ಲಖನೌ: ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶದ ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎನ್ಕೌಂಟರ್ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಕೇವಲ 8 ದಿನಗಳ ಅಂತರದಲ್ಲಿ ನಡೆದ 2ನೇ ಎನ್ಕೌಂಟರ್ ಇದಾಗಿದೆ. 2005ರಲ್ಲಿ ನಡೆದಿದ್ದ ಬಿಎಸ್‌ಪಿ ಶಾಸಕನ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಉಸ್ಮಾನ್ ಎಂಬಾತನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. 2005ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಶಾಸಕ ರಾಜು ಪಾಲ್ ಅವರ ಹತ್ಯೆಯಾಗಿತ್ತು. ಈ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು 2023ರ ಫೆಬ್ರವರಿ 24 ರಂದು ಗುಂಡಿಕ್ಕಿ ಕೊಲೆ ಮಾಡಿದ್ದರು. ಪಾಲ್ ಹಾಗೂ ಅವರ ಇಬ್ಬರು ಗನ್ನರ್ಗಳನ್ನು ಪ್ರಯಾಗ್ರಾಜ್ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದರಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳಲ್ಲಿ ಒಬ್ಬನಾಗಿದ್ದ ಉಸ್ಮಾನ್ ಎಂಬಾತನನ್ನು…
Author: Prajatv Kannada
ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪ್ರತಿಷ್ಠಿತ ಪಂದ್ಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ವೀಕ್ಷಿಸಲಿದ್ದಾರೆ. ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಾರ್ಚ್ 9 ರಿಂದ ಆರಂಭವಾಗಲಿದ್ದು, ಮೊದಲನೇ ದಿನದಾಟವನ್ನು ನೋಡಲು ಪ್ರಧಾನಿ ಮೋದಿ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮೈದಾನಕ್ಕೆ ಆಗಮಿಸಲಿದ್ದಾರೆ. ಉಭಯ ದೇಶಗಳ ಪ್ರಧಾನಿಗಳು ಪ್ರತಿಷ್ಟಿತ ಪಂದ್ಯವನ್ನು ವೀಕ್ಷಣೆ ಮಾಡಲು ಆಗಮಿಸುತ್ತಿರುವ ಕಾರಣ ಕೆಲವು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹೌದು, ಈ ಗಣ್ಯರು ಮೈದಾನಕ್ಕೆ ಆಗಮಿಸುತ್ತಿರುವ ಕಾರಣ ಮೊದಲನೇ ದಿನದ ಟಿಕೆಟ್ ಅನ್ನು ಇನ್ನೂ ಮಾರಾಟ ಮಾಡುತ್ತಿಲ್ಲ. ಭದ್ರತೆಯ ಕಾರಣದಿಂದ ಎಷ್ಟು ಜನ ಅಭಿಮಾನಿಗಳಿಗೆ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಎನ್ನುವುದು ಇನ್ನು ತಿಳಿದಿಲ್ಲ. ಆದರೆ, ಈಗಾಗಲೇ ಮೊದಲ ದಿನವನ್ನು ಹೊರತುಪಡಿಸಿ ಉಳಿದ ದಿನಗಳ ಟಿಕೆಟ್ ಅನ್ನು ಮಾರಾಟ ಮಾಡಲಾಗುತ್ತಿದೆ.…
