Author: Prajatv Kannada

ನವದೆಹಲಿ: ತ್ರಿಪುರಾ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತ್ರಿಪುರಾದಲ್ಲಿ ಬಿಜೆಪಿ-ಐಪಿಎಫ್‌ಟಿ ಮೈತ್ರಿಕೂಟ 31 ಸ್ಥಾನಗಳನ್ನು ಗೆದ್ದು, ಎರಡನೇ ಅವಧಿಗೆ ಅಧಿಕಾರಕ್ಕೇರುತ್ತಿದ್ದೆ. ಇನ್ನು 60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 33 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ(ಎನ್‌ಡಿಪಿಪಿ) 21 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರ ಪಕ್ಷ ಬಿಜೆಪಿ 12 ಸ್ಥಾನಗಳನ್ನು ಪಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ನಾಗಾಲ್ಯಾಂಡ್‌ನಲ್ಲಿ ಮಿತ್ರಪಕ್ಷ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯೊಂದಿಗೆ ಅಧಿಕಾರ ಉಳಿಸಿಕೊಂಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ.

Read More

ಕೋಯಿಕ್ಕೋಡ್: ಮಹಿಳಾ ವೈದ್ಯರ ಮೇಲೆ ಮೂರು ತಿಂಗಳಿನಿಂದ ಅತ್ಯಾಚಾರ ನಡೆಸಿದ್ದಲ್ಲದೆ, ಆಕೆಯ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ 24 ವರ್ಷದ ಪುರುಷ ನರ್ಸ್ನನ್ನು ಕೇರಳ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ಕರ್ನಾಟಕದ ಆಸ್ಪತ್ರೆಯೊಂದರಲ್ಲಿ ವೈದ್ಯೆ ಮತ್ತು ನರ್ಸ್ ಇಬ್ಬರೂ ಕೆಲಸ ಮಾಡುತ್ತಿದ್ದಾಗ ಅತ್ಯಾಚಾರದ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯೆ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಕೊಯಮತ್ತೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಕೊಡಿಸಲು ವ್ಯವಸ್ಥೆ ಮಾಡುವುದಾಗಿ ಸುಳ್ಳು ಭರವಸೆ ನೀಡಿ 28 ವರ್ಷದ ವೈದ್ಯೆ ಮೇಲೆ 24 ವರ್ಷದ ನಿಶಾಮ್ ಬಾಬು ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯು ತ್ರಿಶ್ಶೂರು ಜಿಲ್ಲೆಯವನಾಗಿದ್ದಾನೆ. ಅವರಿಬ್ಬರೂ ಮೊದಲು ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಮೊದಲ ಬಾರಿಗೆ ಆಕೆ ಮೇಲೆ ನಿಶಾಮ್ ಬಾಬು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಆಕೆಯನ್ನು ಕೋಯಿಕ್ಕೋಡ್ಗೆ ಕರೆದುಕೊಂಡು ಬಂದಿದ್ದ. ಅಲ್ಲಿಯೂ ಲಾಡ್ಜ್ನಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ವೈದ್ಯೆಯ ಬೆತ್ತಲೆ…

