ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಹೇಳುತ್ತಾ ಬರುತ್ತಿದ್ದೇವೆ. ಕರ್ನಾಟಕ ಕರೆಪ್ಷನ್ ಕ್ಯಾಪಿಟಲ್ ಎಂಬ ಹೆಸರನ್ನು ಬಿಜೆಪಿ ಸರ್ಕಾರ ಕೊಟ್ಟಿದೆ. ಮುಖ್ಯಮಂತ್ರಿ ಸಾಕ್ಷಿ ಕೊಡಿ ಅಂತ ಕೇಳುತ್ತಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಶೇಕಡಾ 40ರಷ್ಟು ಕಮಿಷನ್ ಇದೆ ಎಂದು ಎರಡು ಲಕ್ಷ ಗುತ್ತಿಗೆದಾರರು ಜೊತೆಗೂಡಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಪ್ರಧಾನಮಂತ್ರಿಗೆ ಪತ್ರವನ್ನು ಬರೆದರು. ಶಾಸಕರುಗಳು, ಅಧಿಕಾರಿಗಳು, ಸಾರ್ವಜನಿಕರು ತಮ್ಮ ನೋವನ್ನು ವ್ಯಕ್ತಪಡಿಸಿದರು. ಈಗ ಒಬ್ಬ ಬಿಜೆಪಿ ಶಾಸಕರ ಮನೆ ಮೇಲೆ ದಾಳಿ ಮಾಡಲಾಗಿದೆ. ಸುಮಾರು ಎಂಟು ಕೋಟಿ ಸಿಕ್ಕಿದೆ ಅಂತ ಲೋಕಾಯುಕ್ತರು ತಿಳಿಸಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಲೋಕಾಯುಕ್ತರಿಗೆ ಕೈಜೋಡಿಸಿ ಅಭಿನಂದಿಸುತ್ತೇನೆ. ರಾಜ್ಯವನ್ನು ರಕ್ಷಿಸಲು ಲೋಕಾಯುಕ್ತರು ಸಹಕಾರವನ್ನು ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.
Author: Prajatv Kannada
ಬೆಂಗಳೂರು: ಶುಚಿತ್ವದ ಕೆಲಸ ಮಾಡುವ ಕಾರ್ಮಿಕರನ್ನು ಉದ್ಯೋಗಿಗಳೆಂದು ಪರಿಗಣಿಸಿ ಎಂದು ಬೆಂಗಳೂರಿನ ಹೈಕೋರ್ಟ್ ಅಭಿಪ್ರಾಯಪಟ್ಟದೆ. ಸರ್ಕಾರದ ಅಧೀನದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಶುಚಿತ್ವದ ಕೆಲಸ ಕೆಲ ಗಂಟೆಗಳ ಕಾಲ ಇರುತ್ತದೆಯಾದರೂ ದಿನ ನಿತ್ಯದ ಕೆಲಸವಾಗಿದ್ದು, ತಿಂಗಳಾಂತ್ಯದ ವರೆಗೂ ನಡೆಯುತ್ತಿರುತ್ತದೆ. ಜತೆಗೆ ದೀರ್ಘಕಾಲಿಕವಾಗಿದೆ. ಆದರೆ, ತಾತ್ಕಾಲಿಕವಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ಉದ್ಯೋಗದಾತ ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದ ಕೇವಲ ನೆಪ ಮಾತ್ರವಾಗಿದೆ. ಕಾರ್ಮಿಕರು ಸುಧೀರ್ಘ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಗುತ್ತಿಗೆ ಕಾರ್ಮಿಕರು ಎಂದು ತಿಳಿಸಿ ಕಾರ್ಮಿಕರನ್ನು ವಂಚಿಸುವ ತಂತ್ರವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಜತೆಗೆ, ಕಾರ್ಮಿಕರನ್ನು ನೌಕರರು ಎಂದು ಪರಿಗಣಿಸಿ ಮರು ನೇಮಕ ಮಾಡಿಕೊಳ್ಳಬೇಕು. ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಬೇಕು. ಯಾವುದೇ ಹುದ್ದೆ ಖಾಲಿ ಇಲ್ಲದಿದ್ದಲ್ಲಿ ಹುದ್ದೆಗಳು ಖಾಲಿಯಾದಲ್ಲಿ ಬಳಿಕ ಭರ್ತಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.