ಮುಂಬೈ: ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಡೆಲ್ಲಿ ಕ್ಯಾಪಿಟಲ್ಸ್ ಎದುರು ಹೀನಾಯ ಸೋಲು ಅನುಭವಿಸಿದೆ. ಪುರುಷರ ಐಪಿಎಲ್‌ನಲ್ಲಿ ಸಾಮಾನ್ಯವಾಗಿ ಮೊದಲ ಪಂದ್ಯವನ್ನು ಸೋಲುವ ಆರ್‌ಸಿಬಿ ತಂಡದ ಚಾಳಿಯನ್ನು ಇದೀಗ ಮಹಿಳಾ ತಂಡವು ಮುಂದುವರೆಸಿದೆ. ಹೌದು, ಇಲ್ಲಿನ ಬ್ರೆಬೋರ್ನ್ ಮೈದಾನದಲ್ಲಿ ನಡೆದ ಸೂಪರ್ ಸಂಡೇಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 234 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ಸ್ಮೃತಿ ಮಂಧನಾ ಹಾಗೂ ಸೂಫಿ ಡಿವೈನ್ 4.2 ಓವರ್‌ಗಳಲ್ಲಿ 41 ರನ್‌ಗಳ ಜತೆಯಾಟವಾಡಿತು. ಸೋಫಿ ಡಿವೈನ್ ಕೇವಲ 14 ರನ್ ಬಾರಿಸಿ ಶಫಾಲಿ ವರ್ಮಾ ಅವರ ಅದ್ಭುತ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಇದರ ಬೆನ್ನಲ್ಲೇ ಸ್ಮೃತಿ ಮಂಧನಾ ಕೂಡಾ ಅಲೈಸ್ ಕ್ಯಾಪ್ಸಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಸ್ಮೃತಿ ಮಂಧನಾ 23 ಎಸೆತಗಳನ್ನು ಎದುರಿಸಿ…
ಟಾಲಿವುಡ್ ನಟ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ನ ಮುಂದಿನ ಸಿನಿಮಾ ಸಾಕಷ್ಟು ಕಾರಣಗಳಿಂದ ಸುದ್ದಿಯಾಗುತ್ತಿದೆ. ಮಹೇಶ್ ಬಾಬು ನಟನೆಯ ಮುಂದಿನ ಚಿತ್ರ 28ನೇ ಚಿತ್ರವಾಗಿದ್ದು ದಿನದಿಂದ ದಿನಕ್ಕೆ ಚಿತ್ರತಂಡ ಪಾತ್ರವರ್ಗ ಹಿರಿದಾಗುತ್ತಿದೆ. ಇದೀಗ ಮಹೇಶ್ ಬಾಬು ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟಿ ರೇಖಾ ಎಂಟ್ರಿಕೊಟ್ಟಿದ್ದಾರೆ. `ಸರ್ಕಾರು ವಾರಿ ಪಾಟ’ ಚಿತ್ರದ ಗೆಲುವಿನ ನಂತರ ನಿರ್ದೇಶಕ ತ್ರಿವಿಕ್ರಮ್ ಜೊತೆ ಪ್ರಿನ್ಸ್ ಮಹೇಶ್ ಬಾಬು ಕೈಜೋಡಿಸಿದ್ದಾರೆ. ಹೊಸ ಬಗೆಯ ಪಾತ್ರದಲ್ಲಿ ಬರಲು ನಟ ರೆಡಿಯಾಗಿದ್ದಾರೆ. ಸದ್ಯ ಮಹೇಶ್ ಬಾಬು ಚಿತ್ರಕ್ಕೆ ಸಾಥ್ ನೀಡಲು ನಟಿ ರೇಖಾ ಆಗಮಿಸುತ್ತಿದ್ದಾರೆ. ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿ ರೇಖಾ ನಟಿಸುತ್ತಿದ್ದಾರೆ. ರೇಖಾ ಪಾತ್ರ ಈ ಸಿನಿಮಾದಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತಿದ್ದು, ಕಥೆ ಕೇಳ್ತಿದ್ದಂತೆ ಖುಷಿಯಿಂದ ಸೌತ್ ಸಿನಿಮಾದಲ್ಲಿ ನಟಿಸಲು ನಟಿ ಓಕೆ ಎಂದಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಮಹೇಶ್ ಬಾಬು ನಾಯಕಿಯರಾಗಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ ಮತ್ತು `ಗಾಳಿಪಟ 2′ ನಾಯಕಿ ಸಂಯುಕ್ತಾ ಮೆನನ್…
ಟಾಲಿವುಡ್ ಬ್ಯೂಟಿ ನಟಿ ಸಮಂತಾ ಮೈಯೋಸಿಟಿಸ್ ಕಾಯಿಲೆಯ ಜೊತೆ ಸೆಣಸಾಡುತ್ತಲೇ ಜೀವನ ಸಾಗಿಸುತ್ತಿದ್ದಾರೆ. ಎಷ್ಟೇ ನೋವಿದ್ದರೂ ಕುಗ್ಗದೇ ಸಿನಿಮಾಗಳನ್ನ ಮಾಡುತ್ತ ತಮ್ಮ ಒಂಟಿ ಜೀವನವನ್ನ ಗಟ್ಟಿಯಾಗಿ ಎದುರಿಸುತ್ತಿದ್ದಾರೆ. ಫೀಮೇಲ್ ಓರಿಯೆಂಟೆಡ್ ಪಾತ್ರಗಳನ್ನ ಮಾಡಿ ಸೈ ಎನಿಸಿಕೊಂಡಿದ್ದು, ಇದೀಗ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಲು ಸಮಂತಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಮಂತಾ ನಾಗಚೈತನ್ಯ ಜೊತೆಗಿನ ಡಿವೋರ್ಸ್ ನಂತರ ಸಾಕಷ್ಟು ಸವಾಲುಗಳನ್ನ ಎದುರಿಸುತ್ತಿದ್ದಾರೆ. ವೈಯಕ್ತಿಕ ಜೀವನ, ಆರೋಗ್ಯ ಎಲ್ಲವೂ ಸ್ಯಾಮ್‌ಗೆ ಕೈಕೊಟ್ಟಿದೆ. ಆದರೂ ಕೂಡ ಛಲ ಬಿಡದೇ ನಟಿ ಮುನ್ನುಗ್ಗುತ್ತಿದ್ದಾರೆ. ರೀಲ್ ಮಾತ್ರವಲ್ಲ ರಿಯಲ್ ಆಗಿಯೂ ಗಟ್ಟಿಗಿತ್ತಿಯಾಗಿ ನಿಂತಿದ್ದಾರೆ. ಇನ್ನೂ ತಮ್ಮ 13 ವರ್ಷದ ಸಿನಿ ಬದುಕಿನಲ್ಲಿ ಭಿನ್ನ ಪಾತ್ರಗಳ ಮೂಲಕ ಸೈ ಎನಿಸಿಕೊಂಡಿರುವ ಸಮಂತಾ, ಮಹಿಳಾ ಪ್ರಧಾನ ಚಿತ್ರಗಳನ್ನ ಮಾಡಿ ಗೆದ್ದು ಬೀಗಿದ್ದಾರೆ. ಇತ್ತೀಚಿಗೆ `ಯಶೋದ’ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು. ಸದ್ಯದಲ್ಲೇ `ಶಾಕುಂತಲಂ’ ಚಿತ್ರ ಕೂಡ ರಿಲೀಸ್‌ಗೆ ರೆಡಿಯಿದೆ. ಈ ಬೆನ್ನಲ್ಲೇ ಮತ್ತೊಂದು ಲೇಡಿ ಓರಿಯೆಂಟೆಡ್ ಚಿತ್ರಕ್ಕೆ ಸಮಂತಾ ಓಕೆ…
ಬಾಲಿವುಡ್‌ನ ಸ್ಟಾರ್ ಕಿಡ್ ಸಾರಾ ಅಲಿ ಖಾನ್ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಹೆಸರು ಮಾಡಿಲ್ಲ. ಸೋಲಿನ ಸುಳಿಯಲ್ಲಿರುವ ಸಾರಾ ಇದೀಗ ಅಷ್ಟಾಗಿ ಸಿನಿಮಾವೇನು ಮಾಡುತ್ತಿಲ್ಲ. ಈ ಮಧ್ಯೆ ಬ್ರೇಕಪ್ ಕುರಿತು ಸಾರಾ ಮೌನ ಮುರಿದಿದ್ದಾರೆ. `ಕೇದರನಾಥ್’ ಸಿನಿಮಾದ ಮೂಲಕ ಸುಶಾಂತ್ ಸಿಂಗ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಸಾರಾ ಅಲಿ ಖಾನ್ ಬಳಿಕ ಸಿಂಬಾ, ಲವ್ ಆಜ್ ಕಲ್, `ಕೂಲಿ ನಂ 1′ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಯಾವೊಂದು ಸಿನಿಮಾ ಕೂಡ ಅವರ ಕೆರಿಯರ್‌ಗೆ ಬಿಗ್ ಬ್ರೇಕ್ ನೀಡಲಿಲ್ಲ. ಸಿನಿಮಾಗಳಲ್ಲಿ ಆಕ್ಟೀವ್ ಇಲ್ಲದೇ ಇರುವ ಹಿಂದಿನ ತಮ್ಮ ಬ್ರೇಕಪ್ ಬಗ್ಗೆ ನಟಿ ಸಾರಾ ಬಾಯ್ಬಿಟ್ಟಿದ್ದಾರೆ. 2020 ನನ್ನ ಬದುಕಿನ ಕೆಟ್ಟ ಸಮಯ ಎಂದಿದ್ದಾರೆ. ಆ ವರ್ಷ ಬ್ರೇಕಪ್‌ನಿಂದ ಶುರುವಾಯ್ತು ಎಂದಿದ್ದಾರೆ. ಕೆಟ್ಟ ಟ್ರೋಲ್‌ಗಳಿಂದ ಸಮಸ್ಯೆ ಎದುರಿಸಬೇಕಾಯಿತು. ಆದರೂ ಆಕೆಯ ಪರ್ಸನಲ್ ಲೈಫ್ ಸಮಸ್ಯೆಗಳೇ ಇದ್ದ ಕಾರಣ ಆ ಟೀಕೆಗಳು ಅಷ್ಟು ಬಾಧಿಸಿಲ್ಲ ಎಂದಿದ್ದಾರೆ. ಅಂದು ಯಾರ ಜೊತೆ ಸಾರಾ ಡೇಟ್ ಮಾಡ್ತಿದ್ದರು ಎಂದು…
ಸಿನಿಮಾರಂಗದಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಹಸೆಮಣೆ ಏರುತ್ತಿದ್ದಾರೆ. ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಸಿದ್ ಮತ್ತು ಕಿಯಾರಾ ಇತ್ತೀಚಿಗೆ ಬಳಿಕ ಕನ್ನಡದ ಗೂಗ್ಲಿ ನಟಿ ಕೃತಿ ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಪುಲ್ಕಿತ್ ಸಾಮ್ರಾಟ್ ಜೊತೆ ಕೃತಿ ಕರಬಂದ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. 2009ರಲ್ಲಿ ಬೋನಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಕೃತಿ ಆ ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲೂ ಯಶ್ ಗೆ ಜೋಡಿಯಾಗಿ `ಗೂಗ್ಲಿ’ ಚಿತ್ರದಲ್ಲಿ ನಟಿ ಸಾಕಷ್ಟು ಖ್ಯಾತಿ ಘಳಿಸಿದ್ದರು. ಇದೀಗ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತ ಅಲ್ಲಿಯೇ ಸೆಟಲ್ ಆಗಿದ್ದಾರೆ. ಈ ಮಧ್ಯೆ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಕೃತಿ ಡೇಟಿಂಗ್ ವಿಚಾರವೇನು ಇದೀಗ ಗುಟ್ಟಾಗಿ ಉಳಿದಿಲ್ಲ. ಬಾಲಿವುಡ್‌ನಲ್ಲಿ ಸದ್ಯದಲ್ಲಿಯೇ ಈ ಜೋಡಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪುಲ್ಕಿತ್ ಮತ್ತು ಕೃತಿ ಈ ವರ್ಷದ ಅಂತ್ಯದೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲಿಯೇ ಈ ಕುರಿತು ಅಧಿಕೃತ ಅಪ್‌ಡೇಟ್ ಕೂಡ ಹೊರಬೀಳಲಿದೆ…
