Author: Prajatv Kannada

ಕಠ್ಮಂಡು: ಜಗತ್ತಿನ 8ನೇ ಅತೀ ಎತ್ತರದ ಪರ್ವತವಾಗಿರುವ ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ಪರ್ವತಾರೋಹಿ ಬಲಜೀತ್‌ ಕೌರ್‌ ಜೀವಂತವಾಗಿ ಪತ್ತೆಯಾಗಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅತ್ಯಂತ ಕ್ಲಿಷ್ಠಕರ ಪರ್ವತಾರೋಹಣಗಳ ಪೈಕಿ ಒಂದಾಗಿರುವ ಅನ್ನಪೂರ್ಣ ಪರ್ವತ ಶಿಖರದ ಶೃಂಗ ತಲುಪಿದ ಬಳಿಕ 4ನೇ ಶಿಬಿರಕ್ಕೆ ವಾಪಸ್‌ ಆಗುವ ವೇಳೆ ಬಲಜೀತ್‌ ಕೌರ್‌ ನಾಪತ್ತೆಯಾಗಿದ್ದರು. ರೆಡಿಯೋ ಸಿಗ್ನಲ್‌ ಕೂಡ ಕಡಿತಗೊಂಡಿದ್ದರಿಂದ ಅವರ ಹುಡುಕಾಟ ಕಷ್ಟ ಸಾಧ್ಯವಾಗಿತ್ತು. ಸಿಗ್ನಲ್‌ ಪತ್ತೆಯಾದ ಬಳಿಕ ಕೌರ್‌, ಸಹಾಯ ಕೋರಿದರು, ತಕ್ಷಣ ಅವರನ್ನು ಏರ್‌ಲಿಫ್ಟ್ ಮಾಡಲು ವಿಮಾನಗಳು ಧಾವಿಸಿ ಅವರನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Read More

ಬೆಂಗಳೂರು: ಉತ್ತರಪ್ರದೇಶದ ಗೊಂಡಾದಲ್ಲಿ ನಡೆಯುತ್ತಿರುವ 17 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿರುವ ಕರ್ನಾಟಕ ರಾಜ್ಯ ಕುಸ್ತಿ ಪಟುಗಳಾದ ಶ್ವೇತ ಅಣ್ಣಕೆರಿ ಚಿನ್ನದ ಪದಕ ಗಳಿಸಿದ್ದು ಅದೇ ರೀತಿ ಮನಿಷ ಸಿದ್ದಿ ಹಾಗೂ ಲಕ್ಷ್ಮೀ ಪಾಟೀಲ್ ಕಂಚಿನ ಪದಕಗಳನ್ನು ಗಳಿಸಿ ಕರ್ನಾಟಕದ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕ ಕುಸ್ತಿ ತಂಡಕ್ಕೆ ಆಯ್ಕೆಯಾದ ಕುಸ್ತಿಪಟುಗಳ ಪರಿಶ್ರಮದಿಂದ ಚಿನ್ನದ ಪದಕ ಪಡೆದಿರುವುದು ಕರ್ನಾಟಕದ ಹೆಮ್ಮೆಯಾಗಿದೆ. ಇತಿಹಾಸದಲ್ಲೆ ಮೊದಲ ಬಾರಿಗೆ ರಾಷ್ಟೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದಿರುವುದಾಗಿದೆ. ಪದಗಳನ್ನು ಗಳಿಸಿದ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ ಸಂಘದ ಅಧ್ಯಕ್ಷರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಕರ್ನಾಟಕದ ಆರೂವರೆ ಕೋಟಿ ಜನತೆ ಹಾಗೂ ಎಲ್ಲಾ ಕುಸ್ತಿ ಪಟುಗಳ ಪರವಾಗಿ ಅಧ್ಯಕ್ಷರಾದ ಶ್ರೀ ಬಿ. ಗುಣರಂಜನ್ ಶೆಟ್ಟಿ ಅವರು ಪದಕ ತೊಡಿಸಿ ಅಭಿನಂದಿಸಿ ಶುಭ ಹಾರೈಸಿದರು.

