Author: Prajatv Kannada

ಬೆಂಗಳೂರು: ಶೋಭಾ ಕರಂದ್ಲಾಜೆ ಅವರು ಯಾರ ಪ್ರಭಾವದಿಂದ ಮಂತ್ರಿಯಾಗಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಹೇಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಿನ್ನೆ ಕೆಪಿಸಿಸಿ ವತಿಯಿಂದ ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಶೋಭಾ ಕರಂದ್ಲಾಜೆ ಅವರು ಮಾಡಿರುವ ಗಂಭೀರವಾದ ಪ್ರಚೋದನಾಕಾರಿ ಹೇಳಿಕೆ ಬಗ್ಗೆ ದೂರು ದಾಖಲಿಸುತ್ತೇವೆ. ಇದೇ ಸಮಯದಲ್ಲಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಧರ್ಮ, ಜಾತಿ ಹೆಸರಲ್ಲಿ ಕಾಂಗ್ರೆಸ್ ನಾಯಕರನ್ನು ಕ್ರಿಮಿನಲ್ ಗಳು ಎಂಬ ದ್ವೇಷಪೂರಿತ ಸುಳ್ಳು ಆರೋಪ ಮಾಡಿದರೂ ಕೇಂದ್ರ ಚುನಾವಣಾ ಆಯೋಗ ಯಾಕೆ ಯಾವುದೇ ಪ್ರಕರಣ ದಾಖಲಿಸಿಲ್ಲ? ಬಿಜೆಪಿ ಟೂಲ್ ಕಿಟ್ ಭಾಗವಾಗಿ ಈ ಮೂವರು ನಾಯಕರು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಮಾತನಾಡುತ್ತಾರೆ ಎಂದರು. ಈ ರೀತಿಯ ಪ್ರಚೋದನಾಕಾರಿ ಭಾಷ್ಣ ಕಾನೂನಿನ ಪ್ರಕಾರ ಅಫರಾಧವಾಗಿದ್ದು, ಇದಕ್ಕೆ ತಕ್ಕ ಶಿಕ್ಷೆ ಆಗಬೇಕು.  ಶೋಭಾ ಕರಂದ್ಲಾಜೆ ಅವರು ಯಾರ ಪ್ರಭಾವದಿಂದ ಮಂತ್ರಿಯಾಗಿದ್ದಾರೆ, ಗುಂಪುಗಾರಿಕೆಯಲ್ಲಿ ಯಾರ ಪರವಾಗಿದ್ದಾರೆ ಎಂದು…

