ವಾಷಿಂಗ್ಟನ್: ಎಂಜಾಯ್ ಮಾಡಬೇಕೆಂದು ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಜೀವನ ಪ್ರವಾಸದಲ್ಲಿಯೇ ಅಂತ್ಯವಾಗಿದೆ. ಅಮೆರಿಕದ ಈಕ್ವೆಡಾರ್ ಬೀಚ್‌ನಲ್ಲಿ ಮೂವರು ಯುವತಿಯರನ್ನು ಭೀಕರ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡೆನಿಸ್ ರೆಯ್ನಾ (19) ಯುಲಿಯಾನಾ ಮಾಸಿಯಾಸ್ (21) ಹಾಗೂ ನಯೆಲಿ ತಫಿಯಾ (22) ಮೃತ ಯುವತಿಯರು. ಮೂವರು ಯುವತಿಯರು ಪ್ರವಾಸಕ್ಕೆಂದು ತೆರಳಿದ್ದು ಏಪ್ರಿಲ್ 4ರಂದು ನಾಪತ್ತೆಯಾಗಿ, ಏಪ್ರಿಲ್ 5 ರಂದು ಹತ್ಯೆಗೀಡಾಗಿದ್ದರು. ಆದ್ರೆ ಅದಕ್ಕೂ ಮುನ್ನ ತಮ್ಮ ಆಪ್ತರಿಗೆ ʻಇಲ್ಲೇನಾದರು ಘಟನೆ ಸಂಭವಿಸಬಹುದು ಅನ್ನಿಸುತ್ತಿದೆʼ ಅಂತಾ ಸಂದೇಶ ಕಳುಹಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಹತ್ಯೆಯಾವದರಲ್ಲಿ ಮಾಸಿಯಾಸ್ ಗಾಯಕಿಯಾಗಿದ್ದು, ನಯೆಲಿ ತಫಿಯಾ ತಾಯಿ ಹಾಗೂ ಡೆನಿಸ್ ರೆಯ್ನಾ ಕೃಷಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು. ಮಾಹಿತಿ ಪ್ರಕಾರ, ಇದೇ ಏಪ್ರಿಲ್ 5 ರಂದು ಮೂವರು ಯುವತಿಯರನ್ನ ಚಿತ್ರಹಿಂಸೆ ನೀಡಿ ಯಾರೋ ಹತ್ಯೆ ಮಾಡಿದ್ದಾರೆ. ನಂತರ ಈಕ್ವೆಡಾರ್‌ನ ಕ್ವಿನಿಂಡೆ ಬಳಿಯ ಎಸ್ಮೆರಾಲ್ಡಾಸ್ ನದಿಯ ಬಳಿ ಹೂತುಹಾಕಿದ್ದಾರೆ. ಈ ಸ್ಥಳದಲ್ಲಿ ನಾಯಿಯೊಂದು ದುರ್ವಾಸನೆ ಹೊರಬರುತ್ತಿರುವುದನ್ನು ಗುರುತಿಸಿದ್ದು, ಇದನ್ನು ಕಂಡ…
Author: Prajatv Kannada
ಚೀನಾ: ರಾಜಧಾನಿ ಬೀಜಿಂಗ್ ನ ಆಸ್ಪತ್ರೆಯ ಒಳರೋಗಿ ವಿಭಾಗದ ಪೂರ್ವ ವಿಭಾಗದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 21 ಜನರು ಸಜೀವ ದಹನವಾಗಿದ್ದು, 70ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಬೀಜಿಂಗ್ ಡೈಲಿ ವರದಿ ಮಾಡಿದೆ. ಬೀಜಿಂಗ್’ನ ಚಾಂಗ್ಫೆಂಗ್ ಆಸ್ಪತ್ರೆಯಲ್ಲಿ ತುರ್ತು ತಂಡ ಧಾವಿಸಿದ್ದು, ಮಧ್ಯಾಹ್ನ 12:57 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಮಧ್ಯಾಹ್ನ 13:33ರ ಸುಮಾರಿಗೆ ಬೆಂಕಿಯನ್ನ ನಂದಿಸಲಾಗಿದೆ. “ಇದು ದುರಂತ. ನನ್ನ ಮನೆಯ ಕಿಟಕಿಯಿಂದ ನಾನು ಅಪಘಾತವನ್ನು