Read More

ಮದುವೆ (Marriage) ಅಂದ್ರೆ ಅದಕ್ಕೆ ಎಲ್ಲಾ ರೀತಿಯಲ್ಲೂ ಧಾಂ ಧೂಂ ಅಂತ ಸಿದ್ಧತೆ ನಡೆಯುತ್ತೆ. ಭರ್ಜರಿ ಡೆಕೊರೇಶನ್‌, ಡ್ರೆಸ್, ಡಿನ್ನರ್‌ಗೆ ಸಿದ್ಧತೆ ಮಾಡಲಾಗುತ್ತೆ. ಹಾಗೆಯೇ ಮದುವೆ ಅಂದ್ರೆ ಇನ್ವಿಟೇಷನ್ ಕಾರ್ಡ್‌ ಸೂಪರ್ ಆಗಿರ್ಬೇಕು ಅಂತ ಎಲ್ಲರೂ ಬಯಸ್ತಾರೆ. ಹೀಗಾಗಿ ಡಿಫರೆಂಟ್ ಆಗಿ ಮದ್ವೆ ಆಮಂತ್ರಣ ಪತ್ರಿಕೆಯನ್ನು (Invitation card) ಸಿದ್ಧಪಡಿಸುತ್ತಾರೆ. ಕಾಲ ಅದೆಷ್ಟು ಬದಲಾಗಿದ್ರೂ, ಟೆಕ್ನಾಲಜಿ ಸಾಕಷ್ಟು ಮುಂದುವರಿದಿದ್ರೂ ಜನರು ಇನ್ವಿಟೇಷನ್ ಕಾರ್ಡ್ ತಯಾರಿಸೋದನ್ನು ಬಿಡೋದಿಲ್ಲ. ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ಮದುವೆಗೆ ಆಮಂತ್ರಿಸಿದರೂ ಪುನಃ ಮದುವೆ ಕಾಗದವನ್ನು ಕೊಟ್ಟು ಮದ್ವೆಗೆ ಬರಲೇಬೇಕು ಅನ್ನೋದನ್ನು ಮರೆಯೋದಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬಾಯಲ್ಲೇನೂ ಮದ್ವೆಗೆ ಬರ್ಲೇಬೇಕು ಅಂತ ಕರೆದಿದ್ದಾನೆ. ಆದ್ರೆ ಮದುವೆ ಕಾರ್ಡ್‌ನಲ್ಲಿ ತಪ್ಪಾಗಿ ಇನ್ನೇನೋ ಪ್ರಿಂಟ್ ಆಗಿದೆ. ಹೌದು, ಎಲ್ಲರೂ ಮದುವೆಗೆ ಬನ್ನಿ ಎಂದು ಮುದ್ರಿಸುವ ಬದಲು ವೆಡ್ಡಿಂಗ್ ಕಾರ್ಡ್‌ನಲ್ಲಿ ಮದ್ವೆಗೆ ಬರಲೇಬೇಡಿ ಎಂದು ಪ್ರಿಂಟ್ ಮಾಡಲಾಗಿದ್ದು, ಎಲ್ಲೆಡೆ ವೈರಲ್ ಆಗ್ತಿದೆ. ಮದುವೆ ಕಾಗದದಲ್ಲಿ ‘ಸ್ನೇಹಪೂರ್ವಕವಾಗಿ ನಮ್ಮ ಮದುವೆಗೆ ಬರಬೇಡಿ ಎಂದು ಹೇಳುತ್ತೇನೆ’ ಎಂದು…

