ಸಮಾನ ವೇತನ, ಸಮಾನ ವಿದ್ಯಾರ್ಹತೆ ಹಾಗೂ ಒಂದೇ ನೇಮಕಾತಿ ವಿಧಾನವಿದ್ದರೂ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಮಧ್ಯೆ ತಾರತಮ್ಯ ಧೋರಣೆ ಮಾಡಲಾಗುತ್ತಿದೆ ಎಂದು ರಾಜ್ಯ ಮಟ್ಟದ ದೈಹಿಕ ಶಿಕ್ಷಕರ ಸಂಘಟನೆ ಅಧ್ಯಕ್ಷ ಚೌಡಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://youtu.be/ZNSynZ8Fh58?si=LN7BUvQdmPqnTNdz ನಗರದ ಫ್ರೀಡಂ ಪಾರ್ಕ್‌ನಲ್ಲಿ ದೈಹಿಕ ಶಿಕ್ಷಕರ ಸಂಘದಿಂದ ರಾಜ್ಯ ಮಟ್ಟದ ಧರಣಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಜೊತೆಯಲ್ಲಿ ಒಂದು ದಿನದ ಸಾಂಕೇತಿಕ ಧರಣಿಯನ್ನು ಹಮ್ಮಿಕೊಂಡಿದ್ದೇವೆ. ಧೋರಣೆಯನ್ನು ಖಂಡಿಸಿ ಧರಣಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ದೈಹಿಕ ಶಿಕ್ಷಕರು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ ಪ್ರೊ.ಎಲ್.ಆರ್ ವೈದ್ಯನಾಥ್ವ ರದಿಯ ಅನ್ವಯ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರಾಗಿ ಪರಿಗಣಿಸಿದ್ದರೂ, ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರಿಗೆ ಸಿಗುವ ಸೌಲಭ್ಯಗಳನ್ನು ಜಾರಿಗೊಳಿಸಲು ಇಲಾಖೆಯ ಅಧಿಕಾರಿಗಳು ವಿಳಂಬ ಧೋರಣೆ ಮಾಡಿರುವುದನ್ನು ಈ ಧರಣಿಯ ಮೂಲಕ ತೋರಿಸುತ್ತೇವೆ ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಸರ್ಕಾರದ ಗಮನಕ್ಕೆ ತಂದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳಿಗೆ…
Author: Prajatv Kannada
ಅಂಗಡಿಯ ಮುಂದೆ ಕಾರ್ ಪಾಕಿರ್ಂಗ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವುದು ನಗರದ ಹೊರವಲಯದ ಸೊಂಡೆಕುಪ್ಪ ಗ್ರಾಮ ಪಂಚಾಯಿತಿ ಬಳಿ ನಡೆದಿದೆ. https://youtu.be/o99VkmE96P8?si=6U_-dxCedZBNHtDS ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರೆಹಮಾನ್ (17) ಕೊಲೆಯಾದ ಯುವಕ. ಅದೇ ಗ್ರಾಮದ ರೇಣುಕಾ ಹಾಗೂ ಪರ್ಮಿ ಎಂಬವರು ರೆಹಮಾನ್ ಎದೆಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗದೆ. ಕೊಲೆಯಾದ ಯುವಕ ಹುಟ್ಟು ಹಬ್ಬಕ್ಕೆಂದು ಮಂಗಳವಾರ ಕೇಕ್ ತರಲು ಬೇಕರಿ ಬಳಿ ಹೋಗಿದ್ದ. ಈ ವೇಳೆ ಆರೋಪಿಗಳು ಅಂಗಡಿ ಮುಂದೆ ಕಾರು ಪಾರ್ಕಿಂಗ್ ಮಾಡಿದ್ದು, ಇದನ್ನು ರೆಹಮಾನ್ ಪ್ರಶ್ನೆ ಮಾಡಿದ್ದ ಇದೇ ವಿಚಾರಕ್ಕೆ ಕಾರಿನಲ್ಲಿದ್ದವರು ಯುವಕನ ಮೇಲೆ ಗಲಾಟೆ ಮಾಡಿದ್ದರು. ಇದೇ ಕಾರಣಕ್ಕೆ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ಆರೋಪಿಗಳಾದ ರೇಣುಕಾ ಹಾಗೂ ಪರ್ಮಿ ಎಂಬವರು ಕಾರಿನಲ್ಲಿದ್ದ ಚಾಕು ಹಾಗೂ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು…