Read More

ಧಾರವಾಡ: ವಕೀಲರ ಸಂಘದಲ್ಲಿ, ಶ್ರೀ ವಿನಯ ಕುಲಕರ್ಣಿಯವರ ಪರವಾಗಿ ಅವರ ಧರ್ಮ ಪತ್ನಿ ಶ್ರೀಮತಿ ಶಿವಲೀಲಾ ಕುಲಕರ್ಣಿಯವರು ಮತಯಾಚಿಸಿದರು. ಈ ಸಂಧರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲರ ಸಂಘದ ಪ್ರಧಾನಕಾರ್ಯದರ್ಶಿ ಎನ್ ಆರ್ ಮಟ್ಟಿಯವರು ಮಾತನಾಡಿ ಈ ಹಿಂದೆ ನಮ್ಮ ಬೇಡಿಕೆ ಅನ್ವಯ ವಿನಯ ಕುಲಕರ್ಣಿಯವರು ವಿಶೇಷವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಅವರು ಸಹೃದಯರು ಅಭಿವೃಧ್ಧಿ ಹರಿಕಾಋಉ ಎಂದರು. ನಂತರ ಮಾತನಾಡಿದ ಶಿವಲೀಲಾ ಕುಲಕರ್ಣಿಯವರು,ತಮಗೆಲ್ಲರಿಗೂ ವಿನಯ ಕುಲಕರ್ಣಿಯವರು ತಮಗೆಲ್ಲಾ ಚಿರಪರಿಚಿತರು.ಕೋರ್ಟ ಆವರಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸಾಕಷ್ಟು  ಪ್ರಯತ್ನ ಮಾಡಿದ್ದರು.ಇವತ್ತು ಅವರು ಅನಿವಾರ್ಯ ಕಾರಣದಿಂದ ಜಿಲ್ಲೆಯ ಹೊರಗಿರಬಹುದು ಆದರೆ ಜನರ ಮನದಲ್ಲಿ ನೆಲೆಯೂರಿದ್ದಾರೆ.ಐ ಐ ಟಿ ಗಾಗಿ ಜಮೀನು ಕೊಡಿಸಲು,ರೈತರೊಂದಿಗೆ ನಿರಂತರವಾಗಿ ಮಾತನಾಡಿ ಶ್ರಮ ವಹಿಸಿ  ಐ ಐ ಟಿ ತರಲು ಮಂಚೂನಿಯಲ್ಲದ್ದರು.ಅದೇ ರೀತಿ ಧಾರವಾಡ ಹೈಕೋರ್ಟ ಹೋರಾಟದ ನೇತೃತ್ವ ವಹಿಸಿದ ಕೀರ್ತಿ ಅವರಿಗಿದೆ,ಹಾಗೂ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಿಂದ ಸಾವಿರಾರು ರೈತರಿಗೆ ಅನುಕೂಲವಾಗುವಂತೆ ಮಾಡಿ,ಧಾರವಾಡದ ಅಭಿವೃಧ್ಧಿಗೆ ಕಿರೀಟಪ್ರಾಯರಾಗಿದ್ದು,ಅವರ ಮೇಲೆ ತಮ್ಮೆಲ್ಲರ ಆಶೀರ್ವಾದ…

Read More

ಮಂಡ್ಯ :- ಜೆಡಿಎಸ್ ಯುವ ಘಟಕದ ಮಾಜಿ ಅಧ್ಯಕ್ಷ, ಉದ್ಯಮಿ ಸಿ.ಟಿ.ಶಂಕರ್ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು, ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಅಭ್ಯರ್ಥಿ ಕೆ.ಎಂ.ಉದಯ್ ಹರ್ಷ ವ್ಯಕ್ತಪಡಿಸಿದರು. ಮದ್ದೂರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಗುರುವಾರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಉದ್ಯಮಿ ಸಿ.ಟಿ.ಶಂಕರ್ ಅವರನ್ನು ಪಕ್ಷದ ಶಾಲು ಹೊದಿಸಿ ಅಭಿನಂದಿಸಿ ಮಾತನಾಡಿದರು. ಯುವ ಘಟಕದ ಅಧ್ಯಕ್ಷರಾಗಿದ್ದ ಶಂಕರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುವಕರನ್ನು ಅಧಿಕ ಸಂಖ್ಯೆಯಲ್ಲಿ ಸಂಘಟಿಸುವ ಮೂಲಕ ಶಾಸಕ ಡಿ.ಸಿ.ತಮ್ಮಣ್ಣರ ಅಭೂತಪೂರ್ವ ಗೆಲುವಿಗೆ ಸಾಕ್ಷಿಯಾಗಿದ್ದರು. ಆನಂತರ ಇವರಿಂದ ಪ್ರಯೋಜನ ಪಡೆದ ಶಾಸಕ ಡಿ.ಸಿ‌.ತಮ್ಮಣ್ಣ ಸೇರಿದಂತೆ ಪಕ್ಷದ ವರಿಷ್ಠರುಗಳು ಸಂಪೂರ್ಣವಾಗಿ ಕಡೆಗಣಿಸಿದ್ದರು. ಆನಂತರ ಚುನಾವಣಾ ಚಟುವಟಿಕೆಗಳಿಂದ ತಟಸ್ಥರಾಗಿದ್ದ ಶಂಕರ್ ನಾನು ಮದ್ದೂರು ಕ್ಷೇತ್ರದಲ್ಲಿ ಕೈಗೊಂಡಿದ್ದ ಸಮಾಜ ಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದರು‌. ಈಗ ನಾನು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಳಿಕ ಪಕ್ಷಕ್ಕೆ ಸೇರ್ಪಡೆಗೊಂಡು ನನ್ನ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಹೀಗಾಗಿ ನನಗೆ ಗೆಲುವಿನ ಹುಮ್ಮಸ್ಸು ಮತ್ತಷ್ಟು…

