Author: Prajatv Kannada

ಸಿನಿಮಾ ಶೂಟಿಂಗ್​ ವೇಳೆ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಅವಘಡಗಳು ಸಂಭವಿಸುತ್ತಲೆ ಇರುತ್ತದೆ. ಇದೀಗ ಹಿಂದಿ ಧಾರಾವಾಹಿ ‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ ಧಾರಾವಾಹಿ ಸೆಟ್​ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದೆ. ಇದರಿಂದ ಇಡೀ ಧಾರಾವಾಹಿ ಸೆಟ್ ಬೆಂಕಿಗೆ ಆಹುತಿ ಆಗಿದೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ಸೆಟ್ ಹಾಕಲಾಗಿದ್ದು ಇದೀಗ ಅವಘಡ ಸಂಭವಿಸಿದೆ. ಮಾರ್ಚ್​ 10ರಂದು ಸಂಜೆ ನಾಲ್ಕು ಗಂಟೆ ವೇಳೆಗೆ ಅಗ್ನಿಅವಘಡ ಸಂಭವಿಸಿದ್ದು, ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿದ ವರದಿ ಆಗಿದೆ. ಸೆಟ್​ನಲ್ಲಿ ಸಿಲಿಂಡರ್ ಇದ್ದು, ಅದು ಸ್ಫೋಟಗೊಂಡಿದೆ. ಇದರಿಂದ ಕ್ಷಣಮಾತ್ರದಲ್ಲಿ ಬೆಂಕಿ ಎಲ್ಲಾ ಕಡೆಗಳಲ್ಲಿ ಆವರಿಸಿದೆ. ಸೆಟ್​ ಬಹುತೇಕ ಸುಟ್ಟು ಕರಕಲಾಗಿದ್ದು, ಸೆಟ್​ನಲ್ಲಿ ಬೆಂಕಿ ನಂದಿಸಲು ಯಾವುದೇ ವಸ್ತುಗಳು ಇರಲಿಲ್ಲ. ಇದು ಬೆಂಕಿ ವೇಗವಾಗಿ ಹಬ್ಬಲು ಕಾರಣವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಫಿಲ್ಮ್​ ಸಿಟಿ ನಿರ್ದೇಶಕರ ವಿರುದ್ಧವೂ ಕೇಸ್​ ದಾಖಲಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಸಿಲಿಂಡರ್ ಸ್ಫೋಟಗೊಳ್ಳುವ ಸಂದರ್ಭದಲ್ಲಿ ಮಕ್ಕಳ ದೃಶ್ಯವೊಂದನ್ನು ಶೂಟ್ ಮಾಡಲಾಗುತ್ತಿತ್ತು. ಬೆಂಕಿ ಬಿದ್ದ…

Read More

ಬೀಜಿಂಗ್: ಚೀನಾದ ಅಧ್ಯಕ್ಷನಾಗಿ 3ನೇ ಅವಧಿಗೆ ಕ್ಸಿ ಜಿನ್‌ಪಿಂಗ್ ಮತ್ತೆ ಆಯ್ಕೆಯಾಗಿದ್ದು, ಈ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸಂಸತ್ತಿನ ಸುಮಾರು 3,000 ಸದಸ್ಯರು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಜಿನ್‌ಪಿಂಗ್‌ಗೆ ಚೀನಾದ ಅಧ್ಯಕ್ಷರಾಗಲು ಸರ್ವಾನುಮತದಿಂದ ಮತ ಹಾಕಿದ್ದಾರೆ. ಚುನಾವಣೆಯಲ್ಲಿ ಕ್ಸಿಗೆ ಪ್ರತಿಸ್ಪರ್ಧಿಯಾಗಿ ಯಾವುದೇ ಅಭ್ಯರ್ಥಿ ಇರಲಿಲ್ಲ ಎಂದು ವರದಿಗಳು ತಿಳಿಸಿವೆ. ಚೀನಾದ ಹೊಸ ಸಂಸತ್ತಿನ ಅಧ್ಯಕ್ಷರಾಗಿ ಝಾವೊ ಲೆಜಿ ಮತ್ತು ಹೊಸ ಉಪಾಧ್ಯಕ್ಷರಾಗಿ ಹಾನ್ ಝೆಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಬ್ಬರೂ ಕ್ಸಿ ಅವರ ಹಿಂದಿನ ಪಾಲಿಟ್‌ಬ್ಯುರೊ ಸ್ಥಾಯಿ ಸಮಿತಿಯ ಪಕ್ಷದ ನಾಯಕರ ತಂಡದಲ್ಲಿದ್ದರು ಎನ್ನಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕ್ಸಿ ಜಿನ್‌ಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 3ನೇ ಬಾರಿ 5 ವರ್ಷಗಳ ಅವಧಿಗೆ ಮರು ಆಯ್ಕೆಯಾಗಿದ್ದು, ಈ ಮೂಲಕ ದಾಖಲೆ ಸೃಷ್ಟಿಸಿದ್ದರು. ಇದೀಗ ಕ್ಸಿ ಅವರು ಮಾವೋ ಝೆಡಾಂಗ್ ನಂತರ ದೇಶದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದಾರೆ.

