ಬೆಂಗಳೂರು: ಬಿಬಿಎಂಪಿಯು 166 ಹುದ್ದೆಗಳ ವಾಹನ ಖರೀದಿಯಲ್ಲಿ ಅಕ್ರಮವೆಸಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಮಾತನಾಡಿದ ಅವರು, 2017-18ರಿಂದ 166 ಹುದ್ದೆಗಳನ್ನು ಅಲಂಕರಿಸಿದ ವ್ಯಕ್ತಿಗಳಿಗೆ ಬಿಬಿಎಂಪಿಯು ವಾಹನಗಳನ್ನು ಪೂರೈಸುತ್ತಿದೆ. ಆದರೆ ಈ ಪೈಕಿ ಶೇಕಡಾ 90ರಷ್ಟು ಜನರಿಗೆ ವಾಹನ ವಿತರಿಸಿಲ್ಲ ಎಂದು ಆರೋಪಿಸಿದರು. ಈ ವಾಹನ ಪೂರೈಕೆ ಯೋಜನೆಯು ಒಟ್ಟು 223 ಕೋಟಿ ರೂಪಾಯಿಯ ಕಾರ್ಯಕ್ರಮವಾಗಿದೆ. ವಾಹನ ವಿತರಿಸದ ಕಾರಣ ಇಷ್ಟು ಪ್ರಮಾಣದ ಹಣ ಎಲ್ಲಿ ಹೋಗಿದೆ. ಆ ಬಗ್ಗೆ ಅಗತ್ಯ ತನಖೆಯಾಗಬೇಕು. ಚುನಾವಣಾ ಆಯೋಗ ಈ ಬಗ್ಗೆ ನಿಗಾ ವಹಿಸಬೇಕು ಎಂದು ಅವರು ಮನವಿ ಮಾಡಿದರು. ವಾಹನ ವಿತರಣೆ ಸಂಬಂಧ ಅಧಿಕಾರಿಗಳು ಸರ್ಕಾರದಲ್ಲಿನ ಖಾತೆಗಳ ವಿಭಾಗದಲ್ಲಿ ತಮಗೆ ಮಂಜೂರು ಮಾಡಲಾಗಿದೆ ಎಂದು ಹೇಳಿದ ಹಣ ಏನಾಯಿತು? ಎಂಬ ಫಲಾನುಭವಿಗಳ ಪ್ರಶ್ನೆಗೆ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ. ಹೀಗೆ ಪ್ರಶ್ನಿಸುವವರು ವಾಹನವನ್ನು ಸ್ವೀಕರಿಸಿಲ್ಲ. ಲೆಕ್ಕಪತ್ರ ಇಲಾಖೆಯು ಬಿಲ್‌ಗಳನ್ನು ಸಿದ್ಧಪಡಿಸಿ…
Author: Prajatv Kannada
ಬೆಂಗಳೂರು: ಇಂದು ರಂಜಾನ್ ಹಬ್ಬದ ಹಿನ್ನೆಲೆ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾವಿರಾರು ಮುಸ್ಲಿಂ ಭಾಂದವರು ಮೈದಾನದಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ ಮಾಡುವ ಹಿನ್ನೆಲೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಇನ್ನೂ ಪ್ರಾರ್ಥನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸುಮಾರು 300ಕ್ಕೂ ಹೆಚ್ಚು ಪೊಲೀಸರಿಂದ ಕಣ್ಗಾವಲು ಇರಿಸಲಾಗಿದೆ. ಇನ್ನೂ ಪ್ರಾರ್ಥನೆ ಮಾಡುವ ಸಲುವಾಗಿ ಈದ್ಗಾ ಮೈದಾನದಲ್ಲಿ ಎಲ್ಲಾ ತಯಾರಿ ನಡೆಸಲಾಗಿದ್ದು, ಸಿದ್ದತೆಯ ಕಾರ್ಯ ಭರದಿಂದ ಸಾಗುತ್ತಿದೆ. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಬ್ಯಾರಿಗೇಟ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.
ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ದಕ್ಷಿಣ ವಲಯದ ಲಾಲ್ ಬಾಗ್ ಪೂರ್ವ ದ್ವಾರದ ಬಳಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥ ಕಾರ್ಯಕ್ರಮಕ್ಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಚಾಲನೆ ನೀಡಿದರು ಜಾಥ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾನದ ಪ್ರಮಾಣವು ಶೇ. 52 ರಷ್ಟಿದ್ದು, ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣವನ್ನು ಶೇ. 60 ಆಗಬೇಕೆಂಬ ಉದ್ದೇಶದಿಂದ ಸಾಕಷ್ಟು ಮತದಾರರ ಜಾಗೃತಿ ಅಭಿಯಾನಗಳನ್ನು ಮಾಡಲಾಗುತ್ತಿದೆ. ಅದರ ಭಾಗವಾಗಿ ಇಂದು ಲಾಲ್ ಬಾಗ್ ನಲ್ಲಿ ಬರುವ ವಾಯುವಿಹಾರಿಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು. ದಕ್ಷಿಣ ವಲಯದ ವಿಜಯ ಕಾಲೇಜಿನಲ್ಲಿ ಸುಮಾರು 500 ಯುವ ಮತದಾರರಿದ್ದು, ಕಾಲೇಜಿಗೆ ತೆರಳಿ ಮತದಾನದ ದಿನದ ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಇನ್ನೂ ಮೇ 10 ರವರೆಗೂ ಎಲ್ಲಾ ಕಾಲೇಜು,…
ಬೆಂಗಳೂರು: ವಿಜಯಪುರ, ಕಲ್ಯಾಣ ಕರ್ನಾಟಕ ಭಾಗದ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಷ್ಟ ಕಾಲದಲ್ಲಿ ಬಿಜೆಪಿ ಯಾವ ರೀತಿ ನಡಿಸಿಕೊಳ್ತು ಅಂತಾ ಗೊತ್ತಿದೆ. ಯಾರಾದರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಇಚ್ಛೆ ಇದ್ದರೇ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇರ್ಪಡೆಯಾಗಿ. ನಮಗೆ ಶಕ್ತಿ ತುಂಬಿ. ಇವತ್ತು ಬಿಜೆಪಿಯಿಂದ ಅರವಿಂದ್ ಚೌಹಾಣ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾರ್ ಸೇರದಂತೆ ಹಲವಾರು ಜನ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇವತ್ತು ಬಿಜೆಪಿಯಿಂದ ಅರವಿಂದ್ ಚೌಹಾಣ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾರ್ ಸೇರದಂತೆ ಹಲವಾರು ಸೇರಲಿದ್ದಾರ ಎಂದರು
ಬೆಂಗಳೂರು: ರಂಜಾನ್ಹಬ್ಬದ ಪ್ರಯುಕ್ತ ಇಂದು ಬೆಳಗ್ಗೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ನಿರ್ಬಂಧ ವಿಧಿಸಿಲಾಗಿದೆ. ಇಂದು ಬೆಳಗ್ಗೆ 8:30 ರಿಂದ ಬೆಳಗ್ಗೆ 11:00 ಗಂಟೆವರೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.ಮೈಸೂರು ಬ್ಯಾಂಕ್ ನಿಂದ ಟೌನ್ ಹಾಲ್ ಕಡೆಗೆ ಬರುವ ವಾಹನಗಳು ಕಿಮ್ಕೊ ಜಂಕ್ಷನ್ ನಲ್ಲಿ ಎಡ ತಿರುವು ಪಡೆಯಬೇಕು, ಅಲ್ಲಿಂದ ವಿಜಯನಗರ ಮೂಲಕ ಸಂಚರಿಸಬಹುದಾಗಿದೆ. ಟೌನ್ ಹಾಲ್ ಕಡೆಯಿಂದ ಮೈಸೂರು ಕಡೆಗೆ ಬರುವ ವಾಹನಗಳು ಬಿಜಿಎಸ್ ಪ್ಲೈಓವರ್ ಕೆಳಗಡೆ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಶಿರಸಿ ಜಂಕ್ಷನ್ ನಲ್ಲಿ ಬಲತಿರುವು ಪಡೆದುಕೊಂಡು ಸಂಚರಿಸಬೇಕು ಹಾಗೂ ಶಿರಸಿ ಜಂಕ್ಷನ್ ನಲ್ಲಿ ಬಲತಿರುವು ಪಡೆದು ಜೆ ಜೆ ನಗರ, ಟ್ಯಾಂಕ್ ಬಂಡೆ ರಸ್ತೆ, ಬಿನ್ನಿಮಿಲ್ ಜಂಕ್ಷನ್, ಹುಣಸೇಮ ಜಂಕ್ಷನ್ ಮೂಲಕ ಸಂಚಾರ ಮಾಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.ರಂಜಾನ್ ಪ್ರಯುಕ್ತ ಮೈಸೂರು ರಸ್ತೆಯಲ್ಲಿ ಮುಸ್ಲಿಂ ಬಾಂದವರು ಸಾಮೂಹಿಕ ಪ್ರಾರ್ಥನೆಗೆ ಆಗಮಿಸುವ ಹಿನ್ನಲೆಯಲ್ಲಿ ಸಂಚಾರ ನಿರ್ಬಂಧ ಮಾಡಿ ಮಾರ್ಗ ಬದಲಾವಣೆ ಮಾಡಿದ್ದಾರೆ.