ನೋಡಿದ್ದು, ಬಹಳಷ್ಟು ಜನರು ಹವಾನಿಯಂತ್ರಣ ಘಟಕದ ಮೇಲೆ ಮಧ್ಯಾಹ್ನ ನಿಂತಿದ್ದರು ಮತ್ತು ಕೆಲವರು ಕಿಟಕಿಯಿಂದ ಜಿಗಿದಿದ್ದಾರೆ” ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚೀನಾದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಅಪರೂಪವಾಗಿದ್ದು ಇದೀಗ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಬೆಂಕಿಗೆ ಕಾರಣ ಏನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಬೆಂಕಿಯ ಕಾರಣವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ, ಏಕೆಂದರೆ ಚೀನಾದಲ್ಲಿ ಆಸ್ಪತ್ರೆಯಲ್ಲಿ ಬೆಂಕಿ ಅಪರೂಪ.
ಖಾರ್ಟೌಮ್: ಕಳೆದ ಮೂರು ದಿನಗಳಿಂದ ಸೇನಾ ಪಡೆ ಹಾಗೂ ಅರೆ ಸೇನಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸುಮಾರು 200 ಮಂದಿ ಮೃತಪಟ್ಟಿದ್ದು, 1,800 ಜನರು ಗಾಯಾಗೊಂಡಿರುವ ಕುರಿತು ವರದಿಯಾಗಿದೆ. ಯುದ್ಧದಲ್ಲಿ ಆಸ್ಪತ್ರೆಗಳು ಹಾನಿಗೀಡಾಗಿದ್ದು, ವೈದ್ಯಕೀಯ ಸಾಮಗ್ರಿ ಹಾಗೂ ಆಹಾರ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ ಎಂದು ವರದಿಯಾಗಿದೆ. 2021ರಲ್ಲಿ ಕ್ಷಿಪ್ರ ಕ್ರಾಂತಿಯ ಮೂಲಕ ಅಧಿಕಾರವನ್ನು ವಶಪಡಿಸಿಕೊಂಡಿದ್ದ ಎರಡು ಸೇನಾ ಪಡೆಗಳ ಮುಖ್ಯಸ್ಥರ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿದ್ದ ಹಗ್ಗಜಗ್ಗಾಟವು ಮಾರಣಾಂತಿಕ ಹಿಂಸಾಚಾರವಾಗಿ ಸ್ಫೋಟಗೊಂಡಿದ್ದು, ಸುಡಾನ್ ಸೇನಾ ಮುಖ್ಯಸ್ಥ ಮುಹಮ್ಮದ್ ಫತಾ ಅಲ್-ಬುರ್ಹಾನ್ ಹಾಗೂ ಶಕ್ತಿಶಾಲಿ ಅರೆ ಸೇನಾ ಪಡೆಯಾದ ಕ್ಷಿಪ್ರ ನೆರವು ಪಡೆಯ ಮುಖ್ಯಸ್ಥರಾದ ಅವರ ಸಹಾಯಕ ಸೇನಾಧಿಕಾರಿ ಮುಹಮ್ಮದ್ ಹಮ್ದನ್ ಡಾಂಗ್ಲೊ ನಡುವೆ ಹಣಾಹಣಿ ನಡೆಯುತ್ತಿದೆ. ತೀವ್ರ ಅಸ್ಥಿರತೆ ಎದುರಿಸುತ್ತಿರುವ ಸುಡಾನ್ ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ಕಾಳಗವು ಅಭೂತಪೂರ್ವವಾಗಿದ್ದು, ಕದನ ವಿರಾಮ ಘೋಷಿಸುವಂತೆ ಪ್ರಾದೇಶಿಕ ಹಾಗೂ ಜಾಗತಿಕ ರಾಯಭಾರ ಮಾತುಕತೆಗಳು ನಡೆಯುತ್ತಿದ್ದರೂ ಕಾಳಗವು ಮತ್ತಷ್ಟು ಸುದೀರ್ಘ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು…
