ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೇಳೆ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ದೊಣ್ಣೆ ಮಚ್ಚು ಹಿಡಿದುಕೊಂಡು ಮತಕೇಳುತ್ತಿದ್ದವರು ಈಗ ಮತದಾರರ ಮನೆ ಬಾಗಿಲಿಗೆ ಬಂದು ಕೈ ಕಾಲು ಮುಗಿಯುತ್ತಿದ್ದಾರೆ. ನಾಟಕದಲ್ಲಿ 5 ಪಾತ್ರಗಳನ್ನು ನಿರ್ವಹಿಸುವ ಸೂತ್ರಧಾರಿಯಂತೆ ಚುನಾವಣೆಗೆ ಒಂದರಂತೆ ಪಕ್ಷವನ್ನು ಬದಲಾಯಿಸುವವರು. ಜನರ ಹಿತ ದೃಷ್ಟಿಯಿಂದ ರಾಜಕೀಯಕ್ಕೆ ಬಂದಿಲ್ಲ ಬದಲಿಗೆ ಅವರ ಉದ್ದಾರಕ್ಕೆ ಬಂದಿದ್ದಾರೆ. ಬಚ್ಛೆಗೌಡರ 4 ವರ್ಷ ಹಾಗೂ ಶರತ್ ಬಚ್ಛೆಗೌಡರ ಇಷ್ಟು ವರ್ಷದ ಆಡಳಿತದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಸಲಿ ಅದನ್ನು ಬಿಟ್ಟು ಅಪ್ಪ ಬಿಜೆಪಿ ಮಗ ಕಾಂಗ್ರೆಸ್ ಇದು ಇವರ ರಾಜಕೀಯ ದೊಂಬರಾಟ ಎಂದು ವಾಗ್ದಾಳಿ ನಡೆಸಿದರು.
Author: Prajatv Kannada
ರಾಯಚೂರು: ಊರಲ್ಲಿರುವ ಮಕ್ಕಳೆಲ್ಲಾ ನನ್ನವೇ ಅಂದ್ರೆ, ಯಾರಾದ್ರೂ ಕಾಲಲ್ಲಿ ಇರೋದನ್ನ ಕೈಗೆ ತಗೋತಾರೆ. ಈಗ ಕಾಂಗ್ರೆಸ್‌ನದ್ದೂ (Congress) ಅದೇ ಪರಿಸ್ಥಿತಿ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CR Ravi) ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ರಾಯಚೂರಿನಲ್ಲಿ (Raichur) ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆ ಮಾತನಾಡಿದ ಅವರು, ಊರಲ್ಲಿರುವ ಮಕ್ಕಳೆಲ್ಲ ನನ್ನವೇ ಅಂದ್ರೆ ಯಾರಾದ್ರೂ ಕಾಲಲ್ಲಿ ಇರೋದನ್ನ ಕೈಗೆ ತಗೋತಾರೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ (Bengaluru Mysuru Expressway) ಕಾಂಗ್ರೆಸ್‌ನಿಂದ ಒಂದೇ ಒಂದು ರೂಪಾಯಿ ಕೊಡುಗೆಯಿಲ್ಲ, ಇದ್ದರೆ ತೋರಿಸಲಿ? ಕಾಂಗ್ರೆಸ್ ಸುಳ್ಳು ಹೇಳುತ್ತೋ ಸತ್ಯ ಹೇಳುತ್ತೋ ಅನ್ನೋದು ಜನರಿಗೆ ಗೊತ್ತಾಗುತ್ತೆ ಎಂದು ಸವಾಲ್ ಹಾಕಿದ್ದಾರೆ. ಕಾಂಗ್ರೆಸ್ ತನ್ನ ಅವಧಿಯಲ್ಲಿ ಹಣ ಬಿಡುಗಡೆ ಮಾಡಿದ್ರೆ, ಟೆಂಡರ್ ಕರೆದಿದ್ರೆ, ಮಂಜೂರಾತಿ ಪತ್ರ ಇದ್ದರೆ ಬಿಡುಗಡೆ ಮಾಡಲಿ. ಕಾಂಗ್ರೆಸ್ ಜನ್ಮದಿಂದಲೂ ಮೂಗಿಗೆ ತುಪ್ಪ ಸವರೊ ಕೆಲಸ ಮಾಡಿಕೊಂಡು ಬಂದಿದೆ. ಹಿಂದೆ 10 ವರ್ಷ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು. 5…
ಚಿತ್ರದುರ್ಗ: ಮಧ್ಯ ಕರ್ನಾಟಕದ ಬುಡಕಟ್ಟು ಸಮುದಾಯಗಳ ಆರಾಧ್ಯ ದೈವ, ಐತಿಹಾಸಿಕ ಸುಪ್ರಸಿದ್ಧ ಕ್ಷೇತ್ರ ಹಾಗೂ ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿರುವ ಪವಾಡ ದೈವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಶ್ರೀ ಕ್ಷೇತ್ರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು. ಉರಿ ಬಿಸಿಲು, ಗಾಳಿ, ದೂಳು ಯಾವುದನ್ನೂ ಲೆಕ್ಕಿಸದೆ ತಿಪ್ಪೇಶನ ರಥೋತ್ಸವಕ್ಕೆ ಬೆಳಗ್ಗೆಯಿಂದಲೇ ಜನಸಾಗರ ಹರಿದು ಬಂದಿತ್ತು. ನಾಯಕನಹಟ್ಟಿಯ ದೊಡ್ಡ ಕೆರೆ ಕಟ್ಟಿಸಿದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ಪವಾಡಗಳ ಮೂಲಕ ಮಧ್ಯ ಕರ್ನಾಟಕದ ಜನಮನದಲ್ಲಿ ನೆಲೆ ನಿಂತಿದ್ದಾರೆ. ತಿಪ್ಪೇರುದ್ರಸ್ವಾಮಿ ಐಕ್ಯವಾಗಿರುವ ಹೊರಮಠ ಹಾಗೂ ದೇವರ ವಿಗ್ರಹ ಹಾಗೂ ಮುಖ್ಯವಾಗಿರುವ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ತಿಪ್ಪೇರುದ್ರಸ್ವಾಮಿ ರಥವನ್ನು ರಥ ಬೀದಿಯಿಂದ…
ಬೆಂಗಳೂರು: ಮಾಜಿ ಸಂಸದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಅವರು ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಚಾಮರಾಜನಗರದಿಂದ ಎರಡು ಬಾರಿ ಕಾಂಗ್ರೆಸ್ ಸಂಸದರಾಗಿದ್ದ ಧ್ರುವನಾರಾಯಣ್, ಕಳೆದ ಬಾರಿ (2019) ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ ಚುನಾವಣೆಯಲ್ಲಿ ನಂಜನಗೂಡು ಕಾಂಗ್ರೆಸ್ ಅಭ್ಯಥಿಯಾಗಿ ಸ್ಪರ್ಧಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಧ್ರುವನಾರಾಯಣ ಅವರಿಗೆ ಆರೋಗ್ಯದ ಸಮಸ್ಯೆ ಇರಲಿಲ್ಲ. ಹೃದಯಸಂಬಂಧಿ ಕಾಯಿಲೆ ಇರಲಿಲ್ಲ. ಎದೆ ನೋವು ಶುರುವಾಗಿದೆ ಎಂದು ಶನಿವಾರ ಬೆಳಿಗ್ಗೆ 6.30ಕ್ಕೆ ಚಾಲಕನಿಗೆ ಕರೆ ಮಾಡಿದ್ದರು. ಚಾಲಕ 6.40ಕ್ಕೆ ಬಂದು ಕರೆದುಕೊಂಡು ಹೋಗಿದ್ದರು. ಅವರಿಗೆ ರಕ್ತವಾಂತಿ ಆಗಿತ್ತು, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ
