ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಅಕ್ರಮ ನಡೆದಿಲ್ಲ, ಹತ್ತು ಆಡಿಯೋ ಬಿಡುಗಡೆ ಮಾಡಿದರೂ ಹೆದರಲ್ಲ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇವತ್ತು ನನ್ನ ಮೇಲೆ, ಮುಖ್ಯಮಂತ್ರಿಯವರ ಮೇಲೆ ಹಾಗೂ ನಮ್ಮ ರಾಷ್ಟ್ರೀಯ ಮುಖಂಡರ ಮೇಲೆ ಆರೋಪ ಮಾಡಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಇವತ್ತು ಬಹಳ ಶೋಚನೀಯ ಸ್ಥಿತಿಗೆ ಬಂದು ತಲುಪಿದಂತಿದೆ ಎಂದು ಟೀಕಿಸಿದರು. ಕೇನ್ ರಿಸೋರ್ಸ್ ಕಂಪನಿಗೆ ಟೆಂಡರ್ ನೀಡಲು ನಮ್ಮ ಇಲಾಖೆಗೆ ಸಿಎಂ ಆಗಲೀ, ಅವರ ಮನೆಯವರಾಗಲೀ ಅಥವಾ ಇನ್ಯಾರೂ ಕೂಡಾ ನಮಗೆ ಒತ್ತಡ ಹಾಕಿಲ್ಲ. ನಿಯಮದ ಪ್ರಕಾರವೇ ಟೆಂಡರ್ ನೀಡಿದ್ದೇವೆ. ಚುನಾವಣೆ ಸಮಯದಲ್ಲಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ನೀಡಿ, ಇಂತಹ ಹತ್ತು ಆಡಿಯೋ ಬಿಡುಗಡೆ ಮಾಡಿದರೂ ನಾನು ಹೆದರೋದಿಲ್ಲ. ಯಾರೋ ನನ್ನ ಬಳಿ ಬರೋದಕ್ಕೆ ಪ್ರಯತ್ನ ಮಾಡಿದ್ದರು. ಆದರೆ ನಾನು ಅದಕ್ಕೆ ಸೊಪ್ಪು ಹಾಕಿಲ್ಲ. ಹೀಗಾಗಿ ಈಗ ಸುಳ್ಳು ಆರೋಪ ಮಾಡಿದ್ದಾರೆ ಎಂದರು.…
Author: Prajatv Kannada
ಬೆಂಗಳೂರು: ಬೆಸ್ಕಾಂ ಅಧಿಕಾರಿಯೊಬ್ಬರು ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮಂಜೂರಾತಿ ನೀಡಲು 28 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಭರತ್ ಚೌಹಾಣ್ ಬಂಧಿತ ಬೆಸ್ಕಾಂ ಎಇಇ ಎಂದು ಗುರುತಿಸಲಾಗಿದೆ. ಜಿಗಣಿ ಸಮೀಪದ ನಂಜಾಪುರ ನಿವಾಸಿ ಶಶಿಶೇಖರ್ ಎಂಬುವವರು ಕಟ್ಟಡೊಂದಕ್ಕೆ ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಎಇಇ ಅವರನ್ನು ಭೇಟಿಮಾಡಿದ್ದ ಅರ್ಜಿದಾರರು, ಮುಂದಿನ ಪ್ರಕ್ರಿಯೆ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಮಂಜೂರಾತಿ ನೀಡಲು ₹ 28,000 ಲಂಚ ಕೊಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಕಚೇರಿಗೆ ಬಂದು ಲಂಚದ ಹಣ ತಲುಪಿಸುವಂತೆ ಎಇಇ ಸೂಚಿಸಿದ್ದರು. ಅದರಂತೆ ಶಶಿಶೇಖರ್ ಬೆಸ್ಕಾಂ ಜಿಗಣಿ ಉಪ ವಿಭಾಗದ ಕಚೇರಿಗೆ ಹೋಗಿ ಹಣ ತಲುಪಿಸಿದರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಭರತ್ ಚೌಹಾಣ್ ಅವರನ್ನು ಬಂಧಿಸಿದ್ದಾರೆ.
