ಥೆ ಭಾರತದಲ್ಲಿ ಹೊಸ ಹೂಡಿಕೆ ಒಪ್ಪಂದ ಆಗಿಲ್ಲ. ಆದರೆ ಸಿಎಂ ಬೊಮ್ಮಾಯಿಯವರು ನಿನ್ನೆ ಆಯಪಲ್ ಕಂಪನಿ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲಿದ್ದು, ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುವುದಾಗಿ ಹೇಳಿದ್ದರು‌. ಸಿಎಂ ಸುಳ್ಳು ಹೇಳಿದ್ಯಾಕೆ.? ಫಾಕ್ಸ್‌ಕಾನ್ ಸಂಸ್ಥೆ ಹೊಸ ಹೂಡಿಕೆಯ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಇದನ್ನು ಸ್ವತಃ ಆ ಸಂಸ್ಥೆಯೇ ಸ್ಪಷ್ಟಪಡಿಸಿದೆ. ಆದರೆ ಮುಖ್ಯಮಂತ್ರಿಗಳ ಕಚೇರಿ ಕರ್ನಾಟಕದಲ್ಲಿ ಈ ಸಂಸ್ಥೆ 5740 ಕೋಟಿ ಹೂಡಿಕೆ ಮಾಡಲಿದೆ ಎಂದಿದೆ. ಒಪ್ಪಂದವೇ ಆಗದೇ ಹೂಡಿಕೆ ಮಾಡಲು ಹೇಗೆ ಸಾಧ್ಯ.? ರಾಜ್ಯದ ಮುಖ್ಯಮಂತ್ರಿಗಳು ಆಧಾರ ರಹಿತವಾಗಿ ಹೀಗೆ…

Read More

ಬೆಂಗಳೂರು: ಫಾಕ್ಸ್‌ಕಾನ್ ಕಂಪನಿ ಜೊತೆ ಹೂಡಿಕೆ ಒಪ್ಪಂದ ಆಗದೇ ಇದ್ದರೂ ಆಪಲ್ ಐಪೋನ್ ಕಂಪನಿ ತಯಾರಿಕಾ ಘಟಕ ಸ್ಥಾಪನೆ ಬಗ್ಗೆ ಮುಖ್ಯಮಂತ್ರಿಗಳು ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಐಫೋನ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಫಾಕ್ಸ್‌ಕಾನ್ ಸಂಸ್ಥೆ ಭಾರತದಲ್ಲಿ ಹೊಸ ಹೂಡಿಕೆ ಒಪ್ಪಂದ ಆಗಿಲ್ಲ. ಆದರೆ ಸಿಎಂ ಬೊಮ್ಮಾಯಿಯವರು ನಿನ್ನೆ ಆಯಪಲ್ ಕಂಪನಿ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲಿದ್ದು, ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುವುದಾಗಿ ಹೇಳಿದ್ದರು‌. ಸಿಎಂ ಸುಳ್ಳು ಹೇಳಿದ್ಯಾಕೆ.? ಫಾಕ್ಸ್‌ಕಾನ್ ಸಂಸ್ಥೆ ಹೊಸ ಹೂಡಿಕೆಯ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಇದನ್ನು ಸ್ವತಃ ಆ ಸಂಸ್ಥೆಯೇ ಸ್ಪಷ್ಟಪಡಿಸಿದೆ. ಆದರೆ ಮುಖ್ಯಮಂತ್ರಿಗಳ ಕಚೇರಿ ಕರ್ನಾಟಕದಲ್ಲಿ ಈ ಸಂಸ್ಥೆ 5740 ಕೋಟಿ ಹೂಡಿಕೆ ಮಾಡಲಿದೆ ಎಂದಿದೆ. ಒಪ್ಪಂದವೇ ಆಗದೇ ಹೂಡಿಕೆ ಮಾಡಲು ಹೇಗೆ ಸಾಧ್ಯ.? ರಾಜ್ಯದ ಮುಖ್ಯಮಂತ್ರಿಗಳು ಆಧಾರ ರಹಿತವಾಗಿ ಹೀಗೆ…

Read More

ಬೆಂಗಳೂರು: ಬೆಸ್ಕಾಂ ಡಿಜಿಟಲ್ ಮೀಟರ್ ಗಳು ಗ್ರಾಹಕರಿಗೆ ತಪ್ಪದ ತಲೆನೋವಾಗಿ ಪರಿಣಮಿಸಿದೆ. ನೂತನ ಡಿಜಿಟಲ್ ಮೀಟರ್ ಗಳಿಂದ ತಾವು ಬಳಕೆ ಮಾಡಿದ್ದಕ್ಕಿಂತ 30 ರಿಂದ 50% ಹೆಚ್ಚಿನ ಬಿಲ್ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಹಕರು ಆಕ್ರೋಶ ಹೊರ ಹಾಕಿದ್ದಾರೆ. ಬೆಸ್ಕಾಂ ಕಳ್ಳಾಟದಿಂದ ಸಾವಿರ ಸಾವಿರ ದೂರು ದಾಖಾಲಾದ್ರೂ ಅಧಿಕಾರಿಗಳು ಮಾತ್ರ ಬುದ್ದಿ ಕಲಿತಿಲ್ಲ. ಹಳೆಯ ಬಿಲ್ ಗಿಂತಲೂ ಡಬಲ್ ಬಿಲ್ ಬರುತ್ತಿದ್ದು, ಈ ಸಂಬಂಧ ಗ್ರಾಹಕರು ಸಾವಿರ ಸಾವಿರ ದೂರು ದಾಖಾಲಿಸಿದರು, ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದರ ಭಾಗವಾಗಿ, ಗೋರಿ ಪಾಳ್ಯದ ನಿವಾಸಿ ಲಲಿತಮ್ಮ ಮನೆಗೆ ಏಕಾಏಕಿ ಕರೆಂಟ್ ಬಿಲ್ ಏರಿಕೆ ಆಗಿದ್ದು, ಜನವರಿ ತಿಂಗಳಲ್ಲಿ 89 ಯುನಿಟ್ ಗೆ 645ರೂ ಬಿಲ್ ಮಾಡಿದ್ದ ಬೆಸ್ಕಾಂ, ಫೆಬ್ರವರಿಯಲ್ಲಿ 74 ಯುನಿಟ್ ಕೆರೆಂಟ್ ಬಳಕೆಗೆ 552 ರೂ ಎಂದು ಬಿಲ್ ಮಾಡಿದೆ. ಫೆಬ್ರವರಿ ತಿಂಗಳ ಬಿಲ್ ನಲ್ಲಿ ಬಾಕಿ ಮತ್ತು ಒಟ್ಟು ಮೊತ್ತ 2404 ರೂ…

Read More

ಬೆಂಗಳೂರು: ಸಂಜೆಯ ಹೊತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮ ಮಾಡುವವರು ಧ್ವನಿವರ್ಧಕ ಬಳಕೆ ನಿಯಂತ್ರಿಸಿ, ಮಕ್ಕಳು ಪರೀಕ್ಷೆಗೆ ಸಿದ್ದತೆ ನಡೆಸಲು ಸಹಕರಿಸಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದು ರಾಜ್ಯದ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ. ಇದೀಗ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಸಿಬಿಎಸ್‌ಇ ಪದ್ಧತಿಯ ತರಗತಿಗಳ ಪರೀಕ್ಷೆಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಎಸ್‌ಎಸ್‌ಎಲ್​ಸಿ ಪರೀಕ್ಷೆ ಪ್ರಾರಂಭವಾಗುತ್ತದೆ. ಎಲ್ಲಾ ಮಕ್ಕಳು ಅವರವರದೇ ಆದ ಆತಂಕದಿಂದ ಇರುತ್ತಾರೆ. ಪರೀಕ್ಷೆಗಳಿಗೆ ಸಂಬಂಧಿಸಿದ ಸಿದ್ಧತೆಯನ್ನು ಬಹಳ ಗಂಭೀರವಾಗಿ ಮಾಡಿಕೊಳ್ಳುತ್ತಿರುತ್ತಾರೆ. ಅವರ ಕನಸುಗಳನ್ನು ನನಸು ಮಾಡಲು ಏನೆಲ್ಲಾ ಪ್ರಯತ್ನಗಳು ಬೇಕೋ ಅದನ್ನು ಮಾಡುತ್ತಾರೆ. ಹೀಗಿರುವಾಗ ನಮ್ಮೆಲ್ಲರ ಸಹಾನುಭೂತಿ, ಸಹಕಾರ ಈ ನಮ್ಮ ಮಕ್ಕಳ ಕಡೆಗೂ ಇರಬೇಕು. ಸಂಜೆಯ ಹೊತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮ ಮಾಡುವವರು, ಧಾರ್ಮಿಕ ಕಾರ್ಯಕ್ರಮ ನಡೆಸುವವರು, ರಾಜಕೀಯ ಕಾರ್ಯಕ್ರಮ ಯೋಜಿಸುವವರು, ಆರ್ಕೆಸ್ಟ್ರಾ ಮುಂತಾದ ಮನರಂಜನಾ ಕಾರ್ಯಕ್ರಮ ಮಾಡುವವರು, ಈ ಸಮಯದಲ್ಲಿ ಮಕ್ಕಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು  ಮನವಿ ಮಾಡಿದ್ದಾರೆ.