ಬೆಂಗಳೂರು: ಬಿಜೆಪಿಯ ಭ್ರಷ್ಟಾಚಾರದಿಂದ ಮುಕ್ತ ಮಾಡುವ ಸಮಯ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇಂದು ಬಿಜೆಪಿಯ ಭ್ರಷ್ಟಾಚಾರದಿಂದ ರಾಜ್ಯವನ್ನು ಮುಕ್ತಿ ಮಾಡುವ ಸಮಯ ಬಂದಿದೆ. ನಾವೆಲ್ಲರೂ ಸೇರಿ ಇಂದು ಕೇವಲ ಸರ್ಕಾರ ಬದಲಿಸಿದರೆ ವ್ಯವಸ್ಥೆ ಬದಲಾಗುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವ ಸಂಕಲ್ಪ ಮಾಡಬೇಕು. ಈ ಅಕ್ರಮದಲ್ಲಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ತನಿಖೆ ಮಾಡಿ ಅವರಿಗೆ ಶಿಕ್ಷೆ ನೀಡಲಾಗುವುದು. ರಾಜ್ಯದ ಯುವಕರ ಭವಿಷ್ಯ ನಾಶವಾಗಲು ಬಿಡಬಾರದು. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಅವರ ಸರ್ಕಾರವನ್ನು ಮುಗಿಸುವವರಿಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು: ತವರು ಮನೆಯಿಂದ ವರದಕ್ಷಿಣೆ ತರದಿದ್ದಕ್ಕೆ ಪತ್ನಿಗೆ ಪತಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರ್.ಟಿ.ನಗರದ ವಜೀರ್ ಅಹಮದ್ ಎಂಬಾತ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆ ಮನೆಯಿಂದ ವರದಕ್ಷಿಣೆ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ರ್ಯಾಡೋ ವಾಚ್ ತರದಿದ್ದಕ್ಕೆ ಪತ್ನಿ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿ ಮಧ್ಯರಾತ್ರಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆ ದುಬೈನಲ್ಲಿ ಕೆಲಸಕ್ಕೆ ಸೇರ್ತೀನಿ ಎಂದು ಹೇಳಿ ವಂಚಿಸಿ ಸಂತ್ರಸ್ಥೆಯನ್ನ ಮದುವೆಯಾಗಿದ್ದ ಆರೋಪಿ ವಜೀರ್, ಮದುವೆ ನಂತರ ಯಾವುದೇ ಕೆಲಸ ಮಾಡದೆ ಓಡಾಡಿಕೊಂಡಿದ್ದ. ಪತ್ನಿಗೆ ತಂದೆ ಮನೆಯಿಂದ ರ್ಯಾಡೋ ವಾಚ್, ಹಣ ಸೇರಿ ಪ್ರತಿ ಹಬ್ಬಕ್ಕೆ ವರದಕ್ಷಿಣೆಗೆ ಡಿಮ್ಯಾಂಡ್ ಮಾಡುತ್ತಿದ್ದ. ಅಲ್ಲದೇ ವಜೀರ್ ನನಗೆ ತಿಳಿಯದಂತೆ ನಾಲ್ಕೈದು ಮದುವೆ ಆಗಿದ್ದಾನೆ. ಈ ಬಗ್ಗೆ ನಾನು ಪ್ರಶ್ನಿಸಿದಾಗ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಸಂತ್ರಸ್ತ ಮಹಿಳೆ ಕಣ್ಣೀರು ಹಾಕಿದ್ದಾರೆ. ಸದ್ಯ ಸಂತ್ರಸ್ತ ಪತ್ನಿಯಿಂದ ಪತಿ ವಜೀರ್ ಹಾಗೂ…
ಬೆಂಗಳೂರು: ಹೋಮಿಯೋಪತಿ ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಕಡ್ಡಾಯ ಪದ್ಧತಿಯನ್ನು ಬೆಂಗಳೂರಿನ ಹೈಕೋರ್ಟ್ ಎತ್ತಿ ಹಿಡಿದಿದೆ. ಕರ್ನಾಟಕ ಖಾಸಗಿ ಹೋಮಿಯೋಪತಿ ಮೆಡಿಕಲ್ ಕಾಲೇಜಸ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ಸ್ ಸೇರಿದಂತೆ ಇತರೆ ಖಾಸಗಿ ಕಾಲೇಜುಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಜಯ್‌ಕುಮಾರ್ ಎ. ಪಾಟೀಲ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹೊಂದಿರುವ ಹಕ್ಕು ಸಂಪೂರ್ಣವಾಗಿದ್ದಲ್ಲ. ಅದನ್ನು ಸರ್ಕಾರಗಳು ನಿಯಂತ್ರಿಸಬಹುದಾಗಿದೆ. ಈ ಪರೀಕ್ಷೆಯಲ್ಲಿ ಅರ್ಹ ವಿದ್ಯಾರ್ಥಿಗಳನ್ನು ಬಿಹೆಚ್‌ಎಂಎಸ್ ಕೋರ್ಸ್ಗೆ ಸೇರಿಸಿಕೊಳ್ಳುವುದು ಮತ್ತು ಆ ವಿದ್ಯಾರ್ಥಿಗಳು ಮುಂದೆ ಚಿಕಿತ್ಸೆ ನೀಡುವಂತವರಾಗುವ ಹಿತಾಸಕ್ತಿಯೂ ಅಡಗಿರಲಿದೆ. ಇದೇ ಕಾರಣದಿಂದ ಎಲ್ಲ ಹೋಮಿಯೋಪತಿ ಕಾಲೇಜುಗಳಲ್ಲಿ ಕೋರ್ಸ್‌ಗಳಿಗೆ ಮೆರಿಟ್ ಆಧಾರದಲ್ಲಿ ನೋಂದಣಿ ಮಾಡುವುದಕ್ಕಾಗಿ ನೀಟ್ ಪರೀಕ್ಷೆಯನ್ನು ಶಾಸನ ಸಭೆ ಕಡ್ಡಾಯಗೊಳಿಸಿದೆ. ಇದಕ್ಕೆ ಕಾಯಿದೆಯ ಸೆಕ್ಷನ್ 14ರ ಪ್ರಕಾರ ಅವಕಾಶ ಕಲ್ಪಿಸಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಬೆಂಗಳೂರು: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ವಿಚಾರ ಕುರಿತು ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದರ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ನನ್ನ ಯಾಕೆ ಒಕ್ಕಲಿಗ ಸಮುದಾಯಕ್ಕೆ ಸೀಮಿತ ಮಾಡುತ್ತೀರಿ. ನಾನು ಹುಟ್ಟಿದ್ದು ಒಕ್ಕಲಿಗ ಸಮುದಾಯದಲ್ಲಿ. ಆದರೆ, ನಾನು ಎಲ್ಲ ಜಾತಿಗಳನ್ನು ಇಷ್ಟಪಡುವಂತವನು. ನಾನು ರಾಜ್ಯಾದ್ಯಂತ ಓಡಾಡ್ತಿದ್ದೇನೆ. ಬೆಂಗಳೂರಿಗೆ ಸೀಮಿತ ಮಾಡಬೇಡಿ, ನಾನು ಏನು ಡಿ ಕೆ ಶಿವಕುಮಾರ್ ತರಹ ಹೇಳಲ್ಲ. ಸಿಎಂ ಆಗೋದು ಹಣೆಯಲ್ಲಿ ಬರೆದಿರಬೇಕು ಎಂದರು. ಮಂಡ್ಯ ಜಿಲ್ಲೆಯ ಉಸ್ತುವಾರಿ ಯಾರು ಎಂಬ ಪ್ರಶ್ನೆಗೆ ಸಿಎಂ ಇದ್ದಾರೆ. ಬೆಂಗಳೂರು, ಮಂಡ್ಯಕ್ಕೆ ಮುಖ್ಯಮಂತ್ರಿಗಳೇ ಇದ್ದಾರೆ ಎಂದು ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಇಸ್ಲಾಮಾಬಾದ್: ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತವು ತನ್ನತ್ತ ಉಡಾಯಿಸಿದ ಘಟನೆಯ ಬಗ್ಗೆ ಜಂಟಿ ತನಿಖೆ ನಡೆಯಬೇಕು ಎಂದು ಪಾಕಿಸ್ತಾನವು ಪುನರುಚ್ಚರಿಸಿದೆ. ಒಂದು ವರ್ಷದ ಹಿಂದೆ ನಡೆದ ಘಟನೆಯ ಕುರಿತು ಭಾರತದಿಂದ ಸಮಂಜಸ ಪ್ರತಿಕ್ರಿಯೆಯನ್ನು ಪಾಕಿಸ್ತಾನ ಕೇಳಿದೆ. 