Read More

ಉನ್ನಾವೋ:  (Uttar Pradesh) ವ್ಯಕ್ತಿಯೊಬ್ಬ ತನ್ನ ಪತ್ನಿಗೆ (wife) ಕಚ್ಚಿದ್ದ ಹೆಬ್ಬಾವನ್ನು ಗೋಣಿಚೀಲದಲ್ಲಿ ಹೊತ್ತುಕೊಂಡು ಜಿಲ್ಲಾಸ್ಪತ್ರೆಗೆ ಬಂದಿದ್ದಾನೆ. ವ್ಯಕ್ತಿಯ (husband) ಈ ಕೃತ್ಯವು ಆಸ್ಪತ್ರೆಯ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ. ಟೈಮ್ಸ್​ ಆಫ್​ ಇಂಡಿಯಾ (TOI) ವರದಿ ಪ್ರಕಾರ ವ್ಯಕ್ತಿಯನ್ನು ಸಫಿಪುರದ ಉಮ್ಮರ್ ಅತ್ವಾ ಗ್ರಾಮದ ನರೇಂದ್ರ ಎಂದು ಗುರುತಿಸಲಾಗಿದೆ. ಅವರ ಪತ್ನಿ ಕುಸುಮಾ ಅವರು ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಹೆಬ್ಬಾವೊಂದು ಆಕೆಯನ್ನು ಕಚ್ಚಿದೆ. ನಂತರ ಆಕೆ ಕಿರುಚಿಕೊಂಡು ಪ್ರಜ್ಞಾಹೀನಳಾಗಿದ್ದಳು. ಕೂಡಲೇ ಮಹಿಳೆಯನ್ನು ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತು. ಈ ಅಹಿತಕರ ಘಟನೆಯ ಬಗ್ಗೆ ಆಕೆಯ ಪತಿಗೆ ತಿಳಿಸಿದಾಗ, ಅವನು ತನ್ನ ಹೆಂಡತಿಯನ್ನು ನೋಡಲು ಆಸ್ಪತ್ರೆಗೆ ಬಂದಿಲ್ಲ. ಬದಲಾಗಿ ಮನೆಗೆ ತೆರಳಿ ಹಾವನ್ನು ಹಿಡಿದು ಆಸ್ಪತ್ರೆಗೆ ಸಾಗಿಸಿದ್ದಾನೆ! ತನ್ನ ಪತ್ನಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ತುರ್ತು ವೈದ್ಯಾಧಿಕಾರಿ ಡಾ. ತುಷಾರ್ ಚೌರಾಸಿಯಾ ಅವರನ್ನು ಭೇಟಿ ಮಾಡಿ, ಅವರ ಎದುರಿಗೆ ತನ್ನ ಪತ್ನಿಯನ್ನು ಕಚ್ಚಿದ ಹಾವನ್ನು ಗೋಣಿಚೀಲದಿಂದ ಹೊರತೆಗೆದು ತೋರಿಸಿದ್ದಾನೆ.…

Read More

ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ತಿಂಗಳುಗಟ್ಟಲೆ ನರಕಯಾತನೆ ಅನುಭವಿಸಿದ್ದಾರೆ. ತಿಂದ ಅನ್ನ ಅರಗಿಸಿಕೊಳ್ಳಲಾಗದೆ ಹೇಳಿಕೊಳ್ಳ ಲಾಗದ ಹೊಟ್ಟೆನೋವು ಅನುಭವಿಸಿದ್ದಾರೆ. ಜಗಿತ್ಯಾಲ ಜಿಲ್ಲೆಯವರಾದ ನವ್ಯಾ ಸರಿಯಾಗಿ 16 ತಿಂಗಳ ಹಿಂದೆ ಹೆರಿಗೆಗಾಗಿ ಜಗಿತ್ಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡಿದ ವೈದ್ಯರು ಚಿಕಿತ್ಸೆ ಬಳಿಕ ಮನೆಗೆ ಕಳುಹಿಸಿದ್ದಾರೆ. ಆ ನಂತರ, ನವ್ಯಾ ನರಳತೊಡಗಿದ್ದಾರೆ. ಪ್ರತಿದಿನ ಹೊಟ್ಟೆ ನೋವು ಅನುಭವಿಸಿದ್ದಾರೆ. ಆಕೆಯ ಸ್ಥಿತಿ ಕಂಡು ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಇನ್ನು ನೋವು ಸಹಿಸಿಕೊಳ್ಳುತ್ತಾ ಕಾಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸಿದ ಕುಟುಂಬಸ್ಥರು ನವ್ಯಾಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಸ್ಕ್ಯಾನಿಂಗ್ ಮಾಡಿಸಿದಾಗ ಅವರಿಗೆ ಭಯಾನಕ ಸತ್ಯ ತಿಳಿದಿದೆ. ಹೊಟ್ಟೆಯಲ್ಲಿ ಬಟ್ಟೆಯಿರುವುದು ಪತ್ತೆಯಾಗಿದೆ! ಆಪರೇಷನ್ ಮಾಡಿದ ವೈದ್ಯರು ಬಟ್ಟೆ ಹೊರತೆಗೆದಿದ್ದಾರೆ. ಬಟ್ಟೆ ತೆಗೆಯುವಾಗ ವಿಡಿಯೋ ಮಾಡಲಾಗಿದೆ. ಇಷ್ಟು ದಿನ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಗಾತ್ರದ ಬಟ್ಟೆಯನ್ನು ಹಾಕಿಕೊಂಡು ಆಕೆ ಅನುಭವಿಸಿದ ನರಕಯಾತನೆಯ ಬಗ್ಗೆ ಯೋಚಿಸಿದರೆ ಕಣ್ಣಲ್ಲಿ ನೀರು ಬರುವಂತಿದೆ. ಆಪರೇಷನ್ ಮಾಡುತ್ತಾ ಹೊಟ್ಟೆಯಿಂದ ಬಟ್ಟೆ ತೆಗೆಯುತ್ತಿರುವ ದೃಶ್ಯಗಳು…