Read More

ಗುವಾಹಟಿ,: ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಇಂದು ಗುವಾಹಟಿಯಲ್ಲಿ ಶಾಂಘೈ ಸಹಕಾರ ಸಂಸ್ಥೆ (ಎಸ್‍ಸಿಒ) ಅಡಿಯಲ್ಲಿ ಸಾಂಪ್ರದಾಯಿಕ ಔಷಧದ ಮೊದಲ ‘ಬಿ 2 ಬಿ ಜಾಗತಿಕ ಸಮ್ಮೇಳನ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಇಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ 17 ದೇಶಗಳಿಂದ 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕೇಂದ್ರ ಸಚಿವರು ಇಂದು ಬಿ2ಬಿ ಎಕ್ಸ್‍ಪೋವನ್ನು ಉದ್ಘಾಟಿಸಿದರು. ಎಸ್‍ಸಿಓ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಕೇಂದ್ರ ಆಯುಷ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವ ಡಾ.ಮಹೇಂದ್ರಭಾಯಿ ಮುಂಜ್ಪಾರಾ ಅವರು ಭಾಗವಹಿಸಿದ್ದರು; ಅವರ ಜತೆಗೆ ಮ್ಯಾನ್ಮಾರ್‍ನ ಗೌರವಾನ್ವಿತ ಕೇಂದ್ರ ಆರೋಗ್ಯ ಸಚಿವರಾದ ಡಾ ಥೆಟ್ ಖೈಂಗ್ ವಿನ್; ಮಾಲ್ಡೀವ್ ಸರ್ಕಾರದ ಗೌರವಾನ್ವಿತ ಆರೋಗ್ಯ ಉಪ ಸಚಿವ ಸಫಿಯಾ ಮೊಹಮ್ಮದ್ ಸಯೀದ್ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ, ವೈದ್ಯ ರಾಜೇಶ್ ಕೋಟೆಚಾ ಮತ್ತಿತರರು ಭಾಗವಹಿಸಿದ್ದರು. ಕೇಂದ್ರ ಸಚಿವರು, “ನಮ್ಮ ಆಹಾರ ಮತ್ತು ಆಹಾರ…

Read More

ಹೈದರಾಬಾದ್: ಹಿಂದೆ ಮಹಿಳೆಯರು ತಮ್ಮ ಪಾವಿತ್ರ್ಯತೆಯನ್ನು ಸಾಬೀತುಪಡಿಸಲು ಅಗ್ನಿಪ್ರವೇಶ ಮಾಡುತ್ತಿದ್ದರು ಎಂಬುದನ್ನು ಪುರಾಣಗಳಲ್ಲಿ ಹಾಗೂ ಇತಿಹಾಸಗಳಲ್ಲಿ ಕೇಳಿದ್ದೇವೆ. ಆದರೆ ಈ ರೀತಿಯ ಆಚರಣೆ ತೆಲಂಗಾಣದಲ್ಲಿ (Telangana) ನಡೆದಿದೆ. ವ್ಯಕ್ತಿಯೊಬ್ಬ ತನ್ನ ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ (Affair) ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲು ಅಗ್ನಿಪರೀಕ್ಷೆ (Agnipariksha) ಮಾಡಿಕೊಂಡಿದ್ದಾನೆ. ಈ ಮೂಲಕ ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿದ್ದಾನೆ. ತೆಲಂಗಾಣದ ಬಂಜಾರಿಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಎಂಬುದಾಗಿ ಆರೋಪಿಸಲಾಗಿತ್ತು. ವ್ಯಕ್ತಿಯ ಸಹೋದರ ಪ್ರಕರಣವನ್ನು ಪಂಚಾಯಿತಿಗೆ ಕೊಂಡೊಯ್ದು, ಅಲ್ಲಿ ಆತನ ಬಗ್ಗೆ ವಿಚಾರಣೆ ಮಾಡಲಾಗಿತ್ತು. ಈ ವೇಳೆ ಪಂಚಾಯಿತಿ ಮುಖಂಡರು ಆರೋಪಿ ವ್ಯಕ್ತಿ ಅಗ್ನಿ ಪ್ರವೇಶ ಮಾಡಬೇಕು ಎಂದು ಆದೇಶಿಸಿದ್ದರು. ಇದರ ಪ್ರಕಾರ ವ್ಯಕ್ತಿ ಕೆಂಡದ ಮಧ್ಯೆ ಇಡಲಾಗಿದ್ದ ಬಿಸಿ ಕಬ್ಬಿಣದ ಸಲಾಕೆಯನ್ನು ಕೈಯಿಂದ ಎತ್ತಬೇಕಿತ್ತು. ಮುಖಂಡರ ಆದೇಶದಂತೆ ವ್ಯಕ್ತಿ ಕೆಂಡದಿಂದ ಕೆಂಪಾಗಿದ್ದ ಕಬ್ಬಿಣದ ಸಲಾಕೆಯನ್ನು ಕೈಯಿಂದ ಎತ್ತಿ ಆಚೆ ಎಸೆದಿದ್ದಾನೆ. ಈ ಮೂಲಕ ತಾನು ನಿರಪರಾಧಿ ಎಂಬುದಾಗಿ ಸಾಬೀತು ಪಡಿಸಿದ್ದಾನೆ.…

