ಮಲಯಾಳಂ ಸಿನಿಮಾ ರಂಗದಲ್ಲಿ ಹೇಮಾ ಸಮಿತಿ ವರದಿ ಬಂದ ಬಳಿಕ ಒಂದೊಂದೇ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿದೆ. ಇದೀಗ ಆಂಧ್ರಪ್ರದೇಶದ ರಾಜಕಾರಣಿಯೊಬ್ಬರ ಮೇಲೆ ಮುಂಬೈ ನಟಿಯೊಬ್ಬರು ಮಾಡಿರುವ ಲೈಂಗಿಕ ಹಾಗೂ ಮಾನಸಿಕ ಹಿಂಸೆಯ ಆರೋಪ ರಾಜಕೀಯ ಹಾಗೂ ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿದೆ. ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಆಡಳಿತವಿದ್ದ ವೈಸಿಪಿ ಪಕ್ಷದ ಪ್ರಮುಖ ಮುಖಂಡನೊಬ್ಬ ಮುಂಬೈ ಮೂಲದ ನಟಿ, ಮಾಡೆಲ್ ಜೊತೆಗೆ ವೈದ್ಯೆ ಸಹ ಆಗಿರುವ ಒಬ್ಬ ಯುವತಿಗೆ ಕೊಡಬಾರದ ಹಿಂಸೆ ಕೊಟ್ಟು, ಆಕೆಯನ್ನು, ಆಕೆಯ ಕುಟುಂಬವನ್ನು ಅಪಹರಿಸಿ ಚಿತ್ರಹಿಂಸೆ ಮಾಡಿರುವ ವಿಷಯ ಇದೀಗ ಬಹಿರಂಗವಾಗಿದೆ. ಈ ಅಮಾನುಷ ಘಟನೆಯಲ್ಲಿ ಕೆಲ ಐಪಿಎಸ್ ಅಧಿಕಾರಿಗಳು ಸಹ ಭಾಗಿಯಾಗಿರುವುದು ಕೂಡ ಬೆಳಕಿಗೆ ಬಂದಿದೆ. ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುಕ್ಕಲ ವಿದ್ಯಾ ಸಾಗರ್ ಎಂಬ ವೈಸಿಪಿ ಮುಖಂಡ ಗುಜರಾತ್ ಮೂಲದ ಕಾದಂಬರಿ ಜೇಟ್ವಾನಿ ಹಾಗೂ ಅವರ ಕುಟುಂಬವನ್ನು ಅಪಹರಿಸಿ ಕೂಡಿಹಾಕಿ…
Author: Prajatv Kannada
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿ 3 ತಿಂಗಳಾಗಿದೆ. ಇದುವರೆಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಪವರ್ ಬಳಸಿ ಬೇಕಾದನ್ನು ತರಿಸಿಕೊಳ್ಳುತ್ತಿದ್ದ ದರ್ಶನ್ ಗೆ ಬಳ್ಳಾರಿ ಜೈಲು ನುಂಗಲಾರದ ತುತ್ತಾಗಿದೆ. ಹೊಸ ಜೈಲಿಗೆ ಅಡ್ಜಸ್ಟ್ ಆಗಲು ಸಾಧ್ಯವಾಗದೆ ರಾತ್ರಿ ಇಲ್ಲ ನಿದ್ದೆ ಬಿಟ್ಟು ಒದ್ದಾಡಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿತ್ತು. ಹೀಗಾಗಿ, ದರ್ಶನ್ ಅರಾಮಾಗಿದ್ದರು. ಆದರೆ, ಬಳ್ಳಾರಿ ಜೈಲಿನಲ್ಲಿ ವಿಶೇಷ ಆತಿಥ್ಯಕ್ಕೆ ಬ್ರೇಕ್ ಹಾಕಲಾಗಿದೆ. ಇದು ದರ್ಶನ್ಗೆ ನುಂಗಲಾರದ ತುತ್ತಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ನಂತರ ಬಂಧನಕ್ಕೆ ಒಳಗಾಗಿ ಹಾಯಾಗಿದ್ದ ಅವರು ಈಗ ನಿಜವಾದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಕುಟುಂಬದವರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದ್ದು ಉಳಿದವರ ಭೇಟಿಯನ್ನು ನಿಷೇಧಿಸಲಾಗಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಮೊದಲ ದಿನ ಕಳೆದಿದ್ದಾರೆ. ರಾತ್ರಿ 1 ಗಂಟೆವರೆಗೆ ನಿದ್ದೆ ಮಾಡದೆ ಒದ್ದಾಡಿದ್ದಾರೆ.…
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿಯಾಗಿ ಡಾ.ಕೆ.ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗೆಲುವು ಸಾಧಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಪ್ರದೀಪ್ ಈಶ್ವರ್ ಯಾವ ಸ್ಟಾರ್ ನಟರಿಗೂ ಕಮ್ಮಿ ಇಲ್ಲದಂತೆ ಡೈಲಾಗ್ ಹೇಳಿ ಫೇಮಸ್ ಆಗಿದ್ದರು. ಇದೀಗ ಇವರಿಗೆ ಟಾಲಿವುಡ್‌ನಲ್ಲಿ ಭಾರೀ ಬೇಡಿಕೆ ಬಂದಿದೆ. ಹೌದು…ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಲು ಪ್ರದೀಪ್ ಈಶ್ವರ್ಗೆ ಆಫರ್ ಬಂದಿದೆ. ಟಾಲಿವುಡ್ ಚಿತ್ರರಂಗದ ದಿಗ್ಗಜ ಮೆಗಾಸ್ಟಾರ್ ಚಿರಂಜೀವಿಯವರು ಸಾಮಾಜಿಕ ಕ್ರಾಂತಿಯ ಚಲನಚಿತ್ರವೊಂದರಲ್ಲಿ ನಟಿಸಲು ರೆಡಿಯಾಗುತ್ತಿದ್ದಾರೆ. ಇದರಿಂದ ಚಿರಂಜೀವಿ ಜೊತೆ ಬಣ್ಣ ಹಚ್ಚಿ ನಟಿಸಲು ಶಾಸಕ ಪ್ರದೀಪ್‌ಈಶ್ವರ್‌ಗೆ ಕರೆ ಬಂದಿದೆಯಂತೆ. ಸ್ವತಃ ಮೆಗಸ್ಟಾರ್ ಚಿರಂಜೀವಿಯವರ ಚಲನಚಿತ್ರವನ್ನು ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕರೊಬ್ಬರು ಶಾಸಕ ಪ್ರದೀಪ್‌ಈಶ್ವರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆಂದು ಸ್ವತಃ ಪ್ರದೀಪ್‌ಈಶ್ವರ್ ಹೇಳಿಕೊಂಡಿದ್ದಾರೆ. ಕರ್ನಾಟಕದಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಂದಿನ ಪ್ರಭಾವಿ ಮಂತ್ರಿ, ಭಾವಿ ಮುಖ್ಯಮಂತ್ರಿಯೆಂದೇ ಬಿಂಬಿತಗೊಂಡಿದ್ದ ಡಾ|| ಕೆ.ಸುಧಾಕರ್‌ರವರನ್ನು ಸೋಲಿಸಿ, ಪ್ರದೀಪ್‌ಈಶ್ವರ್ ಜಯಭೇರಿ ಭಾರಿಸಿದ್ದರು.…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಅಲ್ಲಿ ತಮ್ಮ ಪ್ರಭಾವ ಬಳಸಿ ಸಾಕಷ್ಟು ಸವಲತ್ತುಗಳನ್ನು ಪಡೆದುಕೊಂಡಿದ್ದರು. ದರ್ಶನ್ ಜೈಲಿನಲ್ಲಿರುವ ಫೋಟೋವೊಂದು ವೈರಲ್ ಆಗಿ ಸಾಕಷ್ಟು ಟೀಕೆಗಳು ಕೇಳಿ ಬಂದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿಗೆ ಎಂಟ್ರಿಕೊಡ್ತಿದ್ದಂಗೆ ನಟನಿಂದಾಗಿ ಭದ್ರತಾ ಸಿಬ್ಬಂದಿಗಳಿಗೆ ಸಂಕಷ್ಟ ಎದುರಾಗಿದೆ. ದರ್ಶನ್ ಬಳ್ಳಾರಿ ಜೈಲಿಗೆ ಎಂಟ್ರಿ ನೀಡುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದು ಕಂಡು ಬಂದಿದೆ. ನಟನಿಗೆ ಕೂಲಿಂಗ್ ಗ್ಲಾಸ್ ಧರಿಸಲು ಭದ್ರತಾ ಸಿಬ್ಬಂದಿ ಅನುಮತಿ ನೀಡಿದ್ದಾರೆ. ಪರಿಣಾಮವಾಗಿ, ಕರ್ತವ್ಯ ಲೋಪ ಎಸಗಿದ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರಾಗೃಹ ಇಲಾಖೆಯ ಡಿಜಿಪಿಗೆ ಡಿಐಜಿ ಟಿ.