Read More

ಬೆಳಗಾವಿ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಹೊಲಿಗೆ ಯಂತ್ರಗಳು (Sewing Machine) ಮತ್ತು ಟಿಫಿನ್ ಬಾಕ್ಸ್‌ಗಳನ್ನು (Tiffin Box) ಪೊಲೀಸರು ಜಪ್ತಿ ಮಾಡಿರುವ ಘಟನೆ ಬೆಳಗಾವಿ‌ (Belagavi) ಜಿಲ್ಲೆಯ ಸವದತ್ತಿ (Savadatti) ಪಟ್ಟಣದಲ್ಲಿ ನಡೆದಿದೆ. ನಗರದ ಸಂಭವ ಟಿಂಬರ್ ಯಾರ್ಡ್ ಗೋದಾಮು ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಸವದತ್ತಿ ಕೇತ್ರದ ಜೆಡಿಎಸ್ (JDS) ಅಭ್ಯರ್ಥಿ ಸೌರಭ್ ಛೋಪ್ರಾ (Sourabh Chopra) ಭಾವಚಿತ್ರವಿರುವ ಟಿಫಿನ್ ಬಾಕ್ಸ್ ಜೊತೆಗೆ ಹೊಲಿಗೆ ಯಂತ್ರಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ ಲಕ್ಷಾಂತರ ಮೌಲ್ಯದ 2300ಕ್ಕೂ ಅಧಿಕ ಹೊಲಿಗೆ ಯಂತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ಅಧಿಕಾರಿಗಳು ಹಾಗೂ ಸ್ಥಳೀಯ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಸೌರಭ್ ಛೋಪ್ರಾ ಹೊಲಿಗೆ ಯಂತ್ರ ಇರುವ ಕುರಿತಾಗಿ ಬಿಲ್ ಹಾಗೂ ಅದಕ್ಕೆ ಬೇಕಾದ ದಾಖಲೆಗಳನ್ನು ಒದಗಿಸಿದ್ದಾರೆ. ನೀತಿ ಸಂಹಿತೆ ಬರುವ ಮುಂಚೆಯೇ ಇವುಗಳನ್ನು ತರಲಾಗಿದೆ. ಆದರೆ ಎಲ್ಲಿಯೂ ಹಂಚಿಲ್ಲ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.…