ಟಾಲಿವುಡ್‌ನಲ್ಲಿ ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಡೇಟಿಂಗ್ ಕುರಿತು ಸಾಕಷ್ಟು ಸಮಯದಿಂದ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇತ್ತೀಚಿಗೆ ಈ ಜೋಡಿಯ ಮದುವೆಯ ಬಗ್ಗೆ ಸುದ್ದಿಯಾಗಿತ್ತು. ಈ ವರ್ಷ ಹಸೆಮಣೆ ಏರಲಿದ್ದಾರೆ ಎಂದೇ ಹೇಳಲಾಗಿತ್ತು. ಇದೀಗ ಅದಕ್ಕೆಲ್ಲಾ ನಟಿ ಲಾವಣ್ಯ ಸ್ಪಷ್ಟನೆ ನೀಡಿದ್ದಾರೆ. ತೆರೆಯ ಮೇಲೆ ವರುಣ್, ಲಾವಣ್ಯ ಜೋಡಿಯ ಕೆಮಿಸ್ಟ್ರಿ ಕಮಾಲ್ ಮಾಡಿದೆ. `ಮಿನಿಸ್ಟರ್’, ಮತ್ತು `ರಾಯಭಾರಿ’ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಎಲ್ಲೂ ಅಧಿಕೃತವಾಗಿ ಈ ಜೋಡಿ ಸ್ಪಷ್ಟನೆ ನೀಡಿಲ್ಲ. ಇತ್ತೀಚಿಗಷ್ಟೇ ತೆಲುಗಿನ ಹಿರಿಯ ನಟ ನಾಗ ಬಾಬು, ಮಗ ವರುಣ್ ಮದುವೆ ಬಗ್ಗೆ ಸದ್ಯದಲ್ಲೇ ಸಿಹಿಸುದ್ದಿ ನೀಡುತ್ತೇವೆ ಎಂದು ಹೇಳಿದರು. ಹಾಗಾಗಿ ವರುಣ್ ತೇಜ್ ಜೊತೆಗಿನ ಲಾವಣ್ಯ ಮದುವೆ ಎಂದು ಸುದ್ದಿ ಸದ್ದು ಮಾಡಿತ್ತು. ಇದೀಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ ಅನ್ನೋದು ನಿಜಕ್ಕೂ ಸುಂದರ. ಅದು ಸರಿಯಾದ ವ್ಯಕ್ತಿಯೊಂದಿಗೆ ಆಗಬೇಕು ಎಂಬುದು ನನ್ನ…
Holi 2023: ಬಣ್ಣಗಳ, ಸಂತಸದ ಹಬ್ಬವಾದ ಹೋಳಿಯನ್ನು ಈ ಬಾರಿ ಮಾರ್ಚ್ 8 ರಂದು ಆಚರಿಸಲಾಗುತ್ತಿದ್ದು, ಹೋಳಿ ಹಬ್ಬವನ್ನು ವಿಶೇಷವಾಗಿಸಲು ಸಾಕಷ್ಟು ಮಂದಿ ಈಗಾಗಲೇ ಯೋಜನೆ ರೂಪಿಸಿದ್ದಾರೆ. ಅನೇಕ ಹುಡುಗಿಯರು ಈಗಾಗಲೇ ಹೋಳಿ ಆಚರಣೆಯ ಪಾರ್ಟಿಗಳಿಗೆ ಡ್ರೆಸ್ಗಳನ್ನು ಆಯ್ಕೆ ಮಾಡಲು ಪ್ರಾರಂಭಿಸಿದ್ದಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ ನೀವು ಸ್ಟೈಲಿಶ್ ಆಗಿ ಕಾಣಬೇಕೆಂದು ಯೋಚಿಸುತ್ತಿದ್ದರೆ ಈಗಲೇ ಐಡಿಯಾಗಳನ್ನು ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಹೋಳಿ ಹಬ್ಬದಂದು ಬಿಳಿ ಬಟ್ಟೆ ಧರಿಸುವ ಸಂಪ್ರದಾಯವಿದೆ. ಅಂತಹ ಪರಿಸ್ಥಿತಿಯಲ್ಲಿ, ಬಿಳಿ ಬಟ್ಟೆಯೊಂದಿಗೆ ಕೆಲವು ಹೊಸ ನೋಟವನ್ನು ಪ್ರಯತ್ನಿಸಲು ನೀವು ಬಾಲಿವುಡ್ ನಟಿಯ ಡ್ರಸ್ ಫಾಲೋ ಮಾಡಬಹುದು.. ಬಣ್ಣಗಳ, ಸಂತಸದ ಹಬ್ಬವಾದ ಹೋಳಿ ಈ ಬಾರಿ ಮಾರ್ಚ್ 8 ರಂದು ಆಚರಿಸಲಾಗುತ್ತಿದೆ. ಹೋಳಿ ದಿನದಂದು ಬಿಳಿ ಮತ್ತು ಹಳದಿ ಸಂಯೋಜನೆಯು ತುಂಬಾ ಚೆನ್ನಾಗಿ ಕಾಣುತ್ತದೆ.