ಈ ಬಾರಿಯ ಆಸ್ಕರ್ ಪ್ರಶಸ್ತಿ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಗೆದ್ದೇ ಗೆಲ್ಲುತ್ತೇವೆ ಎನ್ನುವ ಧಾವಂತದಲ್ಲಿದೆ. ಈ ಪ್ರಶಸ್ತಿಯಲ್ಲಿ ಭಾಗಿಯಾಗಲು ಹಲವು ನಿಯಮಗಳಿದ್ದು ಆ ಎಲ್ಲ ನಿಯಮಗಳನ್ನು ಪೂರೈಸಿ, ಇದೀಗ ಅಂತಿಮ ಹಂತವನ್ನೂ ಅದು ತಲುಪಿದೆ. ಮಾರ್ಚ್ 12ಕ್ಕೆ ಪ್ರಶಸ್ತಿ ಘೋಷಣೆ ಮತ್ತು ಪ್ರದಾನ ಸಮಾರಂಭವೂ ನಡೆಯಲಿದ್ದು, ಈ ವೇದಿಕೆಯ ಮೇಲೆ ಆರ್.ಆರ್.ಆರ್ ಚಿತ್ರದ ನಾಯಕರಾದ ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ‘ನಾಟು ನಾಟು’ ಗೀತೆಗೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡು ಅಂತಿಮ ಸುತ್ತಿಗೆ ಆಯ್ಕೆಯೂ ಆಗಿದೆ. ಆದರೆ ಚಿತ್ರತಂಡದ ವಿರುದ್ಧ ತೆಲುಗಿನ ಹಿರಿಯ ನಿರ್ದೇಶಕ ತಮ್ಮಾರೆಡ್ಡಿ ಕಿಡಿಕಾರಿದ್ದಾರೆ. ಆಸ್ಕರ್ ಪ್ರಶಸ್ತಿಯನ್ನು ಪಡೆಯಲೆಂದು ಆರ್.ಆರ್.ಆರ್ ಚಿತ್ರದ ನಿರ್ದೇಶಕ ರಾಜಮೌಳಿ ಬರೋಬ್ಬರಿ 80 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೊತ್ತದಲ್ಲಿ ತಾವು ಹತ್ತು ಸಿನಿಮಾಗಳನ್ನು ತಯಾರಿಸುತ್ತಿದ್ದೆ ಎಂದಿದ್ದಾರೆ. ‘ನಾನು ಆರೋಪ ಮಾಡುತ್ತಿಲ್ಲ. ನನಗೆ ಗೊತ್ತಿರುವವರೇ ಹೇಳಿರುವಂತೆ ಆಸ್ಕರ್ ಪ್ರಶಸ್ತಿಗಾಗಿ ರಾಜಮೌಳಿ ಮತ್ತು…
ಕಿರುತೆರೆ ನಟಿ , ಮಾಜಿ ಬಿಗ್ ಬಾಸ್ ಸ್ಪರ್ಧಿ ಸಾನ್ಯ ಅಯ್ಯರ್ ರೂಪೇಶ್ ಶೆಟ್ಟಿ ಜೊತೆಗಿನ ಸ್ನೇಹದ ಜೊತೆಗೆ ಶೋನಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಅನೇಕ ವಿಚಾರಗಳಿಗೆ ನಟಿ ಸೌಂಡ್ ಮಾಡ್ತಿದ್ದಾರೆ. ವಿವಾದಗಳನ್ನು ಮೈಮೇಲೆ ಎಳ್ಕೊಳ್ಳೋದ್ರಲ್ಲಿ ಸಾನ್ಯಾ ಎತ್ತಿದ ಕೈ. ಇದೀಗ ಅಮ್ಮನ ಡ್ರೆಸ್ ಕಾರಣಕ್ಕೆ ಸಾನ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಸಾನ್ಯ ತಾಯಿ ನಟಿ ದೀಪಾ ಅಯ್ಯರ್ ಧರಿಸಿದ ಡ್ರೆಸ್ ಬಗ್ಗೆ ನೆಗೆಟಿವ್ ಕಾಮೆಂಟ್ ಬಂದ ಬೆನ್ನಲ್ಲೇ ಸಾನ್ಯ ಖಡಕ್ ಆಗಿ ನೆಟ್ಟಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚಿಗೆ ದೀಪಾ ಅಯ್ಯರ್ ಹುಟ್ಟುಹಬ್ಬವಿತ್ತು. ಹಾಗಾಗಿ ಸಾನ್ಯ ಅಮ್ಮನಿಗೆ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ. ದೊಡ್ಡ ಹೊಟೇಲಿಗೆ ಕರೆದೊಯ್ದು ಕೇಕ್ ಆರ್ಡರ್ ಮಾಡಿ ಅಮ್ಮನಿಂದ ಕಟ್ ಮಾಡಿಸಿದ್ದಾರೆ. ಅಮ್ಮ ಕೇಕ್ ಕಟ್ ಮಾಡ್ತಿರೋವಾಗ ಬರ್ತ್‌ಡೇ ವಿಶ್ ಮಾಡಿದ್ದಾರೆ. ಈ ಖುಷಿಯ ಸನ್ನಿವೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಶೇರ್ ಆಗ್ತಿದಂತೆ ದೀಪಾ ಅವರ ಡ್ರೆಸ್‌ಗೆ ನೆಗೆಟಿವ್ ಕಾಮೆಂಟ್ ಹರಿದು…
ಟಾಲಿವುಡ್ ಬ್ಯೂಟಿ ನಟಿ ಸಮಂತಾ ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳುತ್ತಿದ್ದರು. ಚಿಕಿತ್ಸೆ ಪಡೆದು ಮತ್ತೆ ಶೂಟಿಂಗ್ ಗೆ ಸಮಂತಾ ಮರಳಿದ್ದಾರೆ. ಖುಷಿ ಚಿತ್ರತಂಡವನ್ನು ಸೇರಿರುವ ಸಮಂತಾಗೆ ಚಿತ್ರತಂಡ ಅದ್ದೂರಿ ಸ್ವಾಗತ ಕೋರಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ `ಖುಷಿ’ ಸಿನಿಮಾ ತಂಡದಲ್ಲಿ ಸಂಭ್ರಮ ಮನೆ ಮಾಡಿದೆ. ಮಾ.8ರಿಂದ ಖುಷಿ ಚಿತ್ರದ ಶೂಟಿಂಗ್ ಶೆಡ್ಯೂಲ್ ಮತ್ತೆ ಶುರುವಾಗಿದೆ. ಹಲವು ದಿನದ ನಂತರ ಸಮಂತಾ ತನ್ನ ತಂಡವನ್ನು ಸೇರಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯನ್ನು ಚಿತ್ರತಂಡ ಟೀಂ ಆಚರಿಸಿದೆ. ಸಮಂತಾ ಚಿತ್ರರಂಗಕ್ಕೆ ಬಂದು 13 ವರ್ಷಗಳಾಗಿದೆ. ಹಾಗಾಗಿ ಮಹಿಳಾ ದಿನಾಚರಣೆಯಂದು (ಮಾ.8) ಸಮಂತಾಗೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಅದ್ದೂರಿಯಾಗಿ ಸ್ವಾಗತಿಸಿ, ನಟಿಯ ಕೈಯಲ್ಲಿ ಕೇಕ್ ಕಟ್ ಮಾಡಿಸಲಾಗಿದೆ. ಸಮಂತಾರನ್ನ ಖುಷಿಯಿಂದ ಸ್ವಾಗತಿಸಿದ್ದಾರೆ. ಈ ವೇಳೆ ವಿಜಯ್ ದೇವರಕೊಂಡ, ನಿರ್ದೇಶಕರು ಸೇರಿದಂತೆ ಹಲವರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ರಾಜ್ಯದಲ್ಲಿ ರಾಜಕೀಯ ಕಾವು ಜೋರಾಗಿದೆ. ಸದ್ಯದಲ್ಲಿಯೇ ವಿಧಾನಸಭಾ ಚುನಾವಣೆ ಹತ್ತಿರವಾಗಿದ್ದು, ತೆರೆಮರೆಯಲ್ಲಿ ತಯಾರಿ ಜೋರಾಗಿ ನಡೆಯುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಜಾಗೃತಿಗಾಗಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಚುನಾವಣಾ ನೇಮಕ ಮಾಡಲಾಗಿದೆ. ಅದರಂತೆಯೇ ರಾಯಚೂರು ಜಿಲ್ಲೆಗೆ ಸ್ಟಾರ್ ನಿರ್ದೇಶಕ ರಾಜಮೌಳಿ ಅವರನ್ನು ಚುನಾವಣಾ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ರಾಜಮೌಳಿ ಅವರನ್ನು ಅವರ ಹುಟ್ಟೂರಾದ ರಾಯಚೂರಿಗೆ ಚುನಾವಣಾ ರಾಯಭಾರಿಯನ್ನಾಗಿ ಮಾಡಿರುವುದು ವಿಶೇಷ. ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಸೇರಿ ಹತ್ತು ಜಿಲ್ಲೆಗಳಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಚುನಾವಣಾ ರಾಯಭಾರಿಗಳಾಗಿ ನೇಮಕ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಪೈಕಿ ರಾಜಮೌಳಿ ಹೆಸರು ಸಾಕಷ್ಟು ಗಮನ ಸೆಳೆದಿದೆ. ಎಸ್.ಎಸ್ ರಾಜಮೌಳಿ ಅವರನ್ನ ನೇಮಕ ಮಾಡಿರುವ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ. ರಾಯಚೂರು ಜಿಲ್ಲೆ ಕರ್ನಾಟಕ ಹಾಗೂ ಆಂಧ್ರ ಗಡಿಯಲ್ಲಿದೆ. ಇದರ ಜೊತೆಗೆ ರಾಜಮೌಳಿಗೆ ರಾಯಚೂರು ಜಿಲ್ಲೆಯ ಕನೆಕ್ಷನ್ ಕೂಡ ಇದೆ. ರಾಜಮೌಳಿ ತಂದೆ ವಿಜಯೇಂದ್ರ…
ರಿಯಲ್ ಸ್ಟಾರ್ ಉಪೇಂದ್ರ ನಟನೆಯ, ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದ್ದು, ಉಪೇಂದ್ರ, ಸುದೀಪ್, ನಾಯಕಿ ಶ್ರೆಯಾ ಶಿರಿನ್ ಇನ್ನಿತರರು ಮುಂಬೈನಲ್ಲಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾದ ಟೀಸರ್, ಟ್ರೈಲರ್ ನೋಡಿದ ಬಹುತೇಕರು ಇದು ಮತ್ತೊಂದು ಕೆಜಿಎಫ್ ಎಂದಿದ್ದರು, ಆದರೆ ಇದನ್ನು ಅಲ್ಲಗಳೆದಿರುವ ಉಪೇಂದ್ರ, ‘ಕೆಜಿಎಫ್’ ಜೊತೆ ಕಬ್ಜ ಸಿನಿಮಾವನ್ನು ಹೋಲಿಸಬೇಡಿ ಎಂದಿದ್ದಾರೆ. ಮುಂಬೈನಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಉಪೇಂದ್ರ, ”ಕೆಜಿಎಫ್’ ಸಿನಿಮಾದೊಂದಿಗೆ ‘ಕಬ್ಜ’ ಸಿನಿಮಾವನ್ನು ಹೋಲಿಸಬೇಡಿ. ಎರಡೂ ಬೇರೆ-ಬೇರೆ ಸಿನಿಮಾಗಳು. ಟೀಸರ್ ನೋಡಿದ ಹಲವರು ‘ಕೆಜಿಎಫ್’ ಸಿನಿಮಾದಂತಿದೆ ಎಂದಿದ್ದರು ಆದರೆ ಟ್ರೈಲರ್ ನೋಡಿದ ಮೇಲೆ ಗೊತ್ತಾಗಿದೆ ಅದೇ ಬೇರೆ ಕತೆ ಇದೇ ಬೇರೆ ಕತೆ ಎಂಬುದು. ಸಿನಿಮಾದ ಲುಕ್, ಫೀಲ್ ಒಂದೇ ಥರ ಇದೆಯಾದರೂ ಎರಡೂ ಸಂಪೂರ್ಣ ಬೇರೆಯದ್ದೇ ಕತೆಗಳು” ಎಂದಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಆದಾಗಲಂತೂ ‘ಕೆಜಿಎಫ್’ ಕತೆಯನ್ನೇ ಕಬ್ಜ ಮಾಡಿದ್ದಾರೆ ಎಂದು ಸಾಮಾಜಿಕ…
“ಬಾಲಿವುಡ್ ನನ್ನ ಕರ್ಮಭೂಮಿ, ಮುಂಬೈ ನನ್ನ ಜನ್ಮಭೂಮಿ. ಅಂತೆಯೇ ದುಬೈನಲ್ಲಿಯೂ ನಾನು ಏನಾದರೊಂದು ಮಾಡಬೇಕು. ಬಾಲಿವುಡ್, ಹಾಲಿವುಡ್ ರೀತಿ ದುಬೈನಲ್ಲಿ ದಾಲಿವುಡ್ ಮಾಡಬೇಕು. ಭಾರತದಲ್ಲಿರುವ ಪತ್ರಕರ್ತರು, ಪಾಪರಾಜಿಗಳ ರೀತಿ ದುಬೈನಲ್ಲಿ ಕೂಡ ಪತ್ರಕರ್ತರು, ಪಾಪರಾಜಿ ಇರಬೇಕು, ಅದಕ್ಕೆ ಏನು ಬೇಕೋ ಅದನ್ನು ನಾನು ನೀಡುತ್ತೇನೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ. “ನಾನು ತುಂಬ ಸ್ಟ್ರಾಂಗ್. ನನ್ನನ್ನು ನಾನು ಮುಗಿಸಿಕೊಂಡಿದ್ದೆ, ಆದರೆ ಎಲ್ಲ ಅಭಿಮಾನಿಗಳಿಂದ ಗಟ್ಟಿಯಾಗಿದ್ದೇನೆ. ಮೈಸೂರಿನ ಜೈಲಿನಲ್ಲಿದ್ದುಕೊಂಡು ಆದಿಲ್ ನನಗೆ ಮೆಸೇಜ್ ಮಾಡಿ ಒಂದು ಅವಕಾಶ ಕೊಡು ಅಂತ ಕೇಳುತ್ತಿದ್ದೇನೆ. ನಾನು ಅವನಿಗೆ ಕಾಲಿಗೆ ಬಿದ್ದು ಮನೆಗೆ ಬಾ, ಬೇರೆದೆಲ್ಲ ಬಿಡು ಅಂತ ಹೇಳಿದ್ದರೂ ಕೇಳಿಲ್ಲ. ಆದಿಲ್ ಖುರಾನ್‌ನ ಮೇಲೆ ಆಣೆ ಮಾಡಿ ಸರಿಯಾಗಿ ಇರ್ತೀನಿ ಅಂತ ಹೇಳಬೇಕು , ಕೋರ್ಟ್‌ನಲ್ಲಿ ನಾನು ರಾಖಿಯನ್ನು ಚೆನ್ನಾಗಿ ನೋಡಿಕೊಳ್ತೀನಿ, ಮದುವೆಯನ್ನು ನಿಭಾಯಿಸಿಕೊಂಡು ಹೋಗುವೆ ಅಂತ ಬರೆದುಕೊಡಬೇಕು, ಆದರೆ ಅವನು ನನ್ನ ತಾಯಿಯನ್ನು ವಾಪಾಸ್ ತರುತ್ತಾನಾ? ಸಾಧ್ಯವೇ ಇಲ್ಲ. ಹಾಗಾಗಿ ನಾನು ಆದಿಲ್‌ನನ್ನು ಕ್ಷಮಿಸೋದಿಲ್ಲ”…
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿ ಆಲಿಯಾ ಜಗಳ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದವರು, ಇದೀಗ ಆ ಜಗಳದಲ್ಲಿ ತಮ್ಮ ಅಪ್ರಾಪ್ತ ಮಗಳನ್ನೂ ಎಳೆದು ತಂದಿದ್ದಾರೆ. ನವಾಜುದ್ದೀನ್ ಪತ್ನಿ ಆಲಿಯಾ ಬರೆದ ಬಹಿರಂಗ ಪತ್ರದಲ್ಲಿ ಸಿದ್ದಿಕಿ ಮ್ಯಾನೇಜರ್ ತಮ್ಮ ಪುಟ್ಟ ಮಗಳ ಜೊತೆ ಕೆಟ್ಟದಾಗಿ ನಡೆದುಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿ ಆಲಿಯಾ ಸದ್ಯ ದೂರ ದೂರವಿದ್ದಾರೆ. ಡಿವೋರ್ಸ್ ಕೂಡ ಆಗಿದೆ ಎಂದು ಹೇಳಲಾಗುತ್ತಿದೆ. ಮಕ್ಕಳು ಯಾರ ಜೊತೆ ಇರಬೇಕು ಎನ್ನುವುದರ ಬಗ್ಗೆ ಕೋರ್ಟಿನಲ್ಲಿ ನ್ಯಾಯ ತೀರ್ಮಾನ ಆಗಬೇಕಿದೆಯಂತೆ. ಹಾಗಾಗಿ ಮಕ್ಕಳು ತನ್ನೊಂದಿಗೆ ಇರಬೇಕು ಎನ್ನುವುದು ಆಲಿಯಾ ವಾದ. ಆದರೆ, ಅದಕ್ಕೆ ನವಾಜುದ್ದೀನ್ ಒಪ್ಪುತ್ತಿಲ್ಲ. ಈ ವಿಚಾರವಾಗಿ ಆಲಿಯಾ ಗಂಭೀರ ಆರೋಪ ಮಾಡಿದ್ದು, ನವಾಜುದ್ದೀನ್ ಅಪಾಯಕಾರಿ ತಂದೆ, ಬೇಜವಾಬ್ದಾರಿ ಮನುಷ್ಯ. ಅವರ ಮ್ಯಾನೇಜರ್ ಕೂಡ ಸರಿಯಿಲ್ಲ’ ಎಂದು ಆರೋಪ ಮಾಡಿದ್ದಾರೆ. ಪತ್ನಿಯ ಆರೋಪದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡ ನಟ ನವಾಜುದ್ದೀನ್ ಸಿದ್ದಿಕಿ,…
ವಿಕ್ರಾಂತ್ ರೋಣ ಸಿನಿಮಾದ ಬಳಿಕ ಸುದೀಪ್ ನಟನೆಯ ಹೊಸ ಸಿನಿಮಾದ ಕುರಿತು ಈವರೆಗೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ವಿಕ್ರಾಂತ್ ರೋಣ ಚಿತ್ರ ರಿಲೀಸ್ ಆಗಿ ಹಲವು ತಿಂಗಳು ಕಳೆದರೂ, ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಲೇ ಇದ್ದಾರೆ. ಈ ನಡುವೆ ಮೂರ್ನಾಲ್ಕು ನಿರ್ದೇಶಕರ ಹೆಸರೂ ಕೇಳಿ ಬಂದಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಸುದೀಪ್ ನಟನೆಯ ಹೊಸ ಸಿನಿಮಾದ ಘೋಷಣೆ ಏಪ್ರಿಲ್ ನಲ್ಲಿ ನಡೆಯಲಿದ್ದು, ಹಲವು ಭಾಷೆಗಳಲ್ಲಿ ಮೂಡಿ ಬರಲಿದೆ. ಕನ್ನಡದ ನಿರ್ದೇಶಕರಾದ ನಂದಕಿಶೋರ್, ಅನೂಪ್ ಭಂಡಾರಿ ಸೇರಿದಂತೆ ಕೆಲ ನಿರ್ದೇಶಕರು ಈಗಾಗಲೇ ಸುದೀಪ್ ಗಾಗಿ ಕಥೆ ಬರೆದುಕೊಂಡು ಕೂತಿದ್ದಾರೆ. ಜೊತೆಗೆ ಕಬಾಲಿ ಅಂತಹ ಭಾರೀ ಬಜೆಟ್ ಸಿನಿಮಾ ಮಾಡಿರುವ ಕಲೈಪುಲಿ ಎಸ್ ಥಾನು ಕೂಡ ಸುದೀಪ್ ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಈ ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವೇ ಏಪ್ರಿಲ್ ನಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ. ವಿಜಯ್ ನಿರ್ದೇಶನದಲ್ಲಿ ಮೂಡಿ…