2022ರ ಮಾರ್ಚ್ 9ರಂದು ರಾಜಸ್ಥಾನದ ಸೂರತ್‌ಗಢದಿಂದ ಆಕಸ್ಮಿಕವಾಗಿ ಉಡಾವಣೆಗೊಂಡಿದ್ದ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನದ ಭೂಪ್ರದೇಶದಲ್ಲಿ ಅಪ್ಪಳಿಸಿತ್ತು. ಘಟನೆಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ನಿರ್ದಿಷ್ಟ ಕಾರ್ಯಾಚರಣೆ ವಿಧಾನದಲ್ಲಿ ಉಂಟಾದ ಅಚಾತುರ್ಯದಿಂದ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಗೊಂಡು ಪಾಕಿಸ್ತಾನದಲ್ಲಿ ಬಿದ್ದಿತ್ತು. ತನಿಖೆ ವೇಳೆ ಅಧಿಕಾರಿಗಳ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು ವಾಯುಪಡೆಯ ಮೂವರು ಅಧಿಕಾರಿಗಳನ್ನು ಆಗಸ್ಟ್‌ನಲ್ಲಿ ವಜಾ ಮಾಡಿತ್ತು. ‘ಈ ಗಂಭೀರ ಘಟನೆಯ ಸುತ್ತಲಿನ ಸತ್ಯಾಸತ್ಯತೆಗಳನ್ನು ಕಂಡು ಹಿಡಿಯಲು ಜಂಟಿ ತನಿಖೆ ನಡೆಯಬೇಕೆಂಬ ಪಾಕಿಸ್ತಾನದ ಬೇಡಿಕೆಯನ್ನು ಭಾರತ ಸರ್ಕಾರ ಒಂದು ವರ್ಷ ಕಳೆದರೂ ಒಪ್ಪಿಕೊಂಡಿಲ್ಲ. ಭಾರತವು ತನ್ನ ಆಂತರಿಕ ವಿಚಾರಣೆಯನ್ನೂ ಪಾಕಿಸ್ತಾನದೊಂದಿಗೆ ಹಂಚಿಕೊಂಡಿಲ್ಲ’ ಎಂದು ಪಾಕಿಸ್ತಾನದ…
ಮೊದಲ ಭಾರಿಗೆ ರಿಸ್ ಆಗಿ ಫ್ಲಾಪ್ ಆಗಿದ್ದ, ಮರು ಬಿಡುಗಡೆಯಲ್ಲಿ ಹಿಟ್ ಆದ ಸಿನಿಮಾಗಳು ಹಲವಿವೆ. ಇದೀಗ ಬಾಲಿವಡ್ ನಲ್ಲಿ ಒಂಬತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿದ್ದ ಸಿನಿಮಾವೊಂದು ಜಪಾನ್ನಲ್ಲಿ ಮರು ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೃತಿಕ್ ರೋಷನ್ ನಟಿಸಿ, ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದ ಒಂಬತ್ತು ವರ್ಷ ಹಳೆಯ ಸಿನಿಮಾ ಬ್ಯಾಂಗ್ ಬ್ಯಾಂಗ್ ಇದೀಗ ಜಪಾನ್ನಲ್ಲಿ ಮರು ಬಿಡುಗಡೆ ಆಗಿದೆ. ಈ ಚಿತ್ರ ನೋಡೋಕೆ ಜಪಾನ್ ನಲ್ಲಿ ಜನ ಮುಗಿಬಿದ್ದು ಚಿತ್ರಮಂದಿರದತ್ತ ಓಡ್ತಿದ್ದಾರೆ. ಸಿನಿಮಾದ ಹಾಡು, ಡ್ಯಾನ್ಸ್ ಫೈಟ್ಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೃತಿಕ್ ಹಾಗೂ ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿದ್ದ ಬ್ಯಾಂಗ್ ಬ್ಯಾಂಗ್ ಸಿನಿಮಾ 2014 ರ ಗಾಂಧಿ ಜಯಂತಿಯಂತು ಬಿಡುಗಡೆ ಆಗಿತ್ತು. ಸುಮಾರು 150 ಕೋಟಿ ಬಜೆಟ್ನ ಈ ಸಿನಿಮಾ ಆಗ ವಿಶ್ವದಾದ್ಯಂತ 330 ಕೋಟಿ ಗಳಿಸಿತ್ತು. ಹಾಕಿದ್ದ ಬಜೆಟ್ಗೆ ದುಪ್ಪಟ್ಟು ಲಾಭ ಗಳಿಸಿಕೊಂಡಿತ್ತು. ಇದೀಗ ಈ ಸಿನಿಮಾವು ಜಪಾನ್ನಲ್ಲಿ…