ಬೆಂಗಳೂರು: ಭಾರತದ ಚುನಾವಣಾ ಆಯೋಗ (Election Commission of India) ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಮತ್ತು ವಿಶೇಷಚೇತನರಿಗೆ (Disabilities) ಮನೆಯಿಂದಲೇ ಮತದಾನ (Vote From Home) ಮಾಡಲು ಅವಕಾಶ ನೀಡಿದೆ. ಈ ಸಂಬಂಧ ಚುನಾವಣಾ ಆಯೋಗ ಈಗಾಗಲೆ ತಯಾರಿ ಮಾಡಿಕೊಂಡಿದೆ. ಇದರಂತೆ ರಾಜ್ಯಾದ್ಯಂತ 80 ವರ್ಷಕ್ಕಿಂತ ಮೇಲ್ಪಟ್ಟ 60,000 ಜನರು ಮತ್ತು 15,000-20,000 ಜನ ವಿಶೇಷಚೇತನರು ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಮನೆಯಿಂದಲೇ ಮತದಾನ ಮಾಡಲು ಮತದಾರರು ಸಲ್ಲಿದ ಅರ್ಜಿಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿ ನಂತರ ಮತದಾನಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸುವ ಬಗ್ಗೆ ನಿರ್ಧರಿಸುತ್ತಾರೆ. ಪಟ್ಟಿಯನ್ನು ಮುಂಚಿತವಾಗಿ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ” ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ . 2023ರ ಮಾರ್ಚ್ವರೆಗೆ ಮತದಾರರ ಪಟ್ಟಿ ಪ್ರಕಾರ ಕರ್ನಾಟಕದಲ್ಲಿ 80-99 ವಯಸ್ಸಿನ 12.2 ಲಕ್ಷ ಜನರಿದ್ದಾರೆ. 5.6 ಲಕ್ಷ ವಿಶೇಷಚೇತನರಿದ್ದು, 16,000 ಕ್ಕೂ ಹೆಚ್ಚು ಶತಾಯುಷಿ ಮತದಾರರಿದ್ದಾರೆ. ಆದರೆ ಕೇವಲ ಶೇ5ರಷ್ಟು ಜನರು ಮಾತ್ರ ಮನೆಯಿಂದಲ್ಲೇ ಮತದಾನಕ್ಕೆ ಅರ್ಜಿ…
ಬೆಂಗಳೂರು: ಚುನಾವಣೆ (Karnataka Election) ಹೊತ್ತಲ್ಲಿ ರಾಜಕಾರಣಿಗಳಿಗೆ ಹೊಸ ಅಸ್ತ್ರ ಸಿಕ್ಕಿದೆ. ಅದುವೇ ಲಿಂಗಾಯತ ಸಿಎಂ (Lingayat CM) ಅಸ್ತ್ರ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಬಿಜೆಪಿ ವಿರುದ್ಧ ನೇರಾನೇರ ಸಮರ ನಡೆಯುತ್ತಿದೆ. ಚುನಾವಣೆ ಸಮಯದದಲ್ಲಿ ಇದು ಬಿಜೆಪಿಗೆ (BJP) ಟೆನ್ಷನ್ ಹೆಚ್ಚಿಸಿದ್ದು ಲಿಂಗಾಯತರ ಕಡೆಗಣನೆ ಆರೋಪದಿಂದ ಚುನಾವಣೆ ಹೊಡೆತದ ಆತಂಕ ಎದುರಾಗಿದೆ. ಈ ಲಿಂಗಾಯತ ಸಿಎಂ ಟೆನ್ಷನ್ ವಿಚಾರಕ್ಕೆ ಅಮಿತ್ ಶಾ (Amit Shah) ತಮ್ಮದೇ ಆದ ಸೂತ್ರವೊಂದನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ರಾಜ್ಯ ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಲಿಂಗಾಯತ ಕಡೆಗಣನೆ ಅಸ್ತ್ರ ಎದುರಿಸಲು ರಾಜ್ಯ ನಾಯಕರಿಗೆ ಅಮಿತ್ ಶಾ ತಂತ್ರವನ್ನು ರವಾನಿಸಿದ್ದಾರೆ. ಈ ಲಿಂಗಾಯತ ದಾಳವನ್ನು ಚುನಾವಣೆ ಮುಗಿಯುವವರೆಗೂ ಬಳಕೆ ಮಾಡುವಂತೆ ತಾಕೀತು ಮಾಡಿದ್ದಾರೆ. ಶಾ ತಂತ್ರಗಾರಿಕೆ: ಲಿಂಗಾಯತ ಸಿಎಂ ದಾಳ ಕಡೆಯವರೆಗೂ ಇರಿಸಿಕೊಳ್ಳಿ. ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‍ಗಿಂತಲೂ (Congress) ಬಿಜೆಪಿಯ ಕೊಡುಗೆಯೇ ಹೆಚ್ಚಿದ್ದು, ಕಾಂಗ್ರೆಸ್ ಕಣ್ಣು ಒರೆಸುವ ತಂತ್ರಗಳಿಂದ ಸಮಯ…
ಕರ್ನಾಟಕ SSLC ಫಲಿತಾಂಶ 2023 (Karnataka SSLC Result 2023) ಮೇ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 (Karnataka 2nd PUC Results) ಇಂದು (April 21) ಪ್ರಕಟವಾಗಿದ್ದು, ವಿದ್ಯಾರ್ಥಿಗಳು (Students) ಈಗ 10ನೇ ತರಗತಿಯ ಫಲಿತಾಂಶ ಬಿಡುಗಡೆಗಾಗಿ ಕಾಯುತ್ತಿದ್ದಾರೆ. SSLC ಫಲಿತಾಂಶ ಕರ್ನಾಟಕ 2023 ಅಧಿಕೃತ ವೆಬ್ಸೈಟ್ಗಳಲ್ಲಿ ಪ್ರಕಟಿಸಲಾಗುವುದು. karresults.nic.in ಮತ್ತು kseab.karnataka.gov.in. ಫಲಿತಾಂಶವನ್ನು ಪರಿಶೀಲಿಸಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಕರ್ನಾಟಕ SSLC ಪರೀಕ್ಷೆಯ ವಿವರಗಳು ಮತ್ತು ಫಲಿತಾಂಶದ ನವೀಕರಣಗಳನ್ನು ಪರಿಶೀಲಿಸಿ. ಕರ್ನಾಟಕ ಎಸ್ಎಸ್ಎಲ್ಸಿ 2023 ರ ಮೌಲ್ಯಮಾಪನವು ಇಂದಿನಿಂದ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ ಮತ್ತು ಈ ಪ್ರಕ್ರಿಯೆಗೆ ಮಂಡಳಿಯು ಉಪ ಮುಖ್ಯ ಮೌಲ್ಯಮಾಪಕರು ಮತ್ತು ಸಹ ಮೌಲ್ಯಮಾಪಕರನ್ನು ನೇಮಿಸಿದೆ. ಪರೀಕ್ಷೆಯ ಹೆಸರು- ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಪರೀಕ್ಷೆ 2023 ಫಲಿತಾಂಶದ ಹೆಸರು- ಕರ್ನಾಟಕ SSLC ಫಲಿತಾಂಶ 2023 ಪರೀಕ್ಷೆ ನಡೆಸುವ ಸಂಸ್ಥೆ- ಕರ್ನಾಟಕ ಶಾಲಾ ಪರೀಕ್ಷೆ ಮತ್ತು…
ಟಿಕೆಟ್ ಟೆನ್ಷನ್ ನಿಂದ ಹೊರ ಬರ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಪ್ರವಾಸಕ್ಕೆ ತಯಾರಿ ನಡೆಸಿದ್ದಾರೆ. ರಾಹುಲ್, ಪ್ರಿಯಾಂಕ ರಾಜ್ಯ ಭೇಟಿಗೂ ಮುಹೂರ್ತ ಫಿಕ್ಸ್ ಆಗಿದ್ದು, ಚುನಾವಣಾ ಕಣದಲ್ಲಿ ಧೂಳೆಬ್ಬಿಸಲು ರೆಡಿಯಾಗಿದ್ದಾರೆ. ಈ ಕಡೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ವಕ್ಷೇತ್ರ ಉಳಿಸಿಕೊಳ್ಳುವ ಟೆನ್ಷನ್ ನಡುವೆಯೇ, ಪ್ರವಾಸಕ್ಕೆ ರೆಡಿಯಾಗ್ತಿದ್ದಾರೆ. ಡಿ.ಕೆ ಶಿವಕುಮಾರ್ ಇಂದಿನಿಂದ ಮೂರು ದಿನ ಟೆಂಪಲ್ ರನ್ ಜೊತೆ ಜೊತೆಗೇ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದಾರೆ.. 224 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್ ಆಗಿದ್ರೂ, ಟಿಕೆಟ್ ಜಟಾಪಟಿಗೆ ಬ್ರೇಕ್ ಬಿದ್ದಿಲ್ಲ. ಖರ್ಗೆ, ಕೆಚ್ ಮುನಿಯಪ್ಪ ಸಪೋರ್ಟ್ ನಿಂದ ಟಿಕೆಟ್ ಹಂಚಿಕೆಯಲ್ಲಿ ಡಿ.ಕೆ ಶಿವಕುಮಾರ್ ಮೇಲುಗೈ ಸಾಧಿಸಿದ್ದಾರೆ. ಬೆಂಬಲಿಗರಿಗೆ ಟಿಕೆಟ್ ಕೊಡಿಸಲುವಲ್ಲಿ ಸಿದ್ದರಾಮಯ್ಯಗೆ ಹಿನ್ನಡೆ ಆಗಿದೆ. ಟಗರು ಪವರ್ ನ್ನ ಚುನಾವಣಾ ಅಖಾಡದಲ್ಲಿ ತೋರಿಸಬೇಕು ಅಂತಾ ಸಿದ್ದು ಬೆಂಬಲಿಗರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ತಮ್ಮವರನ್ನ ಗೆಲ್ಲಿಸಿಕೊಳ್ಳುವ ಟಾಸ್ಕ್ ಸಿದ್ದರಾಮಯ್ಯ ಹೆಗಲೇರಿಸಿಕೊಂಡಿದ್ದು, ಇಡೀ ಟೀಂ ಅಖಾಡಕ್ಕಿಳಿದಿದೆ. ಸಿದ್ದರಾಮಯ್ಯ ಪ್ರತ್ಯೇಕ ಯಾತ್ರೆ ನಡೆಸಲು ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ್ದಾರೆ. ರ್ಯಾಲಿಗಳಲ್ಲಿ ಜನ…
ಲಂಡನ್: ಬ್ರಿಟನ್ ಉಪ ಪ್ರಧಾನಿ ಡೊಮಿನಿಕ್ ರಾಬ್ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ AFP ತಿಳಿಸಿದೆ. ಔಪಚಾರಿಕ ದೂರುಗಳ ತನಿಖೆಯ ನಂತರ ಬೆದರಿಸುವ ಆರೋಪಗಳ ಬಂದ ಹಿನ್ನೆಲೆಯಲ್ಲಿ ಬ್ರಿಟನ್ ಉಪ ಪ್ರಧಾನ ಮಂತ್ರಿ ಡೊಮಿನಿಕ್ ರಾಬ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.