ಪಿ. ಶೇಷ ಅವರು ಪತ್ರ ಬರೆದಿದ್ದಾರೆ. ಬೆಂಗಳೂರಿನಿಂದ ಹೊರಟು ಬಳ್ಳಾರಿ ಜೈಲು ತಲುಪಿದ ದರ್ಶನ್ ಅವರು ಕಾರಾಗೃಹದ ಒಳಗೆ ಎಂಟ್ರಿ ನೀಡುವಾಗ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡರು. ಅವರಿಗೆ ಕೂಲಿಂಗ್ ಗ್ಲಾಸ್ ಧರಿಸಲು ಏಕೆ ಅನುಮತಿ ನೀಡಲಾಯಿತು ಎಂಬ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕಳೆದ ಮೂರು ತಿಂಗಳಿನಿಂದ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಷ್ಟು ದಿನಗಳ ಕಾಲ ಬೆಂಗಳೂರು ಜೈಲಿನಲ್ಲಿ ಅರಾಮಾಗಿದ್ದ ದರ್ಶನ್ ಸಿಗರೇಟ್ ಸೇದುತ್ತಿದ್ದ ಫೋಟೋ ವೈರಲ್ ಆಗುತ್ತಿದ್ದಂತೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಲಡಲಾಗದೆ. ಬಳ್ಳಾರಿ ಜೈಲಿನಲ್ಲೂ ದರ್ಶನ್ ಗೆ ಸಾಕಷ್ಟು ಸವಲತ್ತು ಸಿಗಲಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಕಾರಾಗೃಹ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಉತ್ತರ ಡಿಐಜಿ ವಿಶೇಷ ಆದೇಶ ನೀಡಿದ್ದಾರೆ ಎನ್ನಲಾಗುತ್ತಿದೆ. ಆ.29ರ ಮುಂಜಾನೆಯೇ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ರನ್ನು ಕರೆದುಕೊಂಡು ಹೊರಟ ಪೊಲೀಸ್ ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ತೆರಳಿದ್ದಾರೆ. ಹೈ ಸೆಕ್ಯೂರಿಟಿ ಸೆಲ್ ಕಂಡು ನಟ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ. ಮೊದಲ ಗೇಟ್‌ಗೆ ಎಂಟ್ರಿಯಾಗುತ್ತಿದ್ದಂತೆ ಅವರು ತಲೆ ಚಚ್ಚಿಕೊಂಡಿದ್ದಾರೆ. ಸದ್ಯ ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿಯ 15ನೇ ಸೆಲ್‌ನಲ್ಲಿ ದರ್ಶನ್ ಇದ್ದಾರೆ. ಇದರ ಜೊತೆಗೆ…
15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಆಯೋಗಕ್ಕೆ ತಿಳಿಸಿದರು. ಜೊತೆಗೆ 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆದ ನಷ್ಟವನ್ನು ಅಂಕಿಅಂಶಗಳ ಸಮೇತ ಆಯೋಗದ ಮುಂದಿಟ್ಟು ರಾಜ್ಯಕ್ಕೆ ನ್ಯಾಯ ಕೊಡುವಂತೆ ಮನವಿ ಮಾಡಿದರು. https://youtu.be/K7KRlnVgslA?si=Nbqhp2hIV1Bigj18 ಭಾರತದ ಅಭಿವೃದ್ಧಿಗೆ ಕರ್ನಾಟಕ ಪ್ರಧಾನ ಪಾತ್ರ ವಹಿಸುತ್ತಿದೆ. ಒಟ್ಟು ಜನಸಂಖ್ಯೆಯ ಶೇ.5ರಷ್ಟಿದ್ದರೂ ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಅಂದಾಜು ಶೇ.8.4 ರಷ್ಟು ಪಾಲು ನೀಡುತ್ತಿದೆ. ಇಡೀ ದೇಶದಲ್ಲೇ ಜಿಡಿಪಿ ದೇಣಿಗೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ದೇಶದ ಒಟ್ಟು ತೆರಿಗೆ ಆದಾಯಕ್ಕೆ ಕರ್ನಾಟಕ ಸುಮಾರು ರೂ.4 ಲಕ್ಷ ಕೋಟಿಯಷ್ಟು ಪಾಲು ನೀಡುತ್ತಿದ್ದರೂ ರಾಜ್ಯಕ್ಕೆ ತೆರಿಗೆ ಪಾಲಿನ ರೂಪದಲ್ಲಿ 45ಸಾವಿರ ಕೋಟಿ ರೂ. ಹಾಗೂ ಅನುದಾನದ ರೂಪದಲ್ಲಿ 15 ಸಾವಿರ ಕೋಟಿ ರೂ. ದೊರಕುತ್ತಿದೆ. ಅಂದರೆ ಕರ್ನಾಟಕ ನೀಡುವ…