Read More

ಬೆಂಗಳೂರು: ಪೊಲೀಸರೆಂದು ಹೇಳಿ ಖದೀಮರು, 1 ಕೋಟಿ 12 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಆನಂದ್ ರಾವ್ ಸರ್ಕಲ್ ಬಳಿ ನಡೆದಿದ್ದು, 2 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಕಳ್ಳತನವಾಗಿದೆ. ಅಬ್ದುಲ್ ರಜಾಕ್, ಮಲ್ಲಯ್ಯ ಹಾಗೂ ಸುನೀಲ್ ಎಂಬುವರು ರಾಯಚೂರಿನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಲೀಕರ ಸೂಚನೆಯಂತೆ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಬಂದಿದ್ದರು. ಅದರಂತೆ ಚಿನ್ನದ ಖರೀದಿಗೆ ಬಂದು ಬೆಂಗಳೂರಿನಲ್ಲಿ ಚಿನ್ನ ಖರೀದಿ ಮಾಡಿದ್ದರು. ಮಾರ್ಚ್ 11 ರ ರಾತ್ರಿ ವಾಪಸ್ಸು ರಾಯಚೂರಿಗೆ ಹೋಗಲೆಂದು ಬಸ್​ನಲ್ಲಿ ಕುಳಿತಿದ್ದರು. ಆಗ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಶೌಚಾಲಯಕ್ಕೆಂದು ಸುನೀಲ್​ ಒಬ್ಬನನ್ನೇ ಬಸ್​ನಲ್ಲಿ ಬಿಟ್ಟು, ಚಿನ್ನದ ಗಟ್ಟಿ ಇದ್ದ ಬ್ಯಾಗ್ ಸಮೇತ ಶೌಚಾಲಯದತ್ತ ತೆರಳುತ್ತಿದ್ದರು. ಈ ವೇಳೆ ಆಗಮಿಸಿದ ಇಬ್ಬರು ತಾವು ಪೊಲೀಸರೆಂದು ಇಬ್ಬರನ್ನು ಎಲ್ಲಿಗೊ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇಬ್ಬರ ಬಳಿಯಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು…

Read More

ಬೆಂಗಳೂರು: ನಮ್ಮಿಂದಲೇ ಆಗಿದ್ದು ಎಂದು ಕ್ರೆಡಿಟ್ ಪಡೆಯುವುದಲ್ಲ, ಕೆಲಸ ಮಾಡಿ ತೋರಿಸಬೇಕು ಎಂದು ಮೋದಿ ಸರ್ಕಾರಕ್ಕೆ HD ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ಅತ್ತಿಬೆಲೆಯಲ್ಲಿ ಮಾತನಾಡಿದ ಅವರು, ಹೆದ್ದಾರಿಗೆ ಕೇಂದ್ರ ಸರ್ಕಾರ ಕೂಡ ಹಣ ಹಾಕಿಲ್ಲ, ಆ ಭೂಮಿ ರಾಜ್ಯದ ರೈತರ ಭೂಮಿ, ರಸ್ತೆಯಲ್ಲಿ ಓಡಾಡಿ ಜನರು ಹಣ ಕಟ್ಟುತ್ತಾರೆ ಎಂದು ಮೋದಿ ಸರ್ಕಾರಕ್ಕೆ ಟಾಂಗ್ ನೀಡಿದರು. ರಸ್ತೆಯನ್ನು ಮೈಸೂರಿನ ಮಹರಾಜರು ಆರಂಭ ಮಾಡಿದ್ರು, ನಂತರ ಬಂದ ರಾಜಕಾರಣಿಗಳು ಮೇಲ್ದರ್ಜೆಗೇ ಏರಿಸಿದರು. ಇದರಿಂದ ಬಿಜೆಪಿಗೆ ಯಾವುದೇ ಪ್ಲಸ್ ಪಾಯಿಂಟ್ ಆಗಲ್ಲ ಎಂದರು. ಯಾವುದೇ ಅಭಿವೃದ್ದಿ ಕೆಲಸ ನಮ್ಮಿಂದಲೇ ಆಗಿದ್ದು ಎಂದು ಕ್ರೆಡಿಟ್ ಪಡೆಯುವದಲ್ಲ. ಮಾಡುವ ಅಭಿವೃದ್ದಿ ಕೆಲಸದಲ್ಲಿ ತೋರಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು

Read More

`ಕಾಂತಾರ’ ಸಿನಿಮಾದ ಬಳಿಕ ನಟಿ ಸಪ್ತಮಿ ಗೌಡ ಸಿನಿಮಾದ ಜೊತೆಗೆ ಫೋಟೋ ಶೂಟ್ ನಲ್ಲೂ ಸದ್ದು ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದ ಸಖತ್ ಆಕ್ಟೀವ್ ಆಗಿರುವ ಸಪ್ತಮಿ ಗೌಡ ತಮ್ಮ ಹೊಸ ಬಗೆಯ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಇದೀಗ ಸಪ್ತಮಿ ಮತ್ತೆ ಹೊಸ ಫೋಟೋ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿದ್ದ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚ್ತಿದ್ದಾರೆ. ಸಿನಿಮಾ, ಜಾಹೀರಾತು, ಉದ್ಘಾಟನೆ ಸಮಾರಂಭಗಳಿಗೆ ಈ ನಟಿನೇ ಬೇಕು ಅನ್ನುವಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೆಟ್ ಮಾಡಿದ್ದಾರೆ. ಬ್ಲೂ ಬಣ್ಣದ ಮಾಡ್ರನ್ ಟಾಪ್‌ನಲ್ಲಿ ಸಖತ್ ಹಾಟ್ ಆಗಿ ಮೂಗುತಿ ಸುಂದರಿ ಸಪ್ತಮಿ ಕಾಣಿಸಿಕೊಂಡಿದ್ದಾರೆ. ನಟಿಯ ಹೊಸ ಅವತಾರ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ನಟಿ ಶೇರ್ ಮಾಡಿರುವ ಹೊಸ ಫೋಟೋಶೂಟ್‌ಗೆ ನೆಟ್ಟಿಗರಿಂದ ಮೆಚ್ಚುಗೆ ಹರಿದು ಬರ್ತಿದೆ. ಸದ್ಯ ಸಪ್ತಮಿ ಬಾಲಿವುಡ್‌ನ ವಿವೇಕ್ ಅಗ್ನಿಹತ್ರಿ ನಿರ್ದೇಶನದ `ದಿ ವ್ಯಾಕ್ಸಿನ್ ವಾರ್’, ಡಾಲಿ- ರಮ್ಯಾ ಜೊತೆಗಿನ…

Read More

ಟಾಲಿವುಡ್ ನಟಿ ಸಮಂತಾ ಅಪರೂಪದ ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಸಮಂತಾ ದೇವಿಯ ಆರಾಧನೆಯಲ್ಲಿ ಮುಳುಗಿರುವ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಸಮಂತಾ ತಮ್ಮ ವೈಯಕ್ತಿಕ ಬದುಕಿನಲ್ಲಿ ನಡೆದಿರುವ ಕಹಿ ಘಟನೆಯನ್ನ ಮರೆಯಲು ಸಿನಿಮಾ, ಜಿಮ್, ಟೆಂಪಲ್ ರನ್ ಅಂತಾ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮನ್ನ ಆಕ್ಟೀವ್ ಆಗಿ ಇಟ್ಟುಕೊಂಡಿದ್ದಾರೆ. ಇದೀಗ ನಟಿ ಲಿಂಗಭೈರವಿ ದೇವಿಯ ಮೊರೆ ಹೋಗಿದ್ದಾರೆ. ನಂಬಿಕೆಯೇ ಜೀವನದ ಮುಖ್ಯ ಶಕ್ತಿ. ನಂಬಿಕೆಯೇ ನಿಮ್ಮನ್ನು ಶಾಂತವಾಗಿರಿಸುತ್ತದೆ. ನಂಬಿಕೆಯೇ ನಿಮ್ಮ ಗುರು. ನಂಬಿಕೆಯೇ ನಿಮ್ಮನ್ನು ಬೆಳೆಸುತ್ತದೆ ಎಂದು ದೇವಿಯ ಮುಂದೆ ಸಮಂತಾ ಕುಳಿತು ಧ್ಯಾನ ಮಾಡ್ತಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟಿಯ ಹೊಸ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.