ಬೆಂಗಳೂರು: ಇಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಮಾಡಾಳು ಅವರು ನಿನ್ನೆ ನಿರೀಕ್ಷಣಾ ಜಾಮೀನು ಸಿಕ್ಕಿದ ಅರ್ಧಗಂಟೆಯಲ್ಲಿ ಚನ್ನಗಿರಿಯಲ್ಲಿ ಪ್ರತ್ತಕ್ಷರಾಗಿದ್ದರು. ಜಾಮೀನು ನೀಡುವ ಮುನ್ನ, ಲೋಕಾಯುಕ್ತ ಕಚೇರಿಗೆ ಹಾಜರಾಗಿ ತನಿಖೆಗೆ ಸಹಕಾರ ನೀಡಬೇಕೆಂದು ಕೋರ್ಟ್ ಆದೇಶಿಸಿತ್ತು. ಹೀಗಾಗಿ ಅವರು ಇಂದು ಲೋಕಾಯುಕ್ತ ಕಚೇರಿಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಬೇಕಿದೆ. ನೀರೀಕ್ಷಣಾ ಜಾಮೀನು ಸಿಕ್ಕಿದ ಬಳಿಕ ಶಾಸಕರಿಗೆ ಲೋಕಾಯುಕ್ತ ಅಧಿಕಾರಿಗಳು ಮತ್ತೊಂದು ನೊಟೀಸ್ ನೀಡಿದ್ದಾರೆ. ಈಗಾಗಲೇ ಮನೆಯಲ್ಲಿ ಕೋಟಿ ಕೋಟಿ ಹಣ ದೊರೆತ ಹಿನ್ನೆಲೆಯಲ್ಲಿ ಮಾಡಾಳು ವಿಚಾರಣೆಗೆ ಅಧಿಕಾರಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆ. ಪುತ್ರ ಪ್ರಶಾಂತ್ ಮಾಡಾಳು ಹೇಳಿಕೆ ಹಾಗು ಉಳಿದ ಆರೋಪಿಗಳ ಹೇಳಿಕೆಯನ್ವಯ ಮಾಡಾಳು ವಿರೂಪಾಕ್ಷರ ವಿಚಾರಣೆ ನಡೆಯಲಿದೆ.
ಬೆಂಗಳೂರು: ವಿಧಾನಸೌಧ (Vidhanasoudha) ದಲ್ಲಿ ನಡೆದ ಬ್ಲಾಕ್ ಅಂಡ್ ವೈಟ್ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್ ಆಗಿದೆ. ಹೌದು. ಖಾಕಿ ಕಣ್ಗಾವಲಿನ ನಡುವೆಯೂ ಪೊಲೀಸ್ ಕಾನ್ಸ್‌ಟೇಬಲ್ ಮದ್ಯದ ಬಾಟ್ಲಿಯೊಂದಿಗೆ ವಿಧಾನಸೌಧದ ಒಳಗೆ ಹೋಗಿದ್ದಾನೆ. ಶಕ್ತಿಸೌಧದಲ್ಲಿದ್ದ ಪೊಲೀಸ್ ಅಧಿಕಾರಿಗೆ ಕೊಡಲು ಬ್ಲಾಕ್ ಅಂಡ್ ವೈಟ್ ದುಬಾರಿ ಬೆಲೆಯ ಎಣ್ಣೆ ತೆಗೆದುಕೊಂಡು ಹೋಳಿ ಹಬ್ಬದ ಪ್ರಯುಕ್ತ ಗಿಫ್ಟ್ ಮಾಡಲು ಹೋಗಿದ್ದಾನೆ. ಪೊಲೀಸ್ ಅಧಿಕಾರಿಗೆ ಅದೇನ್ ಅನ್ನಿಸಿತೋ ತನ್ನ ಶಿಷ್ಯನ ಬಳಿ ಎಣ್ಣೆ ಬಾಟ್ಲಿ ತೆಗೆದುಕೊಳ್ಳದೇ ವಾಪಸ್ ಕಳಿಸಿಕೊಟ್ಟಿದ್ದಾರೆ. ಬಾಸ್ ಎಣ್ಣೆ ಬಾಟ್ಲಿ ನಿರಾಕರಿಸಿದ್ದರಿಂದ ಬಾಟ್ಲಿಯೊಂದಿಗೆ ವಿಧಾನಸೌಧ ವೆಸ್ಟ್ ಗೇಟ್‍ನಿಂದ ಹೊರಗಡೆ ಬರೋದಕ್ಕೆ ಕಾನ್ಸ್‌ಟೇಬಲ್ ಮುಂದಾಗಿದ್ರು. ಈ ವೇಳೆ ದುರಾದೃಷ್ಟವಶಾತ್ ಕೈ ಜಾರಿ ಎಣ್ಣೆ ಬಾಟ್ಲಿ ಕೆಳಗಡೆ ಬಿದ್ದು ಒಡೆದು ಹೋಗಿದೆ. ಮದ್ಯದ ಬಾಟ್ಲಿ ಪೀಸ್ ಪೀಸ್ ಆಗುತ್ತಿದ್ದಂತೆ ಕಾನ್ಸ್‌ಟೇಬಲ್ ಆತುರದಲ್ಲಿಯೇ ಬಾಟ್ಲಿ ಪೀಸ್‍ಗಳನ್ನ ಬಾಚಿಕೊಂಡು ಪರಾರಿಯಾಗಿದ್ದಾನೆ. ಭದ್ರತೆಯಲ್ಲಿದ್ದ ಪೊಲೀಸರು ಕೆಲ ಗಂಟೆಗಳ ಕಾಲ ದಂಗಾಗಿ ಹೋಗಿದ್ದಾರೆ. ಬಾಟ್ಲಿ ತಂದ ವ್ಯಕ್ತಿ ಯಾರು, ಯಾಕಾಗಿ ತಂದ್ರು…