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿದೆ. ಬೆಳಗಿನಜಾವ ೪.೩೦ ಗಂಟೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಹೊರಟು ಬೆಳಗ್ಗೆ ೯.೪೫ರ ಸುಮಾರಿಗೆ ಬಳ್ಳಾರಿ ಸೆಂಟ್ರಲ್ ಜೈಲು ತಲುಪಿದರು. ಬೆಂಗಳೂರಿನ ಪೊಲೀಸರ ಭದ್ರತೆಯೊಂದಿಗೆ ಟಿಟಿ ವಾಹನದಲ್ಲಿ ದರ್ಶನ್ ನ್ನು ಕರೆ ತರಲಾಯಿತು. https://youtu.be/ZNSynZ8Fh58?si=NN7861ZMeI1I_97A ಪೂಮಾ ಕಂಪನಿಯ ಬ್ಲಾಕ್ ಟಿಶಟ್೯, ಜೀನ್ಸ್ ಧರಿಸಿದ್ದ ದರ್ಶನ್ ಬಲಗೈಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡಿದ್ದರು. ಟಿಟಿ ವಾಹನದಿಂದ ಇಳಿದ ದರ್ಶನ್ ಜೈಲು ಪ್ರವೇಶ ದ್ವಾರದ ಎಂಟ್ರಿ ಪುಸ್ತಕದಲ್ಲಿ ಸಹಿ ಮಾಡಿದ ಬಳಿಕ ಜೈಲು ವೈದ್ಯಾಧಿಕಾರಿಗಳು ಆರೋಗ್ಯ ತಪಾಸ ನಡೆಸಿದ ಬಳಿಕ ಹೈ ಸೆಕ್ಯೂರಿಟಿ ಸೆಲ್ ಗೆ ಕಳುಹಿಸಲಾಯಿತು. ಡಿಸಿ ಭೇಟಿ: ಆಂಧ್ರದ ಅನಂತಪು ಜಿಲ್ಲೆಯ ಮೂಲಕ ಬಳ್ಳಾರಿ ಗಡಿಗ್ರಾಮ ಜೋಳದ ರಾಶಿ ಮೂಲಕ ಆಗಮಿಸಿದ ದರ್ಶನ್ ವಾಹನದ ಮುಂದೆ ಸ್ಥಳೀಯ ಪೊಲೀಸರು ಕೂಡ ಬಿಗಿ ಭದ್ರತೆ ಒದಗಿಸಿದ್ದರು. ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಎಸ್ಪಿ ಶೋಭರಾಣಿ, ಜೈಲು ಅಧೀಕ್ಷಕಿ ಲತಾ ನೇತೃತ್ವದಲ್ಲಿ ಪೊಲೀಸರು ಜೈಲಿನೊಳಗಿನ ಎಲ್ಲಪ ಪರಿಸ್ಥಿತಿ ವೀಕ್ಷಿಸಿದರು.…
ರಾಯಚೂರು: ಕೃಷ್ಣಾ ಅಣೆಕಟ್ಟು ಪ್ರದೇಶದಲ್ಲಿ ಭಾರೀ ಮಳೆ ಆಗಿರುವ ಹಿನ್ನೆಲೆ ಬಸವಸಾಗರ ಜಲಾಶಯದಿಂದ ಹೆಚ್ಚು ಪ್ರಮಾಣದ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ. ರಾಯಚೂರಿನ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ಜಲಾಶಯಕ್ಕೆ 1.75 ಲಕ್ಷ ಕ್ಯುಸೆಕ್ ಒಳಹರಿವಿದೆ. ಈ ಹಿನ್ನೆಲೆ 1.78 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಶೀಲಹಳ್ಳಿ ಸೇತುವೆ ಮುಳುಗಡೆಯಿಂದ ಐದಾರು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಶೀಲಹಳ್ಳಿ, ಹಂಚಿನಾಳ, ಯರಗೋಡಿ ಸಂಪರ್ಕ ಮಾರ್ಗ ಸಂಪೂರ್ಣ ಬಂದ್ ಆಗಿದೆ. ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.