Author: Prajatv Kannada

ತುಮಕೂರು: ಜಿ.ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವ ವೇಳೆ ಕಿಡಿಗೇಟಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಕೊರಟಗೆರೆಯ ಮಿನಿ ವಿಧಾನಸೌಧದ ಬಳಿ ಈ ಗಟನೆ ನಡೆದಿದ್ದು, ಈ ವೇಳೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಮಹಿಳಾ ಪೋಲಿಸ್‌ ಸಿಬ್ಬಂದಿಗೆ ಗಂಭಿರಗಾಯವಾಗಿದ್ದು, ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸೇಬಿಗಾಗಿ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಲಾಠಿಚಾರ್ಜ್​​ ಮಾಡಿರುವಂತಹ ಘಟನೆ ನೆಲಮಂಗಲದಲ್ಲಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮುಖಂಡರು ಆ್ಯಪಲ್​ ಹಾರ ಹಾಕಿದ್ದರು. ಈ ವೇಳೆ ಹಾರದಲ್ಲಿದ್ದ ಸೇಬು ಕಿತ್ತುಕೊಳ್ಳಲು ಕಾರ್ಯಕರ್ತರ ನಡುವೆ ತಳ್ಳಾಟ ಉಂಟಾಗಿದೆ. ಹಾಗಾಗಿ ಲಾಠಿ ಪ್ರಹಾರ ನಡೆಸಿ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದ್ದಾರೆ.

Read More

ಬೆಳಗಾವಿ: 2018ರ ವಿಧಾನಸಭೆ ಚುನಾವಣೆ, ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ಲಕ್ಷ್ಮೀ ಹೆಬ್ಬಾಳಕರ್ ಹಸಿರು ಸೀರೆ ಧರಿಸಿದ್ದರು. ಈಗ ತಮ್ಮ ನಾಮಪತ್ರ ಸಲ್ಲಿಸುವಾಗಲೂ ಅದೇ ಹಸಿರು ಸೀರೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮಿಂಚಿದ್ದು ವಿಶೇಷವಾಗಿತ್ತು. ಈ ಹಸಿರು ಸೀರೆಯನ್ನು ಅವರ ತಾಯಿ ಗಿರಿಜಾ ಅವರು ನೀಡಿದ್ದಾರೆ. ಈ ಸೀರೆ ಶುಭ ಸಂಕೇತವಾಗಿರುವುದರಿದ ಹೆಬ್ಬಾಳಕರ್ ಅವರು ಇದನ್ನೇ ಧರಿಸಿ ನಾಮಪತ್ರ ಸಲ್ಲಿಸಿದರು. ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ನೀಡಿದ ಆಶೀರ್ವಾದ ಹೂ ಸಹಿತ ಡಬ್ಬಿಯಲ್ಲಿ ತಂದಿದ್ದರು. ಈ ಡಬ್ಬಿಯನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಪ್ರತಿ ನಾಮಪತ್ರ ಸಲ್ಲಿಸುವಾಗಲೂ ಹೆಬ್ಬಾಳಕರ್ ದೇವಿಯ ಹೂ ತರುವುದು ವಿಶೇಷ.

Read More

ಮೈಸೂರು: ವರುಣಾ ಕ್ಷೇತ್ರದಿಂದ (Varuna Constituency) ಕಣಕ್ಕಿಳಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ಬೆಳಗ್ಗೆ ಹುಟ್ಟೂರು ಸಿದ್ದರಾಮನಹುಂಡಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಮನೆ ದೇವರು ಸಿದ್ದರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ನಂತರ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿ ಹಾಗೂ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಿಗೂ ಭಕ್ತಿಭಾವದಿಂದ ಪೂಜೆ ಸಲ್ಲಿಸಿದ್ದಾರೆ. ಬಳಿಕ ನಂಜಗೂಡಿನಲ್ಲಿ (Nanjangud) ನಡೆದ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ನನಗೆ ಕೊನೆಯ ಚುನಾವಣೆ, ಹಾಗಾಗಿ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆ, ಆಮೇಲೆ ಯತೀಂದ್ರ, ಧವನ್ ರಾಕೇಶ್ ಇದ್ದಾರೆ. ಧವನ್‌ ರಾಜಕೀಯಕ್ಕೆ ಬರಲು ಇನ್ನೂ 8 ವರ್ಷ ಬೇಕು. ಓದು ಮುಗಿಸಿದ ನಂತರ ರಾಜಕಾರಣಕ್ಕೆ ಬರುತ್ತಾನೆ. ರಾಕೇಶ್‌ ಮೇಲೆ ಇದ್ದ ಪ್ರೀತಿಯನ್ನ ಅವನ ಮಗನ ಮೇಲೂ ತೋರಿಸುತ್ತಿದ್ದೀರಿ ಅದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಬಿಜೆಪಿ (BJP) ಅವರು ಬೆಂಗಳೂರಿನ ನಿವಾಸಿ ಸೋಮಣ್ಣ (V Somanna) ಅವರನ್ನ ಕಣಕ್ಕಿಳಿಸಿದೆ.…

Read More

ಬಾಗಲಕೋಟೆ : ಕಳೆದ ಮೂರು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದೇನೆ. ಉತ್ತರ ಕರ್ನಾಟಕದಲ್ಲಂತೂ ಎಲ್ಲೆಡೆ ಆಮ್ ಆದ್ಮಿ ಪಕ್ಷಕ್ಕೆ ಮಹತ್ವ ದೊರಕುತ್ತಿದ್ದು, ಈ ಬಾರಿ ಕರ್ನಾಟಕ ರಾಜ್ಯದ ಜನತೆ ಆಪ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದರು. ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ತೇರದಾಳ ಕ್ಷೇತ್ರದ ಆಪ್‌ಅಭ್ಯರ್ಥಿ ಅರ್ಜುನ ಹಲಗಿಗೌಡರ ಪರ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ರಾಜ್ಯದಲ್ಲಿಯೂ ಇದೇ ಪರಿಸ್ಥಿತಿಯಿತ್ತು. ಕಟ್ಟಕಡೆಯ ಮತದಾರ ಆಮ್ ಆದ್ಮಿ ಪಕ್ಷದ ವಿಶ್ವಾಸ ಹಾಗು ದೆಹಲಿಯಲ್ಲಿ ಮಾಡಿದ ಕಾರ್ಯಗಳಿಗೆ ಆಶೀರ್ವದಿಸಿ ಸರ್ಕಾರ ಮಾಡುವದರ ಜೊತೆಗೆ ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿದ್ದಾರೆ.ಇದೇ ಮಾದರಿ ಕರ್ನಾಟಕದಲ್ಲಿಯೂ ನಡೆಯಲಿದೆ ಎಂದರು. ಸರ್ಕಾರ ರೂಪಿಸಲು ಯಾವದೇ ತಂತ್ರಗಾರಿಕೆ ಬೇಕಿಲ್ಲ. ಪ್ರಾಮಾಣಿಕ ಹಾಗು ಜನತೆಗೆ ಉದ್ಯೋಗ ಸೃಷ್ಟಿಸುವದರೊಂದಿಗೆ ರೈತರಿಗೆ ಒಳಿತಾಗುವ ಕಾರ್ಯದಲ್ಲಿ ತೊಡಗುವಲ್ಲಿ ಆಪ್ ನಿಸ್ಸೀಮವಿದೆ. ಇದೊಂದು ವಿಶ್ವಾಸದಿಂದ ಸರ್ಕಾರ ನಿಶ್ಚಿತವಾಗಿದ್ದು, ಎಲ್ಲೆಡೆ ಅಭ್ಯರ್ಥಿಗಳು ಭರದಿಂದ ಪ್ರಚಾರದಲ್ಲಿ ತೊಡಗಿದ್ದು, ಹೊಸ ಪ್ರಯೋಗದಲ್ಲಿ ವಿನೂತನ ಸಾಧನೆ ಆಪ್ ಮಾಡಲಿದೆ…