Read More

ಆಮಲಕೀ ಏಕಾದಶಿ ಸೂರ್ಯೋದಯ: 06.35 AM, ಸೂರ್ಯಾಸ್ತ : 06.29 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಫಾಲ್ಗುಣ ಮಾಸ, ಶಿಶಿರ ಋತು,ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಇವತ್ತು ಏಕಾದಶಿ 09:11 AM ತನಕ ನಂತರ ದ್ವಾದಶಿ ನಕ್ಷತ್ರ: ಇವತ್ತು ಪುನರ್ವಸು 03:43 PM ತನಕ ನಂತರ ಪುಷ್ಯ ಯೋಗ: ಇವತ್ತು ಸೌಭಾಗ್ಯ 06:45 PM ತನಕ ನಂತರ ಶೋಭಾನ ಕರಣ: ಇವತ್ತು ವಿಷ್ಟಿ 09:11 AM ತನಕ ನಂತರ ಬವ 10:27 PM ತನಕ ನಂತರ ಬಾಲವ ರಾಹು ಕಾಲ: 10:30 ನಿಂದ 12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 01.01 PM to 02.49 PM ಅಭಿಜಿತ್ ಮುಹುರ್ತ: ಮ.12:04 ನಿಂದ ಮ.12:51 ವರೆಗೂ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob.…

Read More

ಹಾಸನ: ಆಕೆ ಮದುವೆಯಾಗಲು  ತಯಾರಾಗಿ ಹೊಸ ಜೀವನದ ಕನಸು ಕಂಡವಳು. ಹೊಸ ಬಾಳಿನ ಬಾಗಿಲಿಗೆ ಹೊಸ ಕನಸಿನ ಬೆಳಕು ಬರುವ ಮುನ್ನವೇ ಮೇಕಪ್ (Marriage Makeup) ಅವಳ ಮುಖವನ್ನು ಗ್ರಹಣದಂತೆ ಆವರಿಸಿ ಕನಸನ್ನು ಕಸಿದುಕೊಂಡಿದೆ. ಹೌದು, ಹೊಸ ಮಾದರಿಯ ಮೇಕಪ್‍ಗೆ ವಧುವಿನ (Bride) ಮುಖವೇ ವಿರೂಪಗೊಂಡು ಮದುವೆ ಕ್ಯಾನ್ಸಲ್ ಆದ ಘಟನೆ ಹಾಸನದ (Hassan) ಅರಸೀಕೆರೆಯಲ್ಲಿ (Arsikere) ನಡೆದಿದೆ. ಮದುವೆಗಾಗಿ ನಗರದ ಗಂಗಾಶ್ರೀ ಹರ್ಬಲ್ ಬ್ಯೂಟಿ ಪಾರ್ಲರ್ ಅಂಡ್ ಸ್ಪಾನಲ್ಲಿ ಮೇಕಪ್ ಮಾಡಿಸಿಕೊಂಡಿದ್ದ ಯುವತಿಗೆ ಈ ದುರ್ಗತಿ ಎದುರಾಗಿದೆ. ಬ್ಯೂಟಿಪಾರ್ಲರ್‌ನ (Beauty Parlour)  ಮಾಲೀಕರಾದ ಗಂಗಾ, ಹೊಸ ಬಗೆಯ ಮೇಕಪ್ ಮಾಡುವುದಾಗಿ ಹೇಳಿ ಸ್ಟೀಮ್ ನೀಡಿದ್ದಾರೆ. ಇದಾದ ಬಳಿಕ ವಧುವಿನ ಮುಖ ಊದಿಕೊಂಡು, ಸುಟ್ಟಂತೆ ಕಪ್ಪಾಗಿದೆ. ವಿರೂಪಗೊಂಡ ಯುವತಿಯ ಮುಖ ನೋಡಿ ಮದುವೆಯಾಗಲು ವರ ಹಾಗೂ ವರನ ಕುಟುಂಬ ನಿರಾಕರಿಸಿದೆ. ಕಳೆದ ಹತ್ತು ದಿನಗಳ ಹಿಂದೆ ನಡೆದಿದ್ದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅವಘಡದ ಕುರಿತು ಅರಸೀಕೆರೆ ನಗರ ಪೊಲೀಸರು ಬ್ಯೂಟಿಪಾರ್ಲರ್ ಮಾಲಕಿಯನ್ನು…