Read More

ರಿಯಲ್ ಸ್ಟಾರ್ ಉಪೇಂದ್ರ ಸದ್ಯ `ಕಬ್ಜ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಚಿತ್ರತಂಡ ಬೀಡು ಬಿಟ್ಟಿದ್ದು, ಸಿನಿಮಾದ ಸುದ್ದಿಗೋಷ್ಠಿಯಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ನಟ ಉಪೇಂದ್ರ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಆರ್.ಚಂದ್ರು ನಿರ್ದೇಶನದ `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಕಿಚ್ಚ ಮತ್ತು ಉಪ್ಪಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಉಪ್ಪಿ, ದೀಪಿಕಾ ಜೊತೆ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ನಾನು ʻಲಕ್ಕಿʼ ಎಂದು ನಟ ಉಪೇಂದ್ರ ಅವರು `ಕಬ್ಜ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ದೀಪಿಕಾ ಬಗ್ಗೆ ಉಪ್ಪಿ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರು. ಅವರು ಕನ್ನಡದ `ಐಶ್ವರ್ಯಾ’ ಚಿತ್ರದ ಮೂಲಕ ಉಪೇಂದ್ರ ಅವರಿಗೆ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಬಳಿಕ ಬಾಲಿವುಡ್‌ನಲ್ಲಿ ಸೂಪರ್ ಸಕ್ಸಸ್ ಕಂಡಿದ್ದಾರೆ.

Read More

ಇತ್ತೀಚಿಗೆ ನಡೆದ ಆಸ್ಕರ್ ಪ್ರಿಇವೆಂಟ್‌ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ – ನಿಕ್ ದಂಪತಿ ಭಾಗವಹಿಸಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಜೋಡಿ ಸುದ್ದಿ ಮಾಡಿದೆ. ಮಾರ್ಚ್ 8ರಂದು ಲಾಸ್ ಏಂಜಲೀಸ್‌ನಲ್ಲಿ ಪ್ರಿ-ಆಸ್ಕರ್ ಕಾರ್ಯಕ್ರಮ ನಡೆದಿದ್ದು, ಪ್ರಿಯಾಂಕಾ- ನಿಕ್ ದಂಪತಿ ಭಾಗವಹಿಸಿದ್ದಾರೆ. ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಆಸ್ಕರ್ ಅಕಾಡೆಮಿ ಅವಾರ್ಡ್ ಇವೆಂಟ್ ಮಾರ್ಚ್ 12ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ವೆಬ್ ಸಿರೀಸ್ `ಸಿಟಾಡೆಲ್’ ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ. ಈಗಾಗಲೇ `ಸಿಟಾಡೆಲ್’ ಟ್ರೈಲರ್ ಬಿಡುಗಡೆಯಾಗಿದ್ದು, ಆ್ಯಕ್ಷನ್ ಅವತಾರದಲ್ಲಿ‌ ಪ್ರಿಯಾಂಕಾ ಮಿಂಚಿದ್ದಾರೆ. `ಸಿಟಾಡೆಲ್’ ವೆಬ್ ಸರಣಿ ಅಮೆಜಾನ್ ಪ್ರೈಂ ವೀಡಿಯೋ ಮೂಲಕ ಪ್ರಸಾರವಾಗಲಿದೆ. ಇದೇ ಏಪ್ರಿಲ್ 28ಕ್ಕೆ ಸ್ಟ್ರೀಮ್ ಆಗಲಿದೆ.