ನೀವು ಪ್ರವಾಸ ಹೋಗಲು ಯೋಚಿಸುತ್ತಿದ್ದರೆ, ಭೂತಾನ್ ನಿಮಗೆ ಉತ್ತಮ ಆಯ್ಕೆಯಾಗಿದೆ, ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಭೂತಾನ್ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಭೂತಾನ್ ಸುಂಕ-ಮುಕ್ತ ದರದಲ್ಲಿ ಚಿನ್ನವನ್ನು ಮಾರಾಟ ಮಾಡಲು ಯೋಜಿಸಿದೆ. ಇದರಿಂದಾಗಿ ಭಾರತಕ್ಕಿಂತ ಕಡಿಮೆ ಬೆಲೆಯಲ್ಲಿ ಭೂತಾನ್‌ನಲ್ಲಿ ಚಿನ್ನವನ್ನು ಕಾಣಬಹುದು. ಅನೇಕ ಭಾರತೀಯರು ಭೂತಾನ್‌ಗೆ ಭೇಟಿ ನೀಡುವುದರಿಂದ ಇದು ಭಾರತೀಯರಿಗೆ ಉತ್ತಮ ಸುದ್ದಿಯಾಗಿದೆ. ಭೂತಾನ್‌ನ ಫಾಂಟ್‌ಶೋಲಿಂಗ್ ಮತ್ತು ಥಿಂಪು ನಗರಗಳಲ್ಲಿ ಮಾರ್ಚ್ 1 ರಿಂದ ಚಿನ್ನ ಖರೀದಿಗೆ ಲಭ್ಯವಿರುತ್ತದೆ. ಚಿನ್ನವನ್ನು ಸಾಮಾನ್ಯವಾಗಿ ಐಷಾರಾಮಿ ಸರಕುಗಳನ್ನು ಮಾರಾಟ ಮಾಡುವ ಸುಂಕ ಮುಕ್ತ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇದು ಭೂತಾನ್ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಭೂತಾನ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಿರ್ಧರಿಸಿದೆ. ಆದ್ದರಿಂದ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಸುಂಕ ರಹಿತ ಚಿನ್ನವನ್ನು ಮಾರಾಟ ಮಾಡಲು ಭೂತಾನ್ ನಿರ್ಧರಿಸಿದೆ. ಇನ್ನು ಸುಸ್ಥಿರ ಅಭಿವೃದ್ಧಿ ಶುಲ್ಕ (SDF) ಪಾವತಿಸುವ ಪ್ರವಾಸಿಗರು ಭೂತಾನ್‌ನ ಥಿಂಪು ಮತ್ತು ಪುಟ್‌ಶೋಲಿಂಗ್ ನಗರಗಳಿಂದ ಸುಂಕ ರಹಿತ ಚಿನ್ನವನ್ನು ಖರೀದಿಸಬಹುದು. ಹೊಸ ಬೆಲೆಯ…