Read More

ಶಿವಮೊಗ್ಗ: ತೀರ್ಥಹಳ್ಳಿ (Thirthahalli) ತಾಲೂಕಿನ ಬೇಗುವಳ್ಳಿ ಸಮೀಪ ಬೈಕ್ ಅಪಘಾತದಲ್ಲಿ (Bike Accident) ಗಾಯಗೊಂಡಿದ್ದ ಯುವಕನನ್ನು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಕೊಡುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಾನವೀಯತೆ ಮೆರೆದಿದ್ದಾರೆ. ರಸ್ತೆಯಲ್ಲಿ ಹಸು ಅಡ್ಡ ಬಂದ ಪರಿಣಾಮ, ಹಸುವಿಗೆ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸವಾರ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಗಾಯಗೊಂಡಿದ್ದ ಯುವಕನನ್ನು ಸಿಂಗನಬಿದರೆ ಹಳಗ ಗ್ರಾಮದ ನಿವಾಸಿ ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಗಾಯಾಳು ಯುವಕ ನರಳುತ್ತಿದ್ದ. ಈ ವೇಳೆ ಅದೇ ಮಾರ್ಗದಲ್ಲಿ ಬೆಂಗಳೂರಿಗೆ ಹೊರಟಿದ್ದ ಸಚಿವ, ಗಾಯಾಳು ಯುವಕನನ್ನು ಗಮನಿಸಿ ತಮ್ಮ ವಾಹನ ನಿಲ್ಲಿಸಿದ್ದಾರೆ. ಗಾಯಾಳು ಯುವಕನನ್ನು ಉಪಚರಿಸಿ, ಧೈರ್ಯ ಹೇಳಿದ್ದಾರೆ. ಅಲ್ಲದೇ ತಮ್ಮ ಬೆಂಗಾವಲು ವಾಹನದಲ್ಲಿ  (escort vehicle) ಗಾಯಾಳು ಯುವಕನನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.