Read More

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಘಳಿಸಿದ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಇದೀಗ ರಾಜಕೀಯ ಅಖಾಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಕಿರುತೆರೆಯಲ್ಲಿ ರಾಜಕಾರಣಿಯಾಗಿ ಮಿಂಚಲು ಪ್ರಶಾಂತ್ ಸಂಬರ್ಗಿ ರೆಡಿಯಾಗಿದ್ದಾರೆ. ದೊಡ್ಮನೆಯಲ್ಲಿ ತಮ್ಮ ಖಡಕ್ ಮಾತುಗಳಿಂದ ಗಮನ ಸೆಳೆದ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಕಿರುತೆರೆಯತ್ತ ಮುಖ ಮಾಡಿದ್ದಾರೆ. `ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ನಾಯಕ ತೀರ್ಥಂಕರ್ ಪ್ರಸಾದ್ ಮುಂದೆ ಸೆಡ್ಡು ಹೊಡೆಯಲು ಸಂಬರ್ಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ ರಾಜಕಾರಣಿ ಪಾತ್ರದ ಮೂಲಕ ಸಂಬರ್ಗಿ ನಟಿಸಿದ್ದಾರೆ. ಭೈರತಿ ಕುಣಿಗಲ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರದ ಅವಕಾಶ ಮೊದಲು ಹೆಸರಾಂತ ನಟ ಅವಿನಾಶ್‌ಗೆ ಸಿಕ್ಕಿತ್ತು. ಡೇಟ್ ಕ್ಲಾಶ್ ಆದ ಕಾರಣ, ಪ್ರಶಾಂತ್ ಸಂಬರ್ಗಿ ಅವರಿಗೆ ಅವಕಾಶ ಒಲಿದು ಬಂದಿದ್ದು, ಅತಿಥಿ ಪಾತ್ರದ ಮೂಲಕ ಕಿರುತೆರೆ ಸಿನಿ ಪ್ರೇಕ್ಷಕರಿಗೆ ರಂಜಿಸಲು ಸಂಬರ್ಗಿ ರೆಡಿಯಾಗಿದ್ದಾರೆ.

Read More

ಇತ್ತೇಚೆಗಷ್ಟೇ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟುಹಬ್ಬದ ಅದ್ದೂರಿಯಾಗಿ ಆಚರಿಸಿದ್ದಾರೆ. ಮಗಳ ಹುಟ್ಟುಹಬ್ಬದ ಫೋಟೋಗಳನ್ನು ಪ್ರಗತಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ರಿಷಬ್ ಹಾಗೂ ಪ್ರಗತಿ ಶೆಟ್ಟಿ ತಮ್ಮ ಮಗಳಿಗೆ ರಾಧ್ಯಾ ಎಂದು ನಾಮಕರಣ ಮಾಡಿದ್ದಾರೆ. ಬರ್ತ್‍ಡೇ ಸಂಭ್ರಮಾಚರಣೆಯಲ್ಲಿ ರವಿಚಂದ್ರನ್ ಹಾಗೂ ಅವರು ಪುತ್ರರು ಭಾಗಿಯಾಗಿದ್ದಾರೆ. ರಾಧ್ಯಾಳ ಬರ್ತಡೇ ಪಾರ್ಟಿಯಲ್ಲಿ ನಟ ಉಪೇಂದ್ರ ಭಾಗಿಯಾಗಿದ್ದು ಮುದ್ದು ಕಂದನಿಗೆ ಶುಭ ಹಾರೈಸಿದ್ದಾರೆ. ನಟ ರಮೇಶ್ ಅರವಿಂದ್ ಸಹ ಬರ್ತ್‍ಡೇಯಲ್ಲಿ ಭಾಗಿಯಾಗಿದ್ದರು. ಮಗಳ ಹುಟ್ಟುಹಬ್ಬದ ಸಂಭ್ರವನ್ನು ಹೆಚ್ಚಿಸಿದ ಎಲ್ಲರಿಗೂ ಪ್ರಗತಿ ಶೆಟ್ಟಿ ಅವರು ಧನ್ಯವಾದ ಹೇಳಿದ್ದಾರೆ. ರಾಧ್ಯಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಪತ್ನಿ ಶಿಲ್ಪಾ ಜೊತೆ ಗೋಲ್ಡನ್ ಸ್ಟಾರ್ ಗಣೇಶ್, ಪತಿ ಜಗದೀಶ್ ಜೊತೆ ನಟಿ ಅಮೂಲ್ಯ ಸಹ ಭಾಗಿಯಾಗಿದ್ದರು. ನಟ ಅರ್ಜುನ್ ಸರ್ಜಾ, ನಟ ಧ್ರುವ ಸರ್ಜಾ ಸಹ ರಿಷಬ್ ಶೆಟ್ಟಿ ಅವರ ಮಗಳ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಅರ್ಜುನ್ ಸರ್ಜಾ ಪುಟಾಣಿ ರಾಧ್ಯಾಳಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದರು. ಸಿನಿಮಾ…