Read More

ಶಿವಮೊಗ್ಗ: ಶಿಕಾರಪುರ ವಿಧಾನಸಭಾ ಕ್ಷೇತ್ರ (Shikaripur Assembly Constituency) ಅಭ್ಯರ್ಥಿ ಬಿವೈ ವಿಜಯೇಂದ್ರ (BY Vijayendra) ಅವರು ಇಂದು (ಏ.19) ರಂದು ನಾಮಪತ್ರ ಸಲ್ಲಿಸಲು ಬಿಎಸ್​ ಯಡಿಯೂರಪ್ಪ (BS Yediyurappa) ಅವರೊಂದಿಗೆ ಲಕ್ಕಿ ಅಂಬಾಸಿಡರ್​ ಕಾರಿನಲ್ಲಿ ಹೋಗಿದ್ದು ವಿಶೇಷವಾಗಿತ್ತು. ಬಿವೈ ವಿಜಯೇಂದ್ರ ಅವರು ಈ ಅಂಬಾಸಿಡರ್ (Ambassador) ಕಾರಿನಲ್ಲಿ ಹೋಗಲು ಕಾರಣವೂ ಇದೆ. ಬಿಎಸ್​ ಯಡಿಯೂರಪ್ಪ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾಗ ಇದೇ ಅಂಬಾಸಿಡರ್ ಕಾರನ್ನು ಬಳಸಿದ್ದರು. ಈ ಕಾರಿನಲ್ಲಿಯೇ ರಾಜ್ಯವನ್ನು ಸುತ್ತುತ್ತಿದ್ದರು. ಅಲ್ಲದೇ ಬಿಎಸ್​ ಯಡಿಯೂರಪ್ಪ ಅವರು ನಾಮಪತ್ರ ಸಲ್ಲಿಸಲು ಹೋಗುವಾಗ ಕೂಡ ಇದೇ ​ಕಾರನ್ನು ಬಳಸುತ್ತಿದ್ದರು. ಈ ಕಾರು ಬಿಎಸ್​ ಯಡಿಯೂರಪ್ಪ ಅವರಗೆ ಲಕ್ಕಿ ಕಾರ್ ಆಗಿದೆ. ಈ ಹಿನ್ನೆಲೆ ಪುತ್ರನ ನಾಮಪತ್ರಿಕೆ ಸಲ್ಲಿಕೆಗೆ ಹೋಗುವಾಗಲೂ ಲಕ್ಕಿ ಕಾರನ್ನೇ ಬಳಸಿದ್ದಾರೆ. ಇನ್ನು ಬಿಎಸ್​ ಯಡಿಯೂರಪ್ಪ ಅವರು ಈ ಬಾರಿ ಚುನಾಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ತಮ್ಮ ಕ್ಷೇತ್ರವನ್ನು ಶಿಕಾರಿಪುರವನ್ನು ಪತ್ರ, ಬಿವೈ ವಿಜಯೇಂದ್ರ ಅವರಿಗೆ ಬಟ್ಟುಕೊಟ್ಟಿದ್ದಾರೆ. ಈ ಹಿನ್ನೆಲೆ ಈ…

Read More

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿದ್ದು ಘಟಾನುಘಟಿ ನಾಯಕರು ಆಯಾ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕಂಪ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ರಾಜು ನಾಯಕ್ ಅವರು ಚುನಾವಣಾ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೊದಲು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ರೋಡ್ ಶೋ ಮೂಲಕ ಬಾರೀ ಜನ ಬೆಂಬಲದೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.ಈ ವೇಳೆ ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ ಅವರು ಭಾಗಿಯಾಗಿದ್ರು. ಶ್ರೀ ರಾಜು ನಾಯಕ್ ಅವರಿಗೆ ಬೆಂಬಲವಾಗಿ ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ ಉಪಸ್ಥಿತರಿದ್ದು ಅವರ ನೇತೃತ್ವದಲ್ಲೇ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು ಕೂಡ ಉತ್ಸಾದಿಂದ ಭಾಗಿಯಾಗಿ ಜೆಡಿಎಸ್ ಅಭ್ಯರ್ಥಿ ರಾಜು ನಾಯಕ್ ಗೆ ಬೆಂಬಲ ಸೂಚಿಸಿದರು.