Read More

ಚಿಕ್ಕಮಗಳೂರು: ಟಿಕೆಟ್ ಸಿಗದ ಹಿನ್ನೆಲೆ ಮನನೊಂದು ಬಿಜೆಪಿ ಕಾರ್ಯಕರ್ತನೋರ್ವ (BJP Worker) 100 ಅಡಿ ಎತ್ತರದ ಟವರ್ (Tower) ಏರಿ ಆತ್ಮಹತ್ಯೆಯ ಬೆದರಿಕೆ ಒಡ್ಡಿರುವ ಘಟನೆ ಜಿಲ್ಲೆಯ ಅಜ್ಜಂಪುರ (Ajjampur) ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿರುವ ರಂಗಪ್ಪ ಬೋವಿಯನ್ನು ಕೆಳಗಿಳಿಸಲು ಪೊಲೀಸರು ಹಾಗೂ ಸ್ಥಳೀಯರು ಹರಸಹಾಸಪಡುತ್ತಿದ್ದಾರೆ. ಟಿವಿಯವರು ಬಂದು ಮುಖ ಹಾಗೂ ಲೋಗೋ ತೋರಿಸುವವರೆಗೂ ನಾನು ಕೆಳಗೆ ಇಳಿಯುವುದಿಲ್ಲ ಎಂದು ರಂಗಪ್ಪ ಹಠಕಟ್ಟಿದ್ದಾನೆ. ನಾನು ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿಯಿಂದಲೇ ಸ್ಪರ್ಧಿಸಬೇಕು. ಎಸ್‌ಸಿ, ಎಸ್‌ಟಿ ಸಮಾಜಕ್ಕೆ ಮುಂದೆ ಆಗುತ್ತದೆ ಎಂದು ಹೇಳುವುದಕ್ಕಿಂತ ಹಿಂದಿನಿಂದಲೂ ಕೂಡ ಅನ್ಯಾಯವಾಗಿದೆ. ದಲಿತ ಜನರಲ್ಲಿ ಒಗ್ಗಟ್ಟಿಲ್ಲ ಎಂಬ ಭಾವನೆ ಮೂಡಿದೆ. ನೀವೆಲ್ಲ ಸೇರಿ ನನ್ನನ್ನು ಉಳಿಸಿಕೊಳ್ಳುವುದಾದರೆ ಉಳಿಸಿಕೊಳ್ಳಿ. ಇಲ್ಲವಾದರೆ ಕೆಳಗೆ ಬೀಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ನನ್ನನು ಏಳುವರೆ ವರ್ಷದ ಹಿಂದೆ ಕರೆದರು. ನೋಡೋದಕ್ಕೆ ಒಳ್ಳೆಯ ಆಳು. ನಿನ್ನನ್ನು ನೋಡಿದರೆ ಜನ ಹೆದರುತ್ತಾರೆ, ಹಣ ಕೊಡುತ್ತಾರೆ. ರೌಡಿಸಂ ಹಾಗೂ ರಿಯಲ್…

Read More

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿ (BJP)  ತೊರೆದು ಕಾಂಗ್ರೆಸ್  (Congress) ಸೇರಿದ ಬಳಿಕ ಪಕ್ಷದಲ್ಲಿ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P Nadda) ಮುಂದಾಗಿದ್ದಾರೆ. ಬಿಜೆಪಿ ವಿರುದ್ಧ ಉತ್ತರ ಕರ್ನಾಟಕ ಭಾಗದಲ್ಲಿ ಅತೀ ದೊಡ್ಡ ಹೊಡೆತ ಕೊಡಲು ಮುಂದಾಗಿರುವ ಶೆಟ್ಟರ್ ನಡೆಗೆ ಬಿಜೆಪಿ ವಲಯದಲ್ಲಿ ಗಲಿಬಿಲಿ ಶುರುವಾಗಿದ್ದು, ಇದಕ್ಕೆ ಮುಲಾಮು ಹಚ್ಚಲು ನಡ್ಡಾ ಮಂಗಳವಾರ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈಗಾಗಲೇ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿರುವ ಅವರು ಮುನಿಸಿಕೊಂಡಿರುವ ಲಿಂಗಾಯತ ಸಮುದಾಯದ ಅಸಮಾಧಾನವನ್ನ ಶಮನಮಾಡಲು ಹೊಸದೊಂದು ತಂತ್ರಕ್ಕೆ ಮುಂದಾಗಿದ್ದಾರೆ. ನಗರದಲ್ಲಿ ಎರಡು ದಿನಗಳ ಕಾಲ ಉಳಿದುಕೊಳ್ಳಲಿರುವ ಅವರು ವಿವಿಧ ವಿಷಯಗಳ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಹುಬ್ಬಳ್ಳಿ (Hubballi), ಧಾರವಾಡ (Dharwad) ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಬಿವಿಬಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ವಿವಿಧ ಸಂಘ ಸಂಸ್ಥೆಗಳು, ಉದ್ಯಮಿಗಳು, ಶಿಕ್ಷಕರ ಸಂಘಟನೆ ಹಾಗೂ ಯುವಕರೊಂದಿಗೆ ನಡ್ಡಾ ಸಂವಾದ ನಡೆಸಿದ್ದಾರೆ. ಹಾಗೂ ನಗರದ ಖಾಸಗಿ ಹೊಟೇಲ್…

