ವಾಷಿಂಗ್ಟನ್: ಸೀಟ್ ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತ ಹಾಗೂ ಬಿಗಿಯಾಗಿಲ್ಲ ಎಂದು ಕಾರಣಕ್ಕೆ ಟೆಸ್ಲಾ ಕಂಪನಿ 3,470 ಕಾರುಗಳನ್ನ ಹಿಂದಕ್ಕೆ ಪಡೆದಿದೆ. ಅಮೆರಿಕದಲ್ಲಿ ಬಿಡುಗಡೆ ಮಾಡಿದ `ಮಾಡೆಲ್ ವೈ’ 2ನೇ ಸಾಲಿನಲ್ಲಿರುವ ಸೀಟ್ ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿಲ್ಲ ಎಂದು ಶನಿವಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಕಾರುಗಳನ್ನು ಹಿಂಪಡೆಯಲಾಗಿದೆ. ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ ಈ ಬಗ್ಗೆ ಪ್ರತಿಕ್ರಿಯಿಸಿ, ಸಡಿಲವಾದ ಸೀಟ್ ಫ್ರೇಮ್ ಬೋಲ್ಟ್, ಸೀಟ್ ಬೆಲ್ಟ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಕಡಿಮೆಮಾಡುತ್ತದೆ. ಜೊತೆಗೆ ಅಪಘಾತದ ಸಮಯದಲ್ಲಿ ಗಾಯ ಹಾಗೂ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ಟೆಸ್ಲಾ ಹೇಳಿದ್ದು, 2ನೇ ಸಾಲಿನ ಡ್ರೈವರ್ ಸೈಡ್ ಮತ್ತು ಪ್ಯಾಸೆಂಜರ್ ಸೈಡ್ ಸೀಟ್ ಬ್ಯಾಕ್ ಫ್ರೇಮ್‌ಗಳ ಬೋಲ್ಟ್ಗಳನ್ನು ಪರಿಶೀಲಿಸಲಾಗುತ್ತದೆ. ಅಗತ್ಯವಿದ್ದರೆ ಅವುಗಳನ್ನು ಬಿಗಿಗೊಳಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದೆ.
Author: Prajatv Kannada
ನವದೆಹಲಿ: ಗುರುವಾರ ಪ್ರಕಟವಾದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ಚುನಾವಣೆಗಳಲ್ಲಿ ಬಿಜೆಪಿ ಪರವಾಗಿರುವ ವಿಧಾನಸಭಾ ಫಲಿತಾಂಶದಿಂದ ಉತ್ತೇಜಿತರಾಗಿರುವ ಪ್ರಧಾನಿ ನರೇಂದ್ರ ಮೋದಿ, ಮುಂದಿನ ದಿನಗಳಲ್ಲಿ ಅದೇ ಮಾದರಿಯಲ್ಲಿ ಎಡಪಕ್ಷಗಳ ಆಡಳಿತವಿರುವ ಕೇರಳದಲ್ಲೂ ಬಿಜೆಪಿ ಮೈತ್ರಿ ಸರಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ತ್ರಿಪುರಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಡ-ಕಾಂಗ್ರೆಸ್ ಮೈತ್ರಿಯನ್ನು ವ್ಯಂಗ್ಯವಾಡಿದ ಪ್ರಧಾನಿ, ಈ ಪಕ್ಷಗಳು ಕೇರಳವನ್ನು ಲೂಟಿ ಮಾಡುತ್ತಿವೆ ಎಂದು ಹೇಳಿದರು. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ನಾವು ಸರ್ಕಾರ ರಚಿಸುವ ರೀತಿಯಲ್ಲಿ ಬಿಜೆಪಿ ಮೈತ್ರಿಕೂಟವು ಮುಂದಿನ ದಿನಗಳಲ್ಲಿ ಕೇರಳದಲ್ಲಿ ಸರ್ಕಾರ ರಚಿಸುತ್ತದೆ ಎಂಬ ನನಗೆ ವಿಶ್ವಾಸವಿದೆ ಎಂದು ಹೇಳಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪಿಎಂ ಮೋದಿ, “ಇಂದಿನ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ಫಲಿತಾಂಶಗಳ ನಂತರ, ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಸಣ್ಣ ರಾಜ್ಯಗಳ ಬಗ್ಗೆ ಇರುವ ಅಸಡ್ಡೆ, ದ್ವೇಷ ಬಹಿರಂಗವಾಗಿದೆ. ಈ ಸಣ್ಣ ರಾಜ್ಯಗಳು ಮತ್ತು ಅವುಗಳ ಫಲಿತಾಂಶಗಳು ದೊಡ್ಡ ವಿಷಯವಲ್ಲ ಎಂದು ಅವರು ಹೇಳುತ್ತಾರೆ. ಚುನಾವಣಾ ಫಲಿತಾಂಶದ ಕುರಿತು…
ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಕಾಂಗ್ರೆಸ್ ವಕ್ತಾರ (Congress Spokesperson) ಕೌಸ್ತವ್ ಬಾಗ್ಚಿ (Kaustav Bagchi) ಅವರನ್ನು ಬಂಧಿಸಲಾಗಿದೆ.ಪಶ್ಚಿಮ ಬಂಗಾಳದ ರ‍್ರಾಕ್‌ಪೋರ್‌ನಲ್ಲಿರುವ ಬಾಗ್ಚಿ ಅವರ ನಿವಾಸಕ್ಕೆ ಬುರ್ಟೊಲ್ಲಾ ಪೊಲೀಸ್ ಠಾಣೆಯ ಬೃಹತ್ ತಂಡ ದಾಳಿ ನಡೆಸಿ ಅವರನ್ನು ಬಂಧಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹೇಳಿಕೆ ನೀಡಿರುವ ಹಿನ್ನೆಲೆ ಶುಕ್ರವಾರ ಕೌಸ್ತವ್ ಬಾಗ್ಚಿ ವಿರುದ್ಧ ಬುರ್ಟೊಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಾಗರ್ದಿಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದು, ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರ ಮೇಲೆ ವೈಯಕ್ತಿಕ ದಾಳಿ ನಡೆಸಲಾಗಿತ್ತು. ಇದಾದ ಬಳಿಕ ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಬಾಗ್ಚಿ ಟೀಕಿಸಿದ್ದರು.
ನವದೆಹಲಿ: ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಿಬಿಐ ಕಸ್ಟಡಿ ಅವಧಿಯನ್ನು ಮಾರ್ಚ್ 6ರವರೆಗೆ ವಿಸ್ತರಿಸಿ ರೋಸ್ ಅವಿನ್ಯೂ ಕೋರ್ಟ್ ಆದೇಶ ನೀಡಿದೆ.ಐದು ದಿನಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಎಂಕೆ ನಾಗ್ ಪಾಲ್ ಅವರ ಮುಂದೆ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಹಾಜರುಪಡಿಸಿತು. ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಕೇಂದ್ರೀಯ ತನಿಖಾ ಸಂಸ್ಥೆ ನ್ಯಾಯಾಧೀಶರ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಇನ್ನೆರೆಡು ದಿನ ಸಿಬಿಐ ಕಸ್ಟಡಿಗೆ ಒಪ್ಪಿಸಿತು.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶೇಗುಣಶಿ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟದಿಂದ ಬಡ ಹಾಗು ಮದ್ಯಮ ವರ್ಗದ ಕುಟುಂಬಗಳು ಬೀದಿಗೆ ಬೀಳುತ್ತಿರುವುದರಿಂದ ಗ್ರಾಮದ ಮಹಿಳೆಯರೆಲ್ಲರೂ ಪಂಚಾಯತಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡುವುದರ ಜೊತೆಗೆ ಅಬಕಾರಿ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಮಂತ್ಲಿ ಮಾಮೂಲಿ ಪಡೆದು ಅಕ್ರಮ ಬೆಂಬಲಿಸುತ್ತಿರುವದಾಗಿ ಆರೋಪ ಮಾಡಿ ಬಾರಿ ಮನವಿ ಪತ್ರ ಸಲ್ಲಿಸಿದರು. ಗ್ರಾಮದ ಮಹಿಳೆಯರ ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳಾದ ಹಣಮಂತ ವಜ್ರಮಟ್ಟಿ, ಸಿಪಿಐ ಸಂಜಯ ಅಸ್ಕಿ ಪಿಎಸ್ಐ ಕಿರಣ್ ಜೂಲ್ಪಿ, ಪಿಎಸ್ಐ ದತ್ತಗುರು ಅಥಣಿ, ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕೂಡಲೇ ಸಮಸ್ಯೆಗೆ ಸ್ಪಂದಿಸಿದ್ದು ಅಕ್ರಮ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕ್ಕೊಳ್ಳುವುದಾಗಿ ಭರವಸೆ ನೀಡಿದರು.