Read More

ಕಳಸ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗೋಡು ಪ್ರದೇಶದ ನಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿ ಬೇಸತ್ತು ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ 40ಕ್ಕೂ ಹೆಚ್ಚು ಮನೆಗಳು ಇರುವ ಕಲ್ಲುಗೋಡು ಪ್ರದೇಶದ ನಿವಾಸಿಗಳು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಮಳೆಗಾಲದಲ್ಲಿ ಕೆಸರುಮಯವಾಗುವ ಕಳಸ-ಕಲ್ಲುಗೋಡು ರಸ್ತೆ ಅಭಿವೃದ್ಧಿ ಮಾಡದೆ ಇರುವುದು, ಕಲ್ಲುಗೋಡು ತೂಗುಸೇತುವೆಯನ್ನು ಕಳೆದ 15 ವರ್ಷದಲ್ಲಿನಿರ್ವಹಣೆ ಮಾಡದೆ ಇರುವುದು ಮುಂತಾದ ವಿಚಾರಗಳು ಗ್ರಾಮಸ್ಥರನ್ನು ಆಕ್ರೋಶಭರಿತರನ್ನಾಗಿಸಿವೆ. ಕಲ್ಲುಗೋಡು ರಸ್ತೆಯ ದುಸ್ಥಿತಿಯಿಂದ ಆಟೊಗಳು ಕೂಡ ಗ್ರಾಮಕ್ಕೆ ಬರುತ್ತಿಲ್ಲ. ಅನಾರೋಗ್ಯದ ಸಂದರ್ಭದಲ್ಲಿ ಬಹಳ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ. ಗ್ರಾಮದಲ್ಲಿಕುಡಿಯುವ ನೀರಿನ ಪೂರೈಕೆ ಕೂಡ ಇಲ್ಲದೆ ಜನರು ಭದ್ರಾ ನದಿಗೆ ಹೋಗಿ ನೀರು ತರಬೇಕಾಗಿದೆ. ಇದರಿಂದ ಕೂಲಿ ಕೆಲಸಕ್ಕೆ ಹೋಗುವವರಿಗೆ ಮತ್ತು ಮಹಿಳೆಯರಿಗೆ ಭಾರಿ ಸಂಕಟ ಎದುರಾಗಿದೆ ಎಂದು ಹಳ್ಳಿಗರು ಹೇಳುತ್ತಾರೆ. 15 ವರ್ಷದ ಹಿಂದೆ ನಿರ್ಮಾಣ ಆದ ತೂಗು ಸೇತುವೆಗೆ ಈವರೆಗೂ ಬಣ್ಣ ಬಳಿದಿಲ್ಲ. ಇದರಿಂದ ಸೇತುವೆ…

Read More

ಶಿರಸಿ: ಛತ್ರಪತಿ ಶಿವಾಜಿ ಮಹಾರಾಜರ ವಿಚಾರ ಇಂದಿಗೂ ಪ್ರಸ್ತುತವಿದೆ. ಭಾರತದ ಗಡಿ ಸುತ್ತಲೂ ಇಸ್ಲಾಮೀಕರಣದ ವಾತಾವರಣ ಹೆಚ್ಚುತ್ತಿದೆ. ಶಿವಾಜಿ ಮಹಾರಾಜರ ಮಾದರಿಯಲ್ಲಿ ಮತಾಂಧರನ್ನು ಎದುರಿಸಬೇಕಿದೆ. ಇಂದು ಮನೆ ಮನೆಯಲ್ಲಿ ಜೀಜಾಮಾತೆಯ ಅವಶ್ಯಕತೆಯಿದೆ. ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ, ಸಂಸ್ಕೃತಿಗಾಗಿ ಮನೆಯ ಮಕ್ಕಳನ್ನು ಹೋರಾಡಲು ಸಜ್ಜುಗೊಳಿಸುವ ಜೀಜಾಮಾತೆಯರು ಪ್ರತಿ ಮನೆಯಿಂದ ಬರಬೇಕಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು ನಗರದಲ್ಲಿಅಖಿಲ ಭಾರತ ಹಿಂದೂ ಮಹಾಸಭಾದಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿಅವರು ಮಾತನಾಡಿದರು. ಕಾಂಗ್ರೆಸ್‌ನಿಂದ ದೇಶ ಹಾಳು ರಾಷ್ಟ್ರೀಯ ಸ್ವಯಂಸೇವಕ ಸಂಘ ಕೊಟ್ಟ ಸಂಸ್ಕಾರ ಎಂದಿಗೂ ನನ್ನನ್ನು ಹಿಂದೆ ಸರಿಯುವಂತೆ ಮಾಡುವುದಿಲ್ಲ. ಹಿಂದೂ ಸಮಾಜಕ್ಕಾಗಿ ನಿಸ್ವಾರ್ಥದಿಂದ ಬದುಕುತ್ತಿದ್ದೇನೆ. ದೇಶ ಆಳಿದ ಕಾಂಗ್ರೆಸ್‌ ಅಪ್ಜಲ್‌ ಖಾನ್‌, ಟಿಪ್ಪು ಸುಲ್ತಾನನ ಸಂತತಿಯಾಗಿದೆ. ಕಾಂಗ್ರೆಸ್‌ ದೇಶವನ್ನು ಬರ್ಬಾದ್‌ ಮಾಡಿದೆ. ಕಾಶ್ಮೀರದಲ್ಲಿಈಗಲೂ ಹಿಂದೂಗಳ ಹತ್ಯೆಯಾಗುತ್ತಿದೆ. ಹಿಂದೂಗಳನ್ನು ಸಂರಕ್ಷಿಸುವ ಕಾರ್ಯ ಎಲ್ಲರಿಂದ ನಡೆಯಬೇಕು ಎಂದರು. ಹಿಂದೂಗಳ ಹೆಸರಿನಲ್ಲಿ ಗೆದ್ದು, ಗೋಮಾತೆಯ ಹತ್ಯೆ ಖಂಡಿಸದ, ಭ್ರಷ್ಟಾಚಾರ ವಿರೋಧಿಸದ ಜನಪ್ರತಿನಿಧಿಗಳನ್ನು ಐದಾರು ಬಾರಿ ಶಾಸಕ-ಸಂಸದರನ್ನಾಗಿ ಆರಿಸುತ್ತಿರುವುದು ದೌರ್ಭಾಗ್ಯದ ಸಂಗತಿ…