Read More

ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕೆ ಮಾನ್ಯತೆ ಇಲ್ಲ. ಇಲ್ಲಿ ಈವರೆಗೆ ಗೆದ್ದಿರುವುದು ನೀತಿ ರಾಜಕಾರಣವೇ ಎಂದು ಬಿಜೆಪಿ (BJP) ಅಭ್ಯರ್ಥಿ ಶಾಸಕ ಸಿ.ಟಿ.ರವಿ (C.T.Ravi) ಹೇಳಿದ್ದಾರೆ. ನಗರದ ಪ್ರೆಸ್ ಕ್ಲಬ್‌ನಲ್ಲಿ (Press Club) ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ (Election) ಕೆಲವರು ಜಾತಿ ಹೆಸರಲ್ಲಿ ನನ್ನ ವಿರುದ್ಧ ಎತ್ತಿಕಟ್ಟುವ ಯತ್ನ ಮಾಡುತ್ತಿದ್ದಾರೆ. ಅದು ಫಲಿಸುವುದಿಲ್ಲ. ಇಲ್ಲಿ ಈವರೆಗೆ ಅಭಿವೃದ್ಧಿ ಪರ ಹಾಗೂ ಸಿದ್ಧಾಂತಕ್ಕೆ ಬದ್ಧವಾದ ರಾಜಕಾರಣ ಮಾಡಿದ್ದೇನೆ. ಜಾತಿ ಮತ್ತು ಪಕ್ಷ ಕೇಳದೆ ನನ್ನ ಕೈಯಲ್ಲಾದ ಒಳ್ಳೆಯ ಕೆಲಸ ಮಾಡಿದ್ದೇನೆ. ಈಗಿನ ವಾತಾವರಣದಲ್ಲಿ ಜಿಲ್ಲೆಯಲ್ಲಿ ಐದಕ್ಕೆ ಐದೂ ಕ್ಷೇತ್ರದಲ್ಲೂ ಬಿಜೆಪಿ ಉತ್ತಮ ಅಂತರದಿಂದಲೇ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ಸಣ್ಣ ಜಾತಿ ಮತ್ತು ಜನಾಂಗಗಳಿಗೂ ರಾಜಕೀಯ ಹಾಗೂ ಸಾಮಾಜಿಕವಾಗಿ ಆದ್ಯತೆ ಕೊಡುವ ಕೆಲಸ ನಮ್ಮ ಕ್ಷೇತ್ರದಲ್ಲಿ ಮಾಡಿದ್ದೇವೆ. ನಿಗಮ ಮಂಡಳಿಗಳಿಗೆ ನೇಮಕಾತಿ ಸಂದರ್ಭದಲ್ಲಿ ಇದೇ ಮಾದರಿಯನ್ನು ಅನುಸರಿಸುವಂತೆ ನಾವು ರಾಜ್ಯ ನಾಯಕರಿಗೆ ತಿಳಿಸಿದ್ದೇವೆ.…

Read More

ಶಿಡ್ಲಘಟ್ಟ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿಎನ್ ರವಿಕುಮಾರ್ ಪರ 14ನೇ ವಾರ್ಡಿನ ಜೆಡಿಎಸ್ ಮುಖಂಡರು ಹಾಗು ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು. ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗು ಬಿಜೆಪಿಯ ಪಕ್ಷಗಳು ವಿವಿಧ ರೀತಿಯಲ್ಲಿ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್ ಪರ ನಗರದಲ್ಲಿ ಪ್ರಚಾರ ಜೋರಾಗಿದ್ದು, ಮಹಿಳಾ ಮುಖಂಡರಾದ ಸುಷ್ಮಾ ಶ್ರೀನಿವಾಸ್ 14 ನೇ ವಾರ್ಡಿನಲ್ಲಿ ಮತ ಪ್ರಚಾರ ನಡೆಸಿದರು. ನಂತರ ಮಾತನಾಡಿದ ಅವರು ಬಿ ಎನ್ ರವಿಕುಮಾರ್ ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ, ಕಳೆದ ಬಾರಿ ಸೋತರೂ ತಮ್ಮ ಸೇವೆಯನ್ನು ಮುಂದುವರೆಸಿ ಮತ ಕ್ಷೇತ್ರದ ಅನೇಕರಿಗೆ ಕಷ್ಟದಲ್ಲಿ ನೆರವಾಗುವ ಮೂಲಕ ಮನೆ ಮಾತಾಗಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸುವ ಮೂಲಕ ಅವರಿಗೆ ಸೇವೆ ಮಾಡಲು ಮತ್ತಷ್ಟು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಬಡವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜೆಡಿಎಸ್…

Read More