ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಟಿಕೆಟ್ ವಂಚಿತ ಕೆಜಿಎಫ್ ಬಾಬು ನಿವಾಸದ ಮೇಲೆ ಆದಾಯ ತೆರಿಗೆ, ಕಮರ್ಷಿಯಲ್ ಟ್ಯಾಕ್ಸ್, ಚುನಾವಣಾಧಿಕಾರಿಗಳು ದಾಳಿ ಮಾಡಿದ್ದು, ಸುಮಾರು 18 ಗಂಟೆಗಳ ಕಾಲ ಪರಿಶೀಲನೆ ಮಾಡಿದ್ದಾರೆ. ಇನ್ನೂ ನಿನ್ನೆ ಸಂಜೆ ಚುನಾವಣಾಧಿಕಾರಿಗಳ ದಾಳಿ ಮುಕ್ತಾಯಗೊಂಡಿದ್ದು, ಐಟಿ ಅಧಿಕಾರಿಗಳ ಶೋಧ ಮುಂದುವರಿದಿದೆ. ಚುನಾವಣಾ ಅಧಿಕಾರಿಗಳು ಅಪಾರ ಪ್ರಮಾಣದ ವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ. ತಲಾ 27 ಸಾವಿರ ಬೆಲೆ ಬಾಳುವ 235 ಸೂಟ್ಸ್, ₹5,000 ಮೌಲ್ಯದ 5,000 ಕಂಚಿ ರೇಷ್ಮೆ ಸೀರೆಗಳು, 86 ಶಾಲುಗಳು, ಉಮ್ರಾ ಫೌಂಡೇಷನ್ ಹೆಸರಿನಲ್ಲಿ ತಲಾ ₹1,105 ಮೌಲ್ಯದ ಡಿಡಿಗಳು, 1000ಕ್ಕೂ ಹೆಚ್ಚು 5000 ರೂಪಾಯಿಯ ಚೆಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸೀರೆ, ಡಿಡಿ ಇದ್ದ ಚುನಾವಣಾ ಸಾಮಗ್ರಿಗಳ ಪ್ಯಾಕಿಂಗ್ ಮೇಲೆ ಕೆಜಿಎಫ್ ಬಾಬು ಭಾವಚಿತ್ರವಿದೆ. ಕಚೇರಿಯಲ್ಲಿ ಸಿಕ್ಕ ಚೆಕ್ ಹಾಗೂ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚುನಾವಣಾಧಿಕಾರಿಗಳಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಕ್ರಮ ವಸ್ತುಗಳ ಸಂಗ್ರಹದ ಬಗ್ಗೆ ದೂರು ದಾಖಲಾಗಿದೆ.
Author: Prajatv Kannada
ದೇವನಹಳ್ಳಿ: ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಜನಸಮೂಹದ ಜೊತೆಯಲ್ಲಿ ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.. ಆದ್ರೆ ಇಲ್ಲೊಬ್ಬ ಅಭ್ಯರ್ಥಿ ಮಾತ್ರ ವಿನೂತನವಾಗಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.. ಸಾಮಾನ್ಯವಾಗಿ ಅಭ್ಯರ್ಥಿಗಳು ತೆರೆದ ವಾಹನ, ಬೈಕ್ ಚಲಾಯಿಸಿ, ಸಾವಿರಾರು ಜನರೊಂದಿಗೆ, ಪಕ್ಷದ ಮುಖಂಡರ ಜೊತೆ ಬಂದು ನಾಮಪತ್ರ ಸಲ್ಲಿಸಿರುವುದನ್ನು ನೋಡಿದ್ದೇವೆ. Video Player 00:00 02:17 ಆದರೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಬಿ.ಕೆ. ಶಿವಪ್ಪ ಕುದುರೆ ಏರಿ ಬಂದು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದು, ಎಲ್ಲರ ಗಮನ ಸೆಳೆದಿದೆ. ಇದೇ ವೇಳೆ ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅಭ್ಯರ್ಥಿ ಬಿ.ಕೆ ಶಿವಪ್ಪಗೆ ಸಾಥ್ ನೀಡಿದ್ರು.. ಈ ವೇಳೆ ಅಭ್ಯರ್ಥಿ ಶಿವಪ್ಪ ಎತ್ತಿನ ಬಂಡಿ, ಕಾಲಿ ಸಿಲಿಂಡರ್ ಜೊತೆ ನಗರದ ಪ್ರಮುಖ ಬೀದಿಗಳಲ್ಲಿ ರ್‍ಯಾಲಿ ನಡೆಸಿ, ಪರೋಕ್ಷವಾಗಿ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..