ಖಾರ್ಟೌಮ್: ಕಳೆದ ನಾಲ್ಕು ದಿನಗಳಿಂದ ಸುಡಾನ್ ನಲ್ಲಿ ಸೇನಾ ಪಡೆ ಹಾಗೂ ಅರೆ ಸೇನಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದವರು ಅನ್ನ ಆಹಾರವಿಲ್ಲದೆ ಸಿಲುಕಿಕೊಂಡಿದ್ದಾರೆ. ಅವರನ್ನು ಮರಳಿ ತರಲು ಸರ್ಕಾರವಿನ್ನೂ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ‘ಇಂತಹ ವಿಷಯಗಳಲ್ಲಿ ರಾಜಕೀಯ ಮಾಡಬೇಡಿ‘ ಎಂದು ತಿರುಗೇಟು ನೀಡಿದ್ದಾರೆ. ಆಡಳಿತ ಚುಕ್ಕಾಣಿ ಹಿಡಿಯುವ ಸಲುವಾಗಿ ಸುಡಾನ್‌ನಲ್ಲಿ ಸೇನಾಪಡೆ ಮತ್ತು ಅರೆಸೇನಾ ಪಡೆಗಳ ನಡುವೆ ಕಳೆದ ಐದಾರು ದಿನಗಳಿಂದ ಯುದ್ದ ನಡೆಯುತ್ತಿದೆ. ಯುದ್ಧ ಪೀಡಿತ ಸುಡಾನ್‌ನಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 31 ಜನರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.
ಮಾಸ್ಕೊ: ಗೂಢಚರ್ಯೆ ನಡೆಸಿರುವ ಆಪಾದನೆಯ ಮೇಲೆ ಬಂಧನಕ್ಕೆ ಒಳಗಾಗಿರುವ ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ನ ವರದಿಗಾರ ಇವಾನ್ ಗೆರ್ಸ್‌ಕೊವಿಚ್ ಅವರನ್ನು ಬಂಧಿಸಿರುವ ಕ್ರಮ ಸರಿಯಾಗಿದೆ ಎಂದು ರಷ್ಯಾ ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಷ್ಯಾ ಸೇನೆಯ ಕೈಗಾರಿಕಾ ಸಂಕೀರ್ಣದಲ್ಲಿರುವ ಉದ್ಯಮವೊಂದರ ಚಟುವಟಿಕೆಗಳ ಬಗ್ಗೆ ರಹಸ್ಯ ಮಾಹಿತಿಗಳನ್ನು ಗೆರ್ಸ್‌ಕೊವಿಚ್ ಅಮೆರಿಕದ ನಿರ್ದೇಶನದ ಮೇರೆಗೆ ಕಲೆ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ. ಆದರೆ ಇವಾನ್ ಮತ್ತು ಅಮೆರಿಕ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ. ಗೆರ್ಸ್‌ಕೊವಿಚ್ ಅವರು ಶೀತಲ ಸಮರದ ನಂತರ ಗೂಢಚರ್ಯೆ ಆರೋಪದ ಮೇಲೆ ರಷ್ಯಾದಲ್ಲಿ ಬಂಧನಕ್ಕೆ ಒಳಗಾದ ಅಮೆರಿಕ ಸುದ್ದಿಸಂಸ್ಥೆಯ ಮೊದಲ ವರದಿಗಾರರಾಗಿದ್ದಾರೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ವೇಳೆ ಮಾಸ್ಕೊ ಮತ್ತು ವಾಷಿಂಗ್ಟನ್ ನಡುವೆ ಸಂಬಂಧ ಹದಗೆಟ್ಟಿರುವಾಗ ‘ವಾಲ್ ಸ್ಟ್ರೀಟ್ ಜರ್ನಲ್’ನ ಪ್ರಮುಖ ವರದಿಗಾರನ ಬಂಧನದ ಬೆಳವಣಿಗೆ ನಡೆದಿದೆ.