Read More

ಹುಬ್ಬಳ್ಳಿ: ಅಂದು ಆ ಗ್ರಾಮದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಇನ್ನೆನು ಜಾತ್ರೆ ಮುಗಿಯಬೇಕಿತ್ತು. ಆದ್ರೆ ಅಲ್ಲಿ ಎರಡು ಗುಂಪುಗಳ ನಡುವಿನ ಜಗಳ ಬಿಡಿಸಿದ್ದೆ ಆತನ ಜೀವಕ್ಕೆ ಕುತ್ತು ತಂದಿದೆ..ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆಗೆ ಧಾರವಾಡ ಮತ್ತೊಮ್ಮೆ ಬೆದರಿದೆ..ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹೌದು!!! ಹೀಗೆ ಶವಾಗಾರದ ಬಳಿ ಜಮಾಯಿಸಿರುವ ಜನರು..ಆಸ್ಪತ್ರೆ ಸುತ್ತಮುತ್ತ ಪೊಲೀಸರ ದಂಡು..ಅಷ್ಟಕ್ಕೂ ಇಲ್ಲಿ ಏನೋ ನಡೆಯಬಾರದ ಘಟನೆ ನಡೆದಿದೆ ಅನ್ನೋದಕ್ಕೆ ಇವೆಲ್ಲವೂ ಸಾಕ್ಷಿ..ಹೌದು ನಿನ್ನೆ ಗ್ರಾಮದೇವತೆ ಉಡಚಮ್ಮದೇವಿ ಜಾತ್ರೆಯ ವೇಳೆಯಲ್ಲೇ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ..ಧಾರವಾಡ ಜಿಲ್ಲೆಯ ಕೋಟೂರು ಗ್ರಾಮದ ಪ್ರವೀಣ್ ಕಮ್ಮಾರ ನಿನ್ನೆ ಹತ್ಯೆಯಾಗಿದ್ದಾನೆ..ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ ಪರ ಅಬ್ಬರದ ಪ್ರಚಾರ ಮಾಡಿ ಮನೆಗೆ ತೆರಳಿದ್ದ ಪ್ರವೀಣ ಗ್ರಾಮದ ಜಾತ್ರೆಯಲ್ಲಿ ಭಾಗಿಯಾಗಿದ್ದ. ಈ ವೇಳೆ ಕೆಲ ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಬೇರೆ ಗುಂಪಿನೊಂದಿಗೆ ಜಗಳಕ್ಕೆ ನಿಂತಿದ್ರು, ಇದನ್ನು ಗಮನಿಸಿದ್ದ ಪ್ರವೀಣ್ ಜಗಳ ಬಿಡಿಸಿ ಇಬ್ಬರಿಗೂ ಬೈದು ಕಳಿಸಿದ್ದ..ಇದನ್ನೇ ಟಾರ್ಗೆಟ್ ಮಾಡಿದ…