ಬೆಂಗಳೂರು: ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಒಳ್ಳೆಯದು. ಕೂದಲು ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಈರುಳ್ಳಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಈರುಳ್ಳಿ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿ ಇಲ್ಲದೆ ಹೆಚ್ಚಿನ ಭಕ್ಷ್ಯಗಳು ಪೂರ್ಣಗೊಳ್ಳುವುದಿಲ್ಲ. ಕೆಲವರು ಈರುಳ್ಳಿಯನ್ನು ಬೇಯಿಸಿದ ಮಾತ್ರವಲ್ಲದೆ ಹಸಿಯಾಗಿಯೂ ತಿನ್ನುತ್ತಾರೆ. ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇವು ಮಧುಮೇಹವನ್ನು ನಿಯಂತ್ರಿಸುತ್ತವೆ. ಮಧುಮೇಹಿಗಳು ಪ್ರತಿದಿನ ಈರುಳ್ಳಿಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಈರುಳ್ಳಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಸಲ್ಫರ್ ಸಮೃದ್ಧವಾಗಿದೆ. ಇವು ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ. ಈರುಳ್ಳಿ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹ ಪ್ರಯೋಜನಕಾರಿಯಾಗಿದೆ. ಈರುಳ್ಳಿಯಲ್ಲಿ ಗಂಧಕ ಹೆಚ್ಚಾಗಿರುತ್ತದೆ. ಇದು ನಮ್ಮ ಮೂಳೆಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಈರುಳ್ಳಿ ತಿಂದರೆ ಎಲುಬುಗಳೂ ಗಟ್ಟಿಯಾಗುತ್ತವೆ ಎಂದು ಹೇಳಲಾಗುತ್ತದೆ. ವಿಟಮಿನ್ ಸಿ ಜೊತೆಗೆ, ಈರುಳ್ಳಿ ಇತರ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಈರುಳ್ಳಿಯನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ನಮ್ಮ ರೋಗನಿರೋಧಕ…
73ನೇ ವಯಸ್ಸಿನಲ್ಲೂ ಸೂಪರ್ ಸ್ಟಾರ್ ರಜನಿಕಾಂತ್ ಯುವ ನಟರು ನಾಚುವಂತೆ ನಟಿಸುತ್ತಿದ್ದಾರೆ. ಆಕ್ಷಯ್ ಸಿನಿಮಾಗಳಲ್ಲಿ ರಜನಿ ಎತ್ತಿದ ಕೈ. ಈ ಮೂಲಕ ರಜನಿಕಾಂತ್ ಅನೇಕ ಕಲಾವಿಧರಿಗೆ ಮಾದರಿ ಆಗಿದ್ದಾರೆ. ಆದರೆ ಇದನ್ನು ಕೆಲವರು ನೆಗೆಟಿವ್ ಆಗಿ ತೆಗೆದುಕೊಂಡಿದ್ದಾರೆ. ಈ ವಯಸ್ಸಿನಲ್ಲಿ ರಜನಿಕಾಂತ್ ನಟಿಸುತ್ತಿರವುದಕ್ಕೆ ಉಳಿದವರಿಗೆ ಅವಕಾಶ ಸಿಗುತ್ತಿಲ್ಲ ಎಂದು ಕೆಲವರು ಟೀಕಿಸಿದ್ದರು. ಇದಕ್ಕೆ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ. ರಜನಿಕಾಂತ್ ಬಗ್ಗೆ ಟೀಕಿಸಿರುವ ಡಿಎಂಕೆ ನಾಯಕ ದೊರೈ ಮುರುಗನ್ ಅವರು, ‘ರಜನಿಕಾಂತ್ ಅವರು ಹಲ್ಲು-ಕೂದಲು ಕಳೆದುಕೊಂಡ ಬಳಿಕವೂ ನಟನೆ ಮಾಡುತ್ತಿದ್ದಾರೆ. ರಜನಿಕಾಂತ್ ಅಂಥ ವಯಸ್ಸಾದ ನಟರು ಈಗಲೂ ನಟಿಸುತ್ತಿರುವುದಕ್ಕೆ ಯುವ ಕಲಾವಿದರಿಗೆ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಗುತ್ತಿಲ್ಲ’ ಎಂದಿದ್ದಾರೆ. ಅಂದ ಹಾಗೆ ರಜನಿಕಾಂತ್ ಇತ್ತೀಚೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿಎಂಕೆ ಹಿರಿಯ ನಾಯಕರ ಬಗ್ಗೆ ಮಾತನಾಡಿದ್ದರು. ಈ ವೇಳೆ ರಜನಿಕಾಂತ್ ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಹೊಗಳಿದ್ದರು. ಪಕ್ಷದ ಹಳೆಯ ತಲೆಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೀರಿ ಎಂದು ಸ್ಟಾಲಿನ್ ಗೆ ಹೇಳಿದ್ದರು. ಹಳೆಯ…
ಕನ್ನಡ ಚಿತ್ರರಂಗದ ಹಿರಿಯ ನಟ ಟೆನ್ನಿಸ್ ಕೃಷ್ಣ ಕಳೆದ ಮೂರ್ನಾಲ್ಕು ದಶಕಗಳಿಂದ ಹಾಸ್ಯ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಆದರೆ, ಇತ್ತೀಚೆಗೆ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಈಗಾಗಲೇ ನೀಡಿದ ಹಲವು ಸಂದರ್ಶನಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ನಟ ಹೇಳಿಕೊಂಡಿದ್ದರು. ಇದೀಗ ನಟ ಟೆನ್ನಿಸ್ ಕೃಷ್ಣ ಇತ್ತೀಚೆಗೆ ಮದುವೆಯಾದ ತರುಣ್ ಸುಧೀರ್ ತಮ್ಮನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯ ನಟ ಸುಧೀರ್ ಅಗಲಿದ ಬಳಿಕ ಅವರ ಕಂಪನಿಗೆ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ಸುಧೀರ್ ಅವರ ಪತ್ನಿ ನಾಟಕ ಕಂಪನಿ ಉಳಿಸಿಕೊಳ್ಳಲು ಫ್ರೀ ಇದ್ದಾಗ ಡೇಟ್ ಕೊಡುವಂತೆ ಕೇಳಿಕೊಂಡಿದ್ದರು. ಅವರು ಕೊಟ್ಟಷ್ಟು ಸಂಭಾವನೆ ತೆಗೆದುಕೊಂಡಿದ್ದೇನೆ. ನಾನು ಡಿಮ್ಯಾಂಡ್ ಕೂಡ ಮಾಡಿಲ್ಲ. ಇವತ್ತು ಅವರ ಇಬ್ಬರು ಮಕ್ಕಳು ಕೂಡ ದೊಡ್ಡ ನಿರ್ದೇಶಕರಾಗಿದ್ದಾರೆ. ನನಗೆ ಖುಷಿ ಆಯ್ತು ಎಂದಿದ್ದಾರೆ. ಮುಂದುವರೆದು ಮಾತನಾಡಿದ ಅವರು, ನಂದ ಕಿಶೋರ್ ಹಾಗೂ ತರುಣ್ ಸುಧೀರ್ ನಿರ್ದೇಶಿಸಿದ ಸಿನಿಮಾಗಳಲ್ಲಿ ಅವಕಾಶ ಕೊಟ್ಟಿಲ್ಲ.…