Read More

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆ ಯಾಗಿರುವ ಬೆನ್ನಲ್ಲೇ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಹಾಗೂ ಜಿಲ್ಲಾಡಳಿತದಿಂದ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗೂಂಡಾ ಕಾಯಿದೆ ಅಡಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಚೇತನ ಹಿರೇಕೆರೂರನ್ನು ಗೋಕುಲ ರೋಡ್ ಪೊಲೀಸರು ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿದ್ದಾರೆ. ಈಗಾಗಲೇ ಜಿಲ್ಲೆಯಿಂದ ಸುಮಾರು ಹತ್ತು ಜನರನ್ನು ಗಡಿಪಾರು ಮಾಡಿದ್ದು, ಚುನಾವಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ಹಿನ್ನೆಲೆಯಲ್ಲಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಈ ಹಿಂದೆ ಕೂಡ ಕೆಲವೊಂದು ಪ್ರಕರಣಗಳಲ್ಲಿ ಭಾಗಿಯಾಗಿರುವ ಚೇತನ ಹಿರೆಕೇರೂರು ಪಾಲಿಕೆಯ ಚುನಾಯಿತ ಪ್ರತಿನಿಧಿಯೂ ಆಗಿದ್ದಾನೆ. ಇನ್ನೂ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಸುವ ರಾಲಿಯಲ್ಲಿ ಭಾಗಿಯಾಗಿದ್ದ ಪಾಲಿಕೆ ಸದಸ್ಯನ ಬಂಧನವಾಗಿದ್ದು, ಗೂಂಡಾ ಕಾಯ್ದೆ ಅಡಿ ಕಾರ್ಪೋರೇಟರ್ ಬಂಧಿಸಿ ಬೆಳಗಾವಿ ಹಿಂಡಲಗಾ ಜೈಲ್ ಗೆ ಕಳಿಸಿದ್ದಾರೆ ಎನ್ನಲಾಗಿದೆ.

Read More

ಹುಬ್ಬಳ್ಳಿ: ಅಣಿಗೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಹಮ್ಮಿಕೊಂಡಿದ್ದ ಬಹಿರಂಗ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ್ದ ನಲವಡಿ ಗ್ರಾಮದ ಮುಖಂಡ ದೇವನಗೌಡ ಪಾಟೀಲ (52) ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ. ದಿ.ಎಸ್.ಎಮ್.ಪಾಟೀಲ ಸಭಾಭವನದ ಆವರಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಭೆಯನ್ನು ಆಯೋಜಿಸಿಲಾಗಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಸಂಸದ ರಣದೀಪ್‌ಸಿಂಗ್ ಸುರ್ಜೇವಾಲಾ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಉಪಸ್ಥಿತಿಯಲ್ಲಿ ಈ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ನಾಮಪತ್ರ ಸಲ್ಲಿಸಿದ ನಂತರ ಪಟ್ಟಣದಲ್ಲಿ ಇದೇ ಮೊದಲ ಬಹಿರಂಗ ಪ್ರಚಾರವನ್ನು ಹಮ್ಮಿಕೊಂಡಿರುವದು ವಿಶೇಷವಾಗಿತ್ತು. ದುರದೃಷ್ಟವಶಾತ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಸಭೆಯಲ್ಲಿ ಇಂತಹ ದುರ್ಘಟನೆ ಸಂಭವಿಸಿದೆ.