Read More

ಕೊಲಂಬೊ: ಶ್ರೀಲಂಕಾದ ಚುನಾವಣಾ ಆಯೋಗವು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆಗೆ ಅವರಿಗೆ ಪತ್ರ ಬರೆದಿದ್ದು, ಈಗಾಗಲೇ ವಿಳಂಬವಾಗಿರುವ ಸ್ಥಳೀಯ ಕೌನ್ಸಿಲ್ ಚುನಾವಣೆಗಳನ್ನು ನಡೆಸಲು ಅಗತ್ಯ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಪತ್ರ ಬರೆದ ವಿಚಾರವನ್ನು ಚುನಾವಣಾ ಆಯೋಗದ ಅಧ್ಯಕ್ಷ ನಿಮಲ್ ಜಿ ಪುಟ್ಟಿಹೇವಾ ಬಹಿರಂಗಪಡಿಸಿದ್ದಾರೆ. ಈ ಹಿಂದೆ ಮಾರ್ಚ್ 9 ರಂದು ನಿಗದಿಯಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೇಶದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಲವು ಕಾರಣಗಳನ್ನು ಮುಂದೊಡ್ಡಿ ಏಪ್ರಿಲ್ 25 ಕ್ಕೆ ಮುಂದೂಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಣಕಾಸು ಸಚಿವಾಲಯದಿಂದ ಹಣ ಬಿಡುಗಡೆ ಮಾಡಿಲ್ಲ ಎಂದು ಖಜಾನೆ ಅಧಿಕಾರಿಗಳು ಕಳೆದ ತಿಂಗಳು ಚುನಾವಣಾ ಆಯೋಗಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪತ್ರ ಬರೆದು ಅನುದಾನ ಕೋರಲಾಗಿದೆ. ಈ ತಿಂಗಳ ಆರಂಭದಲ್ಲಿ, ಖಜಾನೆ ಕಾರ್ಯದರ್ಶಿ ಮತ್ತು ಪೋಲೀಸ್ ಮುಖ್ಯಸ್ಥರಿಗೆ ಲಿಖಿತ ಮನವಿ ಮಾಡಿದ್ದ ಸರ್ಕಾರದ ಮುದ್ರಕರಾದ ಗಂಗಣಿ ಲಿಯಾನ, ಈಗಾಗಲೇ ವಿಳಂಬವಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸುವಂತೆ ಮಾಡಿದ್ದರು. ಅಂಚೆ ಮತದಾನಕ್ಕೆ ಮತಪತ್ರಗಳನ್ನು ಮುದ್ರಿಸಲು ಸಾಧ್ಯವಾಗದಿರುವುದರಿಂದ…

Read More

ಬಾಲಿವುಡ್ ಖ್ಯಾತ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಎಂದು ಹೇಳಲಾಗಿದ್ದು, ಇದೀಗ ಸಾವಿಗೆ ಬೇರೆ ತಿರುವು ನೀಡಲಾಗುತ್ತಿದೆ. ಈ ಸಾವಿನ ಹಿಂದೆ 15 ಕೋಟಿ ರೂಪಾಯಿಗಳಿಗಾಗಿ ನಡೆದ ಕೊಲೆ ಎಂದು ದೂರು ದಾಖಲಾಗಿದೆ. ದೆಹಲಿ ಮೂಲದ ಉದ್ಯಮಿಯೊಬ್ಬರ ಪತ್ನಿಯು, ತನ್ನ ಪತಿ ಮೇಲೆಯೇ ಈ ಕೊಲೆಯ ಆರೋಪವನ್ನೂ ಮಾಡಿದ್ದಾರೆ. ಕಲೆ ಮಾತ್ರೆಗಳು ನೀಡಿ ಸತೀಶ್ ಅವರನ್ನು ಕೊಲ್ಲಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೆಹಲಿ ಪೊಲೀಸ್ ಕಮಿಷನರ್ ಗೆ ದೂರು ನೀಡಿರುವ ಮಹಿಳೆ, ಎರಡು ದಿನಗಳ ಹಿಂದೆ ನಡೆದ ಹೋಳಿ ಆಚರಣೆಗಾಗಿ ಸತೀಶ್ ಫಾರ್ಮ್ ಹೌಸ್ ಗೆ ಬಂದಿದ್ದರು. ಅಲ್ಲಿ ಔಷಧಿ ನೀಡಿ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಣದ ವ್ಯವಹಾರಕ್ಕಾಗಿ ಸತೀಶ್ ಮತ್ತು ತಮ್ಮ ಪತಿ ದೆಹಲಿ ಮತ್ತು ದುಬೈನಲ್ಲಿ ಭೇಟಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಸತೀಶ್ ಸಾವಿನ ಹಿಂದಿನ ದಿನ ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆ ಸ್ಥಳದಲ್ಲಿ ಔಷಧಿ…

Read More