Read More

ಬರ್ಲಿನ್: ಚರ್ಚ್ ನಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಜರ್ಮನಿಯ ಹ್ಯಾಮ್‍ಬರ್ಗ್‍ನ ಯೆಹೋವ್‌ನ ವಿಟ್‍ನೆಸ್ ಚರ್ಚ್‍ನಲ್ಲಿ ನಡೆದಿದೆ. ಘಟನೆಯಲ್ಲಿ 8 ಜನರಿಗೆ ಗಂಭೀರ ಗಾಯಗಳಾಗಿವೆ. ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ನಡೆಸಿದವರು ಪರಾರಿಯಾಗಿರುವ ಅಥವಾ ಸಾವಿಗೀಡಾದ ಬಗ್ಗೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ 9:15ರ ಸಮಯದಲ್ಲಿ ಪೊಲೀಸರಿಗೆ ತುರ್ತು ಕರೆಯೊಂದು ಬಂದಿದ್ದು, ಕರೆಯ ಆಧಾರದ ಮೇಲೆ ಚರ್ಚ್ ಬಳಿಗೆ ತೆರಳಿದ ಪೊಲೀಸರು ಗಾಯಗೊಂಡವರ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ಹೆಲಿಕಾಪ್ಟರ್  ಮೂಲಕ ಥರ್ಮಲ್ ಇಮ್ಯಾಜಿಂಗ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸ್ಥಳೀಯ ನಿವಾಸಿಗಳಿಗೆ ಬೇರೆ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

Read More

ಬೀಜಿಂಗ್: ಚೀನಾ ಸರ್ಕಾರವು ಮಹಿಳಾ ಮಾಡೆಲ್‌ಗಳು ಆನ್‌ಲೈನ್‌ನಲ್ಲಿ ಒಳ ಉಡುಪು ಪ್ರದರ್ಶಿಸುವುದನ್ನ ನಿಷೇಧಿಸಿದೆ. ಹೀಗಾಗಿ ದೇಶದ ಲೈವ್‌ಸ್ಟ್ರೀಮ್‌ ಫ್ಯಾಶನ್ ಕಂಪನಿಗಳು ಇದೀಗ ಒಳ ಉಡುಪುಗಳ ರಾಯಭಾರಿಯನ್ನಾಗಿ ಪುರುಷರನ್ನ ನಿಯೋಜಿಸುತ್ತಿವೆ. ಬ್ರಾ ದಿಂದ ಹಿಡಿದು ನೈಟ್‌ಗೌನ್ ವರೆಗಿನ ಎಲ್ಲ ರೀತಿಯ ಒಳ ಉಡುಪುಗಳ ಜಾಹೀರಾತಿಗೆ ಪುರುಷರನ್ನ ನಿಯೋಜನೆ ಮಾಡಲಾಗುತ್ತಿದೆ. ಮಹಿಳೆಯರ ಒಳ ಉಡುಪುಗಳನ್ನ ಧರಿಸಿರುವ ಚೀನಿ ಪುರುಷರ ಚಿತ್ರಗಳು, ಫ್ಯಾಷನ್ ಕಂಪನಿಗಳ ಲೈವ್‌ಸ್ಟ್ರೀಮ್ ಪ್ರಸಾರದ ವೀಡಿಯೋಗಳು ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಕೆಲ ಪುರುಷ ಮಾಡೆಲ್‌ಗಳು ಕ್ಯಾಟ್ ಇಯರ್ ಹೆಡ್‌ಬ್ಯಾಂಡ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಪುರುಷ ಮಾಡೆಲ್‌ಗಳಿಂದ ಮಹಿಳೆಯರ ಒಳ ಉಡುಪು ಪ್ರದರ್ಶಿಸುವ ಮೂಲಕ ಚೀನಾ ಸರ್ಕಾರ ಟೀಕೆಗೆ ಗುರಿಯಾಗಿದೆ. ಕೆಲವರು ಇದಕ್ಕೆ ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ. ಫ್ಯಾಶನ್ ಕಂಪನಿಗಳ ಪ್ರಯತ್ನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read More