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಕೆ ಹೆಚ್ ಪುಟ್ಟಸ್ವಾಮಿ ಗೌಡ ನೇತೃತ್ವದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಆಚರಿಸಲಾಯಿತು. ಗೌರಿಬಿದನೂರು ನಗರ ಹೊರವಲಯದ ಬೈಪಾಸ್ ನಲ್ಲಿ ತಿರುಪತಿಯಿಂದ ಅದ್ದೂರಿ ಸೆಟ್ ನ್ನ ಹಾಕಿ ಥೇಟ್ ತಿರುಪತಿಯಲ್ಲಿ ಆಚರಿಸುವಂತೆ ಕಲ್ಯಾಣೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಕಲ್ಯಾಣೋತ್ಸವದಲ್ಲಿ ತಿರುಮಲದ ಅರ್ಚಕರು ಆಗಮಿಸಿ ಹೋಮ ಹವನ ನಡೆಸಿಕೊಟ್ಠರು.. ಈ ವೇಳೆ ಕೆ ಹೆಚ್ ಪಿ ಫೌಂಡೇಷನ್ ನ ಅಧ್ಯಕ್ಷ ಪುಟ್ಟಸ್ವಾಮಿ ಗೌಡ. ಮಾಜಿ ಶಾಸಕಿ ಜ್ಯೋತಿ ರೆಡ್ಡಿ . ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹೆಚ್ ವಿ ಮಂಜುನಾಥ್ . ರಾಘವೇಂದ್ರ ಹನುಮಾನ್ . ಮುಖಂಡ ಅಶೋಕ್ ಸ್ಥಳೀಯ ಮುಖಂಡರು ಸೇರಿದಂತೆ ಐವತ್ತು ಸಾವಿರಕ್ಕೂ ಹೆಚ್ಚು ಜನ ಬಾಗಿಯಾಗಿ ಭಕ್ತಿ ಭಾವ ಮೆರೆದರು. ಈ ವೇಳೆ ತಿರುಪತಿಯಿಂದ ತಂದಿದ್ದ ಲಡ್ಡು ವಿತರಿಸಲಾಯಿತು..
ಹಾಸನ: ಇದೆ ತಿಂಗಳು ರಂದು ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ ಮತ್ತು ಹಾಸನ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಯೋಜನೆಗಳನ್ನು ಪಡೆದಿರುವ ಕುಟುಂಬಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಕೇಂದ್ರ ಹಾಗೂ ರಾಜ್ಯ ಸಚಿವರು ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ನಿಮಿತ್ತ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಾಸಕ ಪ್ರೀತಂ ಗೌಡ ಅವರ ನೇತೃತ್ವದಲ್ಲಿ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ತಯಾರಿ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಲಕ್ಷಾಂತರ ಜನ ರಾಜ್ಯ ಹಾಗೂ ಕೇಂದ್ರದ ವಿವಿಧ ಯೋಜನೆಗಳನ್ನು ಪಡೆದಿರುವವರ ಜೊತೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಸಮ್ಮೇಳನಕ್ಕೆ ಮುಖ್ಯಮಂತ್ರಿ…
ಹಾಸನ: ಸಿಲಿಂಡರ್ ಬೆಲೆ ಸೇರಿದಂತೆ ದಿನನಿತ್ಯ ಬಳಸುವ ಅಗತ್ಯ ಪದಾರ್ಥಗಳ ಬೆಲೆ ಏರಿಕೆ ವಿರೋಧಿಸಿ ರಾಜ್ಯ- ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಡಿಸಿ ಕಛೇರಿ ಆವರಣಕ್ಕೆ ಬಂದ ಅವರು, ೪೦ಪರ್ಸೆಂಟ್ ಕಮಿಷನ್ ಸಿಲೆಂಡರ್, ಅಗತ್ಯ ಬೆಲೆ ಏರಿಕೆ: ಕಾಂಗ್ರೆಸ್ ಪ್ರತಿಭಟನೆ ಬಿಜೆಪಿಯಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಕ್ಷಣೆ: ಆಕ್ರೋಶ ಸರಕಾರ ಮತ್ತು ಬಡವರ ವಿರೋಧಿ ಸರ್ಕಾರ ಎಂದು ಕಾಂಗ್ರೆಸ್ ಕಾರ್ಯಕರ್ತರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಕಾಲ ಧರಣಿ ನಡೆಸಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮತ್ತು ಜಿಲ್ಲಾ ಘಟಕದ ವಕ್ತಾರ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮತ್ತು ಬನವಾಸೆ ರಂಗಸ್ವಾಮಿ ಮಾತನಾಡುತ್ತಾ, ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆ ಸಾಮಾನ್ಯ ಜನರು ಕೂಡ ತತ್ತರಿಸಿ ಹೋಗಿರುವ ಕಾಲದಲ್ಲಿ ಗ್ಯಾಸ್ ಬೆಲೆ ಗಗನಕ್ಕೇರಿದೆ.…
ಸೂರ್ಯೋದಯ: 06.34 AM, ಸೂರ್ಯಾಸ್ತ : 06.29 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಫಾಲ್ಗುಣ ಮಾಸ, ಶಿಶಿರ ಋತು,ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಇವತ್ತು ತ್ರಯೋದಶಿ 02:07 PM ತನಕ ನಂತರ ಚತುರ್ದಶಿ ನಕ್ಷತ್ರ: ಇವತ್ತು ಆಶ್ಲೇಷ 09:30 PM ತನಕ ನಂತರ ಮಖ ಯೋಗ: ಇವತ್ತು ಅತಿಗಂಡ 08:21 PM ತನಕ ನಂತರ ಸುಕರ್ಮಾ ಕರಣ: ಇವತ್ತು ಕೌಲವ 12:56 AM ತನಕ ನಂತರ ತೈತಲೆ 02:07 PM ತನಕ ನಂತರ ಗರಜ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ:03:00 ನಿಂದ 04:30 ವರೆಗೂ ಅಮೃತಕಾಲ: 07.43 PM to 09.30 PM ಅಭಿಜಿತ್ ಮುಹುರ್ತ: ಮ.12:04 ನಿಂದ ಮ.12:51 ವರೆಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.…
ಮಂಗಳೂರು: ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳಹರಿವು ಒಂದೇ ಸವನೆ ಕಡಿಮೆಯಾಗಿದ್ದು, ಏಪ್ರಿಲ್ ತಿಂಗಳಾಂತ್ಯದೊಳಗೆ ಬೇಸಿಗೆ ಮಳೆ ಬಾರದಿದ್ದರೆ ನಗರದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ. ಪ್ರಸ್ತುತ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರು 50ರಿಂದ 55 ದಿನಕ್ಕಷ್ಟೇ ಪೂರೈಕೆಯಾಗಬಹುದಾಗಿದೆ ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಶುಕ್ರವಾರ ಸಂಜೆಯ ವೇಳೆಗೆ ನೀರಿನ ಮಟ್ಟ 5.85 ಮೀಟರ್ ಗೆ ಇಳಿಕೆಯಾಗಿದೆ. ಮಹಾನಗರಪಾಲಿಕೆ ಆಡಳಿತ ಮತ್ತು ನಗರದ ಜನತೆ ಈಗಲೇ ಮುಂದಾಲೋಚನೆ ಮಾಡದಿದ್ದರೆ 2019ರಲ್ಲಿ ಆದ ನೀರಿನ ಸಮಸ್ಯೆ ಈ ಬಾರಿಯೂ ನಗರವನ್ನು ಬಿಗಡಾಯಿಸಲಿದೆ. 4 ವರ್ಷದಲ್ಲೇ ಇಳಿಕೆ: ತುಂಬೆ ವೆಂಟೆಡ್ ಡ್ಯಾಂನಲ್ಲಿ ಶೇಖರಣೆಯಾಗುತ್ತಿರುವ ನೀರಿನ ಪ್ರಮಾಣ ಹೋಲಿಕೆ ಮಾಡಿದರೆ 4 ವರ್ಷದಲ್ಲೇ ಅತ್ಯಧಿಕ ಇಳಿಕೆಯಾಗಿದೆ. 2020ರ ಮಾ.3ರಂದು 6 ಮೀಟರ್ ನೀರಿದ್ದರೆ, ಆ ಬಳಿಕ ಪ್ರತಿವರ್ಷ ಈ ದಿನಕ್ಕೆ 6 ಮೀಟರ್ ನೀರಿತ್ತು. ಈ ಬಾರಿ ಮಾ.3ಕ್ಕೆ 5.85 ಮೀಟರ್‌ಗೆ ಇಳಿಕೆಯಾಗಿದ್ದು ಇದು 4 ವರ್ಷದಲ್ಲೇ ಅತೀ ಕಡಿಮೆಯಾಗಿದೆ. 2019ರ ನೀರಿನ ಬಳಕೆಯನ್ನು ಹೋಲಿಸಿದರೆ…