ಬಳ್ಳಾರಿ: ಜಿಲ್ಲೆ ಕಂಪ್ಲಿ ತಾಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಬಾಲಕರ ಹಾಸ್ಟೆಲ್ ಕರ್ಮಕಾಂಡ, ಸರಿಯಾಗಿ ಊಟ ಕೊಡುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಸೇರಿ ಊಟ ಕೊಡುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಬಾಲಕರ ಹಾಸ್ಟೆಲ್ ವಾರ್ಡನ್ ಮತ್ತು ಹೇಡ್ ಗೋಳು ಕೇಳುವವರಿಲ್ಲ ಸರಿಯಾಗಿ ವಾರ್ಡ್ ನ ಬರೋದಿಲ್ಲ ಹೇಡ್ಡ ಕುಕ್ಕರ್ ವಾರಕೋಮ್ಮ ಬಂದರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ತಮ್ಮ ನೋವು ಹಂಚಿಕೊಂಡರು. ನಾವು ಏನು ಅಡಿಗೆ ಮಾಡುತ್ತೇವೆ ಅದನ್ನೇ ನಿವು ತಿನ್ನಬೇಕು ಯಾರು ನಿವು ಪ್ರಶ್ನೆ ಮಾತನಾಡುವಂತಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು. ಇದರ ಬಗ್ಗೆ ಕೇಳಿದರೆ ನಿಮಗೆ ಹಾಸ್ಟೆಲಿಂದ ಹೋರಗೆ ಹಾಕುತ್ತೇನೆ. ಊಟ ಕೊಡುವುದಿಲ್ಲ ಅಂತ ಹೇಳಿ ಬೆದರಿಕೆ ಹಾಕುತ್ತಾರೆ. ಇದರಿಂದ ವಿದ್ಯಾರ್ಥಿಗಳು ಮನನೊಂದು ಮಾಧ್ಯಮದವರಿಗೆ ಪೋನ್ ಮಾಡಿ ಸರ್ ನಮ್ಮ ಸಮಸ್ಯೆಗಳು ಕೆಳುವವರು ಯಾರು ಇಲ್ಲಾ ಸರ್ ನಿವಾದರೂ ನಮ್ಮ ಸಮಸ್ಯೆಗಳು…
ವಿಜಯಪುರ:- ತಡರಾತ್ರೀ ಕಳ್ಳರು ಕೈ ಚಳಕ ತೋರಿದ್ದು,ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಚಹಾ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ. ಚಹಾ ಅಂಗಡಿಯ ಮೇಲ್ಭಾಗದ ತಗಡಿ ಚಾವಣಿ ತಗೆದು ಕಳ್ಳತನ ಮಾಡಿದ್ದು, 4 ಸಾವಿರ ಹಣ ಸೇರಿದಂತೆ 10 ಸಾವಿರ ಮೌಲ್ಯದ ವಿವಿಧ ವಸ್ತು ಕದ್ದು ಕಳ್ಳರು ಪರಾರಿ ಆಗಿದ್ದಾರೆ. ಸಂತೋಷ ಬೀರಕಬ್ಬಿ ಎಂಬಾತರ ಚಹಾ ಅಂಗಡಿಯಲ್ಲಿ ಕಳ್ಳರ ಕೈ ಚಳಕ ತೋರಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಬಸವನ ಬಾಗೇವಾಡಿ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಸವನ ಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ
ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಬೆಳ್ಳಿ ಕೂಡ ಏರಿಕೆ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಎದ್ದು ಕಾಣುತ್ತಿದೆ. ಅಂದಹಾಗೆಯೇ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ? ಮಾರುಕಟ್ಟೆಯ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಮಾಹಿತಿ 22 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು? ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 6716 ಇದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 67,120 ಇದೆ. 24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು? ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 7,326 ಆಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 73,260 ಇದೆ. ಬೆಳ್ಳಿಯ ಬೆಲೆ ಎಷ್ಟಿದೆ? ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 88.40 ಇದೆ. ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 88,400 ಇದೆ
ಬೆಂಗಳೂರು:-ಚಾಲುಕ್ಯ ಸರ್ಕಲ್‌ನಲ್ಲಿ ಸೈಕಲ್ ಸವಾರನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ. https://youtu.be/OW0L6kzC6-w?si=R91h_z6yikCh005w ಮೃತ ಸೈಕಲ್ ಸವಾರ ರಾಜಸ್ಥಾನ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಸೈಕಲ್ ಸವಾರ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಯುವಕರು ಮೊಬೈಲ್ ಬಳಸೋದು ಹೆಚ್ಚು. ಹಾಗೆ ರಾತ್ರಿ ವೇಳೆ ಮೊಬೈಲ್ ನೋಡುತ್ತಲೇ ಹೆಚ್ಚು ನಿದ್ರೆಗೆ ಜಾರುವವರು ಕೂಡ ಹೆಚ್ಚು. ಹೀಗಿದ್ದವರು ಈ ಸ್ಟೋರಿಯನ್ನು ಕಂಪ್ಲೀಟಾಗಿ ಓದಿ. ಮೊಬೈಲ್ ನೋಡುತ್ತಾ ನೋಡುತ್ತಾ ಮಲಗುವಾಗ ಮೊಬೈಲ್ ಅನ್ನು ಅಲ್ಲೇ ಪಕ್ಕದಲ್ಲಿ ಇಟ್ಟುಕೊಳ್ಳುತ್ತೇವೆ. ಇಲ್ಲಾ ದಿಂಬಿನ ಅಡಿಗೆ ತಳ್ಳಿ ಬಿಡುತ್ತೇವೆ. ಮೊಬೈಲನ್ನು ದಿಂಬಿನ ಕೆಳಗೆ ಇಟ್ಟರೆ ಶಾಖ ಹೊರಬರಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮೊಬೈಲ್ ಬಹಳ ವೇಗವಾಗಿ ಬಿಸಿಯಾಗುತ್ತದೆ. ಹೀಗೆ ಶಾಖ ಹೊರಗೆ ಬಾರದೆ ನಿರಂತರವಾಗಿ ಬಿಸಿಯಾಗುವುದರಿಂದ ಮೊಬೈಲ್ ಬ್ಯಾಟರಿ ಹಾಳಾಗಬಹುದು. ಬ್ಯಾಟರಿಯ ಸಾಮರ್ಥ್ಯವು ಕಡಿಮೆಯಾಗಬಹುದು. ಹೆಚ್ಚು ಬಿಸಿಯಾಗುವುದರಿಂದ ಮೊಬೈಲ್ ನ ಪ್ರೊಸೆಸರ್ ವೇಗ ಕಡಿಮೆಯಾಗಿ ಮೊಬೈಲ್ ಹ್ಯಾಂಗ್ ಆಗಬಹುದು.ಇದು ಮೊಬೈಲ್‌ನ ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸಂದರ್ಭಗಳಲ್ಲಿ, ಹೆಚ್ಚು ಬಿಸಿಯಾಗುವುದರಿಂದ ಮೊಬೈಲ್ ಶಾರ್ಟ್ ಸರ್ಕ್ಯೂಟ್‌ಗೂ ಕಾರಣವಾಗಬಹುದು.ಇದರಿಂದ ಮೊಬೈಲ್ ಸಂಪೂರ್ಣ ಹಾಳಾಗಬಹುದು. ಇನ್ನು ಹಾಗೆಯೇ ಮೊಬೈಲ್ ಬಿಸಿಯಾಗುವುದರಿಂದ ಸ್ಫೋಟಗೊಳ್ಳುವ ಅಪಾಯ ಕೂಡಾ ಇಲ್ಲ ಎನ್ನುವ ಹಾಗಿಲ್ಲ. ಮೊಬೈಲ್ ಲೈಟ್ ಮತ್ತು…