ಬೆಂಗಳೂರು: ಭಕ್ತರು ಕೊಟ್ಟ ಹುಂಡಿ ದುಡ್ಡು ಮೇಲೆ ಬೊಮ್ಮಾಯಿ ಸರ್ಕಾರದ ಕಣ್ಣು ಬಿದ್ದಂತಿದೆ. ಬಿಜೆಪಿ ಶಾಸಕರೊಬ್ಬರು ಮುಕ್ಕಣ್ಣನಿಗೆ ಮೂರು ನಾಮ ಹಾಕಲು ಹೊರಟಿರುವುದು ಬಯಲಾಗಿದೆ. ಚುನಾವಣೆ (Karnataka Election 2023) ಯ ಹೊಸ್ತಿಲಲ್ಲಿ ಜಾತಿ ರಾಜಕಾರಣದ ಓಲೈಕೆಗಾಗಿ ದೇವರ ದುಡ್ಡಲ್ಲಿ ಸಮುದಾಯ ನಿರ್ಮಾಣಕ್ಕೆ ಸ್ಕೆಚ್ ಅಷ್ಟೇ ಅಲ್ಲ ಶಾದಿ ಮಹಲ್‍ಗೂ ಪ್ರಸ್ತಾಪ ಮಾಡಲಾಗಿದೆ. ಸಿಎಂ ಕೂಡ ಕಣ್ಣು ಮುಚ್ಚಿ ಗ್ರೀನ್ ಸಿಗ್ನಲ್ ನೀಡಿರುವುದು ಬೆಳಕಿಗೆ ಬಂದಿದೆ. ಹೌದು. ದೇವರ ಹುಂಡಿ ದುಡ್ಡು, ಅದು ಭಕ್ತರ ನಂಬಿಕೆ ಹರಕೆ. ತಮ್ಮ ನೆಚ್ಚಿನ ದೇವರಿಗಾಗಿ, ದೇವಸ್ಥಾನದ ಉದ್ಧಾರಕ್ಕಾಗಿ ಭಕ್ತರ ಕೊಡುಗೆ. ಆದರೆ ಈ ರಾಜಕೀಯ ನಾಯಕರ ಕಣ್ಣು ಎಲೆಕ್ಷನ್ ಟೈಂನಲ್ಲಿ ಹುಂಡಿಯ ಮೇಲೆಯೂ ಬಿದ್ದಿದೆ. ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ (BJP MLA Harshavardhan) ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ (Srikanteshwara Temple, Nanjangud) ದ ನಿಧಿಯಲ್ಲಿ ಸಾಕಷ್ಟು ಅನುದಾನವಿದೆ. ಹೀಗಾಗಿ ಈ ದುಡ್ಡು ಬಳಸಿ ಶಾದಿ ಮಹಲ್ ಸೇರಿದಂತೆ ಸಮುದಾಯ ಭವನ ನಿರ್ಮಾಣಕ್ಕಾಗಿ ಸಿಎಂ ಮೊರೆ…
ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿ ಆಲಿಯಾ ಜಗಳ ಬೀದಿಗೆ ಬಂದು ನಿಂತಿದೆ. ಪತಿಯ ವಿರುದ್ಧ ಆಲಿಯಾ ನಾನಾ ಆರೋಪಗಳನ್ನು ಮಾಡಿದ್ದಾರೆ. ಮೊನ್ನೆಯಷ್ಟೇ ಹೆಂಡತಿಯ ವಿರುದ್ಧ ಹಲವು ಪೋಸ್ಟ್ ಗಳನ್ನು ಹಾಕಿದ್ದ ಸಿದ್ದಿಕಿ ಮೌನ ಮುರಿದಿದ್ದರು. ನವಾಜುದ್ದೀನ್ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ ನಟಿ ಕಂಗನಾ ರಣಾವತ್ ಪ್ರಕರಣದಲ್ಲಿ ಎಂಟ್ರಿಕೊಟ್ಟಿದ್ದಾರೆ. ಮೌನ ಯಾವತ್ತು ನೋವನ್ನುಂಟು ಮಾಡುತ್ತಿದೆ. ಎಲ್ಲವನ್ನೂ ಹಂಚಿಕೊಂಡಿದ್ದೀರಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಕಂಗನಾ ಹೇಳಿದ್ದಾರೆ. ಈ ಮೂಲಕ ನವಾಜುದ್ದೀನ್ ಸಿದ್ದಿಕಿಗೆ ಬೆಂಬಲಕ್ಕೆ ನಿಂತಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಹಾಗೂ ಪತ್ನಿ ಆಲಿಯಾ ನಡುವಿನ ಜಗಳ ಅಕ್ಷರಶಃ ಆಡಿಕೊಳ್ಳುವಂತಾಗಿದೆ. ನವಾಜುದ್ದೀ ನ್ ಮೇಲೆ ಪತ್ನಿ ಆಲಿಯಾ ಅನೇಕ ರೋಪಗಳನ್ನು ಮಾಡಿದ್ದರು. ಅತ್ತೆಯ ಕಿರುಕುಳ ಸೇರಿದಂತೆ, ತನಗೆ ಅನ್ನ ನೀರು ಕೊಡದೇ ಕೂಡಿ ಹಾಕಲಾಗಿತ್ತು ಎಂದೆಲ್ಲ ಹೇಳಿದ್ದರು. ತಮ್ಮಿಂದ ಮಕ್ಕಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು. ಆಲಿಯಾ ನನ್ನ ಪತ್ನಿಯಲ್ಲ, ಆಕೆ ಡಿವೋರ್ಸ್ ತಗೆದುಕೊಂಡಿದ್ದಾಳೆ. ಆದರೆ, ಆಕೆ…
‘ಸುಂದರಿ’ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ಅಮೂಲ್ಯ ಗೌಡ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ‘ಕುರುಡು ಕಾಂಚಣ’ ಸಿನಿಮಾ ಮೂಲಕ ಅಮೂ್ಯ ಗೌಡ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2016 ‘ಸುಂದರಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಅಮೂಲ್ಯ ಬಳಿಕ ಅಪರಂಜಿ, ಅಗ್ನಿಸಾಕ್ಷಿ, ನನ್ನರಸಿ ರಾಧೆ ಸೀರಿಯಲ್ ಗಳ ಮೂಲಕ ನಟಿ ಗಮನ ಸೆಳೆದರು. 2016ರ `Princess Karnataka’ ವಿನ್ನರ್ ಕೂಡ ಆಗಿದ್ದಾರೆ. 2020ರಲ್ಲಿ ಶಮಂತ್ ಗೌಡ ಜೊತೆ ‘ಮರೆಯಲಾರೆ’ ಎಂಬ ಬ್ರೇಕಪ್ ಸಾಂಗ್ ನಲ್ಲಿ ನಟಿಸಿದ್ದರು. ಸಾಕಷ್ಟು ಜಾಹಿರಾತಿನಲ್ಲಿ ಮಾಡೆಲ್ ಆಗಿ ಕಾಣಿಕೊಂಡಿದ್ದಾರೆ. ಇದೀಗ ಬಿಗ್ ಸ್ಕ್ರೀನ್ ನಲ್ಲಿ ಮೋಡಿ ಮಾಡೋಕೆ ರೆಡಿಯಾಗಿದ್ದಾರೆ. ‘ಒನ್ ವೇ’ ಚಿತ್ರದ ನಟ ಕಿರಣ್ ರಾಜ್‌ಗೆ ‘ಕುರುಡು ಕಾಂಚಾಣ’ ಹೆಸರಿನ ಚಿತ್ರದಲ್ಲಿ ನಾಯಕಿಯಾಗಿ ಅಮೂಲ್ಯ ನಟಿಸಿದ್ದಾರೆ. ಜೆನ್ನಿ ಎನ್ನುವ ಪಾತ್ರಕ್ಕೆ ಅಮೂಲ್ಯ (ಜೀವತುಂಬಿದ್ದಾರೆ. ನಟನೆಗೆ ಒತ್ತಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಪ್ರದೀಪ್ ವರ್ಮಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ…
ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಕಬ್ಜ’ ಚಿತ್ರ ರಿಲೀಸ್ಗೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿ ಇದೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಭರದ ಸಿದ್ಧತೆ ನಡೆದಿದೆ. ಆರ್. ಚಂದ್ರು ನಿರ್ದೇಶಿಸಿ, ನಿರ್ಮಾಣ ಮಾಡಿರುವ ಕಬ್ಜ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಚಿತ್ರತಂಡದಿಂದ ಮತ್ತೊಂದು ಹೊಸ ಅಪ್ಡೇಟ್ ಸಿಕ್ಕಿದೆ. ತಮಿಳಿನಾಡಿನಲ್ಲಿಕಬ್ಜ ಚಿತ್ರದ ಹಂಚಿಕೆಯ ಹಕ್ಕು ಖ್ಯಾತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ ಪಡೆದುಕೊಂಡಿದೆ. ಈ ಮೂಲಕ ಚಿತ್ರತಂಡಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಈ ಬಗ್ಗೆ ಲೈಕಾ ಪ್ರೊಡಕ್ಷನ್ಸ್ ಹಾಗೂ ಆರ್. ಚಂದ್ರು ಕಡೆಯಿಂದ ಅಧಿಕೃತ ಘೋಷಣೆ ಹೊರ ಬಿದ್ದಿದೆ. ಸಿನಿಮಾವೊಂದು ಅತಿ ಹೆಚ್ಚಿನ ಜನರಿಗೆ ತಲುಪಬೇಕು ಎಂದರೆ ಅದಕ್ಕೆ ಹಂಚಿಕೆದಾರರ ಪಾತ್ರ ತುಂಬಾನೇ ಮುಖ್ಯ. ಸಿನಿಮಾ ಜನಪ್ರಿಯ ಹಂಚಿಕೆದಾರರ ಕೈಗೆ ಸೇರಿದರೆ ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಹಕಾರಿ…
ವಾಷಿಂಗ್ಟನ್: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(ಸ್ಟೆಮ್) ಕ್ಷೇತ್ರದ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಲಭ್ಯವಾಗಿದೆ. ವಿದ್ಯಾರ್ಥಿಗಳ ವೀಸಾಗೆ ಪ್ರೀಮಿಯಂ ಖಾಯಂ ಸೇವೆ ನೀಡಲು ಅಮೆರಿಕ ಸರಕಾರ ನಿರ್ಧರಿಸಿದೆ. ಅದರಂತೆ ಇನ್ನು ಮುಂದೆ ನಿರ್ದಿಷ್ಟ ವಿಭಾಗದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉದ್ಯೋಗಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ಅತ್ಯಂತ ತ್ವರಿತವಾಗಿ ಪರಿಶೀಲಿಸುವ ಪ್ರಕ್ರಿಯೆ ನಡೆಯಲಿದೆ. ಸ್ಟೆಮ್ ಕ್ಷೇತ್ರದಲ್ಲಿ ಬರುವ ಆಪ್ಶನಲ್ ಪ್ರಾಕ್ಟಿಕಲ್ ಟ್ರೈನಿಂಗ್‌ಗೆ ಅರ್ಜಿ ಸಲ್ಲಿಸುವಂಥ ವಿದ್ಯಾರ್ಥಿಗಳ ಅರ್ಜಿಗಳನ್ನು ಪ್ರೀಮಿಯಂ ಸೇವೆಯ ವ್ಯಾಪ್ತಿಗೆ ತಂದಿದ್ದೇವೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗ ತಿಳಿಸಿದೆ. ಮಾ.6ರಿಂದಲೇ ಈ ಸೇವೆ ಆರಂಭವಾಗಿದೆ.
ಕೈರೊ: ಈಜಿಪ್ಟ್‌ನಲ್ಲಿ ಪ್ರಯಾಣಿಕರ ರೈಲು ಹಳಿ ತಪ್ಪಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಕೈರೊ ನಗರದ ಬಳಿ ಅವಘಡ ಸಂಭವಿಸಿದ್ದು, ಇಲ್ಲಿನ ರಾಮ್ಸೆಸ್ ನಿಲ್ದಾಣದಿಂದ ಮೆನೌಫ್ ನಗರಕ್ಕೆ ರೈಲು ತೆರಳುತ್ತಿತ್ತು. ಈ ವೇಳೆ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಈಜಿಪ್ಟ್ ಸರ್ಕಾರ ಸೂಚನೆ ನೀಡಿದೆ.