ಕಾಂಗ್ರೆಸ್ಸಿಗರು ಗಂಟೆಗೊಂದು, ಗಳಿಗೆಗೊಂದು ದಾಳ ಉರುಳಿಸುತ್ತಾರೆ. ಕಾಂಗ್ರೆಸ್ನವರ ಈ ದಾಳ ಏನೂ ನಡೆಯಲ್ಲ ಎಂದ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ವಿಚಾರ ಮಾತನಾಡಿದ ಅವರು, ನಾಳೆ ದಿನ ಹೆಚ್ಚು ಕಡಿಮೆ ಆದ್ರೆ ಏನು ಮಾಡಬೇಕೆಂಬ ಬಗ್ಗೆ, ಲಿಂಗಾಯತ ಸಮುದಾಯ ವಿಚಾರವಾಗಿ ಸಭೆಯಲ್ಲಿ ಚರ್ಚಿಸಿದ್ದೇವೆ. ಮುಂದಿನ ಸಿಎಂ ಬಗ್ಗೆ ಬಿಎಸ್ವೈ, ಬೊಮ್ಮಾಯಿ ಚರ್ಚೆ ಮಾಡ್ತಾರೆ. ವೀರಶೈವ ಲಿಂಗಾಯತರನ್ನು ಮೂಲೆಗುಂಪು ಮಾಡಲು ಆಗುವುದಿಲ್ಲ. ವೀರಶೈವರನ್ನು ಮೂಲೆಗುಂಪು ಮಾಡುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ರದ್ದು ಕೋರಿದ್ದ ಅರ್ಜಿ ವಿಚಾರಣೆಯನ್ನು ಮೇ ಅಂತ್ಯಕ್ಕೆ ಬೆಂಗಳೂರಿನ ಹೈಕೋರ್ಟ್ ಮುಂದೂಡಿದೆ. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು, ಇದನ್ನು ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷರು ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ವಿರುದ್ಧದ ಸಿಬಿಐ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಅರ್ಜಿದಾರರ ಪರ ಹಾಗೂ ಸಿಬಿಐ ಪರ ವಕೀಲರ ವಾದ ಪ್ರತಿವಾದ ಆಲಿಸುತ್ತಾ ಹಲವು ಬಾರಿ ತಡೆಯಾಜ್ಞೆಯನ್ನು ವಿಸ್ತರಿಸಿತ್ತು. ಸಿಬಿಐ ತನಿಖೆಗೆ ಅನುಮತಿ ನೀಡಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಡಿಕೆ ಶಿವಕುಮಾರ್ ಅವರಿಗೆ ಆರಂಭದಲ್ಲಿ ಬಿಗ್ ರಿಲೀಫ್ ಸಿಕ್ಕಿತ್ತು. ಫೆ.24ರವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಬಳಿಕ ನಡೆದ ವಿಚಾರಣೆಗಳ ಸಮಯದಲ್ಲಿ ಕೋರ್ಟ್, ಮಾರ್ಚ್ 31ಕ್ಕೆ, ಏಪ್ರಿಲ್ 6ಕ್ಕೆ, ಏಪ್ರಿಲ್ 13ಕ್ಕೆ,…
ಬೆಂಗಳೂರು, ಏಪ್ರಿಲ್ 20: ನಾಮಪತ್ರ ಪ್ರಕ್ರಿಯೆ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ ಬರಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಲಿಂಗಾಯತ ಸಿಎಂ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ, ಯಡಿಯೂರಪ್ಪ ನೇತೃತ್ವದಲ್ಲಿ ಲಿಂಗಾಯತ ನಾಯಕರ ಸಭೆ ನಡೆದ ಕುರಿತು ಮಾತನಾಡಿ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಗಿದೆ. ಕಾಂಗ್ರೆಸ್ ನವರ ಅಪಪ್ರಚಾರಕ್ಕೆ ಹೇಗೆ ಪ್ರತ್ತುತ್ತರ ನೀಡಬೇಕು, ಲಿಂಗಾಯತ ಮುಖ್ಯಮಂತ್ರಿ ಬಗ್ಗೆಯೂ ಕೆಲವರು ಸಲಹೆ ಕೊಟ್ಟಿದ್ದಾರೆ. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಇದ್ದರು. ಸಭೆಯಲ್ಲಿ ವ್ಯಕ್ತವಾಗಿರುವ ಭಾವನೆಗಳನ್ನು ವರಿಷ್ಠರಿಗೆ ತಿಳಿಸುವುದಾಗಿ ಹೇಳಿದ್ದಾರೆ.ಲಿಂಗಾಯತ ಸಿಎಂ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ ಎಂದು ಸ್ಪಷ್ಟ ಪಡಿಸಿದರು. ಮಿಲಿಟರಿ ಹೊಟೇಲಿಂದಲೇ ಪ್ರಚಾರ ಆರಂಭ ಅಶೋಕ್ ಅವರಿಗೆ ಕನಕಪುರದಲ್ಲಿ ಮಿಲಿಟರಿ ಹೊಟೇಲ್ ಗೆ ಬಂದು ಹೋಗಿ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಉತ್ತರಿಸಿ ನಮ್ಮ ಪ್ರಚಾರ ಮಿಲಿಟರಿ ಹೊಟೇಲಿಂದಲೇ ಆರಂಭವಾಗಲಿದೆ. ಅಲ್ಲಿ ಸ್ಥಳೀಯ ಸಾಮಾನ್ಯ ಜನರಿರುತ್ತಾರೆ.…
ಬೆಂಗಳೂರು: ಬೇರೆ ಪಕ್ಷದ ನಾಯಕರ ಮೂಲಕ ಒತ್ತಡ ತಂದ ಕಾಂಗ್ರೆಸ್ ನಾಯಕ ಮೊಯಿದ್ದಿನ್ ಬಾವಾ(Mohiuddin Bava) ಕಡೆ ಗಳಿಗೆಯಲ್ಲಿ ಟಿಕೆಟ್ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ (Siddaramaiah) ಬಣದ ಮೊಯಿದ್ದಿನ್ ಬಾವಾ ಮತ್ತು ಡಿಕೆ ಶಿವಕುಮಾರ್ (DK Shivakumar) ಬಣದ ಇನಾಯತ್ ಅಲಿ (Inayat Ali) ಮಧ್ಯೆ ಮಂಗಳೂರು ಉತ್ತರ (Mangalore North) ಕ್ಷೇತ್ರದ ಟಿಕೆಟ್‌ಗೆ ಭಾರೀ ಫೈಟ್ ನಡೆಯುತ್ತಿತ್ತು. ಬಹುತೇಕ ಮಾಜಿ ಶಾಸಕ ಮೊಯಿದ್ದಿನ್ ಬಾವಾಗೆ ಟಿಕೆಟ್ ಫೈನಲ್ ಆಗಿತ್ತು. ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲೇ ಬಾವಾ ಹೆಸರು ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು. ಪಟ್ಟಿ ಬಿಡುಗಡೆಗೆ ಮುನ್ನ ಅನ್ಯ ಪಕ್ಷವೊಂದರ ಪ್ರಭಾವಿ ನಾಯಕರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ (Mallikarjun kharge) ಮೊಯಿದ್ದಿನ್ ಬಾವಾ ಕರೆ ಮಾಡಿಸಿದ್ದರು. ಬೇರೆ ಪಕ್ಷದ ಪ್ರಭಾವಿ ನಾಯಕ ಖರ್ಗೆಗೆ ಕರೆ ಮಾಡಿ ಬಾವಾಗೆ ಟಿಕೆಟ್ ಕೊಡಿ, ಗೆಲ್ಲುವ ಅವಕಾಶ ಜಾಸ್ತಿ ಇದೆ ಎಂದು ಬ್ಯಾಟ್ ಬೀಸಿದ್ದರು. ತಮ್ಮ ಪಕ್ಷದ ಟಿಕೆಟ್ ಯಾರಿಗೆ ಕೊಡಬೇಕು? ಕೊಡಬಾರದು ಎನ್ನುವುದನ್ನು ನಾವು ನಿರ್ಧಾರ…
ಶಿಡ್ಲಘಟ್ಟ: ವೃದ್ದ ತಂದೆಯನ್ನು ನೋಡಿಕೊಳ್ಳದೇ ಹೊರ ದಬ್ಬಿದ್ದ ಮಕ್ಕಳ ಹೆಸರಲ್ಲಿದ್ದ ಆಸ್ತಿಯನ್ನು ಪುನಃ ತಂದೆಗೆ ಒಪ್ಪಿಸುವುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿ ಆದೇಶ ಹೋರಡಿಸಿದ್ದಾರೆ. ನಗರದ ಕೆಕೆ ಪೇಟೆ ನಿವಾಸಿ ನಾರಾಯಣಪ್ಪ (80) ಜೀವನ ನಿರ್ವಣೆ ಕುರಿತು ಕಲಂ 23 ರಂತೆ ನಗರದ ಕೆಕೆ ಪೇಟೆಯ ಟಿಬಿ ರಸ್ತೆಯಲ್ಲಿರುವ ಖಾತೆ ಸಂಖ್ಯೆ 152, 