Read More

ಹಾವೇರಿ: ಬೊಮ್ಮಾಯಿ ಮಾಮಾನನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕಿಚ್ಚ ಸುದೀಪ್‌ (Sudeep) ಶಿಗ್ಗಾಂವಿ (Shiggaon) ಮತದಾರರಲ್ಲಿ ಮನವಿ ಮಾಡಿದರು. ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommi) ಅವರ ರೋಡ್‌ ಶೋ ನಡೆಸಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಮಾನಿಗೆ ಸಿಕ್ಕಿರುವ ಅವಧಿ ಬಹಳ ಕಡಿಮೆ. ಇಷ್ಟು ಜನ ಸೇರಿದ್ದೀರಿ ಅಂದರೆ ಅವರು ಮಾಡಿದ ಕೆಲಸ ಗೊತ್ತಾಗುತ್ತದೆ. ಅವರ ಪರವಾಗಿ ನಾನು ಬಂದಿದ್ದೇನೆ. ಜನರಿಗೆ ಒಳ್ಳೆಯದು ಆಗಬೇಕಬೇಕಾದರೆ ಮತ್ತೊಮ್ಮೆ ನೀವು ಅವರನ್ನು ಗೆಲ್ಲಿಸಬೇಕು ಎಂದು ವಿನಂತಿ ಮಾಡಿದರು. ಮೊದಲ ಬಾರಿಗೆ ನಾನು ಈ ಊರಿಗೆ ಬಂದಿದ್ದೇನೆ. ಬಹಳ ಸುಂದರವಾಗಿ ನನ್ನನ್ನು ಸ್ವಾಗತ ಮಾಡಿದ್ದೀರಿ. ಸಂತ ಶಿಶುನಾಳ ಶರೀಫರ ಭೂಮಿಯಲ್ಲಿ ಪ್ರಚಾರ ಆರಂಭಿಸಿದ್ದು ಬಹಳ ಸಂತಸ ತಂದಿದೆ. ಗೆದ್ದೇ ಗೆಲ್ಲುವೆ ಒಂದು ದಿನ. ಅಭಿವೃದ್ಧಿ ಆಗಬೇಕೆಂದರೆ ಮತ್ತೆ ಬೊಮ್ಮಾಯಿ ಅವರಿಗೆ ಮತ್ತೊಂದು ಅವಕಾಶ ನೀಡಿ ಎಂದರು. ನಿಮ್ಮ ಬೆಂಬಲ ಇದ್ದರೆ ಕೆಲಸ ಆಗುತ್ತದೆ. ನಾನು ಕೆಲಸ ಆಗುವವರ ಪರ ಇರುತ್ತೇನೆ . ನಾನು…

Read More

ಚಿತ್ರದುರ್ಗ/ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಟಿಕೆಟ್ ಹಂಚಿಕೆ ಸಂಬಂಧ ಬಿಜೆಪಿಯಲ್ಲಿ ಬಂಡಾಯ ಜೋರಾಗಿದೆ. ಟಿಕೆಟ್ ಸಿಗದೆ ಇದ್ದವರು ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿದ್ದಾರೆ. ಅದರಂತೆ ಇದೀಗ ಬಿಜೆಪಿ ಎಂಎಲ್ಸಿ (MLC) ಆಯನೂರು ಮಂಜುನಾಥ್(Ayanur Manjunath) ಜೆಡಿಎಸ್(JDS)ಗೆ ಸೇರ್ಪಡೆಯಾಗಿದ್ದಾರೆ. ಇಂದು(ಏ.19) ಚಿತ್ರದುರ್ಗ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಬಾವುಟ ಕೊಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಇದೇ ವೇಳೆ ಬಿ ಫಾರಂ ನೀಡುವ ಮೂಲಕ ಶಿವಮೊಗ್ಗ ಕ್ಷೇತ್ರದಿಂದಲೇ ಕಣಕ್ಕಿಯಲು ಆಯನೂರು ಮಂಜುನಾಥ್ ಸಜ್ಜಾಗಿದ್ದು, ಸಂಜೆ 4ಕ್ಕೆ ಆಯನೂರು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಜೊತೆಗೆ ನಾಳೆ(ಏ.20) ಜೆಡಿಎಸ್ ಅಭ್ಯ ರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಶಿವಮೊಗ್ಗದಲ್ಲಿಂದು ಬೆಳ್ಳಂಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಆಯನೂರು ಮಂಜುನಾಥ್, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ತೆರಳಿ ಸಭಾಪತಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡುವೆ. ಅಲ್ಲದೇ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನಾಳೆ…