ಟಾಲಿವುಡ್ ನಟ ನರೇಶ್ ಹಾಗೂ ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಮದುವೆಯಾಗುತ್ತಾರೆ ಎಂಬ ಸುದ್ದಿ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಅದೀಗ ನಿಜವಾಗಿದೆ. ಸದ್ಯ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆ ವಿಡಿಯೋ ವೈರಲ್ ಆಗಿದೆ. ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ವಿಡಿಯೋನ ನರೇಶ್ ಅವರೇ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆಶೀರ್ವಾದ ಮಾಡುವಂತೆ ಅಭಿಮಾನಿಗಳಲ್ಲಿ ಕೋರಿದ್ದಾರೆ. ಈ ವಿಡಿಯೋಗೆ ಬಗೆಬಗೆಯಲ್ಲಿ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಸಮಯದಿಂದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೇ ವಿಚಾರವಾಗಿ ನರೇಶ್ ಹಾಗೂ ಅವರ ಪತ್ನಿ ರಮ್ಯಾ ಕಿತ್ತಾಡಿಕೊಂಡಿದ್ದರು. ಈ ವಿವಾದ ತಣ್ಣಗಾಯಿತು ಎನ್ನುವಾಗ ಪವಿತ್ರಾಗೆ ಮುತ್ತು ಕೊಡುತ್ತಿರುವ ವಿಡಿಯೋನ ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ಶೇರ್ ಮಾಡಿಕೊಂಡಿದ್ದರು. ಇದೀಗ ನರೇಶ್ ತಮ್ಮ ಮದುವೆ ವಿಡಿಯೋ ಪೋಸ್ಟ್ ಮಾಡಿದ್ದು, ಅನೇಕರು ನವ ದಂಪತಿಗೆ ಶುಭಾಶಯ ಕೋರಿದ್ದಾರೆ.

Read More

ತುಮಕೂರು: ರೈತರ ಮಕ್ಕಳ ಮದುವೆಯಾಗಲು ವಧುಗಳು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಭರ್ಜರಿ ಘೋಷಣೆ ಮಾಡಿದ್ದಾರೆ. ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ 2 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರದಲ್ಲಿ ಬುಧವಾರ ನಡೆದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಹಳ್ಳಿಯ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇದೊಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ. ಒಂದೊಂದು ಊರಲ್ಲಿ 50 ರಿಂದ 100 ಗಂಡು ಮಕ್ಕಳು ಹುಡುಗಿ ಸಿಗದೇ ಕಾಯುತ್ತಿದ್ದಾರೆ. ಹೆಣ್ಣು ಸಿಗಲಿಲ್ಲ ಎಂದು ನಿರಾಸರಾಗಿದ್ದಾರೆ. ಹೀಗಾಯೇ ಸೂಕ್ತ ತೀರ್ಮಾನ ಕೈಗೊಂಡು ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು. ರೈತರ ಮಕ್ಕಳಿಂದ ಮಧುಗಳು ದೂರು ಸಭೆ ಸಮಾರಂಭಗಳಲ್ಲಿ ರೈತರ ಮಕ್ಕಳು ಭೇಟಿಯಾದ ಸಂದರ್ಭದಲ್ಲಿ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಬಗ್ಗೆ ಮನವಿ ಪತ್ರ ನೀಡಿದ್ದರು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು…

Read More