156/10,180, 154/108/ಎ, 4176/365 ರ ನಿವೇಶನದ ವಿಭಾಗ ಪತ್ರವನ್ನು ರದ್ದು ಗೊಳಿಸಿ ತಮ್ಮ ಹೆಸರಿಗೆ ಮರು ಖಾತೆ ಮಾಡುವಂತೆ ಕೋರಿದ್ದರು. ತಂದೆ ತಾಯಿಯರ ಮತ್ತು ಹಿರಿಯ ನಾಗರೀಕರ ಪೋಷಣೆ ಮತ್ತು ಶ್ರೇಯೋಭಿವೃದ್ದಿ ಹಾಗು ಸಂರಕ್ಷಣೆ ಕಾಯ್ದೆ 2007 ರ ಅಡಿ ವಿಭಾಗ ವಾಗಿದ್ದ ಆಸ್ತಿಯನ್ನು ಪನಃ ನಾರಾಯಣಪ್ಪನವರ ಹೆಸರಿಗೆ ಮರು ಖಾತೆ ಮಾಡುವಂತೆ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ಆದೇಶಿಸಿದ್ದರು. ಪೌರಾಯುಕ್ತ ಶ್ರೀಕಾಂತ್ ಮಂಗಳವಾರ ಬೆಳೆಗ್ಗೆ 10.30 ಕ್ಕೆ ಪೋಲಿಸರ ರಕ್ಷಣೆಯಲ್ಲಿ ಆದೇಶದಲ್ಲಿ ಸೂಚಿಸಿರುವ ಆಸ್ತಿಗಳನ್ನು ವಶ ಪಡಿಸಿಕೊಂಡು ಖಾತೆ ಬದಲಾಯಿಸಿ ಸಾರ್ವಜನಿಕರ…
ಮಂಡ್ಯ : ಕಳೆದ 15 ವರ್ಷಗಳಿಂದ ಮದ್ದೂರು ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರು ಏಕ ವ್ಯಕ್ತಿಯ ಮುಷ್ಟಿಗೆ ಸಿಕ್ಕಿ ದಬ್ಬಾಳಿಕೆ ಮತ್ತು ದೌರ್ಜನ್ಯಕ್ಕೆ ಒಳಗಾಗಿದ್ದರು ಆದರೆ, ಇನ್ಮುಂದೆ ಅದೆಲ್ಲ ನಡೆಯಲ್ಲ ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಶಾಸಕ ಡಿ.ಸಿ.ತಮ್ಮಣ್ಣ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಮದ್ದೂರು ತಾಲೂಕು ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಮದ್ದೂರು ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರು ಏಕ ವ್ಯಕ್ತಿಯ ಮುಷ್ಟಿಗೆ ಸಿಕ್ಕಿ ದಬ್ಬಾಳಿಕೆ ಮತ್ತು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ವ್ಯಕ್ತಿಯ ಕೃತ್ಯಕ್ಕೆ ವಿರುದ್ಧವಾಗಿ ಇಂದು ಸೆಟೆದು ನಿಂತಿರುವ ಕಾಂಗ್ರೆಸ್ ಕಾರ್ಯಕರ್ತರು ಹುಮ್ಮಸ್ಸಿನಿಂದ ಸ್ವಯಂ ಪ್ರೇರಿತರಾಗಿ ಬಂದು ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಗೆಲುವಿನ ಸಂದೇಶವನ್ನು ವಿರೋಧ ಪಕ್ಷಗಳಿಗೆ ರವಾನಿಸಿದ್ದಾರೆ ಎಂದರು. ಕ್ಷೇತ್ರದ ಜೆಡಿಎಸ್ ನಾಯಕರುಗಳು ಅಧಿಕಾರ ಹಿಡಿದು ಏಕ ಚಕ್ರಾಧಿಪತ್ಯ ಮೆರೆಯುತ್ತಿದ್ದರು. ಮದ್ದೂರು ಕ್ಷೇತ್ರದ ಜನರೇ ಇನ್ನು ಮುಂದೆ ಇಂತಹ ಆಟಗಳಿಗೆ ಚುನಾವಣೆ…