Read More

ಹಾಸನ: ಮಾಜಿ ಶಾಸಕ ಎ.ಮಂಜು (A.Manju) ಜೊತೆ ಅಡ್ಜಸ್ಟ್ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ ಎಂದು ಶಾಸಕ ಎ.ಟಿ ರಾಮಸ್ವಾಮಿ (A.T.Ramaswamy) ಸಾಬೀತು ಪಡೆಸಿದರೆ ನಾನು ಅವರು ಹೇಳುವ ಶಿಕ್ಷೆಗೆ ಗುರಿಯಾಗುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D.Revanna) ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.ಟಿ ರಾಮಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಮಗನ ಮೇಲೆ ಕೇಸ್ ದಾಖಲಿಸಿದವನ ಜೊತೆ ರಾಜಿ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ರಾಮಸ್ವಾಮಿ ಹೇಳಿದ್ದಾರೆ. ಅವರು ಸೀನಿಯರ್ ಅಡ್ವಕೇಟ್ ಇಟ್ಟುಕೊಂಡರು ಸಹ ಹೈಕೋರ್ಟ್‍ನಲ್ಲಿ ನಮ್ಮ ಪರವೇ ಆಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ನಮ್ಮ ಅಡ್ವಕೇಟ್ ಬಾರದ ಕಾರಣ ರಿಮೆಂಟ್ ಆಯ್ತು. ಅದರ ಪ್ರತಿಯನ್ನು ರಾಮಸ್ವಾಮಿ ಓದಿಕೊಳ್ಳಲಿ. ನಮ್ಮ ಸಂಪೂರ್ಣ ಆಸ್ತಿಯನ್ನು ಐಟಿಗೆ ನೀಡಿದ್ದೇನೆ ಇಡಿ ಮೂಲಕ ತನಿಖೆ ನಡೆಸಿಕೊಳ್ಳಲಿ ಎಂದು ಗುಡುಗಿದ್ದಾರೆ. ರಾಮಸ್ವಾಮಿಯವರು ಎರಡು ವರ್ಷದಿಂದ ಯಾವ್ಯಾವ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದರು ಎಂದು ಹೇಳಲಿ. ಹಾಸನ ಮತ್ತು ಬೆಂಗಳೂರಿನಲ್ಲಿ ನಡೆದ ಜಲಧಾರೆ ಯಾತ್ರೆಗೆ ಯಾಕೆ ಬರಲಿಲ್ಲ? ಅವರಿಗೆ ಸೀಟ್…

Read More