Read More

ಬೆಳಗಾವಿ: ಕರ್ನಾಟಕ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಅಕ್ರಮಗಳು ಕೂಡ ಹೆಚ್ಚಾಗಿದ್ದು, ಚುನಾವಣಾಧಿಕಾರಿಗಳು‌ ಭಾರೀ ಪ್ರಮಾಣದಲ್ಲಿ ಅಕ್ರಮ ಹಣ, ಮದ್ಯ ಜಪ್ತಿ ಮಾಡುತ್ತಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಖಾಸಗಿ ಬಸ್ ನಲ್ಲಿ ಸಾಗಿಸಲಾಗುತ್ತಿದ್ದ ಎರಡು ಕೋಟಿ ರೂಪಾಯಿ ನಗದು ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದರೆ, ಗೋಕಾಕ ತಾಲೂಕಿನಲ್ಲಿ 7.70 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಗೇಟ್‌ನಲ್ಲಿ ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ (KA 70- 1459) ಅನ್ನು ನಸುಕಿನ ಜಾವ 3.30ರ ವೇಳೆಗೆ ಚುನಾವಣಾ ಕಾರ್ಯನಿರತ ಎಫ್‌ಎಸ್ ಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿಯಾಗಿ ಪರಿಶೀಲನೆ‌ ನಡೆಸಿದಾಗ ಅಕ್ರಮ ಹಣ ಪತ್ತೆಯಾಗಿದೆ. ಸುದ್ದಿ ತಿಳಿದ ತಕ್ಷಣವೇ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ ಟೋಲ್‌ ಗೇಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಕೆಪಿ ಆ್ಯಕ್ಟ್ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ‌ ಮಾಹಿತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹಿರೇಬಾಗೇವಾಡಿ…

Read More

ವಿಜಯನಗರ: ರಾಜ್ಯದ ಟಾಪರ್ ಲೀಸ್ಟ್ ನಲ್ಲಿ ವಿಜಯನಗರ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಇಂದು ಪಿಯು ಕಾಲೇಜಿನ ಇಬ್ಬರು, ಹರಪನಹಳ್ಳಿಯ SUJM ಪಿಯು ಕಾಲೇಜಿನ ಒಬ್ಬ ವಿದ್ಯಾರ್ಥಿ ಟಾಪರ್ ಆಗಿದ್ದಾರೆ. ಕೊಟ್ಟೂರು ಇಂದು ಪಿಯು ಕಾಲೇಜ್ ನ ಕುಶಾನಾಯ್ಕ್ , ದಡ್ಡಿ ಕರಿಬಸಮ್ಮ, ಕಲಾ ವಿಭಾಗದಲ್ಲಿ 592 ಅಂಕ ಪಡೆದಿದ್ದು, ಹರಪನಹಳ್ಳಿ SUJM ಕಾಲೇಜಿನ ಮುತ್ತೂರು ಮಲ್ಲಮ್ಮ ಕೂಡಾ ಕಲಾ ವಿಭಾಗದಲ್ಲಿ 592 ಅಂಕ ಪಡೆದಿದ್ದಾಳೆ. ಪ್ರತಿ ಬಾರಿ ಕೊಟ್ಟೂರು ಇಂದು ಪಿಯು ಕಾಲೇಜ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತದೆ.

Read More

ಬೀದರ್ (ಏ.21): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಗೋವಿಂದತಾಂಡ, ಮೀನಕೇರಾ, ಕೋಳಾರ, ಬಸಲಾಪೂರ, ಪೊಲಕಪಳ್ಳಿ, ಬಗದಲ್, ಸಂಗೊಳಗಿ, ಗೋರನಳ್ಳಿ, ಯಾಕಾತಾಪೂರ ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಮುಖರು, ಯುವಕರು ನೂರಾರು ಸಂಖ್ಯೆಯಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಸುಮಾರು 09ಕ್ಕೂ ಹೆಚ್ಚು ಗ್ರಾಮಗಳ ವಿವಿಧ ಪಕ್ಷದ ಪ್ರಮುಖರು, ನೂರಾರು ಜನ ಯುವಕರು, ಮುಖಂಡರಿಗೆ ಶುಕ್ರವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ಪ್ರಮುಖರಾಗಿದ್ದ ಅನೇಕ ಜನ ಹಿರಿಯರು, ಯುವಕರು, ಮುಖಂಡರು, ಮಹಿಳೆಯರು ಪ್ರತಿನಿತ್ಯ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ‌. ಈ…

Read More

ಮೈಸೂರು: ಬಿಜೆಪಿಯಲ್ಲಿ ಅನೇಕರು ನಾಯಕರಿದ್ದಾರೆ. ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santosh) ಮಾರ್ಮಿಕವಾಗಿ ಹೇಳಿದರು. ಮೈಸೂರಿನಲ್ಲಿ (Mysuru) ಚುನಾವಣಾ ಅಖಾಡ ರಂಗೇರಿದೆ. ಮೈಸೂರು ಚುನಾವಣಾ ಅಖಾಡಕ್ಕೆ ಬಿ.ಎಲ್ ಸಂತೋಷ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ತಮ್ಮ ಕುರಿತು ಎದ್ದಿರುವ ಸುದ್ದಿಗಳಿಗೆ ಮಾಧ್ಯಮಗಳಿಗೆ ಸ್ಪಷ್ಟೀಕರಣ ಕೊಡಲು ನಿರಾಕರಿಸಿ, ಮಾರ್ಮಿಕವಾಗಿ ಒಂದು ಮಾತು ಹೇಳಿ ಸುಮ್ಮನಾದರು. ಮಾಧ್ಯಮದವರು ನನ್ನನ್ನು 100 ಬಾರಿ ಮಾತಾಡಿಸಲು ಯತ್ನಿಸಿದ್ದಾರೆ. ನಾನು ಮಾತಾಡಿಲ್ಲ. ನಮ್ಮಲ್ಲಿ ಮಾತಾಡಲು ಪ್ರತಾಪ್ ಸಿಂಹ ಥರದವರು ಇದ್ದಾರೆ ಅವರೆ ಮಾತಾಡಲಿ. ನಾನು ಮಾತಾಡಿ ಯಾರಿಗೆ ಯಾಕೆ ಪ್ರತಿಸ್ಪರ್ಧಿಯಾಗಲಿ ಎಂದು ವ್ಯಂಗ್ಯವಾಡಿದರು. ಈ ಹಿಂದೆ ಜಗದೀಶ್ ಶೆಟ್ಟರ್ ಮಾತನಾಡಿ, ತಮಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪಲು ಬಿ.ಎಲ್ ಸಂತೋಷ್ ಕಾರಣ ಎಂದು ನೇರ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೇ ಈವರೆಗೂ ಅನೇಕ ನಾಯಕರಿಗೆ ಬಿ.ಎಲ್ ಸಂತೋಷ್ ಬಿಜೆಪಿಯಲ್ಲಿ ಟಿಕೆಟ್ ತಪ್ಪಿಸಿ, ತಮಗೆ ಬೇಕಾದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ…

Read More

ಚಾಮರಾಜನಗರ: ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣವಾಗಿದ್ದರಿಂದ ಮನನೊಂದು ವಿದ್ಯಾರ್ಥಿನಿಯೋರ್ವಳು ನಗರದ ಜೆಎಸ್‌ಎಸ್ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನ ಮೂಡಗೂರು ಗ್ರಾಮದ ಮಹೇಶ್ ಎಂಬುವವರ ಪುತ್ರಿ ವಿಜಯಲಕ್ಷ್ಮಿ ಮೃತ ವಿದ್ಯಾರ್ಥಿನಿ. ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಹಾಸ್ಟೆಲ್‌ನಲ್ಲಿ ಶುಕ್ರವಾರ ಘಟನೆ ನಡೆದಿದೆ. ಪಿಸಿಎಂಸಿಎಸ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿನಿಯಾಗಿದ್ದ ವಿಜಯಲಕ್ಷ್ಮಿ ಪರೀಕ್ಷೆ ಮುಗಿದ ನಂತರ ಸಿಇಟಿ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಹಾಸ್ಟೆಲ್‌ನಲ್ಲಿದ್ದಳು  ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಗ್ಗೆ ಫಲಿತಾಂಶ ನೋಡಿದ್ದಾಳೆ. ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವುದು ತಿಳಿಯುತ್ತಿದ್ದಂತೆಯೇ ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೊತ್ತಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಸಾಗಿಸಿ ಮರಣೋ ತ್ತರ ಪರೀಕ್ಷೆ ಬಳಿಕ ವಾರಸು ದಾರರಿಗೆ ಒಪ್ಪಿಸಿದರು. ಈ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More