ನಾವು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರಕ್ಕೆ ಜಗದ್ಗುರುಗಳಾಗಿ ಪೀಠಾರೋಹಣವಾಗಿ ಇಂದಿಗೆ ಐದು ವರ್ಷಗಳು ಪೂರೈಸಿವೆ. ಈ ಕಾಲಘಟ್ಟದಲ್ಲಿ ನಮಗೆ ಸಕಲ ರೀತಿಯಿಂದಲೂ ಸಹಕಾರ ಬೆಂಬಲ ನೀಡಿದ ಸಮುದಾಯದ ಸಕಲ ಬಾಂಧವರಿಗೆ ಅಭಿನಂದನೆಗಳನ್ನೂ ಧನ್ಯವಾದಗಳನ್ನೂ ತಿಳಿಸಲು ಇಚ್ಚಿಸುತ್ತೇವೆ. ಈ ಐದು ವರ್ಷಗಳಲ್ಲಿ ಪಂಚಮಸಾಲಿ ಸಮುದಾಯ ದಿನೇದಿನೇ ಅಭಿವೃದ್ಧಿ ಹೊಂದಿದ್ದು ಎಲ್ಲರಿಗೂ ತಿಳಿದ ವಿಷಯ. ನಮ್ಮ ಸಮುದಾಯ ಹೀಗೆಯೇ ಸಮಾಜದ ಮುಂಚೂಣಿಯಲ್ಲಿ ಅದ್ಭುತ ಸಾಧನೆಗಳನ್ನು ಮಾಡುವಲ್ಲಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಮಹಾಯೋಗಿನಿ ಅಕ್ಕಮಹಾದೇವಿ ಹೇಳಿದಂತೆ “ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ ಬೆಳೆದೆನು ಅಸಂಖ್ಯಾತರ ಕರುಣದೊಳಗೆ ಭಾವವೆಂಬ ಹಾಲು ಸುಜ್ಞಾನವೆಂಬ ತುಪ್ಪ ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ ಇಂತಪ್ಪ ತ್ರಿವಿಧಾಮ್ರತವನು ದಣಿಯಲೆರೆದು ಸಲಹಿದಿರೆನ್ನ ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ ಬಸವಣ್ಣ ಮೆಚ್ಚಲು ಒಗತನವ ಮಾಡುವೆ ಚೆನ್ನಮಲ್ಲಿಕಾರ್ಜುನನ ಕೈವಿಡಿದು ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಹೆನು ಅವಧರಿಸಿ ನಿಮ್ಮಡಿ ಶರಣಾರ್ಥಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.
ಮೊಹಾಲಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದ ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸೊಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಮ್ಯಾಚ್ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡ ಮುಖಾಮುಖಿ ಆಗಲಿದೆ. ಮೊಹಾಲಿಯಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್ಸಿಬಿ ತಂಡ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ವೇಯ್ನ್ ಪಾರ್ನೆಲ್ ಬದಲು ಜೋಶ್ ಹ್ಯಾಝಲ್ವುಡ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಮೊಹಮ್ಮದ್ ಸಿರಾಜ್ ಬಿಟ್ಟರೆ ಮತ್ಯಾವ ಬೌಲರ್ ಕೂಡ ಮಾರಕವಾಗಿ ಗೋಚರಿಸುತ್ತಿಲ್ಲ. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಇಂದು ಬದಲಾವಣೆ ಖಚಿತ ಎಂದು ಹೇಳಬಹುದು. ಇದೀಗ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ RCB ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಮಹಿಪಾಲ್ ಲುಮ್ರೂರ್, ದಿನೇಶ್ ಕಾರ್ತಿಕ್, ಶಹ್ಬಾಜ್ ಅಹ್ಮಾದ್ ಕಡೆಯಿಂದ ಉತ್ತಮ ಆಟಬರಬೇಕಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲಕ್ಕೇರಲು ಇಂದಿನ ಪಂದ್ಯದಲ್ಲಿ…