Read More

ಹಾವೇರಿ: ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿಯವರು ನಾಮ ಪತ್ರ ಸಲ್ಲಿಕೆಗೆ ಹೊಗುತ್ತಿದ್ದಾರೆ. ಇವರ ನಾಮಪತ್ರ ಸಲ್ಲಿಕೆ ಕೆವಲ ಶಾಸಕ ಸ್ಥಾನಕ್ಕಾಗಿ ಅಲ್ಲ. ಈ ರಾಜ್ಯವನ್ನು ಹೊಸ ದಿಕ್ಕಿಗೆ ಒಯ್ಯುವ ಕಾರ್ಯ ಆಗಲಿದೆ. ನಿಮ್ಮಲ್ಲಿರುವ ಆತ್ಮ ವಿಶ್ವಾಸ, ಉತ್ಸಾಹ ನೋಡಿದರೇ ಬೊಮ್ಮಾಯಿ ಅವರಿಗೆ ಮುಂದಿನ ಐದು ವರ್ಷಗಳ ಕಾಲ ಮತ್ತೆ ಅವಕಾಶ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳುವ ಮೂಲಕ ಪರೋಕ್ಷವಾಗಿ ಬಸವರಾಜ ಬೊಮ್ಮಾಯಿ ಮತ್ತೆ ಸಿಎಂ ಆಗುವ ಸುಳಿವು ನೀಡಿದ್ದಾರೆ. ಶಿಗ್ಗಾಂವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಂದ್ರೆ ಕಮಿಷನ್. ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ. ಕಾಂಗ್ರೆಸ್ ನಾಯಕರು ಎಟಿಎಂ ಇದ್ದಂತೆ. ವಂದೇ ಭಾರತ ರೈಲು ಇಲ್ಲಿ ಓಡಾಡುತ್ತಿದೆ. ರಾಜ್ಯದಲ್ಲಿ ಅನೇಕ ಹೊಸ ರೈಲುಗಳು ಸಂಚಾರ ಮಾಡುತ್ತಿವೆ. ರಾಜ್ಯದಲ್ಲಿ ರೈಲು ಸಂಚಾರಗಳ ಸಂಖ್ಯೆ ಹೆಚ್ಚಿಗೆ ಆಗಬೇಕಾದರೇ ಬಿಜೆಪಿಗೆ ಮತ ಕೊಡಿ. ಆಯುಷ್ಮಾನ ಭಾರತ ಯೋಜನೆಯಿಂದ ಬಡವರಿಗೆ ಅನಕೂಲ ಆಗುತ್ತಿದೆ. ಈ ಯೋಜನೆ ಮುಂದುವರೆಯಲು ಬಿಜೆಪಿ ಮತ ಹಾಕಿ. ಸಿದ್ದರಾಮಯ್ಯ ಪಿಎಫ್​ಐ ಬ್ಯಾನ್ ಮಾಡಿದ್ದನ್ನು ಹಿಂಪಡೆಯುತ್ತೆವೆ ಎಂದು ಹೇಳುತ್ತಿದ್ದಾರೆ. ಪಿಎಫ್​ಐ ಬ್ಯಾನ್ ಮಾಡಿದ್ದರಿಂದ ರಾಜ್ಯದಲ್ಲಿ ಕ್ರೈಮ್ ಸಂಖ್ಯೆ ಕಡಿಮೆ ಆಗಿದೆ. ಬೊಮ್ಮಾಯಿಯವರಿಂದ ರಾಜ್ಯದಲ್ಲಿ ಅಪರಾಧ ಸಂಖ್ಯೆ ಕಡಿಮೆ ಆಗಿದೆ. ಇಂದು ರಾಜ್ಯದಲ್ಲಿನ ಅನೇಕ ಕ್ರಿಮಿನಲ್​ಗಳು ಜೈಲಿನಲ್ಲಿದ್ದಾರೆ ಎಂದು ಬೊಮ್ಮಾಯಿ ಸರ್ಕಾರವನ್ನು ಹಾಡಿ ಹೊಗಳಿದರು.

Read More