ಬೆಂಗಳೂರು: ಸೋಮವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳ ನಡುವಿನ ಪಂದ್ಯ ಕೊನೆಯವರೆಗೂ ರೋಚಕತೆಯಿಂದ ಕೂಡಿತ್ತು. ಕ್ರೀಡಾಂಗಣದಲ್ಲಿ ತುಂಬಾ ನೆರೆದಿದ್ದ ಇತ್ತಂಡದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಮಳೆಗರೆಯುತ್ತಾ ಆಟಗಾರರನ್ನ ಹುರಿದುಂಬಿಸಿದರು. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಸಿಡಿಯುತ್ತಿದ್ದ ಒಂದೊಂದು ಸಿಕ್ಸರ್, ಬೌಂಡರಿಗೂ ಎದೆಬಡಿತ ಹೆಚ್ಚಿಸುತ್ತಿತ್ತು. ಈ ವೇಳೆ ಸಿಎಸ್‌ಕೆ ಅಭಿಮಾನಿಯೊಬ್ಬ ʻಗೋವಾದಿಂದ ತಲಾ ಧೋನಿಯನ್ನ ನೋಡಲು ನಾನು ನನ್ನ ಬೈಕ್ ಮಾರಿದ್ದೇನೆʼ ಎನ್ನುವ ಪೋಸ್ಟರ್ ಹಿಡಿದುಕೊಂಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಂದ್ಯದ ನಡುವೆ ಗೋವಾ ಮೂಲದ ಯುವಕ ಪೋಸ್ಟರ್ ಹಿಡಿದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ್ದಾನೆ. ಈತ ಗೋವಾ ಮೂಲದವನಾಗಿದ್ದು, ಐಪಿಎಲ್ (IPL 2023) ಅಂಗಳದಲ್ಲಿ ಧೋನಿ ಅಬ್ಬರಿಸೋದನ್ನ ನೋಡಲೇಬೇಕೆಂದು ತನ್ನ ಸ್ವಂತ ಬೈಕ್ ಮಾರಿ ಟಿಕೆಟ್ ಸಹ ಖರೀದಿಸಿದ್ದ ಎನ್ನಲಾಗಿದೆ. ಇದಕ್ಕೆ ಸಿಎಸ್‌ಕೆ ಅಭಿಮಾನಿಗಳು ನೀನು ಪಕ್ಕಾ ಫ್ಯಾನ್ ಬಿಡು ಗುರು ಅಂತಾ ಪ್ರಶಂಸೆ ವ್ಯಕ್ತಪಡಿಸಿದರೆ, ಆರ್‌ಸಿಬಿ ಅಭಿಮಾನಿಗಳು ಅದಕ್ಕೆ ವಿರೋಧವಾಗಿ ಕಾಮೆಂಟ್ ಮಾಡಿದ್ದಾರೆ. ಚೆನ್ನೈ…
ಹೈದರಾಬಾದ್: ಕೊನೆಯ ಓವರ್‌ನಲ್ಲಿ 20 ರನ್‌ಗಳು ಅಗತ್ಯವಿದ್ದಾಗ ಕೇವಲ ಐದು ರನ್‌ಗಳಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ನಿಯಂತ್ರಿಸಿದ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್, 20ನೇ ಓವರ್‌ನಲ್ಲಿ ತಾವು ರೂಪಿಸಿದ್ದ ಬೌಲಿಂಗ್ ಪ್ಲಾನ್ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. ಬುಧವಾರ ನಡೆದಿದ್ದ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ಅಂತಿಮ ಓವರ್‌ವರೆಗೂ ತೀವ್ರ ಕುತೂಹಲದಿಂದ ಕೂಡಿತ್ತು. ಅದರಂತೆ ಅಂತಿಮ ಓವರ್‌ನಲ್ಲಿ ಸನ್‌ರೈಸರ್ಸ್ ತಂಡಕ್ಕೆ 20 ರನ್‌ಗಳು ಅಗತ್ಯವಿದ್ದಾಗ ಅರ್ಜುನ್ ತೆಂಡೂಲ್ಕರ್ ಅವರು ಲೆಗ್ ಬೈಸ್ ಸೇರಿ ಕೇವಲ 5 ರನ್ ಕೊಡುವ ಜೊತೆಗೆ ಚೊಚ್ಚಲ ವಿಕೆಟ್ ಕಬಳಿಸಿದ್ದರು. ಆ ಮೂಲಕ ಮುಂಬೈ ಇಂಡಿಯನ್ಸ್ ತಂಡದ 14 ರನ್‌ಗಳ ಗೆಲುವಿಗೆ ನೆರವಾದರು. 20ನೇ ಓವರ್ ಮೊದಲನೇ ಎಸೆತದಲ್ಲಿ ರನ್ ನೀಡದ ಅರ್ಜುನ್ ತೆಂಡೂಲ್ಕರ್, ಎರಡನೇ ಎಸೆತದಲ್ಲಿ ಒಂದು ರನ್ ಓಡಿದರೂ ಅಬ್ದುಲ್ ಸಮದ ರನ್ ಔಟ್ ಆದರು. ನಂತರ ಮೂರನೇ ಎಸೆತದಲ್ಲಿ ವೈಡ್ ಹಾಕಿದ ಅವರು, ನಂತರ ಎರಡು ರನ್ ಕೊಟ್ಟರು. ಇನ್ನು ನಾಲ್ಕನೇ…
ಹೈದರಾಬಾದ್: ಕ್ಯಾಮರೂನ್ ಗ್ರೀನ್ ಭರ್ಜರಿ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 14 ರನ್ ಗಳ ಜಯ ಸಾಧಿಸಿದೆ. ಈ ಮೂಲಕ 16ನೇ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತು. 193 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಹೈದರಾಬಾದ್ ತಂಡ 19.5 ಓವರ್‌ಗಳಲ್ಲೇ 178 ರನ್ ಗಳಿಗೆ ಸರ್ವಪತನಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಹ್ಯಾರಿ ಬ್ರೂಕ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಯಿತು. ಬ್ರೂಕ್ 9 ರನ್ ಗಳಿಸಿ ಔಟಾಗುತ್ತಿದ್ದಂತೆ, 3ನೇ ಕ್ರಮಾಂಕದಲ್ಲಿ ಬಂದ ರಾಹುಲ್ ತ್ರಿಪಾಠಿ ಸಹ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ನಡುವೆ ಮಯಾಂಕ್ ಅಗರ್ವಾಲ್, ನಾಯಕ ಏಡನ್ ಮಾರ್ಕ್ರಮ್ 46 ರನ್‌ಗಳ…
ಪ್ರಸ್ತುತ ನಡೆಯುತ್ತಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆಂದು ಕಳೆದ ಒಂದು ವರ್ಷದಿಂದ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಎಂಎಸ್ ಧೋನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಎಂಎಸ್ ಧೋನಿಗೆ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯದ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಸಿಎಸ್‌ಕೆ ನಾಯಕ ಬುದ್ದಿವಂತಿಕೆಯ ಉತ್ತರವನ್ನು ನೀಡಿದರು. ಇದರ ಬಗ್ಗೆ ಮಾತನಾಡಲು ಇನ್ನೂ ಸಾಕಷ್ಟು ಸಮಯವಿದೆ. ಹಾಗಾಗಿ ಈ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. “ತಮ್ಮ ಐಪಿಎಲ್ ವೃತ್ತಿ ಜೀವನ ವಿದಾಯದ ಬಗ್ಗೆ ಮಾತನಾಡಲು ಇನ್ನೂ ಸಾಕಷ್ಟು ಸಮಯವಿದೆ. ಸದ್ಯ ನಮಗೆ ಸಾಕಷ್ಟು ಪಂದ್ಯಗಳಿವೆ ಹಾಗೂ ನಿವೃತ್ತಿ ಬಗ್ಗೆ ನಾನು ಏನಾದರೂ ಮಾತನಾಡಿದರೆ, ಕೋಚ್‌ಗಳು ಒತ್ತಡಕ್ಕೆ ಒಳಗಾಗಲಿದ್ದಾರೆ,’ ಎಂದು ಎಂಎಸ್ ಧೋನಿ ಬುದ್ದಿವಂತಿಕೆಯ ಉತ್ತರವನ್ನು ನೀಡಿದ್ದಾರೆ. 2022ರ ಐಪಿಎಲ್ ಟೂರ್ನಿಗೂ ಮುನ್ನ ಎಂಎಸ್ ಧೋನಿ ಸಿಎಸ್‌ಕೆ…
ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. 16ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಎದುರು ಲಾಸ್ಟ್ ಓವರ್‌ನಲ್ಲಿ ಸತತ 5 ಸಿಕ್ಸರ್ ಸಿಡಿಸುವ ಮೂಲಕ ಕೆಕೆಆರ್ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟ ಎಡಗೈ ಬ್ಯಾಟರ್ ತಮ್ಮ ಹೆಸರನ್ನು ಇತಿಹಾಸದ ಪುಟದಲ್ಲಿ ಅಚ್ಚಳಿಯದಂತೆ ಒತ್ತಿಬಿಟ್ಟಿದ್ದಾರೆ. ಕಡು ಬಡತನದಿಂದ ಬೆಳೆದು ಬಂದು ಕ್ರಿಕೆಟ್‌ನಲ್ಲಿ ಕಠಿಣ ಪರಿಶ್ರಮ ವಹಿಸಿ ಇಂದು ಸೂಪರ್ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿರುವ ರಿಂಕು ಸಿಂಗ್, ತಮ್ಮಂತೆ ಕ್ರಿಕೆಟ್‌ನಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಎದುರ ನೋಡುತ್ತಿರುವ ಬಡ ಹಾಗೂ ಪ್ರತಿಭಾವಂತ ಆಟಗಾರರಿಗೆ ನೆರವಾಗಲು ವಿಶೇಷ ಹಾಸ್ಟೆಲ್ ಒಂದನ್ನು ಕಟ್ಟಿಸುತ್ತಿದ್ದಾರೆ ಎಂದು ಇದೀಗ ವರದಿಯಾಗಿದೆ. ಟೈಟನ್ಸ್ ಎದುರು ಕೊನೇ ಓವರ್‌ನಲ್ಲಿ ಕೆಕೆಆರ್ ಗೆಲುವಿಗೆ 29 ರನ್‌ಗಳ ಅಗತ್ಯವಿದ್ದಾಗ ಯಾರೊಬ್ಬರು ಕೂಡ ಕೋಲ್ಕತಾ ತಂಡ ಗೆಲ್ಲುತ್ತದೆ ಎಂದು ಅಂದಾಜಿಸಿರಲಿಲ್ಲ. ಆದರೆ, ಅಸಾಧ್ಯವನ್ನು ಸಾಧ್ಯವನ್ನಾಗಿಸಿದ ರಿಂಕು ಸಿಂಗ್ ಎಡಗೈ ವೇಗದ ಬೌಲರ್ ಯಶ್…